ದಿನದಿಂದ ದಿನಕ್ಕೆ ಪಶ್ಚಿಮ ಬಂಗಾಳದ ಸ್ಥಿತಿ ನಾಜೂಕಾಗುತ್ತಿದೆ. ಕಾಶ್ಮೀರದ ಕಣಿವೆಯಲ್ಲಿ ಉಂಟಾಗಿರುವ ಪರಿಸ್ಥಿತಿಯಂಥದ್ದನ್ನೆ ಇಲ್ಲಿಯೂ ಸೃಷ್ಟಿಸಲಾಗುತ್ತಿದೆ. ಬಂಗಾಳದ ಯಾವುದೇ ಪ್ರದೇಶದಲ್ಲಿ ಒಂದೆರಡು ಮದರಸಾ, ಮಸೀದಿಗಳು ಆಗುತ್ತಿದ್ದಂತೆ ಆ ಪ್ರದೇಶವನ್ನು ಮುಸ್ಲಿಂ ಬಹುಸಂಖ್ಯಾತಗೊಳಿಸಲಾಗುತ್ತಿದೆ. ಹಿಂದೂಗಳು ಮನೆಬಿಟ್ಟು ಓಡುವಂತೆ ಜಿಹಾದಿಶಕ್ತಿಗಳು ಕಾರ್ಯವೆಸಗುತ್ತಿವೆ.
ದೊಂಬರ ಹುಡುಗಿಗೆ ತಂತಿಯೇ ನೆಲ’ ಎಂಬ ನುಡಿಯಿದೆ. ಉಳಿದವರು ನೆಲದ ಮೇಲೆ ನಡೆಯುವಂತೆ, ಕುಣಿಯುವಂತೆ ದೊಂಬರಾಟದ ಹುಡುಗಿ ತಂತಿಯ ಮೇಲೆ ಸರಾಗವಾಗಿ ಮಾಡಬಲ್ಲಳು. ಆದರೆ ಇದು ಶಾಶ್ವತ ಸ್ಥಿತಿಯಲ್ಲ, ಆಟದ ನಂತರ ನೆಲಕ್ಕಿಳಿಯಲೇಬೇಕು, ಬದುಕನ್ನು ನೆಲದ ಮೇಲೆಯೇ ಕಟ್ಟಿಕೊಳ್ಳಬೇಕು. ತಂತಿಯನ್ನೇ ಆಶ್ರಯಿಸಿದರೆ ಬೀಳುವುದು ಖಚಿತ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಸ್ಥಿತಿ ಈಗ ತಂತಿಯ ಮೇಲಿನ ಹುಡುಗಿಯ ಕಥೆಯಾಗಿದೆ. ಆಕೆ ನೆಲಕ್ಕಿಳಿಯುತ್ತಿಲ್ಲ. ತಂತಿಯಲ್ಲೇ ಬದುಕುವ ಕನಸನ್ನು ಕಾಣುತ್ತಿದ್ದಾರೆ. ಒಂದೆಡೆ ಭ್ರಷ್ಟಾಚಾರ, ಮತ್ತೊಂದೆಡೆ ರಾಷ್ಟ್ರಹಿತದ ಅವಗಣನೆ – ಎಂಬೆರಡು ಗೂಟಗಳ ಮಧ್ಯೆ ಎಳೆದು ಕಟ್ಟಿದ ’ಮುಸ್ಲಿಂ ತುಷ್ಟೀಕರಣ’ವೆಂಬ ತಂತಿಯ ಮೇಲೆ ಮಮತಾ ಬ್ಯಾನರ್ಜಿಯ ನಡಿಗೆ ಸಾಗಿದೆ. ಅತಿಯಾದ ಈ ದೊಂಬರಾಟ ನೆಲದ ವಾಸ್ತವವನ್ನು ಕಡೆಗಣಿಸುವಂತೆ ಮಾಡಿದೆ. ಇದರ ಫಲಶ್ರುತಿಯಾಗಿ ಪಶ್ಚಿಮ ಬಂಗಾಳದ ಹಿಂದೂಗಳನ್ನು ಕಾಡುತ್ತಿರುವ ಅಭದ್ರತೆ ಅವರನ್ನು ಪರ್ಯಾಯಗಳೆಡೆಗೆ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಮಮತಾರ ತೃಣಮೂಲವನ್ನು ಬೇರುಸಹಿತ ಕಿತ್ತೆಸೆದು ಹೊಸ ಚರಿತ್ರೆಯನ್ನು ಬರೆಯಬೇಕಾದ ಅನಿವಾರ್ಯಸ್ಥಿತಿ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗುತ್ತಿದೆ.
ಕಾಂಗ್ರೆಸ್ – ಕಮ್ಯುನಿಸ್ಟ್
ಬಂಗಾಳ ಒಂದೊಮ್ಮೆ ಅನೇಕ ರಾಷ್ಟ್ರೀಯ ಚಳವಳಿಗಳ, ಸಾಮಾಜಿಕ ಸುಧಾರಣಾ ಕಾರ್ಯಗಳ, ನವೀನ ಧಾರ್ಮಿಕ ಪಂಥಗಳ, ಹೊಸ ಹೊಸ ಪ್ರಯೋಗಗಳ ಆಡುಂಬೊಲ. ಪ್ರಥಮ ಸ್ವಾತಂತ್ರ್ಯಸಂಗ್ರಾಮದ ನಂತರ ಬ್ರಿಟಿಷರ ವಿರುದ್ಧದ ಕ್ರಾಂತಿಯ ಕಹಳೆ ಜೋರಾಗಿ ಕೇಳಿಬಂದದ್ದೇ ಇಲ್ಲಿಂದ. ಕಲೆ-ಸಾಹಿತ್ಯಗಳ ನವಪಲ್ಲವ ಗಾನ ಮೊಳಗಿದ್ದು ಸಹ ಇಲ್ಲಿಯೇ. ಒಟ್ಟಿನಲ್ಲಿ ಬಂಗಾಳದ ಜನರೆಂದರೆ ಹೊಸರೀತಿಯ ಯೋಚನೆಗಳಿಗೆ ತೆರೆದುಕೊಳ್ಳುವವರು, ಇಲ್ಲಿಂದ ಬೀಸುವ ವಿಚಾರದ ಗಾಳಿಯೇ ಭಾರತದಾದ್ಯಂತ ಹರಡಿಕೊಳ್ಳುತ್ತದೆ, ಇತರರಿಗೂ ಸ್ಫೂರ್ತಿ ನೀಡುತ್ತದೆ ಎಂಬ ಸಾಮಾನ್ಯ ಭಾವನೆ ದೇಶದಲ್ಲಿ ಬೇರೂರಿತ್ತು.
ಆದರೆ ಸ್ವಾತಂತ್ರ್ಯಪೂರ್ವದ ಕೆಲದಿನಗಳಲ್ಲಿ ಮತ್ತು ಸ್ವಾತಂತ್ರ್ಯಪ್ರಾಪ್ತಿಯ ನಂತರ ಸ್ಥಾಪನೆಗೊಂಡ ಸರ್ಕಾರಗಳ ಮೂಲಕ ಕಾಂಗ್ರೆಸ್ಸು ತೋರಿದ ಮುಸ್ಲಿಂಪರ ಮತ್ತು ಹಿಂದೂವಿರೋಧಿ ಭಾವನೆಗಳು ಜಾತ್ಯತೀತ ಶಕ್ತಿಗಳ ಬಗ್ಗೆ ಜನತೆಯಲ್ಲಿ ಭ್ರಮನಿರಸನ ಉಂಟುಮಾಡಿತು. ಅದರಲ್ಲೂ ಪೂರ್ವಬಂಗಾಳದಿಂದ ಆಶ್ರಯ ಬಯಸಿ ಓಡಿಬಂದ ಹಿಂದೂಗಳನ್ನು ಹೀನಾಯವಾಗಿ ನಡೆಸಿಕೊಂಡ ರೀತಿ, ೧೯೫೦ರಲ್ಲಿ ಆದ ದಂಗೆಗಳು, ಜಿನ್ನಾ ಕರೆಕೊಟ್ಟ ’ನೇರ ಕಾರ್ಯಾಚರಣೆ’ಯ ದಿನಗಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ. ೧೯೭೧ರಲ್ಲಿ ಭಾರತವೇ ಮುಂದೆನಿಂತು ’ಬಾಂಗ್ಲಾ ಮುಕ್ತಿವಾಹಿನಿ’ಯ ಮೂಲಕ ’ಬಾಂಗ್ಲಾದೇಶ’ವೆಂಬ ಹೊಸ ದೇಶದ ಉದಯಕ್ಕೆ ಕಾರಣವಾದಾಗಲೂ ಪ್ರವಾಹದಂತೆ ಬಂದ ಹಿಂದು ಮತ್ತು ಮುಸ್ಲಿಂ ನಿರಾಶ್ರಿತರನ್ನು ನೆಲೆಗೊಳಿಸುವಲ್ಲಿ ಬೇಧವೆಣಿಸಲಾಯಿತು. ಹಿಂದುಗಳ ಕುರಿತು ಕಾಂಗ್ರೆಸ್ನ ಈ ಪರಿಯ ಅಸಡ್ಡೆ, ದುರಾಡಳಿತಗಳಿಂದ ಬೇಸತ್ತ ಜನತೆ ಕಮ್ಯುನಿಸಮ್ಮಿನ ಮೊರೆಹೊಕ್ಕರು.
೧೯೭೭ರಿಂದ ೨೦೧೧ರವರೆಗೆ ಆಡಳಿತ ನಡೆಸಿದ ಕಮ್ಯುನಿಸ್ಟರದ್ದು ಜಗತ್ತಿನಲ್ಲಿಯೇ ಅತ್ಯಂತ ದೀರ್ಘಕಾಲ ರಾಜ್ಯವೊಂದನ್ನು ಚುನಾವಣೆಗಳ ಮೂಲಕ ಗೆದ್ದು ಆಳಿದ ಏಕೈಕ ಉದಾಹರಣೆಯಾಗಿದ್ದೇ ಸಾಧನೆ ಎಂಬಂತಾಯಿತು. ಅಕ್ಷರಶಃ ಈ ಮೂರೂವರೆ ದಶಕಗಳಲ್ಲಿ ಪಶ್ಚಿಮ ಬಂಗಾಳವು ಗೂಂಡಾರಾಜ್ಯವೇ ಆಗಿ ಪರಿವರ್ತಿತವಾಗಿತ್ತು. ಒಮ್ಮೆ ಆರಿಸಿ ಬಂದ ನಂತರ ತಮ್ಮ ಎಲ್ಲ ವಿರೋಧಿ ಶಕ್ತಿಗಳನ್ನೂ ವ್ಯವಸ್ಥಿತವಾಗಿ, ಹಿಂಸಾತ್ಮಕವಾಗಿ ಅದುಮಿಡುವುದರಲ್ಲಿ ಎಡವಾದಿಗಳು ಸಿದ್ಧಹಸ್ತರು. ಹೀಗಾಗಿ ಅಲ್ಲಿನ ಬಹುಪಾಲು ಚುನಾವಣೆಗಳಲ್ಲಿ ಫಲಿತಾಂಶವನ್ನು ನಿರ್ಧರಿಸುತ್ತಿದ್ದದ್ದು ಕಮ್ಯುನಿಸ್ಟರ ಗೂಂಡಾಶಕ್ತಿಯೇ. ರಾಜ್ಯವು ಅಭಿವೃದ್ಧಿಯಿಂದ ವಂಚಿತವಾಗಿ ಕೊಂಪೆಯಂತಾಯಿತು. ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದೆನಿಸಿದ್ದ ಕೋಲ್ಕತಾ ಅಕ್ಷರಶಃ ’ಸಾಯುತ್ತಿರುವ ನಗರ’ ಎಂದು ಪರಿಗಣಿಸಲ್ಪಟ್ಟಿತು. ಕಮ್ಯುನಿಸ್ಟರ ಮಿತಿಯಿಲ್ಲದ ಕ್ರೌರ್ಯಕ್ಕೆ ರಾಜ್ಯಾದ್ಯಂತ ಅಮಾಯಕರು ಬಲಿಯಾಗುತ್ತಲಿದ್ದರು. ಕನಿ?ಪಕ್ಷ ಆಹಾರ ಉತ್ಪಾದನೆಯಲ್ಲೂ ಸ್ವಾವಲಂಬನೆ ತೋರದೆ ನಿರಂತರವಾಗಿ ಕೇಂದ್ರದ ಮೇಲೆ ಒತ್ತಡ ಹಾಕುತ್ತಾ ಎಲ್ಲದ್ದಕ್ಕೂ ಅನುದಾನಗಳನ್ನು ದೊರಕಿಸಿಕೊಂಡು ಖಜಾನೆಯನ್ನು ಖಾಲಿ ಮಾಡುತ್ತಿದ್ದದ್ದೇ ಎಡರಂಗ ಆಡಳಿತದ ವೈಶಿಷ್ಟವಾಗಿತ್ತು.
೧೯೭೭ರಿಂದ ೨೦೧೧ರವರೆಗೆ ಆಡಳಿತ ನಡೆಸಿದ ಕಮ್ಯುನಿಸ್ಟರದ್ದು ಜಗತ್ತಿನಲ್ಲಿಯೇ ಅತ್ಯಂತ ದೀರ್ಘಕಾಲ ರಾಜ್ಯವೊಂದನ್ನು ಚುನಾವಣೆಗಳ ಮೂಲಕ ಗೆದ್ದು ಆಳಿದ ಏಕೈಕ ಉದಾಹರಣೆಯಾಗಿದ್ದೇ ಸಾಧನೆ ಎಂಬಂತಾಯಿತು. ಅಕ್ಷರಶಃ ಈ ಮೂರೂವರೆ ದಶಕಗಳಲ್ಲಿ ಪಶ್ಚಿಮ ಬಂಗಾಲವು ಗೂಂಡಾ ರಾಜ್ಯವೇ ಆಗಿ ಪರಿವರ್ತಿತವಾಗಿತ್ತು.
ಸಾಮಾನ್ಯರ ಜನಜೀವನವಂತೂ ಸಂಪೂರ್ಣ ಹದಗೆಟ್ಟಿತ್ತು. ಬೇರೆ ವಿಷಯ ಬಿಡಿ, ಅನಾರೋಗ್ಯವೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕೆಂದರೂ ಕಮ್ಯುನಿಸ್ಟ್ ಪಕ್ಷದ ಕಚೇರಿಯಿಂದ ಪತ್ರ ತೆಗೆದುಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಇತ್ತು. ಇಂತಹ ಘೋರ ಕತ್ತಲಿನಿಂದ ರೋಸಿಹೋಗಿದ್ದ ಜನತೆ ಬಯಸುತ್ತಿದ್ದದ್ದು ಬದಲಾವಣೆಯನ್ನು.
ಮಮತಾ ಪರ್ವ
ಬಂಗಾಳಿಗಳಿಗೆ ’ಮಮತಾದೀದಿ’ ಎಂಬ ಹೆಸರೊಂದು ಆಶಾಕಿರಣವಾಗಿತ್ತು. ಕಾಂಗ್ರೆಸ್ನಿಂದ ಸಿಡಿದು ತೃಣಮೂಲ ಕಾಂಗ್ರೆಸ್ ಕಟ್ಟಿದ ಈಕೆಯನ್ನು ಕಮ್ಯುನಿಸ್ಟರ ದುರಾಡಳಿತದಿಂದ ಮುಕ್ತಿ ದೊರಕಿಸುವ ವಿಮೋಚಕಳೆಂಬಂತೆ ಪಶ್ಚಿಮ ಬಂಗಾಳ ಭಾವಿಸಿತು. ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಪ್ರಯತ್ನಿಸಿದ್ದ ಎಡಪಕ್ಷಗಳ ವಿರುದ್ಧದ ಹೋರಾಟದಲ್ಲಿ ಆಕೆ ಧೈರ್ಯವಾಗಿ ರೈತರ ಪರ ನಿಂತದ್ದು ಆಕೆಯನ್ನು ರಾಜ್ಯಾಡಳಿತದ ಚುಕ್ಕಾಣಿ ಹಿಡಿಯುವವರೆಗೆ ತಂದಿತು. ಕೇವಲ ಐದು ವ?ಗಳ ಹಿಂದಿನವರೆಗೂ ಇಡೀ ದೇಶದ ಜನತೆಗೂ ಬಂಗಾಳದಿಂದ ಬದಲಾವಣೆಯ ಅಲೆ ಬೀಸೀತೆಂಬ ನಿರೀಕ್ಷೆಯಿತ್ತು. ಆದರೆ ಭಾರತದಲ್ಲಿ ದಿಢೀರೆಂದು ಜನಪ್ರಿಯತೆಯ ಉತ್ತುಂಗಕ್ಕೇರಿ ಅಷ್ಟು ವೇಗವಾಗಿ ಜನರ ನಂಬಿಕೆಯನ್ನು ಬುಡಸಮೇತ ಅಲ್ಲಾಡಿಸಿಬಿಡುವ ಬಹುತೇಕ ರಾಜಕೀಯ ಉಲ್ಕಾಪಾತಗಳಂತೆ ’ದೀದಿ’ಯ ಪರ್ವವೂ ಕಂಡುಬರುತ್ತಿದೆ. ಏಕೆಂದರೆ ಪಶ್ಚಿಮ ಬಂಗಾಳದ ಆಡಳಿತ ವ್ಯವಸ್ಥೆ ಇನ್ನಷ್ಟು ಕುಸಿದು ಈಗ ತುರ್ತುನಿಗಾ ಘಟಕದಲ್ಲಿದೆ. ಹಿಂದೂಗಳ ಸ್ಥಿತಿಯಂತೂ ದುರವಸ್ಥೆಯ ತಳ ಮುಟ್ಟಿದೆ.
