ಜುಲೈ 2024ರ ಸಂಚಿಕೆಯಲ್ಲಿ: ಪತ್ತೇದಾರಿ ವೈಜ್ಞಾನಿಕ ಕಥೆಗಳು
Month : June-2024 Episode : Author :
Month : June-2024 Episode : Author :
Month : June-2024 Episode : Author :
ವಿಶೇಷ ಪುರವಣಿ ಪ್ರಾಕ್ಸಿಮಾ ಸೆಂಟಾರಿನ ಡೆತ್ ರೇ ಆಕ್ರಮಣ – ಅಣಕು ರಾಮನಾಥ್ ನಿಗೂಢರು – ಅನು ಬೆಳ್ಳೆ ಪ್ರಾಜೆಕ್ಟ್ ಪ್ರತಿಸ್ಮೃತಿ – ನಾಗೇಶ್ಕುಮಾರ್ ಸಿ.ಎಸ್. ಓಂ ನಮಃ ಶಿವಾಯ – ಪ್ರೇಮಶೇಖರ ಕೊರೆಗೆರೆಗಳು ಬಿಚ್ಚಿಟ್ಟ ರಹಸ್ಯ – ಮೂಲ: ಕೊಲಂಬೊ ಟಿವಿ ಸರಣಿ ಭಾವಾನುವಾದ: ಎನ್. ರಾಮನಾಥ್ ಪ್ರಚಲಿತ ಒಂದು ರಾಷ್ಟ್ರಕ್ಕೆ ಒಂದು ಚುನಾವಣೆ ಸಾಕು – ಎಸ್.ಆರ್.ಆರ್. ಮುಖಪುಟ ಲೇಖನ ಪಾಶ್ಚಾತ್ಯರ ಭಾರತದ್ವೇಷದ ಹಿನ್ನೆಲೆ […]
Month : June-2024 Episode : Author :
Month : June-2024 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ದೇಶಕಾಲಗಳಿಗೆ ಅನುಗುಣವಾಗಿ ಸ್ಥೂಲ-ಸೂಕ್ಷ್ಮಗಳಿಂದಾಗುವ ಕ್ರಿಯೆಗಳು, ದೇಶದಲ್ಲಿ ಮತ್ತು ಕಾಲಗಳಲ್ಲಿ ಅದೇ ವಸ್ತುವಿನ ಸತ್ತೆಯಿಂದಲೇ ಜರಗುವವು. ಆದ್ದರಿಂದ ಆ ಜ್ಞೇಯ ವಸ್ತುವಿಗೆ “ವಿಶ್ವಬಾಹು” ಎಂದೆನ್ನುವರು. ಏಕೆಂದರೆ ಅದು ಸರ್ವಾಧಾರವಾಗಿದೆ. ಅದರ ಸತ್ತೆಯಿಂದಲೇ ಎಲ್ಲ ಕ್ರಿಯೆಗಳು ಎಲ್ಲ ಕಾಲದಲ್ಲೂ ಜರಗುವವು. ಮತ್ತು ಅರ್ಜುನ! ಏಕ ಸಮಯಾವಚ್ಛೇದದಿಂದ ಎಲ್ಲ ಕಡೆಗೂ ಅದರ ವ್ಯಾಪ್ತಿಯುಂಟು. ಅಂತೆಯೆ ಅದಕ್ಕೆ “ವಿಶ್ವಾಂಘ್ರಿ” ಅಂದರೆ ವಿಶ್ವದ ಮೂಲ ಎಂದೆನ್ನುವರು. ಸೂರ್ಯನಿಗೆ ಕಣ್ಣು, ಮೈ ಎಂಬ ಬೇರೆಬೇರೆ ಅವಯವಗಳಿರದೆ, ಕಣ್ಣೇ ಆತನ ಶರೀರ ಇಲ್ಲವೆ ಸ್ವರೂಪವಾಗಿರುವುದು. ಅದರಂತೆ ಸರ್ವಾಧಿಷ್ಠಾನತ್ವದಿಂದ […]
