ಪ್ರವೇಶಿಕೆ ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ.ವಿ. ಗುಂಡಪ್ಪನವರು (1887-1975) ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್ವ-ವಿದ್ವತ್ತೆಗಳ ಬಗೆಗೆ, ಪ್ರತಿಭೆ-ಪ್ರಾಜ್ಞತೆಗಳ ಬಗೆಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿದೆ; ಇದು ಕನ್ನಡಿಗರ ಭಾಗ್ಯ. ಆದರೆ ಡಿ.ವಿ.ಜಿ.ಯವರದು ಮಹಾಕಾವ್ಯೋಪಮವಾದ ಜೀವನ. ಧ್ವನನಶೀಲತೆಯೇ ಶ್ರೇಷ್ಠಸಾಹಿತ್ಯದ ಹೆಗ್ಗುರುತಲ್ಲವೇ? ಪ್ರತಿಕ್ಷಣವೂ ಬಗೆಬಗೆಯ ಹೂವು-ಹಣ್ಣುಗಳಿಂದ ನವೋನವವಾಗಿ ಕಂಗೊಳಿಸುವ ವಸಂತದ ವನರಾಜಿಯಂತೆ, ಮಹಾಕಾವ್ಯವು ಸವಿದಷ್ಟೂ ಸೊಗಯಿಸುತ್ತದೆ. ಹೀಗೆ ಬುದ್ಧಿಗೆ ಆಕರ್ಷಕವೂ ಭಾವಕ್ಕೆ ಆರೋಗ್ಯಕರವೂ ಆದ ಡಿ.ವಿ.ಜಿ.ಯವರ ಬದುಕು-ಬರೆಹಗಳನ್ನು ಇನ್ನಷ್ಟು ವಿಶದವಾಗಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. […]
ಡಿ.ವಿ.ಜಿ. ಅವರ ಭಾಷಾಶಿಲ್ಪ
Month : June-2019 Episode : Author : ಬಿ.ಎನ್. ಶಶಿಕಿರಣ್