ರಾಗಮಾಲಾ ಚಿತ್ರಗಳು ಸಂಗೀತದ ರಾಗಗಳನ್ನೂ ಭಾವವಿನ್ಯಾಸಗಳನ್ನೂ ದೃಶ್ಯರೂಪದಲ್ಲಿ ಚಿತ್ರಿಸಿದ ವಿಧಾನವೂ, ಅದರ ರಚನಾತಂತ್ರಗಳೂ ಗಮನಾರ್ಹವಾಗಿವೆ. ಪ್ರಕೃತಿದತ್ತ ಉದಾತ್ತ ವಿಚಾರಗಳನ್ನೇ ಚಿತ್ರರೂಪಕ್ಕೆ ತರುವಲ್ಲಿ ಬಳಸುವ ಮಾಧ್ಯಮವಾಗಿ ಪ್ರಕೃತಿಯಿಂದ ಆಯ್ದ ಬಣ್ಣ, ಮತ್ತಿತರ ಪರಿಕರಗಳನ್ನೇ ಆಗಿನ ಕಲಾವಿದರು ಬಳಸಿದ್ದು ವಿಶೇಷವೇ. ತಮ್ಮ ಸುತ್ತಲಿನ ಪರಿಸರದಲ್ಲಿ ಉಪಲಬ್ಧವಿದ್ದ ಪರಿಕರಗಳನ್ನೂ ನೈಸರ್ಗಿಕ ಬಣ್ಣಗಳನ್ನೂ ಸಂಗ್ರಹಿಸಿ, ತಯಾರಿಸಿಕೊಂಡು ರೂಪಿಸುವ ಕುರಿತಾದ ವಿವರಗಳನ್ನು ಈ ಸಂಚಿಕೆಯಲ್ಲಿ ನೋಡೋಣ.
ರಾಗಮಾಲಾ ಚಿತ್ರರಚನೆಗೂ ಮೊದಲು ಭಾರತೀಯರು ಪಾರಂಪರಿಕವಾಗಿ ದೊರೆಯುತ್ತಿದ್ದ ಕೆಮ್ಮಣ್ಣು, ನೀಲಿ, ಕಂದು, ಗಾಢ ಹಳದಿ ಮತ್ತು ಬಿಳಿ ಬಣ್ಣಗಳನ್ನು ಬಳಸಿ ಬಂಡೆಕಲ್ಲುಗಳ ಮೇಲೆ ಮತ್ತು ಇದಕ್ಕಾಗಿಯೇ ಹಿನ್ನೆಲೆ ಸಿದ್ಧಗೊಳಿಸಿಕೊಂಡ ಗೋಡೆಗಳ ಮೇಲೆ ಚಿತ್ರಿಸಿದ್ದು ಇದೆ. ಅಜಂತಾ ಗುಹೆಗಳಲ್ಲಿನ ಭಿತ್ತಿಚಿತ್ರಗಳು ಸಾವಿರಾರು ವ? ಉಳಿದುಕೊಂಡಿರುವುದಕ್ಕೆ ಅವನ್ನು ರಚಿಸುವಾಗ ನಿರ್ಮಿಸಿಕೊಂಡ ಹಿನ್ನೆಲೆಯೇ ಬಹಳ ಮಹತ್ತ್ವದ್ದಾಗಿದೆ. ತೆಳ್ಳನೆಯ ಬಣ್ಣವೊಂದನ್ನು ಮೊದಲಿಗೆ ಹಿನ್ನೆಲೆಗೆ ಪೂರ್ಣ ಬಳಿದು ಅದರ ಮೇಲೆ ರೇಖೆಯನ್ನೇ ಪ್ರಧಾನವಾಗಿ ಇರಿಸಿಕೊಂಡು ಚಿತ್ರಿಸುವ ವಿಧಾನವು ಭಾರತೀಯರದಾಗಿತ್ತು.
