ಭಾರತೀಯರು ಬಹುವಾಗಿ ನಂಬುವ, ಆರಾಧಿಸುವ ರಾಮ, ಕೃಷ್ಣ, ಶಿವ ದೇಗುಲಗಳ ಮೇಲೆ ಮುಸ್ಲಿಂ ದಾಳಿಕೋರರು ಅನೇಕ ಬಾರಿ ದಾಳಿ ಮಾಡಿದ್ದಾರೆ. ಈ ಯಾವ ದಾಳಿಗಳೂ ಧರ್ಮಭಂಜಕ ಘಟನೆಯಾಗಿ ಸೆಕ್ಯುಲರ್ವಾದಿಗಳಿಂದ ಸ್ವೀಕೃತವಾಗುವುದಿಲ್ಲ. ಹಾಗೆಂದು ಅಂತಹವರ ಸಂಖ್ಯೆ ಹೆಚ್ಚಿನದ್ದೇನೂ ಆಗಿರಲಿಲ್ಲ.
ಹೈದರಾಬಾದ್ ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪೈಜಾನ್ ಮುಸ್ತಫಾ ಹಂಟಿಂಗ್ಟನ್ ಪೋಸ್ಟ್ನೊಂದಿಗೆ ಮಾತನಾಡುತ್ತ, ‘ಪ್ರಧಾನಿ ಎಲ್ಲಿಗೆ ಹೋಗಬೇಕು ಮತ್ತು ಹೋಗಬಾರದೆಂದು ಸಂವಿಧಾನವು ಹೇಳುವುದಿಲ್ಲ. ಪ್ರಧಾನಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಬಾರದೆಂದು ಸಂವಿಧಾನದ ಯಾವ ಪಠ್ಯದಲ್ಲೂ ಇಲ್ಲ’ ಎಂದು ಪ್ರಧಾನಿಗಳ ಧಾರ್ಮಿಕಶ್ರದ್ಧೆಯನ್ನು ಸಮರ್ಥನೆ ಮಾಡುತ್ತಾರೆ.
ಚಿಂತಕ ಪಂಕಜ್ ವೋರಾ ಆಗಸ್ಟ್ ೮, ೨೦೨೦ರಲ್ಲಿ ಬರೆದ ಲೇಖನದಲ್ಲಿ ‘ಸೆಕ್ಯುಲರಿಸಂ ಮುಖವಾಡ ಕಳಚಿ ಬಿದ್ದಿದೆ’ ಎಂದು ಬರೆಯುತ್ತಾರೆ.
ಅಂದು ನವೆಂಬರ್ ೯, ೨೦೧೯. ಭಾರತ ಮಾತ್ರವಲ್ಲದೆ ಜಗತ್ತು ಭಾರತದ ಸರ್ವೋಚ್ಚ ನ್ಯಾಯಾಲಯವು ಈ ನೆಲದ ಧರ್ಮಶ್ರದ್ಧೆಯ ಕುರಿತು, ಬಹುಸಂಖ್ಯಾತ ಹಿಂದೂಗಳ ಆದರ್ಶ ಶ್ರೀರಾಮಚಂದ್ರನ ಜನ್ಮಸ್ಥಾನದ ಬಗ್ಗೆ ನೀಡುವ ತೀರ್ಪಿನ ಕಡೆಗೆ ಮುಖಮಾಡಿ ನಿಂತಿತ್ತು.
ಈ ಪ್ರಕರಣ ಅದಾವ ಪರಿ ಪ್ರಾಮುಖ್ಯ ಪಡೆದಿತ್ತೆಂದರೆ, ಆ ತೀರ್ಪು ಒಟ್ಟು ಭಾರತದ ನಿಜರೂಪವನ್ನೇ ನಿರ್ಧಾರ ಮಾಡುವಂತಾಗಿತ್ತು. ಆ ಪ್ರಕರಣ ಕೇವಲ ಧಾರ್ಮಿಕ ನೆಲೆಗಟ್ಟಿಗೆ ಮಾತ್ರ ಸೀಮಿತವಾಗಿರಲಿಲ್ಲ.
