ಭಾರತೀಯ ಪರಂಪರೆಯಲ್ಲಿ ಆವಶ್ಯಕತೆ ಕಂಡಾಗ ಮಹಿಳೆಯೂ ಸಮರ್ಥವಾಗಿ ರಾಜ್ಯಭಾರವನ್ನು ನಡೆಸಬಲ್ಲಳೆಂಬುದನ್ನು ನಿರೂಪಿಸಿದಳು, ಧರ್ಮಸಂಸ್ಥಾಪನೆಗೂ ಆದ್ಯತೆ ನೀಡಿದಳು.
ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ
ಕನ್ನಡಕ್ಕೆ : ಎಸ್.ಆರ್.ಆರ್.
ರಾಜಮಾತೆಯರೆ! ಮಹಾರಾಜ ಗೋಪಾಲವರ್ಮ ಅವರು ತಮ್ಮ ದರ್ಶನಕ್ಕಾಗಿ ಬಿಜಯಮಾಡುತ್ತಿದ್ದಾರೆ ಎಂದು ಪರಿಚಾರಿಕೆ ತಲೆತಗ್ಗಿಸಿಕೊಂಡು ಅರಿಕೆ ಮಾಡಿದಾಗ ಸುಗಂಧಾದೇವಿಗೆ ಹಾವು ಕುಟುಕಿದಂತಹ ಅನುಭವವಾಯಿತು. ಸಂಗಡ ಇದ್ದ ಪ್ರಭಾಕರದೇವನ ಅಪ್ಪುಗೆಯಿಂದ ಬಿಡಿಸಿಕೊಂಡು ಎದ್ದು ನಿಂತಳು.
ಏನಾಯಿತು? – ಕೇಳಿದ ಪ್ರಭಾಕರದೇವ.
ಮಹಾರಾಜನು ಬರುತ್ತಿದ್ದಾನಂತೆ ಎಂದಳು ಸುಗಂಧಾದೇವಿ.
ಮಹಾರಾಜನೆ? ಇಲ್ಲಿಗೆ? ಇದು ನಿಜವೇ? ಎಂದ ಪ್ರಭಾಕರದೇವ ಗಲಿಬಿಲಿಗೊಂಡು.
ಹೌದೆಂದು ತಲೆಯಾಡಿಸಿದ ಸುಗಂಧಾದೇವಿ ಉಡುಗೆಯನ್ನು ಸರಿಪಡಿಸಿಕೊಳ್ಳತೊಡಗಿದಳು.
ಸುಗಂಧಾದೇವಿ ಕಶ್ಮೀರದ ಅಧಿಪತಿ ಶಂಕರವರ್ಮನ ಸತೀಮಣಿ. ಗೋಪಾಲವರ್ಮ ಆಕೆಯ ಮಗ. ಅದು ಕ್ರಿ.ಶ. ೯೦೪ರ ವ?.
ಲೌಕಿಕಾಬ್ದ ೩೯೫೯ರಲ್ಲಿ (ಕ್ರಿ.ಶ. ೮೮೩) ಅವಂತಿವರ್ಮನು ಮರಣ ಹೊಂದಿದ. ಅವನ ಮರಣದ ಹಿಂದುಗೂಡಿ ಕಶ್ಮೀರ ರಾಜ್ಯದಲ್ಲಿ ರಾಜಪದವಿಗಾಗಿ ಪೋಟಾಪೋಟಿ ಶುರುವಾಗಿದ್ದಿತು. ಐಶ್ವರ್ಯಮದೋನ್ಮತ್ತರಾಗಿದ್ದ ಉತ್ಪಲವಂಶೀಯರು ಸಿಂಹಾಸನಕ್ಕಾಗಿ ಪ್ರಯತ್ನದಲ್ಲಿ ತೊಡಗಿದ್ದರು. ರತ್ನವರ್ಧನನೆಂಬ ಪ್ರತೀಹಾರಿಯ ಉಮೇದಿನಿಂದಾಗಿ ಅವಂತಿವರ್ಮನ ಪುತ್ರ ಶಂಕರವರ್ಮನು ಅಭಿಷಿಕ್ತನಾಗಿದ್ದ. ಆದರೆ ಪ್ರಭಾವಿಯಾಗಿದ್ದ ವಿನ್ನಪಮಂತ್ರಿಕುಮಾರ ಕರ್ಣಪನ ಮಧ್ಯಪ್ರವೇಶದಿಂದಾಗಿ ಶೂರವರ್ಮನ ಪುತ್ರ ಸುಖವರ್ಮನಿಗೆ ಯುವರಾಜ ಪದವಿಯನ್ನು ನೀಡಲಾಗಿತ್ತು. ಮಹಾರಾಜ ಮತ್ತು ಯುವರಾಜರ ನಡುವೆ ಹೊಂದಾಣಿಕೆ ಇರಲಿಲ್ಲ; ವ್ಯತಿರೇಕತೆಯೇ ಬೆಳೆದಿತ್ತು. ಪ್ರಜೆಗಳೂ ಎರಡು ಬಣಗಳಾಗಿ ವಿಭಜನೆಗೊಂಡಿದ್ದರು. ಯುವರಾಜನ ಪಕ್ಷದವರು ಪ್ರಲೋಭನೆಗಳನ್ನೊಡ್ಡಿ
ಮಹಾರಾಜನ ಪಕ್ಷದ ಗಣ್ಯರನ್ನು ತಮ್ಮ ಬಣಕ್ಕೆ ಸೆಳೆದುಕೊಳ್ಳಲು ಪ್ರಯತ್ನ ನಡೆಸಿದ್ದರು. ಆದರೆ ಅವರೆಲ್ಲ ನಿ?ವಂತರಾಗಿದ್ದುದರಿಂದ ಯುವರಾಜನ ಪಕ್ಷದವರ ಪ್ರಯತ್ನಗಳು ಫಲಿಸಲಿಲ್ಲ.
ಶಂಕರವರ್ಮನು ಅಲ್ಲಲ್ಲಿದ್ದ ಅಸಹಕಾರಿಗಳನ್ನು ದಮನ ಮಾಡಿದ ಮೇಲೆ ರಾಜ್ಯವಿಸ್ತರಣೋತ್ಸುಕನಾಗಿ ಹೊರಗಿನ ಶತ್ರುರಾಜ್ಯಗಳ ಮೇಲೆ ದಂಡಯಾತ್ರೆಗಳನ್ನು ಉಪಕ್ರಮಿಸಿದ. ಶಂಕರವರ್ಮನ ಸಶಕ್ತತೆಯ ಮುಂದೆ ಅನೇಕ ರಾಜರುಗಳು ಪದಾಕ್ರಾಂತರಾದರು. ಘೂರ್ಜರ ರಾಜ ಅಲಖಾನ, ಡಕ್ಕೇಯ ರಾಜ್ಯದ ಭೊಜರಾಜ ಮೊದಲಾದವರ ಮೇಲೆ ವಿಜಯಗಳಿಸಿ ಆ ರಾಜ್ಯಗಳನ್ನು ಅವರ ಸುಪರ್ದಿಗೇ ವಹಿಸಿದ. ದರದ, ಉತ್ತರ ಬಾಹ್ಲೀಕ, ಕಿರಾತ, ಕಲೆಯ, ಉರಗ, ಸಿಂಹಪುರ, ಕಾಂಭೋಜ, ತ್ರಿಗರ್ತ, ಕೋಕನವ…. ಹೀಗೆ ಶಂಕರವರ್ಮನ ವಿಜಯಯಾತ್ರೆ ಮುಂದುವರಿಯಿತು.