ನೋಟಿನ ಅಮಾನ್ಯೀಕರಣ ಅನೇಕ ರೀತಿಗಳಲ್ಲಿ ಮಮತಾರ ನಿದ್ದೆ ಕೆಡಿಸಿದ್ದು ಸರ್ವವಿದಿತ. ಅನಂತರ ಉತ್ತರಪ್ರದೇಶ, ಉತ್ತರಾಖಂಡ ಇನ್ನಿತರ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿರುವುದು ಮತ್ತು ಇದರ ಮುಂದಿನ ಪಾಳಿ ಪಶ್ಚಿಮ ಬಂಗಾಳವಿರಬಹುದೆಂಬ ಭಾರೀ ಭಯ ಆಕೆಯನ್ನು ಕಂಪಿಸುವಂತೆ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಮೇಲೆದ್ದು ಬರುತ್ತಿರುವ ಯುವಸಮೂಹ ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ಜಾಗೃತಗೊಳಿಸುವ ಕಾಯಕದಲ್ಲಿ ತೊಡಗಿಕೊಳ್ಳುತ್ತಿರುವುದು ’ತೃಣಮೂಲವ್ಯಾಧಿ’ಗಳಿಗೆ ಜೀರ್ಣವಾಗುತ್ತಿಲ್ಲ. ಆದರೆ ಈ ರೀತಿಯ ಸ್ಥಿತಿ ದಿಢೀರನೆ
ನಿರ್ಮಾಣವಾಗಿದ್ದಲ್ಲ, ಇದು ರಾಜ್ಯದಲ್ಲಿ ಆಡಳಿತಾರೂಢ ಪ್ರಭುತ್ವದ ಹಿಂದೂವಿರೋಧಿ ರಾ?ವಿರೋಧಿ ನೀತಿಗಳಿಂದ ಹತಾಶರಾಗಿ ಸಿಡಿದೇಳಲೇಬೇಕಾದ ಅನಿವಾರ್ಯ ಸ್ಥಿತಿ. ಮಾಡು ಇಲ್ಲವೇ ಮಡಿ ಎನ್ನುವ ಕೊನೆಯ ಹಂತಕ್ಕೀಗ ಬಂಗಾಳದ ಹಿಂದೂಗಳು ಬಂದಿದ್ದಾರೆ ಎಂಬುದು ಆ ರಾಜ್ಯದ ಇತಿಹಾಸವನ್ನು ಅರಿತವರಿಗೆ ಮತ್ತು ಆರು ವರ್ಷಗಳ ದೀದಿಯ ಆಡಳಿತದ ಪರಿಣಾಮಗಳನ್ನು ಅವಲೋಕಿಸುತ್ತಿರುವವರಿಗೆ ಸ್ಪಷ್ಟಗೋಚರವಾಗುತ್ತಿದೆ.
ಮುಸ್ಲಿಂ ಜನಸಂಖ್ಯೆ ಮತ್ತು ಅಕ್ರಮ ವಲಸಿಗರು
೨೦೧೧ರ ಜನಗಣತಿಯಂತೆ ಬಂಗಾಳದಲ್ಲಿರುವ ಮುಸಲ್ಮಾನರ ಸಂಖ್ಯೆ ಸುಮಾರು ಶೇ.೨೮%. (ಇದು ಇನ್ನೂ ಹೆಚ್ಚಿರಬಹುದೆಂದು ಕೆಲವು ಅಧ್ಯಯನಗಳ ಅಂದಾಜು). ಇದರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಬೃಹತ್ ಪ್ರಮಾಣದಲ್ಲಿ ನುಸುಳಿಬಂದಿರುವ ಮುಸಲ್ಮಾನರೂ ಸೇರಿದ್ದಾರೆ. ಹಿಂದಿನ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಸರ್ಕಾರಗಳು ಕೆಂಪುಹಾಸಿನೊಂದಿಗೆ ಅಕ್ರಮ ವಲಸಿಗರನ್ನು ಸ್ವಾಗತಿಸಿ ರಾಜಾತಿಥ್ಯ ಒದಗಿಸುತ್ತಿದ್ದವು. ವೋಟಿಗೆ ಬದಲಾಗಿ ಅವರಿಗೆ ಸರ್ವರೀತಿಯ ನಾಗರಿಕ ಸೌಲಭ್ಯ, ಭದ್ರತೆಗಳನ್ನು ಒದಗಿಸಿದ್ದವು. ಮುಸಲ್ಮಾನರಲ್ಲಿ ಸಾಮಾನ್ಯವಾಗಿ ಹೆಚ್ಚಿರುವ ಬಹುಸಂತಾನ ಮತ್ತು ಬಹುವಿವಾಹಗಳೂ ಸಂಖ್ಯಾಹೆಚ್ಚಳಕ್ಕೆ ಕಾರಣಗಳಾಗಿವೆ. ಉತ್ತರ ಮತ್ತು ದಕ್ಷಿಣ ದಿನಜ್ಪುರ, ಮಾಲ್ಡಾ, ಮುರ್ಷಿದಾಬಾದ್, ಬೀರಭೂಮ್ ಜಿಲ್ಲೆಗಳು ಮತ್ತು ಉತ್ತರ ಹಾಗೂ ದಕ್ಷಿಣ ೨೪ ಪರಗಣ ಜಿಲ್ಲೆಗಳು, ಕೋಲ್ಕೊತಾ-ಹೌರಾ – ಇವು ಅತ್ಯಂತ ತೀವ್ರಗತಿಯಲ್ಲಿ ಮುಸ್ಲಿಂ ಜನಸಂಖ್ಯೆಯ ಏರಿಕೆಯನ್ನು ಕಾಣುತ್ತಿವೆ ಮತ್ತು ಇವುಗಳಲ್ಲಿ ಬಹುಪಾಲು ತಾಲ್ಲೂಕುಗಳು ಮುಸ್ಲಿಂ ಬಹುಸಂಖ್ಯಾತವೇ ಆಗಿವೆ. ಇದನ್ನೇ ತನ್ನ ವೋಟ್ಬ್ಯಾಂಕ್ ಎಂದು ಮಮತಾ ಭದ್ರವಾಗಿ ನಂಬಿದ್ದಾರೆ.
ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಪೋಷಿಸಿಕೊಂಡು ಬಂದಿದ್ದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಇನ್ನಷ್ಟು ಹೆಚ್ಚಿಸಿರುವ ಮಮತಾ ಬ್ಯಾನರ್ಜಿಯವರ ಸರ್ಕಾರವು ಅವರೆಲ್ಲಾ ಅಪರಾಧಗಳಿಗೂ ಕಣ್ಣುಮುಚ್ಚಿ ಕುಳಿತಿರುವುದು ಸ್ಪಷ್ಟಗೋಚರವಾಗುತ್ತಿದೆ.
ಈ ಹಿಂದೆ ಆಕೆ ಸಂಸತ್ತಿನಲ್ಲಿಯೇ ಪಶ್ಚಿಮ ಬಂಗಾಳದಲ್ಲಿರುವ ಅಕ್ರಮ ನುಸುಳುಕೋರರ ಸಮಸ್ಯೆಯ ಬಗ್ಗೆ ಪ್ರಸ್ತಾವಿಸಿ ಅದನ್ನು ಪರಿಹರಿಸಬೇಕೆಂದು ಪಟ್ಟುಹಿಡಿದಿದ್ದರು. ’ಅನೇಕ ನಕಲಿ ಮತದಾರರು ಗಡಿಯಾಚೆಯಿಂದ ಬಂದು ರಾಜ್ಯದ ಚುನಾವಣೆಯಲ್ಲಿ ಮತಚಲಾಯಿಸುತ್ತಿದ್ದಾರೆ. ಮತದಾರರ ಗುರುತಿನ ಚೀಟಿಯನ್ನೂ ಅಕ್ರಮವಾಗಿ ಎಡಪಕ್ಷ ನೇತೃತ್ವದ ರಾಜ್ಯಸರ್ಕಾರ ಅವರಿಗೆ ಒದಗಿಸಿದೆ’ ಎಂದು ಬೊಬ್ಬೆಹಾಕಿದ್ದರು. ಆದರೆ ಈಗ ಆಕೆಯೇ ವೋಟ್ಬ್ಯಾಂಕ್ ರಾಜಕೀಯ ಮಾಡಲು ಆರಂಭಿಸಿರುವುದರಿಂದ ಹಿಂದಿನ ವಾದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಮುಸಲ್ಮಾನರು ಸಾರಾಸಗಟಾಗಿ ಹಾಕುವ ವೋಟುಗಳಿಲ್ಲದೇ ತಾನು ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ಎಂದರೆ ಮುಸಲ್ಮಾನರ ಹಿತಚಿಂತನೆಯನ್ನೇ ಪ್ರಧಾನವಾಗಿ ಉಳ್ಳಂತಹ ಪಕ್ಷ ಎಂದು ಈಗಾಗಲೇ ಬಿಂಬಿಸಿ ಆಗಿದೆ. ಇತ್ತೀಚೆಗೆ ದೇಶದ ಒಳಗೆ ನುಸುಳಿರುವ ಅಕ್ರಮ ಬಾಂಗ್ಲಾವಾಸಿಗಳನ್ನು ಗುರುತಿಸಿ ಹೊರಗೆ ಕಳುಹಿಸುವುದರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಸ್ತಾವಿಸಿದಾಗ ಕೆರಳಿದ ಮಮತಾ ’ಒಬ್ಬನೇ ಒಬ್ಬ ಅಕ್ರಮ ವಲಸಿಗನನ್ನು ಹೊರದಬ್ಬಲು ನಾನು ಬಿಡುವುದಿಲ್ಲ. ಧೈರ್ಯವಿದ್ದರೆ ಮುಟ್ಟಿನೋಡಿ’ ಎಂದು ಗರ್ಜಿಸಿದ್ದಾರೆ. ವಿದೇಶಿಗರನ್ನು ಹೊರಹಾಕುವುದು ಕೋಮುವಾದಿ ರಾಜಕಾರಣವಂತೆ!
ಕುಸಿಯುತ್ತಿರುವ ಕಾರ್ಯಾಂಗ
ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಪೋಷಿಸಿಕೊಂಡು ಬಂದಿದ್ದ ಮುಸ್ಲಿಂ ತುಷ್ಟೀಕರಣ ನೀತಿಯನ್ನು ಇನ್ನಷ್ಟು ಹೆಚ್ಚಿಸಿರುವ ಮಮತಾ ಬ್ಯಾನರ್ಜಿ ಸರ್ಕಾರವು ಅವರ ಎಲ್ಲ ಅಪರಾಧಗಳಿಗೂ ಕಣ್ಣುಮುಚ್ಚಿ ಕುಳಿತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದಾಗಿ ಸರ್ಕಾರದ ಆದೇಶಗಳನ್ನು ಜಾರಿಗೊಳಿಸುವ ಹೊಣೆ ಇರುವ ಅಧಿಕಾರಿಗಳಿಗೂ ಅನೇಕ ಸಂದರ್ಭಗಳಲ್ಲಿ ಇರುಸುಮುರುಸುಗಳಾಗಿವೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಸರ್ಕಾರ ಬಂದ ಹೊಸದರಲ್ಲಿ (ಡಿಸೆಂಬರ್ ೨೦೧೧) ವಿದ್ಯುತ್ ಇಲಾಖೆಯ ಮಂತ್ರಿ ಮನೀಶ್ ಗುಪ್ತಾ ಅವರು ವಿದ್ಯುತ್ ಕಳ್ಳತನದ ಕುರಿತಾಗಿ ಕಠಿಣಕ್ರಮ ಕೈಗೊಳ್ಳಲು ಮುಂದಾದರು. ಇದರಿಂದಾಗಿ ಪ್ರಾಮಾಣಿಕವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವವರಿಗೆ ಹೊರೆ ಕಡಮೆಯಾಗುವ ಸಾಧ್ಯತೆಗಳು ಇದ್ದವು. ಅನಧಿಕೃತವಾಗಿ ವಿದ್ಯುತ್ತಂತಿಗಳಿಗೆ ಕೊಕ್ಕೆ ಹಾಕಿ ವಿದ್ಯುತ್ ಕದಿಯುತ್ತಿದ್ದವರ ವಿರುದ್ಧ ಮಗ್ರಹಾತ್ ತಾಲ್ಲೂಕಿನಲ್ಲಿ (೨೪ ಪರಗಣ ಜಿಲ್ಲೆ) ಕಾರ್ಯಾಚರಣೆಗೆ ಮುಂದಾದಾಗ ವಿದ್ಯುತ್ ಇಲಾಖೆ ಅಧಿಕಾರಿಗಳು ತೊಂದರೆಗೊಳಗಾದರು. ಈ ತಾಲ್ಲೂಕಿನಲ್ಲಿ ಮುಸಲ್ಮಾನರದೇ ಬಾಹುಳ್ಯ (ಶೇ. ೫೦ಕ್ಕಿಂತಲೂ ಹೆಚ್ಚು). ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ಈ ಜನ ಅನಧಿಕೃತ ವಿದ್ಯುತ್ ಸಂಪರ್ಕ ತೆಗೆದುಹಾಕಲು ಬಂದಿದ್ದ ಅಧಿಕಾರಿ, ಕರ್ಮಚಾರಿಗಳನ್ನು ಬಡಿದರು, ಪೊಲೀಸರನ್ನು ಹಿಗ್ಗಾಮುಗ್ಗಾ ಚಚ್ಚಿದರು. ಕಡೆಗೆ ಪ್ರಾಣ ಉಳಿಸಿಕೊಳ್ಲಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಜಾಗ ಖಾಲಿಮಾಡಿದರು. ಸರ್ಕಾರಿ ಆದೇಶದ ಪಾಲನೆಗೆ ನಿಂತ ನೌಕರರ ಕಷ್ಟ ವಿಚಾರಿಸಿ ಅವರಿಗೆ ನೈತಿಕ ಬೆಂಬಲ ಮತ್ತು ಕಾನೂನು ಪಾಲಿಸದ ಜನರಿಗೆ ಎಚ್ಚರಿಕೆ ನೀಡುವ ಬದಲಾಗಿ ಮಮತಾ ದೀದಿ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರನ್ನೇ ಸಾರ್ವಜನಿಕವಾಗಿ ನಿಂದಿಸಿದರು. ಏಕೆಂದರೆ ಸರ್ಕಾರದ ಕ್ರಮವನ್ನು ವಿರೋಧಿಸಿದವರು ಮಮತೆಯ ಅಲ್ಪಸಂಖ್ಯಾತರು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲವಷ್ಟೆ. ಈ ಘಟನೆ ಅಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿರುವ ರೀತಿಗೆ ಒಂದು ಸ್ಯಾಂಪಲ್ ಪ್ರಸಂಗ. ಇಂತಹದ್ದು ಆಡಳಿತದ ವಿವಿಧ ಹಂತಗಳಲ್ಲಿ ಪ್ರತಿನಿತ್ಯ ನಡೆಯುವುದು ಮಾಮೂಲಾಗಿ, ಆಡಳಿತಯಂತ್ರವೇ ನೆಲಕಚ್ಚುವಂತಾಗಿದೆ. ಏನು ಮಾಡಿದರೆ ಎಲ್ಲಿ ಒದೆ ಬೀಳುತ್ತದೆಯೋ, ಎಲ್ಲಿ ನಿಂದನೆ ಎದುರಿಸಬೇಕಾಗುತ್ತದೆಯೋ ಎಂಬ ಭೀತಿಯಲ್ಲಿ ನೌಕರವರ್ಗವಿದೆ. ಶಿಕ್ಷಕರು, ಸರ್ಕಾರಿ ಆಸ್ಪತ್ರೆಯ ವೈದ್ಯರುಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗೇನಿಲ್ಲ.
