
ಉತ್ಥಾನ ಜುಲೈ 2023ರ ಸಂಚಿಕೆಯಲ್ಲಿ ಏನೇನಿದೆ
Month : June-2023 Episode : Author :
Month : June-2023 Episode : Author :
Month : June-2023 Episode : Author : ಎಚ್ ಮಂಜುನಾಥ ಭಟ್
ಶಾ ಕಮಿಷನ್ ವರದಿ ಆಧಾರಿತ ವಿಶೇಷ ಲೇಖನ.
Month : June-2023 Episode : Author : ಅಜಕ್ಕಳ ಗಿರೀಶ್ ಭಟ್ಟ
ಈಚಿನ ವರ್ಷಗಳಲ್ಲಿ ನಾವು ಸಾಹಿತ್ಯ ಎಂದು ಏನನ್ನು ಕರೆಯುತ್ತೇವೋ ಅದನ್ನು ಸ್ಥೂಲವಾಗಿ ಎರಡು ವಿಭಾಗಗಳಲ್ಲಿ ಗುರುತಿಸಬಹುದು. ಕಾದಂಬರಿ, ನಾಟಕ, ಕಥೆ, ಕವಿತೆ ಇತ್ಯಾದಿ ಪ್ರಕಾರಗಳನ್ನು ಕಲ್ಪನಾಧಾರಿತ ಸಾಹಿತ್ಯ ಎಂದು ಕರೆದರೆ ವಿಮರ್ಶೆ, ಗಂಭೀರ ಪ್ರಬಂಧ, ವೈಚಾರಿಕ ಲೇಖನ, ಅಂಕಣ ಮುಂತಾದವುಗಳನ್ನು ವಿಚಾರ, ಮಾಹಿತಿ, ಅಭಿಪ್ರಾಯಗಳನ್ನು ಆಧರಿಸಿದ ಸಾಹಿತ್ಯ ಎಂದು ಕರೆಯಬಹುದು. ಇತ್ತೀಚಿನ ವರ್ಷಗಳಲ್ಲಿ ಪುಸ್ತಕ ಪ್ರಕಾಶನ ಮತ್ತು ಮಾರಾಟವನ್ನು ನೋಡಿದರೆ, ಈ ಎರಡನೆಯ ರೀತಿಯ ಬರಹಳಿಗೂ ಕಲ್ಪನಾಧಾರಿತ ಸಾಹಿತ್ಯದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಓದುಗರು ಇದ್ದಾರೆ ಎಂಬ […]
Month : June-2023 Episode : Author :
Month : June-2023 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಜಗತ್ತಿನಲ್ಲಿ ನಾವು ಯಾರ ನಿಂದೆಯನ್ನೂ ಮಾಡಬಾರದು. ನಾವು ಯಾವಾಗ ಎರಡನೆಯವರ ದೋಷಗಳನ್ನು ನೋಡುತ್ತೇವೆಯೊ ಅಂದರೆ ಎರಡನೆಯವರ ಹತ್ತಿರ ದೋಷಗಳಿವೆ ಎಂದು ಅನಿಸುತ್ತದೆಯೊ ಅವಾಗ ಆ ದೋಷಗಳು ಸೂಕ್ಷ್ಮವಾಗಿ ನಮ್ಮ ಹತ್ತಿರವೇ ಇರುತ್ತವೆ ಎಂದು ತಿಳಿಯಬೇಕು, ಹಾಗೂ ನಾವು ಕೂಡಲೇ ಭಗವಂತನಿಗೆ ಶರಣುಹೋಗಿ “ಈ ನನ್ನ ದುರ್ಗುಣವನ್ನು ತೆಗೆದುಹಾಕು” ಎಂದು ಕಳಕಳಿಯಿಂದ ಪ್ರಾರ್ಥಿಸಬೇಕು. ನಾವು ಯಾವಾಗ “ಜಗತ್ತಿನಲ್ಲಿ ನ್ಯಾಯ ಉಳಿದಿಲ್ಲ” ವೆಂದು ಅನ್ನುತ್ತೇವೆಯೊ ಆವಾಗ ಆ ದೋಷವು ನಮ್ಮ ಹತ್ತಿರವೇ ಇರುತ್ತದೆಯೆಂದು ತಿಳಿಯಬೇಕು. ಆದ್ದರಿಂದ ನಾವು ಯಾರ ದೋಷವನ್ನೂ […]
Month : June-2023 Episode : Author : ಎಸ್. ಎಸ್. ನರೇಂದ್ರಕುಮಾರ್
