ಸಂಪೂರ್ಣ ಜಗತ್ತು ಶಕ್ತಿಯ ಮೇಲೆ ಅವಲಂಬಿತವಾಗಿದೆ. ನಾವು ಬಳಸುವ ಯಂತ್ರಗಳಿಗೆ, ಬೆಳಕಿನ ಮೂಲಕ್ಕೆ, ಓಡಾಟಕ್ಕೆ ಹಾಗೂ ಮಾಹಿತಿ, ಮನರಂಜನೆಗಳಿಗೆ ಪ್ರಾಕೃತಿಕವಾಗಿ ಸಿಗುವ ಶಕ್ತಿಯನ್ನು ಮಾರ್ಪಡಿಸಿಕೊಂಡು ಬಳಸುತ್ತಿದ್ದೇವೆ. ಪೆಟ್ರೋಲಿಯಂ, ಕಲ್ಲಿದ್ದಲು ಮುಂತಾದ ’ಬಳಸಿ ಮುಗಿಯುವ’ ಅಥವಾ ’ನವೀಕರಿಸಲಾಗದ’ ಇಂಧನಗಳು ಒಂದೆಡೆಯಾದರೆ, ಜಲಪಾತಗಳಿಂದ, ಗಾಳಿಯಿಂದ, ಸೂರ್ಯನ ಬೆಳಕಿನಿಂದ ಪಡೆಯುವ ’ಬಳಸಿದರೂ ನ?ವಾಗದ’ ಅಥವಾ ’ನವೀಕರಿಸಲಾಗುವ’ ಇಂಧನಗಳು ಇನ್ನೊಂದು ಬಗೆ.
ನವೀಕರಿಸಲಾಗುವ ಮೂಲಗಳಿಂದ ಉತ್ಪಾದನಾ ವೆಚ್ಚ ಜಾಸ್ತಿ ಎನ್ನುವ ಕಾರಣಕ್ಕೆ ಅವುಗಳ ಬಳಕೆ ಇನ್ನೂ ಕಡಮೆ. ವಾಹನಗಳಿಗೆ ಪೆಟ್ರೋಲ್/ಡೀಸೆಲ್; ರೈಲ್ವೇ ಮತ್ತು ವಿದ್ಯುತ್ತಿಗೆ ಕಲ್ಲಿದ್ದಲು ಹೆಚ್ಚು ಬಳಕೆಯಲ್ಲಿವೆ. ಆದರೆ ಪೆಟ್ರೋಲ್ ಅಭಾವ ನಮ್ಮನ್ನು ತೀವ್ರವಾಗಿ ಕಾಡುವ ಮೊದಲೇ ಜಗತ್ತು ನವೀಕರಿಸಲಾಗುವ ಇಂಧನಗಳತ್ತ ಮುಖಮಾಡಬೇಕಾಗಿದೆ. ಮಾಹಿತಿತಂತ್ರಜ್ಞಾನ ಕ್ಷೇತ್ರದಲ್ಲಾದ ಕ್ರಾಂತಿಯ ನಂತರ ಮುಂದಿನ ಬಹುದೊಡ್ಡ ಸದ್ದು ಇಂಧನಕ್ರಾಂತಿಯದ್ದಾಗಲಿದೆ.
ಇಂಧನದ ಕೊರತೆ ತೀವ್ರವಾಗಿ ಜಗತ್ತನ್ನು ಕಾಡುವ ಮೊದಲು ನವೀಕರಿಸುವ ಇಂಧನದತ್ತ ದಾರಿ ಬದಲಿಸಬೇಕು. ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ.