ನಿಷ್ಕ್ರಿಯ ಪೊಲೀಸರು
ಕಳೆದ ವರ್ಷ ಮುರ್ಷಿದಾಬಾದ್ ಜಿಲ್ಲೆಯ ಅನೇಕ ಕಡೆಗಳಲ್ಲಿ ದುರ್ಗಾಪೂಜೆಯ ಪೆಂಡಾಲ್ಗಳನ್ನು ಕಿತ್ತುಹಾಕಲಾಗಿದೆ. ಬೀರಭೂಮ್ ಜಿಲ್ಲೆಯಲ್ಲಿ ಮಂದಿರವೊಂದನ್ನು ನಾಶಗೊಳಿಸಿ ಹನುಮಂತನ ಮೂರ್ತಿಯನ್ನು ರಸ್ತೆಗೆಸೆಯಲಾಗಿದೆ. ಈ ಸಂಬಂಧ ಹಿಂದುಗಳು ಆಕ್ರೋಶಗೊಂಡರೂ ಸಹ ಯಾವುದೇ ಗಲಭೆಯೆಬ್ಬಿಸದೆ ಶಾಂತಿಯುತವಾಗಿ ಪೊಲೀಸ್ಠಾಣೆಗೆ (ಮಯೂರಗಂಜ್) ದೂರುನೀಡಲು ಹೋದಾಗ ಕನಿ?ಪಕ್ಷ ಎಫ್ಐಆರ್ ಅನ್ನೂ ಬರೆಯಲಾಗಿಲ್ಲ. ಈಗಂತೂ ಬಂಗಾಳದಲ್ಲಿ ಹಿಂದು ಮಂದಿರಗಳನ್ನೊಡೆಯುವುದು ಸಾಂಕ್ರಾಮಿಕವಾಗಿ ಹಬ್ಬುತ್ತಿದೆ. ೨೦೧೬ರ ಅಕ್ಟೋಬರ್ ೧೧-೧೨ರಂದು ಮೊಹರಂ ಮೆರವಣಿಗೆಯಲ್ಲಿ ಹೊರಟ ಮುಸಲ್ಮಾನರು ದಾರಿಯಲ್ಲಿ ಸಿಕ್ಕ ದುರ್ಗಾಪೂಜೆಯ ಪೆಂಡಾಲ್ಗಳನ್ನು ಧ್ವಂಸಗೊಳಿಸಿ ದುರ್ಗೆಯ ಪ್ರತಿಮೆಗಳನ್ನು ಭಗ್ನಗೊಳಿಸಿದರು. ಮೂಕಪ್ರೇಕ್ಷಕರಾಗಿದ್ದ ಪೊಲೀಸರು ಇದನ್ನು ತಡೆಯುವ ಸಾಹಸಕ್ಕೆ ಹೋಗಲಿಲ್ಲ. ಪರಿಣಾಮ ಹನ್ನೆರಡಕ್ಕೂ ಹೆಚ್ಚು ಸ್ಥಳಗಳಲ್ಲಿ ಗಲಭೆಗಳಾದವು.
ಈಗಂತೂ ಬಂಗಾಳದಲ್ಲಿ ಹಿಂದು ಮಂದಿರಗಳನ್ನೊಡೆಯುವುದು ಸಾಂಕ್ರಾಮಿವಾಗಿ ಹಬ್ಬುತ್ತಿದೆ. ೨೦೧೬ರ ಅಕ್ಟೋಬರ್ ೧೧-೧೨ರಂದು ಮೊಹರಂ ಮೆರವಣಿಗೆಯಲ್ಲಿ ಹೊರಟ ಮುಸಲ್ಮಾನರು ದಾರಿಯಲ್ಲ್ಲಿ ಸಿಕ್ಕ ದುರ್ಗಾಪೂಜೆಯ ಪೆಂಡಾಲ್ಗಳನ್ನು ಧ್ವಂಸಗೊಳಿಸಿ ದುರ್ಗೆಯ ಪ್ರತಿಮೆಗಳನ್ನು ಭಗ್ನಗೊಳಿಸಿದರು.
ಈ ಹಂತದಲ್ಲಿ ತೀರಾ ವಿಚಿತ್ರವಾಗಿ ವರ್ತಿಸಿದ ಸರ್ಕಾರ ಹಿಂದೂಗಳ ದುರ್ಗಾಪೂಜೆಯ ಅವಧಿಯನ್ನೇ ಮೊಟಕುಗೊಳಿಸಿ ನಿಗದಿತ ದಿನಕ್ಕೂ ಮುಂಚಿನದಿನವೇ ಸಂಜೆ ೪ ಗಂಟೆಯೊಳಗಾಗಿ ದುರ್ಗಾಪ್ರತಿಮೆಗಳನ್ನು ವಿಸರ್ಜಿಸಬೇಕು, ಇಲ್ಲದಿದ್ದರೆ ಎರಡು ದಿನಗಳ ನಂತರ ವಿಸರ್ಜಿಸಬೇಕು ಎಂದು ಆಜ್ಞೆ ಹೊರಡಿಸಿತು. ಇದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲನ್ನು ಹಿಂದುಗಳು ಹತ್ತಿದಾಗ ನ್ಯಾಯಾಲಯ “ರಾಜ್ಯಸರ್ಕಾರದ ನಡೆಗಳನ್ನು ಗಮನಿಸಿದರೆ ಈ ಸರ್ಕಾರವು ಅಲ್ಪಸಂಖ್ಯಾತರಿಗೆ ಅತಿ ಹೆಚ್ಚಿನ ಮಹತ್ತ್ವ ನೀಡುತ್ತಿದೆ ಮತ್ತು ಬಹುಸಂಖ್ಯೆಯಲ್ಲಿರುವ ಜನರ ಕುರಿತಾಗಿ ಒಂದಿಷ್ಟು ಜವಾಬ್ದಾರಿಯನ್ನು ತೋರಿಸುತ್ತಿಲ್ಲ…. ಕೇವಲ ಒಂದು ಸಮುದಾಯದ ಪರವಾಗಿ ಸರ್ಕಾರ ನಡೆದುಕೊಳ್ಳುತ್ತಿರುವಂತಿದೆ. ದುರ್ಗಾಮಾತೆಯ ಭಕ್ತರ ಹಕ್ಕು ಮತ್ತು ಅಧಿಕಾರಗಳನ್ನು ಹತ್ತಿಕ್ಕಲಾಗುತ್ತಿದೆ” – ಎಂದು ಸ್ಪಷ್ಟವಾದ ತೀರ್ಪನ್ನು ನೀಡಿತು.
ಆದರೂ ದುರ್ಗಾಪೂಜೆಗೆ ಅಡ್ಡಿಪಡಿಸುತ್ತಿರುವ ಜಿಹಾದಿ ಶಕ್ತಿಗಳನ್ನು ಮಟ್ಟಹಾಕದೆ ಹಿಂದೂ ಪ್ರಮುಖರಿಗೆ ಕಿರುಕುಳ ನೀಡಲಾಗಿದೆ. ಶಾಂತಿಭಂಗದ ನೆಪದಲ್ಲಿ ಹಿಂದೂಗಳ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. “ಯಾರೇ ಆಗಲಿ ನಿಮ್ಮ ಮಂದಿರವನ್ನು ಒಡೆದುಹಾಕಿದರೆ ಚಿಂತಿಸಬೇಡಿ, ಮತ್ತೆ ಅದನ್ನು ಸರ್ಕಾರವು ನಿರ್ಮಿಸಿಕೊಡುತ್ತದೆ” ಎಂದು ಮುಖ್ಯಮಂತ್ರಿಯೊಬ್ಬರು ಹೇಳಿಕೆ ಕೊಡುತ್ತಾರೆಂದರೆ ಈ ಪೀಡಕಶಕ್ತಿಗಳ ವಿರುದ್ಧ ತಾನೇನೂ ಕ್ರಮಕೈಗೊಳ್ಳುವುದಿಲ್ಲ ಎಂಬ ಸಂದೇಶವೇ ಅಲ್ಲವೆ
ಶವಸಂಸ್ಕಾರಕ್ಕೂ ಎಡೆಯಿಲ್ಲ
ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಚಿಂತಾಜನಕಸ್ಥಿತಿಯಲ್ಲಿ ಇದ್ದಾರೆ. ಎಲ್ಲೆಲ್ಲಿ ಮುಸಲ್ಮಾನರ ಸಂಖ್ಯೆ ೨೦% ದಾಟುತ್ತಿದೆಯೋ ಅಲ್ಲೆಲ್ಲಾ ಅನಧಿಕೃತವಾಗಿ ಷರಿಯಾ ಕಾನೂನಿನ ಹೇರಿಕೆಯಾಗುತ್ತದೆ. ಹಿಂದೂಗಳಿಗೆ ಇರುವಿಕೆಯೇ ಕಷ್ಟವಾಗುತ್ತಿದೆ. ಮುರ್ಷಿದಾಬಾದ್ ಜಿಲ್ಲೆಯ ನಡುವಿನಿಂದ ಗಂಗೆ ಹರಿಯುತ್ತಾಳೆ. ಹೀಗಾಗಿ ಈ ಜಿಲ್ಲೆ ಪೂರ್ವ-ಪಶ್ಚಿಮ ಎಂದು ವಿಭಾಗಿಸಲ್ಪಟ್ಟಿದೆ. ಪೂರ್ವಭಾಗದ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ಹೆಚ್ಚುತ್ತಿರುವ ಮುಸ್ಲಿಂ ಸಂಖ್ಯೆಯಿಂದ ಹಿಂದೂಗಳು ಭಯಭೀತರಾಗಿದ್ದಾರೆ. ಇಲ್ಲಿನ ಅರ್ಜುನ್ಪುರದಲ್ಲಿ ಮುಸಲ್ಮಾನರು ಹಿಂದೂಗಳ ಸ್ಮಶಾನವನ್ನೂ ಬಿಡದೆ ಆಕ್ರಮಿಸಿಕೊಂಡಿದ್ದಾರೆ. “ಇಲ್ಲಿ ಯಾವುದೇ ಶವವನ್ನು ಸುಡುವಂತಿಲ್ಲ, ಬೇಕಿದ್ದರೆ ಸತ್ತವರನ್ನು ನದಿಗೆ ಎಸೆದು ಸುಮ್ಮನೆ ಮನೆಗೆ ಹೋಗಿ” – ಎಂದು ಶವಸಂಸ್ಕಾರಕ್ಕೆ ಬಂದ ನೊಂದವರನ್ನು ಬೆದರಿಸಲಾಗುತ್ತಿದೆ.
ಹಳ್ಳಹಿಡಿದ ಆರ್ಥಿಕತೆ
’ನನ್ನ ಆಡಳಿತ ಕಾಲದಲ್ಲಿ ಅತಿ ಹೆಚ್ಚು ವಿದ್ಯಾರ್ಥಿವೇತನಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡಿದ್ದೇನೆ’ ಎಂದು ಮಮತಾ ಬ್ಯಾನರ್ಜಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ೨೦೧೭-೧೮ನೆ ವ?ದಲ್ಲಿ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಮತ್ತು ಮದರಸಾಗಳಿಗೆ ೨,೮೧೫ ಕೋಟಿ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಈ ಮೊತ್ತವು ಬೃಹತ್, ಮಧ್ಯಮ, ಸಣ್ಣ ಉದ್ದಿಮೆಗಳು ಮತ್ತು ಮಾಹಿತಿ ಹಾಗೂ ಉದ್ಯಮಶೀಲತೆಯ ಅಭಿವೃದ್ಧಿಗೆಂದು ಮೀಸಲಿರಿಸಿದ ಒಟ್ಟು ಹಣಕ್ಕಿಂತ ಹೆಚ್ಚು.
“ಕೌಶಲವೃದ್ಧಿ, ಬೃಹತ್ ಉದ್ಯಮ, ಟೆಕ್ಸ್ಟೈಲ್ ಮತ್ತು ಮಾಹಿತಿತಂತ್ರಜ್ಞಾನ ಕ್ಷೇತ್ರಗಳಿಗಿಂತ ಮದರಸಾಗಳು ಹೆಚ್ಚು ಮಹತ್ತ್ವಪೂರ್ಣ ಎಂದು ಈ ಮೂಲಕ ಮಮತಾ ಸಂದೇಶ ರವಾನಿಸಿದ್ದಾರೆ” ಎಂದು ವಿಶ್ವ ಹಿಂದು ಪರಿ?ತ್ತಿನ ವಕ್ತಾರ ಸೌರೀಶ್ ಮುಖರ್ಜಿ ಹೇಳುತ್ತಾರೆ. ಲಘುಉದ್ಯೋಗ ಅಭಿವೃದ್ದಿಗೆಂದು ಮೀಸಲಾಗಿರಿಸಿರುವ ಹಣವನ್ನೂ ಮತದ ಆಧಾರದ ಮೇಲೆ ವಿಭಜಿಸಲಾಗಿರುವುದು ದೊಡ್ಡ ದುರಂತವೇ ಸರಿ. ಉದ್ಯಮ ಆರಂಭಿಸಲು ಇಚ್ಛಿಸುವ ಪ್ರತಿಯೊಬ್ಬ ಮುಸ್ಲಿಂ ಯುವಕನಿಗೂ ೫ ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೂ ೮೮೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ’ಭೂಮಿ ಮತ್ತು ವಸತಿಹೀನರ ಕಲ್ಯಾಣ ಯೋಜನೆ’ಯ ಅಡಿಯಲ್ಲಿ ’ನಿಜೀ ಗೃಹ ನಿಜೋ ಭೂಮಿ ಪ್ರಕಲ್ಪ’ ಎಂಬ ಹೆಸರಿನಲ್ಲಿ ಇಮಾಮರಿಗೆ ಬೇಕಾಬಿಟ್ಟಿಯಾಗಿ ಸರ್ಕಾರಿ ಜಮೀನನ್ನು ಮಂಜೂರುಮಾಡಲಾಗುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಯ ಹೆಸರಿನಲ್ಲಿ ಬೆಟ್ಟಗುಡ್ಡಗಳ ಪ್ರದೇಶಗಳೂ ಸೇರಿದಂತೆ ಖಾಲಿ ಇರುವ ಸರ್ಕಾರಿ ಜಮೀನುಗಳನ್ನು ಕಬಳಿಸಲಾಗುತ್ತಿದೆ. ಈ ಅಕ್ರಮಗಳೆಡೆಗೆ ಸರ್ಕಾರ ಕಣ್ಣು ಸಹ ತಿರುಗಿಸುತ್ತಿಲ್ಲ; ಬದಲಾಗಿ ಪರೋಕ್ಷವಾಗಿ ಪ್ರೋತ್ಸಾಹವನ್ನೇ ನೀಡುತ್ತಿದೆ. ಕಳೆದ ೫ ವರ್ಷಗಳಲ್ಲಿ ಸರ್ಕಾರಿ ಖರ್ಚಿನಲ್ಲಿ ರಾಜ್ಯಾದ್ಯಂತ ಇರುವ ಮುಸಲ್ಮಾನರ ಖಬರಸ್ತಾನಗಳಿಗೆ ಬಲವಾದ ಕಾಂಪೌಂಡ್ ಹಾಕಿಸಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಹಜ್ಭವನಗಳನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ತುಷ್ಟೀಕರಣದ ಧಾರಾವಾಹಿ
ಬಾಂಗ್ಲಾದೇಶೀ ಅಕ್ರಮ ವಲಸಿಗರ ಬಗ್ಗೆ ಅಪಾರ ಮಮತೆಯನ್ನು ತೋರುವ ಮಮತಾ ಬ್ಯಾನರ್ಜಿ, ಅದೇ ಬಾಂಗ್ಲಾದಿಂದ ಬಂದಿರುವ ಲೇಖಕಿ ತಸ್ಲಿಮಾ ನಾಸ್ರೀನ್ರನ್ನು ಕಂಡರೆ ಮಾತ್ರ ಉರಿದುಬೀಳುತ್ತಾರೆ! ಆಕೆ ಕಟ್ಟಾ ಮುಸಲ್ಮಾನರ ನಿಲವುಗಳನ್ನು ಪ್ರಶ್ನಿಸುವುದೇ ಇದಕ್ಕೆ ಕಾರಣ. ೨೦೧೩ರಲ್ಲಿ ಬಂಗಾಳದ ಟಿವಿ ಧಾರಾವಾಹಿ ’ದುಸಾಹ್ಬಾಸ್’ಗಾಗಿ ಚಿತ್ರಕಥೆಯನ್ನು ತಸ್ಲಿಮಾ ಬರೆದಿದ್ದರು. ಆದರೆ ಇದಕ್ಕೆ ಮುಸ್ಲಿಂ ಕಟ್ಟರ್ ಪಂಥೀಯರು ವಿರೋಧಿಸಿದರೆಂಬ ಏಕೈಕ ಕಾರಣಕ್ಕೆ ಅದರ ಪ್ರಸಾರವನ್ನು ಅನಿರ್ದಿ?ವಧಿಯವರೆಗೆ ಮುಂದೂಡಲಾಯಿತು. “ಇದು ಒಂದು ಅಪ್ಪಟ ಹಿಂದೂ ಮನೆಯೊಂದರ ಪಾತ್ರಗಳಿರುವ ಕಥೆ; ಮುಸಲ್ಮಾನರಿಗೂ ಇದಕ್ಕೂ ಒಂದಿನಿತೂ ಸಂಬಂಧವಿಲ್ಲ” ಎಂದು ತಸ್ಲಿಮಾ ನಾಸ್ರೀನ್ ಎಷ್ಟು ಹೇಳಿದರೂ ಸರ್ಕಾರ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದು ಮಹಿಳಾ ಲೇಖಕಿಯೊಬ್ಬಳ ಸ್ವಾತಂತ್ರ್ಯವನ್ನು ಮಹಿಳಾ ಮುಖ್ಯಮಂತ್ರಿ ಮೊಟಕುಗೊಳಿಸಿದ ಪರಿ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಹಣ ಹೀಗೆ ಅನಗತ್ಯವಾಗಿ ಪೋಲಾಗುತ್ತಿದೆ. ಶಾಲಾ ಮಕ್ಕಳಿಗೆ ಬೈಸಿಕಲ್ ಕೊಡುವ ಯೋಜನೆ, ಕೃಷಿ ಸಬ್ಸಿಡಿಗಳು, ಸಣ್ಣ ಅತಿಸಣ್ಣ ಉದ್ಯಮಗಳಿಗೆ ಸಹಾಯಧನ, ವಸತಿಹೀನರಿಗೆ ಗೃಹಸಾಲ – ಹೀಗೆ ಎಲ್ಲಾ ಯೋಜನೆಗಳ ಫಲಾನುಭವಿಗಳು ಒಂದಲ್ಲ ಒಂದು ರೀತಿ ಮುಸಲ್ಮಾನರೇ ಆಗಿರುವಂತೆ ಮಾಡಲಾಗುತ್ತಿದೆ. ಇಲ್ಲವೇ ಬೇರೆಲ್ಲ ಯೋಜನೆಗಳ ಹಣವನ್ನು ತೆಗೆದು ಮುಸಲ್ಮಾನರ ಕಲ್ಯಾಣಕಾರ್ಯಕ್ರಮಗಳಿಗೆ ಖರ್ಚುಮಾಡಲಾಗುತ್ತಿದೆ. ಹೀಗೆ ಅಭಿವೃದ್ಧಿಗೆ, ಜನಕಲ್ಯಾಣಕ್ಕೆ ಮೀಸಲಾದ ಹಣದ ಶೇಕಡಾ ೫೦ಕ್ಕೂ ಹೆಚ್ಚು ಭಾಗವನ್ನು ೨೮% ಇರುವ ಮುಸಲ್ಮಾನರಿಗಾಗಿಯೇ ಮೀಸಲಿರಿಸಿದಂತಾಗಿದೆ.
