ಉತ್ಥಾನ ಮಾರ್ಚ್ 2024
Month : March-2024 Episode : Author :
Month : March-2024 Episode : Author :
Month : March-2024 Episode : Author : ಡಾ. ಬಿ. ಜನಾರ್ದನ ಭಟ್
ಕನ್ನಡವು ಲೋಕಾನುಭವಗಳಿಗೆ ಮತ್ತು ಹೊಸ ಸಾಹಿತ್ಯ ಪ್ರಕಾರಗಳಿಗೆ ತೆರೆದುಕೊಂಡದ್ದು ಹತ್ತೊಂಬತ್ತನೆಯ ಶತಮಾನದಲ್ಲಿ. ಕಾವ್ಯಕ್ಕಿಂತ ಗದ್ಯವೇ ಹೊಸ ಅನುಭವಗಳ ದಾಖಲಾತಿಗೆ ಮತ್ತು ಅಭಿವ್ಯಕ್ತಿಗೆ ಹಿತವೆಂಬ ಅರಿವು ಮೂಡಿದ್ದು ಕೂಡ ಇದೇ ಶತಮಾನದಲ್ಲಿ. ಈ ಪರಿವರ್ತನೆ, ಈ ಹೊಸತನ ಕನ್ನಡದಲ್ಲಿ ಸಾಕಾರವಾದದ್ದು ಅನ್ಯಭಾಷೆಗಳ ಸಾಹಿತ್ಯದ ಪರಿಚಯ ಹಾಗೂ ಭಾಷಾಂತರಗಳ ಕಾರಣದಿಂದಾಗಿ. ಈ ಪ್ರಬಂಧದಲ್ಲಿ ಅನ್ಯಭಾಷೆಗಳಿಂದ ಕನ್ನಡ ಗದ್ಯಕ್ಕೆ ಭಾಷಾಂತರ ಮಾಡಿದ ವಿದ್ಯಮಾನಗಳನ್ನು ಕಾಲಘಟ್ಟಗಳಲ್ಲಿ ಪರಿಶೀಲಿಸಲಾಗಿದೆ. ಯಾವುದೇ ವಿದ್ಯಮಾನಕ್ಕೆ ಈ ಪ್ರಬಂಧದಲ್ಲಿ ಕೊಟ್ಟಿರುವ ಉದಾಹರಣೆಗಳು ಸಮಗ್ರವಲ್ಲ – ಕನ್ನಡದಲ್ಲಿ ಅನ್ಯಭಾಷೆಗಳ ಸಾಹಿತ್ಯ […]
Month : March-2024 Episode : Author : ಎಚ್ ಮಂಜುನಾಥ ಭಟ್
ಬೇಲಿಹಾಕಿದ ಜಾಗದೊಳಗೆ ಎಎಸ್ಐ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷ್ಮವಾದ ಕಾರಣ ಎಎಸ್ಐ ಸಮೀಕ್ಷೆಗೆ ವ್ಯಾಪಕ ಪ್ರಚಾರ ಲಭಿಸಿತು. ತಂಡಕ್ಕೆ ಅದರ ಒತ್ತಡ ಇತ್ತು. ಆಗ ನ್ಯಾಯಾಲಯ ತಂಡದ ದೈನಂದಿನ ಕೆಲಸದ ಬಗ್ಗೆ ಯಾವುದೇ ವರದಿ ಬೇಡವೆಂದು ಮಾಧ್ಯಮಗಳಿಗೆ ಸೂಚನೆ ನೀಡಿತು. ಉತ್ಖನನ ಬೇಡ; ಮೇಲಿನ ಸಮೀಕ್ಷೆ ಸಾಕೆಂದು ನ್ಯಾಯಾಲಯ ಹೇಳಿದ ಕಾರಣ […]
Month : March-2024 Episode : Author : ಸಂತೋಷ್ ಜಿ.ಆರ್.