ಶಂಕರವರ್ಮನ ಶೌರ್ಯಪ್ರತಾಪಗಳನ್ನು ಲಕ್ಷಿಸಿ ಉತ್ತರಾಪಥದ ಅಧಿಪತಿಯು ತನ್ನ ಪುತ್ರಿ ಸುಗಂಧಾದೇವಿಯನ್ನು ಶಂಕರವರ್ಮನಿಗೆ ಇತ್ತು ವಿವಾಹವನ್ನು ನೆರವೇರಿಸಿದ.
ಪ್ರಜೆಗಳ ಅಭೀ?ದಂತೆ ’ಶಂಕರಗೌರೀಶ’ ಮತ್ತು ’ಸುಗಂಧೇಶ’ ವಿಗ್ರಹಗಳನ್ನು ಪ್ರತಿ?ಪಿಸಿ ಭವ್ಯ ಮಂದಿರಗಳನ್ನು ನಿರ್ಮಿಸಿದ.
ಯಶಸ್ಸು ಸೇರಿದಂತೆಲ್ಲ ಅಹಂಕಾರವು ಮೊಳಕೆಯೊಡೆಯುವುದು ವಿರಳವಲ್ಲ. ಶಂಕರವರ್ಮನಿಗೂ ಹಾಗೆಯೆ ಆಯಿತು. ತಾನು ಏನು ಮಾಡಿದರೂ ಅದನ್ನು ದೈವನಿರ್ದಿ?ವೆಂದು ಪ್ರಜೆಗಳು ಭಾವಿಸುತ್ತಾರೆ – ಎಂದುಕೊಳ್ಳತೊಡಗಿದ. ಅದೇ ಸಮಯದಲ್ಲಿ ಕಶ್ಮೀರದಲ್ಲಿ ಹೊಸದೊಂದು ಮತವು ಪ್ರಸಾರಗೊಳ್ಳತೊಡಗಿತ್ತು. ಅದಕ್ಕೆ ಸುಖವರ್ಮನ ಪ್ರೋತ್ಸಾಹವೂ ಇದ್ದುದರಿಂದ ಅದು ದಿಕ್ಕುದಿಕ್ಕುಗಳಿಗೆ ಹರಡತೊಡಗಿತ್ತು. ವಾಸ್ತವವಾಗಿ ಅದು ’ಹೊಸ’ ಮತವೇನಾಗಿರಲಿಲ್ಲ. ಹಿಂದೆಯೇ ಇದ್ದ ಚಾರ್ವಾಕಮತವೂ ಹಲವು ವಿದೇಶಮೂಲದ ಸಿದ್ಧಾಂತಗಳೂ ಮಿಶ್ರಣಗೊಂಡು ಏರ್ಪಟ್ಟಿದ್ದುದು ಈ ಭೌತವಾದಿ ಮತ: ಹೊರಗಣ್ಣಿಗೆ ಕಾಣುವುದು ಮಾತ್ರ ಸತ್ಯ, ಮಿಕ್ಕದ್ದೆಲ್ಲ ಸುಳ್ಳು, ಇತ್ಯಾದಿ. ಜಗತ್ತಿನಲ್ಲಿ ಎಲ್ಲರೂ ಸರ್ವಸಮಾನರಾಗಬೇಕು ಮೊದಲಾದ ಘೋ?ಣೆಗಳೂ ಸೇರಿದ್ದವು. ಈ ಮತದಲ್ಲಿ ಮನು?ನ ಪಶುತುಲ್ಯ ಅಂಶಗಳಿಗೆ ಪೋತ್ಸಾಹನವಿದ್ದಿತು; ಜೀವನ ಇರುವುದೇ ಸುಖಭೋಗಕ್ಕಾಗಿ – ಎಂದು ಪ್ರಚಾರ ಮಾಡಲಾಗುತ್ತಿತ್ತು. ಹೀಗೆ ಸಹಜವಾಗಿ ಈ ಮತೀಯರಲ್ಲಿ ಸನಾತನಧರ್ಮಬೋಧಿತ ಸ್ವನಿಯಂತ್ರಣಕ್ಕೆ ವಿರೋಧವಿದ್ದಿತು. ಎಲ್ಲ ಸಮುದಾಯಗಳಲ್ಲಿಯೂ ಸಂಸ್ಕಾರಹೀನರಾದವರು ಗಣನೀಯ ಪ್ರಮಾಣದಲ್ಲಿ ಇರುತ್ತಾರ?. ಹಾಗೆ ಈ ಮತವೂ ಹೆಚ್ಚುಹೆಚ್ಚು ಅನುಯಾಯಿಗಳನ್ನು ಆಕರ್ಷಿಸತೊಡಗಿತ್ತು.
ಈ ಜಾಡಿಗೆ ಬಿದ್ದ ಶಂಕರವರ್ಮನು ಪ್ರಜೆಗಳಿಂದ ಬಲಾತ್ಕಾರಪೂರ್ವಕ ಹಣವನ್ನು ಸಂಗ್ರಹಿಸತೊಡಗಿದ. ಪ್ರಜೆಗಳೆಲ್ಲ ಧನಹೀನರಾದರೆ ಎಲ್ಲರೂ ಸಮಾನರಾಗುತ್ತಾರೆ, ಅಲ್ಲವೆ! ತಾನು ದೈವಾಂಶ ಸಂಭೂತನೆಂದೂ, ತಾನು ಹೇಳುವುದು ದೈವನಿರ್ಣಯವೆಂದೂ ಉನ್ಮತ್ತವಾಗಿ ಹೇಳತೊಡಗಿದ. ತಾನೇ ದೇವರಾಗಿರುವಾಗ ಬೇರೆ ದೇವರುಗಳ ಪೂಜೆ ಏಕೆ? – ಎಂದು ಹೇಳುತ್ತ ಶಂಕರವರ್ಮನು ದೇವಾಲಯಗಳನ್ನೂ ದೋಚತೋಡಗಿದ. ಹೀಗೆ ೬೪ ದೇವಾಲಯಗಳನ್ನು ಹಸ್ತಗತ ಮಾಡಿಕೊಂಡು ಹಾಗೆ ಬಂದ ಧನವನ್ನೆಲ್ಲ ಸ್ವಾರ್ಥಕ್ಕಾಗಿ ಬಳಸಿಕೊಂಡ. ಗ್ರಾಮಗಳು ಅಭದ್ರಗೊಳ್ಳತೊಡಗಿದಾಗ ರಾಜನು ಗ್ರಾಮಸ್ಥರಿಗೆ ಸ್ವಲ್ಪವೇ ವೇತನ ನೀಡಿ ಗುಲಾಮರಂತೆ ಅವರನ್ನು ಬಳಸಿಕೊಂಡ. ಜನರಿಂದ ’ಭಾರವಹನ ಮೂಲ್ಯ’ ಎಂದು ಮೊದಲಾದ ಕಂಡುಕೇಳರಿಯದ ತೆರಿಗೆಗಳನ್ನು ಸಂಗ್ರಹಿಸಿದ. ಜನರಿಗೆ ಬದುಕೇ ದುರ್ಭರವಾಯಿತು. ಜೊತೆಜೊತೆಗೇ ತನ್ನ ನೂತನ ಮತಕ್ಕೆ ಅನುಗುಣವಾದದ್ದು ಮಾತ್ರ ಸಾಹಿತ್ಯವೆಂದೂ ಸಾರಿದ. ಪಂಡಿತರೆಲ್ಲ ಅನಾದರಕ್ಕೆ ಈಡಾದರು. ಸಮಾಜದಲ್ಲಿ ಅಸಭ್ಯತೆ ಬೆಳೆಯಿತು. ನಿಜವಾದ ಪಂಡಿತರು ದೇಶಬಿಟ್ಟು ದೂರ ಹೋದರು. ಪ್ರಜೆಗಳ ಗೋಳನ್ನು ಕೇಳುವವರೇ ಇಲ್ಲವಾಯಿತು.