ಮುಸ್ಲಿಂ ಗಲಭೆಗಳು
ಮುಸಲ್ಮಾನ ಬಹುಸಂಖ್ಯಾತರಿರುವ ಪ್ರದೇಶಗಳಲ್ಲಿ ಪದೇಪದೇ ತಲೆದೋರುವ ಗಲಭೆಗಳ ಸಂದರ್ಭಗಳಲ್ಲಿ ರಾಜ್ಯ ಪೊಲೀಸರೂ ಸೇರಿದಂತೆ ಆಡಳಿತದ, ಸುರಕ್ಷೆಯ ಹೊಣೆಗಾರಿಕೆಗೆ ಇರುವವರನ್ನು ಮುಸಲ್ಮಾನ ಪರ ಇರುವಂತೆ ಅಥವಾ ದೊಂಬಿಗಳನ್ನು ನಿರ್ಲಕ್ಷಿಸುವಂತೆ ಅನಧಿಕೃತ ಸೂಚನೆಗಳನ್ನು ನೀಡಲಾಗುತ್ತದೆ.
೨೦೧೬ರ ಜನವರಿಯಲ್ಲಿ ಕಲಿಯಾಚಕ್ನಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಜಿಹಾದಿ ಶಕ್ತಿಗಳು ಅಲ್ಲಿದ್ದ ದಾಖಲೆಗಳನ್ನು ಸುಟ್ಟು ಭದ್ರತಾ ಸಿಬ್ಬಂದಿಗಳ ಮೇಲೆಯೇ ಹಲ್ಲೆ ನಡೆಸಿದರು. ಮುಸ್ಲಿಂ ಬಹುಸಂಖ್ಯಾತವಾಗಿರುವ ಮಾಲ್ಡಾ ಸೇರಿದಂತೆ ಜಿಲ್ಲೆಯ ಅನೇಕ ಸ್ಥಳಗಳಲ್ಲಿ, ೨೦೧೬ ಅಕ್ಟೋಬರ್ನಲ್ಲಿ ನೈಹಾತಿ-ಬರಾಕ್ಪುರಗಳಲ್ಲಿ, ಕೋಲ್ಕತಾದ ಕಟ್ವಾ, ಕಾಲಿಗ್ರಾಮ, ಇಮಾಂ ಬಜಾರ್, ಮೇಟಿಯಾ ಬುರ್ಚ್ ಇನ್ನಿತರ ಕಡೆಗಳಲ್ಲಿ ಗಲಭೆಯೆಬ್ಬಿಸಿ ಹಿಂದೂಗಳನ್ನು ಭೀತಗೊಳಿಸಿ ಒಕ್ಕಲೆಬ್ಬಿಸಲು ಪ್ರಯತ್ನಿಸಲಾಯಿತು. ಉತ್ತರ ೨೪ ಪರಗಣ ಜಿಲ್ಲೆಯ ಹಾಜೀಪುರದಲ್ಲಿ ೩೦ಕ್ಕೂ ಹೆಚ್ಚು ಹಿಂದೂಕುಟುಂಬಗಳ ಮನೆ-ಮಠ ನಾಶಮಾಡಲಾಗಿದೆ. ಬರ್ಧಮಾನ್ ಜಿಲ್ಲೆಯ ಕಟವಾದಲ್ಲಿ ಶನಿ ದೇವಾಲಯಕ್ಕೆ ಧಾಳಿಯೆಸಗಲಾಗಿದೆ. ಕಳೆದ ವರ್ಷ(೨೦೧೬)ದ ಡಿಸೆಂಬರ್ನಲ್ಲಿ ಧುಲಾಗಢ್ ಮತ್ತು ಹೌರಾಗಳಲ್ಲಿ ಮುಸಲ್ಮಾನರು ನಡೆಸಿದ ದೊಂಬಿಗಳಲ್ಲಿ ಹಿಂದೂಗಳ ಪ್ರಾಣಹಾನಿಯ ಜೊತೆಗೆ ಆಸ್ತಿಪಾಸ್ತಿಗಳನ್ನು ಲೂಟಿಮಾಡಿ, ಮನೆಗಳನ್ನು ಸುಟ್ಟು ಅಮಾಯಕ ಹಿಂದೂಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಎಸಗಲಾಗಿದೆ. ಬಾಂಬ್ಸ್ಫೋಟವನ್ನೂ ನಡೆಸಲಾಗಿದೆ ಎಂದು ತನಿಖಾ ವರದಿ ತಿಳಿಸಿದೆ. ಆದರೆ ಇದನ್ನು ಹತ್ತಿಕ್ಕುವಲ್ಲಿ ಮತ್ತು ಮುಸಲ್ಮಾನರ ವಿರುದ್ಧ ಕಠಿಣಕ್ರಮ ಕೈಗೊಳ್ಳದಂತೆ ಪೊಲೀಸರ ಕೈ ಕಟ್ಟಿಹಾಕಿದ್ದು ಸ್ಪಷ್ಟವಾಗಿದೆ. ಇವೆಲ್ಲವೂ ಹಿಂದೂಗಳಲ್ಲಿ ಆಕ್ರೋಶವನ್ನು ಹೆಚ್ಚಿಸಿದೆ.
ಈ ಎಲ್ಲಾ ದಾಳಿಗಳನ್ನು ಯೋಜಿತವಾಗಿ ಮತ್ತು ಅಪ್ರಚೋದಿತವಾಗಿ ಮಾಡಲಾಗಿದೆ. ಕಳೆದ ವರ್ಷ ದುರ್ಗಾಪೂಜೆಯ ಸಮಯದಲ್ಲಂತೂ ಹಿಂದೂಗಳು ತೀರಾ ಇಕ್ಕಟ್ಟಿನ ಪರಿಸ್ಥಿತಿ ಅನುಭವಿಸಿದರು. ದುರ್ಗಾಪೆಂಡಾಲ್ಗಳ ಮೇಲಾದ ಹಾನಿಗಳಿಗೆ ಲೆಕ್ಕವೇ ಇಲ್ಲ. ದುರ್ಗಾಮೂರ್ತಿಯ ಭಂಜನೆ, ಬೆಂಕಿ ಹಚ್ಚುವ ಕೆಲಸಗಳಾಗಿವೆ. ಇದನ್ನು ತಡೆಯದೇ ಪ್ರಭುತ್ವವು ದುರ್ಗಾಪೂಜೆಯ ಸಮಯವನ್ನು ಮೊಟಕುಗೊಳಿಸಿತು, ಮೊಹರಂ ಸಹ ಅದೇ ಸಮಯದಲ್ಲಿದೆ ಎಂಬುದನ್ನು ನೆಪವಾಗಿಸಿ ದುರ್ಗೆಯನ್ನು ಕೂರಿಸುವ ದಿನಗಳ ಸಂಖ್ಯೆಯನ್ನು ಮೊಟಕುಗೊಳಿಸುವಂತೆ ಆದೇಶಿಸಲಾಯಿತು. ವಿಸರ್ಜನಾ ಮೆರವಣಿಗೆಗಳಿಗೆ ಅನುಮತಿ ನೀಡದೆ ಕಿರಿಕಿರಿ ಉಂಟುಮಾಡಲಾಯಿತು. ಇಷ್ಟು ಸಾಲದೆಂಬಂತೆ ಮೊಹರಂ ಮೆರವಣಿಗೆಯ ಮೇಲೆ ಹಿಂದೂಗಳು ಆಕ್ರಮಣ ಮಾಡಿದ್ದಾರೆ ಎಂದು ಪುಕಾರು ಹಬ್ಬಿಸಿ ಹತ್ತಾರು ಕಡೆಗಳಲ್ಲಿ ಮುಸಲ್ಮಾನರು ಗಲಭೆಗಳನ್ನು ಮಾಡಿದರು. ಕೋಲ್ಕತಾದಿಂದ ಕೇವಲ ೧೬ ಕಿ.ಮೀ. ದೂರ ಇರುವ ಇಚ್ಛಾಪುರ್ ಸಹ ಈ ರೀತಿಯ ವದಂತಿಯಿಂದ ಹಬ್ಬಿದ ಗಲಭೆಗಳಿಂದ ಪೀಡಿತವಾಯಿತು. ಹಿಂದೂಗಳು ಸಂಕಷ್ಟಗಳಿಗೀಡಾದರು.
ಮಾರ್ಚ್ ೨೦೧೬ರಲ್ಲಿ ಏಷ್ಯಾಕಪ್ ಕ್ರಿಕೆಟ್ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ಇಲ್ಲಮ್ ಬಜಾರ್ ಪ್ರದೇಶದಲ್ಲಿ ಗಲಭೆಯೆಬ್ಬಿಸಿದ ಮುಸಲ್ಮಾನರು ಪೊಲೀಸ್ ಠಾಣೆಗೇ ಬೆಂಕಿ ಹಚ್ಚಿ, ಹೆದ್ದಾರಿಯನ್ನು ಬಂದ್ ಮಾಡಿದರು. ನೂರಾರು ವಾಹನಗಳು ಉರಿದು ಬೂದಿಯಾದವು…ದೊಡ್ಡಪ್ರಮಾಣದ ದಂಗೆಗಳಾಗಿವೆ.
೨೦೧೭ರ ಜನವರಿ ೩ನೇ ವಾರದಲ್ಲಿ ಗರೂಲಿಯಾದಲ್ಲಿ ಹಿಂದೂ ದೇವದೇವತೆಗಳನ್ನು ಅತ್ಯಂತ ಕೆಟ್ಟದಾಗಿ ಚಿತ್ರಿಸಿ, ಫೇಸ್ಬುಕ್ನಲ್ಲಿ ಕಾಮೆಂಟುಗಳನ್ನು ಹಾಕಲಾಯಿತು. ಅಷ್ಟಕ್ಕೇ ಸುಮ್ಮನಿರದೆ ಮುಸಲ್ಮಾನ ಯುವಕರು ಅದನ್ನು ದೊಡ್ಡದಾಗಿ ಅಚ್ಚುಹಾಕಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿದರು. ಅದರಿಂದ ಕುಪಿತರಾದ ಕೆಲವು ಹಿಂದೂಯುವಕರು ಪ್ರತಿಭಟಿಸಿದರು, ಅದಕ್ಕೆಂದೇ ಕಾದುಕುಳಿತಂತಿದ್ದ ಮುಸಲ್ಮಾನರು ಅಕ್ಕಪಕ್ಕದ ಸ್ಥಳಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಹಿಂದೂಗಳ ಮನೆಗಳಿಗೆ ನುಗ್ಗಿ ಲೂಟಿಮಾಡಿ ದಾಂಧಲೆಗೈದು ಬೆಂಕಿ ಹಚ್ಚಿದರು.
ಮಾರ್ಚ್ ೨೦೧೬ರಲ್ಲಿ ಏಷ್ಯಾಕಪ್ ಕ್ರಿಕೆಟ್ನಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿದ್ದಕ್ಕೆ ಇಲ್ಲಮ್ ಬಜಾರ್ ಪ್ರದೇಶದಲ್ಲಿ ಗಲಭೆಯೆಬ್ಬಿಸಿದ ಮುಸಲ್ಮಾನರು ಪೊಲೀಸ್ ಠಾಣೆಗೇ ಬೆಂಕಿಹಚ್ಚಿ, ಹೆದ್ದಾರಿಯನ್ನು ಬಂದ್ ಮಾಡಿದರು. ನೂರಾರು ವಾಹನಗಳು ಉರಿದು ಬೂದಿಯಾದವು. ಕಳೆದ ಆರು ವರ್ಷಗಳ ತೃಣಮೂಲ ಕಾಂಗ್ರೆಸ್ನ ಆಡಳಿತಕಾಲದಲ್ಲಿ ೪೦ಕ್ಕೂ ಹೆಚ್ಚು ದೊಡ್ಡಪ್ರಮಾಣದ ದಂಗೆಗಳಾಗಿವೆ.
ಪೊಲೀಸರು ಇಂತಹ ಸಂದರ್ಭಗಳಲ್ಲಿ ಮೂಕಪ್ರೇಕ್ಷಕರಾಗಿರುತ್ತಾರೆ. ದೂರುಗಳು ದಾಖಲಾಗುವುದೇ
ಇಲ್ಲ. ಪತ್ರಿಕೆಗಳನ್ನು ನಿರ್ಬಂಧಿಸುವ ಕೆಲಸ ಆಗಿರುತ್ತದೆ. ಘಟನಾ ಸ್ಥಳಕ್ಕೆ ತೆರಳಲು ವರದಿಗಾರರಿಗೆ ಅವಕಾಶ ನೀಡುವುದೇ ಇಲ್ಲ. ಈ ಎಲ್ಲಾ ಸಂಗತಿಗಳು ಮುಸಲ್ಮಾನರನ್ನು ಇನ್ನಷ್ಟು ಪುಂಡರನ್ನಾಗಿಸುತ್ತಿದ್ದರೆ ಹಿಂದೂಗಳಲ್ಲಿ ಹತಾಶೆ ಆಕ್ರೋಶಗಳು ಮನೆಮಾಡುತ್ತಿವೆ.
ಕಟ್ಟರ್ಪಂಥೀಯರೇ ಹೆಚ್ಚು ಪ್ರಿಯರು
ತೀವ್ರ ಮುಸ್ಲಿಂ ಮೂಲಭೂತವಾದಿಯೆಂದೇ ಹೆಸರಾದ ಜಮಾತೆ ಉಲೇಮಾ-ಎ-ಹಿಂದ್ನ ಪ್ರಮುಖ ನಾಯಕ ಸಿದ್ದೀಕ್ ಉಲ್ಲಾ ಚೌಧುರಿಯನ್ನು ರಾಜ್ಯ ಸಚಿವಸಂಪುಟಕ್ಕೆ ಹೊಸದಾಗಿ ಸೇರಿಸಿಕೊಳ್ಳಲಾಯಿತು. ಲೇಖಕಿ ತಸ್ಲಿಮಾ ನಾಸ್ರೀನ್ ಅವರನ್ನು ಗಡೀಪಾರು ಮಾಡಬೇಕೆಂದು ಒತ್ತಾಯಿಸಿ ೨೦೦೮ರಲ್ಲಿ ಕೋಲ್ಕತಾದಲ್ಲಿ ರ್ಯಾಲಿ ಮಾಡಿ ಗಲಭೆಯೆಬ್ಬಿಸಿ ಹಿಂದೂಗಳ ಆಸ್ತಿಪಾಸ್ತಿಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟುಮಾಡಿ ಹಲ್ಲೆ ನಡೆಸಿದ ಇದ್ರಿಸ್ ಅಲಿಯನ್ನು ಬಸಿರ್ಹಾತ್ ಕ್ಷೇತ್ರದಿಂದ ಟಿಎಂಸಿಯ ಟಿಕೆಟ್ ನೀಡಿ ಪಾರ್ಲಿಮೆಂಟ್ಗೆ ಕಳುಹಿಸಲಾಯಿತು. ಈಗಲೂ ಪದೇಪದೇ ಒಂದಲ್ಲ ಒಂದು ನೆಪದಲ್ಲಿ ಇವರಿಬ್ಬರೂ ಬಂಗಾಳದಲ್ಲಿ ಅಶಾಂತಿಯನ್ನು ನಿರ್ಮಿಸುತ್ತಲೇ ಇರುತ್ತಾರೆ.