ಗಾಳಿ/ನೀರು/ಬೆಳಕು
ನಮ್ಮ ಬದುಕಿಗೆ ಮೂಲವಾಗಿರುವ ಗಾಳಿ, ನೀರು, ಬೆಳಕುಗಳೇ ಮರುಬಳಕೆಯಾಗುವ ಇಂಧನಕ್ಕೆ ಕೂಡ ಮೂಲವಾಗಿರುವುದು ಅಚ್ಚರಿಯ ಸಂಗತಿ. ಜಲಚಕ್ರಗಳು, ಗಾಳಿಯಂತ್ರಗಳು, ಸೋಲಾರ್ ಪನೆಲ್ಗಳು ಭವಿಷ್ಯದ ಇಂಧನಕ್ಷೇತ್ರದ ಬಹುಪಾಲನ್ನು ಪೂರೈಸಲಿವೆ. ಈ ಮೂಲಗಳಿಂದ ಉತ್ಪಾದಿಸಿದ ಇಂಧನಗಳು ಪ್ರಕೃತಿಸಂಪತ್ತನ್ನು ಉಳಿಸುವುದಲ್ಲದೆ, ಮಾಲಿನ್ಯವನ್ನೂ ಕಡಮೆಯಾಗಿಸುತ್ತವೆ. ಉರುವಲು ಒಲೆಯನ್ನು ಕಡಮೆಗೊಳಿಸಿ, ಅಡುಗೆ ಅನಿಲವನ್ನು ಬಳಸಲು ಆರಂಭಿಸಿದ್ದು ಮಾಲಿನ್ಯ ತಡೆಯ ಒಂದು ಮೆಟ್ಟಿಲು. ವಿದ್ಯುತ್ ಬಳಸುವ ಇಂಡಕ್ಷನ್ಒಲೆ ಇನ್ನೊಂದು ಮೆಟ್ಟಿಲಾಗಲಿದೆ. ಜೈವಿಕ ಇಂಧನಗಳ ಬಳಕೆ ಕೂಡ ಸ್ವಚ್ಛ ಇಂಧನದ ಪಾಲಿಗೆ ಅತಿ ದೊಡ್ಡ ಕೊಡುಗೆಯಾಗಲಿದೆ.
ವಾಹನಗಳು ಪೆಟ್ರೋಲಿಯಂನ ಬಹುದೊಡ್ಡ ಬಳಕೆದಾರರು. ನೈಸರ್ಗಿಕ ಅನಿಲಗಳನ್ನು ಬಳಸಿ ವಾಹನಗಳನ್ನು ಓಡಿಸುವ ಪ್ರಯತ್ನ ಹಲವೆಡೆ ನಡೆದಿವೆ. ವಿದ್ಯುತ್ಚಾಲಿತ ವಾಹನಗಳು ಕೆಲವು ಬಂದಿದ್ದರೂ, ಬೆರಳೆಣಿಕೆಯ? ಬ್ರ್ಯಾಂಡ್ಗಳು ಮಾತ್ರ ಗೋಚರಿಸುತ್ತವೆ. ಭಾರತದಲ್ಲಿ ಮೊದಲಿನ ರೇವ, ಈಗಿನ ಮಹೀಂದ್ರ e೨o ಕಾರುಗಳು ವಿದ್ಯುತ್ ಅವಲಂಬಿತವಾಗಿವೆ. ಒಂದ? ದ್ವಿಚಕ್ರ ವಾಹನಗಳೂ ಇವೆ. ಆದರೆ ಇವುಗಳು ಅದರ? ವೈಶಿ?ಗಳುಳ್ಳ ಇತರ ವಾಹನಗಳಿಗಿಂತ ದುಬಾರಿಯಾಗಿವೆ. ತಂತ್ರಜ್ಞಾನ ಬೆಳೆದಂತೆ ಕಡಮೆ ವೆಚ್ಚದಲ್ಲಿ ಇಂತಹ ವಾಹನಗಳು ಬರಬಹುದು.
ಎಲೆಕ್ಟ್ರಿಕ್ ವಾಹನಗಳು ಸಾಕ? ಬಳಕೆಗೆ ಬರದಿರಲು ಇನ್ನೊಂದು ಕಾರಣ ಅಗತ್ಯವಿರುವ ಚಾರ್ಜಿಂಗ್ ಪಾಯಿಂಟ್ಗಳ ಕೊರತೆ. ಒಮ್ಮೆ ಚಾರ್ಜ್ ಮಾಡಿದರೆ ೨೦-೪೦ ಕಿಲೋಮೀಟರುಗಳ? ಸಾಗುವ ಇವುಗಳನ್ನು ದೂರ ಪ್ರಯಾಣಕ್ಕೆ ಅವಲಂಬಿಸಲಾಗದು. ಹಾಗಾಗಿ ಕೇವಲ ನಗರದೊಳಗಿನ ಓಡಾಟಕ್ಕ? ಈಗಿರುವ ಎಲೆಕ್ಟ್ರಿಕ್ ಕಾರುಗಳು ಸೀಮಿತವಾಗಿವೆ.