Month : June-2024 Episode : Author : ಡಾ. ಎಸ್. ಪಾರಿಜಾತ
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು “ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ” ಎಂಬ ಕಿರು ಸಚಿತ್ರ-ಸಂಪುಟವನ್ನು ನಿಗಮದ ನಿರ್ದೇಶಕ ಡಾ. ಪ್ರಕಾಶ್ ಆರ್. ಪಾಗೋಜಿ ಅವರ ಪ್ರಧಾನ ಸಂಪಾದಕತ್ವ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ನಾಡಿನ ಹೆಸರಾಂತ ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಹೊರತಂದಿದ್ದಾರೆ. ಈ ಕಿರುಸಂಪುಟದಲ್ಲಿ ಇತಿಹಾಸ, ಸಮುದಾಯ ಮತ್ತು ಸಾಂಸ್ಕೃತಿಕ ಸಾಧಕರು – ಎಂಬ ಮೂರು ಭಾಗಗಳಿವೆ. ಮೊದಲ ಭಾಗವಾದ ‘ಇತಿಹಾಸ’ದಲ್ಲಿ ಮರಾಠ ಜನಾಂಗದ ಇತಿಹಾಸ-ನೆಲೆ-ಹಿನ್ನೆಲೆ, […]
Month : June-2024 Episode : ಬೇತಾಳ ಕಥೆಗಳು - 11 Author : ಡಾ. ಎಚ್.ಆರ್. ವಿಶ್ವಾಸ
ತ್ರಿವಿಕ್ರಮನು ನಿರಾಶನಾಗದೆ ಹನ್ನೊಂದನೆಯ ಸಾರಿ ಮತ್ತೆ ಮರದಿಂದ ಹೆಣವನ್ನು ಇಳಿಸಿ, ಹೆಗಲಮೇಲೆ ಹಾಕಿಕೊಂಡು ಶ್ಮಶಾನದತ್ತ ಹೆಜ್ಜೆ ಹಾಕಿದನು. ಬೇತಾಳನು ಮತ್ತೊಂದು ಕಥೆಯನ್ನು ಹೇಳಲು ಆರಂಭಿಸಿದನು. ಉಜ್ಜಯಿನಿಯಲ್ಲಿ ಹಿಂದೆ ಧರ್ಮಧ್ವಜನೆಂಬ ರಾಜನಿದ್ದನು. ಅವನಿಗೆ ಅತ್ಯಂತ ಪ್ರಿಯರಾದ ಮೂವರು ಪತ್ನಿಯರಿದ್ದರು. ಇಂದುಲೇಖೆ, ತಾರಾವಲಿ, ಮೃಗಾಂಕವತಿ ಎಂದು ಅವರ ಹೆಸರುಗಳು. ಮೂವರೂ ಬಹಳ ಕೋಮಲೆಯರು. ಹೀಗಿರಲು ವಸಂತಮಾಸ ಬಂತು. ಆ ದಿನಗಳಲ್ಲಿ ಒಮ್ಮೆ ರಾಜನು ಮೂವರು ರಾಣಿಯರನ್ನೂ ಒಡಗೂಡಿಕೊಂಡು ಉದ್ಯಾನಕ್ಕೆ ಹೋಗಿ ವಿಹಾರ ಮಾಡುತ್ತಿದ್ದನು. ರಾಣಿಯರಂತೂ ಉದ್ಯಾನದ ಸೊಬಗಿನಿಂದ ಮೈಮರೆತು ಆನಂದಿಸುತ್ತಿದ್ದರು. […]
