ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2019
Month : June-2019 Episode : Author :
Month : June-2019 Episode : Author :
Month : June-2019 Episode : Author : ದು.ಗು.ಲಕ್ಷ್ಮಣ
“ಇಂಜಿನಿಯರನ ಮಗ ಇಂಜಿನಿಯರ್, ಡಾಕ್ಟರನ ಮಗ ಡಾಕ್ಟರ್, ಸಂಗೀತಗಾರನ ಮಗ ಸಂಗೀತಗಾರ, ವಕೀಲನ ಮಗ ವಕೀಲ ಆಗಬಹುದಾದರೆ ರಾಜಕಾರಣಿಯ ಮಗ ರಾಜಕಾರಣಿ ಆಗುವುದು ತಪ್ಪೆ?” – ಹೀಗೆಂದು ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪ್ರಚಾರಭಾಷಣ ಮಾಡುತ್ತ ಪ್ರಶ್ನಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ಎಂಬ ಕಾರಣಕ್ಕೆ ನಿಖಿಲ್ ಅಭ್ಯರ್ಥಿಯಾಗಿದ್ದಾರೆ, ಆತನಿಗೆ ನಿಜಕ್ಕೂ ಅಭ್ಯರ್ಥಿಯಾಗುವ ಅರ್ಹತೆ ಇಲ್ಲ – ಎಂಬ ವಿರೋಧಿಗಳ ಆರೋಪಕ್ಕೆ ತಿರುಗೇಟು ನೀಡಲು ನಿಖಿಲ್ […]
Month : June-2019 Episode : Author : ಆರತಿ ಪಟ್ರಮೆ
ಸಾವಿನ ಮನೆಯ ಮೌನದೊಳಗೆ ಮನದ ತುಂಬ ಮಾತುಗಳು. ಅರ್ಥವಾಗದೆ ಉಳಿದಿದ್ದ ಪ್ರಶ್ನೆಗಳಿಗೆ ಉತ್ತರವನ್ನು ಬಯಸಿಯೂ ನಿರ್ಲಿಪ್ತವಾದ ಬದುಕಿನ ಪರಿಗೆ ಬೆರಗಾಗುವ ಹೊತ್ತು ಅದು. ಕರೆದೊಯ್ಯುವುದಕ್ಕೆ ಕೈ ಚಾಚಿದ ವಿಧಿಗೆ ಶರಣಾಗಿ ಮಲಗಿದ ಅತ್ತೆಯ ಮುಖವನ್ನು ಕಾಣುವಾಗ ನಿಜಕ್ಕೂ ಉಸಿರು ನಿಂತಿರುವುದೇ, ಆಕಸ್ಮಾತ್ ಈ ಸಾವು ನಿಜವೇ? ಎಂಬ ಗೊಂದಲ ಹುಟ್ಟಿಸುವ ಭಾವ. ಮುನ್ನಾ ರಾತ್ರಿ ರಾಗಿಗಂಜಿ ಕುಡಿಸುವಾಗ ಒಂದೊಂದು ಗುಟುಕೂ ಒಳಸೇರಬೇಕಾದರೆ ಒದ್ದಾಡಿದ ಪರಿಯಲ್ಲಿ ಸಾವು ಸನಿಹವೇ ಕಾದು ಕುಳಿತಿತ್ತೇ ಎಂಬ ಭೀತಿ ಆವರಿಸಿತ್ತು. ಅರ್ಧಲೋಟ ಗಂಜಿ […]
Month : June-2019 Episode : Author :
