
ಬೇಲಿಹಾಕಿದ ಜಾಗದೊಳಗೆ ಎಎಸ್ಐ ತಂಡವು ವೈಜ್ಞಾನಿಕ ಸರ್ವೆಯನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಉತ್ಖನನ ಮಾಡುವಂತಿರಲಿಲ್ಲ. ಪ್ರಕರಣದ ಎರಡೂ ಪಕ್ಷದವರ ಎದುರು ಸರ್ವೆ ನಡೆಯಿತು. ಜಿಲ್ಲಾಡಳಿತವು ತಂಡಕ್ಕೆ ಹೆಚ್ಚುವರಿ ರಕ್ಷಣೆಯನ್ನು ನೀಡಿತು. ಪ್ರಕರಣವು ಸೂಕ್ಷ್ಮವಾದ ಕಾರಣ ಎಎಸ್ಐ ಸಮೀಕ್ಷೆಗೆ ವ್ಯಾಪಕ ಪ್ರಚಾರ ಲಭಿಸಿತು. ತಂಡಕ್ಕೆ ಅದರ ಒತ್ತಡ ಇತ್ತು. ಆಗ ನ್ಯಾಯಾಲಯ ತಂಡದ ದೈನಂದಿನ ಕೆಲಸದ ಬಗ್ಗೆ ಯಾವುದೇ ವರದಿ ಬೇಡವೆಂದು ಮಾಧ್ಯಮಗಳಿಗೆ ಸೂಚನೆ ನೀಡಿತು. ಉತ್ಖನನ ಬೇಡ; ಮೇಲಿನ ಸಮೀಕ್ಷೆ ಸಾಕೆಂದು ನ್ಯಾಯಾಲಯ ಹೇಳಿದ ಕಾರಣ […]