
“ಇಂಜಿನಿಯರನ ಮಗ ಇಂಜಿನಿಯರ್, ಡಾಕ್ಟರನ ಮಗ ಡಾಕ್ಟರ್, ಸಂಗೀತಗಾರನ ಮಗ ಸಂಗೀತಗಾರ, ವಕೀಲನ ಮಗ ವಕೀಲ ಆಗಬಹುದಾದರೆ ರಾಜಕಾರಣಿಯ ಮಗ ರಾಜಕಾರಣಿ ಆಗುವುದು ತಪ್ಪೆ?” – ಹೀಗೆಂದು ಕಳೆದ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪ್ರಚಾರಭಾಷಣ ಮಾಡುತ್ತ ಪ್ರಶ್ನಿಸಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ಎಂಬ ಕಾರಣಕ್ಕೆ ನಿಖಿಲ್ ಅಭ್ಯರ್ಥಿಯಾಗಿದ್ದಾರೆ, ಆತನಿಗೆ ನಿಜಕ್ಕೂ ಅಭ್ಯರ್ಥಿಯಾಗುವ ಅರ್ಹತೆ ಇಲ್ಲ – ಎಂಬ ವಿರೋಧಿಗಳ ಆರೋಪಕ್ಕೆ ತಿರುಗೇಟು ನೀಡಲು ನಿಖಿಲ್ […]