ಟಾಟಾ ಕಂಪೆನಿಯು ಮೆಗಾಪಿಕ್ಸೆಲ್ ಎಂಬ ಕಾರಿನ ಮಾದರಿಯನ್ನು ಪರಿಚಯಿಸಿದ್ದು, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಎರಡೂ ಇಂಧನಗಳನ್ನು ಬಳಸಿ ಚಲಿಸಬಲ್ಲ ಹೈಬ್ರಿಡ್ ಕಾರು ಇದು. ಒಂದು ಲೀ. ಪೆಟ್ರೋಲ್ ಬಳಸಿ ವಿದ್ಯುತ್ ಸಹಾಯವನ್ನೂ ಸೇರಿಸಿ ನೂರು ಕಿ.ಮೀ. ಚಲಿಸಲು ಸಾಧ್ಯವೆಂದು ಟಾಟಾ ತೋರಿಸಿಕೊಟ್ಟಿದೆ. ಮುಂದಿನ ವ?ಗಳಲ್ಲಿ ಈ ಕಾರು ರಸ್ತೆಗಿಳಿಯಲಿದೆ ಎಂದು ಟಾಟಾ ಹೇಳಿದೆ.
ದೈತ್ಯ ಸಾಫ್ಟ್ವೇರ್ ಕಂಪೆನಿಗಳಾದ ಗೂಗಲ್ ಹಾಗೂ ಆಪಲ್ ಈಗಾಗಲೇ ಡ್ರೈವರ್ರಹಿತ ಕಾರುಗಳ ಬಗ್ಗೆ ಸಂಶೋಧನೆಗಳಿಗಾಗಿ ಸಾಕ? ವ್ಯಯಿಸಿವೆ. ಕೆಲವು ವ?ಗಳಲ್ಲಿ ಇವುಗಳು ರಸ್ತೆಗಳನ್ನೆಲ್ಲಾ ತುಂಬಬಹುದು. ಇವುಗಳು ವಾಹನ ಮತ್ತು ಇಂಧನ ಜಗತ್ತಿನ ಅತಿದೊಡ್ಡ ಬದಲಾವಣೆಗೆ ನಾಂದಿಹಾಡಲಿವೆ. ದೈತ್ಯ ಕಂಪೆನಿಗಳೇ ಇವುಗಳ ಹಿಂದಿರುವುದರಿಂದ ಇವು ಭಾರಿ ಬದಲಾವಣೆ ತರುವುದರಲ್ಲಿ ಸಂಶಯವಿಲ್ಲ.