Month : June-2024 Episode : ಬೇತಾಳ ಕಥೆಗಳು -10 Author : ಡಾ. ಎಚ್.ಆರ್. ವಿಶ್ವಾಸ
ಛಲಬಿಡದ ತ್ರಿವಿಕ್ರಮನು ಮತ್ತೊಂದು ಸಲ ಹೆಣವನ್ನು ಹೆಗಲಮೇಲೆ ಹಾಕಿಕೊಂಡು ಶ್ಮಶಾನದ ಕಡೆಗೆ ಹೊರಟನು. ಆಗ ಹೆಣದಲ್ಲಿದ್ದ ಬೇತಾಳನು ಅವನ ಮಾರ್ಗಾಯಾಸ ಕಳೆಯಲೆಂದು ಈ ಕಥೆಯನ್ನು ಹೇಳಿದನು – ಅನಂಗಪುರವೆಂಬ ನಗರದಲ್ಲಿ ವೀರಬಾಹು ಎಂಬ ರಾಜನು ಆಳುತ್ತಿದ್ದನು. ಅದೇ ನಗರದಲ್ಲಿ ಅರ್ಥದತ್ತನೆಂಬ ತುಂಬಾ ಧನಿಕನಾದ ವರ್ತಕನಿದ್ದನು. ಅವನಿಗೆ ಧನದತ್ತನೆಂಬ ಮಗನೂ, ಮದನಸೇನೆಯೆಂಬ ಮಗಳೂ ಇದ್ದರು. ಅವರಿಬ್ಬರೂ ಪ್ರಾಪ್ತವಯಸ್ಕರಾಗಿದ್ದರು. ಒಮ್ಮೆ ಮದನಸೇನೆಯು ಸಖಿಯರೊಂದಿಗೆ ವಿಹಾರಕ್ಕೆಂದು ಉದ್ಯಾನಕ್ಕೆ ಹೋಗಿದ್ದಳು. ಅಲ್ಲಿ ಧರ್ಮದತ್ತನೆಂಬ ವರ್ತಕ ಯುವಕನೊಬ್ಬನು ಸುಂದರಿಯಾದ ಅವಳನ್ನು ಕಂಡು ಮೋಹಗೊಂಡನು. ಅವಳಿಲ್ಲದೆ […]
Month : June-2024 Episode : Author : ದರ್ಶನ್ ಎಸ್.ಎನ್.
ಶಿವ ಶಿವಾ ಎನ್ನುವ ಚಳಿ ಹೋಗಿ, ಹರ ಹರ ಎನ್ನುವ ಬೇಸಿಗೆ ಶುರುವಾಗಿ ತಿಂಗಳುಗಳೇ ಕಳೆದಿದೆ. ಬೇಸಿಗೆ ಆರಂಭದ ಮಹಾಶಿವರಾತ್ರಿಯ ಸಮಾಪ್ತಿಯಾಗಿ, ಚಾಂದ್ರಮಾನ ಯುಗಾದಿಯ ಶ್ರೀಕ್ರೋಧಿ ಸಂವತ್ಸರ ಪ್ರಾರಂಭವಾಗಿ ಶ್ರೀರಾಮ ನವಮಿಯೂ ಕಳೆದಿದೆ. ಈ ಬಾರಿಯ ಶ್ರೀರಾಮನವಮಿಗೆ ಹೆಚ್ಚಿನ ಮಹತ್ತ್ವವಿದ್ದುದು ಎಲ್ಲರಿಗೂ ತಿಳಿದೇ ಇದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಭಾರತದ ಆತ್ಮಸ್ವರೂಪವು ಜಾಗೃತವೂ ಆಗಿದೆ. ನಾನು ಅಂಗನವಾಡಿಗೆ ಹೋಗುತ್ತಿದ್ದಾಗ ಚೈತ್ರ, ವೈಶಾಖ, ಜೇಷ್ಠ, ಆಷಾಡ – ಹೀಗೆ ಋತು-ಮಾಸಗಳನ್ನು ಕಂಠಸ್ಥ ಮಾಡಿಸುತ್ತಿದ್ದರು. ಆರು ಋತುಗಳನ್ನು […]
