ಕಲೆ ಒಳಗಣ್ಣಿಗೆ ಮಾತ್ರ ಗೋಚರಗೊಳ್ಳುವ ಸತ್ಯ
ಭಾರತೀಯ ಚಿತ್ರರಚನಾ ವಿಧಾನಗಳನ್ನು ಗಮನಿಸುವುದಾದರೆ, ’ವಿ?ಧರ್ಮೋತ್ತರ ಪುರಾಣ’ ಮತ್ತು ’ಚಿತ್ರಲಕ್ಷಣ’ ಗ್ರಂಥಗಳಲ್ಲಿ ಚಿತ್ರರಚನೆಗೆ ಅಗತ್ಯವಾದ ಲಕ್ಷಣಗಳನ್ನು ಸೂಚಿಸಲಾಗಿದೆ. ದೇವರ ಮತ್ತು ಮಾನವರ ಚಿತ್ರಗಳ ರಚನೆಯ ಲಕ್ಷಣಗಳ ವಿವರಗಳು ಅವುಗಳಲ್ಲಿ ಉಕ್ತವಾಗಿವೆ:
’ಯಥಾ ಸುಮೇರುಃ ಪ್ರವರೋ ನಗಾನಾಂ
ಯಥಾಂಡಜಾನಾಂ ಗರುಡೋ ಪ್ರಧಾನಃ |
ಯಥಾ ಜನಾನಾಂ ಪ್ರವರಃ ಕ್ಷಿತೀಶಃ
ತಥಾ ಕಲಾನಾಮಿಹ ಚಿತ್ರಕಲ್ಪಃ ||
ಬೆಟ್ಟಗಳಲ್ಲಿ ಸುಮೇರು, ಹಾರುವ ಪಕ್ಷಿಗಳಲ್ಲಿ ಗರುಡ, ಮನುಷ್ಯರ ನಡುವೆ ರಾಜನು ಹೇಗೋ ಹಾಗೆ ವಿದ್ಯೆಗಳಲ್ಲಿ ಚಿತ್ರಕಲೆಯು; ನದಿಗಳೆಲ್ಲ ಸಾಗರವನ್ನು ಸೇರುವಂತೆ, ಗ್ರಹಗಳೆಲ್ಲ ಸೂರ್ಯನ ಸುತ್ತ ಸುತ್ತುವಂತೆ ಎಲ್ಲ ವಿದ್ಯೆಗಳೂ ಚಿತ್ರವನ್ನು ಆಶ್ರಯಿಸಿರುತ್ತವೆ. ಎಲ್ಲ ಕಲೆಗಳಿಗೂ ಚಿತ್ರಕಲೆಯೇ ಆಕರ ಮತ್ತು ಕ್ರಿಯೆಗಳೆಲ್ಲವೂ ಚಿತ್ರಕಲೆಯ ಸುತ್ತಲೇ ಇವೆ.
ಸೃಷ್ಟಿಕರ್ತನಾದ ಬ್ರಹ್ಮನು ಲೋಕದ ಉದ್ಧಾರಕ್ಕಾಗಿ ದಾರಿಯೊಂದನ್ನು ಕುರಿತು ಯೋಚಿಸಿದ್ದು, ಅದು ಧ್ಯಾನವಾಗಿ ಮಾರ್ಪಾಟು ಆಯಿತು ಮತ್ತು ಧ್ಯಾನದಲ್ಲಿ ಪಾಲ್ಗೊಂಡ ಜನರು ಧ್ಯಾನದ ಪ್ರಭಾವಕ್ಕೆ ಒಳಪಟ್ಟು ಅಂತರಂಗಕ್ಕೆ ಗೋಚರವಾದ, ಸತ್-ಚಿತ್-ಆನಂದದಿಂದ ಉಂಟಾದದ್ದು ಆಕಾರ. ಹೀಗೆ ರೂಪಗೊಂಡ ಆಕಾರಕ್ಕೆ ಶೋಭೆ ನೀಡಲು ಯತ್ನಿಸಿದ ವಿವರಗಳೇ ಕಲೆಯ ಉಗಮವೆಂಬುದು ಇಲ್ಲಿ ತಾತ್ಪರ್ಯವಾಗಿದೆ.