ಶಂಕರವರ್ಮ-ಸುಗಂಧಾದೇವಿಯರ ಪುತ್ರ ಗೋಪಾಲವರ್ಮ ದಯಾರ್ದ್ರಹೃದಯ, ಜನವತ್ಸಲ, ನಿರ್ಭೀತ. ಬಾಲಕನಾದರೂ ಅದೊಂದುದಿನ ತುಂಬಿದ ಆಸ್ಥಾನದಲ್ಲಿ ತಂದೆಯ ವರ್ತನೆಗೆ ಆಕ್ಷೇಪಿಸುವ ಧೈರ್ಯ ತೋರಿದ:
ಪ್ರಜಾಪೀಡನೆಯು ಅನರ್ಥದಾಯಕ. ಮೋಡವು ಸೂರ್ಯನನ್ನು ಮರೆಮಾಡಿ ಬೆಳಕನ್ನು ತಡೆಯುವಂತೆ ರಾಜನ ದು?ತನವು ಸಮಸ್ತ ಪ್ರಜೆಗಳನ್ನು ಕ?ಕ್ಕೆ ಗುರಿಮಾಡುತ್ತದೆ. ಹೀಗೆ ನಡೆದುಕೊಂಡ ಹಿಂದಿನ ರಾಜರೆಲ್ಲ ಅಧೋಗತಿ ಪಡೆದರೆಂದು ಇತಿಹಾಸ ತಿಳಿಸುತ್ತದೆ. ಇತಿಹಾಸದಿಂದ, ಪೂರ್ವಿಕರ ಚರಿತದಿಂದ ಒಳ್ಳೆಯ ಅಂಶಗಳನ್ನು ಗ್ರಹಿಸಿ ಅನುವರ್ತಿಸುವವರು ಉತ್ತಮರೆನಿಸುತ್ತಾರೆ. ಕಶ್ಮೀರವು ಇಡೀ ಭಾರತಕ್ಕೇ ಶಿರೋಮಣಿಯಂತಹದು. ಇದಕ್ಕೆ ಇರುವಂತಹ ರಾಜರ ಆನುಪೂರ್ವಿ ಬೇರೆ ಯಾವ ಪ್ರಾಂತಕ್ಕೂ ಇಲ್ಲ. ಜಲೌಕ, ದಾಮೋದರ, ಮುಮ್ಮಡಿ ಗೋನಂದ, ಮಿಹಿರಕುಲ, ಗೋಪಾದಿತ್ಯ, ಪ್ರತಾಪಾದಿತ್ಯ, ತುಂಜೀನ, ಸಂಧಿಮತಿ, ಮೇಘವಾಹನ, ವಿಕ್ರಮಾದಿತ್ಯ, ಮುಕ್ತಾಪೀಡ, ಲಲಿತಾದಿತ್ಯ, ಅವಂತಿವರ್ಮ – ಇಂತಹವರು ಅಲಂಕರಿಸಿದ್ದ ಸಿಂಹಾಸನದಲ್ಲಿ ಈಗ ಅಧಿಷ್ಠಿತರಾಗಿರುವ ತಾವು ಆ ಪೂರ್ವಿಕರ ಪಂಕ್ತಿಗೆ ಕಲಂಕ ತಂದಂತೆ ಆಗದಿರಲಿ. ರಾಜ್ಯದ ನಿಜವಾದ ಒಡೆಯನು ಭಗವಂತನೇ. ತತ್ಕಾಲೀನ ರಾಜರು ನಿಮಿತ್ತ ಮಾತ್ರರು. ನಿಮ್ಮನ್ನು ದಾರಿ ತಪ್ಪಿಸಿರುವವರಿಗೆ ನಿಮ್ಮಲ್ಲಿ ನಿಜವಾದ ಪ್ರೇಮವಿಲ್ಲ, ಸ್ವಾರ್ಥ ಇದೆಯ?….
ಆದರೆ ಗೋಪಾಲವರ್ಮನ ಹಿತವಚನಗಳು ಬಂಡೆಯ ಮೇಲೆ ಸುರಿದ ಮಳೆಯಂತೆಯೆ ಆಯಿತು.
ರಾಜನ ದೌ? ಮುಂದುವರಿಯಿತು.
ಭಲ್ಲಟಶತಕ, ಪದಮಂಜರಿ ಮೊದಲಾದ ಶ್ರೇ? ಕೃತಿಗಳ ರಚಯಿತ ಭಲ್ಲಟ ಕವಿಯೂ ಹೀನಾಯ ದಶೆಯ ಜೀವನ ನಡೆಸಬೇಕಾಯಿತು. ಬೇರೆ ದೇಶಕ್ಕೆ ಹೋಗಬೇಕೆಂಬ ಆಪ್ತರ ಸಲಹೆಯನ್ನು ಆತ ನಿರಾಕರಿಸಿದ: ಪಾರ್ವತಿಗೆ ಸಮಾನವಾದ ಕಶ್ಮೀರವನ್ನು ಬಿಟ್ಟು ನಾನು ಹೇಗೆ ಹೋಗಲಿ? ಪ್ರಜಾಪೀಡಕ ರಾಜನಿಗೆ ದೈವವೇ ಇಂದಲ್ಲ ನಾಳೆ ದಂಡನೆ ನೀಡೀತು – ಎಂದ.
ಕವಿವಾಕ್ಯ ಸುಳ್ಳಾಗದೆಂಬಂತೆ ಯಾವ ವ್ಯಾಧಿಯೂ ಇಲ್ಲದೆಯೆ ಶಂಕರವರ್ಮನ ಮೂವತ್ತು ಮಂದಿ ಮಕ್ಕಳು ಮೃತಿಹೊಂದಿದರು. ಅವನು ನಿರ್ಮಿಸಿದ್ದ ಶಂಕರಪುರ ಹಾಳುಸುರಿಯತೊಡಗಿತು.
ಇದೇ ಸಮಯದಲ್ಲಿ ಸುಖರಾಜು ಮಂತ್ರಿಯ ಸೋದರಳಿಯನನ್ನು ದ್ವಾರವೆಂಬ ದೇಶಕ್ಕೆ ಅಧಿಪತಿಯಾಗಿ ನೇಮಿಸಲಾಯಿತು. ಅವನು ಆ ದೇಶಕ್ಕೆ ಹೋಗುತ್ತಿರುವಾಗಲೆ ದಾರಿಯಲ್ಲಿ ನೀರಾಸಕವೆಂಬೆಡೆ ಹತ್ಯೆಗೆ ಗುರಿಯಾದ. ಕುಪಿತನಾದ ಶಂಕರವರ್ಮ ನೀರಾಸಕದ ಮೇಲೆ ಆಕ್ರಮಣ ನಡೆಸಿ ಅದನ್ನು ಸಮೂಲ ಧ್ವಂಸಮಾಡಿದ. ಅಲ್ಲಿಂದ ರಾಜಧಾನಿಗೆ ಹಿಂದಿರುಗುವಾಗ ಸ್ವೈರಾಚಾರ ನಡೆಸಿದ ರಾಜಸೈನಿಕರಿಗೂ ಸ್ಥಳೀಯರಿಗೂ ಘ?ಣೆ ನಡೆಯಿತು. ಬೆಟ್ಟದ ಮೇಲಿಂದ ಸ್ಥಾನಿಕನು ಬಿಟ್ಟ ಬಾಣವು ರಾಜನ ಕುತ್ತಿಗೆಯನ್ನು ಹೊಕ್ಕಿತು. ಗೋಪಾಲವರ್ಮನು ಸಮರ ನಿರ್ವಹಣೆಯನ್ನು ಸೈನಿಕರಿಗೆ ವಹಿಸಿ ರಹಸ್ಯವಾಗಿ ಗಾಯಾಳು ತಂದೆಯೊಡನೆ ರಾಜಧಾನಿಯತ್ತ ಸಾಗಿದ.
