ಬೇಲಿಹಾಕಿದ ಜಾಗದೊಳಗೆ ಎಎಸ್ಐ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷ್ಮವಾದ ಕಾರಣ ಎಎಸ್ಐ ಸಮೀಕ್ಷೆಗೆ ವ್ಯಾಪಕ ಪ್ರಚಾರ ಲಭಿಸಿತು. ತಂಡಕ್ಕೆ ಅದರ ಒತ್ತಡ ಇತ್ತು. ಆಗ ನ್ಯಾಯಾಲಯ ತಂಡದ ದೈನಂದಿನ ಕೆಲಸದ ಬಗ್ಗೆ ಯಾವುದೇ ವರದಿ ಬೇಡವೆಂದು ಮಾಧ್ಯಮಗಳಿಗೆ ಸೂಚನೆ ನೀಡಿತು. ಉತ್ಖನನ ಬೇಡ; ಮೇಲಿನ ಸಮೀಕ್ಷೆ ಸಾಕೆಂದು ನ್ಯಾಯಾಲಯ ಹೇಳಿದ ಕಾರಣ ಕೆಲಸ ವಿಳಂಬವಾಯಿತು. ಎಲ್ಲ ಕಡೆ ಕಸ ಮತ್ತು ಕಟ್ಟಡದ ಅವಶೇಷಗಳು ತುಂಬಿದ್ದವು. ಅದರಿಂದಾಗಿ ಸರಿಯಾಗಿ ಪರಿಶೀಲಿಸಿ ಉತ್ತಮ ಫಲಿತಾಂಶ ಪಡೆಯಲು ಕಷ್ಟವಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಆ ಕಸಗಳನ್ನು ಬದಿಗೆ ಸರಿಸುವ ಕಾರ್ಯ ನಡೆಯಿತು. ಆ ಕಸದ ವಿಲೇವಾರಿ ಕೂಡ ಸಮಸ್ಯೆಯೇ ಆಯಿತು.
ಅಯೋಧ್ಯೆಯಲ್ಲಿ ಭಾರತ ಸರ್ಕಾರ, ಉತ್ತರಪ್ರದೇಶ ಸರ್ಕಾರ ಮತ್ತು ದೇಶದ ಜನತೆಯದ್ದು ಬಹುದೊಡ್ಡ ಸಾಧನೆ. ಜನರ ಭಾವುಕತೆಗೆ ಗುರಿಯಾಗಿ ಆಕ್ರೋಶ, ಅಶಾಂತಿಗಳಿಗೆ ಕಾರಣವಾಗಬಹುದಾದ ಧಾರ್ಮಿಕ ವಿವಾದವನ್ನು ನ್ಯಾಯಾಲಯದ ಮೂಲಕವೇ ಪರಿಹರಿಸಿ, ಆ ಸ್ಥಳದಲ್ಲಿ ಭವ್ಯಮಂದಿರವನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಯಾವ ಕಾರಣಕ್ಕೂ ಸಣ್ಣ ವಿಷಯವಲ್ಲ. ಅದರೊಂದಿಗೇ ನಡೆದದ್ದು ಹಿಂದುಗಳ ಪವಿತ್ರ ಸ್ಥಳ ವಾರಾಣಸಿ ಅಥವಾ ಕಾಶಿಯ ಶ್ರೀ ವಿಶ್ವನಾಥಮಂದಿರ ಮತ್ತು ಅಲ್ಲಿಯ ಕಾರಿಡಾರ್ಗಳ ಪುನರ್ನಿರ್ಮಾಣ. ಇಷ್ಟಾಗುವಾಗ ವಿಶ್ವನಾಥಮಂದಿರಕ್ಕೆ ತಾಗಿಕೊಂಡಿರುವ ಗ್ಯಾನವಾಪಿ(ಜ್ಞಾನವಾಪಿ) ಮಸೀದಿಯು ಹಿಂದೂ ಭಕ್ತರನ್ನು ಇನ್ನಷ್ಟು ಕೆಣಕಿತೆಂದರೆ ತಪ್ಪಲ್ಲ. ಆ ಸಂಬಂಧವಾಗಿ ವಾದ-ವಿವಾದಗಳು, ನ್ಯಾಯಾಲಯದಲ್ಲಿ ದಾವೆಗಳು ನಡೆಯುತ್ತಲೇ ಇವೆ.
ಅಂತಹ ಒಂದು ದಾವೆಗೆ ಸಂಬಂಧಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಜುಲೈ ೨೧, ೨೦೨೩ರಂದು ಪುರಾತತ್ತ್ವ ಇಲಾಖೆಗೆ (ಪ್ರಾಚ್ಯವಸ್ತು ಸಂಶೋಧನ ಸಂಸ್ಥೆ) ಒಂದು ಆದೇಶವನ್ನು ನೀಡಿತು. ಇದು ಅಂಜುಮಾನ್ ಇಂತೆ ಜಾಮಿಯಾ ಮಸೀದಿ, ವಾರಾಣಸಿ ಮತ್ತು ರಾಖಿಸಿಂಗ್ ಹಾಗೂ ಇತರರ ದಾವೆ. ತನ್ನ ತೀರ್ಪಿನಲ್ಲಿ ನ್ಯಾಯಾಲಯ ವಿವಾದಿತ ಸ್ಥಳ(ಪ್ಲಾಟ್ ನಂಬರ್ ೯೧೩೦)ದಲ್ಲಿ ವೈಜ್ಞಾನಿಕ ಶೋಧ/ಸರ್ವೆ/ಉತ್ಖನನ ನಡೆಸಲು ಆದೇಶ ನೀಡಿತು. ಜೊತೆಗೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಈ ಬೀಗಮುದ್ರೆ (ಸೀಲ್) ಹಾಕಿದ ಜಾಗವನ್ನು ಈ ಸರ್ವೆಯಿಂದ ಹೊರತುಪಡಿಸಬೇಕು ಎಂದು ಸೂಚಿಸಿತು.
ಸರ್ವೆ ಆರಂಭ
ಮರುದಿನವೇ ಪುರಾತತ್ತ್ವ ಇಲಾಖೆಯ (ಆರ್ಕಿಯೊಲಾಜಿಕಲ್ ಸರ್ವೆ ಆಫ್ ಇಂಡಿಯ-ಎಎಸ್ಐ) ವೈಜ್ಞಾನಿಕ ಸರ್ವೆ ಆರಂಭವಾಯಿತು. ಅಂಜುಮಾನ್ ಇಂತೆ ಜಾಮಿಯಾ ಮಸೀದಿ ಆಡಳಿತ ಸಮಿತಿಯು ಅದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿತು. ಅದೇ ದಿನ ಆದೇಶ ನೀಡಿದ ನ್ಯಾಯಾಲಯ ಎರಡು ದಿನ ಯಥಾಸ್ಥಿತಿಯನ್ನು ಕಾಪಾಡಬೇಕು; ಸ್ಥಳದಲ್ಲಿ ಏನನ್ನೂ ಮಾಡಬಾರದೆಂದು ಸೂಚಿಸಿತು. ಸುಪ್ರೀಂಕೋರ್ಟ್ ಸೂಚನೆಯಂತೆ ಮಸೀದಿ ಸಮಿತಿ ಸಂವಿಧಾನದ ೨೨೭ನೇ ವಿಧಿಯ ಪ್ರಕಾರ ಅಲಹಾಬಾದ್ ಹೈಕೋರ್ಟಿನಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿತು; ಆದರೆ ಹೈಕೋರ್ಟ್ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು; ಆಗಸ್ಟ್ ೪ರಂದು ಸರ್ವೆ ಆರಂಭವಾಯಿತು.
ಆಗ ಮಸೀದಿ ಸಮಿತಿಯು ಮತ್ತೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿ ವಿಶೇಷ ಮೇಲ್ಮನವಿ ಅರ್ಜಿಯ ಮೂಲಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿತು. ಆಗ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು. ಆದರೆ ವಿವಾದಿತ ಸ್ಥಳದಲ್ಲಿ ಯಾವುದೇ ಉತ್ಖನನ ನಡೆಸಬಾರದು; ಕಟ್ಟಡಕ್ಕೆ ಯಾವುದೇ ಹಾನಿಯಾಗಬಾರದು; ಆ ಬಗ್ಗೆ ಎಎಸ್ಐ ಅಫಿದವಿತ್ ಸಲ್ಲಿಸಬೇಕು ಎಂದು ಸೂಚಿಸಿತು.
ಸರ್ವೆಗೆ ಎಎಸ್ಐ ನಾಲ್ಕು ವಾರ ಕೇಳಿದಾಗ ನ್ಯಾಯಾಲಯ ಸೆಪ್ಟೆಂಬರ್ ೨, ೨೦೨೩ರ ವರೆಗೆ ಸಮಯ ನೀಡಿತು. ಎಎಸ್ಐ ಮತ್ತೆ ಎಂಟು ವಾರ ಕಾಲಾವಕಾಶ ಕೇಳಿತು; ಮತ್ತು ನ್ಯಾಯಾಲಯ ನಾಲ್ಕು ವಾರ ನೀಡಿತು. ನಡುವೆ ಮಳೆ ಸುರಿದ ಕಾರಣ ಕೆಲಸಕ್ಕೆ ತೊಂದರೆಯಾಗಿ ಮತ್ತೆ ನಾಲ್ಕು ವಾರ ಕೇಳಲಾಯಿತು. ನ್ಯಾಯಾಲಯ ಅದಕ್ಕೊಪ್ಪಿ ನವೆಂಬರ್ ೩ರವರೆಗೆ ಸಮಯ ನೀಡಿತು.
ಮಾಧ್ಯಮಗಳಲ್ಲಿ ಕೆಲವು ಊಹಾಪೋಹ, ತಪ್ಪು ವರದಿಗಳು ಪ್ರಕಟವಾಗಿ ವಿವಾದ ಉಂಟಾದಾಗ ನ್ಯಾಯಾಲಯ ಸರ್ವೆ ಬಗ್ಗೆ ಎಎಸ್ಐ ಅಧಿಕಾರಿಗಳು ಯಾವುದೇ ಮಾಹಿತಿ ನೀಡಬಾರದೆಂದು ಸೂಚಿಸಿತು. ಮಾಧ್ಯಮಗಳಿಗೆ ಕೂಡ ಅನಧಿಕೃತ ಸುದ್ದಿ ಪ್ರಕಟಿಸಬಾರದೆಂದು ಸೂಚಿಸಿತು. ಶೋಧದ ವೇಳೆ ಸಿಕ್ಕಿದ ವಿವಿಧ ವಸ್ತು, ಉಪಕರಣಗಳನ್ನು ಸುರಕ್ಷಿತವಾಗಿ ಇಡಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದಾಗ ಆ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿ ವ್ಯವಸ್ಥಿತವಾಗಿ ಇಡುವಂತೆ ಸೂಚಿಸಲಾಯಿತು.
ಅಡಚಣೆಗಳು
ಬೇಲಿಹಾಕಿದ ಜಾಗದೊಳಗೆ ಎಎಸ್ಐ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷö್ಮವಾದ ಕಾರಣ ಎಎಸ್ಐ ಸಮೀಕ್ಷೆಗೆ ವ್ಯಾಪಕ ಪ್ರಚಾರ ಲಭಿಸಿತು. ತಂಡಕ್ಕೆ ಅದರ ಒತ್ತಡ ಇತ್ತು. ಆಗ ತಂಡದ ದೈನಂದಿನ ಕೆಲಸದ ಬಗ್ಗೆ ಯಾವುದೇ ವರದಿ ಬೇಡವೆಂದು ಮಾಧ್ಯಮಗಳಿಗೆ ನ್ಯಾಯಾಲಯ ಸೂಚನೆ ನೀಡಿತು. ಉತ್ಖನನ ಬೇಡ; ಮೇಲಿನ ಸಮೀಕ್ಷೆ ಸಾಕೆಂದು ನ್ಯಾಯಾಲಯ ಹೇಳಿದ ಕಾರಣ ಕೆಲಸ ವಿಳಂಬವಾಯಿತು. ಎಲ್ಲ ಕಡೆ ಕಸ ಮತ್ತು ಕಟ್ಟಡದ ಅವಶೇಷಗಳು ತುಂಬಿದ್ದವು. ಅದರಿಂದಾಗಿ ಸರಿಯಾಗಿ ಪರಿಶೀಲಿಸಿ ಉತ್ತಮ ಫಲಿತಾಂಶ ಪಡೆಯಲು ಕಷ್ಟವಾಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ಆ ಕಸಗಳನ್ನು ಬದಿಗೆ ಸರಿಸುವ ಕಾರ್ಯ ನಡೆಯಿತು. ಆ ಕಸದ ವಿಲೇವಾರಿ ಕೂಡ ಸಮಸ್ಯೆಯಾಯಿತು. ಬೇಲಿಯೊಳಗಿನ ತೆರೆದ ಜಾಗ ತುಂಬ ಕಡಮೆಯಿದ್ದ ಕಾರಣ ಕಸವನ್ನು ವಿಲೇವಾರಿ ಮಾಡುವುದು ಅಗತ್ಯವಿತ್ತು. ಬೇಲಿಯ ಪೂರ್ವ ಮತ್ತು ಪಶ್ಚಿಮದಲ್ಲಿ ಕಸದ ರಾಶಿಯನ್ನು ಹಾಕುವ ಬಗ್ಗೆ ಜಿಲ್ಲಾಡಳಿತವನ್ನು ಕೇಳಿದಾಗ ಅದರಂತೆ ಜಾಗವನ್ನು ಗುರುತಿಸಿದರು. ಅದರಂತೆ ಕಸ ಹಾಕಿ ಸೆಕ್ಯುರಿಟಿ ವ್ಯವಸ್ಥೆ ಮಾಡಿದರು. ಸೆಕ್ಯುರಿಟಿ ಚೆಕ್ಪೋಸ್ಟ್ಗಳನ್ನು ಹಾಕಿದ ಕಾರಣ ಆಚೀಚೆ ಹೋಗಲು ಕಷ್ಟವಾಯಿತು. ವಿವಿಧ ವಸ್ತುಗಳನ್ನು ಸಾಗಿಸುವ ಹೊರೆಯಾಳುಗಳಿಗೂ ಕಿರಿಕಿರಿ ಉಂಟಾಯಿತು. ಎಎಸ್ಐ ತಂಡಕ್ಕೆ ಹವಾಮಾನ ತುಂಬ ಪ್ರತಿಕೂಲವಾಗಿತ್ತು. ಹೊರಗೆ ಬಿಸಿಲಾದರೆ, ಒಳಗೆ ತೇವದ (ಆರ್ದ್ರ) ವಾತಾವರಣ. ಅದಕ್ಕೆ ಬೆಳಕು ಬಿಡುವುದು ಇತ್ಯಾದಿ ವ್ಯವಸ್ಥೆ ಮಾಡಿದರು. ಮಂಗಗಳ ಕಿರುಕುಳವಿತ್ತು; ಆಚೀಚೆ ಹೋಗಲು ಅಡ್ಡಿಪಡಿಸುತ್ತಿದ್ದವು. ಕೆಲಸ ಮುಗಿಸಿ ಹೋದ ಕಡೆ ವಸ್ತುಗಳನ್ನು ಹರಡಿ ಚೆಲ್ಲಾಪಿಲ್ಲಿ ಮಾಡಿ ಹೋಗುತ್ತಿದ್ದವು. ಇಷ್ಟೆಲ್ಲ ಇದ್ದರೂ ಎಎಸ್ಐ ತಂಡ ಮತ್ತು ತಜ್ಞರು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದರು. ವ್ಯವಸ್ಥಿತ ವೈಜ್ಞಾನಿಕ ಸರ್ವೆ ನಡೆಸಿ ಎಲ್ಲವನ್ನೂ ದಾಖಲಿಸಿದ್ದಾಯಿತು.