ಈ ಮಣ್ಣಿನ ಪರಂಪರೆಯನ್ನೇ ಭಿನ್ನವಾಗಿ, ಹಿಮ್ಮುಖವಾಗಿ ಪ್ರತಿಪಾದಿಸುವ ಸೆಕ್ಯುಲರ್ವಾದಿಗಳಿಗೆ ಕಾನೂನಿನ ಕಣ್ಣಿನಿಂದ ರಾಮನ ಅಸ್ತಿತ್ವವನ್ನು ಅಳಿಸಿಬಿಡಬೇಕು, ಆ ಮುಖಾಂತರ ನೆಲ ಮೂಲದ ಸಿರಿವಂತ ಸಂಸ್ಕೃತಿಯನ್ನು ನಾಶ ಮಾಡಬೇಕು, ಬಲವಂತವಾಗಿ ಹೇರಲ್ಪಟ್ಟಿದ್ದ ಪಾಶ್ಚಾತ್ಯ ಸೆಕ್ಯುಲರಿಸಂ ಚಿಂತನೆಯನ್ನು ಯೋಜಿತವಾಗಿ ಪೂರ್ಣ ಭಾರತಕ್ಕೆ ಮುಟ್ಟಿಸುವ ಹುನ್ನಾರದ ಅಸ್ತ್ರವಾಗಿತ್ತು ಅದು.
ಮುಖ್ಯ ನ್ಯಾಯಾಧೀಶ ರಂಜನ್ ಗಗೋಯ್ ನೇತೃತ್ವದ ತಂಡ ತೀರ್ಪು ಪ್ರಕಟಿಸಿ ರಾಮನ ಅಸ್ತಿತ್ವ, ರಾಮಮಂದಿರದ ಅಸ್ತಿತ್ವ ಎರಡನ್ನೂ ಮಾನ್ಯ ಮಾಡಿತು. ಸಾಕ್ಷ್ಯಗಳ ಮುಖಾಂತರವೇ ಅಯೋಧ್ಯೆ ರಾಮನ ನೆಲ ಎನ್ನುವುದನ್ನು ಕಾನೂನಿನ ಅಕ್ಷರಗಳಲ್ಲಿ ಪ್ರಕಟಿಸಿತು. ೧೫೨೮ರಲ್ಲಿ ಅಕ್ರಮವಾಗಿ, ಬಲವಂತದ ಹೇರಿಕೆಯ ಮೂಲಕ ಮುಸ್ಲಿಂ ದಾಳಿಕೋರ ಬಾಬರನು ನಿರ್ಮಿಸಿದ್ದುದು ಬಾಬ್ರಿ ಮಸೀದಿಯು ಅಕ್ರಮ ಕಟ್ಟಡವೆಂದು ಸಾಬೀತಾದಂತಾಯಿತು.
ಸರ್ವೋಚ್ಚ ನ್ಯಾಯಾಲಯದ ತೀರ್ಪು ಸೆಕ್ಯುಲರ್ವಾದಿಗಳ ನರೇಶನ್(ಕಥನ)ನನ್ನು ಉಸಿರುಗಟ್ಟಿಸುವುದರ ಮುಖೇನ ಸೆಕ್ಯುಲರ್ವಾದದ ಮುಖವಾಡವನ್ನು ನೆಲಕ್ಕುರುಳಿಸಿತು. ೪೦೦ಕ್ಕೂ ಹೆಚ್ಚು ವರ್ಷಗಳ ಕಾಲ ನಿರಂತರವಾಗಿ ಮಂದಿರಕ್ಕಾಗಿ ಹೋರಾಟಗಳು ನಡೆಯುತ್ತಲೇ ಬಂದಿದ್ದವು. ಅದೆಷ್ಟೋ ಸಹಸ್ರ ಮಂದಿ ಪ್ರಾಣವನ್ನೂ ತೆತ್ತಿದ್ದರು.
ಬಹು ವಿಶಾಲವಾದ ಭರತಭೂಮಿಯಲ್ಲಿ ಮಂದಿರವನ್ನು ಉರುಳಿಸಿ ಮಸೀದಿ ಕಟ್ಟಬೇಕಾದ ಅನಿವಾರ್ಯತೆ ಏನಿತ್ತು? – ಅವಲೋಕಿಸುವಾಗ ಅಂಬೇಡ್ಕರರ ಒಂದು ಪ್ರಸಿದ್ಧ ಹೇಳಿಕೆ ನಮಗೆ ಎದುರಾಗುತ್ತದೆ.
ಜಗತ್ತಿನಲ್ಲೇ ಮುಸ್ಲಿಮರು ಸಮಾನತೆಯಿಂದ ಬಹುದೊಡ್ಡ ಘಾಸಿ ಹೊಂದಿದ್ದಾರೆ. ಅವರು ಸಮಾನತೆಯನ್ನು ಎಂದೂ ಬಯಸುವುದಿಲ್ಲ. ಸಾಮ್ರಾಜ್ಯ ವಿಸ್ತರಣೆಯ ಭಾಗವಾಗಿ ಮುಸ್ಲಿಂ ದಾಳಿಕೋರರು ಭಾರತದ ಭೂಭಾಗದ ಮೇಲೆ ಹಲವಾರು ಬಾರಿ ದಾಳಿ ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಇವರನ್ನು ಹೊರತುಪಡಿಸಿ ಭಾರತದ ಮೇಲೆ ದಾಳಿ ಮಾಡಿದ ಪರಕೀಯರಿಗಿಂತ ಮುಸ್ಲಿಂ ದಾಳಿಕೋರರ ಅಜೆಂಡಾ ಭಿನ್ನವಾದದ್ದು. ಅಧಿಕಾರದ ಜೊತೆಗೆ, ಸಂಪತ್ತಿನ ಜೊತೆಗೆ ಈ ನೆಲದ ಧರ್ಮಭಂಜನೆಗೇ ಅವರ ಅಜೆಂಡಾದ ಪಾಲು.
