
ಪ್ರೋ|| ಎಲ್.ಎಸ್. ಶೇಷಗಿರಿರಾವ್ ಜನ್ಮಶತಾಬ್ದ ಸ್ಮರಣೆ
Month : November-2024 Episode : Author :
Month : November-2024 Episode : Author :
Month : November-2024 Episode : Author :
Month : November-2024 Episode : ಅಗ್ನಿಜಾಲ ಭಾಗ-8 Author : ರಾಧಾಕೃಷ್ಣ ಕಲ್ಚಾರ್
ತನ್ನ ನಾಲ್ವರು ಭಟರೊಂದಿಗೆ ಕುದುರೆಯೇರಿ ಹೊರಟಿದ್ದ ರುದ್ರ ಕುಪಿತನಾಗಿದ್ದ. ಅದಕ್ಕೆ ಒಂದು ಕಾರಣ, ನಗರದಲ್ಲಿದ್ದ ತನ್ನ ಪಡೆ ಇನ್ನೂ ತಮ್ಮನ್ನು ಕೂಡಿಕೊಂಡಿಲ್ಲ ಎಂಬುದು. ಇನ್ನೊಂದು ಅವರಿಗಾಗಿ ನಿರೀಕ್ಷಿಸುತ್ತ ತಮ್ಮ ನಡೆ ನಿಧಾನವಾದುದು. ಕುದುರೆಗಳಿಗೂ ಕಾಡಿನ ನಡುವೆ ಸಾಗುವುದು ಕಠಿಣವೇ ಆಗಿತ್ತು. ತಾವು ವಿಳಂಬಿಸಿದಷ್ಟೂ ಚಿತ್ರಕನ ಕುಟುಂಬ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಅವರು ಸಾಗಿದ ದಾರಿಯ ಕುರುಹುಗಳೂ ಅಳಿಯುತ್ತವೆ. ಹೇಗಾದರೂ ಅವರನ್ನು ಹಿಡಿದು ಬಂಧಿಸಿ ನಗರಕ್ಕೆ ಒಯ್ಯಬೇಕಲ್ಲ! ಬೆಳಗಾಯಿತು. ಶಂಖನೂ, ಚಿತ್ರಕನ ಕುಟುಂಬವೂ ಘೋಷದ ದಿಕ್ಕಿನಲ್ಲಿ ಹೆಜ್ಜೆಹಾಕತೊಡಗಿದರು. ಪೂರ್ವದಿಕ್ಕಿನ […]
Month : November-2024 Episode : Author : ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ
ನಮ್ಮ ಭಾವ ಬುದ್ಧಿಯು ಕೂಡಾ ದೇಶ-ಕಾಲದಲ್ಲಿ ಮಾತ್ರ ಕೆಲಸ ಮಾಡುತ್ತವೆ. ಅವು ದೇಶ-ಕಾಲಗಳ ಮಿತಿಯನ್ನು ಮೀರಿ ಹರಿಯಲಾರವು. ನಮ್ಮ ಬುದ್ಧಿಯು ಒಂದು ವಸ್ತುವನ್ನು ನೋಡಿದಾಗ ಅದನ್ನು ಇನ್ನೊಂದು ವಸ್ತುವಿನೊಂದಿಗೆ ಹೋಲಿಸುತ್ತದೆ. ಮೌಲ್ಯಮಾಪನ ಮಾಡಿ ಒಂದು ಹೆಚ್ಚು ಇನ್ನೊಂದು ಕಡಮೆ ಎಂದು ಹೇಳುತ್ತದೆ. ಬೆಲೆ ಕಟ್ಟುತ್ತದೆ. ಈ ಬುದ್ಧಿಯ ಹೋಲಿಸುವ ಸ್ವಭಾವದಿಂದಾಗಿಯೇ ಮನುಷ್ಯ ಎಷ್ಟೆಲ್ಲ ತಾಪತ್ರಯಕ್ಕೆ ಒಳಗಾಗುವುದನ್ನು ನೋಡುತ್ತೇವೆ. ಒಬ್ಬರು ಹೊಸ ಬಟ್ಟೆಯನ್ನೋ ವಾಹನವನ್ನೋ ಖರೀದಿಸುತ್ತಾರೆ. ಸಂತೋಷದಿಂದ ಅದನ್ನು ಇನ್ನೊಬ್ಬರಿಗೆ ತೋರಿಸುತ್ತಾರೆ. ನೋಡಿದವರು ಇದು ತುಂಬಾ ಚೆನ್ನಾಗಿದೆ ಎಂದರೆ […]
Month : November-2024 Episode : ಬೇತಾಳ ಕಥೆಗಳು - 16 Author : ಡಾ. ಎಚ್.ಆರ್. ವಿಶ್ವಾಸ
ಯುವರಾಜನಾದ ಮೇಲೆ ಒಮ್ಮೆ ಜೀಮೂತವಾಹನನು ತಂದೆಯ ಬಳಿಗೆ ಹೋಗಿ ನಿವೇದಿಸಿಕೊಂಡನು – “ಅಪ್ಪಾ! ಈ ಕಲ್ಪವೃಕ್ಷವನ್ನು ನಾವು ಯಾರಿಗೋಸ್ಕರ ಕಾಪಾಡಿಕೊಂಡು ಬರಬೇಕು? ಈ ಹಿಂದೆ ಅದನ್ನು ತನ್ನದೆಂದು ಕಾಪಾಡಿಕೊಂಡು ಬಂದವರು ಯಾರೂ ಈಗ ಬದುಕಿಲ್ಲ. ಅದಕ್ಕೂ ಅವರಿಗೂ ಈಗ ಸಂಬಂಧವೇ ಇಲ್ಲ. ಅದ್ದರಿಂದ ನಾನು ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತೇನೆ. ಏಕೆಂದರೆ ಪರೋಪಕಾರದಂತಹ ಸತ್ಕಾರ್ಯ ಸ್ಥಿರವೇ ಹೊರತು ಐಶ್ವರ್ಯವಲ್ಲ..’’ ಛಲ ಬಿಡದ ತ್ರಿವಿಕ್ರಮಸೇನನು ಹದಿನಾರನೆಯ ಸಾರಿ ಹೆಣವನ್ನು ಹೆಗಲಮೇಲೆ ಹಾಕಿಕೊಂಡು ಶ್ಮಶಾನದ ಕಡೆಗೆ ಹೊರಟನು. ಹೆಣದಲ್ಲಿದ್ದ ಬೇತಾಳನು ಮತ್ತೊಂದು […]
Month : November-2024 Episode : Author : ಎಸ್. ಕಾರ್ತಿಕ್
ಕನ್ನಡ ವೈದಿಕ ಸಾಹಿತ್ಯ ಕೃತಿಗಳಲ್ಲಿ ಚಾಟುವಿಟ್ಠಲನಾಥನ ಭಾಗವತದ ಹೊರತು ಮಿಕ್ಕವುಗಳಲ್ಲಿ ಒಂದೊಂದು ಸಾಲಿನಲ್ಲಿ ಕಥಾಂಶ ಸೂಚಿತವಾಗಿದ್ದು ಯಾವುದೇ ವಿಶೇಷ ಕಂಡುಬರುವುದಿಲ್ಲ. ದಾಸಸಾಹಿತ್ಯದಲ್ಲಿನ ಕೆಲವು ಕಾವ್ಯಗಳನ್ನು ಹೊರತುಪಡಿಸಿ ಇನ್ನಿತರ ಕಾವ್ಯಗಳಲ್ಲಿ, ಯಕ್ಷಗಾನ ಕೃತಿಗಳಲ್ಲಿ, ಸಂಗೀತ ಕೃತಿಗಳಲ್ಲಿ ವಾಮನಾವತಾರದ ಕಥೆ ದಶಾವತಾರಗಳ ಸ್ತುತಿ ಸಂದರ್ಭದಲ್ಲಿ ಬಂದಿದೆ. ದಾಸಶ್ರೇಷ್ಠರು ತಮ್ಮ ಕೀರ್ತನೆಗಳಲ್ಲಿ ಈ ಕಥಾಂಶವನ್ನು