ಅಧ್ಯಯನದ ಸ್ಥಳ
“ವಾರಾಣಸಿ ಗ್ಯಾನವಾಪಿ (ಜ್ಞಾನವಾಪಿ) ಮಸೀದಿಯ ಕಟ್ಟಡವನ್ನು ಹಿಂದೂ ದೇವಾಲಯದ ಮೇಲೆ ಕಟ್ಟಲಾಗಿದೆಯೇ ಎಂದು ಪರಿಶೀಲಿಸಲು ನ್ಯಾಯಾಲಯ ಸೂಚಿಸಿದೆ. ಆದ್ದರಿಂದ ಇಲ್ಲಿ ಹಿಂದಿನ ಕಟ್ಟಡ (pre-existing structure) ಮತ್ತು ಹಾಲಿ ಕಟ್ಟಡ (existing structure) ಎನ್ನುವ ಪದಗಳನ್ನು ಬಳಸಲಾಗಿದೆ” ಎಂದು ಎಎಸ್ಐ ವರದಿ ಹೇಳುತ್ತದೆ. “ಬೇಲಿ ಹಾಕಿದ ಸ್ಥಳಕ್ಕೆ ಇಕ್ಕಟ್ಟಾದ ಮತ್ತು ಬ್ಯಾರಿಕೇಡ್ ಇರುವ ಓಣಿಯ ಮೂಲಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ (ಗೇಟ್ ನಂಬರ್ ೪). ಇಡೀ ಪ್ರದೇಶದಲ್ಲಿ ತುಂಬ ಭದ್ರತಾ ಸಿಬ್ಬಂದಿ ಇದ್ದಾರೆ. ಬೇಲಿಯ ಒಳಗಿನ ಜಾಗಕ್ಕೆ ಉತ್ತರದ ಚಿಕ್ಕ ಗೇಟಿನ ಮೂಲಕ ಪ್ರವೇಶವನ್ನು ಕಲ್ಪಿಸಲಾಗಿದೆ. ಸುತ್ತಲಿನ ಸ್ಥಳ ಒಳಗಿನ ಸ್ಥಳಕ್ಕಿಂತ ಸ್ವಲ್ಪ ಎತ್ತರವಿದೆ. ಆದ್ದರಿಂದ ಎರಡು ಮೆಟ್ಟಿಲು ಕೆಳಗಿಳಿಯಬೇಕು. ಕೆಳಗೆ ಇಳಿದಾಗ ಚಿಕ್ಕ ತೆರೆದ (open) ಸ್ಥಳವಿದೆ. ಅಲ್ಲಿ ಉತ್ತರಭಾಗ (north area) ಎನ್ನುವ ಜಾಗವಿದೆ. ಅದರಾಚೆಗೆ ಗುಮ್ಮಟ-೩ ಇದೆ.
ಈ ಪ್ಲಾಟ್ಫಾರ್ಮ್(ಸಮತಟ್ಟಾದ ಜಾಗ)ನ ಆಚೆಗೆ ಇನ್ನೊಂದು ಕಟ್ಟಡವಿದೆ. ಪಶ್ಚಿಮ ಗೋಡೆ ಮತ್ತು ಸ್ಟೀಲ್ನ ತಡೆ(steel fence)ಯ ನಡುವೆ ಪಶ್ಚಿಮ ಭಾಗವಿದೆ. ಅಧ್ಯಯನದ ಉದ್ದೇಶದಿಂದ ನಾವು ಅದನ್ನು ಮೂರು ಭಾಗ ಮಾಡಿದೆವು. ಅದರ ಮಧ್ಯದ ಸ್ಥಳ ಪಶ್ಚಿಮ ಚೇಂಬರ್ (ಕೋಣೆ). ತೆರೆದ ಜಾಗದ ಪಶ್ಚಿಮದಲ್ಲಿ ಮೂರು ಗುಮ್ಮಟಗಳಿರುವ ಒಂದು ಕಟ್ಟಡವಿದೆ. ಅದನ್ನು ಶಾಹಿ ಮಸೀದಿ ಎನ್ನುತ್ತಾರೆ. ಇದರ ಉತ್ತರ, ದಕ್ಷಿಣಗಳಲ್ಲಿ ಕಂಬಗಳಿರುವ ವರಾಂಡವಿದೆ. ಇದು ಪೂರ್ವ ಕಾರಿಡಾರ್. ಈ ಕಾರಿಡಾರ್ಗಳ ನಡುವೆ ಮೂರು ದೊಡ್ಡ ಹಾಲ್ಗಳಿವೆ. ಮಧ್ಯದ ದೊಡ್ಡ ಹಾಲನ್ನು ಸೆಂಟ್ರಲ್ ಹಾಲ್ (ಮಧ್ಯದ ಹಾಲ್) ಎಂದು ಕರೆಯುತ್ತಾರೆ. ಅದರ ಆಚೀಚೆ ಉತ್ತರ ಮತ್ತು ದಕ್ಷಿಣ ಹಾಲ್ಗಳು.”
ಸೆಂಟ್ರಲ್ ಹಾಲ್ ಯಥಾಸ್ಥಿತಿ
ಸೆಂಟ್ರಲ್ ಹಾಲ್ನ ಮೂಲರೂಪವನ್ನು ಉಳಿಸಿಕೊಳ್ಳಲಾಗಿದೆ; ಕೆಲವು ಸಣ್ಣ ಬದಲಾವಣೆಗಳನ್ನು ಮಾತ್ರ ಮಾಡಿಕೊಳ್ಳಲಾಗಿದೆ. ನಾರ್ತ್ಹಾಲ್ ಮತ್ತು ಸೌತ್ಹಾಲ್ಗಳು ಹಿಂದಿನ ಕಟ್ಟಡದ ವಸ್ತುಗಳಿಂದಲೇ ನಿರ್ಮಾಣಗೊಂಡಿವೆ. ಅದರಿಂದಾಗಿ ಗಾರೆಕೆಲಸ (masonry) ಅಷ್ಟೇನೂ ಚೆನ್ನಾಗಿಲ್ಲ; ನೆಲದ ಮೇಲ್ಮೈಯಲ್ಲಿ ಏರುತಗ್ಗುಗಳಿವೆ. ಎರಡು ಹಾಲ್ಗಳ ಒಳಭಾಗವನ್ನು ತೆಳುಪದರದ ಪ್ಲಾಸ್ಟರ್ ಮತ್ತು ಎನಾಮಲ್ ಪೇಂಟ್ನ ದಪ್ಪ ಪದರಗಳಿಂದ ಮುಚ್ಚಿದೆ. ಆ ಮೂಲಕ ಈ ಕಲ್ಲುಗಳ (ನಿರ್ಮಾಣಕ್ಕಾಗಿ ಮರುಬಳಕೆ ಮಾಡಿದಂಥವು) ಸುಂದರ ವಿವರ (ಕೆತ್ತನೆ)ಗಳನ್ನು ಮುಚ್ಚಿಹಾಕಲಾಗಿದೆ.
ಸೆಂಟ್ರಲ್ಹಾಲ್ನ ಒಳಭಾಗ ಬಹುತೇಕ ಹಿಂದಿನಂತೆಯೇ ಇದೆ. ಅಲಂಕಾರದ ಆರ್ಚ್(ಕಮಾನು)ಗಳ ಕೆಳಭಾಗದ ಆನೆಯ ಕೆತ್ತನೆಗಳನ್ನು ನಾಶ ಮಾಡಲಾಗಿದೆ. ಪಶ್ಚಿಮ ಪ್ರವೇಶದ ಎರಡೂ ಕಡೆಯ ಪ್ಲಾಸ್ಟರ್ಗಳನ್ನು ಕ್ವಿಬ್ಲಾ (quibla) ಆಗಿ ಬದಲಿಸಲಾಗಿದೆ; ಮತ್ತು ಯದ್ವಾತದ್ವಾ (ಬೇಕಾಬಿಟ್ಟಿ) ಕತ್ತರಿಸಲಾಗಿದೆ. ಹಿಂದಿನ ಕಟ್ಟಡದ ಉತ್ತರ ಕೋಣೆಯ (ಚೇಂಬರ್) ಪಶ್ಚಿಮದ ಪ್ರವೇಶವನ್ನು ಮುಚ್ಚಲಾಗಿದೆ; ಮತ್ತು ಅದನ್ನು ಮೇಲ್ಮಹಡಿಗೆ (roof) ಹತ್ತುವ ಇಕ್ಕಟ್ಟಾದ ಮೆಟ್ಟಿಲಾಗಿ ಪರಿವರ್ತಿಸಲಾಗಿದೆ – ಎಂದು ವರದಿ ವಿವರಿಸಿದೆ.
ಹಿಂದಿನ ಕಟ್ಟಡದ ದಕ್ಷಿಣ ಚೇಂಬರ್ನ ಪಶ್ಚಿಮ ಪ್ರವೇಶ(ಬಾಗಿಲು)ವನ್ನು ಕೂಡ ಮುಚ್ಚಲಾಗಿದೆ; ಮತ್ತು ಮೇಲ್ಮಹಡಿಗೆ ಹೋಗುವ ಇಕ್ಕಟ್ಟಾದ ಮೆಟ್ಟಿಲಾಗಿ ಬದಲಿಸಲಾಗಿದೆ. ಎಲ್ಲ ಮೂರೂ ಹಾಲ್ಗಳಿಗೆ ಗುಮ್ಮಟಗಳಿವೆ. ಅದರಲ್ಲಿ ಮಧ್ಯದ ಗುಮ್ಮಟ ದೊಡ್ಡದು; ಅದರ ಎತ್ತರ ಜಾಸ್ತಿ. ಸೆಂಟ್ರಲ್ಹಾಲ್ನ ಒಳಗಿನ ಗುಮ್ಮಟ ಮೂಲದಲ್ಲಿ ಇದ್ದುದು (ಒರಿಜಿನಲ್) ಎನಿಸುತ್ತದೆ. ಸೀಲಿಂಗ್ನ ಒಳಬದಿಯಲ್ಲಿ ರೇಖಾಗಣಿತದ ವಿನ್ಯಾಸ ಮಾತ್ರ ಮಾಡಿದೆ; ಮಸೀದಿಯ ಮೇಲ್ಭಾಗದಲ್ಲಿ ಎರಡು ಮಿನಾರ್ಗಳಿವೆ.
ಸೆಲ್ಲಾರ್ಗಳು
ಪ್ರಸ್ತುತ ಜಾಗದ ಪೂರ್ವಭಾಗದಲ್ಲಿ ಇಳಿಜಾರಿದೆ. ಹಿಂದಿನ ಕಟ್ಟಡವನ್ನು ನಿವೇಶನದ ಪಶ್ಚಿಮಭಾಗದಲ್ಲಿ ಕಟ್ಟಲಾಗಿತ್ತು. ಅದನ್ನು ಬದಲಿಸಿ ದೊಡ್ಡ ಪ್ಲಾಟ್ಫಾರ್ಮ್ ನಿರ್ಮಿಸುವ ಮೂಲಕ ಪೂರ್ವಭಾಗದಲ್ಲಿ ವಿಸ್ತರಿಸಿದಾಗ ಅದರ ಕೆಳಗೆ ನೆಲಮಾಳಿಗೆ (ಸೆಲ್ಲಾರ್)ಯಲ್ಲಿ ಹಲವು ಕೋಣೆಗಳನ್ನು ಕಟ್ಟಿಸಲಾಯಿತು. ಇದು ಪ್ರಧಾನ ಕಟ್ಟಡದ ನೆಲಮಟ್ಟದಿಂದ ಕೆಳಗಿದೆ (ಲೆವೆಲ್-೧). ಈ ಲೆವೆಲ್ನಲ್ಲಿ ನಿರ್ಮಿಸಿದ ಕೋಣೆಗಳು ಪ್ರಧಾನ ಕಟ್ಟಡದ (ಲೆವೆಲ್-೨) ಕೆಳಗೆ ವಿವಿಧ ಕಡೆಗಳಲ್ಲಿವೆ. ಅವುಗಳ ಪ್ರವೇಶದ್ವಾರದ ಪ್ರಕಾರ (ಉತ್ತರ ಮತ್ತು ದಕ್ಷಿಣ) ಅವುಗಳನ್ನು ಎರಡು ದೊಡ್ಡ ಗುಂಪುಗಳಾಗಿ ವಿಭಜಿಸಲಾಗಿದೆ. ಉತ್ತರದ ಎರಡು ಘಟಕ (ಯುನಿಟ್) ಮತ್ತು ದಕ್ಷಿಣದ ಒಂದು ಘಟಕವನ್ನು ತೆರೆದು ಜನ ವಿವಿಧ ಉದ್ದೇಶಗಳಿಗೆ ಬಳಸಿದ್ದಾರೆ. ಉತ್ತರದ ಮೊದಲ ಘಟಕದ ಪ್ರವೇಶವು (ಎಂಟ್ರೆನ್ಸ್) ಈಶಾನ್ಯ ಮೂಲೆಗೆ ಸಮೀಪದಲ್ಲಿದೆ.
ಕಟ್ಟಡದ ಮೂರು ಹಾಲ್ಗಳು ಪರಸ್ಪರ ತಾಗಿಕೊಂಡಿವೆ. ಅವುಗಳನ್ನು ಪೂರ್ವದಿಂದ ಪಶ್ಚಿಮಕ್ಕೆ ಎನ್(ನಾರ್ತ್)-೧, ಎನ್-೨ ಮತ್ತು ಎನ್-೩ ಎಂದು ಕ್ರಮಸಂಖ್ಯೆ ಹಾಕಲಾಗಿದೆ. ಮುಂದಿನ ಸೆಲ್ಲಾರ್ಗಳ ಘಟಕ (ಎರಡು ಸೆಲ್ಲಾರ್ಗಳು) ಈಗಿನ ಕಟ್ಟಡದ ಕೆಳಗೆ ವಾಯವ್ಯ ಭಾಗದಲ್ಲಿದೆ (ಎನ್-೪, ಎನ್-೫). ಇವು ಈಗಿನ ಸೆಕ್ಯುರಿಟಿ ಠಾಣೆಯ ಹಿಂಭಾಗದಲ್ಲಿವೆ. ದಕ್ಷಿಣದ ಮೂರು ಸೆಲ್ಲಾರ್ (ಕೋಣೆ)ಗಳು ಉತ್ತರದ ಸೆಲ್ಲಾರ್ಗಳಿಗೆ ಎದುರುಬದುರಾಗಿವೆ.
ಉತ್ತರಭಾಗದ ಸೆಲ್ಲಾರ್ಗಳಿಗೆ ಸಂಬಂಧಿಸಿದ ಪೂರ್ವಭಾಗದ ನಾಲ್ಕು ಪ್ರವೇಶಗಳನ್ನು ಆಧುನಿಕ ಇಟ್ಟಿಗೆಯಿಂದ ಮುಚ್ಚಲಾಗಿದೆ. ಈ ತಡೆಯು ಎಲ್ಲ ಸೆಲ್ಲಾರ್ಗಳ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿದೆ. ಈ ತಡೆಯು ಹೊರಗಿನ ಗೋಡೆಸಾಲಿನಿಂದ ಸ್ವಲ್ಪ ಹಿಂದಕ್ಕಿದೆ. ಅದರಿಂದ ಈ ರಚನೆಯು ನಕಲಿ ರಚನೆಯಂತೆ ತೋರುತ್ತದೆ. ಪಶ್ಚಿಮದ ಗೋಡೆಬದಿಯಲ್ಲಿ ಎನ್-೩ಕ್ಕೆ ಪ್ರವೇಶ ನೀಡುವ ಎಲ್ಲ ನಾಲ್ಕು ದ್ವಾರಗಳು ತೆರೆದಿವೆ. ಎಸ್-೨ರ ಕಡೆಗೆ ಹೋಗುವ ಗೋಡೆಯ ಉದ್ದಕ್ಕೆ ಐದು ಪ್ರವೇಶಗಳಿದ್ದು ಎಲ್ಲವನ್ನೂ ಮುಚ್ಚಲಾಗಿದೆ.