ಘಜ್ನಿಯು ಭಾರತದ ವಿರುದ್ಧ ತನ್ನ ಅಸಂಖ್ಯಾತ ದಾಳಿಗಳನ್ನು ‘ಪವಿತ್ರ ಯುದ್ಧ’ವೆಂದು ಭಾವಿಸಿದ್ದ. ವಿಗ್ರಹಗಳಿದ್ದ ದೇವಾಲಯಗಳನ್ನು ಕೆಡವಿ ಇಸ್ಲಾಂ ಸ್ಥಾಪಿಸಲೆಳಸಿದ. ನಗರಗಳನ್ನು ಆಕ್ರಮಿಸಿಕೊಂಡು ‘ವಿಗ್ರಹಾರಾಧಕ’ರನ್ನು ನಾಶಮಾಡುವ ಮೂಲಕ ಮುಸಲ್ಮಾನರನ್ನು ಸಂತೃಪ್ತಿಗೊಳಿಸಿದ. ತನ್ನ ದೇಶಕ್ಕೆ ಮರಳಿದ ನಂತರ ಇಸ್ಲಾಂಗಾಗಿ ಗಳಿಸಿದ ವಿಜಯಗಳ ಲೆಕ್ಕವನ್ನು ಘೋಷಿಸಿದ. ಅಲ್ಲದೆ, ಪ್ರತಿವರ್ಷವೂ ಹಿಂದುಗಳ ವಿರುದ್ಧ ‘ಪವಿತ್ರ ಯುದ್ಧ’ ಮಾಡುತ್ತೇನೆಂದು ಶಪಥ ಮಾಡಿದ.
ವಸ್ತುನಿಷ್ಠ ಸಂಶೋಧಕರಾದ ಅಂಬೇಡ್ಕರರು ದಾಖಲಿಸಿದ ಈ ಅಧಿಕೃತ ಹೇಳಿಕೆ ಅಯೋಧ್ಯೆಯ ರಾಮಮಂದಿರ ಧ್ವಂಸ ಪ್ರಕರಣವನ್ನು ವಿಸ್ತರಿಸಿ ಅವಲೋಕಿಸಲು ಪ್ರೇರಕವಾಗಿದೆ.
ಭಾರತದ ಮೇಲಿನ ಎಲ್ಲ ಮುಸ್ಲಿಂ ದಾಳಿಕೋರರ ಭಂಜಕ ಕೃತ್ಯಗಳನ್ನು ಸಾಮ್ರಾಜ್ಯ ‘ವಿಸ್ತರಣೆ’ಯ ಭಾಗವಾಗಿ ನೋಡಬೇಕೆಂದು ಸೆಕ್ಯುಲರ್ವಾದಿಗಳು ವಾದಿಸುತ್ತಲೇ ಬಂದಿದ್ದರು.
ಮುಸ್ಲಿಮರ ಮತ ವಿಸ್ತರಣೆ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ನಾಶಮಾಡುವ ಗುರಿಯನ್ನೂ ಹೊಂದಿತ್ತು ಎನ್ನುವ ವಾಸ್ತವವನ್ನು ಸೆಕ್ಯುಲರ್ವಾದಿಗಳು ಒಪ್ಪಲು ಸಿದ್ಧರೇ ಇರಲಿಲ್ಲ. ಕೇವಲ ಈ ನೆಲದೊಳಗೆ ನಿಂತ ಸೆಕ್ಯುಲರ್ವಾದಿಗಳು ಮಾತ್ರ ರಾಮಮಂದಿರದ ಆಂದೋಲನವನ್ನು ಹಿಮ್ಮೆಟ್ಟಿಸಲು ನೋಡುತ್ತಿರಲಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.
ಮಂದಿರದ ಪರವಾಗಿ ತೀರ್ಪು ಪ್ರಕಟವಾದ ನಂತರ ಪ್ರವೇಟ್ ಚುಂಜಾವರ್ ಎಂಬ ವಿದೇಶೀ ಬರಹಗಾರ ‘ಭಾರತದ ನಾಳೆ’ ಎಂಬ ಲೇಖನದಲ್ಲಿ ಪ್ರಧಾನಿ ಮೋದಿ ರಾಮಮಂದಿರದ ಭೂಮಿಪೂಜೆಯ ಸಮಾರಂಭದಲ್ಲಿ ಅತಿಥಿಯಾಗಿ ಕಾರ್ಯನಿರ್ವಹಿಸುವುದು ಭಾರತ ಜಾತ್ಯತೀತ ರಾಷ್ಟ್ರವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಎಂದು ಬರೆಯುತ್ತಾನೆ.
ಗ್ರಾö್ಯಂಡ್ ವೈಟ್ ಏಷ್ಯಾ ಇನ್ಸ್ಟಿಟ್ಯೂಟ್ ಆಫ್ ಮೆಲ್ಬೋರ್ನ್ನ ಸಂಶೋಧಕ “ರಾಮಮಂದಿರ ನಿರ್ಮಾಣವೂ ಗಾಯಗೊಂಡ ಬಹುಸಂಖ್ಯಾತರ ದ್ವೇಷದ ಮೇಲೆ ನಿರ್ಮಾಣವಾಗಲಿದೆ. ಬಹುಸಂಖ್ಯಾತರು ದೇಶದ ಧಾರ್ಮಿಕ ಅಲ್ಪಸಂಖ್ಯಾತರನ್ನು ಹಿಮ್ಮೆಟ್ಟಿಸಲು ತಮ್ಮ ಶಕ್ತಿಯನ್ನು ಬಳಸುತ್ತಾರೆ ಮತ್ತು ರಾಜ್ಯ ರಚನೆಗಳಲ್ಲಿ ಸಂವಿಧಾನಿಕ ನೀತಿಯನ್ನು ದೂರವಿಟ್ಟು ಬಹುಸಂಖ್ಯಾತ ಪ್ರಾಬಲ್ಯದ ಕಡೆಗೆ ಮರುಸಂಘಟಿಸುತ್ತಾರೆ” ಎಂದು ದಾಖಲಿಸುತ್ತಾನೆ.
ಹೀಗೆ ಗಡಿದಾಟಿದ ಮಗ್ಗಲುಗಳಲ್ಲೂ ಭಾರತದ ವಿರುದ್ಧ ಸೆಕ್ಯುಲರ್ ಷಡ್ಯಂತ್ರ ಘಟಿಸುತ್ತಲೇ ಬಂದಿದೆ.
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಹರಿದು ಹಂಚಿಹೋಗಿದ್ದ ಎಲ್ಲ ಪ್ರಾಂತಗಳ ನಡುವೆ ಸಮನ್ವಯತೆಯನ್ನು ತರುವಲ್ಲಿ, ಭಾರತವನ್ನು ಐಕ್ಯ ರಾಷ್ಟ್ರ ಮಾಡುವಲ್ಲಿ ಸರ್ದಾರ್ ಪಟೇಲರ ಪಾತ್ರ ಹಿರಿದಾದದ್ದು. ಅಂದಿನ ಪ್ರಧಾನಿ ನೆಹರುರವರ ತೀವ್ರತರದ ಸೆಕ್ಯುಲರ್ ಆಚರಣೆಗಳಿಗೆ ಸೆಡ್ಡುಹೊಡೆದು ಭಾರತವನ್ನು ಅದರ ಶ್ರದ್ಧೆಯ ಮೂಲದಲ್ಲೇ ಕಟ್ಟುವ ಕೆಲಸವನ್ನು ಪಟೇಲರು ಘನೀಭೂತವಾಗಿಯೇ ಮಾಡುತ್ತಾರೆ. ಗುಜರಾತಿನ ಸೋಮನಾಥ ದೇವಾಲಯವನ್ನು ಮರುಕಟ್ಟುವ ಶ್ರೇಷ್ಠ ಕಾರ್ಯವನ್ನು ಪಟೇಲರು ಮಾಡಿದಾಗ, ಅದರ ಉದ್ಘಾಟನೆಗೆ ತೆರಳಲು ಇದೇ ಸೆಕ್ಯುಲರ್ ಮುಖವಾಡವನ್ನೇ ನೆಹರು ಧರಿಸಿ ಕಾರ್ಯಕ್ರಮಕ್ಕೆ ಗೈರಾಗುತ್ತಾರೆ.