Month : June-2024 Episode : Author : ನಾರಾಯಣ ಶೇವಿರೆ
ಬಂದು ಬಿದ್ದ ಆ ಫಲವತ್ತಾದ ಮಣ್ಣನ್ನು ಒಂದೊಮ್ಮೆ ಯಾರಾದರೂ ರೈತಾಪಿ ಮಂದಿ ಕೇಳಿದರೂ ಅವರು ಕೊಡಲಾರರು. ಏಕೆಂದರೆ ಅವರಿಗೀಗ ಮನೆಯಷ್ಟು ಕೃಷಿ ಮುಖ್ಯವಲ್ಲ. ಮಾತ್ರವಲ್ಲ, ತಮ್ಮ ಮನೆಯ ಪಂಚಾಂಗವನ್ನು ತುಂಬಿಸಲು ಬೇಕಾದ ಮಣ್ಣು ಸುಲಭ ಲಭ್ಯವಿರಲಿಲ್ಲ. ಇನ್ನು ನಗರಕೇಂದ್ರಿತ ಜೀವನಕ್ಕೆ ಒಗ್ಗಿಕೊಂಡಿದ್ದ ಅವರು ಆ ಮಣ್ಣನ್ನುಪಯೋಗಿಸಿ ಸ್ವತಃ ತಾವೇ ನಿಂತು ಕೃಷಿ ಮಾಡುವುದಂತೂ ತೀರಾ ಅವ್ಯಾವಹಾರಿಕವೇ ಆಗಿತ್ತು. ಈ ಹಿನ್ನೆಲೆಯಲ್ಲಿ ಫಲವತ್ತಾದ ಆ ಮಣ್ಣಿನ ಕುರಿತಾದ ಅವರ ಭಾವನೆಗಳು ಸ್ಮಶಾನವೈರಾಗ್ಯದಂತೆ ತಾತ್ಕಾಲಿಕವೂ ನಿಷ್ಪ್ರಯೋಜಕವೂ ಆಗಿದ್ದವು. ಒಂದು ಮನೆ […]
Month : June-2024 Episode : Author : ಎಚ್ ಮಂಜುನಾಥ ಭಟ್
೧೯೬೯ರಲ್ಲಿ ಪ್ರಭಾ ಅತ್ರೆ ಅವರ ಮೊದಲ ಕಛೇರಿ ನಡೆಯಿತು. ಅಂದಿನಿಂದ ದಣಿವಿಲ್ಲದೆ ಸಂಗೀತಕ್ಕೆ ಅರ್ಪಿಸಿಕೊಂಡ ಜೀವನ ಅವರದು. “ಸಂಗೀತದ ಬಗ್ಗೆ ವಿಶೇಷವಾದ ದೃಷ್ಟಿ, ಆಲೋಚನೆ, ಅದನ್ನು ಕಾರ್ಯಗತಗೊಳಿಸುವ ಪ್ರಬಲವಾದ ಕರ್ತೃತ್ವಶಕ್ತಿ ಪ್ರಭಾ ಅತ್ರೆ ಅವರಲ್ಲಿತ್ತು. ಅವಿವಾಹಿತರಾಗಿ ಉಳಿದು, ಸಂಗೀತವನ್ನೇ ಉಸಿರಾಗಿಸಿಕೊಂಡು ಬಾಳಿದ ಪ್ರಭಾ ಅತ್ರೆಯವರು ಪ್ರೀತಿ, ವಿದ್ಯೆ, ನಿಷ್ಠೆ, ಛಲ, ವಿಶಾಲತೆಗಳ ಸಂಕೇತವಾಗಿ ನಮಗೆ ಕಾಣುತ್ತಾರೆ. ಅವರ ಬದುಕು-ಸಂಗೀತಗಳು ತುಂಬ ಶ್ರದ್ಧೆಯಿಂದ, ಮುತುವರ್ಜಿಯಿಂದ ತನು-ಮನ-ಧನವನ್ನೆರೆದು ಕಟ್ಟಿದ, ಸಾವಿರಾರು ಜೀವಿಗಳಿಗೆ ಆಶ್ರಯ ನೀಡಬಲ್ಲಂತಹ ವಿಶಾಲವಾದ ಸರೋವರದಂತೆ ಕಾಣಿಸುತ್ತದೆ” ಎನ್ನುವುದು […]