ಮಾನವನಿರ್ಮಿತ ವಸ್ತುಗಳು
ಪುರಾತತ್ತ್ವ ಇಲಾಖೆಯು ಜ್ಞಾನವಾಪಿ ಮಸೀದಿ ನಿವೇಶನದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುವಾಗ ಎನ್-೨ರಲ್ಲಿ ಹುಡಿಮಣ್ಣಿನ ರಾಶಿ ಕಾಣಿಸಿತು; ಅದು ಪೂರ್ವದ ಗೋಡೆಯ ಎದುರು ಒಂದನೇ ಮತ್ತು ಎರಡನೇ ದ್ವಾರದ ಬಳಿ ಇತ್ತು. ಆ ಮಣ್ಣನ್ನು ಎತ್ತಿದಾಗ ಬೇರೆಬೇರೆ ಗಾತ್ರದ ಗೋಡೆಗಂಬಗಳು (pilaster) ಕಾಣಿಸಿದವು. ಅವು ನೆಲದ ಮೇಲಿದ್ದ ಅವಶೇಷಗಳ (debris) ಮೇಲಿದ್ದವು. ಈ ಪಿಲಾಸ್ಟರ್ಗಳು ಮಧ್ಯಯುಗದ ಕೊನೆಯ ಭಾಗದ್ದಿರಬಹುದು; ಮತ್ತು ಮರಾಠರ ಪೋಷಕತ್ವದಿಂದ ದೇವಾಲಯಗಳ ನಿರ್ಮಾಣ ಚಟುವಟಿಕೆ ಹೆಚ್ಚಾದ ಕಾಲದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅದಲ್ಲದೆ ಅಲ್ಲಿ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಕೆಲವು ವಸ್ತುಗಳು ಕೂಡ ಕಂಡವು.
ಶಾಸನಗಳು
ಉತ್ತರದ ಯುನಿಟ್ಗಳಲ್ಲಿ ಹಲವು ಶಾಸನಗಳು (ಕೆತ್ತನೆ) ಕೂಡ ಕಂಡುಬಂದವು. ಪೂರ್ವಸಾಲಿನ ಗಂಟೆಯಾಕಾರದ ಕಂಬದಲ್ಲಿ ದಿನಾಂಕವಿರುವ ಕೆತ್ತನೆಯಿತ್ತು. ಸೀಲಿಂಗ್ ಸ್ಲ್ಯಾಬ್ನಲ್ಲಿ ಮತ್ತೆ ಕೆಲವು ಕೆತ್ತನೆಗಳು ಕಾಣಿಸಿದವು. ಪಶ್ಚಿಮ ಗೋಡೆಯ ಎರಡನೇ ಪ್ರವೇಶದ ಲಿಂಟಲ್ನಲ್ಲಿ ಇನ್ನೊಂದು ಕೆತ್ತನೆ (ಶಾಸನ) ಕಾಣಿಸಿತು. ಉತ್ತರದ ಗೋಡೆಯ ಬಳಿ ಪ್ರವೇಶದ ಮೇಲ್ಭಾಗದಲ್ಲಿರುವ ಕಲ್ಲಿನ ಚಪ್ಪಡಿಯ ಕೆಳಭಾಗದಲ್ಲಿ ಮತ್ತೊಂದು ಕೆತ್ತನೆ ಕಾಣಿಸಿತು.
ವಿವಿಧ ಭಾಗದ ಗೋಡೆಗಳಲ್ಲಿ ಅಲಂಕೃತ ವಾಸ್ತುಶಿಲ್ಪದ ಕೆಲವು ತುಂಡುಗಳು ಕಾಣಿಸಿದವು. ಚೈತ್ಯಾಲಯದ ಕಮಾನಿನಂತಹ ಒಂದು ತುಂಡು ಎನ್೩ರ ದಕ್ಷಿಣ ಗೋಡೆಯಲ್ಲಿತ್ತು. ಪ್ರಾಚೀನ ಕಾಲದ ಒಂದು ಅಲಂಕೃತ ಇಟ್ಟಿಗೆ (ವಜ್ರಾಕಾರದ ವಿನ್ಯಾಸದ್ದು) ಪೂರ್ವದ ಗೋಡೆಯ ಒಳಮೈಯಲ್ಲಿತ್ತು.
ಪ್ರಶ್ನೆ–ಉತ್ತರ
ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ನಡೆಸಿದ ವೈಜ್ಞಾನಿಕ ಸಮೀಕ್ಷೆಯನ್ನು ಎಎಸ್ಐ ಮುಖ್ಯವಾಗಿ ಪ್ರಶ್ನೋತ್ತರ ರೂಪದಲ್ಲಿ ದಾಖಲಿಸಿದೆ. ಅದು ಹೀಗಿದೆ:
ಎ) ನಿವೇಶನ ಸಂಖ್ಯೆ ೯೧೩೦ರಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಬೀಗಮುದ್ರೆ ಹಾಕಿದ ಸ್ಥಳಕ್ಕೆ ಹೊರತಾದ ಜಾಗದಲ್ಲಿ ವೈಜ್ಞಾನಿಕ ತನಿಖೆ/ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ತ್ವ ಇಲಾಖೆಗೆ (ಎಎಸ್ಐ) ಆದೇಶ ನೀಡಲಾಗಿದೆ; ಅಂಜುಮಾನ್ ಇಂತೆ ಜಾಮಿಯಾ ಮಸೀದಿ, ವಾರಾಣಸಿ ಅದರ ಆಡಳಿತ ಸಮಿತಿ ಮತ್ತು ರಾಕೇಶ್ಸಿಂಗ್ ಹಾಗೂ ಇತರರ ನಡುವಣ ದಾವೆಯ ಸಂದರ್ಭದಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.
ಎಎಸ್ಐ ಉತ್ತರ: ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಎಎಸ್ಐ ಆ ನಿವೇಶನದಲ್ಲಿ ವೈಜ್ಞಾನಿಕ ಸರ್ವೆ ನಡೆಸಿತು. ಸುಪ್ರೀಂಕೋರ್ಟ್ ಆದೇಶದಂತೆ ಬೀಗಮುದ್ರೆ ಹಾಕಿದ ಜಾಗವನ್ನು ಸಮೀಕ್ಷೆಯಿಂದ ಕೈಬಿಡಲಾಗಿತ್ತು. ಅಧ್ಯಯನದ ತಂಡದಲ್ಲಿ ಪುರಾತತ್ತ್ವ ವಿಷಯತಜ್ಞರು, ಶಾಸನತಜ್ಞರು, ರಸಾಯನಶಾಸ್ತ್ರಜ್ಞರು, ಇಂಜಿನಿಯರ್ಗಳು, ಸರ್ವೇಯರ್ಗಳು, ಛಾಯಾಗ್ರಾಹಕರು, ಎಎಸ್ಐ ಅಧಿಕಾರಿಗಳು ಮತ್ತು ಹೈದರಾಬಾದ್ನ ರಾಷ್ಟ್ರೀಯ ಭೂಭೌತಿಕ ಸಂಶೋಧನ ಸಂಸ್ಥೆಯ (ಎನ್ಜಿಆರ್ಐ) ತಜ್ಞರು ಭಾಗವಹಿಸಿದ್ದರು. ಸ್ಥಳದಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಿ ಕ್ರಮಬದ್ಧವಾಗಿ ವಿಶ್ಲೇಷಿಸಲಾಯಿತು. ೨೧೫೦ ಚದರ ಮೀಟರ್ ಜಾಗದಲ್ಲಿ ಪ್ರಸ್ತುತ ವೈಜ್ಞಾನಿಕ ಅಧ್ಯಯನವು ನಡೆಯಿತು. ಈಗಿನ ಕಟ್ಟಡದ ಸುತ್ತ ಸ್ಟೀಲ್ ಗ್ರಿಲ್ ಹಾಕಿದ್ದರು. ಬೇಲಿಯ ಕಾರಿಡಾರ್ನ ಹೊರಗಿನ ಜಾಗಕ್ಕೆ ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಪ್ರಕಾರ ಬೇಲಿ ಹಾಕಿದ್ದರು. ಆದ್ದರಿಂದ ಮೇಲ್ಮೈ ಅಧ್ಯಯನದ (surface study) ಮೂಲಕ ಏನೂ ತಿಳಿಯುತ್ತಿರಲಿಲ್ಲ.
ಕೋರ್ಟ್ ಮಾತು ಅಂತಿಮ
ಸಮೀಕ್ಷಾ ತಂಡವು ರೆಫರೆನ್ಸ್ ಪಾಯಿಂಟ್ಗಳನ್ನು ಗುರುತಿಸಿ ಇಡೀ (ಕಟ್ಟಡ) ಸಂಕೀರ್ಣದ ಬಗ್ಗೆ ಒಂದು ಯೋಜನೆಯನ್ನು(plan) ರೂಪಿಸಲಾಯಿತು. ತಜ್ಞರ ವಿವಿಧ ಗುಂಪುಗಳು ನ್ಯಾಯಾಲಯದ ಆದೇಶವನ್ನು ಚಾಚೂ ತಪ್ಪದೆ ವೈಜ್ಞಾನಿಕ ಸಂಶೋಧನೆ ನಡೆಸಿದವು. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣದ ತೆರೆದ ಜಾಗದಲ್ಲಿ (open area), ಪ್ಲಾಟ್ಫಾರ್ಮ್ ಕೆಳಗಿನ ಸೆಲ್ಲಾರ್ಗಳಲ್ಲಿ ಮಧ್ಯ(ಸೆಂಟ್ರಲ್), ಉತ್ತರ, ದಕ್ಷಿಣದ ಹಾಲ್ಗಳಲ್ಲಿ, ಕಾರಿಡಾರ್ಗಳಲ್ಲಿ, ರೂಫ್ನಲ್ಲಿ ಗುಮ್ಮಟಗಳ ಕೆಳಗೆ (ಸೀಲಾದ ಜಾಗ ಹೊರತುಪಡಿಸಿ) ಸರ್ವೆ ನಡೆಸಲಾಯಿತು. ಕಾರ್ಯಾಚರಣೆಯ ವೇಳೆ ಕಟ್ಟಡಕ್ಕೆ ಯಾವುದೇ ಹಾನಿ ಆಗದಂತೆ ಎಚ್ಚರವಹಿಸಲಾಯಿತು. ಎರಡೂ ಕಡೆಯ ಪ್ರತಿನಿಧಿಗಳು ಜಿಲ್ಲಾಡಳಿತದವರು, ಭದ್ರತಾ ಸಿಬ್ಬಂದಿ ಮುಂತಾಗಿ ಎಲ್ಲರೂ ಹಾಜರಿದ್ದು, ಉತ್ತಮ ಸಹಕಾರ ನೀಡಿದರು.
ಬೃಹತ್ ಹಿಂದೂ ದೇವಾಲಯ
ಬಿ) ಜಿಪಿಆರ್ ಸರ್ವೆ ಮೂಲಕ ಸವಿವರ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಎಎಸ್ಐಗೆ ಸೂಚಿಸಲಾಗಿದೆ. ವೈಜ್ಞಾನಿಕ ಸಮೀಕ್ಷೆ, ಡೇಟಿಂಗ್ ಮೊದಲಾದ ಆಧುನಿಕ ತಂತ್ರಗಳನ್ನು ಬಳಸಿ, ಈಗ ನಮ್ಮ ಮುಂದಿರುವ ಕಟ್ಟಡವನ್ನು ಹಿಂದೆ ಇದ್ದ ಒಂದು ಹಿಂದೂ ದೇವಾಲಯದ ಕಟ್ಟಡದ ಮೇಲೆ ಕಟ್ಟಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ಉತ್ತರ: ನ್ಯಾಯಾಲಯದ ಸೂಚನೆಯ ಮೇರೆಗೆ ಕಟ್ಟಡವನ್ನು ಯಾವೆಲ್ಲ ಹಂತಗಳಲ್ಲಿ ನಿರ್ಮಿಸಲಾಯಿತೆಂದು ಪರಿಶೀಲಿಸಲಾಯಿತು. ಈಗ ಇರುವ ಕಟ್ಟಡಗಳು, ಅಲ್ಲಿ ದೊರೆತ ಮಾನವನಿರ್ಮಿತ ವಸ್ತುಗಳ ಬಗ್ಗೆ ಅಧ್ಯಯನ ನಡೆಸಲಾಯಿತು. ಅದರ ಆಧಾರದಲ್ಲಿ ತಿಳಿಯುವ ಅಂಶವೆಂದರೆ, ಹಾಲಿ ಕಟ್ಟಡದ ನಿರ್ಮಾಣಕ್ಕೆ ಮುನ್ನ ಅಲ್ಲೊಂದು ಬೃಹತ್ ಹಿಂದೂ ದೇವಾಲಯವಿತ್ತು. ಆ ದೇವಳದ ಮಧ್ಯಭಾಗದಲ್ಲಿ ಒಂದು ದೊಡ್ಡ ಕೊಠಡಿ (ಚೇಂಬರ್) ಇತ್ತು. ಅದರ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮಗಳಲ್ಲಿ ಕನಿಷ್ಠ ಒಂದೊಂದು ಕೊಠಡಿಗಳು ಇದ್ದವೆಂದು ಲಭ್ಯ ಸಾಕ್ಷö್ಯಗಳು ಹೇಳುತ್ತವೆ. ಉತ್ತರ, ದಕ್ಷಿಣ ಮತ್ತು ಪಶ್ಚಿಮದ ಚೇಂಬರ್ಗಳ ಅವಶೇಷಗಳನ್ನು ಈಗಲೂ ಕಾಣಬಹುದು. ಆದರೆ ಪೂರ್ವ ಚೇಂಬರ್ನ ಅವಶೇಷ ಮತ್ತದರ ವಿಸ್ತರಣೆಯನ್ನು ಭೌತಿಕವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಪೂರ್ವದ ಜಾಗದ ಮೇಲೆ ಕಲ್ಲಿನ ನೆಲ (ಫ್ಲೋರಿಂಗ್) ಇರುವ ಗಟ್ಟಿಯಾದ ಪ್ಲಾಟ್ಫಾರ್ಮ್ ನಿರ್ಮಿಸಲಾಗಿದೆ.