ವಿಚಿತ್ರ ನೋಡಿ, ಭಾರತದ ಬೇರೆ ಪ್ರದೇಶಗಳಿಗಿಂತ ಹೆಚ್ಚು ನಿರ್ಭೀತರಾಗಿ ಫತ್ವಾಗಳನ್ನು ಹೊರಡಿಸುವವರು ಪಶ್ಚಿಮ ಬಂಗಾಳದ ಮೌಲ್ವಿಗಳು. ತಸ್ಲಿಮಾ ನಾಸ್ರೀನರ ತಲೆಗೆ ಬೆಲೆ ಕಟ್ಟುವುದೊಂದಾದರೆ, ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ನ ಹತ್ಯೆಯನ್ನು ಸಾರ್ವಜನಿಕವಾಗಿ ಖಂಡಿಸುವ ಸಭೆಯನ್ನೂ ನಡೆಸುತ್ತಾರೆ. ನೆರೆಯ ಬಾಂಗ್ಲಾದೇಶದಲ್ಲಿ ಕೆಲವು ಮುಸ್ಲಿಂ ತೀವ್ರವಾದಿಗಳ ವಿರುದ್ಧ ಕ್ರಮಕೈಗೊಂಡದ್ದಕ್ಕೆ ಬಂಗಾಳದ ಮೌಲ್ವಿಯೊಬ್ಬ ಪ್ರಧಾನಿ ಶೇಕ್ ಹಸೀನಾರ ಹತ್ಯೆಗೆ ಸಾರ್ವಜನಿಕವಾಗಿಯೇ ಕರೆನೀಡಿದ್ದ.
ಮಾಯವಾದ ಮಯೂರಗ್ರಾಮ!
ಕೋಲ್ಕತಾದ ಉತ್ತರಕ್ಕೆ ೨೪೦ ಕಿ.ಮೀ ದೂರದಲ್ಲಿದ್ದ ಮಯೂರಗ್ರಾಮ ಕೇವಲ ಎರಡು-ಎರಡೂವರೆ ದಶಕಗಳ ಹಿಂದಿನವರೆಗೆ ಶಾಂತಿ, ನೆಮ್ಮದಿಯನ್ನೇ ಹೊದ್ದುಕೊಂಡಿದ್ದ ಗ್ರಾಮ. ೨೮೦ ಹಿಂದೂಕುಟುಂಬಗಳು ಮತ್ತು ೧೫ ಮುಸಲ್ಮಾನ ಕುಟುಂಬಗಳಿದ್ದ ಸಾಮಾನ್ಯ ಹಳ್ಳಿ. “೧೯೯೦ರಲ್ಲಿ ಬಾಂಗ್ಲಾದೇಶದಿಂದ ಬಂದ ಮುಸಲ್ಮಾನರು ಇಲ್ಲಿ ನೆಲೆಸಲಾರಂಭಿಸಿದರು. ಇಲ್ಲಿಯೇ ಇದ್ದ ಮುಸಲ್ಮಾನ ಕುಟುಂಬಗಳು ’ಇವರು ನಮ್ಮ ಬಂಧುಗಳು, ಕೆಲದಿನಗಳ ಕಾಲ ನಮ್ಮಲ್ಲಿಯೇ ಇರುತ್ತಾರೆ’ ಎಂದು ಗ್ರಾಮವಾಸಿ ಹಿಂದೂಗಳಿಗೆ ತಿಳಿಸಿದರು. ನೋಡುನೋಡುತ್ತಲೇ ಸರ್ಕಾರಿ ಜಮೀನು, ಖಾಲಿ ಪ್ರದೇಶಗಳನ್ನು ಅವರು ಆಕ್ರಮಿಸಿಕೊಂಡರು. ನಾವು ಇವರ ವಿರುದ್ಧ ಕೊಟ್ಟ ದೂರುಗಳೆಲ್ಲ ಕಸದಬುಟ್ಟಿ ಸೇರಿದಾಗಲೆ, ಆಗ ಆಡಳಿತದಲ್ಲಿದ್ದ ಸಿಪಿಐ(ಎಂ)ನ ಬೆಂಬಲ ಇವರಿಗಿದೆ ಎಂಬುದು ನಮಗೆ ತಿಳಿಯಿತು. ೧೯೯೮ರ ಹೊತ್ತಿಗೆ ಗ್ರಾಮದಲ್ಲಿ ೫೦ ಮನೆಗಳು ಮುಸಲ್ಮಾನರದೇ ಆಗಿಹೋಗಿದ್ದವು. ಅವರಲ್ಲಿ ದಿಢೀರನೆ ಹಣ ಹೆಚ್ಚಾಯಿತು. ನಮ್ಮ ಹೊಲಗಳನ್ನು ಖರೀದಿಸಲಾರಂಭಿಸಿದರು” ಎಂದು ೬೭ ವರ್ಷದ ಕಬಿರಾಜ್ ಮುಖರ್ಜಿ ನೆನಪಿಸಿಕೊಳ್ಳುತ್ತಾರೆ. ಈಗ ಅವರು ಮಯೂರಗ್ರಾಮ ಬಿಟ್ಟು ಬೋಲಾಪುರ ಪಟ್ಟಣದಲ್ಲಿ ನೆಲಸಿದ್ದಾರೆ.
“ಮುಸಲ್ಮಾನರ ಉಪದ್ರವ ನಿಧಾನವಾಗಿ ಹೆಚ್ಚಾಯಿತು. ನಮ್ಮ ಹೆಣ್ಣುಮಕ್ಕಳನ್ನು ಚುಡಾಯಿಸುವುದು, ಬಲಾತ್ಕರಿಸುವುದು ನಡೆಯತೊಡಗಿತು. ಪೊಲೀಸ್ಠಾಣೆಯಲ್ಲಿ ನಾವು ಕೊಟ್ಟ ದೂರುಗಳು ದಾಖಲಾಗಲೇ ಇಲ್ಲ. ನಾವು ಸಾರ್ವಜನಿಕವಾಗಿ ನಡೆಸುತ್ತಿದ್ದ ಪೂಜಾ ವಿಧಿವಿಧಾನಗಳಿಗೆ ಆಕ್ಷೇಪಿಸತೊಡಗಿದರು. ಗ್ರಾಮದಲ್ಲಿದ್ದ ಏಕೈಕ ಕಾಳೀಮಂದಿರದ ಪಕ್ಕದಲ್ಲೇ ಎರಡು ಮಸೀದಿಗಳು ಎದ್ದವು. ಆಡಳಿತದಲ್ಲಿದ್ದ ಸರ್ಕಾರಿ ಆಧಿಕಾರಿಗಳು ಮಸೀದಿಗೆ ತೊಂದರೆಯಾಗುತ್ತಿದೆಯೆಂಬ ಕಾರಣ ನೀಡಿ ದೇವಾಲಯದಲ್ಲಿ ಶಂಖ, ಜಾಗಟೆಗಳನ್ನು ಬಾರಿಸುವುದನ್ನು ನಿಷೇಧಿಸಿದರು. ಲೌಡ್ಸ್ಪೀಕರ್ ಮುಖಾಂತರ ಆಜಾನ್ನ ಸದ್ದು ನಿರಾತಂಕವಾಗಿ ಇಡೀ ಹಳ್ಳಿಗೆ ಕೇಳಿಬರುತ್ತಿತ್ತು. ಇದಾದ ನಂತರ ನಮಗೆ ಬೆದರಿಕೆಗಳು ಶುರುವಾದವು. ಹಲ್ಲೆಗಳು ಮೊದಲಾಯಿತು. ೨೦೦೧ರ ನಂತರ ಹಿಂದೂಗಳು ತಮ್ಮ ಹೊಲಗದ್ದೆಗಳನ್ನು ಮಾರಿಕೊಂಡು ಕೋಲ್ಕತಾ ಅಥವಾ ಹತ್ತಿರದ ಬೇರೆ ಪಟ್ಟಣಗಳಿಗೆ ವಲಸೆ ಹೋಗಲಾರಂಭಿಸಿದರು. ವೈಭವದಿಂದ ನಡೆಯುತ್ತಿದ್ದ ದುರ್ಗಾಪೂಜೆ ಎಂದೋ ನಿಂತುಹೋಯಿತು. ನಾನು ಸಹ ನನ್ನ ಎರಡು ಮಹಡಿಯ ಕಟ್ಟಡ ಮತ್ತು ೧೦ ಬಿಘಾದಷ್ಟಿದ್ದ ಜಮೀನನ್ನು ಮುಸಲ್ಮಾನರಿಗೆ ಮಾರಿ ಊರು ಬಿಡಬೇಕಾಯಿತು” ಎಂದು ಮುಖರ್ಜಿ ಭಾರವಾದ ಹೃದಯದಿಂದ ಹೇಳುತ್ತಾರೆ. ಇದು ಒಬ್ಬರ ಕಥೆಯಲ್ಲ. ನೂರಾರು ಹಳ್ಳಿಗಳ ಸಾವಿರಾರು ಮುಖರ್ಜಿಗಳ ಕಥೆಯೂ ಇದೇ ಆಗಿದೆ.
ಇದೀಗ ಮಯೂರಗ್ರಾಮ ಅಸ್ತಿತ್ವದಲ್ಲಿಯೇ ಇಲ್ಲ; ಅದೀಗ ’ಮೋರ್ಗ್ರಾಮ್’ ಆಗಿದೆ. ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿರುವ ಹತ್ತು ಹಿಂದೂಕುಟುಂಬಗಳು ಮಾತ್ರ ಅಲ್ಲೀಗ ನೆಲೆಸಿವೆ. ಮುಸ್ಲಿಮರ ಜಮೀನಿನಲ್ಲಿ ದುಡಿಯುವ ಇವರ ಬದುಕು ದುಸ್ತರವಾಗಿದೆ. ಗಂಡಸರ ಹಣೆಯಲ್ಲಿ ತಿಲಕವಿಲ್ಲ, ಹೆಂಗಸರ ಬೈತಲೆಯಲ್ಲಿ ಸಿಂದೂರ ಕಾಣುವಂತಿಲ್ಲ. “ನಾವಿಲ್ಲಿ ದಿನನಿತ್ಯದ ಬೆದರಿಕೆ, ಹಿಂಸೆಗಳನ್ನು ತಡೆದುಕೊಳ್ಳಲಾಗುತ್ತಿಲ್ಲ. ನಮ್ಮ ಹೆಣ್ಣುಮಕ್ಕಳು, ತಾಯಂದಿರು ಮತ್ತು ಪತ್ನಿಯರು ಮಾನಸಿಕ ಹಿಂಸೆಗೊಳಗಾಗುತ್ತಿದ್ದಾರೆ. ನಮ್ಮ ದೌರ್ಬಲ್ಯವನ್ನು ಅಣಕಿಸಲೆಂದೇ ಕಾಳೀದೇವಾಲಯದ ಪಕ್ಕದಲ್ಲೇ ಈದ್ನ ದಿನ ದನ ಕಡಿಯಲಾಗುತ್ತದೆ. ಪೊಲೀಸರು, ರಾಜಕಾರಣಿಗಳು ಇವಕ್ಕೆಲ್ಲ ಮೂಕಸಾಕ್ಷಿಗಳ?. ನಮ್ಮ ಪೂರ್ವಿಕರ ಗ್ರಾಮಗಳಿಂದ ಬಲವಂತವಾಗಿ ನಾವೀಗ ಹೊರಹೋಗುವಂತಾಗಿದೆ” – ಎಂದು ಈಗ ಬುರ್ದವಾನ್ನಲ್ಲಿ ನೆಲೆಸಿರುವ ಹರಿಪಾದ ಬೋರಲ್ ಕಣ್ಣೀರಿಡುತ್ತಾರೆ. ಹಳೆಮನೆಯ ನೆನಪುಗಳು ಹೊಸಮನೆಯ ಬದುಕನ್ನು ಅಸಹನೀಯವಾಗಿಸಿವೆ. ಅಲ್ಲಿಂದ ನಿನ್ನೆ, ಇನ್ನು ಇಲ್ಲಿಂದ ಯಾವತ್ತೋ? – ಎನ್ನುವ ಭೀತಿ ಮನೆಮಾಡಿದೆ.
ಇದು ಮೋರ್ಗ್ರಾಮ್ ಆಗಿರುವ ಮಯೂರಗ್ರಾಮವೊಂದರ ಕಥೆಯಲ್ಲ. ಪಶ್ಚಿಮ ಬಂಗಾಳದ ನೂರಾರು ಹಳ್ಳಿಗಳಿಂದ ಹಿಂದೂಗಳ ತೆರವು ಹೀಗೆಯೇ ಬಲಾತ್ಕಾರದಿಂದ ನಿರಂತರವಾಗಿ ಆಗುತ್ತಿದೆ. ಅವರ ಆಸ್ತಿಪಾಸ್ತಿಗಳು ಮುಸಲ್ಮಾನರ ಪಾಲಾಗುತ್ತಿವೆ, ಹಳ್ಳಿಗಳು ತಮ್ಮ ಸುಂದರ ಹೆಸರುಗಳನ್ನೂ ಕಳೆದುಕೊಂಡು ಇಸ್ಲಾಮೀಕರಣಗೊಳ್ಳುತ್ತಿವೆ.
ಸುಶಿಕ್ಷಿತ ಮುಸಲ್ಮಾನರಿಗಿಂತ ಹೆಚ್ಚಾಗಿ ಯಾಕೆ ಮುಲ್ಲಾಗಳ ಮಾತಿಗೆ ಮಮತಾ ಬೆಲೆಕೊಡುತ್ತಾರೆ? – ಎಂಬುದು ಆಶ್ಚರ್ಯವಾಗುತ್ತದೆ. ಕಳೆದ ಅರ್ಧಶತಮಾನದಿಂದಲೂ ಮುಖ್ಯವಾಹಿನಿಯ ಶಿಕ್ಷಣಕ್ಕಿಂತ ಹೆಚ್ಚಾಗಿ ಮದರಸಾಗಳ ಇಸ್ಲಾಂ ಮತಶಿಕ್ಷಣಕ್ಕೆ ಹೆಚ್ಚು ಪಾಮುಖ್ಯವನ್ನು ಮುಸಲ್ಮಾನರು ನೀಡುತ್ತಿದ್ದಾರೆ. ಹೆಚ್ಚು ಉಗ್ರ ಮತ್ತು ಮೂಲಭೂತವಾದಿಯಾದ ದೇವ್ಬಂದ್ ಸಂಪ್ರದಾಯಕ್ಕನುಗುಣವಾಗಿ ಇಲ್ಲಿ ಬೋಧನೆಗಳನ್ನು ಮಾಡಲಾಗುತ್ತದೆ. ಹೀಗಾಗಿ ಅವರ ಮೇಲೆ ಮೌಲ್ವಿಗಳ ಹಿಡಿತ ಹೆಚ್ಚಿದೆ. ಹಿಂದೂಗಳ ವಿರುದ್ಧ ಹೆಚ್ಚು ಹೆಚ್ಚು ವಿಷಕಾರುವ ಈ ಮುಲ್ಲಾಗಳ ಮಾತನ್ನು ಮತದಾನದ ಸಮಯದಲ್ಲಿಯೂ ಚಾಚೂ ತಪ್ಪದೆ ಬಹುಪಾಲು ಮುಸ್ಲಿಂ ಸಮಾಜ ಪಾಲಿಸುವುದರಿಂದ ಮುಲ್ಲಾಗಳು ಮಮತಾಗೆ ಪ್ರಮುಖರೆನಿಸುತ್ತಾರೆ.
ನೀಟಾಗಿ ಶೇವ್ಮಾಡಿದ, ಪ್ಯಾಂಟುಶರ್ಟು ಧರಿಸಿದ ಆಧುನಿಕ ಶಿಕ್ಷಣ ಪಡೆದ ಮುಸ್ಲಿಂ ಜನಪ್ರತಿನಿಧಿಗಳು ಆಯ್ಕೆಯಾದರೂ ಹಿಂದೆ ನಿಂತು ಅವರನ್ನು ಆಡಿಸುವುದು ಮಧ್ಯಕಾಲೀನ ಮಾನಸಿಕತೆಯ ಸಲಾಫಿ ಅಥವಾ ದೇವ್ಬಂದ್ನಂತಹ ಕಟ್ಟರ್ ಮಾನಸಿಕತೆಯ ಮೀಸೆ ಬೋಳಿಸಿ, ಗಡ್ಡ ಬಿಟ್ಟ ಅರೇಬಿಕ್ ವೇ?ಧಾರಿ ಮೌಲ್ವಿಗಳೇ ಎಂಬುದು ಗುಟ್ಟೇನೂ ಅಲ್ಲ.