ಮನಸ್ಸು ತಾವರೆಯ ಕೊಳದಂತೆ, ತಿಳಿಯಾದ ಜಲದಂತೆ, ಕೆಳಗಿರುತ್ತದೆ ಕೆಸರು. ಕೆಸರಿನಿಂದ ಹುಟ್ಟುವುದು ಸುಗಂಧ ಸೂಸುವ ಕಮಲ. ಹೀಗಿದ್ದರೂ ನಾವು ನೀರನ್ನು ಬಗ್ಗಡ ಮಾಡಿ ಕೆಸರನ್ನು ಎಬ್ಬಿಸುತ್ತೇವೆ. ಕಮಲದ ಬೇರುಗಳನ್ನು ಕಿತ್ತುಹಾಕುತ್ತೇವೆ. ಕಾಯುತ್ತೇವೆ ಕದಡಿದ ನೀರು ತಿಳಿಯಾಗಲಿಕ್ಕೆ. ಈ ನಡುವೆ ಮೊದಲಿದ್ದ ತಾವರೆಕೆರೆಯ ಸೌಂದರ್ಯ ಇಲ್ಲವಾಗುತ್ತೆ. ಪ್ರತಿಯೊಂದು ಜಗಳವೂ ಕೊನೆಗೊಳ್ಳುವುದೆ ಇಲ್ಲ. ಕೊನೆಗೊಳಿಸುವುದು ಸಾಧ್ಯ ನಾವು ಮೈಮರೆತಾಗ ಆಗ ಕುದ್ದ ಮನಸ್ಸು ತಣ್ಣಗಾಗುತ್ತೆ. ಮಾತುಗಳ ರಕ್ತಬೀಜಾಸುರರು ಯುದ್ಧಕ್ಕೆ ಇಳಿದಾಗ ಮೌನನಾಲಗೆ ಚಾಚಿ ರಕ್ತದ ತೊಟ್ಟು ನೆಲಕ್ಕೆ […]
Month : June-2019 Episode : ಭಾಗ - 1 Author : ಬಿ.ಪಿ. ಪ್ರೇಮ್ ಕುಮಾರ್
‘ಅಗ್ನಿಗರ್ಭದ ಪ್ರಸವ ವೇದನೆ’ ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಹೋರಾಟಗಳು ಹಲವು. ಪ್ರತಿಯೊಂದು ಹೋರಾಟವೂ ತನ್ನದೇ ಆದ ಮಹತ್ತ್ವವನ್ನು ಪಡೆದಿದೆ. 1930 ಏಪ್ರಿಲ್ 30ರಂದು ನಡೆದ ಚಿತ್ತಗಾಂವ್ ಶಸ್ತ್ರಾಗಾರ ಪ್ರಕರಣವು ಬ್ರಿಟಿಷರಲ್ಲಿ ತಲ್ಲಣವನ್ನು ಮೂಡಿಸಿತ್ತು. ಶಿಕ್ಷಕರಾಗಿದ್ದ ಸೂರ್ಯಸೇನ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸಿದ್ದು, ಹೋರಾಡಿದ್ದು ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಚಿತ್ತಗಾಂವ್ ಶಸ್ತ್ರಾಗಾರದ ಮುಂದೆ ಸೇರಿದ ಹೋರಾಟಗಾರರು ರಾಷ್ಟ್ರಧ್ವಜವನ್ನು ಹಾರಿಸಿ ಚಿತ್ತಗಾಂವ್ ಸ್ವತಂತ್ರ ಎಂದು ಘೋಷಿಸಿದ್ದು ಸ್ವಾತಂತ್ರ್ಯ ಹೋರಾಟದ ಒಂದು ಮೈಲಿಗಲ್ಲು ಎನ್ನಬಹುದು. ತರುಣರ ಪಡೆಯು […]
Month : June-2019 Episode : Author :