ದೇವಾಲಯದ ಮಧ್ಯದ ಕೊಠಡಿಗೆ ಪ್ರವೇಶವು ಪಶ್ಚಿಮದಿಂದ ಇತ್ತು. ಅದನ್ನು ಕಲ್ಲು ಸಹಿತವಾದ ಗಾರೆಕೆಲಸದ ಮೂಲಕ ಮುಚ್ಚಲಾಗಿದೆ. ಪಶ್ಚಿಮದ ಚೇಂಬರ್ ಉತ್ತರದ ಚೇಂಬರ್ ಮತ್ತು ದಕ್ಷಿಣದ ಚೇಂಬರ್ ಜೊತೆ ಸಂಪರ್ಕವನ್ನು ಹೊಂದಿತ್ತು. ಅನುಕ್ರಮವಾಗಿ ಉತ್ತರದಿಂದ ಮತ್ತು ದಕ್ಷಿಣದಿಂದ ಬರುವ ಕಾರಿಡಾರ್ ಮೂಲಕ ಅದು ಸಂಪರ್ಕವನ್ನು ಹೊಂದಿತ್ತು. ಮಧ್ಯದ ಚೇಂಬರ್ನ ಮುಖ್ಯಪ್ರವೇಶವು (ದ್ವಾರ) ಪ್ರಾಣಿ-ಪಕ್ಷಿಗಳ ಕೆತ್ತನೆಯ ಮೂಲಕ ಸದಭಿರುಚಿಯಿಂದ ಅಲಂಕೃತವಾಗಿತ್ತು; ಮತ್ತು ಅಲ್ಲಿ ಆಭರಣದಂತಹ ತೋರಣ ಕೂಡ ಇತ್ತು. ಲಲತ್ಬಿಂಬದ ಮೇಲೆ ಕೆತ್ತಿದ ಈ ಆಕೃತಿಯನ್ನು ಕತ್ತರಿಸಿ ಹಾಕಿದ್ದಾರೆ. ಅದರ ಹೆಚ್ಚಿನ ಭಾಗವನ್ನು ಕಲ್ಲು, ಇಟ್ಟಿಗೆ, ಹಲಗೆ (ಮಾರ್ಟರ್)ಗಳಿಂದ ಮುಚ್ಚಲಾಗಿದೆ; ಆ ಮೂಲಕ ಪ್ರವೇಶವನ್ನೇ ಮುಚ್ಚಿದಂತಾಗಿದೆ.
ಔರಂಗಜೇಬನ ಕೃತ್ಯ
ಬಾಗಿಲಿನ ಅಂಚಿನಲ್ಲಿ ಕೆತ್ತಿದ ಒಂದು ಹಕ್ಕಿಯ ಆಕೃತಿಯ ಅವಶೇಷದ ಒಂದು ಭಾಗವು ಉತ್ತರದಲ್ಲಿ ಉಳಿದುಕೊಂಡಿದ್ದು, ಅದು ಕೋಳಿಯಂತೆ ಕಾಣಿಸುತ್ತದೆ. ಹಾಲಿ ಕಟ್ಟಡದ ದಕ್ಷಿಣದಲ್ಲಿ ನಿರ್ಮಿಸಿದ ನೆಲಮಾಳಿಗೆಯ ಒಂದು ಕೋಣೆಯಲ್ಲಿ ಇರಿಸಿದ ಶಾಸನವು ಮೊಘಲ್ ಚಕ್ರವರ್ತಿ ಔರಂಗಜೇಬ ೧೬೭೬-೭೭ರಲ್ಲಿ ಈ ಮಸೀದಿಯನ್ನು ಕಟ್ಟಿಸಿದನೆಂದು ಹೇಳುತ್ತದೆ. ೧೭೯೨-೯೩ರಲ್ಲಿ ಮಸೀದಿಯ ರಿಪೇರಿ ಮಾಡಲಾಯಿತೆಂದು ಅದೇ ಶಾಸನವು ಹೇಳುತ್ತದೆ. ಇಂದಿನ ಕಟ್ಟಡದ ನೆಲಮಾಳಿಗೆಯ ಕೋಣೆಯಲ್ಲಿ ಇರಿಸಿದ ಶಾಸನದೊಂದಿಗೆ ಎಎಸ್ಐ ೧೯೬೫-೬೬ರಲ್ಲಿ ತೆಗೆದ ಪ್ರತಿಯನ್ನು ಹೋಲಿಸಿದಾಗ ಶಾಸನದ ಕೊನೆಯ ಎರಡು ಸಾಲುಗಳನ್ನು ಅಳಿಸಲು ಪ್ರಯತ್ನಿಸಿದ್ದು ಕಂಡುಬರುತ್ತದೆ; ಅದರಲ್ಲಿ ಮಸೀದಿಯ ನಿರ್ಮಾಣ ಮತ್ತು ವಿಸ್ತರಣೆಗಳನ್ನು ಕುರಿತು ಹೇಳಲಾಗಿದೆ.
೧೭ನೇ ಶತಮಾನದಲ್ಲಿ ಹಿಂದೆ ಇದ್ದ (ದೇವಾಲಯದ) ಕಟ್ಟಡದಲ್ಲಿ ಬದಲಾವಣೆಗಳನ್ನು ಮಾಡಿ, ಅದರ ಹಲವು ಭಾಗಗಳನ್ನು ಈಗಿನ ಕಟ್ಟಡದಲ್ಲಿ ಬಳಸಿಕೊಳ್ಳಲಾಯಿತು. ಹಿಂದಿನ ಕಟ್ಟಡದಲ್ಲಿ ಕೆತ್ತಿದ್ದ ಪ್ರಾಣಿ-ಪಕ್ಷಿಗಳ ಚಿತ್ರಗಳು ಇವರ ಉದ್ದೇಶಕ್ಕೆ ಹೊಂದಿಕೊಳ್ಳದ ಕಾರಣ ಅವುಗಳನ್ನು ತೆಗೆದುಹಾಕಿದರು (ಅಥವಾ ನಾಶಪಡಿಸಿದರು). ಹಿಂದಿನ ಕಟ್ಟಡದ ಒಂದು ದೊಡ್ಡ ಭಾಗವನ್ನು ಹಾಲಿ ಕಟ್ಟಡದ ಪ್ರಮುಖ ಭಾಗವಾಗಿ ಬಳಸಿಕೊಂಡರು.
ಮಸೀದಿಯನ್ನು ದೊಡ್ಡದು ಮಾಡುವ ಸಲುವಾಗಿ ಸಹನ್(ಅಂಗಳ) ಮತ್ತು ಕಂಬವಿರುವ ವರಾಂಡ ನಿರ್ಮಿಸಬೇಕಿತ್ತು. ಅದಕ್ಕೆ ಹಿಂದಿನ ದೇವಾಲಯ ಕಂಬ, ಕಿರುಕಂಬ ಮೊದಲಾದ ರಚನೆಗಳನ್ನು ಬೇಕಾದಂತೆ ಬಳಸಿಕೊಂಡರು. ಬದಲಾದ ಬಳಕೆಗೆ ಅನುಗುಣವಾಗಿ ಹಿಂದಿನ ಕಂಬ ಇತ್ಯಾದಿ ರಚನೆಗಳಲ್ಲಿ ಬೇಕಾದ ಬದಲಾವಣೆ ಮಾಡಿಕೊಂಡರು.
ಮಸೀದಿಗಾಗಿ ಹಿಂದಿನ ಕಟ್ಟಡವನ್ನು ವಿಸ್ತರಿಸುವಾಗ ಪೂರ್ವ, ದಕ್ಷಿಣ ಮತ್ತು ಉತ್ತರಗಳಲ್ಲಿ ನೆಲಮಾಳಿಗೆಯಲ್ಲಿ ಹಲವು ಕೋಣೆಗಳನ್ನು ಕಟ್ಟಿಸಿದರು. ಆ ಮೂಲಕ ಹೆಚ್ಚು ಸ್ಥಳಾವಕಾಶವನ್ನು ಮಾಡಿಕೊಂಡರು. ಮಸೀದಿಯ ಎದುರುಗಡೆ ದೊಡ್ಡ ಪ್ಲಾಟ್ಫಾರ್ಮ್ ನಿರ್ಮಿಸಿದರು. ಪ್ರಾರ್ಥನೆಗೆ (ನಮಾಜ್) ಸೇರುವ ದೊಡ್ಡ ಸಂಖ್ಯೆಯ ಜನರಿಗೆ ಜಾಗ ಒದಗಿಸುವುದು ಅದರ ಉದ್ದೇಶವಾಗಿತ್ತು. ಆಗ ಪೂರ್ವಭಾಗದ ಕೋಣೆ(ಚೇಂಬರ್)ಗಳ ಸಾಲನ್ನು ಪ್ಲಾಟ್ಫಾರ್ಮ್ಗೆ ಸೇರಿಸಿಕೊಂಡರು. ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶವಿದ್ದ ಸೆಲ್ಲಾರ್(ಕೋಣೆ)ಗಳ ತೆರೆದ ಕಾರಿಡಾರನ್ನು ಸೇರಿಸಿಕೊಂಡರು; ಅಥವಾ ಬದಲಾಯಿಸಿದರು. ಒಟ್ಟಿನಲ್ಲಿ ವೈಜ್ಞಾನಿಕ ಅಧ್ಯಯನ, ಸಮೀಕ್ಷೆ, ವಾಸ್ತುಶಿಲ್ಪದ ಅವಶೇಷದ ಅಧ್ಯಯನ, ಸಿಕ್ಕಿದ ವಸ್ತುಗಳು, ಶಾಸನ, ಕಲೆ ಮತ್ತು ಶಿಲ್ಪಗಳಿಂದ ತಿಳಿದುಬರುವ ಅಂಶವೆಂದರೆ, ಹಿಂದೆ ಅಲ್ಲೊಂದು ದೊಡ್ಡ ಹಿಂದೂ ದೇವಾಲಯವಿತ್ತೆಂದು.
ಸಿ) ಕೋರ್ಟ್: ವಾದಿ-ಪ್ರತಿವಾದಿಗಳ ಅಭಿಪ್ರಾಯ ಏನೆಂದು ತಿಳಿದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಇಡೀ ಅಧ್ಯಯನ ಸರ್ವೆಗಳ ಫೋಟೋ, ವಿಡಿಯೋ ತೆಗೆಯಬೇಕು.
ಉತ್ತರ: ವಾದಿ-ಪ್ರತಿವಾದಿಗಳು, ಅವರ ವಕೀಲರೆಲ್ಲ ಎಎಸ್ಐ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ಚಟುವಟಿಕೆಗಳನ್ನು ಸ್ವತಃ ನೋಡಿದ್ದಾರೆ. ನವೆಂಬರ್ ೨, ೨೦೨೩ರಂದು ಸಮೀಕ್ಷೆಯನ್ನು ಮುಗಿಸಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಯಿತು. ಈ ಚಟುವಟಿಕೆಗಳ ಫೋಟೋ, ವಿಡಿಯೋಗಳನ್ನು ತೆಗೆಯಲಾಗಿದೆ.
ಪಶ್ಚಿಮದ ಗೋಡೆ
ಡಿ) ಈಗ ಇರುವ ಕಟ್ಟಡದ ಪಶ್ಚಿಮದ ಗೋಡೆಯನ್ನು ಯಾವಾಗ ಕಟ್ಟಿಸಲಾಯಿತು, ಯಾವ ರೀತಿಯಲ್ಲಿ ಕಟ್ಟಿಸಿದರು ಎನ್ನುವ ಕುರಿತು ವೈಜ್ಞಾನಿಕ ವಿಧಾನದಿಂದ ಶೋಧಕಾರ್ಯವನ್ನು ನಡೆಸಬೇಕು.
ಉತ್ತರ: ಪಶ್ಚಿಮದ ಗೋಡೆಯನ್ನು ಕಲ್ಲು ಮತ್ತು ಮೌಲ್ಡಿಂಗ್ (ಗಾರೆ ನಿರ್ಮಾಣ)ನಿಂದ ನಿರ್ಮಿಸಲಾಗಿದೆ; ಅದು ಅಲಂಕೃತ (decorated) ಮೌಲ್ಡಿಂಗ್ನಂತೆ ಕಂಡುಬರುತ್ತದೆ. ಅಂದರೆ ಅದು ಹಿಂದೆ ಅಲ್ಲಿದ್ದ ದೇವಾಲಯದ ಒಂದು ಭಾಗವಾಗಿದೆ. ದೇವಾಲಯದ ಮಧ್ಯದ ಹಾಲ್ನ ಪಶ್ಚಿಮ ಗೋಡೆ, ಅದರ ಉತ್ತರ-ದಕ್ಷಿಣದ ಎರಡು ಹಾಲ್ಗಳ ಭಾಗದಿಂದ ಹಾಲಿ ಕಟ್ಟಡದ ಪಶ್ಚಿಮದ ಗೋಡೆಯು ನಿರ್ಮಾಣಗೊಂಡಿದೆ. ಗೋಡೆಗೆ ತಾಗಿರುವ ಮಧ್ಯದ ಚೇಂಬರನ್ನು ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ ಬದಿಯ ಎರಡು ಚೇಂಬರ್(ಕೋಣೆ)ಗಳಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿದೆ. ಪಶ್ಚಿಮದಲ್ಲಿದ್ದ ಇನ್ನೊಂದು ಚೇಂಬರ್ನ ಅವಶೇಷಗಳು ಈಗಲೂ ಅದಕ್ಕೆ ತಾಗಿಕೊಂಡು ಅಲ್ಲೇ ಇವೆ. ಅದರ ಪ್ರಮುಖ ಭಾಗಗಳನ್ನು ಉಳಿಸಿಕೊಳ್ಳಲಾಗಿದೆ.
ಎಲ್ಲ ಮೂರು ಹಾಲ್ಗಳು ಅಲಂಕೃತ ಕಮಾನಿನ ಪ್ರವೇಶದ್ವಾರದ ಮೂಲಕ ಪಶ್ಚಿಮದ ಕಡೆಗೆ ತೆರೆದುಕೊಂಡಿವೆ (ಓಪನಿಂಗ್ ಇದೆ). ಉತ್ತರ ಮತ್ತು ದಕ್ಷಿಣದ ಹಾಲ್ಗಳ ಕಮಾನುಸಹಿತ ದ್ವಾರಗಳನ್ನು ಮುಚ್ಚಿ ಮೇಲ್ಮಹಡಿಗೆ (ರೂಫ್) ಹೋಗುವ ಮೆಟ್ಟಿಲಾಗಿ ಪರಿವರ್ತಿಸಲಾಗಿದೆ. ಉತ್ತರಭಾಗದ ಪ್ರವೇಶದ ಮೆಟ್ಟಿಲುಗಳನ್ನು ಕಲ್ಲಿನ ಗಾರೆ ಬಳಸಿ ಶಾಶ್ವತವಾಗಿ ಮುಚ್ಚಲಾಗಿದೆ; ಆದರೆ ರೂಫ್ನಿಂದ ಅಲ್ಲಿಗೆ ಬರಲು ಅವಕಾಶವಿದೆ. ಪಶ್ಚಿಮದ ಚೇಂಬರ್ ಮೂಲಕ ಮಧ್ಯದ ಚೇಂಬರ್ಗೆ ಹೋಗುವ ದೊಡ್ಡ ಅಲಂಕೃತ ಪ್ರವೇಶದ್ವಾರವನ್ನು ಕಲ್ಲುಗಾರೆಯಿಂದ ಮುಚ್ಚಲಾಗಿದೆ. ಒಟ್ಟಿನಲ್ಲಿ ಹಿಂದಿನ ಕಟ್ಟಡದ ಬಹಳಷ್ಟು ಭಾಗಗಳನ್ನು ಸೇರಿಸಿ ಪಶ್ಚಿಮಗೋಡೆಯನ್ನು ಕಟ್ಟಲಾಗಿದೆ.