ಬಹಳವಾಗಿ ತಂದಿರುವುದುಂಟು. ವಾಮನಾವತಾರವು ವಿಷ್ಣುವಿನ ದಶಾವತಾರಗಳಲ್ಲಿ ಐದನೆಯದು. ಈ ಅವತಾರದಲ್ಲಿ ವಿಷ್ಣುವು ಕಶ್ಯಪನ ಪತ್ನಿಯಾದ ಅದಿತಿಯಲ್ಲಿ ವಾಮನನಾಗಿ ಜನಿಸಿದನು. ಬಲಿಚಕ್ರವರ್ತಿಯ ಅಹಂಕಾರವನ್ನು ಮುರಿಯುವುದಕ್ಕಾಗಿ ಅದಿತಿದೇವಿಯಲ್ಲಿ ಇಂದ್ರನಿಗೆ […]
Month : November-2024 Episode : Author : ಕೆ.ವಿ. ರಾಜಲಕ್ಷ್ಮಿ
ಅಂದು… ‘ನಿನ್ನ ಗುಟ್ಟಿನ ಪ್ರೀತಿಯಲಿ ನಾನಿಲ್ಲವೇ?’ ಎಂದು ನಕ್ಕಾಗ ನಾನು ನಾಚಿದ್ದೆ ಮರುಕ್ಷಣ ಮೌನಕ್ಕೆ ಶರಣು. ಬಯಕೆಗಳ ಹೊಸಕಿ ದೂರ ಸರಿದಿದ್ದೆ ಬೇಲಿ ದಾಟುವ ಬಲವಿಲ್ಲದೆ. ಇಂದು… ನೀನು ನಿಂತಲ್ಲೇ ಇರುವೆ ಮರೆಯಲಾಗದ ನೆನಪಾಗಿ ನನ್ನೆದೆಯ ದನಿಯಾಗಿ ಬಡಿದಾಡುವ ನೂರಾರು ಪ್ರಶ್ನೆಗಳ ಉತ್ತರವಾಗಿ. ಈಗ, ಟಿಸಿಲೊಡೆದಿದೆ ಮರುಚಿಂತನೆ ಕಳೆದುಹೋದ ಕನಸುಗಳ ಮತ್ತೆ ಹೆಣೆಯಬೇಕಿದೆ ಬೇಲಿ ಹಾರಿ ನಿನ್ನ ಸೇರುವ ಕಸುವಿದೆ!
Month : November-2024 Episode : Author : ಆರತಿ ಪಟ್ರಮೆ
ಇಂದಿನ ಯುವಜನಾಂಗದ ಎದುರು ಇರುವ ಯಶಸ್ಸಿನ ಮಾನದಂಡವನ್ನು ಸೂಕ್ತವಾಗಿ ತಿದ್ದಿ ಅವರಿಗೆ ಬದುಕಿನ ಮಹತ್ತ್ವವನ್ನೂ ತಿಳಿಯಪಡಿಸಬೇಕಿದೆ. ವಿವಾಹದ ಮಂತ್ರಗಳೆಲ್ಲವೂ ಸೂಚಿಸುವಂತೆ ಸತ್ಸಂತಾನವನ್ನು ಪಡೆಯುವುದು ಮದುವೆಯ ಉದ್ದೇಶವೇ ಹೊರತು ಕೇವಲ ಪ್ರಿ–ವೆಡ್ಡಿಂಗ್ ಫೋಟೋಶೂಟ್ಗಳ ಅಬ್ಬರಕ್ಕಲ್ಲ, ಅಥವಾ ಅದ್ದೂರಿಯ ಮದುವೆಯ ಗೌಜಿಗಲ್ಲ. ಅಥವಾ ವರ್ಷದಲ್ಲಿ ಅದೆಷ್ಟು ಬಾರಿ ದೇಶವಿದೇಶಗಳಿಗೆ ಟೂರ್ ಹೋಗುತ್ತೇವೆ ಎಂಬುದಕ್ಕಷ್ಟೇ ಅಲ್ಲವಲ್ಲ. ಮನೋದೈಹಿಕವಾದ ಸುಖಸಂತೋಷಗಳು ಅಗತ್ಯವೆಂಬುದು ನಿಜವೇ ಆದರೂ ಕೇವಲ ಅದಷ್ಟೇ ಸಂಪೂರ್ಣ ಜೀವನ ಆಗುವುದಿಲ್ಲ. ಔದ್ಯೋಗಿಕವಾಗಿ ನಾವು ಬಯಸುವ ಯಶಸ್ಸು ಸಾಂಸಾರಿಕವಾಗಿಯೂ ಕೌಟುಂಬಿಕವಾಗಿಯೂ ಇರಬೇಕೆಂಬುದು ಸರ್ವಸಮ್ಮತ. […]