ಕಲೆಯು ಏಕಿಷ್ಟು ಮಹತ್ತ್ವದ್ದು ಎಂದೆನಿಸುತ್ತದೆಯೆಂದರೆ ದಿನನಿತ್ಯದ ಮಾತುಕತೆಗಳಿಗೆ, ಗೋಳಾಟಗಳಿಗೆ ಸಾಧಾರಣವಾದ ಧ್ವನಿಯೇ ಸಾಕು; ಆದರೆ ಇದೇ ಧ್ವನಿ ಹಾಡಾಯಿತೆಂದರೆ ಅದು ನಮ್ಮಲ್ಲಿ ಆನಂದವನ್ನು, ಭಾವಸಮೂಹವನ್ನು ತುಂಬಬಲ್ಲದು. ಕಲೆಯು ಮಾನವನ ಜೀವನಸಂಪತ್ತನ್ನು ತೆರೆದು ತೋರಿಸುತ್ತದೆ. ಅದಕ್ಕೆಂದೇ ಜಗತ್ತು ಕಾಣುವುದನ್ನೂ ಮೀರಿ ಆದರಾಚೆಗೆ ತೊಡಗಿಕೊಳ್ಳುವುದು ಮತ್ತು ಅದನ್ನು ಸುಂದರಗೊಳಿಸುವುದೇ ಕಲಾವಿದನ ಪ್ರವೃತ್ತಿಯಾಗಿದೆ.
ಭಾರತದಲ್ಲಿ ಚಿತ್ರಕಲೆಯ ಇತಿಹಾಸವನ್ನು ಗಮನಿಸುವಾಗ ಕ್ರಿ.ಪೂ. ೪೦೦ರ ಮೊದಲೇ (ಬುದ್ಧಪೂರ್ವದಲ್ಲಿ) ಭಾರತದಲ್ಲಿ ಎಲ್ಲ ಕಲೆಗಳು ಪ್ರವರ್ಧಮಾನಸ್ಥಿತಿಯಲ್ಲಿದ್ದವೆಂದು ತಿಳಿಯುತ್ತದೆ. ಈ ಬಗ್ಗೆ ೬ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಚೀನೀ ಯಾತ್ರಿಕ ಹ್ಸಿಯೆ ಹೊ ಎಂಬಾತ ಉಲ್ಲೇಖಿಸಿದ್ದಾನೆ. ಭಾರತೀಯ ಚಿತ್ರಕಲೆಯನ್ನು ಸೂತ್ರಗಳಲ್ಲಿ ಉಲ್ಲೇಖಿಸಿರುವ ’?ಡಾಂಗ’ವನ್ನು ಹೋಲುವ ಆರು ಸೂತ್ರಗಳು ಚೀನೀಯರಲ್ಲೂ ಪ್ರಚಲಿತದಲ್ಲಿವೆ. ಹೀಗಾಗಿ ಭಾರತೀಯರಿಂದಲೇ ಚೀನಾದವರು ಚಿತ್ರಕಲೆಯನ್ನು ಕಲಿತಿರಬಹುದೆಂದು ಮತ್ತು ಬೌದ್ಧಧರ್ಮ ಪ್ರಚಾರದ ಆ ಕಾಲದಲ್ಲಿಯೆ ದೇಶ-ವಿದೇಶಗಳಿಂದ ಭಾರತಕ್ಕೆ ಬರುತ್ತಿದ್ದ ವಿದೇಶೀಯರು ಇಲ್ಲಿಯೇ ಚಿತ್ರಕಲೆ ಅಭ್ಯಸಿಸಿ ತಮ್ಮೊಂದಿಗೆ ಚಿತ್ರಗಳನ್ನು ಕೊಂಡೊಯ್ದಿರಬಹುದೆಂದು ಹ್ಸಿಯೆ ಹೊ ಊಹಿಸುತ್ತಾನೆ.