ಗೋಡೆಯ ಕಾಲ
ಪಶ್ಚಿಮಗೋಡೆ ಯಾವ ಕಾಲದ್ದೆಂದು ತಿಳಿಯುವ ಸಲುವಾಗಿ ಇಡೀ ಕಟ್ಟಡ ಮತ್ತು ಅದಕ್ಕೆ ತಾಗಿಕೊಂಡಿರುವ ತೆರೆದ (open) ಜಾಗಗಳನ್ನು ವಿವರವಾಗಿ ಪರೀಕ್ಷಿಸಲಾಯಿತು. ನಾವು ಕಟ್ಟಡ ಸಂಕೀರ್ಣಕ್ಕೆ ಹೋಗುತ್ತಲೇ ಪಶ್ಚಿಮಗೋಡೆಯ ಬಹುಭಾಗವನ್ನು ಕಸದ ರಾಶಿ, ಮಣ್ಣು, ಕಟ್ಟಡದ ಅವಶೇಷ(debris) ಮುಂತಾದವುಗಳಿಂದ ಮುಚ್ಚಿದ್ದು ಗಮನಕ್ಕೆ ಬಂತು. ಗೋಡೆಯ ಸ್ವರೂಪವನ್ನು ತಿಳಿಯುವ ಬಗ್ಗೆ ಮತ್ತು ನ್ಯಾಯಾಲಯದ ಆದೇಶವನ್ನು ಪಾಲಿಸುವ ಸಲುವಾಗಿ ಅಲ್ಲಿ ಬಿದ್ದಿದ್ದ ಕಸ ಮಣ್ಣು ಅವಶೇಷಗಳನ್ನು ತೆಗೆಯಬೇಕಾಗಿತ್ತು. ಹೈಕೋರ್ಟ್ ಅಲ್ಲಿ ಉತ್ಖನನ ಮಾಡುವುದು ಬೇಡವೆಂದು ಸೂಚಿಸಿದ್ದ ಕಾರಣ ಏನು ಮಾಡುವುದೆಂದು ಸಹಾಯಕ ಸಾಲಿಸಿಟರ್ ಜನರಲ್ ಅವರಿಂದ ಕಾನೂನು ಸಲಹೆ ಕೇಳಿದೆವು. ನೆಲದ ಮೇಲಿದ್ದ ಕಸ ಮಣ್ಣು ಅವಶೇಷಗಳನ್ನು ತೆಗೆಯಬಹುದೆ ಎಂಬುದು ನಮ್ಮ ಪ್ರಶ್ನೆಯಾಗಿತ್ತು.
ಅವರ ಸಲಹೆಯ ಮೇರೆಗೆ ಎರಡೂ ಕಡೆಯಿಂದ ವಾದಿ-ಪ್ರತಿವಾದಿಗಳ ಪ್ರತಿನಿಧಿಗಳ ಸಭೆಯನ್ನು ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಯಿತು. ಕಸ ಮಣ್ಣು ತೆಗೆಸಲು ಎಲ್ಲರೂ ಒಪ್ಪಿದರು; ಅದಕ್ಕೆ ಮನೆ ಮತ್ತು ಉದ್ಯಾನಗಳಲ್ಲಿ ಬಳಸುವ ಉಪಕರಣಗಳನ್ನು ಮಾತ್ರ ಬಳಸಿ ತುಂಬ ಎಚ್ಚರಿಕೆಯಿಂದ ಎಲ್ಲವನ್ನೂ ತೆಗೆಯಲಾಯಿತು. ಈಗಿನ ನೆಲದ ಮಟ್ಟದವರೆಗೆ ಜಾಗ ಚೊಕ್ಕವಾಯಿತು; ಅದಕ್ಕೆ ತುಂಬ ಸಮಯ ಹಿಡಿಯಿತು. ಅದನ್ನು ನ್ಯಾಯಾಲಯಕ್ಕೆ ತಿಳಿಸಿ ಸಮಯದ ವಿಸ್ತರಣೆಯನ್ನು ಪಡೆದೆವು.
ಕಸ-ಕಡ್ಡಿ ಮಣ್ಣು ಅವಶೇಷಗಳನ್ನು ಎತ್ತಿದಾಗ ಪಶ್ಚಿಮ ಗೋಡೆ ಮತ್ತು ಅದಕ್ಕೆ ತಾಗಿದ ಕಟ್ಟಡದ ಭಾಗ ಸರಿಯಾಗಿ ಕಾಣಿಸಿತು. ಅದರ ಬಗ್ಗೆ ಅಧ್ಯಯನ ನಡೆಸಿ ವ್ಯವಸ್ಥಿತವಾಗಿ ದಾಖಲಿಸಲಾಯಿತು. ಗುಂಡಿ ತೋಡಬಾರದೆಂದು ಹೈಕೋರ್ಟ್ ಆದೇಶವಿದ್ದ ಕಾರಣ ನೆಲದ ಮಟ್ಟದಿಂದ ಕೆಳಗೆ ಏನನ್ನೂ ಮಾಡಲಿಲ್ಲ. ಇಂದಿನ ನೆಲಮಟ್ಟದವರೆಗೆ ಅಧ್ಯಯನವನ್ನು ಸೀಮಿತಗೊಳಿಸಲಾಗಿತ್ತು.
ಶಿಲಾಶಾಸನಗಳ ಅಪೂರ್ವ ದಾಖಲೆ
ಕಟ್ಟಡದ ಕಲೆ, ವಾಸ್ತುಶಿಲ್ಪ
ಯಾವುದೇ ಕಟ್ಟಡದ ಕಲೆ ಮತ್ತು ವಾಸ್ತುಶಿಲ್ಪಗಳು ಅದರ ಕಾಲವನ್ನಷ್ಟೇ ತಿಳಿಸುವುದಿಲ್ಲ. ಬದಲಾಗಿ ಅದರ ಸ್ವರೂಪ(feature)ವನ್ನು ಕೂಡ ತಿಳಿಸುತ್ತವೆ. ಪಶ್ಚಿಮ ಚೇಂಬರ್ನ ಎರಡೂ ಕಡೆ ಸೆಂಟ್ರಲ್ ಚೇಂಬರ್ನ ಕಾಮರಥ ಮತ್ತು ಪ್ರತಿರಥಗಳು ಕಾಣಿಸುತ್ತವೆ. ಪಶ್ಚಿಮ ಚೇಂಬರ್ನ ಪೂರ್ವಗೋಡೆಯಲ್ಲಿ ಒಂದು ದೊಡ್ಡ ಸಾಲಂಕೃತ ಪ್ರವೇಶದ್ವಾರ, ಲಲತ್ಬಿಂಬ, ಅಲಂಕಾರಕ್ಕೆ ಕೆತ್ತಿದಂತಹ ಪಕ್ಷಿಗಳು ಮತ್ತು ಪ್ರಾಣಿಗಳ ಶಿಲ್ಪ ಹಾಳುಮಾಡಿದ ಆಕೃತಿಗಳು (images), ಅವುಗಳನ್ನು ಒಳಗೊಂಡ ಸಣ್ಣ ಪ್ರವೇಶದ್ವಾರ – ಎಲ್ಲ ಇವೆ. ಇವುಗಳಿಂದ ತಿಳಿಯುವ ಅಂಶವೆಂದರೆ, ಮಸೀದಿಯ ಪಶ್ಚಿಮಗೋಡೆಯು ಹಿಂದಿನ ಹಿಂದೂ ದೇವಾಲಯದ ಭಾಗವಾಗಿತ್ತು.
ಇ) ಕೋರ್ಟ್: ಮಸೀದಿಯ ಮೂರು ಗುಮ್ಮಟಗಳ ಕೆಳಗೆ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸರ್ವೆ ನಡೆಸಬೇಕು.
ಉತ್ತರ: ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಹೈದರಾಬಾದ್ನ ರಾಷ್ಟ್ರೀಯ ಭೂಭೌತಿಕ ಸಂಶೋಧನ ಸಂಸ್ಥೆಯ (ಎನ್ಜಿಆರ್ಐ) ತಜ್ಞರು ಇಂದಿನ ಮಸೀದಿಯ ಕಟ್ಟಡದ ಮೂರು ಗುಮ್ಮಟಗಳ ಕೆಳಗೆ ಜಿಪಿಆರ್ ಸರ್ವೆ ನಡೆಸಿದರು. ಅದರಲ್ಲಿ ಕಟ್ಟಡದ ಹಾಲ್ನ ಪ್ರದೇಶದ ದಕ್ಷಿಣ ಕಾರಿಡಾರ್, ದಕ್ಷಿಣದ ಹಾಲ್, ಸೆಂಟ್ರಲ್ ಹಾಲ್, ಪೂರ್ವ ಕಾರಿಡಾರ್, ಉತ್ತರದ ಹಾಲ್ ಮತ್ತು ಉತ್ತರ ಕಾರಿಡಾರ್ಗಳು ಸೇರಿವೆ. ಸಂಗ್ರಹಿಸಿದ ಮಾಹಿತಿಗಳ ವಿಶ್ಲೇಷಣೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಉತ್ತರದ ಹಾಲ್ ಮತ್ತು ಉತ್ತರದ ಕಾರಿಡಾರ್ನಲ್ಲಿ ಮೂರು ಪದರ(ಲೇಯರ್)ದ ರಚನೆಗಳಿದ್ದವು. ಅದರಲ್ಲಿ ಒಂದು ಮೀ. ದಪ್ಪದ ಒಂದು ಪದರವಿದ್ದು, ಅದು ಮಧ್ಯ ಮತ್ತು ದಕ್ಷಿಣದ ಹಾಲ್ಗಳಲ್ಲಿ ಅರ್ಧ ಮೀಟರ್ ದಪ್ಪವಿದೆ. ೩-ಡಿಪ್ರೊಫೈಲ್ ಮಾಡಿದಾಗ ಲೇಯರ್-೧ರ ದಪ್ಪ ಗೋಡೆಯ ಕಡೆಗೆ ಹೆಚ್ಚಾಗಿರುವುದು ತಿಳಿದುಬಂತು. ಎರಡನೇ ಲೇಯರ್ ಮಧ್ಯದಲ್ಲಿ ಎತ್ತರವಾಗಿದ್ದು ಗುಮ್ಮಟದ ಆಕಾರವನ್ನು ಹೊಂದಿದೆ. ಮತ್ತು ಅದು ಅಂಚಿನ ಕಡೆಗೆ ಸಫೂರ(ತೆಳ್ಳಗೆ)ವಾಗುತ್ತ ಹೋಗಿದೆ; ಅದು ರೇಖಾಗಣಿತದ ಫಿಲ್ ಮೆಟೀರಿಯಲ್ನಂತಿದೆ. ಲೇಯರ್-೩ ಸಾಮಾನ್ಯವಾಗಿ ಫೌಂಡೇಶನ್ ಬೆಡ್ (ತಳಪಾಯ) ಆಗಿದೆ. ಮಿನಾರ್ಗಳು ಮತ್ತು ಫೌಂಡೇಶನ್ ಗೋಡೆಗಳು ಲೇಯರ್-೩ರ ಮೇಲೆ ನಿಂತಿವೆ.
ತಳಹಂತದ (ನೆಲಮಾಳಿಗೆ) ಪ್ಲಾಟ್ಫಾರ್ಮ್ ಮುಖ್ಯವಾಗಿ ೪, ೫ ಮೀ. ಆಳದಲ್ಲಿದೆ. (ದಕ್ಷಿಣ ಮತ್ತು ಮಧ್ಯದ ಹಾಲ್ಗಳ ಕೆಳಗೆ) ಮತ್ತು ಉತ್ತರ ಹಾಲ್ನ ಕೆಳಗೆ ಲೇಯರ್ನ ತೆಳ್ಳಗಿನ ಭಾಗವಿದೆ. ಉತ್ತರದ ಹಾಲ್ನಲ್ಲಿ ಲೇಯರ್-೧ ಮತ್ತು ೨ರ ನಡುವಣ ಸಂಪರ್ಕವು ಅಲ್ಲಲ್ಲಿ ತುಂಡಾಗಿದೆ. ನೆಲವನ್ನು ಆಗಾಗ ರಿಪೇರಿ ಮಾಡಲಾಗಿದೆ. ಅದರಿಂದಾಗಿ ಮೋರ್ಟಾರ್ ಬೆಡ್ ದಪ್ಪವಾಗಿ ಸಂಗ್ರಹವಾಗಿದೆ. ಉತ್ತರದ ಹಾಲ್ನ ನೆಲದಲ್ಲಿ ೧-೨ ಮೀ. ಆಳದಲ್ಲಿ ಸಿಂಕ್ಹೋಲ್ನಂತಹ ಟೊಳ್ಳು ಭಾಗ ಕಾಣಿಸಿತು; ಅದು ಉತ್ತರದ ಬಾಗಿಲಿನ ಬಳಿ ಇತ್ತು. ಮಧ್ಯದ ಹಾಲ್ನ ಪ್ಯಾಸೇಜಿಗೆ ತಾಗಿದ ಉತ್ತರದ ಹಾಲ್ನಲ್ಲಿ ಒಂದು ಆಳವಾದ ಇಕ್ಕಟ್ಟಾದ ಟೊಳ್ಳು ಕಾಣಿಸಿತು. ದಕ್ಷಿಣ ಭಾಗದ ಬಾಗಿಲಿನ ಬದಿಗೆ ತಾಗಿದಂತೆ ೪-೬ ಮೀ. ಆಳದಲ್ಲಿ ಆಯತಾಕಾರದ ಪ್ಯಾಸೇಜ್ ಇದೆ. ಅದು ಬೇಸ್ಮೆಂಟ್ (ತಳಹಂತ) ಮಟ್ಟದಲ್ಲಿದೆ. ಉತ್ತರ ಕಾರಿಡಾರ್ನಲ್ಲಿ, ಉತ್ತರ ಹಾಲ್ನ ಉತ್ತರದಲ್ಲಿ ಮತ್ತು ಸೆಲ್ಲಾರ್ ಎನ್-೫ರ ಪಶ್ಚಿಮದಲ್ಲಿ ೩ ಮೀ. ಆಳದಲ್ಲಿ ಅಂಥದೇ ಓಪನಿಂಗ್ ಇದೆ.
ಮತ್ತೆ ಪಶ್ಚಿಮಗೋಡೆ
ಎಫ್) ಕೋರ್ಟ್: ಪಶ್ಚಿಮಗೋಡೆಯ ಕೆಳಭಾಗದಲ್ಲಿ ಜಿಪಿಆರ್ ಸರ್ವೆ ನಡೆಸಬೇಕು.
ಉತ್ತರ: ಹಾಲಿ ಕಟ್ಟಡದ ಪಶ್ಚಿಮಗೋಡೆಯ ಉದ್ದಕ್ಕೂ ಹೈದರಾಬಾದ್ನ ಎನ್ಜಿಆರ್ಐ ತಜ್ಞರು ಜಿಪಿಆರ್ ಸರ್ವೆ ನಡೆಸಿದರು. ಪ್ರತಿಯೊಂದು ಹಾಲ್ಗೆ ತಾಗಿದಂತೆ ಪಶ್ಚಿಮಗೋಡೆಯ ಪ್ರದೇಶದಲ್ಲಿ ಮೂರು ಪ್ಲಾಟ್ಫಾರ್ಮ್ಗಳಿವೆ. ಉತ್ತರದ ಪ್ಲಾಟ್ಫಾರ್ಮ್ನಲ್ಲಿ ಎರಡು ಮೀಟರ್ ದಪ್ಪಕ್ಕೆ ಕಸ ಸೇರಿಕೊಂಡಿತ್ತು. ಎರಡನೇ ಸಲ ಜಿಪಿಆರ್ ಮಾಹಿತಿ ಪಡೆಯುವ ಸಲುವಾಗಿ ಅದನ್ನು ಮತ್ತೆ ತೆಗೆಸಲಾಯಿತು. ಅದಲ್ಲದೆ ಪಶ್ಚಿಮ ಗೋಡೆ ಕಡೆಯ ಪ್ಲಾಟ್ಫಾರ್ಮ್ಗಳಲ್ಲಿ ಗೋಡೆಗಳ ಅವಶೇಷ ತುಂಬಿತ್ತು. ಅದರ ಚಿತ್ರ (ಇಮೇಜ್) ತೆಗೆಯಲಾಗಿದೆ. ಅದು ಸಬ್ಸರ್ಫೇಸ್ ವಿಸ್ತರಣೆಗೆ ಸಂಬಂಧಿಸಿದ್ದು.
