ಉತ್ಥಾನ ಡಿಸೆಂಬರ್ 2024
Month : December-2024 Episode : Author :
Month : December-2024 Episode : Author :
Month : December-2024 Episode : Author :
Month : December-2024 Episode : Author :
Month : December-2024 Episode : Author :
Month : December-2024 Episode : Author :
ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2024ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶಭಟ್ಟ ಕೊಪ್ಪಲತೋಟ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ವಾರ್ಷಿಕ ಕಥಾಸ್ಪರ್ಧೆ ೨೦೨೪ರಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು ೪೧೨ ಕಥೆಗಳು ಭಾಗವಹಿಸಿದ್ದವು. ಲೇಖಕ, ಪತ್ರಕರ್ತರಾದ ಪ್ರೊ|| ಎನ್.ಎಸ್. ಶ್ರೀಧರಮೂರ್ತಿ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದರು. ಮೊದಲನೆ ಬಹುಮಾನವನ್ನು (ರೂ. ೧೫,೦೦೦) ಶ್ರೀ ಗಣೇಶಭಟ್ಟ ಕೊಪ್ಪಲತೋಟ ಅವರ ’ತೀರ್ಪು’ ಎಂಬ ಕಥೆ […]
Month : December-2024 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಯಾರಿಗೆ ವ್ಯವಹಾರದಲ್ಲಿ ಸರಿಯಾಗಿ ನಡೆಯಲು ಬರುವುದಿಲ್ಲವೋ ಅವರಿಗೆ ಪರಮಾರ್ಥ ಮಾಡಲೂ ಬರುವುದಿಲ್ಲ. ವ್ಯವಹಾರದಲ್ಲಿ ನಡೆದ ಘಟನೆಗಳ ಪರಿಣಾಮವನ್ನು ಮನಸ್ಸಿನ ಮೇಲೆ ಆಗಗೊಡಬಾರದೆಂಬ ನಿಶ್ಚಯ ಮಾಡಬೇಕು ಹಾಗೂ ಸದ್ಗುರು ಆಜ್ಞೆಯನ್ನೇ ಪ್ರಮಾಣವೆಂದು ತಿಳಿದು ಅದನ್ನು ದಂಡೆಗೆ ತಲಪಿಸಬೇಕು. ಸಾಧನೆಯಲ್ಲಿ ತೀವ್ರತೆ ಇರಬೇಕು. “ನಾನು ಯಾರು” ಎಂಬುದನ್ನು ತಿಳಿದುಕೊಳ್ಳಬೇಕು. ಭಗವಂತನಿಗಿಂತ ಶ್ರೇಷ್ಠವಾದದ್ದಿಲ್ಲ ಎಂದು ತಿಳಿದಿದ್ದರೆ ನಾನು ಯಾರು ಎಂಬುದು ತಿಳಿಯುತ್ತದೆ. ನಿರ್ಗುಣದ ಬೋಧವಾದರೂ ಸಗುಣವನ್ನು ಬಿಡಬಾರದು. “ನನ್ನ ನಾಲಿಗೆಯ ಮೇಲೆ ಭಗವಂತನ ನಾಮ ಬರುತ್ತದೆ” – ಇದಕ್ಕಿಂತ ಶ್ರೇಷ್ಠವಾದ ಭಾಗ್ಯ […]
