
ರಾಯರು ಸರ್ಕಾರದ ಒಂದು ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ತುಂಬ ಪ್ರಾಮಾಣಿಕ ವ್ಯಕ್ತಿ. ’ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಮನಸಾರೆ ನಂಬಿಕೊಂಡಿದ್ದರು. ತಮ್ಮ ಪಾಲಿನ ಕೆಲಸವನ್ನು ಶಿಸ್ತು ಶ್ರದ್ಧೆಗಳಿಂದ ನೆರವೇರಿಸುತ್ತಿದ್ದರು. ಓದುವುದು ಮತ್ತು ಬರೆಯುವುದು ಕೂಡ ರಾಯರಿಗೆ ಬಹಳ ಇಷ್ಟ. ಹಗಲಿಡೀ ಆಫೀಸಿನಲ್ಲಿ ದುಡಿಯಬೇಕಾಗಿದ್ದರಿಂದ ಬೆಳಗಿನಜಾವವೇ ಎದ್ದು ಅವರು ಓದು-ಬರಹದ ಕೆಲಸವನ್ನು ಮಾಡಿಕೊಳ್ಳುತ್ತಿದ್ದರು. ರಾತ್ರಿಯೂ ಹಾಗೆಯೇ. ಊಟವಾದ ಮೇಲೆ ತಮ್ಮ ಓದುವ ಮೇಜಿನ ಮುಂದೆ ಕೂತರೆ, ಮಧ್ಯರಾತ್ರಿಯವರೆಗೂ ಬರಹದ ಕಾಯಕ! ತಮ್ಮ ಕೆಲಸದ ನಿಮಿತ್ತ ರಾಯರು ಹಳ್ಳಿಹಳ್ಳಿಗೆ ಭೇಟಿ […]