ಪಶ್ಚಿಮಗೋಡೆಯನ್ನು ಆಧರಿಸಿ ಮೂರು ಸ್ತರದ ನಿರ್ಮಾಣವಿದೆ. ಲೇಯರ್-೧ ತುಂಬ ತೆಳುವಾಗಿದೆ; ಮತ್ತು ಕೆಲವೆಡೆ ಇಲ್ಲ. ಲೇಯರ್-೨ ಕೆಳಗೆ ಸುಮಾರು ಎರಡೂವರೆ ಮೀಟರ್ವರೆಗೆ ವಿಸ್ತರಿಸಿದೆ. ಅದರ ಕೆಳಗೆ ಬಹುತೇಕ ಸರಿಯಾದ ಆಕಾರವಿಲ್ಲದ ಲೇಯರ್-೩ ಇದೆ. ಎರಡು ಕಮಾನಿನ ಪ್ರವೇಶದ್ವಾರ ಸೇರಿದಂತೆ ಹಿಂದಿನ ಕಟ್ಟಡದ (ದೇವಾಲಯ) ಗೋಡೆಗಳು ೪ ಮೀ. ಆಳದವರೆಗೆ ವಿಸ್ತರಿಸಿದ್ದು ಲೇಯರ್-೩ರಲ್ಲಿ ತಳವೂರಿವೆ.
ಇತರ ಅಂಚಿನ ಗೋಡೆಗಳು ಕೆಳಗೆ ೪ ಮೀ. ಆಳದವರೆಗೆ ವಿಸ್ತರಿಸಿದ್ದು, ಲೇಯರ್-೩ರಲ್ಲಿ ತಳವೂರಿವೆ. ಮಧ್ಯದ ಕಮಾನಿನ ಮಧ್ಯದ ಗುಮ್ಮಟದಂತಹ ಪ್ಲಾಟ್ಫಾರ್ಮ್ ಮಣ್ಣಿನ ಕೆಳಗೆ (ಸಬ್ಸಾಯಿಲ್) ಕೇವಲ ಅರ್ಧ ಮೀಟರ್ವರೆಗಿದೆ. ಮೂರನೇ ಲೇಯರ್ನ ಪ್ರತಿಬಿಂಬಗಳನ್ನು ಪ್ರೊಫೈಲ್ನಲ್ಲಿ ಮಾತ್ರ ಕಾಣಬಹುದು.
ಜಿ) ಕೋರ್ಟ್: ಎಲ್ಲ ಸೆಲ್ಲಾರ್ಗಳ ನೆಲದ ಕೆಳಗೆ ಜಿಪಿಆರ್ ಸರ್ವೆ ನಡೆಸಬೇಕು; ಅಗತ್ಯವಾದರೆ ಉತ್ಖನನ ನಡೆಸಬೇಕು. (ಹಲವು ಕಡೆ ಉತ್ಖನನಕ್ಕೆ ಸೂಚಿಸಿದ್ದು, ಮೇಲಿನ ನ್ಯಾಯಾಲಯ ಎಲ್ಲದಕ್ಕೂ ತಡೆಹಾಕಿತು).
ಉತ್ತರ: ಎಲ್ಲ ಸೆಲ್ಲಾರ್ಗಳ (ಎಸ್-೨, ೩, ಎನ್-೨, ೩, ೪, ೫) ಕೆಳಗೆ ಜಿಪಿಆರ್ ಸಮೀಕ್ಷೆ ನಡೆಸಲಾಯಿತು. ಅದರಿಂದ ತಿಳಿದುಬಂದ ಅಂಶವೆಂದರೆ, ಪ್ಲಾಟ್ಫಾರ್ಮ್ ಪ್ರದೇಶವು ಸೆಲ್ಲಾರ್ಗಳ ಮೇಲ್ಮಹಡಿ (ರೂಫ್) ಆಗಿದೆ. ಅದರಲ್ಲಿ ಲೇಯರ್-೨ರ ಭಗ್ನಾವಶೇಷಗಳ (ಡೆಬ್ರಿ) ರಾಶಿ ಹಾಕಲಾಗಿದೆ. ಲೇಯರ್-೨ರ ಅವಶೇಷಗಳನ್ನು ಕಾಲಾನಂತರದಲಿ ತುಂಬಿದ್ದು ಎನ್ನುವ ಅಂಶ ಕೂಡ ತಿಳಿದುಬಂತು.
ಅಡಗಿಸಿಟ್ಟ ಬಾವಿ
ಇಲ್ಲಿಯ ಸೆಲ್ಲಾರ್ಗಳು ಎರಡು ಪ್ರಧಾನ ಆಯಾಮವನ್ನು ಹೊಂದಿವೆ. ದಕ್ಷಿಣದ ಸೆಲ್ಲಾರ್ ಎಸ್-೧ರ ಪೂರ್ವಭಾಗವು ೪ ಮೀ. ನಷ್ಟು ದಪ್ಪವಿದೆ. ಅಲ್ಲಿ ೨ ಮೀ. ಅಗಲದ ಕಾರಿಡಾರ್ ಇದೆ; ಮತ್ತು ಅಲ್ಲೊಂದು ಬಾವಿಯನ್ನು ಬಚ್ಚಿಡಲಾಗಿದೆ. ಸೆಲ್ಲಾರ್-೧ರ ಒಳಗಿನ ಅಡಗಿಸಿಟ್ಟ ಈ ಬಾವಿ ೨ ಮೀ. ಅಗಲವಿದೆ. ದಕ್ಷಿಣ ಭಾಗದ ಕಡೆಗೆ ಅದಕ್ಕೆ ಹೆಚ್ಚುವರಿಯಾಗಿ ಒಂದು ಮೀಟರ್ ಅಗಲದ ಲಂಬಾಕಾರದ ಓಪನಿಂಗ್ ಇದೆ. ಸೆಲ್ಲಾರ್ ಎಸ್-೨ರ ಗೋಡೆಗಳನ್ನು ಒಳಗೆ ಮತ್ತು ಹೊರಗಿನಿಂದ ಜಿಪಿಆರ್ ಸ್ಕ್ಯಾನಿಂಗ್ ಮಾಡಿದಾಗ ಅಲ್ಲಿ ಅಡಗಿಸಿಟ್ಟ ಬಾವಿ ಇದ್ದುದು ತಿಳಿಯಿತು. ಅಡಗಿಸಿಟ್ಟ ಬಾವಿಗೆ ತಾಗಿರುವ ಎಸ್-೨ರ ನೆಲಮಟ್ಟದಲ್ಲಿ (base) ಏರು ತಗ್ಗಿದೆ; ಅಲ್ಲಿ ಮಗುಚಿಹಾಕಿದ ಏರುಪೇರಾದ ಮಣ್ಣು ಕಾಣಿಸುತ್ತದೆ. ಅದು ಮೂರರಿಂದ ೫ ಮೀ. ಆಳದವರೆಗೂ ಇದೆ. (ಲೇಯರ್-೩ ಮಟ್ಟದವರೆಗೂ). ಅದು ತಳಮಟ್ಟದ ಕೆಳಗೆ ನೀರು ಹರಿಯುವ ಜಾಗವಾಗಿತ್ತು ಎನ್ನಬಹುದು. ಇದರಿಂದ ತಿಳಿಯುವ ಅಂಶವೆಂದರೆ, ಬಚ್ಚಿಟ್ಟ ಈ ಬಾವಿ ಹಿಂದೆ ಬಳಕೆ ಆಗುತ್ತಿತ್ತು.
ಎಚ್) ಕೋರ್ಟ್: ಕಟ್ಟಡದಲ್ಲಿ ಸಿಕ್ಕಿದ ಮಾನವನಿರ್ಮಿತ ವಸ್ತುಗಳನ್ನು ಅವು ಒಳಗೊಂಡಿರುವ ಅಂಶಗಳ ಸಹಿತ ಪಟ್ಟಿ ಮಾಡಬೇಕು. ಅವುಗಳ ಬಗ್ಗೆ ವೈಜ್ಞಾನಿಕ ಶೋಧ ನಡೆಸಬೇಕು. ಆ ವಸ್ತುಗಳ ಕಾಲ ಮತ್ತು ಸ್ವರೂಪವನ್ನು ತಿಳಿಯಲು ಡೇಟಿಂಗ್ ನಡೆಸಬೇಕು.
ಉತ್ತರ: ನ್ಯಾಯಾಲಯದ ಆದೇಶದಂತೆ ಪುರಾತತ್ತ್ವ ಇಲಾಖೆಯು ಇಡೀ ಕಟ್ಟಡ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿತು. ಆಗ ಸಿಕ್ಕಿದ ಎಲ್ಲ ವಸ್ತುಗಳನ್ನು ಸಂಗ್ರಹಿಸಿ ಪಟ್ಟಿ ಮಾಡಿ ದಾಖಲಿಸಲಾಯಿತು. ಅಲ್ಲಿ ಸಿಕ್ಕಿದ ವಸ್ತುಗಳಲ್ಲಿ ಶಾಸನಗಳು, ಶಿಲ್ಪಗಳು, ನಾಣ್ಯಗಳು, ಮಡಕೆ ಚೂರುಗಳು, ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ತುಂಡುಗಳು, ಟರ್ರಾಕೋಟಾ, ಲೋಹ ಮತ್ತು ಗ್ಲಾಸ್ನ ವಸ್ತುಗಳೆಲ್ಲ ಇವೆ. ಅವುಗಳಿಗೆ ಪ್ರಾಥಮಿಕ ಉಪಚಾರ ನೀಡಿ ದಾಖಲಿಸಲಾಯಿತು. ನ್ಯಾಯಾಲಯದ ಆದೇಶದಂತೆ ಅವುಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಗಿದೆ.
ಐ) ಕೋರ್ಟ್: ಕಟ್ಟಡದ ಕಂಬಗಳು ಮತ್ತು ಕಂಬದ ಸುತ್ತಲಿನ (ಪ್ಲಿಂತ್) ಸ್ಥಳದ ಡೇಟಿಂಗ್ (ಕಾಲಪರೀಕ್ಷೆ) ನಡೆಸಿ ಈಗ ಇರುವ ಕಟ್ಟಡದ ಕಾಲ ಮತ್ತು ಸ್ವರೂಪಗಳನ್ನು ತಿಳಿಯಬೇಕು.
ಕಮಲದ ಕೆತ್ತನೆ
ಉತ್ತರ: ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ಹಾಲಿ ಕಟ್ಟಡದ ಕಂಬಗಳ ಬಗ್ಗೆ ವೈಜ್ಞಾನಿಕವಾಗಿ ವ್ಯವಸ್ಥಿತ ಅಧ್ಯಯನ ನಡೆಸಲಾಯಿತು. ಕಂಬಗಳ ಸೂಕ್ಷ್ಮ ಅಧ್ಯಯನವನ್ನು ನಡೆಸಿದಾಗ ಕಂಬಗಳಲ್ಲಿ ಚೌಕಾಕಾರದ ಭಾಗವಿದ್ದು, ಅಲ್ಲಿ ಮಧ್ಯಭಾಗದಲ್ಲಿ ಕಮಲದ ಕೆತ್ತನೆ ಕಂಡುಬಂತು. ಅಂತಹ ಕೆತ್ತನೆಗಳು ಹಿಂದಿನ ದೇವಾಲಯಕ್ಕೆ ಸೇರಿದಂಥವು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಗಟ್ಟಿಯಾಗಿದ್ದ ಆ ಕಂಬಗಳನ್ನು ಹಾಲಿ (ಮಸೀದಿ) ಕಟ್ಟಡದಲ್ಲಿ ಬಳಸಿದರು. ಅದಕ್ಕೆ ಮುನ್ನ ಹೂವಿನ ವಿನ್ಯಾಸದ ಬಳಿಯಿದ್ದ ವ್ಯಾಲವನ್ನು ತೆಗೆದುಹಾಕಲಾಯಿತು. ಈ ಅಭಿಪ್ರಾಯವನ್ನು ಅಂಥದೇ ಬೇರೆ ಎರಡು ಗೋಡೆಗಂಬಗಳು (pilaster) ಕೂಡ ಬೆಂಬಲಿಸಿವೆ. ಅವು ಪಶ್ಚಿಮ ಚೇಂಬರ್ನ ಉತ್ತರ ಮತ್ತು ದಕ್ಷಿಣದ ಗೋಡೆಯಲ್ಲಿ ಇದ್ದಂಥವು.
ಕಂಬದ ಬುಡದ ಜಾಗದ (plinth) ಮೇಲೆ ದಪ್ಪದ ಪ್ಲಾಸ್ಟರ್, ಕಸ-ಕಡ್ಡಿ, ಮಣ್ಣು, ವಿವಿಧ ವಸ್ತುಗಳ ಅವಶೇಷಗಳು, ಅನಂತರದ ಪ್ಲಾಟ್ಫಾರ್ಮ್ನ ಕಸ ಎಲ್ಲವೂ ಇದ್ದವು. ಪಶ್ಚಿಮ ಭಾಗದಿಂದ ಅದನ್ನೆಲ್ಲ ತೆಗೆದ ಮೇಲೆ ಒಂದು ಸಣ್ಣ ಪ್ಲಿಂತ್ನ ಭಾಗ ಕಾಣಿಸಿತು. ಆ ಜಾಗ ಏರುತಗ್ಗಾಗಿದೆ. ಪ್ಲಿಂತ್ನ ಎತ್ತರ ಬೇರೆಬೇರೆ ಕಡೆ ಬೇರೆಬೇರೆ ಇದೆ.
ಜೆ) ಕೋರ್ಟ್: ವೈಜ್ಞಾನಿಕ ವಿಧಾನವನ್ನು ಅನುಸರಿಸುವ ಮೂಲಕ ಹಾಲಿ ಕಟ್ಟಡದ ಕಾಲ ಮತ್ತದರ ಸ್ವರೂಪವನ್ನು ತಿಳಿಸಬೇಕು. ಅದಕ್ಕೆ ಡೇಟಿಂಗ್ ಮತ್ತಿತರ ವೈಜ್ಞಾನಿಕ ವಿಧಾನವನ್ನು ಅನುಸರಿಸಬಹುದು; ಅಗತ್ಯವಾದಲ್ಲಿ ಜಿಪಿಆರ್ ಸಮೀಕ್ಷೆ ನಡೆಸಬಹುದು.