ಭಾರತೀಯರು ಬಹುವಾಗಿ ನಂಬುವ, ಆರಾಧಿಸುವ ರಾಮ, ಕೃಷ್ಣ, ಶಿವ ದೇಗುಲಗಳ ಮೇಲೆ ಮುಸ್ಲಿಂ ದಾಳಿಕೋರರು ಅನೇಕ ಬಾರಿ ದಾಳಿ ಮಾಡಿದ್ದಾರೆ. ಈ ಯಾವ ದಾಳಿಗಳೂ ಧರ್ಮಭಂಜಕ ಘಟನೆಯಾಗಿ ಸೆಕ್ಯುಲರ್ವಾದಿಗಳಿಂದ ಸ್ವೀಕೃತವಾಗುವುದಿಲ್ಲ. ಹಾಗೆಂದು ಅಂತವರ ಸಂಖ್ಯೆ ಹೆಚ್ಚಿನದ್ದೇನೂ ಆಗಿರಲಿಲ್ಲ.
ಹೈದರಾಬಾದ್ ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪೈಜಾನ್ ಮುಸ್ತಫಾ ಹಂಟಿಂಗ್ಟನ್ ಪೋಸ್ಟ್ನೊಂದಿಗೆ ಮಾತನಾಡುತ್ತ, ‘ಪ್ರಧಾನಿ ಎಲ್ಲಿಗೆ ಹೋಗಬೇಕು ಮತ್ತು ಹೋಗಬಾರದೆಂದು ಸಂವಿಧಾನವು ಹೇಳುವುದಿಲ್ಲ. ಪ್ರಧಾನಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಬಾರದೆಂದು ಸಂವಿಧಾನದ ಯಾವ ಪಠ್ಯದಲ್ಲೂ ಇಲ್ಲ’ ಎಂದು ಪ್ರಧಾನಿಗಳ ಧಾರ್ಮಿಕಶ್ರದ್ಧೆಯನ್ನು ಸಮರ್ಥನೆ ಮಾಡುತ್ತಾರೆ.
ಚಿಂತಕ ಪಂಕಜ್ ವೋರಾ ಆಗಸ್ಟ್ ೮, ೨೦೨೦ರಲ್ಲಿ ಬರೆದ ಲೇಖನದಲ್ಲಿ ‘ಸೆಕ್ಯುಲರಿಸಂ ಮುಖವಾಡ ಕಳಚಿ ಬಿದ್ದಿದೆ’ ಎಂದು ಬರೆಯುತ್ತಾರೆ.
“ಕಸಂ ರಾಮ್ ಕೀ ಖಾತೇ ಹೇಂ – ಮಂದಿರ್ ವಹೀಂ ಬನಾಯೇಂಗೇ” – ಹೇಳಿಕೆ ಸಾಕಾರವಾಗುವ ಸಂದರ್ಭದಲ್ಲಿ ಭೂಮಿಪೂಜೆಯನ್ನು ವಿರೋಧಿಸದಿರುವ ಸ್ಥಿತಿಗೆ ಕಾಂಗ್ರೆಸ್ ತಲಪಿದೆ. ಉದಾಹರಣೆಗೆ ಪ್ರಿಯಾಂಕಾ ವಾದ್ರಾ ಮುಕ್ತ ಮನಸ್ಸಿನಿಂದ ಸ್ವಾಗತಿಸಿದರೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಅಂದು ತಮ್ಮ ಮನೆಯಲ್ಲಿಯೇ ಹನುಮಾನ್ ಚಾಲೀಸಾ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಇದಕ್ಕೆಲ್ಲ ಕಾರಣ ಅವರ ಸೆಕ್ಯುಲರ್ ಮುಖವಾಡ ಕಳಚಿದುದೇ ಎಂದು ಉಲ್ಲೇಖಿಸಿದ್ದಾರೆ.
ರಾಮಮಂದಿರವನ್ನು ವಿರೋಧಿಸುವ ಭರದಲ್ಲಿ ತಮಗೆ ಶಕ್ತಿ ಕೊಟ್ಟ ಗಾಂಧಿಯವರನ್ನು ಮರೆತದ್ದು ಒಂದು ವೈಚಿತ್ರö್ಯ. ಸೆಕ್ಯುಲರ್ ಮಾನಸಿಕತೆಗಾಗಿ ಗಾಂಧಿಯನ್ನು ದೂರೀಕರಿಸಿದ್ದು ಒಂದು ಅಪಾಯಕರ ಬೆಳವಣಿಗೆ. ಗಾಂಧಿಯವರು ಸದಾ ‘ರಘುಪತಿ ರಾಘವ ರಾಜಾರಾಮ್’ ಎಂದು ರಾಮನ ಸ್ಮರಣೆ ಮಾಡುತ್ತಿದ್ದುದು ಸೆಕ್ಯುಲರ್ವಾದಿಗಳಿಗೆ ಮರೆತೇಹೋಗಿತ್ತು.