ಸತೀಶ್ ದಹಿಯಾ ಅವರ ತಂಡ ಬೇಟೆಯಾಡಲು ಹೊರಟಿದ್ದುದು ಸಾಮಾನ್ಯ ಉಗ್ರಗಾಮಿಗಳನ್ನಲ್ಲ. ಅವರು ಜೈಷ್–ಎ–ಮೊಹಮ್ಮದ್ ಉಗ್ರ ಗುಂಪಿಗೆ ಸೇರಿದವರು, ಕಮಾಂಡೋಗಳಂತೆ ತರಬೇತಿ ಪಡೆದವರು. ಆ ದಳಕ್ಕಿಟ್ಟಿದ್ದ ಹೆಸರು ‘ಅಫ್ಜಲ್ ಗುರು ಸ್ಕ್ವಾಡ್’. ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದವು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಸಂವಹನ ನಡೆಸುತ್ತಿದ್ದರು. ಹೀಗಾಗಿ ಅವರ ಸಂವಹನವನ್ನು ಕದ್ದಾಲಿಸಲು ಕಷ್ಟವಿತ್ತು. ಕಮಾಂಡೋ ಶೈಲಿಯ ತರಬೇತಿ ಪಡೆದಿದ್ದ ಈ ಉಗ್ರರು, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ದೀರ್ಘಕಾಲ ಕಾದಾಡಲು ಸಮರ್ಥರಾಗಿದ್ದರು. ಅವರನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿರಲಿಲ್ಲ. ಒಬ್ಬೊಬ್ಬ ಉಗ್ರನೂ […]
Month : June-2023 Episode : Author : ಎಂ.ಬಿ. ಹಾರ್ಯಾಡಿ
ಪುಸ್ತಕದಲ್ಲಿ ಸೇರಿರುವ ಲೇಖಕರ ‘ಇದು ನನ್ನ ಹಣತೆ’ಯನ್ನು ಓದಿದರೆ ಮಂಜುನಾಥ ಅಜ್ಜಂಪುರ ಅವರ ಕುರಿತು ಮತ್ತು ಇಲ್ಲಿನ ಲೇಖನಗಳ ಹಿನ್ನೆಲೆಯ ಬಗೆಗೆ ಒಂದಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. “ಸೀತಾರಾಮ ಗೋಯಲ್ ಅವರ ‘ವಾಯ್ಸ್ ಆಫ್ ಇಂಡಿಯಾ’ ಸರಣಿಯ ಕೃತಿಗಳಾಗಲಿ, ಅರುಣ್ ಶೌರಿ ಅವರ ವಿಸ್ತೃತ ಧಾರೆಗಳ ಕೃತಿಶ್ರೇಣಿ ಆಗಲಿ, ಈ ದಿಕ್ಕಿನಲ್ಲಿ ಅಪಾರವಾದ ಜಾಗೃತಿಯನ್ನು ಮೂಡಿಸಬಲ್ಲವು. ಈ ದಿಕ್ಕಿನಲ್ಲಿಯೇ ಸಾಗುವ ಧ್ಯೇಯೋದ್ದೇಶದ ಹಾದಿಯಲ್ಲಿ ಈ ಸಂಕಲನದ ಬರೆಹಗಳು ಪುಟ್ಟ ದೀಪಗಳಂತೆ ಎಂದು ಓದುಗರಿಗೆ ಅನ್ನಿಸಿದರೆ ನನ್ನ ಶ್ರಮ ಸಾರ್ಥಕ” […]
Month : June-2023 Episode : Author : ಆರತಿ ಪಟ್ರಮೆ