ಅದರಂತೆ ದೈನಂದಿನ ಬದುಕಿನ ಜಂಜಾಟ, ವ್ಯವಹಾರಗಳು ಇಂದ್ರಿಯಾನುಭವಕ್ಕೆ ಬರುತ್ತಲೇ ಇರುತ್ತವೆ. ಇವುಗಳಲ್ಲಿ ತಾರ್ಕಿಕ ಮತ್ತು ಪ್ರಯೋಜಕ ಎಂಬ ಎರಡು ರೂಪಗಳು. ಹೀಗಾಗಿ ಇಂದ್ರಿಯಾನುಭsವದ ಪ್ರವೃತ್ತಿಗೆ ಒಂದು ಆಕಾರ ನೀಡುವ ಕ್ರಮವು ವ್ಯಕ್ತರೂಪದಲ್ಲಿ ಪ್ರಕಟಗೊಳ್ಳುತ್ತದೆ. ಅಂತಹ ಅಭಿವ್ಯಕ್ತತೆ ವಿಶಿ?ವೆನಿಸುವುದಕ್ಕೆ ಅದರಲ್ಲಿನ ಹೂರಣ ಏನೆಂಬುದು ಮುಖ್ಯವಾಗುವುದಿಲ್ಲ, ಬದಲಿಗೆ ಅದು ಏನನ್ನು ಕಾಣಿಸಲು ಯತ್ನಿಸುತ್ತಿದೆ ಎಂಬುದು ಮುಖ್ಯವಾಗುತ್ತದೆ. ಇದೇ ಕಲೆ; ಕಲೆಯ ಸತ್ತ್ವ ಅಡಗಿರುವುದು ತೋರಿಕೆ ಅಥವಾ ತರ್ಕಗಳಲ್ಲಲ್ಲ, ಬದಲಿಗೆ ಅದರ ಸೃಷ್ಟಿಯಲ್ಲಿ.
“ಕಲಾವಿದನ ಹಿಡಿತದಲ್ಲಿರುವ ಸೃಷ್ಟಿಶಕ್ತಿ ನಿರಂತರವಾಗಿ ಹರಿಯುವ ಗದ್ಯರೂಪದಲ್ಲಿ ಉಳಿದಿರುವಷ್ಟು ಕಾಲವೂ ಪದಗಳು ಸತ್ಯಚಿಂತಕರ ಭಾವನೆಯನ್ನು ಕಟ್ಟಿಕೊಡಲಾರವು. ಅದನ್ನು ಹೊರತೆಗೆದು ಲಬ್ಧವಾಗಿಸಿದಾಗ ಪ್ರಜ್ವಲಿಸಿ ಸ್ಪಂದನೆಯನ್ನುಂಟುಮಾಡುತ್ತದೆ” ಎಂದು ರವೀಂದ್ರನಾಥ ಠಾಕೂರರು ಹೇಳಿದ್ದಾರೆ.
ಕವಿ-ಕಲಾವಿದನ ಚೇತನವು ನಾಮ-ರೂಪಗಳ ಅನುಭವವನ್ನು ಜೀವಂತಗೊಳಿಸುವಾಗ ಭಾವಾನುಭವ ಎಲ್ಲೆಮೀರಿ ಹರಿಯುತ್ತದೆ. ಬದುಕಿನ ಅದೆ? ಜಂಜಾಟ, ದಾರುಣ ಸತ್ಯಗಳನ್ನು ನಾವು ಸುಂದರ ಎಂದು ಒಪ್ಪಿಕೊಳ್ಳುವುದಿಲ್ಲ; ಆದರೆ ಕಲಾವಿದ/ಕವಿಯು ಅವುಗಳನ್ನು ಭಾವಪ್ರಧಾನಗೊಳಿಸಿ ಕಣ್ಣುಗಳು ಒಂದಿ? ಹೊತ್ತು ಅವನ್ನು ನೋಡುವಂತೆಯೂ, ಕಿವಿಗಳು ಕೇಳುವಂತೆಯೂ ಮಾಡಬಲ್ಲನಾದರೆ ಆಗ ಏರ್ಪಡುವ ಕ್ರಿಯೆಯೇ ತಿಳಿಯುವಾತನಿಗೂ ತಿಳಿಸುವಾತನಿಗೂ ನಡುವೆ ಇರುವ ಮನಸ್ಸನ್ನು ಅಪಹರಿಸುವಂಥ ಭಾವವನ್ನೇ ’ಮನೋಹರ’ವೆಂದು ಕರೆದಿರುವುದು.