ಈಗ್ಗೆ ನಾಲ್ಕು ದಶಕಗಳ ಹಿಂದೆ ದೇಶದ ರಾಜಕೀಯ ಪರಿಸರವನ್ನು ಪರಾಮರ್ಶಿಸಿದ ವಿಶ್ಲೇಷಕರನೇಕರು ದೇಶದಲ್ಲಿ ಏಕಪಕ್ಷಸರ್ಕಾರಗಳ ಕಾಲ ಮುಗಿದಿದೆಯೆಂದೂ ಇನ್ನು ಮುಂದೆ ಸಮ್ಮಿಶ್ರಸರ್ಕಾರಗಳಿಗಷ್ಟೆ ಅವಕಾಶ ಇರುತ್ತದೆಂದೂ ಅಭಿಪ್ರಾಯಪಟ್ಟಿದ್ದರು. ಅಲ್ಲಿಂದೀಚೆಗೆ ಬಗೆಬಗೆಯ ಪಕ್ಷಮಿಶ್ರಣಪ್ರಯೋಗಗಳು ನಡೆದಿರುವುದನ್ನು ಜನ ನೋಡಿದ್ದಾರೆ. ಮಿಶ್ರಸರ್ಕಾರಗಳ ಸಾಧಕಬಾಧಕಗಳ ಹಲವಾರು ರೀತಿಯ ಅನುಭವಗಳು ಆಗಿವೆ. ಕರ್ನಾಟಕದಲ್ಲಿಯೇ ಈ ಹಿಂದೆ ಮೈತ್ರಿಸರ್ಕಾರ ಪ್ರಯೋಗ ಹೇಗೆ ಸಾಗಿತ್ತೆಂಬುದನ್ನು ಜನ ಮರೆತಿರಲಾರರು. 1999ರಲ್ಲಿ ಪ್ರಧಾನಿಯಾದ ವಾಜಪೇಯಿಯವರು ನಾಲ್ಕಾರು ಪಕ್ಷಗಳನ್ನು ಸೇರಿಸಿಕೊಂಡು ಪೂರ್ಣಾವಧಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದುದು ಮೈತ್ರಿಸರ್ಕಾರಗಳ ಇತಿಹಾಸದ ಸುವರ್ಣಾಧ್ಯಾಯವೆಂದು ಅಂಕಿತಗೊಂಡಿತ್ತು. ಅದಕ್ಕೆ […]
Month : June-2019 Episode : Author : ಎಸ್.ಆರ್. ರಾಮಸ್ವಾಮಿ
ದೊಡ್ಡ ಪ್ರಮಾಣದಲ್ಲಿ ಸುಶಿಕ್ಷಿತರನ್ನೊಳಗೊಂಡ ನಮ್ಮ ರಾಜ್ಯದಲ್ಲಿ ಮತದಾನದ ಪ್ರಮಾಣ ಇಷ್ಟು ಕಡಮೆಯಾಗಿರುವುದು ಏಕೆಂಬುದಕ್ಕೆ ದೇವರೇ ಉತ್ತರಿಸಬೇಕು. ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ರಾಜಧಾನಿ ಬೆಂಗಳೂರಿನಲ್ಲಿಯೆ ಮೂರೂ ಕ್ಷೇತ್ರಗಳನ್ನು ಒಟ್ಟಾಗಿ ಪರಿಶೀಲಿಸಿದಾಗ ಮತದಾನವಾಗಿರುವುದು ಸರಾಸರಿ ಶೇ. 52.1ರಷ್ಟು ಮಾತ್ರ. ಮತಜಾಗೃತಿಗಾಗಿ ಸಂಘಸಂಸ್ಥೆಗಳಿಂದಲೂ ಮಾಧ್ಯಮಗಳಿಂದಲೂ ಹೋಟೆಲ್ ಮೊದಲಾದ ಉದ್ಯಮಗಳಿಂದಲೂ ವಿಶೇಷ ಪ್ರಯತ್ನಗಳು ಈ ಬಾರಿ ಆಗಿದ್ದವು; ಫೇಸ್ಬುಕ್ ಮೊದಲಾದ ಜಾಲತಾಣಗಳ ಮೂಲಕವೂ ಗಣನೀಯ ಪ್ರಯಾಸಗಳು ಆಗಿದ್ದವು. ಆದರೂ ಮತದಾನದ ಪ್ರಮಾಣ ಕಡಮೆ ಮಟ್ಟದಲ್ಲೇ ಉಳಿಯಿತು. ಇದು ಹೀಗೇಕೆಂಬುದು ಯಕ್ಷಪ್ರಶ್ನೆಯಾಗಿದೆ. […]
Month : June-2019 Episode : Author :
Month : June-2019 Episode : Author : ಬಿ.ಎನ್. ಶಶಿಕಿರಣ್
