ಹರಿಸ್ವಾಮಿಯು ಪಾತ್ರೆಯನ್ನು ಎತ್ತಿಕೊಂಡು ಹತ್ತಿರದಲ್ಲಿದ್ದ ಕೊಳದ ಬಳಿಗೆ ಬಂದನು. ಅಲ್ಲಿದ್ದ ಆಲದಮರದ ಕೆಳಗೆ ಪಾತ್ರೆಯನ್ನಿಟ್ಟು ಕೈಕಾಲು ತೊಳೆದುಕೊಳ್ಳಲು ಕೊಳಕ್ಕೆ ಇಳಿದನು. ಅಷ್ಟುಹೊತ್ತಿಗೆ ಒಂದು ಹದ್ದು ಎಲ್ಲಿಂದಲೋ ಕೃಷ್ಣಸರ್ಪವೊಂದನ್ನು ತನ್ನ ಕೊಕ್ಕು ಮತ್ತು ಕಾಲುಗಳಿಂದ ಹಿಡಿದುಕೊಂಡು ಬಂದು ಅದೇ ಆಲದಮರದ ಮೇಲೆ ಕುಳಿತುಕೊಂಡಿತು. ಪ್ರಾಣಸಂಕಟದಲ್ಲಿದ್ದ ಹಾವಿನ ಬಾಯಿಂದ ವಿಷದ ಜೊಲ್ಲು ಸುರಿದು ಮರದ ಮೇಲಿಂದ ನೇರವಾಗಿ ಆ ಪರಮಾನ್ನದೊಳಗೆ ಬಿತ್ತು. ತ್ರಿವಿಕ್ರಮಸೇನನು ಆರಂಭಿಸಿದ ಕೆಲಸವನ್ನು ಹೇಗಾದರೂ ಕೊನೆ ಮುಟ್ಟಿಸಲೇಬೇಕು ಎಂಬ ಛಲದಿಂದ ಹದಿಮೂರನೆಯ ಸಲ ಹೆಣವನ್ನು ಹೆಗಲ ಮೇಲೆ […]
ಕೊಂದ ದೋಷ ಯಾರಿಗೆ…?
Month : August-2024 Episode : ಬೇತಾಳ ಕಥೆಗಳು -13 Author : ಡಾ. ಎಚ್.ಆರ್. ವಿಶ್ವಾಸ