ಪತಿಯ ಸ್ಥಿತಿಯನ್ನು ನೋಡಿ ಸುಗಂಧಾದೇವಿ ಭೋರನೆ ಪ್ರಲಾಪ ಮಾಡಿದಳು. ಮಾರ್ಗಮಧ್ಯದಲ್ಲಿಯೆ ಲೌಕಿಕಾಬ್ದ ೩೯೭೭ನೇ ವ?ದಲ್ಲಿ (ಕ್ರಿ.ಶ. ೯೦೨) ಫಾಲ್ಗುಣ ಕೃ? ಸಪ್ತಮಿಯಂದು ಶಂಕರವರ್ಮನು ಅವಸಾನ ಹೊಂದಿದ.
ಸುಖವರ್ಮನು ರಾಜನ ಮರಣವಾರ್ತೆಯನ್ನು ಗೋಪ್ಯವಾಗಿರಿಸಿದ. ರಾಜನ ಕೈಗೆ ದಾರ ಬಿಗಿಯಿಸಿ ಅವನು ಪ್ರತಿನಮಸ್ಕಾರ ಮಾಡುತ್ತಿರುವಂತೆ ನಟನೆ ಮಾಡಿಸಿದ. ಹೀಗೆ ಆರು ದಿನಗಳಾದ ಮೇಲೆ ಸರಹದ್ದನ್ನು ಸೇರಿಕೊಂಡರು. ’ವರಾಹಮೂಲ’ದಲ್ಲಿ (ಬಾರಾಮುಲ್ಲಾ) ರಾಜನ ಅಂತ್ಯಸಂಸ್ಕಾರ ನಡೆಯಿತು.
ಈ ಸನ್ನಿವೇಶದಲ್ಲಿ ಸುಖವರ್ಮನ ಆಸೆ ಚಿಗುರಿತು. ಹೇಗಾದರೂ ಸುಗಂಧಾದೇವಿಯನ್ನು ತಪ್ಪಿಸಿದರೆ ಗೋಪಾಲವರ್ಮನನ್ನು ಮುಗಿಸುವುದು ಕ?ವಾಗದು. – ಎಂದು ಅವನು ಪಥಕವನ್ನು ಹಾಕಿಕೊಂಡ.
ಪತಿಯೊಡನೆ ಸಹಗಮನ ಮಾಡಿದ್ದ ಸುರೇಂದ್ರವತಿಯಂತೆ ಸುಗಂಧಾದೇವಿಯೂ ಚಿತೆಯನ್ನು ಏರದಿದ್ದುದು ಸಂಪ್ರದಾಯವಿರೋಧಿಚರ್ಯೆ ಎಂದೆಲ್ಲ ಪ್ರಚಾರ ಮಾಡತೊಡಗಿದ. ಆದರೆ ’ಮೃತಳಾಗುವುದಕ್ಕಿಂತ ಪತಿಯ ನೆನಪನ್ನು ಸ್ಥಿರಗೊಳಿಸುವುದು ಉತ್ತಮಪಕ್ಷ’ ಎಂದು ಸುಗಂಧಾದೇವಿ ದೃಢವಾಗಿ ಹೇಳಿದಳು.
ಗೋಪಾಲವರ್ಮನೂ ನನ್ನ ರಕ್ಷಣೆಯನ್ನು ತಂದೆಯವರು ರಾಣಿ ಸುಗಂಧಾದೇವಿಗೆ ವಹಿಸಿದ್ದಾರೆ. ನಾನು ಅಭಿಷಿಕ್ತಗೊಂಡರೂ ತಾಯಿಯವರೇ ರಾಜ್ಯಭಾರ ನಡೆಸಬೇಕೆಂಬುದು ತಂದೆಯವರ ನಿರ್ದೇಶವಾಗಿದ್ದಿತು ಎಂದ.
ಹೀಗೆ ಸುಖವರ್ಮನ ಹಂಚಿಕೆ ಈಡೇರಲಿಲ್ಲ.
ಕ್ರಿ.ಶ. ೯೦೨ನೇ ಸಂವತ್ಸರದಲ್ಲಿ ಗೋಪಾಲವರ್ಮನು ಕಶ್ಮೀರದ ರಾಜನಾದ. ಧೀಮಂತನಾದ ಆತನು ಪೂರ್ವಜರಿಗೆ ಕೀರ್ತಿ ತರುವಂತಹ ರೀತಿಯಲ್ಲಿ ರಾಜ್ಯವನ್ನು ಆಳತೊಡಗಿದ. ತಿರಸ್ಕಾರಕ್ಕೊಳಗಾಗಿದ್ದ ಪಂಡಿತರು ಮತ್ತೆ ಸಂಮಾನಕ್ಕೆ ಪಾತ್ರರಾದರು.
ಆದರೆ ಸುಖವರ್ಮನೂ ’ನೂತನ’ ಮತಾನುಯಾಯಿಗಳೂ ವ್ಯತಿರೇಕ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ.
ಭಲ್ಲಟ ಮೊದಲಾದ ದೊಡ್ಡ ವಿದ್ವಾಂಸರೂ ಸತಿಸಹಗಮನಕ್ಕೆ ಶಾಸ್ತ್ರಧಾರವೇನೂ ಇಲ್ಲವೆಂದು ದೃಢವಾಗಿ ಹೇಳಿದರು.
ರಾಜ್ಯದ ಕೋಶಾಧಿಕಾರಿಯಾಗಿದ್ದ ಪ್ರಭಾಕರನು ಬೇರೊಂದು ಉಪಾಯ ಹೂಡಿದ. ಕ್ರಮಕ್ರಮೇಣ ಸುಗಂಧಾದೇವಿಯ ವಿಶ್ವಾಸವನ್ನು ಗಳಿಸಿಕೊಳ್ಳತೊಡಗಿದ. ನಿರಂತರ ಒಡನಾಟ, ಸಲ್ಲಾಪಗಳಿಂದಾಗಿ ಇಬ್ಬರ ನಡುವೆ ಕ್ರಮೇಣ ದೈಹಿಕಾಕ?ಣೆಯೂ ಮೊಳೆಯಿತು. ಪ್ರಭಾಕರನ ಚಾಣಾಕ್ಷತೆಯೂ ಮಾತುಗಾರಿಕೆಯೂ ಸುಗಂಧಾದೇವಿಯನ್ನು ವಶೀಕರಣಗೊಳಿಸಿಕೊಂಡಿತು.
ಸುಗಂಧಾದೇವಿಯ ಮನಸ್ಸು ಭೋಗಾಸಕ್ತವಾದಂತೆಲ್ಲ ಪ್ರಭಾಕರನು ರಾಜ್ಯಕಾರುಬಾರುಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳತೊಡಗಿದ; ತನ್ನದೇ ಮತದ ಪ್ರಚಾರವನ್ನೂ ತೀವ್ರಗೊಳಿಸಿದ. ಅವನನ್ನು ಎದುರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಸುಗಂಧಾದೇವಿ ಪೂರ್ತಿ ಅವನ ಕೈಗೊಂಬೆಯಾಗಿದ್ದಳು. ವಿಶೃಂಖಲವಾಗಿ ತಾನೇ ರಾಜನಂತೆ ವರ್ತಿಸುತ್ತ ಸ್ವೇಚ್ಛಾಚಾರ ನಿರತನಾಗಿದ್ದ.
ಈ ಹಿನ್ನೆಲೆಯಲ್ಲಿಯೆ ಮಹಾರಾಜ ಗೋಪಾಲವರ್ಮನು ಬರುತ್ತಿದ್ದಾನೆಂದು ಕೇಳಿ ಪ್ರಭಾಕರನು ತಳಮಳಗೊಂಡಿದ್ದು.