ಪ್ರಬುದ್ಧತೆಯ ಕಡೆಗಿನ ಒಂದು ನಡೆಯೆಂದರೆ ಭಿನ್ನತೆಯನ್ನು ಗೌರವಿಸುವುದು. ಎಲ್ಲರೂ ಒಂದೇ ಥರ ಇರುವುದು ಸಾಧ್ಯವಿಲ್ಲ ಎಂಬುದು ಹೇಗೋ ಹಾಗೆಯೇ ಒಂದು ಮೌಲ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಅವರವರ ನಿಲವು ಅವರವರದ್ದು. ವ್ಯಕ್ತಿಗತವಾಗಿ ಭಿನ್ನತೆ ಇದ್ದೇ ಇರುತ್ತದೆ. ಮನೆಯೊಳಗಿನ ಸಣ್ಣ ಉದಾಹರಣೆ ಕೊಡಬಹುದಾದರೆ ಒಬ್ಬರಿಗೆ ಚಹಾ ಇಷ್ಟವಾಗುತ್ತದೆ, ಮತ್ತೊಬ್ಬರಿಗೆ ಕಾಫಿ ಇಷ್ಟವಾಗುತ್ತದೆ. ತಿಂಡಿಯಲ್ಲಿಯೂ ಒಬ್ಬರಿನ್ನೊಬ್ಬರ ಆದ್ಯತೆಗಳು ಭಿನ್ನವೇ ಇರುತ್ತವೆ. ಆದರೆ ಪರಸ್ಪರರ ಇಷ್ಟಗಳನ್ನು ಗೌರವಿಸುವುದನ್ನು ಕಲಿತರೆ ಅಲ್ಲಿ ಸುಂದರ ಸಮನ್ವಯತೆ ಸಾಧಿತವಾಗುತ್ತದೆ. ಎಳೆತನದ ದಿನಗಳಲ್ಲಿ ಅಪ್ಪ ತಂದುಕೊಡುತ್ತಿದ್ದ ಚಾಕ್ಲೇಟು, […]
Month : June-2023 Episode : Author : ರಾಧಾಕೃಷ್ಣ ಕಲ್ಚಾರ್
ಆಶ್ರಮಕ್ಕೆ ಬಂದು ಇನ್ನೇನು ಪರ್ಣಕುಟಿಯ ಒಳಗೆ ಪ್ರವೇಶಿಸಬೇಕು ಅನ್ನುವಷ್ಟರಲ್ಲಿ, “ರೇಣುಕಾ, ನಿಲ್ಲಲ್ಲಿ. ಇದೇನು ಇಷ್ಟು ತಡಮಾಡಿದೆ? ಈ ಕಡೆಯ ಯೋಚನೆಯೇ ಇಲ್ಲದವಳಂತೆ ನದಿ ತೀರದಲ್ಲಿ ವಿಹರಿಸುತ್ತಿದ್ದೆಯೇನು? ಮಾಡಬೇಕಾದ ಕರ್ತವ್ಯವೂ ಮರೆತುಹೋಯಿತೆ? ಅಥವಾ ನೆನಪಿದ್ದರೂ ನಿರ್ಲಕ್ಷ್ಯವೆ? ಏನೀ ವಿಳಂಬದ ಅರ್ಥ?” ನನ್ನ ಪತಿದೇವರ ಕಂಚಿನಂತಹ ಕಂಠ ಮೊಳಗಿತು. ಎಂದಿನಂತೆ ಆ ದಿನವೂ ಪ್ರಭಾತ ಕಾಲದಲ್ಲಿ ನರ್ಮದೆಯತ್ತ ಹೊರಟಿದ್ದೆ. ನೀರು ತರುವುದಕ್ಕೆ ಕೈಯಲ್ಲಿ ಒಂದು ಕೊಡಪಾನ. ಆಶ್ರಮದಿಂದ ಬಹಳ ದೂರವೇನಲ್ಲ ನದಿ. ಆದರೆ ಬಿಸಿಲ ಝಳ ಪ್ರಖರವಿದ್ದಾಗ ತುಸು ಆಯಾಸವೆನಿಸುತ್ತಿತ್ತು. […]
Month : June-2023 Episode : Author : ಅಣಕು ರಾಮನಾಥ್
ಬೆವರಿನ ಬಗ್ಗೆ ಇರುವ ಒಂದು ಸುಂದರ ಹಾಡು ‘‘ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ.’’ ನೆಲದ ಮೇಲೆ ಬಿದ್ದ ಬೆವರ ಹನಿಯು ವಿಜ್ಞಾನಿಯ ಪ್ರಕಾರ ಆವಿಯಾಗುತ್ತದಷ್ಟೆ. ಆದರೆ ಕವಿಯ ಪ್ರಕಾರ ಅದು ರಾಗಿಯ, ಜ್ವಾಳದ ತೆನೆಯಾಯ್ತದೆ! ಬೆವರು ಹೊರಬಂದರಷ್ಟೇ ಸುಂದರ ಜೀವನ. ಬೆವರದೆಯೇ ಇದ್ದರೆ? ಜೇಮ್ಸ್ ಬಾಂಡ್ನ ‘ಮ್ಯಾನ್ ವಿತ್ ದ ಗೋಲ್ಡನ್ ಗನ್’ ಚಿತ್ರದಲ್ಲಿ ಜಿಲ್ ಮಾಸ್ಟರ್ಸನ್ ಎಂಬ ಸುಂದರಿಯ ಇಡೀ ಮೈಗೆ ಚಿನ್ನದ ಬಣ್ಣವನ್ನು ಹೊಡೆದ ಕಾರಣ. ಚಿನ್ನದ ಕಣಗಳು ಸ್ವೇದಗ್ರಂಥಿಗಳನ್ನು ಮುಚ್ಚಿಹಾಕಿ, ಬೆವರು […]