ಈ ಕ್ರಮವನ್ನು ಮುಂದೆ ಅಬನೀಂದ್ರನಾಥ ಠಾಗೋರ್ ಮತ್ತು ಅವರ ಬಳಗ ಬಂಗಾಳದಲ್ಲಿ ಚಾಲ್ತಿಗೆ ತರುವ ಪ್ರಯತ್ನ ಸ್ವಾತಂತ್ರ್ಯಪೂರ್ವದಲ್ಲಿ ಆರಂಭಿಸಿದ್ದರು. ಆದರೆ ಅದು ವ್ಯಾಪಕ ಟೀಕೆಗೆ ಒಳಗಾಯಿತು ಮತ್ತು ಜನಮನ್ನಣೆಯನ್ನು ಗಳಿಸಲಿಲ್ಲ. ಬದಲಿಗೆ, ಚಿತ್ರಸರಣಿಗೆ ಕಾಗದವನ್ನು ಸಿದ್ದಗೊಳಿಸಿಕೊಂಡು ರಚನೆಗೊಳಿಸುವುದು ಸಾಮಾನ್ಯವಾಗಿತ್ತು. ಕಾಗದದ ಜೊತೆಗೆ ಹತ್ತಿ ಮತ್ತು ರೇ? ಬಟ್ಟೆಗಳ ಮೇಲೆ ಚಿತ್ರ ರಚನೆಗೊಳ್ಳುತ್ತಿತ್ತು.
ಜೈನಧರ್ಮದ ಪ್ರಚಾರದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಕೊಂಡೊಯ್ಯುತ್ತಿದ್ದ ಚಿತ್ರಪಟಗಳ ಸುರುಳಿಗಳಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಿ ಕಥಾನಕಗಳನ್ನು ಚಿತ್ರಿಸುತ್ತಿದ್ದರು. ಚಿತ್ರಪಟಗಳನ್ನು ಚಿತ್ರಿಸುವ ಮೊದಲು ಅದರ ಮೇಲೆ ಅಂಟು, ಗಂಜಿ ಮತ್ತು ಬಿಳಿ ಬಣ್ಣಗಳನ್ನು ಬಳಿದು ಅದರ ಮೇಲೆ ಅಂಡಾಕಾರದ ಕಲ್ಲನ್ನು ಬಳಸಿ ತಿದ್ದಿ-ತೀಡಿ ನುಣುಪುಗೊಳಿಸಿಕೊಂಡು, ಅನಂತರ ಇದ್ದಿಲಿನಿಂದ ರೇಖಾಚಿತ್ರ ರಚಿಸಿ, ಬಳಿಕ ಬಣ್ಣಗಳನ್ನು ತುಂಬಲಾಗುತ್ತಿತ್ತು. ಹೀಗೆ ಪೂರ್ಣಗೊಂಡ ಚಿತ್ರಗಳನ್ನು ಅಂತಿಮವಾಗಿ ಗಾಢವರ್ಣಗಳಿಂದ ಆಕೃತಿಗಳ ಅಂಚನ್ನು ತೀಡಿ ರೇಖಾಪ್ರಧಾನವಾಗಿ ಕಾಣುವಂತೆ ಮಾಡುತ್ತಿದ್ದರು.
’ಬಸ್ಲಿ’ ಎಂದು ಕರೆಯಲಾಗುತ್ತಿದ್ದ, ಕೈಗಳಿಂದ ತಯಾರಿಸುವ (handmade) ಕಾಗದ ಅಥವಾ ಅರಿವೆಯಿಂದ ತಯಾರಿಸಿದ ತೆಳ್ಳನೆಯ ಮೂರು-ನಾಲ್ಕು ಹಾಳೆಗಳನ್ನು ಒಂದರ ಮೇಲೆ ಒಂದು ಅಂಟಿಸಿ ತಯಾರಿಸಿದ ರಟ್ಟುಗಳ ಮೇಲೆಯೂ ಚಿತ್ರಿಸುತ್ತಿದ್ದದ್ದು ಉಂಟು.