ಬೃಹತ್ ಗಾಳಿಯಂತ್ರಗಳತ್ತ ದಾಪುಗಾಲಿಡುತ್ತಿರುವ ಭಾರತ
ಹಲವು ವರ್ಷಗಳಿಂದ ಬೆಳೆಯುತ್ತಿರುವ ವಿದ್ಯುತ್ ಕೊರತೆಯಿಂದ ಕಂಗೆಟ್ಟಿದ್ದ ಭಾರತ ಕಳೆದ ಕೆಲವು ವರ್ಷಗಳಿಂದ ಮಿಗತೆ ವಿದ್ಯುತ್ ಉತ್ಪಾದನೆಯನ್ನು ಸಾಧಿಸುತ್ತಿದೆ. ಸೋಲಾರ್ ಹಾಗೂ ವಾಯು ವಿದ್ಯುತ್ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದೆ. ಸೋಲಾರ್ ವಿದ್ಯುತ್ತಿನ ಉತ್ಪಾದನಾವೆಚ್ಚವನ್ನು ೩೦%ಗೆ ತಗ್ಗಿಸಿಕೊಂಡಿದೆ. ದೇಶವೀಗ ಜಗತ್ತಿನಲ್ಲಿ ೫ನೇ ಅತಿ ಹೆಚ್ಚು ಗಾಳಿಯಂತ್ರಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಇಷ್ಟು ವರ್ಷಗಳಿಂದ ವಿದ್ಯುತ್ ಕಾಣದ ಎಷ್ಟು ಹಳ್ಳಿಗಳು ವಿದ್ಯುತ್ ಪಡೆದಿವೆ. ಇನ್ನೊಂದು ವರ್ಷದೊಳಗೆ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ತಲಪಲಿದೆ. ಎಲ್ಇಡಿ ದೀಪ ಯೋಜನೆ ಸೇರಿದಂತೆ ಹಲವು ಹೆಜ್ಜೆಗಳು ವಿದ್ಯುತ್ ಕ್ಷೇತ್ರದಲ್ಲಿ ದೇಶವನ್ನು ಮುನ್ನುಗ್ಗುವಂತೆ ಮಾಡಿವೆ. ಅಸಾಂಪ್ರದಾಯಿಕ ಇಂಧನ ಉತ್ಪಾದನೆ, ವಿದ್ಯುತ್ಚಾಲಿತ ವಾಹನಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನ ಯೋಜನೆಗಳು ನಡೆಯುತ್ತಿವೆ. ನೈಸರ್ಗಿಕ ಇಂಧನ ಬಳಕೆಯ ಹಲವು ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದೆ. ಸೋಲಾರ್ ಅಳವಡಿಸಿಕೊಂಡವರ ಬಳಿಯಿಂದ ವಿದ್ಯುತ್ ಖರೀದಿಸಿ, ಅದನ್ನು ವಿತರಣಾ ವ್ಯವಸ್ಥೆಗೆ ಸೇರಿಸುವ ಯೋಜನೆ ಕೂಡಾ ಜಾರಿಯಲ್ಲಿದೆ. ಪ್ಯಾರಿಸ್ನಲ್ಲಿ ಕೆಲ ವ?ಗಳ ಹಿಂದೆ ನಡೆದ ಹವಾಮಾನ ರಕ್ಷಣೆ ಕುರಿತ ಒಪ್ಪಂದದ ಜಾರಿಯಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಹೀಗಾಗಿ ಪ್ರಕೃತಿಗೆ ಪೂರಕವಾದ ಇಂಧನಕ್ರಾಂತಿಯಲ್ಲಿ ನಮ್ಮ ದೇಶವೂ ಮಹತ್ತ್ವದ ಪಾತ್ರ ವಹಿಸಲಿದೆ ಎಂಬುದರಲ್ಲಿ ಸಂಶಯವಿಲ್ಲ.
ಇತರ ಪರಿಣಾಮಗಳು
ಪೆಟ್ರೋಲಿಯಂಗಾಗಿ ಜಗತ್ತು ಅತೀ ಹೆಚ್ಚು ಅವಲಂಬಿತವಾಗಿರುವುದು ಅರಬ್ರಾಷ್ಟ್ರಗಳನ್ನು. ಇದರಿಂದಾಗಿ ಆ ದೇಶಗಳು ಶ್ರೀಮಂತವಾಗಿರುವುದಲ್ಲದೆ, ಭಯೋತ್ಪಾದನೆಯಂತಹ ಕೃತ್ಯಗಳಿಗೆ ಈ ಹಣದಿಂದ ಪೋ?ಣೆ ಸಿಗುವುದೂ ತಿಳಿದಿರುವ ಸಂಗತಿ. ಪೆಟ್ರೋಲ್ ಅವಲಂಬನೆ ಕಡಮೆಯಾದ? ಅದು ಭಯೋತ್ಪಾದನೆ ನಿಗ್ರಹಕ್ಕೆ ಕೂಡ ಪರೋಕ್ಷವಾಗಿ ನೆರವಾಗುತ್ತದೆ.