ಪುರಾತನ ಕ್ಷೇತ್ರ ಕಾಶಿಗೆ ನಿರಂತರವಾಗಿ ಹೇಗೆ ಹಿಂದು ಶ್ರದ್ಧಾಳುಗಳು ಹರಿದುಬರುತ್ತಿದ್ದರೋ, ಅದೇ ರೀತಿ ಇದರ ರಕ್ಷಣೆಗಾಗಿ ತಮ್ಮ ರಕ್ತವನ್ನು ಗಂಗಾನದಿಯಂತೆಯೇ ಹರಿಸಬೇಕಾದದ್ದು ಭಾರತದ ಇತಿಹಾಸದ ದುರಂತ ಅಧ್ಯಾಯಗಳಲ್ಲೊಂದು. ಮತಾಂಧ ಮುಸ್ಲಿಂದಾಳಿಕೋರರು ತಮ್ಮ ರೂಢಿಯಂತೆ ಹನ್ನೆರಡನೆ ಮತ್ತು ಹದಿನೈದನೆ ಶತಮಾನದಲ್ಲಿ ಈ ಪ್ರಾಚೀನ ಶಿವಮಂದಿರವನ್ನು ನಾಶಗೊಳಿಸಿದರು. ಆದರೆ ಹಿಂದೂಗಳ ಸ್ವಾಭಿಮಾನದಿಂದ ಕೆಲವರ್ಷಗಳಲ್ಲೇ ಕಾಶಿ ಮತ್ತೆ ತಲೆಯೆತ್ತಿ ನಿಂತಿತು. ೧೧೯೪ ಮಹಮ್ಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಐಬಕ್ ಇದನ್ನು ನಾಶಗೊಳಿಸಿದ. ಸಾವಿರ ಮಂದಿರಗಳು ಆಗ ಧ್ವಂಸಗೊಂಡವೆಂದು ಹೇಳಲಾಗುತ್ತದೆ. ಈ ಸುದ್ದಿ […]
Month : March-2024 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ನೀವು ಮನಸ್ಸಿನಿಂದ ಶ್ರೀರಾಮನಿಗೆ ಸಮರ್ಪಿತವಾಗಿರಿ. ನನ್ನ ಆಪ್ತನು, ಇಷ್ಟನು, ಸಂಬಂಧಿಯೂ ಕೇವಲ ರಾಮನೊಬ್ಬನೆ ಇರುತ್ತಾನೆ ಎಂಬ ಭಾವನೆಯನ್ನಿಟ್ಟುಕೊಂಡು ಅವನಿಗೆ ಶರಣು ಹೋಗಬೇಕು. ಭಗವಂತನೊಂದಿಗೆ ಅನನ್ಯವಾಗಬೇಕು. ಅವನು ಕೃಪೆಯ ಪ್ರತಿಮೂರ್ತಿಯೇ ಆಗಿರುತ್ತಾನೆ ಎಂದು ತಿಳಿಯಬೇಕು. “ಹೇ ಶ್ರೀರಾಮ, ನಾನು ನಿನಗೆ ಅನನ್ಯವಾಗಿ ಶರಣು ಬಂದಿರುವೆ. ಆದ್ದರಿಂದ ನನಗೆ ಇನ್ನು ಜೀವನದಲ್ಲಿ ಮಾಡಬೇಕಾದದ್ದೇನೂ ಉಳಿದಿರುವುದಿಲ್ಲ. ನನ್ನ ಜೀವನದಲ್ಲಿ ಪ್ರಾಪ್ತವಾಗುವ ಸುಖ-ದುಃಖಗಳೆಲ್ಲವೂ ನಿನ್ನಿಂದಲೇ ಬರುತ್ತವೆ” ಎಂದು ಭಾವಿಸಿ ಪ್ರಾರ್ಥಿಸಬೇಕು. ನಾವು ಕಲ್ಪನೆಯಿಂದ ಸುಖ-ದುಃಖಗಳನ್ನು ಕಲ್ಪಿಸುವಂತೆ ಮನಸ್ಸಿನಿಂದ ಸುಖ-ದುಃಖಗಳನ್ನು ಅನುಭವಿಸಬೇಕು. ಎಲ್ಲಿಯವರೆಗೆ ನಾನು-ನನ್ನದೆಂಬ […]
Month : March-2024 Episode : ಬೇತಾಳ ಕಥೆಗಳು - 6 Author : ಡಾ. ಎಚ್.ಆರ್. ವಿಶ್ವಾಸ