ಕಾಗದ ತಯಾರಿಕೆಯ ಇತಿಹಾಸ
ಕಾಗದ ತಯಾರಿಕೆ ಆರಂಭಗೊಂಡಿದ್ದು ಚೀನಾ ದೇಶದಲ್ಲಿ ಎಂದು ಇತಿಹಾಸ ಹೇಳುತ್ತದೆ. ಕ್ರಿ.ಪೂ. ೧೫೦ರಲ್ಲೆ ಕಾಗದ ನಿರ್ಮಿಸುವ ತಂತ್ರಗಾರಿಕೆ ಚಾಲ್ತಿಯಲ್ಲಿತ್ತು. ಪೇಪಿರಸ್ ಎಂದು ಕರೆಯಲಾಗುತ್ತಿದ್ದ ಈ ಕಾಗದವನ್ನು ಬಿದಿರು ಪದರುಗಳಿಂದ ನಿರ್ಮಿಸಲಾಗುತ್ತಿತ್ತು. ಆ ಕಾಲದಲ್ಲಿ ಚಿತ್ರರಚನೆ ಮತ್ತು ಸಾಹಿತ್ಯರಚನೆಗೂ ಕಾಗದ ಬಳಕೆಯಲ್ಲಿತ್ತು. ಕ್ರಿ,ಶ. ೧೦ರಲ್ಲಿ ದೊರೆ ತ್ಸು-ಲುನ್ ಹತ್ತಿಯ ಅರಿವೆಯಿಂದ ಕಾಗದ ತಯಾರಿಸುವ ವಿಧಾನವನ್ನು ಆವಿ?ರಿಸಿದನೆನ್ನುತ್ತಾರೆ. ಜಗತ್ತಿನ ವಿವಿಧ ಪ್ರದೇಶಗಳಿಗೆ ಕಾಗದಗಳ ರವಾನೆಯಾಗುತ್ತಿದ್ದರೂ ಅದರ ತಯಾರಿಕೆಯ ವಿಧಾನವನ್ನು ಚೀನಾ ಬಿಟ್ಟುಕೊಡಲಿಲ್ಲ. ಕ್ರಿ.ಶ. ೬೦೦ರ ಸುಮಾರಿಗೆ ಕೊರಿಯಾದಲ್ಲಿ ಕಾಗದ ತಯಾರಿಸುವ ವಿಧಾನ ಬಯಲಿಗೆ ಬಂತು. ಬೌದ್ಧಧರ್ಮ ಪ್ರಚಾರಕ್ಕೆ ಬಳಕೆಯಾಗುತ್ತಿದ್ದ ಕಾಗದವು ಭಾರತದಲ್ಲಿಯೂ ತಯಾರಿಗೊಳ್ಳುತ್ತಿತ್ತು. ಕ್ರಿ.ಶ. ಎಂಟನೇ ಶತಮಾನದ ತರುವಾಯ ಕಾಗದ ತಯಾರಿಕೆಯ ತಂತ್ರಜ್ಞಾನವು ವಿಶ್ವದೆಲ್ಲೆಡೆ ಬಳಕೆಗೆ ಬಂತು.
ರಾಗಮಾಲಾ ಚಿತ್ರರಚನೆಯಲ್ಲಿಯೂ ಇದೇ ಮಾದರಿ ಅನುಸರಿಸಲಾಗಿದೆ. ಬಣ್ಣಗಳ ಆಯ್ಕೆಯಲ್ಲಿ ಮಾತ್ರ ಕಲಾವಿದರು ನಿರ್ದಿಷ್ಟ ರಾಗ, ಕಾಲ, ಆಶಯ ಮತ್ತು ಸಂಯೋಜನೆಗಳಿಗೆ ಅನುಗುಣವಾಗಿ ಬಣ್ಣಗಳನ್ನು ಆಯ್ದುಕೊಳ್ಳುತ್ತಿದ್ದರು. ಸಹಜವಾಗಿ ಪ್ರಕೃತಿಯಿಂದ ದೊರೆಯುವ ಬಣ್ಣಗಳ ಜೊತೆಗೆ ಮನೆಗಳಲ್ಲಿಯೇ ಸಿದ್ಧಪಡಿಸಿಕೊಳ್ಳುತ್ತಿದ್ದ ಬಣ್ಣದ ಪುಡಿಗಳು ಬಳಕೆಯಲ್ಲಿದ್ದವು. ಬಣ್ಣಗಳ ಮಿಶ್ರಣಕ್ಕೆ ಕಪ್ಪೆಚಿಪ್ಪು ಮತ್ತು ಇತರ ಪರಿಕರಗಳ ಬಳಕೆ ರೂಢಿಯಲ್ಲಿತ್ತು.