Month : November-2024 Episode : Author : ಲಕ್ಷ್ಮೀನಾರಾಯಣ ಅಡೇಖಂಡಿ
ಮಹಾಭಾರತದ ಅಭೂತಪೂರ್ವ ವರ್ಣಚಿತ್ರಗಳಿಂದ, ಅಂಚೆ ಮೂಲಕ ಚಿತ್ರಕಲಿಸುವ ಕಲಾಶಾಲೆ ನಡೆಸಿದ, ಖ್ಯಾತ ಕಲಾವಿದ ಎಂ.ಟಿ.ವಿ. ಆಚಾರ್ಯ ಅವರು ‘ಚಂದಮಾಮ’ಕನ್ನಡ ಅವತರಣಿಕೆಯಲ್ಲಿ ಮೊದಲ ಐದು ವರ್ಷಗಳ ಕಾಲ ಮುಖಚಿತ್ರ, ಒಳಪುಟಗಳ ಕಲಾವಿದರಾಗಿದ್ದಷ್ಟೇ ಅಲ್ಲದೆ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ಅನಂತರ ಸಂಪಾದಕರಾದವರೇ ‘ನವಗಿರಿನಂದ’. ಇದರ ಬಗ್ಗೆ ‘ಕಲೆ ಮತ್ತು ನಾನು’ಎಂಬ ತಮ್ಮ ಆತ್ಮಕಥೆಯಲ್ಲಿ ಎಂ.ಟಿ.ವಿ. ಆಚಾರ್ಯ ಅವರು ನೆನಪು ಮಾಡಿಕೊಂಡಿದ್ದಾರೆ. ಐವತ್ತು ಅರವತ್ತು ವರ್ಷಗಳ ಹಿಂದೆ ಚಿಕ್ಕವರು, ದೊಡ್ಡವರು ಎಂದು ವಯಸ್ಸಿನ ಅಂತರವಿಲ್ಲದೆ ಕನ್ನಡ ಓದು-ಬರಹ ಗೊತ್ತಿದ್ದ ಬಹುತೇಕ ಮಂದಿ ಪ್ರತಿ […]
Month : November-2024 Episode : Author : ಅಣಕು ರಾಮನಾಥ್
ಬಾನೊಳು ತಿಂಗಳು ಮೊಳಗುತಿರೆ ಮೀನುಗಳಿಣುಕುತ ತೊಳಗುತಿರೆ ಶಾಂತಿಯ ಸೊಗದಲಿ ತುಂಬೆ ತಿರೆ ಬಾಳಿದು ಹುಸಿಯೆಂದೆಂಬುವರೆ? ಕುವೆಂಪು ವಿರಚಿತ ‘ಹುಣ್ಣಿಮೆ’ ಕವನದ ಚರಣವಿದು. ‘ಕುಕವಿಗಳ ಆಗಸದಿ/ ಕವಿದಮಾವಾಸ್ಯೆಯನು/ಹುಣ್ಣಿಮೆಯನಾಗಿಸಿದ/ ರಸಋಷಿಯೆ ಪುಟ್ಟಪ್ಪ’. ಕುವೆಂಪು ಈ ನಾಲ್ಕು ಸಾಲುಗಳಲ್ಲಿ ನಾಲ್ಕು ಬೆಳಕುಗಳನ್ನು ಸೂಚಿಸಿದ್ದಾರೆ. ಬಾನಿಗೆ ಚಂದಿರ, ತಾರೆಯರು ತುಂಬಿರುವ ದಿನವೇ ದೀಪಾವಳಿ. ಜಲಾಶಯಕ್ಕೆ ನೀರಿನಿಂದ ಇನಿತೇ ಚಿಮ್ಮಿ ಪುಳಕ್ಕನೆ ನೀರಿಗೆ ಮರಳುವ ಮೀನುಗಳ ಇಣುಕುಮಿಣುಕಿನ ಸಾಲೇ ದೀಪಾವಳಿ. ಬುವಿಗೆ ಯುದ್ಧಬಾಂಬುಗಳ ನಂತರದ ಶಾಂತಿಮತಾಪಿನ ಸಾಲೇ ದೀಪಾವಳಿ. ಬಾಳೆಂಬುದು ಅವಕಾಶಗಳೆಂಬ ದೀಪಗಳ ಆವಳಿಗಳನ್ನೀಯುವ […]