Month : December-2024 Episode : ಬೇತಾಳ ಕಥೆಗಳು - 17 Author : ಡಾ. ಎಚ್.ಆರ್. ವಿಶ್ವಾಸ
ಯುವರಾಜನಾದ ಮೇಲೆ ಒಮ್ಮೆ ಜೀಮೂತವಾಹನನು ತಂದೆಯ ಬಳಿಗೆ ಹೋಗಿ ನಿವೇದಿಸಿಕೊಂಡನು – “ಅಪ್ಪಾ! ಈ ಕಲ್ಪವೃಕ್ಷವನ್ನು ನಾವು ಯಾರಿಗೋಸ್ಕರ ಕಾಪಾಡಿಕೊಂಡು ಬರಬೇಕು? ಈ ಹಿಂದೆ ಅದನ್ನು ತನ್ನದೆಂದು ಕಾಪಾಡಿಕೊಂಡು ಬಂದವರು ಯಾರೂ ಈಗ ಬದುಕಿಲ್ಲ. ಅದಕ್ಕೂ ಅವರಿಗೂ ಈಗ ಸಂಬಂಧವೇ ಇಲ್ಲ. ಅದ್ದರಿಂದ ನಾನು ಅದನ್ನು ಪರೋಪಕಾರಕ್ಕಾಗಿ ವಿನಿಯೋಗಿಸುತ್ತೇನೆ. ಏಕೆಂದರೆ ಪರೋಪಕಾರದಂತಹ ಸತ್ಕಾರ್ಯ ಸ್ಥಿರವೇ ಹೊರತು ಐಶ್ವರ್ಯವಲ್ಲ..’’ ಇಲ್ಲಿಯವರೆಗಿನ ಪ್ರಯತ್ನವೆಲ್ಲ ವಿಫಲವಾದರೂ ನಿರಾಶನಾಗದೆ ತ್ರಿವಿಕ್ರಮಸೇನನು ಹದಿನೇಳನೆಯ ಬಾರಿ ಹೆಣವನ್ನು ಮರದಿಂದ ಕೆಳಗಿಳಿಸಿ, ಹೆಗಲಮೇಲೆ ಹಾಕಿಕೊಂಡು ಶ್ಮಶಾನದತ್ತ ಹೊರಟನು. […]
Month : December-2024 Episode : Author : ನಾರಾಯಣ ಶೇವಿರೆ
ಕೃಷಿಭೂಮಿಯನ್ನು ಉಳ್ಳವರೇ ಕೃಷಿಕಾರ್ಯವನ್ನೂ ಮಾಡಬೇಕು. ಸ್ವಾವಲಂಬನೆಯ ಬದುಕನ್ನು ರೂಪಿಸುವ ಕೃಷಿಕಾರ್ಯವನ್ನು ಮಾಡಬೇಕು. ಕೃಷಿಕಾರ್ಯವನ್ನು ಸ್ವಾವಲಂಬಿಯಾಗಿ ಮಾಡಬೇಕು. ಮುಂಪೀಳಿಗೆಯಲ್ಲಿಯೂ ಸ್ವಾವಲಂಬನೆಯ ಸ್ವಾಭಿಮಾನವನ್ನು ಉದ್ದೀಪಿಸಬೇಕು. ಕೃಷಿವ್ಯವಸ್ಥೆಯೊಂದು ಸದೈವ ಸಂಗತಗೊಳ್ಳುವ ಬಗೆಯಿದು. ಅದೊಂದು ಮಲೆನಾಡಿನ ಹಳ್ಳಿ. ಅಲ್ಲೊಬ್ಬರು ಹಿತೈಷಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡುತ್ತಾ ಮಾತನಾಡುತ್ತ ಮಾತು ಮನೆಯ ಕಷ್ಟಗಳನ್ನು ಆವರಿಸಿಕೊಂಡು ಕ್ರಮೇಣ ಕೃಷಿಯತ್ತ ಹೊರಳಿತು. ಮನೆಯ ಎಲ್ಲಾ ಕಷ್ಟಸುಖಗಳಿಗೆ ದಂಪತಿಗಳಿಬ್ಬರೇ ಇರುವುದು. ಜತೆಗೆ ಮನೆಯ ಹೊರಗಿನ ಕೆಲಸಕ್ಕೆ ಯಾರೂ ಸಿಗ್ತಾ ಇಲ್ಲ ಎಂಬ ಆತಂಕ. ಮನೆಯ ಹೊರಗಿನ ಕೆಲಸಗಳಲ್ಲಿ ಅತಿಮುಖ್ಯವಾದುದು ಕೃಷಿ. […]
