ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2021

‘ಉತ್ಥಾನ’ ಡಿಸೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

'ಉತ್ಥಾನ' ಡಿಸೆಂಬರ್ 2021ರ ಸಂಚಿಕೆಯಲ್ಲಿ ಏನೇನಿದೆ?

ಪ್ರಚಲಿತದಲ್ಲಿ ‘ಬಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಸರಣಿ’ ಎಂಬ ಲೇಖನವನ್ನು ಎಸ್.ಆರ್.ರಾಮಸ್ವಾಮಿ ಅವರು ಬರೆದಿದ್ದಾರೆ. ಈ ಸಂಚಿಕೆಯಲ್ಲಿ ‘ವೈಚಾರಿಕ ಸೇನಾಪತಿ ಸೀತಾರಾಮ ಗೋಯಲ್’ ಎಂಬ ಮುಖಪುಟ ಲೇಖನವನ್ನು ಡಾ. ಜಿ.ಬಿ. ಹರೀಶ್ ಅವರು ಬರೆದಿದ್ದಾರೆ. ‘ಸರ್ವಧರ್ಮ ಸಮಭಾವದ ಭ್ರಮಾಲೋಕ’ ಎಂಬ ಮುಖಪುಟ ಲೇಖನವು ಸೀತಾರಾಂ ಗೋಯಲ್ ಇಂಗ್ಲಿಷ್ ನಲ್ಲಿ ಬರೆದಿದ್ದು, ಮೂಲದಿಂದ ಎಸ್.ಆರ್. ರಾಮಸ್ವಾಮಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ ಎಂಬ ವಿಶೇಷ ಲೇಖನವನ್ನು ಬಿ.ಪಿ. ಪ್ರೇಮಕುಮಾರ್ ಅವರು ಬರೆದಿದ್ದಾರೆ ‘ಕಾನೂನಿನ ಆಕಾರದಡಿಯ ಸ್ವೈರಾಚಾರ’ […]

ಗೋವಾ ಮುಕ್ತಿ ಸಂಗ್ರಾಮ

ಭಾರತಕ್ಕೆ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಲಭಿಸಿತೆನ್ನುವ ವಿಚಾರ ಎಲ್ಲರಿಗೂ ತಿಳಿದಿರುವಂತಹುದೇ. ಆದರೆ, ಆನಂತರವೂ ಭಾರತದ ಕೆಲವು ಪ್ರದೇಶಗಳು ಮುಂದಿನ ಒಂದು ದಶಕಕ್ಕೂ ಹೆಚ್ಚು ಕಾಲ ಪರಾಧೀನವಾಗಿಯೇ ಇತ್ತೆನ್ನುವುದಾಗಲಿ ಮತ್ತು ಅವನ್ನು ಸ್ವತಂತ್ರಗೊಳಿಸಲು ಬಲಪ್ರಯೋಗ ಮಾಡಬೇಕಾಯಿತೆನ್ನುವ ವಿಷಯವಾಗಲಿ ಹೆಚ್ಚು ಜನರಿಗೆ ತಿಳಿದಿರಲಾರದು. ಇದಕ್ಕೆ ಕಾರಣವನ್ನು ಹುಡುಕಲು ಬಹುದೂರವೇನೂ ಹೋಗಬೇಕಾಗಿಲ್ಲ. ನಮ್ಮ ಶಾಲಾ-ಕಾಲೇಜುಗಳ ಇತಿಹಾಸದ ಪಠ್ಯಗಳಲ್ಲಿ ಈ ಪ್ರದೇಶಗಳಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳ ವಿಚಾರವಾಗಿ ಪ್ರಸ್ತಾವಿಸಲಾಗಿಲ್ಲ. “ಕಾಂಗ್ರೆಸ್ ನಡೆಸಿದ ಸತ್ಯಾಗ್ರಹಗಳ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು’’ ಮತ್ತು “ಅಹಿಂಸಾತ್ಮಕ […]