ಉತ್ತರ: ನ್ಯಾಯಾಲಯದ ಆದೇಶದಂತೆ ಎಎಸ್ಐ ಕಟ್ಟಡದ ನಿರ್ಮಾಣ ಯಾವಾಗ ಆಯಿತೆಂಬ ಬಗ್ಗೆ ಅಧ್ಯಯನ ನಡೆಸಿತು. ನಡೆಸಿದ ಅಧ್ಯಯನದ ಆಧಾರದಲ್ಲಿ ಹಾಲಿ ಕಟ್ಟಡದ ಬಗ್ಗೆ ಅಭಿಪ್ರಾಯ ನೀಡಲಾಯಿತು. ಹೊರಗೆ ಕಾಣುವ ಆಕಾರಗಳು, ಕಟ್ಟಡದಲ್ಲಿ ಸಿಕ್ಕಿದ ವಸ್ತುಗಳ ಆಧಾರದಿಂದ ಯಾವ ತೀರ್ಮಾನಕ್ಕೆ ಬರಬಹುದೆಂದರೆ, ಈಗಿನ ಕಟ್ಟಡವನ್ನು ನಿರ್ಮಿಸುವ ಮೊದಲು ಅಲ್ಲೊಂದು ಬೃಹತ್ ಹಿಂದೂ ದೇವಾಲಯವಿತ್ತು. ಆ ದೇವಾಲಯದ ಮಧ್ಯಭಾಗದಲ್ಲಿ ಒಂದು ದೊಡ್ಡ ಚೇಂಬರ್ ಇತ್ತು. ಈಗಿನ ಕಟ್ಟಡ ಮತ್ತು ಲಭ್ಯ ಸಾಕ್ಷ್ಯಗಳಿಂದ ಹೇಳಬಹುದಾದ ಅಂಶವೆಂದರೆ ಆ ಕಟ್ಟಡದ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮಗಳಲ್ಲಿ ಚೇಂಬರ್ಗಳಿದ್ದವು. ಉತ್ತರ, ದಕ್ಷಿಣ ಮತ್ತು ಪಶ್ಚಿಮದ ಚೇಂಬರ್ಗಳ ಅವಶೇಷಗಳನ್ನು ಈಗ ಕೂಡ ನೋಡಬಹುದು. ಆದರೆ ಪೂರ್ವದ ಚೇಂಬರ್ನ ಅವಶೇಷ ಕಾಣಿಸುತ್ತಿಲ್ಲ. ಅದರಲ್ಲಿ ಮಾಡಿರಬಹುದಾದ ಬದಲಾವಣೆಯನ್ನು ಕೂಡ ಭೌತಿಕವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಈಗ ಪೂರ್ವದಲ್ಲಿ ಕಲ್ಲಿನ ಫ್ಲೋರಿಂಗ್ ಇರುವ ದೊಡ್ಡದಾದ ಪ್ಲಾಟ್ಫಾರ್ಮ್ ಇದೆ.
ಮುಚ್ಚಿದ ದ್ವಾರ
ದೇವಾಲಯದ ಮಧ್ಯಭಾಗದ ಚೇಂಬರ್ಗೆ ಪ್ರವೇಶವು ಪಶ್ಚಿಮದ ಕಡೆಯಿಂದ ಇತ್ತು. ಅದನ್ನು ಕಲ್ಲುಸಹಿತವಾದ ಗಾರೆಕೆಲಸದಿಂದ ಮುಚ್ಚಲಾಗಿದೆ. ಪಶ್ಚಿಮದ ಚೇಂಬರ್ ಉತ್ತರ ಮತ್ತು ದಕ್ಷಿಣದ ಚೇಂಬರ್ಗಳ ಸಂಪರ್ಕವನ್ನು ಹೊಂದಿತ್ತು.
ಮಧ್ಯ ಚೇಂಬರ್ನ ಮುಖ್ಯ ಪ್ರವೇಶದ್ವಾರವು ಪ್ರಾಣಿ ಪಕ್ಷಿಗಳ ಕೆತ್ತನೆ ಮತ್ತು ಆಭರಣದ ವಿನ್ಯಾಸವಿರುವ ತೋರಣದಿಂದ ಅಲಂಕೃತವಾಗಿತ್ತು. ಲಲಿತ್ ಬಿಂಬದ ಮೇಲೆ ಕೆತ್ತಿದ್ದ ಆಕೃತಿಯನ್ನು ತುಂಡರಿಸಲಾಗಿದೆ. ಅದರ ಒಂದು ಭಾಗವನ್ನು ಕಲ್ಲು, ಇಟ್ಟಿಗೆ, ಮೋರ್ಟಾರ್ಗಳಿಂದ ಮುಚ್ಚಲಾಗಿದೆ. ೧೭ನೇ ಶತಮಾನದಲ್ಲಿ ಔರಂಗಜೇಬ (೧೬೭೬-೭೭) ಈಗಿನ ಕಟ್ಟಡವನ್ನು ಕಟ್ಟಿಸುವಾಗ ಹಿಂದಿನ ಕಟ್ಟಡದ ಬಹಳಷ್ಟು ಭಾಗಗಳನ್ನು, ಕಂಬಗಳನ್ನು, ಗೋಡೆಗಂಬಗಳನ್ನು ಬಳಸಿಕೊಂಡರು. ಬದಲಾದ ಬಳಕೆಗೆ ತಕ್ಕಂತೆ ಅವುಗಳನ್ನು ಬದಲಿಸಿದರು.
ಕಟ್ಟಡದ ವಿಸ್ತರಣೆ ಮಾಡುವಾಗ ಪೂರ್ವ, ದಕ್ಷಿಣ ಮತ್ತು ಉತ್ತರಗಳಲ್ಲಿ ಹಲವು ಸೆಲ್ಲಾರ್ಗಳನ್ನು ಕಟ್ಟಿಸಿದರು. ಅದಲ್ಲದೆ ನಮಾಜಿಗೆ ಸೇರುವ ಜನರಿಗಾಗಿ ಹಳೆ ಕಟ್ಟಡದ ಮುಂಭಾಗದಲ್ಲಿ ದೊಡ್ಡ ಪ್ಲಾಟ್ಫಾರ್ಮ್ ಬೇಕಿತ್ತು. ಅದನ್ನು ನಿರ್ಮಿಸುವಾಗ ಪೂರ್ವದ ಚೇಂಬರ್ಗಳ ಸಾಲನ್ನು ಪ್ಲಾಟ್ಫಾರ್ಮ್ನಲ್ಲಿ ಸೇರಿಸಿಕೊಂಡರು. ಈ ಜಾಗವನ್ನು ಬದಲಿಸುವುದರೊಂದಿಗೆ ಕಾರಿಡಾರನ್ನು ಕೂಡ ಬದಲಿಸಿದರು. ಸೆಲ್ಲಾರ್ನ ಆ ಜಾಗಕ್ಕೆ ಉತ್ತರ ಮತ್ತು ದಕ್ಷಿಣದಿಂದ ಹೋಗಬಹುದು. ವೈಜ್ಞಾನಿಕ ಅಧ್ಯಯನ, ವಾಸ್ತುವಿನ ಅವಶೇಷಗಳು, ಅಲ್ಲಿ ದೊರೆತ ವಸ್ತುಗಳು, ಶಾಸನಗಳು, ಶಿಲ್ಪ, ಕಲೆ ಮುಂತಾಗಿ ಎಲ್ಲವೂ ಹೇಳುವುದು ಒಂದೇ – ಅಲ್ಲಿ ಹಿಂದೆ ದೊಡ್ಡ ದೇವಾಲಯವಿತ್ತು.
ಕೆ) ಕೋರ್ಟ್: ಕಟ್ಟಡದ ವಿವಿಧ ಭಾಗಗಳಲ್ಲಿ ಕಂಡುಬಂದ ವಿವಿಧ ವಸ್ತುಗಳ ಐತಿಹಾಸಿಕ ಮತ್ತು ಮತೀಯ ಮಹತ್ತ್ವದ ಬಗ್ಗೆ ಅಧ್ಯಯನ ನಡೆಸಬೇಕು; ಮತ್ತು ಸಮೀಕ್ಷೆಯನ್ನು ಕೂಡ ನಡೆಸಬೇಕು.
ಉತ್ತರ: ನ್ಯಾಯಾಲಯದ ಆದೇಶದ ಪ್ರಕಾರ ಭಾರತ ಪುರಾತತ್ತ್ವ ಇಲಾಖೆಯು ಇಡೀ ಕಟ್ಟಡ ಸಂಕೀರ್ಣ ಮತ್ತು ಸಮೀಕ್ಷೆಯ ವೇಳೆ ಅಲ್ಲಿ ಕಂಡುಬಂದ ವಿವಿಧ ವಸ್ತುಗಳ ಬಗ್ಗೆ ವೈಜ್ಞಾನಿಕ ಶೋಧ ನಡೆಸಿತು. ಹಾಳಾದ ಅಥವಾ ಸವೆದುಹೋದ ವಸ್ತುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಉಪಚಾರ ನೀಡಿ, ವ್ಯವಸ್ಥಿತವಾಗಿ ಪಟ್ಟಿ ಮಾಡಿ ಸುರಕ್ಷಿತವಾಗಿ ಇಡುವ ಬಗ್ಗೆ ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು.
ಎಲ್) ಕೋರ್ಟ್: ವಿವಾದಿತ ಸ್ಥಳದಲ್ಲಿರುವ ಕಟ್ಟಡಕ್ಕೆ ಯಾವುದೇ ರೀತಿಯಲ್ಲಿ ಹಾನಿ ಎಸಗಬಾರದು.
ಉತ್ತರ: ನ್ಯಾಯಾಲಯದ ಸೂಚನೆಗೆ ಅನುಗುಣವಾಗಿ ವಿವಾದಿತ ಸ್ಥಳದಲ್ಲಿರುವ ಕಟ್ಟಡಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಎಎಸ್ಐ ಎಚ್ಚರ ವಹಿಸಿತು. ಕಟ್ಟಡವು ಹಾನಿಗೊಳಗಾದ ಅಥವಾ ದುರ್ಬಲವಾಗಿದ್ದ ಕಡೆ ಸಮೀಕ್ಷಾಕಾರ್ಯವನ್ನು ನಡೆಸುವಾಗ ತಂಡವು ವಿಶೇಷ ಎಚ್ಚರ ವಹಿಸಿತು. ಕಟ್ಟಡದ ಕೆಲವು ಕಡೆ ರಾಶಿ ಬಿದ್ದಿದ್ದ ಕಸ, ಮಣ್ಣು, ಅವಶೇಷ ಮುಂತಾದವನ್ನು ಅಧ್ಯಯನದ ಸಲುವಾಗಿ ಎತ್ತುವಾಗ ಗೃಹಬಳಕೆಯ ಮತ್ತು ಉದ್ಯಾನದಲ್ಲಿ ಬಳಸುವ ಸಣ್ಣ ಉಪಕರಣಗಳನ್ನು ಮಾತ್ರ ಬಳಸಿದರು. ಒಟ್ಟಿನಲ್ಲಿ ಕಟ್ಟಡಕ್ಕೆ ಹಾನಿಯಾಗದಂತೆ ತುಂಬ ಎಚ್ಚರ ವಹಿಸಲಾಯಿತು.
* * *
ಸಮಾನಕಾಲದ ನಿರ್ಮಾಣ
ವಾರಾಣಸಿಯ ಗ್ಯಾನವಾಪಿ ಮಸೀದಿಯ ಆವರಣದಲ್ಲಿ ಕೈಗೊಂಡ ವೈಜ್ಞಾನಿಕ ಶೋಧಕಾರ್ಯದ ಸಂಬಂಧವಾಗಿ ಎಎಸ್ಐ ಕೆಲವು ಅಮೂಲ್ಯ ಅಭಿಪ್ರಾಯಗಳನ್ನು ನೀಡಿದೆ. ಅದರಲ್ಲಿ ಒಂದು ವಿವಾದಿತ ಕಟ್ಟಡದ ನಿರ್ಮಾಣದ ಅನುಕ್ರಮಣಿಕೆಯ ಕುರಿತಾಗಿದೆ. ಎನ್೩, ಎನ್೪, ಎನ್೫ ಮತ್ತು ಎಸ್೩ ಈ ಎಲ್ಲ ಸೆಲ್ಲಾರ್ಗಳು ಒಂದೇ ಕಾಲಕ್ಕೆ ಸೇರುತ್ತವೆ; ಮತ್ತು ಅವು ಒಂದೇ ಬಗೆಯ ವಾಸ್ತುಶಿಲ್ಪದ ಲಕ್ಷಣಗಳನ್ನು ಹೊಂದಿರುವ ಕಾರಣ ಅವುಗಳನ್ನು ಏಕಕಾಲದಲ್ಲಿ ನಿರ್ಮಿಸಿರಬಹುದು ಎಂದು ಎಎಸ್ಐ ವರದಿಯಲ್ಲಿ ಹೇಳಿದೆ.
ಅದೇ ರೀತಿ ಎನ್೧ ಮತ್ತು ಎಸ್೧ ಒಂದೇ ಕಾಲದವು ಎನಿಸುತ್ತದೆ; ಏಕೆಂದರೆ ಅವುಗಳನ್ನು ಕಟ್ಟಿಸಲು ವಿಶೇಷವಾದ ಲಖೌರಿ ಇಟ್ಟಿಗೆಗಳನ್ನು ಬಳಸಲಾಗಿದೆ. ಸೆಲ್ಲಾರ್ಗಳ ಎರಡು ಸಾಲು ಮಧ್ಯದಲ್ಲಿರುವ ತೆರೆದ ಜಾಗಕ್ಕೆ ತೆರೆದುಕೊಂಡಿವೆ. ಪಶ್ಚಿಮ ಮತ್ತು ಪೂರ್ವದಲ್ಲಿ ಎರಡು ಸಮಾನಾಂತರ ಸಾಲುಗಳಲ್ಲಿ ಸೆಲ್ಲಾರ್ಗಳಿವೆ.
ಮೇಲಿನ ನಿರ್ಮಾಣದ ಅನಂತರ ಸೆಂಟ್ರಲ್ ಹಾಲ್ಗಳು, ಎನ್೨ ಮತ್ತು ಎಸ್೨ ಸೆಲ್ಲಾರ್ಗಳನ್ನು ತೆರೆದ ಜಾಗದಲ್ಲಿ ನಿರ್ಮಿಸುವ ಮೂಲಕ ಸೆಲ್ಲಾರ್ಗಳ ಎರಡು ಸಾಲುಗಳಿಗೆ ಒಂದು ಘಟಕದ ರೂಪ ಕೊಡಲಾಯಿತು. ಎನ್೨ ಮತ್ತು ಎಸ್೨ ಸೆಲ್ಲಾರ್ಗಳನ್ನು ಕಟ್ಟಿಸಲು ಹಿಂದಿನ ಕಟ್ಟಡದ (ದೇವಾಲಯ) ವಸ್ತುಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಯಿತು. ಈ ಸೆಲ್ಲಾರ್ಗಳ ನಿರ್ಮಾಣದ ಬಗ್ಗೆ ಅನಂತರದ ಕಾಲದಲ್ಲಿ ಯೋಚಿಸಿದ ಕಾರಣ ಅವುಗಳ ನಿರ್ಮಾಣದಲ್ಲಿ ವಿವಿಧ ವಸ್ತುಗಳನ್ನು ತೇಪೆ ಹಾಕಿದಂತೆ ತೋರುತ್ತದೆ. ಪರಿಣಾಮವಾಗಿ ಕಟ್ಟಡದ ಭದ್ರತೆಯ ವಿಷಯವು ಮುಂದೆ ಬಂದು ಅದನ್ನು ಬಲಪಡಿಸುವ ಬಗ್ಗೆ, ಮುಖ್ಯವಾಗಿ ಚಾವಣಿಯನ್ನು ಸರಿಪಡಿಸುವ ಬಗ್ಗೆ ಕ್ರಮಕೈಗೊಳ್ಳಲಾಯಿತು – ಎಂದು ಎಎಸ್ಐ ಹೇಳಿದೆ.
