
ಶಾಂತಿ, ತೃಪ್ತಿ ಮತ್ತು ಸಂತೋಷ – ಇವುಗಳು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರಬೇಕಾದ ಸಹಜವಾದ ಗುಣಗಳು. ಆದರೆ, ಮನುಷ್ಯನು ಬಾಹ್ಯಪ್ರಪಂಚದ ವಸ್ತುಗಳಲ್ಲಿ ಇವುಗಳನ್ನು ತಪ್ಪುಕಲ್ಪನೆಯಿಂದಾಗಿ ಹುಡುಕುತ್ತಾನೆ. ಮನಸ್ಸು ಯಾವ ವಸ್ತುವನ್ನು ಹಂಬಲಿಸುವುದೋ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ಅವಿರತವಾಗಿ ಬದಲಾಗುವ ಬಾಹ್ಯಪ್ರಪಂಚದ ಶಾಶ್ವತವಾದ ಸುಖವು ದೊರೆಯುತ್ತದೆ ಎಂದು ಆಶಾಭಾವನೆಯನ್ನು ಇಟ್ಟುಕೊಳ್ಳುತ್ತಾನೆ. ಪ್ರಾಪಂಚಿಕವಸ್ತುಗಳನ್ನು ಕಂಡು ಅವುಗಳನ್ನು ಪಡೆಯಲು ಪ್ರಯತ್ನಿಸಿದಾಗ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಅದು ದೊರೆತ ಕೂಡಲೇ, ಮನುಷ್ಯನು ಕ್ಷಣಿಕವಾದ ಸುಖವನ್ನು ಅನುಭವಿಸುತ್ತಾನೆ. ಮರುಭೂಮಿಯಲ್ಲಿ ಮರೀಚಿಕೆಯನ್ನು ಕಂಡು ಬಾಯಾರಿಕೆಯನ್ನು ತಣಿಸಿಕೊಳ್ಳುವ ಪ್ರಯತ್ನದಂತೆಯೇ ಈ […]