* * * * *
ಸುಗಂಧಾದೇವಿಯ ಆತಂಕಕ್ಕೆ ಕಾರಣವಿತ್ತು. ಶಂಕರವರ್ಮನ ನಿಧನಾನಂತರ ಗೋಪಾಲವರ್ಮನು ಎಂದೂ ತನ್ನ ದರ್ಶನಕ್ಕೆ ಬಂದಿರಲಿಲ್ಲ, ಅವಳಿಗೆ ಯಾವ ಸುದ್ದಿಗಳನ್ನೂ ಕಳಿಸುತ್ತಲೂ ಇರಲಿಲ್ಲ. ಗೋಪಾಲವರ್ಮನ ನಿಜಾಯತಿಯೂ ನೇರ ವರ್ತನೆಯೂ ಸುಗಂಧಾದೇವಿಗೆ ತಿಳಿಯದುದಲ್ಲ. ತನ್ನ ಬಗೆಗೆ ರಾಜ್ಯದಲ್ಲಿ ಬಗೆಬಗೆಯ ವದಂತಿಗಳು ಹರಡಿದ್ದುದೂ ಆಕೆಗೆ ತಿಳಿದಿತ್ತು. ಅವುಗಳಿಂದ ರಾಜನಿಗೆ ಅಸಮಾಧಾನವಾಗಿರಬಹುದೆ? – ಎಂದು ಯೋಚಿಸಿದಳು. ಇನ್ನೊಂದು ಕಡೆ ಸಂದರ್ಭ ಬಂದಲ್ಲಿ ರಾಜನನ್ನು ದಿಟ್ಟವಾಗಿ ಎದುರಿಸಬೇಕು ಎಂಬ ಮೊಂಡುತನವೂ ಮನೆಮಾಡಿತ್ತು. ಇ?ಕ್ಕೂ ತನ್ನ ಮೇಲೆ ರಾಜನಿಗೆ ಯಾವ ಅಧಿಕಾರವಿದೆ? ಅವನಾದರೋ ಇನ್ನೂ ಪೂರ್ವವಯಸ್ಸಿನವನು. ಹೀಗೆಂದುಕೊಳ್ಳುತ್ತ ದ್ವಾರದೆಡೆಗೆ ನಡೆದಳು.
ಇ?ರಲ್ಲಿ ಪ್ರಭಾಕರನು ಬೆಕ್ಕಿನಂತೆ ಹೆಜ್ಜೆಹಾಕುತ್ತ ಬಂದು ರಾಣಿಯ ಕಿವಿಯಲ್ಲಿ ’ರಾಜನು ನನ್ನ ವಿ?ಯದಲ್ಲಿ ಏನಾದರೂ ಹೇಳಿದರೆ ನಂಬಬೇಡಿ. ನಮಗೆ ಆಗದವರು ಏನೇನೋ ಕಥೆ ಕಟ್ಟುತ್ತಿರುತ್ತಾರೆ’ ಎಂದು ಪಿಸುಗುಟ್ಟಿದ.
ಸುಗಂಧಾದೇವಿ ಅವನಿಗೆ ನಿರ್ಭಯವಾಗಿರುವಂತೆ ಸೂಚಿಸಿದಳು.
* * * * *
ಒಳಕ್ಕೆ ಬರುತ್ತಿದ್ದಂತೆ ಅಲ್ಲಿಯ ಅಸಭ್ಯ ವಾತಾವರಣ ಗೋಪಾಲವರ್ಮನಿಗೆ ಜುಗುಪ್ಸೆ ತಂದಿತು. ಅಗ್ಗದ ವೇಶ್ಯಾಗೃಹದಂತೆ ಇರುವ ಇದು ತನ್ನ ಮಾತೃಮಂದಿರವೆ?
ಮರುಕ್ಷಣವೇ ಅವನ ಮನಸ್ಸಿನಲ್ಲಿ ಕ್ರೋಧವು ಅಣಗಿ ವಿ?ದ ತುಂಬಿತು. ಯಾವ ಕ್ರೂರದೈವವು ಜನರನ್ನು ಹೀಗೆ ದಾರಿತಪ್ಪಿಸುತ್ತದೆ? ಜನರಿಗೆ ಆದರ್ಶಪ್ರಾಯಳಾಗಿರಬೇಕಾದ ರಾಜಮಾತೆ ಏಕೆ ಈ ತುಚ್ಛ ರೀತಿಯನ್ನು ಅನುಸರಿಸುತ್ತಿದ್ದಾಳೆ?
ಅಲ್ಲಿ ಕೇಳಿಗಳಲ್ಲಿ ನಿರತರಾಗಿದ್ದವರಿಗೆ ರಾಜನ ಆಗಮನವಾಗಿದೆಯೆಂಬುದರ ಪರಿವೆಯೂ ಇರಲಿಲ್ಲ! ಸುತ್ತಲ ಗೋಡೆಗಳನ್ನು ಅಶ್ಲೀಲ ಚಿತ್ರಗಳು ಆವರಿಸಿದ್ದವು. ಕಪಾಟಿನಲ್ಲಿ ಸನಾತನಧರ್ಮವನ್ನು ಅವಹೇಳನ ಮಾಡುವ ಗ್ರಂಥಗಳು ತುಂಬಿದ್ದವು.
ಕೆಲವು ಕ್ಷಣ ಗೋಪಾಲವರ್ಮನು ತನ್ನನ್ನು ತಾನೆ ಅಲ್ಲಿಯ ಸನ್ನಿವೇಶದಿಂದ ದೂರಗೊಳಿಸಿಕೊಂಡು ಧ್ಯಾನಸ್ಥನಾದ.
ಚಿಂತಿಸಿದಂತೆ ಅವನಿಗೆ ಅನಿಸತೊಡಗಿತು – ಪ್ರಜೆಗಳ ಅವನತಿಗೆ ಪಾಲಕರೇ ಹೊಣೆಗಾರರಲ್ಲವೆ.
ಸರಿಯಾದ ಜ್ಞಾನವಿಲ್ಲದೆ ಮನಸ್ಸನ್ನು ಬಿಡಿಬೀಸಾಗಿ ಬಿಟ್ಟರೆ ಅಂತಹವರ ಇಂದ್ರಿಯಗಳು ಸಾರಥಿಯಿಲ್ಲದ ಕುದುರೆಗಳಂತೆ ಆಗುತ್ತವೆ – ಹೀಗೆ ತನಗೆ ಅನಿಸಿದುದನ್ನು ತಡೆದುಕೊಳ್ಳಲಾರದೆ ಗಟ್ಟಿ ಯಾಗಿಯೆ ಹೇಳಿದ.
ವಿಚಲಿತಳಾಗಿದ್ದ ಸುಗಂಧಾದೇವಿಗೆ ಗೋಪಾಲವರ್ಮನ ಮಾತುಗಳು ಅರ್ಥವಾಗದಿರಲಿಲ್ಲ. ತನ್ನ ಮೈ ಪ್ರಭಾಕರನ ಸಂಗದಿಂದಾಗಿ ದುರ್ಗಂಧಭರಿತವಾಗಿದ್ದುದನ್ನು ಗಮನಿಸಿ ಅವಳು ಇರುಸುಮುರುಸುಗೊಂಡಳು.
ಕರ್ತವ್ಯದಂತೆ ಗೋಪಾಲವರ್ಮನು ತಾಯಿಗೆ ನಮಿಸಿದ.
ಸುಗಂಧಾದೇವಿ ಗೋಪಾಲವರ್ಮನೆದುರಿಗೆ ಮೌನವಾಗಿ ಕುಳಿತಳು. ಅವಳ ಮನಸ್ಸಿನಲ್ಲಿ ಒಂದು ರೀತಿಯ ಅಪರಾಧಿಭಾವ ತುಂಬಿತ್ತು.
ಅಮ್ಮ! ನಿನಗೆ ಎಲ್ಲವೂ ತಿಳಿದಿದೆ. ನಾನು ಪ್ರತ್ಯೇಕವಾಗಿ ಹೇಳುವುದು ಏನೂ ಇಲ್ಲ.