* * * *
ಭಾವತೀವ್ರತೆಯನ್ನು ಒಂದು ಆಕಾರವಾಗಿ ಅಭಿವ್ಯಕ್ತಗೊಳಿಸುವ ಪರಿಕಲ್ಪನೆ ಮೂಲದಲ್ಲಿಯೆ ಅಮೂರ್ತದಿಂದ ಕೂಡಿರುವಂತಹದ್ದು. ಹೀಗಾಗಿ ಈ ಅಮೂರ್ತತೆಗೆ ರೂಪಕೊಡುವ ಪ್ರಯತ್ನದ ಫಲವಾಗಿಯೇ ಕಲೆ ಹುಟ್ಟಿಕೊಳ್ಳುತ್ತದೆ.
ಬ್ರಹ್ಮಾಂಡಸೃಷ್ಟಿಯಲ್ಲಿ ’ಮಾಯೆ’ಯ ಅನಂತತೆಯ ಶಕ್ತಿಗೆ ಬೆರಗುಗೊಂಡು, ಬ್ರಹ್ಮಸಾಕ್ಷಾತ್ಕಾರಗೊಳಿಸಿಕೊಳ್ಳುವ ಸ್ಥಿತಿಯಲ್ಲಿ ಮಿಂದೆದ್ದ ಕಲಾವಿದನ ಚಿತ್ತದೊಳಗಿನ ಅನುಭೂತಿಗೆ ಆಕಾರನೀಡುವ ಯತ್ನವೇ ಭಗವಂತನ ರೂಪವಾಗಲು ಕಾರಣವಾಯಿತು. ಮತ್ತು ನಮ್ಮೆಲ್ಲ ದೇವರ ಚಿತ್ರಗಳು, ವಿಗ್ರಹಗಳು ನಿರ್ಮಾಣಗೊಳ್ಳಲು ಕಾರಣವಾಯಿತು. ಈ ಕ್ರಿಯೆಯು ಕಲಾವಿದನಿಗಾಗಲಿ ಕವಿಗಾಗಲಿ ದೈನಂದಿನ ಜಂಜಾಟ ಗೋಳಾಟವೇನಲ್ಲ; ಅದು ತನ್ನ ಪ್ರವೃತ್ತಿಯ ಮನಃಸ್ಥಿತಿಯಿಂದಾಗಿ ಅವನು ಕಂಡುಕೊಂಡ ಅಂತರಂಗದರ್ಶನ. ಹಾಗಾಗಿ ಅದು ಅವನ ಸಮೃದ್ಧ ಸಾಮರ್ಥ್ಯದ ಪ್ರತೀಕವೇ ಆಗಿದೆ. ಹೀಗಾಗಿ ಈಶೋಪನಿ?ತ್ತಿನಲ್ಲಿ ಸತ್ಯದರ್ಶನವನ್ನು ದೃಶ್ಯರೂಪದಲ್ಲಿ ಅಭಿವ್ಯಕ್ತಗೊಳಿಸುವ ಕವಿಸೃಷ್ಟಿಯ ಕುರಿತು ಹೀಗೆ ಹೇಳಿದೆ:
ಕವಿರ್ಮನೀಷೀ ಪರಿಭೂಃ || ಸ್ವಯಂಭೂರ್ಯಾಥಾತಥ್ಯತೊ sರ್ಥಾನ್ ವ್ಯದಧಾತ್ ಶಾಶ್ವತೀಭ್ಯಃ ಸಮಾಭ್ಯಃ ||
’ತನ್ನ ಅಸ್ತಿತ್ವದ ಒಳ ಆವಶ್ಯಕತೆಗಳನ್ನು ಸಾರ್ವಕಾಲಿಕವಾಗಿ ಹಾಗೂ ಪ್ರಮಾಣಬದ್ದವಾಗಿ ಅಭಿವ್ಯಕ್ತಗೊಳಿಸುತ್ತಾ ಹೋಗುವವನೇ ಕವಿ. ಇವನೇ ವಿವೇಕ ಸಾರ್ವಭೌಮ, ಇವನೇ ಶಕ್ತಿ ಸಾರ್ವಭೌಮ ಹಾಗೂ ಇವನೇ ಸ್ವಯಂ ನಿರ್ಮಾತೃ.’