ತುಂಬ ಹೊತ್ತಾದರೂ ಅಣ್ಣನಾಗಲಿ, ಗಂಡನಾಗಲಿ ಹಿಂದಿರುಗದೆ ಇದ್ದಾಗ ಮದನಸುಂದರಿಯು ತಾನೇ ಮಂದಿರದ ಒಳಗೆ ಬಂದು ನೋಡುತ್ತಾಳೆ, ಅವರಿಬ್ಬರ ರುಂಡಮುಂಡಗಳೂ ಬೇರೆ ಬೇರೆಯಾಗಿ ಬಿದ್ದಿವೆ! “ಅಯ್ಯೋ, ಇದೇನು ಅನಾಹುತವಾಯ್ತು!’’ ಎಂದು ಅವಳು ತಲೆ ಚಚ್ಚಿಕೊಂಡು ಅತ್ತು ಕರೆದು ಮಾಡಿದಳು. ಕೊನೆಗೆ ತನ್ನ ಅತ್ಯಂತ ಪ್ರಿಯರಾದ ಇವರಿಬ್ಬರೂ ಮೃತರಾದ ಮೇಲೆ ತಾನಿನ್ನು ಬದುಕಿದ್ದು ಫಲವೇನು? ತಾನೂ ಪ್ರಾಣಾರ್ಪಣೆ ಮಾಡುತ್ತೇನೆ ಎಂದು ನಿರ್ಧರಿಸಿಕೊಂಡು ದೇವಿಗೆ ಕೈಮುಗಿದು “ದೇವಿ, ಮುಂದಿನ ಜನ್ಮದಲ್ಲಿಯೂ ಇವನೇ ನನಗೆ ಅಣ್ಣನಾಗುವಂತೆ, ಇವರೇ ನನಗೆ ಗಂಡನಾಗುವಂತೆ ಅನುಗ್ರಹ ಮಾಡು” […]
Month : March-2024 Episode : ಬೇತಾಳ ಕಥೆಗಳು - 5 Author : ಡಾ. ಎಚ್.ಆರ್. ವಿಶ್ವಾಸ
ಈ ನಡುವೆ ಯಾರೂ ನಿರೀಕ್ಷಿಸದಿದ್ದ ಮತ್ತೊಂದು ಘಟನೆ ನಡೆದುಬಿಟ್ಟಿತು. ಮದುವೆಯ ಹೆಣ್ಣು ಸೋಮಪ್ರಭೆಯೇ ಕಾಣೆಯಾಗಿಬಿಟ್ಟಿದ್ದಳು. ಎಷ್ಟು ಹುಡುಕಿದರೂ ಅವಳು ಸಿಗಲೇ ಇಲ್ಲ. ಆಗ ಹರಿಸ್ವಾಮಿಯು ಆ ಮೂವರು ಯುವಕರಲ್ಲಿ ಭೂತ–ಭವಿಷ್ಯತ್ತುಗಳನ್ನು ಬಲ್ಲ ಜ್ಞಾನಿಯನ್ನು ಕುರಿತು – “ಅಯ್ಯಾ! ನನ್ನ ಮಗಳು ಎಲ್ಲಿ ಹೋಗಿದ್ದಾಳೆಂದು ನೀನು ಹೇಳಬಲ್ಲೆಯಾ?’’ ಎಂದು ಕೇಳಿದನು. ಜ್ಞಾನಿಯು ಒಂದು ಕ್ಷಣ ಚಿಂತಿಸಿ ಹೇಳಿದನು – “ವಿಂಧ್ಯಾಟವಿಯಲ್ಲಿ ಧೂಮಶಿಖನೆಂಬ ರಾಕ್ಷಸನಿದ್ದಾನೆ. ಅವನು ಇಲ್ಲಿಗೆ ಬಂದು ಅವಳನ್ನು ಎತ್ತಿಕೊಂಡು ತನ್ನ ವಾಸಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ಅವಳು ಅಲ್ಲಿದ್ದಾಳೆ.’’ […]
Month : March-2024 Episode : Author : ನಾರಾಯಣ ಶೇವಿರೆ
ಮಂತ್ರಾಕ್ಷತೆಯನ್ನು ಕೊಡುತ್ತಾ ಅದೊಂದು ಮನೆ ಹಿಂದುಗಳದ್ದಲ್ಲವೆಂದು ದಾಟಿ ಮುಂದೆ ಹೋದರು. ಕಾರ್ಯಕರ್ತರ ಈ ಗುಂಪು ಬರುವುದನ್ನೇ ಗಮನಿಸುತ್ತಿದ್ದ ಆ ಮನೆಯ ಒಡತಿ, ಮುಂದೆಹೋದ ಗುಂಪನ್ನು ಕರೆದರು! ಹಿಂದಿರುಗಿ ನೋಡುತ್ತಿದ್ದಂತೆ ಬುರ್ಖಾದಲ್ಲಿದ್ದ ಆ ಒಡತಿಯನ್ನು ನೋಡಿ ಅಚ್ಚರಿಯಾಯಿತು. ಕರೆದದ್ದು ತಮ್ಮನ್ನೋ ಇತರರನ್ನೋ ಎನ್ನುವ ಗೊಂದಲವುಂಟಾಯಿತು. ‘ನಿಮ್ಮನ್ನೇ ಕರೆಯುತ್ತಿರುವುದು, ಯಾಕೆ ಈ ಮನೆಯನ್ನು ಬಿಟ್ಟು ಹೋದಿರಿ?’ ಎಂಬ ಪ್ರಶ್ನೆ ಕಾರ್ಯಕರ್ತರಿಗೆದುರಾಯಿತು. ಉತ್ತರಿಸಲಾಗದೆ ಹತ್ತಿರ ಬಂದಾಗ ಮುಖಪರದೆಯನ್ನು ತೆರೆದುಕೊಂಡು ಆಕೆ ಹೇಳಿದ್ದಿಷ್ಟು: ‘ನಾನೂ ರಾಮಮಂದಿರಕ್ಕೆ ದೇಣಿಗೆಯನ್ನು ಕೊಟ್ಟಿದ್ದೇನೆ. ನನಗೂ ಮಂತ್ರಾಕ್ಷತೆ ಬೇಕು. […]
Month : March-2024 Episode : Author : ಎಂ.ಬಿ. ಹಾರ್ಯಾಡಿ
“ಹಿಂದಿನ ಎಲ್ಲ ಪ್ರಧಾನಿಗಳಿಗಿಂತ ಮೋದಿ ಅವರು ಭಿನ್ನವಾಗಿದ್ದಾರೆ. ಮುಂದೆ ಬಂದ ಪ್ರತಿಯೊಂದು ಪ್ರಸ್ತಾವವನ್ನು ಅವರು ಸವಿವರವಾಗಿ ಪರಿಶೀಲಿಸುತ್ತಾರೆ. ವಿವಿಧ ಹಂತದ ಅಧಿಕಾರಿಗಳಿಂದ, ಪಕ್ಷ ಮತ್ತು ಸಂಪುಟದ ಹಿರಿಯರಿಂದ ಹೆಚ್ಚಿನ ಮಾಹಿತಿಗಳನ್ನು ಕ್ರೋಡೀಕರಿಸುತ್ತಾರೆ. ಇಂತಹ ಆಯ್ಕೆ ವಿಚಾರದಲ್ಲಿ ವಾಜಪೇಯಿ ಅವರು ತಮ್ಮ ಪ್ರಧಾನ ಕಾರ್ಯದರ್ಶಿ ಮತ್ತು ಓರ್ವ ಹಿರಿಯ ಐಎಎಸ್ ಅಧಿಕಾರಿಯನ್ನು ಅವಲಂಬಿಸುತ್ತಿದ್ದರು. ಎಲ್.ಕೆ. ಆಡ್ವಾಣಿ, ಜಾರ್ಜ್ ಫೆರ್ನಾಂಡಿಸ್ ಮುಂತಾದ ಕೆಲವು ಸಹೋದ್ಯೋಗಿಗಳಲ್ಲಿ ಚರ್ಚಿಸುತ್ತಿದ್ದರು. ಆದರೆ ಮೋದಿ ನೇಮಕದ ನಿರ್ಧಾರಗಳಿಗೆ ಈ ರೀತಿ ಯಾರನ್ನೂ ಅವಲಂಬಿಸುವುದಿಲ್ಲ ಅಥವಾ ಪಕ್ಷದ […]
Month : March-2024 Episode : Author : ಅಣಕು ರಾಮನಾಥ್
ಆ ಮುಖಾ ಈ ಮುಖಾ ಯಾವ ಗಂಡೊ ಯಾವ ಹೆಣ್ಣೊ ಪ್ರೀತಿಯೆಂಬ ಚುಂಬಕಾ ಕೂಡಿಸಿತ್ತು ಆಡಿಸಿತ್ತು ಕೂಡಲದೊಲು ನೋಟವಾ ಮೂರು ದಿನದ ಆಟವಾ| ಎಂದರು ಬೇಂದ್ರೆ. ಫೆಬ್ರುವರಿ ಹದಿನಾಲ್ಕರ ‘ಪುರೋಹಿತನ ಹೆಸರಲ್ಲಿ ಪ್ರೇಮದೋಕುಳಿಯಾಟ’ ಆಡುವ ಈ ದಿನಗಳಿಗೆ ಇದಕ್ಕಿಂತ ಉತ್ತಮ ಸಾಲುಗಳು ದೊರಕವು. ಹತ್ತ ಕಡಕು ಮಾತು ಖಡಕು ನೋಟವಂತು ಹತ್ತು ಕಡೆಕು ಹಲಕೆಲವೊ ಹುಟ್ಟು ಕುಡುಕು ಚಿಮ್ಮುತಿಹುದೊ ಲವ್ವು ಇವಕು ಎನ್ನುವುದೇ ಇಂದಿನ ಪ್ರೇಮದ ಸಿಲಬಸ್ ಆಗಿರುವಾಗ ‘ಆ ಮುಖಾ ಈ ಮುಖಾ’ಗಳ ಪೈಕಿ ಯಾವುದು […]