ಹಲವರು ವಿಕ್ಷಿಪ್ತಸ್ವಭಾವದ ನ್ಯಾಯಾಧೀಶರುಗಳ ವರ್ತನೆಯು ಇಡೀ ನ್ಯಾಯಾಂಗವ್ಯವಸ್ಥೆಯ ಬಗೆಗೆ ನಾಡಿನ ಜನತೆಯ ಮನಸ್ಸಿನಲ್ಲಿರುವ ಪ್ರತಿಮೆಗೆ ಭಂಗ ಉಂಟುಮಾಡುತ್ತಿರುವುದು ದೊಡ್ಡ ದುರಂತ. ಏಕೆಂದರೆ ನಮ್ಮ ಸ್ವೀಕೃತ ರಾಜ್ಯಾಂಗದಲ್ಲಿ ಅತ್ಯುಚ್ಚ ನಿರ್ಣಯಸ್ಥಾನವೆಂದರೆ ನ್ಯಾಯಾಂಗವೇ. ಒಂದು ರಾಜ್ಯದ ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿರುವ ನ್ಯಾ|| ಸಿ.ಎಸ್. ಕರ್ಣನ್ ಅವರು ಸಹ-ನ್ಯಾಯಾಧೀಶರುಗಳ ಮೇಲೆಯೇ ಭ್ರಷ್ಟಾಚಾರ ಆರೋಪ ಮಾಡುವುದು, ನ್ಯಾಯಾಧೀಶರ ಆಯ್ಕೆಗೆ ಸಂಬಂಧಿಸಿದ ಕ್ರಮಗಳನ್ನೇ ಪ್ರಶ್ನಿಸುವುದು, ಸರ್ವೋಚ್ಚ ನ್ಯಾಯಾಲಯ ಹೊರಡಿಸಿದ ವರ್ಗಾವಣೆಯನ್ನೇ ಧಿಕ್ಕರಿಸುವುದು, ತಮ್ಮ ಅಧಿಕಾರಪರಿಧಿಗೆ ಮೀರಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಬಗೆಗೇ ಆಪಾದನೆ ಮಾಡಿ ಪ್ರಧಾನಮಂತ್ರಿಗಳಿಗೇ […]
ನ್ಯಾಯಾಂಗ ದೃಢಿಷ್ಠವಾಗಲಿ
Month : July-2017 Episode : Author : ಎಸ್.ಆರ್. ರಾಮಸ್ವಾಮಿ