ಯಾವ ವಿ?ಯ? – ಕೇಳಿದಳು ಸುಗಂಧಾದೇವಿ.
ಅಮ್ಮ! ನಿನ್ನ ವ್ಯಕ್ತಿಗತ ವಿ?ಯಗಳನ್ನು ಕುರಿತು ನಾನು ಮಾತನಾಡುವುದಿಲ್ಲ ಆದರೆ ಪ್ರಜೆಗಳಿಗೆ ಪಾಲಕರು ಆದರ್ಶವಾಗಿರಬೇಕು. ಪಾಲಕರ ವೈಯಕ್ತಿಕ ರೀತಿರಿವಾಜುಗಳ ಪ್ರಭಾವ ರಾಜ್ಯನಿರ್ವಹಣೆಯ ಮೇಲೆ ಆಗಬಾರದು. ರಾಜ್ಯಪಾಲನೆಯಾದರೂ ಧರ್ಮಕ್ಕೆ ಅಧೀನವಾಗಿ ಇರಬೇಕಾಗುತ್ತದೆ.
ಈಗ ಏನು ವಿ?ಯ? ಎಂದು ಕೇಳಿದಳು ಸುಗಂಧಾದೇವಿ ನಸು ನಕ್ಕು.
ನೀನು ಎಲ್ಲ ಅಧಿಕಾರವನ್ನೂ ಪ್ರಭಾಕರನಿಗೆ ವಹಿಸಿರುವೆ. ಅವನು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ. ತಾನೇ ಕಶ್ಮೀರದ ರಾಜನೆಂಬಂತೆ ವರ್ತಿಸುತ್ತಿದ್ದಾನೆ. ರಾಜ್ಯದ ಬೊಕ್ಕಸವನ್ನು ತನ್ನ ಸ್ವಂತದ್ದೆಂಬಂತೆ ಬಳಸಿಕೊಳ್ಳುತ್ತಿದ್ದಾನೆ. ನಾನು ನಿನ್ನೆ ಪೂರ್ವಸೂಚನೆ ನೀಡದೆ ರಾಜಕೋಶವನ್ನು ಪರಿಶೀಲಿಸಿದೆ. ಅಲ್ಲಿ ಒಂದು ಕವಡೆಯೂ ಉಳಿದಿಲ್ಲ. ಅದು ಹಾಗಿರಲಿ. ಹಣವು ಕರಗಿಹೋದರೆ ಮತ್ತೆ ಶೇಖರಿಸಬಹುದು. ಆದರೆ ಪ್ರಭಾಕರನು ಮಾಡಿರುವ ಧನದುರ್ವ್ಯಯಕ್ಕೆ ರಾಜನಾದ ನಾನು ಹೊಣೆಗಾರನಾಗಬೇಕಾಗುತ್ತದೆ. ಕಶ್ಮೀರಕ್ಕೇ ಕೆಟ್ಟಹೆಸರು ಬರುತ್ತದೆ. ಆದುದರಿಂದ ಪ್ರಭಾಕರನ ಮೇಲೆ ಒಂದ? ನಿಯಂತ್ರಣ ಏರ್ಪಡಿಸಬಯಸುವೆ. ಅದಕ್ಕೆ ನಿನ್ನ ಅನುಮತಿಯನ್ನು ಕೋರಲು ಬಂದಿದ್ದೇನೆ.
ಪ್ರಭಾಕರನು ರಾಜಕೋಶವನ್ನೆಲ್ಲ ಹೇಗೆ ಖರ್ಚುಮಾಡಿದ್ದಾನೆ?
ಹಣವೆಲ್ಲವನ್ನೂ ಶ್ಯಾಹೀ ರಾಜನ ವಿರುದ್ಧ ನಡೆದ ಯುದ್ಧಕ್ಕಾಗಿ ಬಳಸಿರುವೆನೆಂದು ಹೇಳುತ್ತಿದ್ದಾನೆ. ಆದರೆ ನಿಜವಾಗಿ ಹಣವೆಲ್ಲ ಅವನ ಸ್ವಂತ ವಿಲಾಸ ವಿನೋದಗಳಿಗಾಗಿಯೂ, ತನ್ನ ಮತದ ಪ್ರಚಾರಕ್ಕಾಗಿಯೂ ವ್ಯರ್ಥ ಮಾಡಿದ್ದಾನೆ.
ಇ?ಕ್ಕೂ ಆಪಾದನೆ ಏನು? ಕಶ್ಮೀರದ ಧನವನ್ನು ಅನ್ಯಮತ ಪ್ರಚಾರಕ್ಕೆ ಬಳಸಿರುವನೆಂದೆ? ಅಥವಾ ಪ್ರಜೆಗಳನ್ನು ದೋಚುತ್ತಿರುವನೆಂದೆ?
ಅದಾವುದೂ ಅಲ್ಲ. ಆಪಾದನೆ ರಾಜದ್ರೋಹದ್ದು.
ರಾಜದ್ರೋಹವೆ!?
ಹೌದು. ಪ್ರಭಾಕರನು ಸುಖರಾಜನೊಡನೆ ಕೈಬೆಸೆದು ಮಸಲತ್ತು ಮಾಡುತ್ತಿದ್ದಾನೆ. ನಿನಗೂ ಪ್ರಭಾಕರನಿಗೂ ನಡುವೆ ಬೆಳೆದಿರುವ ಆತ್ಮೀಯತೆ ಆ ಮಸಲತ್ತಿನ ಭಾಗ.
ಸುಗಂಧಾದೇವಿ ನಕ್ಕು ಹೇಳಿದಳು: ಗೋಪಾಲ! ನಿನ್ನ ಪರಾಮರ್ಶನೆ ನಿರಾಧಾರ. ಪ್ರಭಾರಕನಿಗೆ ನನ್ನಲ್ಲಿ ಪ್ರೇಮವಿರುವುದು ವಿಶೇ?ವೇನಲ್ಲ. ಆದರೆ ರಾಜ್ಯವನ್ನು ದಿವಾಳಿಗೊಳಿಸುವ ಅಭಿಪ್ರಾಯ ಅವನಿಗೆ ಇದೆಯೆಂದು ನನಗನಿಸುತ್ತಿಲ್ಲ.
ಅಮ್ಮ! ಅವರ ಮತಸಿದ್ಧಾಂತಗಳನ್ನು ನೀನು ಒಪ್ಪಿ ಅನುವರ್ತಿಸುತ್ತಿರುವುದು ಚಿಂತನೀಯ ವಿ?ಯ.
ಸನಾತನಧರ್ಮವು ಸ್ತ್ರೀಯರಿಗೆ ವಿಧಿಸಿರುವ ನಿರ್ಬಂಧಗಳು ಸರಿಯೆಂದು ನಿನ್ನ ಅಭಿಪ್ರಾಯವೆ?
ಅಮ್ಮ ನಮ್ಮ ಧರ್ಮದಲ್ಲಿ ಸ್ತ್ರೀಯರಿಗೆ ಇರುವ? ಗೌರವ ಬೇರೆಲ್ಲಿಯೂ ಇಲ್ಲ. ಸ್ತ್ರೀಯನ್ನು ಅವಮಾನಗೊಳಿಸಿದ ನರಮಹಾರಾಜನಿಗಾದ ದುರ್ಗತಿಯ ಬಗ್ಗೆ ಕೇಳಿಲ್ಲವೆ?
ಅವೆಲ್ಲ ಕಟ್ಟುಕತೆಗಳು. ಜನರನ್ನು ಮಾಯೆಯೊಳಕ್ಕೆ ಸಿಲುಕಿಸಿ ತಮ್ಮ ಅಧಿಕಾರವನ್ನು ಸ್ಥಾಪಿಸುವ ದಾರಿಗಳು.