ಕೆಳಗಿನ ಚಿತ್ರವು ಮಾಲಕೌಂಸ್ ರಾಗವನ್ನು ಆಧರಿಸಿದ್ದು. ಈ ರೇಖಾಚಿತ್ರದಲ್ಲಿ ಅರಸನೋರ್ವ ತನ್ನ ಅಂತಃಪುರದಲ್ಲಿ ವಿರಮಿಸುತ್ತಿದ್ದು, ಸಂಗೀತಗಾರರು ಆತನ ಮನಸ್ಸಂತೋಷಪಡಿಸಲು ಹಾಡುತ್ತಿದ್ದಾರೆ. ಮಾಲಕೌಂಸ್ ರಾಗವು ಇಳಿಸಮಯದಲ್ಲಿನ ಭಕ್ತಿರೂಪಕವಾಗಿದ್ದು ಭಜನೆಯ ಸಾಲಿಗೆ ಸೇರುತ್ತದೆ. ಮನಸ್ಸು ಸಮರ್ಪಿತಗೊಂಡು ಅಪರಿಮಿತ ಶ್ರದ್ಧೆಯಲ್ಲಿ ಲೀನವಾಗಿಬಿಡುವ ಈ ರಾಗದ ದೃಶ್ಯರೂಪಕವನ್ನು ಕಲಾವಿದ ಹೆಚ್ಚು ಭಾವನಾಪ್ರಧಾನಗೊಳಿಸಲೆಂಬಂತೆ ಸಂಯೋಜಿಸಿರುವ ಈ ಚಿತ್ರದಲ್ಲಿ ಕಾಣಿಸಲು ಯತ್ನಿಸಿರುವುದು ರಾಗದ ಉದ್ದೇಶವೆಂದು ಗೋಚರವಾಗುತ್ತದೆ. ಈ ರಾಗವು ಕೃಷ್ಣನು ಸ್ನೇಹಮಹಿಮನೆಂದೂ, ಆತನ ಸಾನ್ನಿಧ್ಯ ಎಲ್ಲವನ್ನೂ ಮರೆಸಿಬಿಡುವುದೆಂದೂ ಬಣ್ಣಿಸುವ ಭಜನೆಯನ್ನು ಸಾರಗೊಳಿಸುವಂತೆ ಇಲ್ಲಿ ಅರಸ ತನ್ನ ಉಚ್ಚಾಸನ ಬಿಟ್ಟು ಪಲ್ಲಂಗದಿಂದ ಕೆಳಗಿಳಿದು ಸಂಗೀತದ ಆಲಿಕೆಯಲ್ಲಿದ್ದಾನೆ.
ಮುಂದಿನ ಚಿತ್ರದಲ್ಲಿ ಇಬ್ಬರು ಸಖಿಯರ ರೂಪಣವಿದೆ. ಇದನ್ನು ಇದ್ದಿಲು ಕಡ್ಡಿಯಿಂದ ಸ್ಕೆಚ್ ಮಾಡಲಾಗಿದೆ. ಇಲ್ಲಿ ಚಿತ್ರರಚನೆ ಹಂತದ ಪೂರಕ ಸಂದರ್ಭದಲ್ಲಿಯೇ ಕಲಾವಿದ ತನ್ನ ಮುಂದಿನ ರಚನೆಗೆ ಅನುಕೂಲವಾಗುವ ಸಲುವಾಗಿ ಸೂಚಕವಾಗಿ ಅಲ್ಲಲ್ಲಿ ಕೆಲವು ಬಣ್ಣಗಳನ್ನು ಕಿವಿ, ತುಟಿ, ಬೆರಳು ತುದಿಗಳು, ವಸ್ತ್ರ ಮತ್ತು ಆಭರಣಗಳ ಸ್ಕೆಚ್ರಚನೆಯಲ್ಲಿ ಬಳಸಿದ್ದಾನೆ.
ಮೂಲಚಿತ್ರಗಳನ್ನು ಅಭ್ಯಸಿಸಿ, ಅನಂತರ ಅಂತಿಮ ಚಿತ್ರ ನಿರ್ಮಿಸುವ ಪರಿಪಾಟಿ ಹೆಚ್ಚು ಚಾಲ್ತಿಗೆ ಬಂದದ್ದು ಪರ್ಷಿಯನ್ ಕಲೆಯ ಪ್ರಭಾವ ಭಾರತೀಯ ಕಲಾವಿದರಮೇಲೆ ಆದ ನಂತರ. ಗುಡ್ಡಗಾಡು, ಕಣಿವೆಯಲ್ಲಿನ ವೃತ್ತಿನಿರತ ಕಲಾವಿದರು ಮಾತ್ರ ಯಾವ ಬಗೆಯ ಪೂರಕ ತಯಾರಿಯೂ ಇಲ್ಲದೆ ತಮ್ಮ ಮನಸ್ಸಿನ ಭಾವಗಳನ್ನು ನೇರವಾಗಿ ಚಿತ್ರಿಸುತ್ತಿದ್ದರು. ಮೊಗಲ್ ಸಾಮ್ರಾಟರ ಆಗಮನದ ನಂತರ ಆಸ್ಥಾನಗಳಲ್ಲಿ ಕಲಾವಿದರು ಪೋ?ಣೆಗೊಳಪಡಲಾರಂಭಿಸಿ, ಚಿತ್ರರಚನೆಯ ತಂತ್ರಗಾರಿಕೆಯೂ ಬದಲಾವಣೆಗೊಂಡಿತು.