ರಾಮಜನ್ಮಭೂಮಿ ಸುಲಭವಾಗಿ ದಕ್ಕಿದ್ದಲ್ಲ, ಬದಲಿಗೆ ಲಕ್ಷಾಂತರ ಜನ ಹಿಂದೂಗಳು ಹೋರಾಟದ ಮೂಲಕ ದಕ್ಕಿಸಿಕೊಂಡದ್ದು.
ಒಮ್ಮೆ ೧೯೯೦ರ ದಶಕದಲ್ಲಿ ‘ಭಾರತವು ಹಿಂದೂ ರಾಷ್ಟ್ರವಾಗುತ್ತಿದೆಯೇ?’ ಎಂದು ಬಿಬಿಸಿ ಪತ್ರಕರ್ತರು ಆಡ್ವಾಣಿ ಅವರನ್ನು ಕೇಳಿದಾಗ, ‘ಬ್ರಿಟನ್ ಹೇಗೆ ಕ್ರಿಶ್ಚಿಯನ್ ದೇಶವಾಗಿ ಇದೆಯೋ, ಹಾಗೆ ಸಹಜವಾಗಿ ಭಾರತವು ಹಿಂದೂ ರಾಷ್ಟ್ರ’ ಎಂದು ಘಂಟಾಘೋಷವಾಗಿ ಹೇಳಿದ್ದರು.
ಮುಂದುವರಿದು, ಸೆಕ್ಯುಲರ್ವಾದಿಗಳು ಜೆರೆಮಿ ಬೆಂಥಾಮ್, ಜಾನ್ ಸ್ಟುವರ್ಟ್ ಮಿಲ್ರ ಯುಟಿಲಿಟೇರಿಯನ್ ಥಿಯರಿಯ ಸಿದ್ಧಾಂತದಂತೆ ಹೆಚ್ಚಿನ ಸಂಖ್ಯೆಯ ಜನರು ಹೆಚ್ಚಿನ ಸಂತೋಷವನ್ನು ಬಯಸುವ ಅಯೋಧ್ಯೆಯ ಕನಸನ್ನು ಒಪ್ಪುವುದಿಲ್ಲ ಎಂದು ಆರೋಪಿಸಿದ್ದರು.
೧೯೮೦ರ ಉತ್ತರಾರ್ಧದಲ್ಲಿ ಭಾರತದ ಸಾರ್ವಜನಿಕ ಪ್ರಸಾರಕ ದೂರದರ್ಶನವು ರಾಮಾಯಣವನ್ನು ೭೮ ವಾರಗಳ ಕಾಲ ಪ್ರಸಾರ ಮಾಡಿತು. ಇದು ಕೂಡ ಸೆಕ್ಯುಲರ್ವಾದಿಗಳಿಗೆ ಅತಿದೊಡ್ಡ ಪೆಟ್ಟು ಕೊಟ್ಟ ಸಂಗತಿಯಾಗಿ ಕಾಣಸಿಗುತ್ತದೆ.
ಅದಾಗಿಯೂ, ರಾಮಮಂದಿರದ ಪರವಾಗಿ ಸಂವಿಧಾನಬದ್ಧವಾಗಿ ನ್ಯಾಯಾಲಯ ತೀರ್ಪು ಕೊಟ್ಟ ನಂತರವೂ, ಓವೈಸಿ ಅಂತಹ ಮತಾಂಧ ಮುಸ್ಲಿಂ ನಾಯಕ ‘ಪ್ರಧಾನಿ ಭೂಮಿಪೂಜೆಗೆ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತಾಗುತ್ತದೆ’ ಎಂದು ಆರೋಪಿಸುತ್ತಾನೆ. ಸಮಾನತೆಯನ್ನೇ ಬಯಸದ ಮುಸ್ಲಿಂ ಮಾನಸಿಕತೆಗೆ ಈ ಹೇಳಿಕೆ ಕೈಗನ್ನಡಿ.
ಇಷ್ಟೆಲ್ಲ ವ್ಯತಿರಿಕ್ತ ಪ್ರಯತ್ನವನ್ನು ಮಂದಿರದ ವಿರುದ್ಧ ಮಾಡುತ್ತಿದ್ದರೂ, ಬಹುಪಾಲು ಭಾರತ ಮಂದಿರದ ಜಪವನ್ನೇ ಮಾಡಿತು. ಜಾತಿ ವೈರುಧ್ಯಾದಿಗಳ ನಡುವೆಯೂ ಹಳ್ಳಿಹಳ್ಳಿಯಿಂದ, ದೇಶದ ಮೂಲೆಮೂಲೆಯಿಂದ ಇಟ್ಟಿಗೆ ಹೊತ್ತು ರಾಮನ ಮಂದಿರಕ್ಕಾಗಿ ಬೇಡಿಕೆ ಇಡಲಾಯಿತು. ನ್ಯಾಯಾಲಯದ ತೀರ್ಪು ಬಂದ ಮೇಲಂತೂ ಮಂದಿರಕ್ಕಾಗಿ ಹಣ ಸಂಗ್ರಹ ಮಾಡಿದಾಗ ನಿರೀಕ್ಷೆಗಿಂತ ದುಪ್ಪಟ್ಟು ಹಣ ಕೂಡಿದ್ದು ಜನತೆಯ ನಿರೀಕ್ಷೆಯನ್ನು ಸೂಚಿಸುತ್ತದೆ. ಎಲ್ಲರ ಬಾಯಲ್ಲಿ, ಹೃದಯದಲ್ಲಿ ರಾಮ ಹೊಕ್ಕಿದ್ದು, ಸ್ವೀಕಾರಾರ್ಹ ಬೆಳವಣಿಗೆ.