ಇಮಾಮರಿಗೆ ನಮೋ ನಮಃ
ಮಮತಾ ಬ್ಯಾನರ್ಜಿಯ ಮುಸ್ಲಿಂ ತುಷ್ಟೀಕರಣದ ಇನ್ನೊಂದು ಕಥೆ ಕೇಳಿ: ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ ಇಮಾಮರಿಗೆ ಮತ್ತು ಅವರ ಸಹಾಯಕರಿಗೆ (ಮುಜೀನ) ಪ್ರತಿ ತಿಂಗಳೂ ಆರರಿಂದ ಹತ್ತು ಸಾವಿರದವರೆಗೆ ತಿಂಗಳ ಭತ್ಯೆ ನೀಡಲು ಮುಸ್ಲಿಂ ಮಮತಾಮಯಿ ಆದೇಶ ಹೊರಡಿಸಿದರು. ಆದರೆ ಇದನ್ನು ವಿರೋಧಿಸಿ ಕೋಲ್ಕತಾ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿಯ ಅಹವಾಲು ಸಲ್ಲಿಸಲಾಯಿತು. ಹೈಕೋರ್ಟ್ ರಾಜ್ಯಸರ್ಕಾರದ ಆಜ್ಞೆಯನ್ನು ’ಸಂವಿಧಾನದ ಆಶಯಗಳಿಗೆ ವಿರುದ್ಧ’ ಎಂದು ಅಭಿಪ್ರಾಯಪಟ್ಟು ರದ್ದುಗೊಳಿಸಿತು. ’ಸರ್ಕಾರವೇ ವಿವಿಧ ಮತಗಳ ಆರಾಧಕರಲ್ಲಿ ತಾರತಮ್ಯವನ್ನು ತೋರುತ್ತಿದೆ’ ಎಂಬುದು ಕೋರ್ಟ್ನ ತೀರ್ಮಾನವಾಗಿತ್ತು. ಆದರೆ ವಾಮಮಾರ್ಗ ಅನುಸರಿಸಿದ ಸರ್ಕಾರವು ರಾಜ್ಯದ ಅಲ್ಪಸಂಖ್ಯಾತ ಖಾತೆಯ ಮೂಲಕ ವಕ್ಫ್ ಬೋರ್ಡ್ಗೆ ಈ ಹಣವನ್ನು ನೀಡಿ, ಅದರ ಮೂಲಕ ಇಮಾಮರಿಗೆ ಮತ್ತು ಮುಜೀನರಿಗೆ ತಿಂಗಳ ಭತ್ಯೆಯಾಗಿ ವಿತರಿಸತೊಡಗಿತು. ವಕ್ಫ್ ಬೋರ್ಡ್ ತಾನು ಖರ್ಚುಮಾಡುವ ಹಣಕ್ಕೆ ಸರ್ಕಾರದ ಅನುಮತಿ ತೆಗೆದುಕೊಳ್ಳುವ ಅಗತ್ಯ ಇಲ್ಲ ಮತ್ತು ಅದರ ಮೇಲೆ ರಾಜ್ಯಸರ್ಕಾರದ ನಿಯಂತ್ರಣ ಕಾನೂನಾತ್ಮಕವಾಗಿಯೂ ಇಲ್ಲದಿರುವುದೇ ಇದಕ್ಕೆ ಕಾರಣ. ಪರೋಕ್ಷವಾಗಿ ಇದು ನ್ಯಾಯಾಲಯದ ಆಶಯದ ಉಲ್ಲಂಘನೆಯೇ ಆಗಿದ್ದರೂ, ಮುಲ್ಲಾಗಳ ಕಪಿಮುಷ್ಟಿಗೆ ಸಿಲುಕಿರುವ ರಾಜ್ಯಸರ್ಕಾರಕ್ಕೆ ತಾನು ನೈತಿಕವಾಗಿ ತಪ್ಪಿತಸ್ಥ ಎನ್ನುವ ಭಾವನೆಯೇ ಇಲ್ಲವಾಗಿದೆ.
ಪ್ರಸ್ತುತ ೩೨,೦೦೦ ಮಸೀದಿಗಳ ೫೫,೦೦೦ಕ್ಕೂ ಹೆಚ್ಚು ಇಮಾಮರು ಮತ್ತು ಮುಜೀನರು ದೇಶದ ತೆರಿಗೆದಾರರ ಹಣದಿಂದ ತಿಂಗಳ ಭತ್ಯೆಯನ್ನು ಪಡೆಯುತ್ತಿದ್ದಾರೆ. ಇಷ್ಟಲ್ಲದೇ ಮಸೀದಿಯ ಸ್ವಚ್ಛತಾ ಸಿಬ್ಬಂದಿಗೆಂದು ಪ್ರತಿ ತಿಂಗಳೂ ಸಾವಿರ ರೂಪಾಯಿಗಳನ್ನು ನಿಗದಿಗೊಳಿಸಲಾಗಿದೆ.
ಪ್ರಸ್ತುತ ೩೨,೦೦೦ ಮಸೀದಿಗಳ ೫೫,೦೦೦ಕ್ಕೂ ಹೆಚ್ಚು ಇಮಾಮರು ಮತ್ತು ಮುಜೀನರು ದೇಶದ ತೆರಿಗೆದಾರರ ಹಣದಿಂದ ತಿಂಗಳ ಭತ್ಯೆಯನ್ನು ಪಡೆಯುತ್ತಿದ್ದಾರೆ. ಇಷ್ಟಲ್ಲದೆ ಮಸೀದಿಯ ಸ್ವಚ್ಛತಾ ಸಿಬ್ಬಂದಿಗೆಂದು ಪ್ರತಿ ತಿಂಗಳೂ ಸಾವಿರ ರೂಪಾಯಿಗಳನ್ನು ನಿಗದಿಗೊಳಿಸಲಾಗಿದೆ. ಈ ತುಷ್ಟೀಕರಣದ ಆಕ್ಟೋಪಸ್ ಇ?ಕ್ಕೇ ತೃಪ್ತವಾಗಿಲ್ಲ. ೨೦೧೭ರ ಫೆಬ್ರುವರಿ ೧೭ರಂದು ಕೋಲ್ಕತಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಇಮಾಮರು ಮತ್ತು ವಕ್ಛ್ ಬೋರ್ಡ್ನವರು ತಮಗೆ ನೀಡುತ್ತಿರುವ ತಿಂಗಳ ಭತ್ಯೆ ಸಾಲದೆಂದು ಪ್ರತಿಭಟನೆ ವ್ಯಕ್ತಪಡಿಸಿದರು. ಇಮಾಮರಿಗೆ ಕನಿಷ್ಠ ೨೦ ಸಾವಿರ ಮತ್ತು ಮುಜೀನರಿಗೆ ೧೦ ಸಾವಿರ ರೂ.ಗಳನ್ನು ಪ್ರತಿ ತಿಂಗಳೂ ನೀಡಬೇಕೆಂದು ಆಗ್ರಹಿಸಲಾಗಿದೆ. ಇದನ್ನು ಆದಷ್ಟು ಶೀಘ್ರ ಪೂರೈಸದಿದ್ದರೆ ರಾಜ್ಯವ್ಯಾಪಿ ಆಂದೋಲನ ಕೈಗೆತ್ತಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಮುಲ್ಲಾಗಳಿಗೆ ತಡೆಯಿಲ್ಲ
ಕಟ್ಟರ್ ಪಂಥೀಯ ಮುಲ್ಲಾಗಳು ಮಮತಾ ಆಡಳಿತದಲ್ಲಿ ಬಹಳಷ್ಟು ಬ ಲಿಷ್ಠರಾಗಿದ್ದಾರೆ. ಮುಸ್ಲಿಂ ವರ್ಗದಲ್ಲಿ ಅಪಾರ ಪ್ರಭಾವ ಹೊಂದಿರುವವರಲ್ಲಿ ಒಬ್ಬನಾದ ಟಿಪ್ಪುಸುಲ್ತಾನ್ ಮಸೀದಿಯ ಇಮಾಂ – ನುರೂರ್ ರೆಹಮಾನ್ ಬರ್ಕತಿ ಕಳೆದ ತಿಂಗಳು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ರಿಗೆ ’ರಾಜ್ಯ ಬಿಟ್ಟು ತೊಲಗಿ’ ಎಂದು ಕೂಗಾಡಿದ್ದಲ್ಲದೆ, ಅವರನ್ನು ಪಶ್ಚಿಮ ಬಂಗಾಳದಿಂದ ಒದ್ದು ಹೊರಗೆ ಹಾಕುವವರಿಗೆ ರೂ. ೫ ಲಕ್ಷ ಕೊಡುವುದಾಗಿ ಘೋಷಿಸಿದ್ದ. ಇದನ್ನೆಲ್ಲ ಹೇಳಿದ್ದು ಜನಪ್ರತಿನಿಧಿ, ಟಿಎಂಸಿ ಸಂಸತ್ ಸದಸ್ಯ ಇದ್ರಿಸ್ ಅಲಿ ಅವರ ಪಕ್ಕದಲ್ಲಿ ಕೂತಿದ್ದಾಗಲೆ. ತೀವ್ರ ಉಗ್ರವಾದದ ಪ್ರತೀಕದಂತಿರುವ ಈ ಬರ್ಕತಿ ಒಸಾಮಾ ಬಿನ್ ಲಾಡೆನ್ಗೆ ೨೦೧೧ರಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಿದ್ದಲ್ಲದೆ, ೨೦೧೫ರ ಜುಲೈನಲ್ಲಿ ಯಾಕುಬ್ ಮೆಮೊನ್ಗೆ ಮರಣದಂಡನೆ ವಿಧಿಸಿದಾಗಲೂ ಹೀಗೆಯೇ ವರ್ತಿಸಿದ್ದ. ಇಷ್ಟಕ್ಕೆ ಸುಮ್ಮನಾಗದೆ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಖಕ್ಕೆ ಮಸಿ ಎರಚಿ, ಗಡ್ಡ ತಲೆಕೂದಲು ಬೋಳಿಸುವವನಿಗೆ ೨೫ ಲಕ್ಷ ರೂ. ಕೊಡುವ ವಾಗ್ದಾನವನ್ನೂ ಈತ ಸಾರ್ವಜನಿಕವಾಗಿ ಮಾಡುತ್ತಾನೆಂದರೆ ಇನ್ನು ಉಳಿದ ಮುಖಂಡರು ಇವನಿಗೆ ಯಾವ ಲೆಕ್ಕ! ಯಾವುದೇ ಕ್ಷೇತ್ರದ ಜನಪ್ರತಿನಿಧಿಯಲ್ಲದಿದ್ದರೂ ಈತನಿಗೆ ಮಮತಾ ಸರ್ಕಾರ ಕೆಂಪುದೀಪದ ಎಸ್ಯುವಿ ವಾಹನವನ್ನು ಓಡಾಟಕ್ಕೆಂದು ನೀಡಿದೆ.
ಅಲ್ಲಿ ಸರ್ಕಾರದ ಯಾವುದೇ ಕಾನೂನಿಗೆ ಬೆಲೆಯಿಲ್ಲ. ಸರ್ಕಾರಿ ಅಧಿಕಾರಿಗಳು ಮಧ್ಯೆ ಪ್ರವೇಶಿಸುವಂತಿಲ್ಲ, ತಪಾಸಣೆಗೆಯ್ಯುವಂತಿಲ್ಲ. ಅ?ಕೆ ಯಾವುದೇ ಕ್ರಿಮಿನಲ್ ಪಾತಕಿ ಇಲ್ಲಿಗೆ ಹೋಗಿ ಅಡಗಿ ಕುಳಿತನೆಂದರೆ ಅವನನ್ನು ಬಂಧಿಸಲು ಯಮನಿಂದಲೂ ಸಾಧ್ಯವಿಲ್ಲವೆಂಬಂತಹ ಭಯಾನಕ ಏರಿಯಾಗಳು ಈಗ ಕೋಲ್ಕೊತಾ ಸೇರಿದಂತೆ ಪಶ್ಚಿಮ ಬಂಗಾಲದ ಅನೇಕ ನಗರಗಳಲ್ಲಿ ಕಂಡುಬರುತ್ತಿವೆ.
ಬರ್ಕತಿಯ ಇಂತಹ ಮಾತುಗಳಿಂದ ಪ್ರಚೋದನೆಗೊಂಡ ಮರಿ, ಪುಡಿ ಮುಲ್ಲಾಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮೋದಿ, ಅಮಿತ್ ಷಾ ಇತ್ಯಾದಿ ನಾಯಕರುಗಳ ಹತ್ಯೆಗೆ ಹೊರಡಿಸಿರುವ ಫತ್ವಾಗಳಿಗೆ ಲೆಕ್ಕವೇ ಇಲ್ಲ. ಧ್ವನಿ ಹೆಚ್ಚಿಸಿದಷ್ಟು ಸರ್ಕಾರದಿಂದ ಸೌಲಭ್ಯಗಳು ಇವರಿಗೆ ಹೆಚ್ಚುತ್ತಿವೆ.
ಹಿಂದೂ ಧ್ವನಿಗೆ ಬೆಲೆಯಿಲ್ಲ
ಬಂಗಾಲದಲ್ಲಿ ನಿಷೇಧಿತ ಸಿಮಿ ಉಗ್ರಗಾಮಿ ಸಂಘಟನೆ ಸ್ಥಾಪಿಸಿದ ಇಮ್ರಾನ್ನನ್ನು ಯಾವುದೇ ಸಂಕೋಚವಿಲ್ಲದೇ ಮಮತಾ ಬ್ಯಾನರ್ಜಿ ಸಂಸತ್ ಸದಸ್ಯನನ್ನಾಗಿಸಿದ್ದಾರೆ. ಇದು ಮೂಲಭೂತವಾದಿ ಇಸ್ಲಾಂ ಉಗ್ರರಿಗೆ ಆಕೆ ನೀಡುತ್ತಿರುವ ಮನ್ನಣೆ. ಈಕೆಯ ನೇತೃತ್ವದ ಆಡಳಿತಕ್ಕೆ ಕೇಳಿಬರುವುದು ಇಮಾಮರ ಆದೇಶಗಳಷ್ಟೆ. ಹಿಂದುಗಳ ಕ್ಷೀಣ ಧ್ವನಿಯನ್ನು ಈಕೆಗೆ ತಲಪಿಸುವ ಯಾವುದೇ ಮಾಧ್ಯಮಗಳನ್ನು ಇದುವರೆಗೆ ಶೋಧಿಸಲಾಗಿಲ್ಲ.
ಸದ್ಯಃ ಮುಸಲ್ಮಾನರಲ್ಲಿ ’ನಾವು ಏನು ಮಾಡಿದರೂ ಯಾರೂ ಕೇಳುವವರಿಲ್ಲ’ – ಎಂಬ ನಿರ್ಭೀತ ಸ್ಥಿತಿಯಿದೆ. ತೃಣಮೂಲ ಕಾಂಗ್ರೆಸ್ ಪಕ್ಷ ಗೆದ್ದಿದ್ದೇ ತಮ್ಮಿಂದ – ಎನ್ನುವ ಮನೋಭಾವವಿರುವುದರಿಂದ ಇವರು ಯಾವುದೇ ಗೂಂಡಾ ಕ್ರಿಯೆಗಳನ್ನು ಮಾಡಲೂ ಹೇಸುತ್ತಿಲ್ಲ. ಕೆಲವು ವ?ಗಳ ಹಿಂದೆ ಹಿಂದೂ ಹುಡುಗಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರಗೈದ ನಾಲ್ಕೈದು ಮುಸಲ್ಮಾನರು ಆಕೆಯ ಶರೀರವನ್ನು ತುಂಡುತುಂಡಾಗಿ ಕತ್ತರಿಸಿ ಅಮಾನವೀಯ ವರ್ತನೆಯನ್ನು ತೋರಿದರು. ಇದರ ವಿರುದ್ಧ ಕ್ರೋಧಿತ ಹಿಂದೂಗಳು ಪ್ರತಿಭಟನೆಗಳನ್ನು ಮಾಡಿದರು. ಮುಖ್ಯಮಂತ್ರಿ ಮಮತಾ ಇವರ ಅಹವಾಲನ್ನು ಆಲಿಸುವ ಬದಲು ’ಈ ಪ್ರತಿಭಟನೆಗಳ ಹಿಂದೆ ಮಾವೋವಾದಿಗಳ ಕೈವಾಡವಿದೆ’ ಎಂದು ಘೋಷಿಸಿ ಇಡೀ ಪ್ರತಿಭಟನೆಯನ್ನು ಹತ್ತಿಕ್ಕಿದರು.