ಮೇಲಿನ ಚಿತ್ರದಲ್ಲಿ ಅಂತಹ ಒಂದು ಬದಲಾದ ವಿಧಾನವನ್ನು ನೋಡಬಹುದು. ಸ್ಕೆಚ್ ರಚನೆಯಾದ ನಂತರ ಕೆಲವು ಶಾರೀರಕ ಮತ್ತು ಆಂಗಿಕ ಭಂಗಿಗಳನ್ನು ಶರೀರಶಾಸ್ತ್ರಕ್ಕೆ (Anatomy) ಪೂರಕವಾಗಿ ಮಾರ್ಪಡಿಸಿಕೊಳ್ಳುತ್ತಿದ್ದರು.
ಹಾಗೆ ನೋಡಿದರೆ ಭಾರತೀಯರು ಶರೀರಶಾಸ್ತ್ರ ವಿಧಾನಗಳನ್ನು ಹೆಚ್ಚಾಗಿ ಅನುಸರಿಸಿದವರಲ್ಲ. ಭಾವಾತೀತ ರೂಪ ಮತ್ತು ಆಂತರಿಕ ಸೌಂದರ್ಯಪ್ರಜ್ಞೆಗಳೇ ಬಹುಮುಖ್ಯವೆಂಬ ನಂಬಿಕೆ ನಮ್ಮದಾಗಿತ್ತು. ಚಿತ್ರರಚನೆಗೆ ನಿರ್ದಿಷ್ಟ ಮಾನದಂಡಗಳಾಗಿ ಶರೀರಶಾಸ್ತ್ರವು ಬಂದದ್ದು ಗ್ರೀಕರಿಂದ. ಹಾಗೆಂದು ಭಾರತೀಯ ಚಿತ್ರರಚನೆಗೆ ಶಾಸ್ತ್ರೀಯ ವಿಧಾನಗಳು ಇರಲಿಲ್ಲವೆಂದೇನಿಲ್ಲ. ನಮ್ಮ ೬೪ ವಿದ್ಯೆಗಳಲ್ಲಿ ನಾಲ್ಕನೆಯ ವಿದ್ಯೆಯೇ ’ಆಲೇಖ್ಯಾ’ ಎಂದು ಕರೆಯಲಾಗಿರುವ ಚಿತ್ರಕಲೆ. ಭಾರತೀಯರ ಸೌಂದರ್ಯಶಾಸ್ತ್ರದಲ್ಲಿಯೂ ವಾತ್ಸ್ಯಾಯನನ ಚಿತ್ರ?ಡಂಗಗಳ ಉಲ್ಲೇಖವಿದೆ. ಆ ಕುರಿತು ಮುಂದಿನ ಕಂತುಗಳಲ್ಲಿ ಗಮನಿಸಬಹುದು
ಚಿತ್ರರಚನೆಯಲ್ಲಿ ಭಾರತೀಯ ಕಲಾವಿದರನ್ನು ಮೊಗಲ್ ಆಕ್ರಮಣದ ನಂತರದ ದಿನಗಳು ಹೆಚ್ಚು ಪ್ರಭಾವಗೊಳಿಸದವು. ಚಿತ್ರರಚನೆಯ ವಿ?ಯಗಳೂ ಬದಲಾದವು. ಮೊಗಲ್ ಸಾಮ್ರಾಟರ ಸಾಹಸಗಳನ್ನು ಬಣ್ಣಿಸುವ ಚಿತ್ರರಚನೆಗಳಲ್ಲಿ ನಿಸರ್ಗದತ್ತ ಬಣ್ಣಗಳೊಂದಿಗೆ ಬಂಗಾರದ ಲೇಪನವೂ ಹೆಚ್ಚು ಬಳಕೆಗೆ ಬಂತು
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ.
ಬ್ಯಾಂಕ್ ಹೆಸರು: HDFC Bank Ltd, ಕಾವೇರಿ ಭವನ ಶಾಖೆ, ಬೆಂಗಳೂರು
ಖಾತೆದಾರರ ಹೆಸರು : UTTHANA TRUST
IFSC CODE: HDFC0000509
A/C No: 50100283886338
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: rsbookreview@gmail.com