ಜನವರಿ ೨೨, ೨೦೨೪ರ ದಿವಸವನ್ನು ಭಾರತಕ್ಕೆ ಭಾರತವೇ ಎದುರುನೋಡುತ್ತಿದೆ. ಅಯೋಧ್ಯೆಯಲ್ಲಿನ ಶ್ರೀರಾಮಚಂದ್ರ ಪ್ರಭುವಿನ ಪ್ರಾಣಪ್ರತಿಷ್ಠಾಪನೆ ಸೆಕ್ಯುಲರ್ವಾದಿಗಳಿಗೆ ಹೊಡೆಯುವ ಕೊನೆಯ ಮೊಳೆಯಾಗಲಿದೆ.
ರಾಮನನ್ನು ಬಿಟ್ಟು ಭಾರತವನ್ನು ಮತ್ತೆ ಕಟ್ಟಬಹುದೆಂಬ ದುಶ್ಚಟವಿಟ್ಟುಕೊಂಡವರಿಗೆ, ಗುಮ್ಮಟಗಳು ಉರುಳಿದಂತೆ ನೆಲಕ್ಕೆ ಒರಗಿದ ಭಾವ ಸೃಷ್ಟಿಯಾಗಿದೆ.
ಕೈಕೇಯಿಯು ಎರಡು ವರಗಳನ್ನು ಕೇಳಿದಾಗ ಆಕೆಯ ಪರವಾಗಿ ಇದ್ದ ಏಕೈಕ ವ್ಯಕ್ತಿ ರಾಮ. ತನ್ನ ವಿರೋಧಿ ನಿಲವನ್ನು ತೆಗೆದುಕೊಂಡವರನ್ನು ಒಳಗೊಳ್ಳಬಲ್ಲವ ರಾಮ. ಈ ರೀತಿ ಆತನಿಗಿಂತ ಹೆಚ್ಚಿನ ಒಳಗೊಳ್ಳಬಲ್ಲ ಜಾತ್ಯತೀತ ಇನ್ನಾರು ಇದ್ದಾರು?
ನಿಷಾದ ರಾಜ ಗುಹನ ಪರಮ ಸ್ನೇಹಿತ ರಾಮ ಆತನನ್ನು ಒಪ್ಪಿಕೊಂಡು ಪ್ರೀತಿ ತೋರಿದ. ಜಾತೀಯತೆ, ಅಸ್ಪೃಶ್ಯತೆಗಳ ಲವಲೇಶವೂ ಇಲ್ಲದಿರುವ ಸಂದರ್ಭ ಅದು. ಇಂಥ ರಾಮನೇ ನಿಜ ಜಾತ್ಯತೀತತೆಯ ಉದಾತ್ತ ಸಂಕೇತ. ಇಂಥ ರಾಮನ ವಿರುದ್ಧ ಸೆಕ್ಯುಲರ್ವಾದಿಗಳು ಗೆಲವು ಕಾಣಲು ಹೇಗೆ ಸಾಧ್ಯ?
೧೯೫೦ರಲ್ಲೇ ಸಂವಿಧಾನ ರಚನೆಯ ಒಳಗೆ ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಶ್ರೀರಾಮಚಂದ್ರನ ಫೋಟೋವನ್ನು ಹಾಕುವ ಮುಖಾಂತರ ರಾಮಚಂದ್ರನ ಇರುವಿಕೆ ಮತ್ತು ಶ್ರೇಷ್ಠತೆಯನ್ನು ಸ್ವತಃ ಅಂಬೇಡ್ಕರರೇ ಮಾನ್ಯ ಮಾಡಿದ್ದರು.