ಮೃಗಜಲದಿಂದ ಧ್ರುವಜಲದೆಡೆಗೆ

ಮೃಗಜಲದಿಂದ ಧ್ರುವಜಲದೆಡೆಗೆ

* ಸಂತ ಜ್ಞಾನೇಶ್ವರ ಮಹಾರಾಜರು ಬ್ರಹ್ಮಜ್ಞಾನಪ್ರಾಪ್ತಿಗೆ ಪೂರ್ವದಲ್ಲಿ ಪ್ರಪಂಚಜ್ಞಾನದ ಆವಶ್ಯಕತೆಯೂ ಇರುತ್ತದೆ. ಇಲ್ಲವಾದರೆ ಸ್ವರೂಪಜ್ಞಾನದ ಕಾಲಕ್ಕೆ ಬುದ್ಧಿಯು ಕುಂಠಿತವಾಗುವುದು. ದಂಡೆಗೆ ಮುಟ್ಟಿದ ನಾವು ಅಲ್ಲಾಡುವುದೆ? ಅದರಂತೆ ಸ್ವರೂಪದಲ್ಲಿ ಬುದ್ಧಿಯು ಪ್ರವೇಶಿಸಲಾರದು. ವಿಚಾರವು ಹಿಂದಿನ ಹೆಜ್ಜೆಯಿಂದಲೇ ಹಿಂತಿರುಗುವುದು ಮತ್ತು ಅದರ ಬಗೆಗೆ ತರ್ಕದ ಚಾತುರ್ಯವು ನಡೆಯದು. ಅರ್ಜುನಾ! ಜ್ಞಾನವೆಂಬುದು ಅದೇ. ಅದರಿಂದ ಹೊರತಾದ ಪ್ರಪಂಚವು ವಿಜ್ಞಾನವು ಮತ್ತು ಆ ಪ್ರಪಂಚದಲ್ಲಿರುವ ಸತ್ಯತ್ವ ಬುದ್ಧಿಯೇ ಅಜ್ಞಾನವೆಂದು ತಿಳಿ. ಈಗ ಅಜ್ಞಾನವೆಲ್ಲ ಇಲ್ಲದಾಗುವುದು, ಪ್ರಪಂಚವೆಲ್ಲ ಹುರುಪಳಿಸುವುದು-ಬಾಧಿತವಾಗುವುದು. ಮತ್ತು ನಾವು ಜ್ಞಾನಸ್ವರೂಪರಾಗುವೆವು. ಸಾವಿರಾರು […]

ನಿರೀಕ್ಷೆ

ನಿರೀಕ್ಷೆ

ಜೀವತಂತಿ ಕಡಿದುಹೋಗುವ ಮುನ್ನ ಮೋಹಜಾಲಗಳನ್ನೆಲ್ಲ ಒಮ್ಮೆ ಕಳಚಿಟ್ಟು ನಾನು ನಾನಾಗಿ ಬದುಕಬೇಕಿದೆ ಒಮ್ಮೆ ಬರುವುದೆ ಆ ಒಂದು ದಿನ? ಕಣ್ಣ ಜ್ಯೋತಿ ಆರಿಹೋಗುವ ಮುನ್ನ ನನ್ನ ನಾನೇ ಮರೆತು ಹೋಗುವ ಮುನ್ನ  ನಾನು ನಾನಾಗಿ ಬೆಳಗಬೇಕಿದೆ ಒಮ್ಮೆ ದೊರೆವುದೆ ಆ ಒಂದು ದಿನ? ಮಗಳು, ಮಡದಿ, ಮಾತೆ ಎಂಬ ಹೆಮ್ಮೆ ಇದೆ ನನಗೆ ಆದರೂ ಆ ಬಿರುದುಗಳ ಕಳಚಿಟ್ಟು  ನಾನು ನಾನಾಗಿ ಬಾಳಬೇಕೆಂಬ ಆಸೆ  ಒದಗಿಬರುವುದೇ ಆ ಒಂದು ಸುದಿನ! ಶ್ರಮರಹಿತಳಾಗಿ , ತ್ಯಾಗರಹಿತಳಾಗಿ ಯಮನಪಾಶ ಬೀಳುವ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