ಹೀಗೆ ಬಂಗಾಳದೆಲ್ಲೆಡೆ ಹಿಂದೂಗಳು ಅತಂತ್ರರಾಗುತ್ತಿದ್ದಾರೆ. ಮಾಲ್ಡಾ ಮತ್ತು ಮುರ್ಷಿದಾಬಾದ್ಗಳ ಮುಲ್ಲಾಗಳು ತಮ್ಮ ಕ್ಷೇತ್ರಗಳಿಂದ ಹಿಂದೂಗಳನ್ನು ಹೊರಹಾಕಲು ಆದೇಶಿಸಿದ್ದಾರೆ. ಗಲಭೆಯೆಬ್ಬಿಸುವ ಉದ್ದೇಶಗಳಿಂದಲೇ ಮುಸಲ್ಮಾನರು ಪದೇ ಪದೇ ವಿನಾಕಾರಣ ರ್ಯಾಲಿಗಳನ್ನು ತೆಗೆಯುವುದಕ್ಕೆ ಅವಕಾಶ ಮಾಡಿಕೊಡುವ ಮಮತಾರ ಸರ್ಕಾರ ಹಿಂದೂಸಂಘಟನೆಗಳಿಗೆ ಕಾರ್ಯಕ್ರಮ ಮಾಡಲು ಅನುಮತಿಯನ್ನು ವಿನಾಕಾರಣ ನಿರಾಕರಿಸುತ್ತದೆ. ಹಿಂದೂಸಂಘಟನೆಗಳಿರಲಿ ಉದಾರವಾದಿ ಮುಸ್ಲಿಂ ಚಿಂತಕರ, ಸಂಘಟನೆಗಳ ಧ್ವನಿಯೂ ಇಲ್ಲಿ ಕೇಳಿಬರುವಂತಿಲ್ಲ. ೨೦೧೬ರ ಡಿಸೆಂಬರ್ನಲ್ಲಿ ’ಕೋಲ್ಕತಾ ಕ್ಲಬ್’ನಲ್ಲಿ ಬಲೂಚಿಸ್ತಾನದ ಬಗ್ಗೆ ವಿಚಾರಸಂಕಿರಣವೊಂದನ್ನು ಆಯೋಜಿಸಲಾಗಿತ್ತು. ತನ್ನ ಉದಾರವಾದಿ ಚಿಂತನೆಗಳಿಗೆ ಹೆಸರಾದ ಮುಸ್ಲಿಂ ಚಿಂತಕ ತಾರೀಖ್ ಫತೇಹ್ ಮತ್ತು ಭಾರತದ ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ. ಬಕ್ಷಿ ಈ ಕಾರ್ಯಕ್ರಮದಲ್ಲಿ ಮಾತನಾಡಬೇಕಿತ್ತು. ತಮ್ಮ ರಾ?ವಾದಿ ವಿಚಾರಗಳಿಗೆ ಇವರು ಹೆಸರಾದವರು. ಈ ಸೆಮಿನಾರಿನಲ್ಲಿ ಬಲೂಚಿಸ್ತಾನದ ಜನರ ಮೇಲೆ ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳ ಪ್ರಸ್ತಾಪ ಆಗುವುದು ನಿಶ್ಚಿತವಿತ್ತು. ಆದರೆ ಮುಸ್ಲಿಂ ಉಗ್ರಮತೀಯ ಸಲಾಫಿ ಪಂಥದ ಮೌಲ್ವಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಭಿವ್ಯಕ್ತಿಸ್ವಾತಂತ್ರ್ಯದ ಸಂರಕ್ಷಣೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಸಂಪೂರ್ಣ ರಕ್ಷಣೆಯನ್ನು ನೀಡುವುದರ ಬದಲು, ರಾಜ್ಯಸರ್ಕಾರವು ಸೆಮಿನಾರನ್ನೇ ರದ್ದುಗೊಳಿಸುವಂತೆ ಆಯೋಜಕರ ಮೇಲೆ ಒತ್ತಡ ಹೇರಿತು. ಭಾರತದ ರಾಜ್ಯಸರ್ಕಾರವೊಂದು ಪಾಕಿಸ್ತಾನದ ಮಾನರಕ್ಷಣೆಗೆ ಮುಂದಾದ ನಾಚಿಕೆಗೇಡಿನ ಸನ್ನಿವೇಶ ಇದು.
ಈ ರಾಜ್ಯದಲ್ಲಿ ರಾಷ್ಟ್ರೀಯ ಚಿಂತನೆಗಳಿರುವ ಮುಸಲ್ಮಾನರ ಮಾತಿಗೆ ಒಂದಿನಿತೂ ಬೆಲೆಯಿಲ್ಲ. ತಲ್ಪಕುರದ ಮದರಸಾವೊಂದರ ಮುಖ್ಯಶಿಕ್ಷಕ ಕಾಜಿ ಮಾಸೂಮ್ ತನ್ನ ಮದರಸಾದಲ್ಲಿ ಕಲಿಯುತ್ತಿದ್ದ ಮಕ್ಕಳಿಗೆ ’ವಂದೇ ಮಾತರಂ’ ಹಾಡಲು ಕಲಿಸಿದ್ದಾನೆಂಬ ಆರೋಪದ ಮೇಲೆ ಅವರನ್ನು ಅಮಾನತ್ತಿನಲ್ಲಿಡಲಾಯಿತು. ಇದು ಮಮತಾ ಸರ್ಕಾರದ ರೀತಿ.
ದೇಶದ ಭದ್ರತೆಗೆ ಆತಂಕ
ದಿನದಿಂದ ದಿನಕ್ಕೆ ಪಶ್ಚಿಮ ಬಂಗಾಳದ ಸ್ಥಿತಿ ನಾಜೂಕಾಗುತ್ತಿದೆ. ಕಾಶ್ಮೀರದ ಕಣಿವೆಯಲ್ಲಿ ಉಂಟಾಗಿರುವ ಪರಿಸ್ಥಿತಿಯಂಥದ್ದನ್ನೆ ಇಲ್ಲಿಯೂ ಸೃಷ್ಟಿಸಲಾಗುತ್ತಿದೆ. ಬಂಗಾಳದ ಯಾವುದೇ ಪ್ರದೇಶದಲ್ಲಿ ಒಂದೆರಡು ಮದರಸಾ, ಮಸೀದಿಗಳು ಆಗುತ್ತಿದ್ದಂತೆ ಆ ಪ್ರದೇಶವನ್ನು ಮುಸ್ಲಿಂ ಬಹುಸಂಖ್ಯಾತಗೊಳಿಸಲಾಗುತ್ತಿದೆ. ಹಿಂದೂಗಳು ಮನೆಬಿಟ್ಟು ಓಡುವಂತೆ ಜಿಹಾದಿಶಕ್ತಿಗಳು ಕಾರ್ಯವೆಸಗುತ್ತಿವೆ. ಆನಂತರದ ಹಂತದಲ್ಲಿ ಬೇರೆಯವರಿರಲಿ, ಸ್ವತಃ ಪೊಲೀಸರೂ ಹೆಜ್ಜೆಯಿಡಲು ಸಾಧ್ಯವಾಗದಂತಹ ವಸತಿಪ್ರದೇಶಗಳನ್ನಾಗಿ ಪರಿವರ್ತಿಸಲಾಗುತ್ತದೆ. ಅಲ್ಲಿ ಸರ್ಕಾರದ ಯಾವುದೇ ಕಾನೂನಿಗೆ ಬೆಲೆಯಿಲ್ಲ. ಸರ್ಕಾರಿ ಅಧಿಕಾರಿಗಳು ಮಧ್ಯಪ್ರವೇಶಿಸುವಂತಿಲ್ಲ, ತಪಾಸಣೆಗೈವಂತಿಲ್ಲ. ಅ?ಕೆ ಯಾವುದೇ ಘೋರ ಪಾತಕಿ ಇಲ್ಲಿಗೆ ಹೋಗಿ ಅಡಗಿಕುಳಿತನೆಂದರೆ ಅವನನ್ನು ಬಂಧಿಸಲು ಯಮನಿಂದಲೂ ಸಾಧ್ಯವಿಲ್ಲವೆಂಬಂತಹ ಭಯಾನಕ ಪ್ರದೇಶಗಳು ಈಗ ಕೋಲ್ಕತಾ ಸೇರಿದಂತೆ ಪಶ್ಚಿಮ ಬಂಗಾಳದ ಅನೇಕ ನಗರಗಳಲ್ಲಿ ಕಂಡುಬರುತ್ತಿವೆ. ಇವು ಜಿಹಾದಿನ ಪ್ರಬಲ ಕೇಂದ್ರಗಳೂ ಮತ್ತು ಗಡಿಪ್ರದೇಶಗಳ ಖೋಟಾನೋಟು ದಂಧೆಯ ಅಡ್ಡೆಗಳೂ ಹೌದು. ಖುಲ್ಲಂಖುಲ್ಲಾ ಗೋವನ್ನು ಹತ್ಯೆ ಮಾಡುವ ಸ್ಥಳಗಳಂತೂ ಅಗಣಿತ.
ಹಿಂದೂಗಳ ಮನಸ್ಸಿನಲ್ಲಿ ಭಯವನ್ನುಂಟುಮಾಡಲೆಂದೇ ಇವುಗಳನ್ನು ಮಾಡಲಾಗುತ್ತಿದೆ. ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಿರುವ ಪ್ರತಿ ಸ್ಥಳದಲ್ಲಿಯೂ ಇದು ಪುನರಾವರ್ತಿಸುತ್ತಿದೆ ಎಂದು ’ಹಿಂದೂ ಸಮಿತಿ’ಯ ಕಾರ್ಯಕರ್ತರು ಹೇಳುತ್ತಾರೆ. ಕೆಲವು ಕಡೆಗಳಲ್ಲಿಯಂತೂ ’ಮುಸಲ್ಮಾನರಾಗಿ, ಇಲ್ಲವೇ ಜಾಗ ಖಾಲಿಮಾಡಿ – ಎಂಬಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ’ ಎಂದು ಈ ಎಲ್ಲಾ ಸಂಗತಿಗಳನ್ನು ದಾಖಲಿಸುತ್ತಿರುವ ಹಿಂದೂ ಸಮಿತಿ ಹೇಳುತ್ತಿದೆ. ಈ ಬೆಳವಣಿಗೆಗಳು ಮುಂದೊಂದು ದಿನ ವಿಭಜನೆಗೂ ದಾರಿಯಾದೀತು ಎಂಬುದು ಇವರ ಆತಂಕ. ಏಕೆಂದರೆ ಇನ್ನು ಕೆಲವೇ ವ?ಗಳಲ್ಲಿ ಎರಡು ಮೂರನೇ ತಲೆಮಾರಿನ ಅಕ್ರಮ ಬಾಂಗ್ಲಾದೇಶಿ ವಲಸಿಗರು ಬಹುಸಂಖ್ಯಾತರಾಗುವ ಜಿಲ್ಲೆಗಳು ಪೂರ್ವಭಾರತದಲ್ಲಿಯೇ ಕಂಡುಬರಲಿವೆ ಮತ್ತು ಇವು ಜಾಗತಿಕ ಭಯೋತ್ಪಾಕರ ಹೊಸನೆಲೆಗಳಾಗುವ ಎಲ್ಲ ಆತಂಕಗಳೂ ಇವೆ.
ಮಕ್ಕಳ ತಲೆಗೆ ಇಸ್ಲಾಂ
ರಾಜ್ಯಸರ್ಕಾರ ಸಿದ್ಧಪಡಿಸುತ್ತಿರುವ ಪಾಠ್ಯಪುಸ್ತಕಗಳಲ್ಲಂತೂ ಇಸ್ಲಾಂನ ಹೇರುವಿಕೆ ಎದ್ದುಕಾಣುತ್ತಿದೆ. ಅಲ್ಲಿನ ಶಾಲಾಮಕ್ಕಳಿಗೆ ತಮ್ಮ ತಂದೆ ತಾಯಿಯರನ್ನು ಅಬ್ಬು ಹಾಗೂ ಅಮ್ಮೀ ಎಂದು ಸಂಬೋಧಿಸಲು ಹೇಳಿಕೊಡಲಾಗುತ್ತಿದೆ. ಚಿಕ್ಕಪ್ಪ, ಅತ್ತೆ ಇತ್ಯಾದಿ ಸಂಬಂಧಗಳನ್ನು ಅರೇಬಿಕ್ ಹೆಸರುಗಳಿಂದ ಸಂಬೋಧಿಸುವಂತೆ ಹೇಳಲಾಗುತ್ತಿದೆ. ಬಂಗಾಳಿಯಲ್ಲಿ ಕಾಮನಬಿಲ್ಲಿಗೆ ’ರಾಂಧೋನು’ (ರಾಮನ ಬಿಲ್ಲು) ಎಂದು ಕರೆಯಲಾಗುತ್ತದೆ; ಆದರೆ ರಾಮ ಶಬ್ದ ಅಪಥ್ಯವೆನಿಸಿರುವುದರಿಂದ, ಈಗ ಅಲ್ಲಿನ ಪಾಠ್ಯಪುಸ್ತಕಗಳಲ್ಲಿ ಇದನ್ನು ’ಆಸಮಾನಿ ಧೋನು’ (ಆಗಸದ ಬಿಲ್ಲು) ಎಂದು ಬದಲಿಸಿದೆ. ಬಂಗಾಳದ ಸ್ವಾಭಿಮಾನದ ಬಗ್ಗೆ ಬೊಬ್ಬೆಹೊಡೆಯುವ ಮಮತಾಗೆ ಬಂಗಾಳಿ ಭಾಷೆಯ ಮೇಲೆ ಆಗುತ್ತಿರುವ ಈ ದಾಳಿಯ ಕುರಿತು ಚಿಂತೆಯೇ ಇಲ್ಲವಾಗಿದೆ. ಶಾಲೆಗಳಲ್ಲಿ ಹಿಂದೂಮಕ್ಕಳ ಮನಸ್ಸಿನಲ್ಲಿಯೂ ಮುಸಲ್ಮಾನರ ಬಗ್ಗೆ ಭೀತಿಯನ್ನುಂಟುಮಾಡುವ ಪ್ರಯತ್ನಗಳು ನಡೆಯುತ್ತಿವೆ.
ಭಾರತೀಯ ಸಂಸ್ಕೃತಿ, ಪರಂಪರೆ, ದೇಶದ ಮಹಾಪುರುಷ ಬಗ್ಗೆ ತಿಳಿಸಿಕೊಡುತ್ತಿರುವ ’ವಿದ್ಯಾಭಾರತಿ’ಯಂತಹ ಸಂಸ್ಥೆಗಳಿಂದ ನಡೆಯುತ್ತಿರುವ ಶಾಲೆಗಳಿಗೆ ಇನ್ನಿಲ್ಲದ ತೊಂದರೆ, ಕಿರುಕುಳ ಶಿಕ್ಷಣ ಇಲಾಖೆಯಂತಹ ಸರ್ಕಾರಿ ಸಂಸ್ಥೆಗಳ ಕಡೆಯಿಂದಲೇ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಕುಂಟುನೆಪ ಹೇಳಿ ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಆದರೆ ಕಟ್ಟರ್ ಧಾರ್ಮಿಕ ಮೂಲಭೂತವಾದಿ ಶಿಕ್ಷಣವನ್ನು ಕೊಡುವ ಮದರಸಾಗಳಿಗೆ ಸರ್ಕಾರದ ಕೃಪಾಹಸ್ತ ನಿರಂತರವಾಗಿದೆ. ರಾಜ್ಯಸರ್ಕಾರದ ವತಿಯಿಂದ ಮದರಸಾಗಳಿಗೆ ಅತ್ಯುತ್ತಮ ಕಂಪ್ಯೂಟರ್ಗಳನ್ನು ಪೂರೈಸಲಾಗುತ್ತಿದೆ. ಇಲ್ಲಿನ ಮುಲ್ಲಾಗಳಿಗೆ ಎಲ್ಲ ರೀತಿಯ ಸೌಲಭ್ಯಗಳು ಧಾರಾಳವಾಗಿ ಕೈಗೆಟುಕುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ಉರ್ದುವನ್ನು ದ್ವಿತೀಯ ಆಡಳಿತ ಭಾಷೆಯನ್ನಾಗಿ ಮಾಡಿರುವ ಮಮತಾ ಸರ್ಕಾರವು ಅರೇಬಿಕ್ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲು ಯೋಜನೆ ಸಿದ್ಧಪಡಿಸಿದೆ.
ಬೇಡ ಸರಸ್ವತಿ, ಇರಲಿ ಪೈಗಂಬರ್
ನವರಾತ್ರಿಯ ಸಮಯದಲ್ಲಿ ಬಂಗಾಳದ ಶಾಲೆಗಳಲ್ಲಿ ಸಂಭ್ರಮದ ಸರಸ್ವತೀ ಪೂಜೆ ಕಂಡುಬರುವುದು ಸಾಮಾನ್ಯ. ನಾಸ್ತಿಕ ಕಮ್ಯುನಿಸ್ಟರ ಕಾಲದಲ್ಲೂ ಈ ಪೂಜೆಗಳು ಅಬಾಧಿತವಾಗಿ ಸಾಗಿದ್ದವು. ಆದರೆ ಇತ್ತೀಚೆಗೆ ಅದರ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಬರೀ ಇಷ್ಟು ಮಾತ್ರವಲ, ಎಲ್ಲಾ ಶಾಲೆಗಳಲ್ಲಿ ಮಿಲಾನ್- ಉನ್-ನಬಿ (ಪೈಗಂಬರ್ ಜನ್ಮದಿನ) ಆಚರಿಸುವಂತೆ ಸರ್ಕ್ಯುಲರ್ ಹೊರಡಿಸಲಾಗಿದೆ. ಹಿಂದೂಮಕ್ಕಳಿಗೆ ಎಂತಹ ವಿಪರ್ಯಾಸದ ಸ್ಥಿತಿ: ಒಂದೆಡೆ ನಮ್ಮ ದೇವರ ಪೂಜೆ ಮಾಡುವ ಹಾಗಿಲ್ಲ, ಇನ್ನೊಂದೆಡೆ ನಮ್ಮನ್ನು ಹಂಗಿಸುವ, ಹಿಂಸಿಸುವ, ಹೀಯಾಳಿಸುವ, ನಮ್ಮ ನಿತ್ಯದ ಜೀವನವನ್ನು ನರಕಗೊಳಿಸಿರುವ ಮುಸಲ್ಮಾನಮತದ ಸ್ಥಾಪಕನ ಜನ್ಮದಿನವನ್ನು ಆಚರಿಸಿ ಕೊಂಡಾಡುವಂತೆ ಸರ್ಕಾರದ ಸೂಚನೆ!