ಅಮ್ಮ, ಸಂಪ್ರದಾಯದ ನಿಜಾರ್ಥವನ್ನು ಅರಿಯಬೇಕಾದರೆ ?ಡಂಗ ಶಿಕ್ಷಣ, ಶಾಸ್ತ್ರಾಧ್ಯಯನ, ಉಪನಿ?ತ್ತುಗಳ ಬೋzsಯ ಗ್ರಹಿಕೆ – ಇವೆಲ್ಲ ಬೇಕಾಗುತ್ತವೆ. ಹಾಗೆ ಅಧ್ಯಯನ ಮಾಡಿದಲ್ಲಿ ಪುರಾಣಾದಿಗಳ ಅರ್ಥವಂತಿಕೆ ಮನಸ್ಸಿಗೆ ಬಂದೀತು. ಅವೆಲ್ಲ ಮಾನವಸಮಾಜಕ್ಕೆ ಮಾರ್ಗದರ್ಶಕಗಳು. ಪ್ರಭಾಕರನು ಪ್ರಸಾರಮಾಡುತ್ತಿರುವ ಮತವು ಸನಾತನಧರ್ಮದ ಬಗೆಗಿನ ದ್ವೇ?ದಿಂದ ಜನಿಸಿರುವುದು. ಸಮಾಜವನ್ನು ಸಂಸ್ಕರಣಗೊಳಿಸಬಲ್ಲವರು ನಿಃಸ್ವಾರ್ಥಿ ಮಹರ್ಷಿಗಳು ಮಾತ್ರ. ಈಗ ಪ್ರಸಾರಗೊಳ್ಳುತ್ತಿರುವ ಮತವಾದರೋ ಸ್ವೃರಾಚಾರವನ್ನು ಪ್ರೋತ್ಸಾಹಿಸುತ್ತಿದೆ. ಸುಖಾನುಭವದಿಂದ ವ್ಯಕ್ತಿಯ ಅಂತಶ್ಚೈತನ್ಯ ವಿಕಸನಗೊಳ್ಳಬೇಕು, ಅವನನ್ನು ಭಗವಂತನಿಗೆ ಸಮೀಪಗೊಳಿಸಬೇಕು. ಈ ಹೂಸ ಮತವಾದರೋ ವಿ?ಯದ ಮೇಲ್ಮೈಯನ್ನು ಮಾತ್ರ ಸ್ಪರ್ಶಿಸುತ್ತಿವೆ…. ಹೆಚ್ಚು ಹೇಳುವ ಆವಶ್ಯಕತೆ ಇಲ್ಲ. ನಾಳೆ ಮುಂಜಾನೆಯೊಳಗೆ ನೀನು ಪ್ರಭಾಕರನನ್ನು ನನ್ನ ಅಧೀನಕ್ಕೆ ಒಪ್ಪಿಸಬೇಕು. ಇಲ್ಲವಾದಲ್ಲಿ ಅವನನ್ನು ಬಂಧಿಸುತ್ತೇನೆ. ನಿನ್ನ ಮೇಲಿರುವ ಗೌರವದಿಂದ ಮುನ್ಸೂಚನೆ ನೀಡುತ್ತಿದ್ದೇನೆ. ಸುಖವರ್ಮನನ್ನು ಈಗಾಗಲೆ ಬಂಧಿಸಿದ್ದಾಗಿದೆ. ಪ್ರಭಾಕರನ ನಿಜರೂಪ ಏನೆಂಬುದು ಸಾಕ್ಷ್ಯಪಟ್ಟಿದೆ…. ನಿನ್ನ ಮತ್ತು ಪ್ರಭಾಕರನ ಮನಸ್ಸುಗಳಲ್ಲಿ ದೋ?ಭಾವನೆ ಇರದಿದ್ದಲ್ಲಿ ಪ್ರಭಾಕರನು ಹೀಗೆ ತಲೆಮರೆಸಿಕೊಂಡು ಇರುತ್ತಿರಲಿಲ್ಲ, ನೀನೂ ಹೀಗೆ ತಲೆತಗ್ಗಿಸಿ ಕುಳಿತಿರುತ್ತಿರಲಿಲ್ಲ.
ಸುಗಂಧಾದೇವಿ ಮೌನವಾಗಿ ಕುಳಿತಿದ್ದಳು. ಅವಳ ಕಿವಿಗಳಲ್ಲಿ ಗೋಪಾಲವರ್ಮನ ಮಾತುಗಳು ಅನುರಣಿಸುತ್ತಿದ್ದವು. ಅವಳ ಕಣ್ಣುಗಳು ಹನಿದುಂಬಿದವು. ಭವಿ?ತ್ಕಾಲದಲ್ಲಿ ಜನರು ನನ್ನ ಬಗೆಗೆ ಏನೆಂದುಕೊಂಡಾರು ಎಂದು ಮೊದಲಬಾರಿಗೆ ಚಿಂತಿಸತೊಡಗಿದಳು. ದೇಹಭೋಗವೇ ಸರ್ವಸ್ವವೆಂದು ಭಾವಿಸಿ ತಾನು ದೊಡ್ಡ ತಪ್ಪು ಮಾಡಿದೆನೆ?
ಏನೋ ನಿರ್ಧಾರ ತಳೆದವಳಂತೆ ಪಕ್ಕದ ಕೊಠಡಿಗೆ ಹೋದಳು. ಅದು ಖಾಲಿಯಾಗಿತ್ತು. ಪ್ರಭಾಕರನು ಅಲ್ಲಿಂದ ಕಾಲುಕಿತ್ತಿದ್ದ. ಅವನು ನಿ?ಮಿಸಿದ್ದುದೇ ಗೋಪಾಲವರ್ಮನು ಹೇಳಿದ್ದುದರ ತಥ್ಯವನ್ನು ಸಾರುವಂತಿತ್ತು. ತಾನು ಮಾಡಿದ್ದುದಕ್ಕೆ ಪ್ರಾಯಶ್ಚಿತ್ತ ಹೇಗೆ?
ಗೋಪಾಲವರ್ಮನು ದಾಹರೋಗಪೀಡಿತನಾಗಿದ್ದಾನೆ; ತನಗೆ ದಂಡನೆ ತಪ್ಪದೆಂದು ತಿಳಿದ ಪ್ರಭಾಕರನು ಪಲಾಯನ ಮಾಡಿದ್ದಾನೆ; ತನ್ನ ಬಂಧುವಾದ ರಾಮದೇವನ ಮೂಲಕ ರಾಜನಿಗೆ ಮಾಟ ಮಾಡಿಸುತ್ತಿದ್ದಾನೆ – ಈ ವಾರ್ತೆಯು ಕಶ್ಮೀರದಲ್ಲೆಲ್ಲ ಕಾಳ್ಗಿಚ್ಚಿನಂತೆ ಹರಡಿತ್ತು. ರಾಜನ ಆರೋಗ್ಯಸ್ಥಿತಿಯನ್ನು ಅರಿಯುವ ಕುತೂಹಲದಿಂದ ಜನರು ರಾಜಭವನದ ಸುತ್ತಲೂ ಗುಂಪು ಸೇರತೊಡಗಿದರು. ಸುಗಂಧಾದೇವಿಯು ಅತ್ಯಂತ ಆಸ್ಥೆಯಿಂದ ಗೋಪಾಲವರ್ಮನ ಆರೈಕೆ ಮಾಡತೊಡಗಿದಳು. ತನ್ನ ಹಿಂದಿನ ದಿನಗಳ ಸ್ವೇಚ್ಛಾವರ್ತನೆಯ ಬಗೆಗೆ ಅವಳಿಗೆ ದಿನದಿಂದದಿನಕ್ಕೆ ಹೆಚ್ಚು ಬೇಸರವಾಗತೊಡಗಿತ್ತು. ಒಬ್ಬರನ್ನೊಬ್ಬರು ದೃಷ್ಟಿಸಿ ನೋಡುವಾಗ ಒಬ್ಬರಲ್ಲಿ ದೈವತ್ವ ಭಾವನೆ, ಇನ್ನೊಬ್ಬರಲ್ಲಿ ಪಶ್ಚಾತ್ತಾಪಭಾವನೆ.
