ಮಾನವ ಜನ್ಮ
ಕೊಟ್ಟಿಹನು ದೇವರು ಎಲ್ಲವನ್ನು
ತೊರೆ ನೀನು ಬೇಕುಗಳನ್ನು
ಕಂಗಾಲಾಗಿಹನು ಪರಮಾತ್ಮ
ಈತ ತಾನೇ ಸೃಷ್ಟಿಸಿದ ಜೀವಿಯೆಂದು?
ಇದ್ದಿದುರಲ್ಲಿ ಸಂತೋಷವ ಮರೆತು,
ಆಸೆಯಲಿ ದುಃಖಗಳ ಬರಮಾಡಿಕೊಳ್ಳುವನು
ಪ್ರಜ್ವಲಿಸುತ್ತಿರುವ ಪರಂಜ್ಯೋತಿಯನ್ನು ಆರಿಸಿ
ಹಿಡಿದಿಹನು ನಿಶೆಯಲ್ಲಿ ಚಿಮಣಿ ದೀಪವನ್ನು
ಪರರಿಗೆ ತೋರಿಸುತ್ತಿರುವನು
ತೋರ್‌ಬೆರಳ ನೀ ಹಾಗೆ-ಹೀಗೆಂದು
ಮದದಲ್ಲಿ ಮರೆತಿಹನು
ತನ್ನ ಬುಡ ತನಗೆ ಕಾಣುವುದಿಲ್ಲವೆಂದು
ಬದುಕಿರುವ ನಾಲ್ಕು ದಿನದಲ್ಲಿ
ಗಳಿಸಿಕೋ ಒಳ್ಳೆಯ ಹೆಸರನ್ನು
ಉಸಿರು ಹೋದರೂ ನೆನೆಯುವಂತಾಗಲಿ
ಅಂದು ಆತನೊಬ್ಬ ಇದ್ದನೆಂದು
ಕವನ, ೯ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ, ವೇದಶಂಕರ ನಗರ,
ನಟ್ಟಿಬೈಲು, ಉಪ್ಪಿನಂಗಡಿ