ಆದರೂ ೨೦೧೯ರವರೆಗೂ ರಾಮನಿಲ್ಲದ ಭಾರತವನ್ನೇ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾಯಿತು. ಆ ಎಲ್ಲ ದುರಾಕ್ರಮಣಗಳಿಗೂ ಅಯೋಧ್ಯೆಯ ಮಂದಿರ ಉತ್ತರರೂಪವಾಗಿ ನಿಲ್ಲಲಿದೆ. ಯುವಜನತೆಗೆ ಶ್ರೀರಾಮಚಂದ್ರನ ಆದರ್ಶವನ್ನು ನೆನಪು ಮಾಡಿಕೊಡುವುದರ ಜೊತೆಗೆ, ಭಾರತವನ್ನು ಮತ್ತಷ್ಟು ಗಟ್ಟಿಗೊಳಿಸುವ ಹೊಣೆಗಾರಿಕೆಯು ಪ್ರಜ್ಞಾವಂತ ನಾಗರಿಕರ ಮೇಲಿದೆ.
ಉರುಳಿ ಬಿದ್ದದ್ದು ಹಳೆ ಕಟ್ಟಡ ಮಾತ್ರವಲ್ಲ
೧೯೯೨ ಡಿಸೆಂಬರ್ ೬, ಹೋರಾಟ ತೀವ್ರ ಸ್ವರೂಪ ಪಡೆದು ಬಾಬರ್ ಹೆಸರಿನ ಹಳೆ ಕಟ್ಟಡ ಉರುಳಿಬಿತ್ತು.
ಉರುಳಿ ಬಿದ್ದದ್ದು ಹಳೆ ಕಟ್ಟಡ ಮಾತ್ರವಲ್ಲ,
- ಬಾಬರಿ ಕ್ರಿಯಾ ಸಮಿತಿಯ ಗೊಡ್ಡು ಬೆದರಿಕೆಗೆ ಮಂಡಿಯೂರುತ್ತಿದ್ದ ವೋಟ್ಬ್ಯಾಂಕ್ ರಾಜಕಾರಣ ಉರುಳಿಬಿತ್ತು.
- ಮುಸ್ಲಿಮರನ್ನು ಓಲೈಸುವ ನಕಲಿ ಜಾತ್ಯತೀತತೆಯ ರಾಜಕಾರಣ ಉರುಳಿಬಿತ್ತು.
- ಹಿಂದುಗಳಲ್ಲಿ ಜಾತಿ-ಜಾತಿಗಳನ್ನು ಎತ್ತಿ ಕಟ್ಟುವ ಹೊಲಸು ರಾಜಕಾರಣ ಉರುಳಿಬಿತ್ತು.
- ಇದೀಗ ನ್ಯಾಯಾಲಯದ ತೀರ್ಪಿನಂತೆಯೇ ಅಯೋಧ್ಯೆಯಲ್ಲಿ ಮಂದಿರ ಮೇಲೆಳುತ್ತಿದೆ.
- ಮೇಲೇಳುತ್ತಿರುವುದು ಬರೀ ಮಂದಿರವಲ್ಲ,
- ೧೯೮೯ರ ನವೆಂಬರ್ ೮ರಂದು ಮೊದಲ ಇಟ್ಟಿಗೆ ಇಡುವ ಮೂಲಕ ಶಿಲಾನ್ಯಾಸ ಮಾಡಿದ್ದ ಬಿಹಾರದ ದಲಿತ ನಾಯಕ ಕಾಮೇಶ್ವರ ಚೌಪಾಲ್ರವರ ಸಮರಸತೆಯ ಕನಸು ನನಸಾಗಿ ಮೇಲೆಳುತ್ತಿದೆ.
- ಜಾತಿಭಾವ ಮೀರಿದ ಹಿಂದು ಏಕತೆ ಮೇಲೆಳುತ್ತಿದೆ.
- ಬ್ರಿಟಿಷರಿಗಿಂತ ಮೊದಲಿನ ಆಕ್ರಮಣಗಳನ್ನು ತೆಳುವಾಗಿಸುವ, ಮುಚ್ಚಿಹಾಕುವ ವೈಚಾರಿಕ ಹುನ್ನಾರವನ್ನು ಮೆಟ್ಟಿಹಾಕಿದ ಸ್ವಾಭಿಮಾನ ಜಾಗೃತಿ ಮೇಲೇಳುತ್ತಿದೆ.
ರಾಮಜನ್ಮಭೂಮಿ ಹೋರಾಟ ಅದು ಒಂದು ಮಂದಿರ ಕಟ್ಟುವ ಹೋರಾಟವಾಗಿರಲಿಲ್ಲ, ಭಾರತದ ರಾಜಕಾರಣ, ವೈಚಾರಿಕತೆ – ಎರಡಕ್ಕೂ ಹೊಸ ದಿಕ್ಕು ಕೊಟ್ಟ ಐತಿಹಾಸಿಕ ಸಂಘರ್ಷ.