ಇಲ್ಲಿ ಕವಿ ಅಥವಾ ಕಲಾವಿದನು ಸಾರ್ವಭೌಮನಾಗಲು ಸಾಧ್ಯವಾದದ್ದು, ತನಗೇ ವಿಶಿ?ವಾದ ಒಂದು ಶಕ್ತಿಯನ್ನು ಬಳಸಿ, ತಾನು ಕಂಡ ಸತ್ಯವೇ ಇತರರಿಗೂ ಗೋಚರವಾಗುವಂತೆ ಕಟ್ಟಿಕೊಡುವ ಪ್ರಯತ್ನವನ್ನು ನಡೆಸುವುದರಿಂದಾಗಿ. ಈ ವಿಚಾರವನ್ನು ಶಾಶ್ವತವಾಗಿ, ಸಾರ್ವಕಾಲಿಕವಾಗಿ ಒಪ್ಪಿತವಾಗುವಂತೆ ದಾಖಲಿಸಿ ಇಡಬೇಕೆಂಬ ಆತನ ಆಲೋಚನೆಗೆ ನೆರವಿಗೆ ಬಂದದ್ದೇ ಕಾಗದ, ಅದರ ಮೇಲೆ ಬರೆದ ಕವನ ಅಥವಾ ರಚಿಸಿದ ಚಿತ್ರಕೃತಿ.
ರಾಗಮಾಲಾ ಚಿತ್ರಗಳ ಸಂದರ್ಭದಲ್ಲೂ ರಾಗಸಂಗೀತವು ನಮ್ಮೊಳಗೆ ಸತ್ಯಭಾವವನ್ನು ಎಚ್ಚರಗೊಳಿಸುವ ಶಕ್ತಿಯನ್ನು ಪಡೆದಿರುವುದು ಇಲ್ಲಿಯೇ. ರಾಗ-ಲಯ-ತಾಳಬದ್ಧ ಪ್ರಕಾರಗಳು ನಮ್ಮ ಆತ್ಮಪ್ರವೇಶ ಮಾಡಿ ಆನಂದಾನುಭವದಿಂದ ಹರಿದುಬರುವಂತಹ ಅನುಭಾವವನ್ನು ಅದು ಮೂಡಿಸುತ್ತದೆ. ಕಲೆಯು ಸಂಗೀತದ ಅದೆ? ಅಮೂರ್ತತೆಯನ್ನು ಮತ್ತು ಕಥಾನಕ ಪ್ರಸಂಗಗಳನ್ನು ಭೂತಕಾಲದ ಓಜಸ್ಸು ಮತ್ತು ವರ್ತಮಾನದ ಮೌಲ್ಯಗಳನ್ನು ತನ್ನೊಳಗಿರಿಸಿಕೊಂಡು ಅಭಿವ್ಯಕ್ತಗೊಂಡಿದೆ.
ರಾಗಮಾಲಾ ಚಿತ್ರಗಳ ಸಂದರ್ಭದಲ್ಲೂ ರಾಗಸಂಗೀತವು ನಮ್ಮೊಳಗೆ ಸತ್ಯಭಾವವನ್ನು ಎಚ್ಚರಗೊಳಿಸುವ ಶಕ್ತಿಯನ್ನು ಪಡೆದಿರುವುದು ಇಲ್ಲಿಯೇ. ರಾಗ-ಲಯ-ತಾಳಬದ್ಧ ಪ್ರಕಾರಗಳು ನಮ್ಮ ಆತ್ಮಪ್ರವೇಶ ಮಾಡಿ ಆನಂದಾನುಭವದಿಂದ ಹರಿದುಬರುವಂತಹ ಅನುಭಾವವನ್ನು ಅದು ಮೂಡಿಸುತ್ತದೆ