Month : December-2024 Episode : Author : ಆರತಿ ಪಟ್ರಮೆ
ಮಕ್ಕಳು ಚೆನ್ನಾಗಿ ಓದುತ್ತಾರಾದ್ದರಿಂದ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಬೇಕುಬೇಕಾದಂತೆ ಮಾಡಿಕೊಟ್ಟುಬಿಡಬೇಕು ಎಂಬುದು. ಒಂದು ಹಂತದವರೆಗೆ ಇದು ಸರಿಯೆನಿಸಿದರೂ ನಿಧಾನವಾಗಿ ಮಕ್ಕಳು ನಮ್ಮನ್ನು ‘ಟೇಕನ್ ಫಾರ್ ಗ್ರಾಂಟೆಡ್’ ಮಾಡಿಕೊಂಡುಬಿಡುತ್ತಿದ್ದಾರೆ ಎಂಬುದು ಅರ್ಥವಾಗಿಬಿಡುತ್ತದೆ. ವಸ್ತುಗಳ ಮೌಲ್ಯ ಅವರಿಗೆ ಅರ್ಥವಾಗುವುದು ಹಾಗಿರಲಿ, ಅಪ್ಪ ಅಮ್ಮನ ಮೌಲ್ಯವೂ ಅರ್ಥವಾಗುವುದೇ ಇಲ್ಲವೇನೋ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬರುಬರುತ್ತ ಅಪ್ಪ–ಅಮ್ಮ ತಮ್ಮ ಬೇಕುಬೇಡಗಳನ್ನು ಪೂರೈಸುವ ಸಂಪನ್ಮೂಲಗಳು ಎಂಬ ದೃಷ್ಟಿಕೋನ ಮಾತ್ರವೇ ಉಳಿಯುತ್ತದೆ ಹೊರತು ಭಾವಬಂಧಗಳು ಮರೆಯಾಗಲಾರಂಭಿಸುತ್ತವೆ. ವಾರಪೂರ್ತಿ ಮನೆಯಿಂದ ದೂರವಿರುವ ಮಗ ವಾರಾಂತ್ಯದಲ್ಲಿ ಮನೆಗೆ ಬರುತ್ತಾನೆ. […]
Month : December-2024 Episode : Author : ಡಾ. ಜನಾರ್ದನ ಹೆಗಡೆ
ಅಂದಿನ ಬ್ರಿಟಿಷರ ದರ್ಪ, ದೌರ್ಜನ್ಯ, ನಯವಂಚನೆ ಮತ್ತು ಅಸಹಾಯಕ `ಇಂಡಿಯಾ’ದ ಬಗ್ಗೆ ಅಮೆರಿಕ ಮತ್ತು ಯೂರೋಪಿನ (ಇಂಗ್ಲೆಂಡೂ ಸೇರಿದಂತೆ) ಇಂಗ್ಲಿಷ್ ಬಲ್ಲ ಜಗತ್ತಿನ ಜನಮಾನಸದ ಗಮನವನ್ನು ದಾಖಲೆಗಳ ಮೂಲಕ ಸೆಳೆಯುವುದೇ ಈ ಕೃತಿಯ ಮೂಲ ಉದ್ದೇಶ ಆಗಿತ್ತು. ಅದರಿಂದಾಗಿಯೇ ಅವರು ವಿದೇಶೀ ಓದುಗರಿಗೆ ಚಿರಪರಿಚಿತವಾದ ರಾಜಕಾರಣಿಗಳ, ಅಧಿಕಾರಿಗಳ, ಲೇಖಕರ ಹಾಗೂ ತತ್ತ್ವಜ್ಞಾನಿಗಳ ಹೆಸರು, ಹುದ್ದೆ ಹಾಗೂ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ಹೇರಳವಾಗಿ ಲೇಖಕರು ಉಲ್ಲೇಖಿಸುತ್ತಾರೆ. ಈ ಪುಸ್ತಕದಲ್ಲಿ ನಾಲ್ಕು ಅಧ್ಯಾಯಗಳೂ, ಪುಸ್ತಕದ ಕೊನೆಗೆ `ನಿರ್ಣಯ’ವೆಂಬ ಚಿಕ್ಕ ಅಧ್ಯಾಯವೂ […]