ಪ್ರವೇಶಿಕೆ ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ.ವಿ. ಗುಂಡಪ್ಪನವರು (1887-1975) ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್ವ-ವಿದ್ವತ್ತೆಗಳ ಬಗೆಗೆ, ಪ್ರತಿಭೆ-ಪ್ರಾಜ್ಞತೆಗಳ ಬಗೆಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿದೆ; ಇದು ಕನ್ನಡಿಗರ ಭಾಗ್ಯ. ಆದರೆ ಡಿ.ವಿ.ಜಿ.ಯವರದು ಮಹಾಕಾವ್ಯೋಪಮವಾದ ಜೀವನ. ಧ್ವನನಶೀಲತೆಯೇ ಶ್ರೇಷ್ಠಸಾಹಿತ್ಯದ ಹೆಗ್ಗುರುತಲ್ಲವೇ? ಪ್ರತಿಕ್ಷಣವೂ ಬಗೆಬಗೆಯ ಹೂವು-ಹಣ್ಣುಗಳಿಂದ ನವೋನವವಾಗಿ ಕಂಗೊಳಿಸುವ ವಸಂತದ ವನರಾಜಿಯಂತೆ, ಮಹಾಕಾವ್ಯವು ಸವಿದಷ್ಟೂ ಸೊಗಯಿಸುತ್ತದೆ. ಹೀಗೆ ಬುದ್ಧಿಗೆ ಆಕರ್ಷಕವೂ ಭಾವಕ್ಕೆ ಆರೋಗ್ಯಕರವೂ ಆದ ಡಿ.ವಿ.ಜಿ.ಯವರ ಬದುಕು-ಬರೆಹಗಳನ್ನು ಇನ್ನಷ್ಟು ವಿಶದವಾಗಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. […]
Month : June-2019 Episode : Author : ರಾಧಾಕೃಷ್ಣ ಕಲ್ಚಾರ್
ಒಂದು ಕ್ಷಣ ನನ್ನಲ್ಲಿ ಭೀತಿ ಕಾಣಿಸಿಕೊಂಡಿತು. ಬಂದವನು ಭೀಮಸೇನನಿರಬಹುದೇ? ಯುಧಿಷ್ಠಿರನೆದುರು ತನ್ನ ಆಕ್ರೋಶವನ್ನು ಪೂರ್ಣ ಪ್ರಕಟಿಸಲಾರದೆ ಈಗ ಕತ್ತಲಾವರಿಸುತ್ತಿದ್ದಂತೆ ಉಳಿದವರಿಗೆ ಅರಿವಾಗದಂತೆ ಕಡೆಗೆ ಬಂದನೇ? ಅವನ ಸೇಡಿನ್ನೂ ತೀರಿಲ್ಲವೆ? ಏನು ಮಾಡುತ್ತಾನೀಗ? ನನ್ನ ಸಾವನ್ನು ಕಣ್ಣಾರೆ ನೋಡಲೆಂದು ಬಂದನೇ? ಅಥವಾ ಕೈಯಾರ ಕೊಲ್ಲುವನೆ? ಅಲ್ಲಾ ತೊಡೆಮುರಿದು ಬಿದ್ದ ನನಗೆ ಇನ್ನೂ ಚಿತ್ರಹಿಂಸೆ ಮಾಡಲೆಂದು ಬಂದನೇ? ಭೀಮ ಮಾಡಬಹುದಾದುದನ್ನು ಊಹಿಸಿಯೇ ಬೆದರಿದೆ. ಆದರೆ.. ಬರುತ್ತಿರುವವನು ಭೀಮನಿರಲಾರ ಅನಿಸಿತು. ಭೀಮನ ಕಟ್ಟುಮಸ್ತಾದ ದೇಹವಲ್ಲ ಇದು. ತೆಳುವಾದ ಕಾಯ. ಅಷ್ಟೇ ಅಲ್ಲ, […]