ಯಾವ ಚಿಕಿತ್ಸೆಯೂ ಫಲಿಸದೆ ಗೋಪಾಲವರ್ಮನ ಪ್ರಾಣವು ಪಂಚಭೂತಗಳಲ್ಲಿ ಲೀನವಾಯಿತು.
ಸುಗಂಧಾದೇವಿ ನಿಶ್ಚೇ?ಳಾದಳು.
* * * * *
ತನ್ನ ಶೋಕವನ್ನು ಅಣಗಿಸಿಕೊಂಡು ಸುಗಂಧಾದೇವಿ ರಾಜ್ಯದ ಆಡಳಿತಕ್ಕೆ ಗಮನ ಕೊಡತೊಡಗಿದಳು. ಗೋಪಾಲವರ್ಮನ ಸೋದರ ಸಂಕಟವರ್ಮನನ್ನು ಹುಡುಕಿ ಕರೆತರುವಂತೆ ಚಾರರನ್ನು ಕಳಿಸಿದಳು.
ಕ್ಷಿಪ್ರವಾಗಿ ಸುಗಂಧಾದೇವಿಯು ತಮ್ಮ ರಾಜ್ಯದ ಬಗೆಗೆ ಶತ್ರುಭಾವನೆ ಬೆಳೆಸಿಕೊಂಡಿದ್ದ ಕಾಖೋದ ರಾಜ್ಯದ ಮೇಲೆ ದಂಡಯಾತ್ರೆ ನಡೆಸಿದಳು. ರಾಜಸೈನ್ಯ ಬರುತ್ತಿರುವ ಸುಳಿವು ಸಿಕ್ಕಿದೊಡನೆ ರಾಮದೇವನು ಆತ್ಮಹತ್ಯೆ ಮಾಡಿಕೊಂಡ. ಪ್ರಭಾಕರನು ತನ್ನ ಮಗನನ್ನೂ ಪತ್ನಿಯನ್ನೂ ಬೇರೆ ರಾಜ್ಯಕ್ಕೆ ಕಳಿಸಿ ತಾನು ಕಶ್ಮೀರ ಸೈನ್ಯದ ವಿರುದ್ಧ ಯುದ್ಧಕ್ಕೆ ನಿಂತ.
ಸುಗಂಧಾದೇವಿಯು ಅನಾಯಾಸವಾಗಿ ಪ್ರಭಾಕರವರ್ಮನ ಶಿರಶ್ಫೇದ ಮಾಡಿದಳು.
ಹೀಗೆ ಸುಗಂಧಾದೇವಿಯ ಹಿಂದಿನ ದುಶ್ಚರ್ಯೆಗಳಿಗೆ ಪ್ರಕ್ಷಾಳನೆಯಾದಂತಾಯಿತು.
ಸಂಕಟವರ್ಮನನ್ನು ಸುಗಂಧಾದೇವಿಯು ಕಶ್ಮೀರದ ರಾಜನನ್ನಾಗಿ ಮಾಡಿದಳು.
ಆದರೆ ಅಭಿಷಿಕ್ತನಾದ ಹತ್ತೇ ದಿವಸಗಳಲ್ಲಿ ಸಂಕಟವರ್ಮನು ಮರಣಹೊಂದಿದನು. ಗರ್ಭಸ್ಥವಾಗಿದ್ದ ಗೋಪಾಲವರ್ಮನ ಸಂತತಿಯೂ ಉಳಿಯಲಿಲ್ಲ.
ಈ ದುರ್ದಶೆಗೆಲ್ಲ ತನ್ನ ಹಿಂದಿನ ದುಶ್ಚರ್ಯೆಗಳೇ ಕಾರಣವೆಂದು ಸುಗಂಧಾದೇವಿಗೆ ತೀವ್ರವಾಗಿ ಅನಿಸತೊಡಗಿತು.
ಕ್ರಿ.ಶ. ೯೦೪ನೇ ವ?ದಲ್ಲಿ ಪ್ರಜೆಗಳ ಒಕ್ಕೊರಲ ಪ್ರಾರ್ಥನೆಯಂತೆ ಸುಗಂಧಾದೇವಿ ತಾನೇ ರಾಜ್ಯಸೂತ್ರಗಳನ್ನು ವಹಿಸಿಕೊಂಡಳು.
ಭಾರತೀಯ ಪರಂಪರೆಯಲ್ಲಿ ಆವಶ್ಯಕತೆ ಕಂಡಾಗ ಮಹಿಳೆಯೂ ಸಮರ್ಥವಾಗಿ ರಾಜ್ಯಭಾರವನ್ನು ನಡೆಸಬಲ್ಲಳೆಂಬುದನ್ನು ನಿರೂಪಿಸಿದಳು, ಸುಗಂಧಾದೇವಿ ಧರ್ಮಸಂಸ್ಥಾಪನೆಗೆ ಆದ್ಯತೆ ನೀಡಿದಳು. ಅಪಾರ ಹಣ ವ್ಯಯಮಾಡಿ ಗೋಪಾಲಪುರ, ಗೋಪಾಲ ಮಠ, ಗೋಪಾಲ ಕೇಶವಾಲಯಗಳನ್ನು ನಿರ್ಮಿಸಿದಳು. ತನ್ನ ಹೆಸರಿನಲ್ಲಿಯೆ ಸುಗಂಧಾಪುರವೆಂಬ ಭವ್ಯ ನಗರವನ್ನೂ ನಿರ್ಮಾಣ ಮಾಡಿಸಿದಳು. ಪಂಡಿತರನ್ನೆಲ್ಲ ವಿಶೇ?ವಾಗಿ ಆದರಿಸಿದಳು. ಸಂಸ್ಕಾರಪ್ರದ ಸಾಹಿತ್ಯದ ಸೃಷ್ಟಿಗೆ ಪ್ರೋತ್ಸಾಹ ನೀಡಿದಳು.
ಹೀಗೆ ಎರಡು ವ?ಗಳ ಅವಧಿಯಲ್ಲಿ ರಾಜ್ಯಪಾಲನೆಯನ್ನು ಸುವ್ಯವಸ್ಥಗೊಳಿಸಿದ ಮೇಲೆ ನಿರ್ಜಿತವರ್ಮನ ಕುಮಾರನಾದ ಹತ್ತು ವ? ಪ್ರಾಯದ ಪಾರ್ಥನೆಂಬವನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದಳು. ರಾಜನ ಅಶಕ್ತತೆಯನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಲಾಗದಂತೆ ಉನ್ನತಮಟ್ಟದ ಉಸ್ತುವಾರಿ ಮಂಡಳಿಯನ್ನು ನೇಮಿಸಿದಳು. ಹೀಗೆ ರಾಜ್ಯ ವ್ಯವಹಾರಗಳನ್ನು ಸುವ್ಯವಸ್ಥಗೊಳಿಸಿದ್ದಾದ ಮೇಲೆ ತನ್ನ ಹಿಂದಿನ ದುಶ್ಚರ್ಯೆಗಳಿಗೆ ಪ್ರಾಯಶ್ಚಿತ್ತರೂಪವಾಗಿ ತಪಸ್ಸನ್ನು ನಡೆಸಲು ಪು?ಪುರದ ಕೇಶವಾಲಯಕ್ಕೆ ತೆರಳಿದಳು. ಪ್ರಜೆಗಳು ಖಿನ್ನಮನಸ್ಕರಾಗಿ ಆಕೆಯನ್ನು ಶೋಕಪೂರ್ಣವಾಗಿ ಬೀಳ್ಕೊಟ್ಟರು.