ಹಂತಗಳಲ್ಲಿ ನಿರ್ಮಾಣ
ಮಸೀದಿಯ ಹಾಲಿ ಕಟ್ಟಡವನ್ನು ಪಶ್ಚಿಮ ಗೋಡೆಯ ಪೂರ್ವದ ಮುಖಕ್ಕೆ ಎದುರಾಗಿ ಕಟ್ಟಿಸಲಾಯಿತು. ಶಾಸನದ ಪ್ರಕಾರ ಮೊಘಲರ ದೊರೆ ಔರಂಗಜೇಬ ೧೬೭೬-೭೭ರಲ್ಲಿ ಈ ಮಸೀದಿಯನ್ನು ಕಟ್ಟಿಸಿದ. ಎರಡನೇ ಹಂತದ ನಿರ್ಮಾಣ-ರಿಪೇರಿ ಕಾರ್ಯವು ೧೭೯೨-೯೩ರಲ್ಲಿ ನಡೆದಿರಬೇಕು. ಆಗ ಕಾರಿಡಾರ್ ಮತ್ತಿತರ ಭಾಗಗಳನ್ನು ಕಟ್ಟಿಸಲಾಯಿತು.
ಅಂಗಳ(ಸಹನ್)ದ ನಿರ್ಮಾಣವು ಎರಡನೇ ಹಂತದಲ್ಲಿ ನಡೆಯಿತು. ಅದಕ್ಕೆ ತಳಪಾಯವನ್ನು ಸೆಲ್ಲಾರ್ಗಳಾದ ಎನ್೪ ಮತ್ತು ಎನ್೫ರ ಮೂಲಕ ಕೆಳಭಾಗದಲ್ಲಿ ಒದಗಿಸಲಾಯಿತು. ದಕ್ಷಿಣ ಭಾಗದಲ್ಲೂ ಅಂತಹ ಸೆಲ್ಲಾರ್ಗಳು ಇದ್ದವೆಂದು ಜಿಪಿಆರ್ ಸರ್ವೆಯಿಂದ ತಿಳಿದುಬಂದಿದೆ.
ಪೂರ್ವಭಾಗದ ತೆರೆದ ಪ್ಲಾಟ್ಫಾರ್ಮ್ನ ವಿಸ್ತರಣೆ ಕೂಡ ಸಾಕಷ್ಟು ಕಾಲಾವಧಿಯಲ್ಲಿ ಹಂತಗಳಲ್ಲಿ ನಡೆಯಿತು. ಉತ್ತರ-ದಕ್ಷಿಣವಾಗಿ ನಿರ್ಮಾಣಗೊಂಡ ಎನ್೩ ಮತ್ತು ಎಸ್೩, ಎನ್೪ ಮತ್ತು ಎನ್೫ಕ್ಕೆ ಸಮಕಾಲೀನವಾಗಿವೆ. ಅವುಗಳ ನಿರ್ಮಾಣಶೈಲಿ ಒಂದೇ ರೀತಿ ಇದೆ. ಇದರಿಂದ ತಿಳಿಯುವ ಅಂಶವೆಂದರೆ, ಪೂರ್ವಭಾಗದ ಪ್ಲಾಟ್ಫಾರ್ಮ್, ಸೆಲ್ಲಾರ್ ಎನ್೩ ಮತ್ತು ಎಸ್೩ ಅವುಗಳ ಅಂಚಿನವರೆಗೂ ವಿಸ್ತರಿಸಿದೆ. ಈ ಸೆಲ್ಲಾರ್ಗಳು ಪೂರ್ವದಲ್ಲಿ ನೆಲಮಟ್ಟದಲ್ಲಿ ತೆರೆದುಕೊಂಡಿವೆ.
ಮುAದಿನ ಕಾಲಘಟ್ಟದಲ್ಲಿ ಪೂರ್ವದ ಪ್ಲಾಟ್ಫಾರ್ಮ್ ಮತ್ತಷ್ಟು ವಿಸ್ತರಣೆಗೊಂಡಿತು. ಸೆಲ್ಲಾರ್೧, ೩ ಮತ್ತು ಎಸ್ ೧, ೩ – ಅವುಗಳ ತೆರೆದ ಜಾಗವನ್ನು ಬಳಸಿಕೊಳ್ಳಲಾಯಿತು. ಈ ಕಾರಣದಿಂದ ಮಧ್ಯದ ಸೆಲ್ಲಾರ್ಗಳಾದ ಎನ್೨ ಮತ್ತು ಎಸ್೨ ಅವುಗಳ ಚಾವಣಿಯನ್ನು ಕಂಬ ಹಾಕಿ ಮೇಲಕ್ಕೆತ್ತಲಾಯಿತು. ಹೀಗೆ ಮಸೀದಿಯ ಅಗತ್ಯಕ್ಕೆ ಬೇಕಾದಂತೆ ವಿಸ್ತರಣೆ, ರಿಪೇರಿಗಳು ನಡೆಯುತ್ತ ಹೋದವು.
(ಸಶೇಷ)
ಶಿಲಾಶಾಸನಗಳ ಅಪೂರ್ವ ದಾಖಲೆ
ಗ್ಯಾನವಾಪಿ ಮಸೀದಿಯ ಆವರಣದಲ್ಲಿ ವೈಜ್ಞಾನಿಕ ಶೋಧ ನಡೆಸಿದ ಪುರಾತತ್ತ÷್ವ ಇಲಾಖೆಗೆ (ಎಎಸ್ಐ) ಬಹಳಷ್ಟು ಶಾಸನಗಳು ಗಮನಕ್ಕೆ ಬಂದವು. ದೇವನಾಗರಿ ಲಿಪಿಯಲ್ಲಿದ್ದ ಸಂಸ್ಕೃತ ಮತ್ತು ಉತ್ತರಭಾರತದ ಸ್ಥಳೀಯ ಶಾಸನಗಳಲ್ಲದೆ ತೆಲುಗು, ಕನ್ನಡ ಮೊದಲಾದ ದಕ್ಷಿಣಭಾರತದ ಭಾಷೆ-ಲಿಪಿಗಳ ಶಾಸನಗಳು ಕೂಡ ಕಂಡುಬAದವು. ಈ ಶಾಸನಗಳು ೧೨ರಿಂದ ೧೭ನೇ ಶತಮಾನದವರೆಗಿನ ಕಾಲಘಟ್ಟದವಾಗಿವೆ. ಹಳೆಯ ಶಾಸನಗಳನ್ನು ಹೊಸ ಕಟ್ಟಡದಲ್ಲಿ ಉಳಿಸಿಕೊಳ್ಳಲಾಗಿದೆ. ಅದರಿಂದ ಹಿಂದೆ ಇದ್ದ (ದೇವಾಲಯದ) ಕಟ್ಟಡವನ್ನು ನಾಶಪಡಿಸಿ ಅಥವಾ ಬದಲಾಯಿಸಿ ಬಳಸಿಕೊಂಡದ್ದು ಸ್ಪಷ್ಟವಾಗುತ್ತದೆ.
ಶೋಧಕಾರ್ಯಕ್ಕೆ ಒಳಪಡಿಸಿದ ಕಟ್ಟಡದ ವಿವಿಧ ಭಾಗಗಳಲ್ಲಿ ೩೨ ಶಿಲಾಶಾಸನಗಳು ಎಎಸ್ಐಗೆ ದೊರೆತವು. ಇವುಗಳನ್ನು ಓದಲು ಸಾಧ್ಯವಾಯಿತು. ಇನ್ನೆರಡು ಶಿಲಾಶಾಸನಗಳು ಕಂಡುಬಂದವಾದರೂ ಅವು ಇದ್ದ ಜಾಗಕ್ಕೆ ತಲಪಲು ಸಾಧ್ಯವಾಗದ ಕಾರಣ ಅವುಗಳನ್ನು ಓದಲು ಆಗಲಿಲ್ಲ. ಅದರಲ್ಲಿ ಒಂದು ಶಾಸನವು ಮೆಟ್ಟಿಲಿನ ಕೆಳಗೆ ಸಿಕ್ಕಿಬಿದ್ದಂತಿದ್ದು, ಅದರ ಪ್ರತಿ ತೆಗೆಯಲು ಸಾಧ್ಯವಾಗಲಿಲ್ಲ. ಆದರೆ ಅದರ ವಿವರಗಳು ಓದಿದ ಇನ್ನೊಂದು ಶಾಸನದಂತೆಯೇ ಇವೆ. ಇನ್ನೊಂದು ಶಾಸನವು ಪ್ರವೇಶದ್ವಾರದ ರೂಫ್ನ ಕಲ್ಲು ಚಪ್ಪಡಿಯಲ್ಲಿ ಕಂಡುಬಂದಿದೆ. ಸ್ಲ್ಯಾಬ್ಗಳ ನಡುವಣ ಚಿಕ್ಕ ಅಂತರದಿಂದ ಅದರ ಕೆಲವು ಅಕ್ಷರಗಳನ್ನು ಮಾತ್ರ ಓದಲು ಸಾಧ್ಯವಾಗಿದೆ. ಅದರ ಪ್ರತಿ ತೆಗೆಯುವುದಕ್ಕಾಗಿ ಒಂದು ರಬ್ಬರ್ ಅಚ್ಚು (cast) ತಯಾರಿಸಲಾಯಿತು. ಅದರ ಅಕ್ಷರಗಳು ಗಢವಾಲ್ ಕಾಲಘಟ್ಟದ ಅಕ್ಷರಗಳನ್ನು ಹೋಲುತ್ತವೆಂದು ಎಎಸ್ಐ ಹೇಳಿದೆ.
ಪ್ರತಿ ತೆಗೆದ ೩೨ ಶಾಸನಗಳಲ್ಲಿ ಒಂದರ ಕಾಲ ಕ್ರಿ.ಶ. ೧೬೧೩ ಎಂದು ತಿಳಿದುಬಂದಿದೆ. ಇತರ ಎಲ್ಲ ಶಾಸನಗಳ ಕಾಲವನ್ನು ಅವುಗಳ ಲಿಪಿಯ ಆಧಾರದಲ್ಲಿ ಕಂಡುಹಿಡಿಯಲಾಗಿದೆ. ಒಂದು ಶಾಸನವು ೧೨ನೇ ಶತಮಾನದ್ದಾದರೆ, ಇನ್ನೊಂದು ೧೫ನೇ ಶತಮಾನದ್ದು. ಎರಡು ಶಾಸನಗಳು ೧೬ನೇ ಶತಮಾನಕ್ಕೆ ಸೇರಿದ್ದರೆ, ಉಳಿದ ೩೦ ಶಾಸನಗಳು ೧೭ನೇ ಶತಮಾನದ್ದಾಗಿವೆ.
ಹೆಚ್ಚಿನ ಶಾಸನಗಳು ಹಾನಿಗೊಂಡಿವೆ; ತುಂಡಾಗಿವೆ; ಅಕ್ಷರಗಳು ಸವೆದಿವೆ; ಅಥವಾ ಅವುಗಳಿಗೆ ಬಣ್ಣ ಬಳಿಯಲಾಗಿದೆ. ಅವುಗಳನ್ನು ಓದಲು ಕಷ್ಟವಾಗಿದೆ. ೩೪ರಲ್ಲಿ ಚೆನ್ನಾಗಿರುವುದು ಮೂರು ಮಾತ್ರ. ಅಲ್ಲಿ ಸಂಗ್ರಹಿಸಿದ ಮಾಹಿತಿಯ ಸಮಗ್ರ ವಿಶ್ಲೇಷಣೆಯಿಂದ ತಿಳಿದುಬರುವ ಅಂಶವೆಂದರೆ, ಮುಖ್ಯವಾಗಿ ಆ ಪವಿತ್ರ ಕ್ಷೇತ್ರಕ್ಕೆ ಆಗಮಿಸಿದ ಯಾತ್ರಿಕರು ಅಲ್ಲಿ ಶಾಸನವನ್ನು ಹಾಕಿಸಿರಬೇಕೆಂದು ನಂಬಲಾಗಿದೆ. ೧೫ರಿಂದ ೧೭ನೇ ಶತಮಾನದ ಅವಧಿಯ ಮೂರು ಶತಮಾನಗಳಲ್ಲಿ ಅಂತಹ ಶಾಸನಗಳನ್ನು ಹಾಕಿಸಲಾಯಿತು. ಶಾಸನದಲ್ಲಿ ಕಂಡುಬರುವ ಮಾಹಿತಿಗಳಿಂದ ಯಾತ್ರಿಕರ ನಾಲ್ಕು ಬಗೆಯ ಚಟುವಟಿಕೆಗಳು ವ್ಯಕ್ತವಾಗುತ್ತವೆ:
೧. ಕ್ಷೇತ್ರದ ಅಧಿದೇವತೆಗೆ ಶರಣಾಗುವುದು (ಐದು ಶಾಸನಗಳು)
೨. ದೈವಭಕ್ತಿಯ ಯಾವುದೋ ಕಾರ್ಯ ನಡೆಸುವುದು (ಮೂರು ಶಾಸನಗಳು)
೩. ನಂದಾದೀಪ ಬೆಳಗಿಸುವುದಕ್ಕೆ ವ್ಯವಸ್ಥೆ (ಒಂದು ಶಾಸನ)
೪. ವಿಶೇಷ ದೀಪ ಬೆಳಗಿಸುವುದು.
ಹೆಚ್ಚಿನ ಶಾಸನಗಳು ನಾಗರಿ ಲಿಪಿಯಲ್ಲಿದ್ದು, ಅಲ್ಲಿಯ ಸ್ಥಳೀಯ ಭಾಷೆ ಮತ್ತು ಸಂಸ್ಕೃತದಲ್ಲಿವೆ. ದಕ್ಷಿಣಭಾರತದ ತೆಲುಗು, ಕನ್ನಡ, ತಮಿಳು ಭಾಷೆಗಳಲ್ಲಿ ಇನ್ನು ಕೆಲವಿವೆ. ಕನ್ನಡ ಶಾಸನದಲ್ಲಿ ‘ದೊಡ್ಡರಸಯ್ಯನ, ನರಸಂಣನ ಬಿಂನಹ’ ಎನ್ನುವ ಪದಗಳಿವೆ. ಒಂದು ಅರೇಬಿಕ್-ಪರ್ಶಿಯನ್ ಶಾಸನ ಕೂಡ ಇದ್ದು, ಅದು ೧೭೯೨ರಲ್ಲಿ ನಡೆದ ಮಸೀದಿಯ ರಿಪೇರಿ, ವಿಸ್ತರಣೆಯ ಬಗ್ಗೆ ಹೇಳುತ್ತದೆ; ವ್ಯಕ್ತಿಗಳ ಹೆಸರುಗಳು ಮಾಹಿತಿಗಳು ತುಂಬ ದೊರೆಯುತ್ತವೆ.
ಶಾಸನಗಳಲ್ಲಿ ಜನಾರ್ದನ, ರುದ್ರ ಮತ್ತು ಉಮೇಶ್ವರ ಎನ್ನುವ ದೇವರ ಹೆಸರುಗಳು ಕಂಡುಬಂದಿವೆ. ಮೂರು ಶಾಸನಗಳಲ್ಲಿ ಮಹಾಮುಕ್ತಿ ಮಂಟಪ ಎನ್ನುವ ಪದವಿದ್ದು, ಪ್ರಾಚೀನ ಗ್ರಂಥಗಳ ಪ್ರಕಾರ ಇದು ಶಿವಕ್ಷೇತ್ರ ಎಂಬುದನ್ನು ಅದು ತಿಳಿಸುತ್ತದೆಂದು ಅಭಿಪ್ರಾಯಪಡಲಾಗಿದೆ. ಶಿವ ದೇವಾಲಯವನ್ನು ಸಂಕೇತಿಸುವ ಇತರ ಪದಗಳು ಕೂಡ ಕಂಡುಬಂದಿವೆ.