ಕೋಲ್ಕತಾದಿಂದ ೪೦ ಕಿ.ಮೀ. ದೂರದಲ್ಲಿರುವ ತೆಹತ್ತಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಿಲಾನ್- ಉನ್-ನಬಿಯನ್ನು ಆಚರಿಸಲು ಶಾಲಾ ಆಡಳಿತವರ್ಗ ನಿರಾಕರಿಸಿತು. ಈ ಶಾಲೆಗೆ ಮುಸ್ಲಿಂ ಮೂಲಭೂತವಾದಿಗಳು ನುಗ್ಗಿ ಮಕ್ಕಳನ್ನು ಭಯಭೀತಗೊಳಿಸಿದರು. ಮಹಿಳಾ ಶಿಕ್ಷಕಿಯರನ್ನು ಬಲವಂತವಾಗಿ ಕೂಡಿಹಾಕಲಾಗಿತ್ತು. ೧,೭೫೦ ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿರುವ ಶಾಲೆಯನ್ನು ತಿಂಗಳ ಕಾಲ ಮುಚ್ಚಿಸಿದರು. ಇದರಂತೆ ವರದಿಯಾಗದ ಗಲಭೆಗಳು, ಹಲ್ಲೆಗಳು ನೂರಾರಿವೆ.
ಬಾಯ್ಮುಚ್ಚಿರುವ ಮಾಧ್ಯಮ
ಇಷ್ಟೆಲ್ಲಾ ಆದರೂ ಮಾಧ್ಯಮಗಳು ಇವುಗಳನ್ನು ಸುದ್ದಿಮಾಡುವುದಿಲ್ಲ. ಇಂತಹ ಘಟನೆಗಳಾದಾಗ ಬಹುತೇಕ ಪ್ರತಿಭಟನೆಗಳು ಏಳುವುದೇ ಇಲ್ಲ. ಎದ್ದರೂ ಬಿಜೆಪಿ ಮತ್ತಿತರ ಹಿಂದೂಸಂಘಟನೆಯಿಂದ ಖಂಡಿಸಲಾಗುತ್ತದೆಯೇ ಹೊರತು ಇತರೆಡೆಗಳಂತೆ ದಿನರಾತ್ರಿ ಮಾಧ್ಯಮಗಳು ಇವುಗಳ ವಿರುದ್ಧ ಉಸಿರೆತ್ತುವುದಿಲ್ಲ. ಆಮಿ?ವೋ, ಭಯವೋ ಅಥವಾ ಎರಡೂ ಇದರ ಹಿಂದೆ ಕಾರ್ಯ ಮಾಡುತ್ತಿದೆಯೋ ಅರಿಯದಂತಹ ಪರಿಸ್ಥಿತಿ ಅಲ್ಲಿಯದು. ಹಿಂದಿನ ಕಮ್ಯುನಿಸ್ಟ್ ಸರ್ಕಾರವಿದ್ದಾಗಲೂ ಮಾಧ್ಯಮಗಳ ವರ್ತನೆ ಬಹುಪಾಲು ಹೀಗೆಯೆ ಇತ್ತು. ೨೦೦೯ರ ಫೆಬ್ರುವರಿಯಲ್ಲೊಮ್ಮೆ ಸ್ಟೇಟ್ಸ್ಮನ್ ಪತ್ರಿಕೆಯಲ್ಲಿ ಬಂದ ವರದಿಯೊಂದನ್ನು ವಿರೋಧಿಸಿ ಮುಸಲ್ಮಾನರು ಬಹುದೊಡ್ಡ ಸಂಖ್ಯೆಯಲ್ಲಿ ಪತ್ರಿಕಾ ಕಛೇರಿಗೆ ನುಗ್ಗಿದರು, ರಸ್ತೆಯನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡಿದರು. ಪೊಲೀಸರು ಪತ್ರಿಕೆಯ ಸಂಪಾದಕರನ್ನು ತಮ್ಮೊಂದಿಗೆ ಕರೆದೊಯ್ದು ಇಡೀ ರಾತ್ರಿ ಅಕ್ರಮ ಬಂಧನದಲ್ಲಿಟ್ಟಿದ್ದರು. ಆದರೆ ಈ ಘಟನೆಯನ್ನು ಒಂದೇ ಒಂದು ಪತ್ರಿಕೆಯೂ ಖಂಡಿಸಲಿಲ್ಲ. ಮಾಧ್ಯಮದ ಮಿತ್ರನೊಬ್ಬನ ಮೇಲಾದ ಹಲ್ಲೆಯ ಕುರಿತು ಅಭಿವ್ಯಕ್ತಿಸ್ವಾತಂತ್ರ್ಯದ ದನಿಗಳೇಳಲಿಲ್ಲ. ಸರ್ಕಾರದ ದಬ್ಬಾಳಿಕೆಯ ವರ್ತನೆಯನ್ನು ಜಗಜ್ಜಾಹೀರು ಮಾಡಲಿಲ್ಲ.
ದೇಶವಿಭಜನೆಯ ನಂತರ ಇಲ್ಲಿಯವರೆಗೂ ಕೇವಲ ಮುಸಲ್ಮಾನ ಗುಂಪುಗಳು ಮಾರಕಾಸ್ತ್ರಗಳನ್ನು ಝಳಪಿಸುತ್ತಾ ತಮಗಿಷ್ಟ ಬಂದಂತೆ ಮೆರವಣಿಗೆ ತೆಗೆಯುತ್ತಿದ್ದುದನ್ನು ಕಂಡಿದ್ದ ಬಂಗಾಳ ಪರಿವರ್ತನೆಯ ಹೊಸಗಾಳಿಯನ್ನು ಈ ವರ್ಷ ಆಸ್ವಾದಿಸಿತು. ರಾಮನವಮಿಯ ಶೋಭಾಯಾತ್ರೆಗಳಲ್ಲಿ ಹಿಂದೂಯುವಕರು ಖಡ್ಗಧಾರಿಗಳಾಗಿ ವಿಜೃಂಭಿಸಿದರು. ಮರೆತಿದ್ದ ಕ್ಷಾತ್ರಶಕ್ತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುತ್ತೇವೆಂಬ ಸಂದೇಶವನ್ನು ತಮ್ಮನ್ನು ನಿರ್ಲಕ್ಷಿಸುತ್ತಿದ್ದವರಿಗೆ ತಲಪಿಸಿದರು.
ಆದರೂ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹಿಂದೂಯುವಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಾಹಸ ಮಾಡುತ್ತಿದ್ದಾರೆ. ಇಂತಹವರ ಮೇಲೂ ಹಲ್ಲೆ ನಡೆಸುವ ಪ್ರಯತ್ನಗಳು ತೃಣಮೂಲ ಕಾಂಗ್ರೆಸಿನ ಹಾಗೂ ಮುಸಲ್ಮಾನ ಗೂಂಡಾಗಳಿಂದ ಆಗುತ್ತಿದೆ. ಪೊಲೀಸರ ಸಹಾಯದಿಂದ ಇಂತಹವರ ಮೇಲೆ ಕೇಸು ದಾಖಲಿಸಿ ಸತ್ಯದ ಧ್ವನಿಯನ್ನು ಹೂತುಹಾಕುವ ಪ್ರಯತ್ನಗಳೂ ನಡೆದಿವೆ.
ದೀದಿಯ ಮೋದಿ ದ್ವೇಷ
ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಬಿಜೆಪಿಯ ಗೆಲವುಗಳ ಸಂಖ್ಯೆ ಮಮತಾರ ನಿದ್ದೆಗೆಡಿಸಿದೆ. ತನ್ನ ವೋಟ್ಬ್ಯಾಂಕ್ ಆಗಿರುವ ಮುಸಲ್ಮಾನರನ್ನು ಮೆಚ್ಚಿಸಲು ಮೋದಿಯ ತೆಗಳುವಿಕೆಯನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಲೇ ಒಂದು ವೇಳೆ ಬಂಗಾಳಕ್ಕೆ ಕಾಲಿಟ್ಟರೆ ಮೋದಿಯನ್ನು ತಾನು ಬಂಧಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಈಗಲೂ ಯಾವುದೇ ಅವಕಾಶವನ್ನೂ ಬಿಡದೆ ಮೋದಿಯವರನ್ನು ಟೀಕಿಸುತ್ತಿರುತ್ತಾರೆ. ಇದೇ ಉಮೇದಿನಲ್ಲಿ ಕೆಲವೊಂದು ಬಾರಿ ಒಕ್ಕೂಟವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗಳ ನಡುವೆ ಇರಬೇಕಾದ ಕನಿಷ್ಠ ಸೌಜನ್ಯವನ್ನೂ ಮೀರಿ ಹೋಗುವುದಿದೆ. ಸಲಾಫಿ ಮುಲ್ಲಾಗಳು ಭಾರತದ ಪ್ರಧಾನಮಂತ್ರಿ ಮೋದಿಯ ವಿರುದ್ಧ ಫತ್ವಾ ಹೊರಡಿಸಿದರೆ ಅದನ್ನು ಖಂಡಿಸುವ ಒಂದು ಶಬ್ದವನ್ನೂ ರಾಜ್ಯಸರ್ಕಾರದ ಪ್ರತಿನಿಧಿಗಳು ಹೇಳುವುದಿಲ್ಲ. ಇದು ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಮೋದಿ ದ್ವೇಷ ಯಾವ ಪರಿಯಲ್ಲಿದೆ ಎಂಬುದಕ್ಕೆ ಉದಾಹರಣೆ.
ಸದಾ ಮೋದಿಯ ವಿರುದ್ಧ ಹರಿಹಾಯುವ ಮಮತಾ ಬ್ಯಾನರ್ಜಿ ಮೂರು ತಿಂಗಳ ಹಿಂದೆ ಭಾರತೀಯ ಸೇನೆ ವಾಡಿಕೆಯಂತೆ ರಾಜ್ಯದ ಹೆದ್ದಾರಿಗಳಲ್ಲಿ ನಡೆಸಿದ್ದ ಅಭ್ಯಾಸವನ್ನು ಸಹ ರಾಜಕೀಯದ ಕನ್ನಡಕದಿಂದ ನೋಡುವಂತಹ ಸ್ಥಿತಿಗೆ ಜಾರಿದ್ದರು. ತನ್ನ ಸರ್ಕಾರವನ್ನು ಅಸ್ಥಿರಗೊಳಿಸಲು ಮೋದಿ ಹೂಡಿರುವ ಸಂಚು ಇದು ಎಂದು ಆಕೆ ಹಾಕಿದ ಬೊಬ್ಬೆ ದೇಶಾದ್ಯಂತ ಸುದ್ದಿಯಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿಯೇತರ ಎಲ್ಲ ಪಕ್ಷಗಳೂ ಒಂದಾದ ರಾಜಕೀಯ ರಂಗವೊಂದನ್ನು ಸ್ಥಾಪಿಸುವ ಭಾರೀ ಸಾಹಸಕ್ಕೆ ಆಕೆ ಕೈಹಾಕಿದ್ದಿದೆ. ನೋಟು ಅಮಾನ್ಯೀಕರಣದ ವಿ?ಯವನ್ನು ನೆಪಮಾಡಿಕೊಂಡು ತಾವು ಮೋದಿಗೆ ಪ್ರತಿಸ್ಪರ್ಧಿಗಳು ಎಂಬಂತೆ ಭಾವಿಸುವ ಅನೇಕರನ್ನು ದೆಹಲಿಯಲ್ಲಿ ಸೇರಿಸುವ ಪ್ರಯತ್ನವನ್ನಾಕೆ ಮಾಡಿದರು. ’ಮೋದಿ ಹಠಾವೋ, ದೇಶ್ ಬಚಾವೋ’ ಎಂಬ ಘೋ?ಣೆ ಹೊಂದಿರುವ ಭಿತ್ತಿಪತ್ರಗಳು ತೃಣಮೂಲ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮತ್ತು ಸಾಂಸದ ಇದ್ರಿಸ್ ಅಲಿಯ ಹೆಸರಿನಲ್ಲಿ ಮುದ್ರಿತವಾಗಿ ಬಂಗಾಳದಾದ್ಯಂತ ಗೋಡೆಗಳ ಮೇಲೇರಿದವು. ಆದರೆ ತೃಣಮೂಲ ಕಾಂಗ್ರೆಸಿನ ಪ್ರಭಾವಿ ಸಂಸತ್ ಸದಸ್ಯ ಸುದೀಪ್ ಬಂದ್ಯೋಪಾಧ್ಯಾಯ ’ರೋಸ್ ವ್ಯಾಲಿ’ ಎಂಬ ಬ್ಲೇಡ್ಕಂಪೆನಿಯೊಂದರ ಹಣಕಾಸು ವಂಚನೆ ಹಗರಣದಲ್ಲಿ ಸಿಕ್ಕಿಬಿದ್ದದ್ದು ಆಕೆಗೆ ಮುಳುವಾಯಿತು. ಡಿಮಾನಿಟೈಜೇಷನ್ ವಿರುದ್ಧ ಪ್ರತಿಭಟಿಸಲು ತನ್ನ ರಾಜ್ಯದಲ್ಲೇ ಜನರನ್ನು ಸೇರಿಸಲು ಆಕೆಗೆ ಆಗಲಿಲ್ಲ.
ಸ್ಪಂದಿಸುತ್ತಿರುವ ಕೇಂದ್ರ
ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂದುತ್ವದ ಜಾಗೃತಿಗೆ ತಡೆಹಾಕಬೇಕೆಂದು ಹೊರಟಿದ್ದರೂ ಅದು ಅಷ್ಟು ಸುಲಭವಾಗಲಿಕ್ಕಿಲ್ಲ ಎಂಬುದು ಆಕೆಗೆ ಅರಿವಾಗುತ್ತಿದೆ. ರಾಜ್ಯಕ್ಕೆ ಅನುದಾನ ನೀಡಿ ಸುಮ್ಮನಾಗುತ್ತಿದ್ದ ಕೇಂದ್ರಸರ್ಕಾರ ಈಗ ಅದಕ್ಕೊಂದು ಕಡಿವಾಣ ಹಾಕುತ್ತಿದೆ. ಇಲ್ಲಿಯವರೆಗೂ ಕೇಂದ್ರದಿಂದ ಬರುತ್ತಿದ್ದ ಅನುದಾನವನ್ನು ತನ್ನ ಪಕ್ಷವನ್ನು ಜನಪ್ರಿಯಗೊಳಿಸುವಂತಹ ಕಾರ್ಯಕ್ರಮಗಳಿಗೆ, ಅಲ್ಪಸಂಖ್ಯಾತರ ಓಲೈಕೆಗೆ ಯಾವುದೇ ಸಂಕೋಚವಿಲ್ಲದೆ ರಾಜ್ಯದಲ್ಲಿ ಬಳಕೆಮಾಡುತ್ತಿದ್ದರು. ಕುಶಲಕರ್ಮಿಗಳಿಗೆ ಸಹಾಯಧನದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಟಿಎಂಸಿ ಕಾರ್ಯಕರ್ತರ ಜೇಬು ಸೇರಿತ್ತು. ನೂರಾರು ಯೂತ್ಕ್ಲಬ್ಗಳಿಗೆ ವಾರ್ಷಿಕ ಅನುದಾನ ನೀಡುವ ನೆಪದಲ್ಲಿ ಟಿಎಂಸಿಯ ಯುವಘಟಕಗಳು ಹಣ ಮಾಡಿಕೊಂಡವು. ರಾಜ್ಯದಲ್ಲಿರುವ ಸಾವಿರಾರು ಇಮಾಮ್ಗಳಿಗೆ ಅವರು ಮಾಡುವ ಇಸ್ಲಾಂ ಮತಬೋಧನೆಗೆ ಪ್ರತಿಫಲವೆಂದು ಪ್ರತಿ ತಿಂಗಳು ಭತ್ಯೆ ನೀಡುವ ಕಾರ್ಯವೂ ಆಯಿತು. ಆದರೆ ಈಗ ಕೇಂದ್ರದ ಯೋಜನೆಗಳಿಗೆಂದು ನಿಗದಿತವಾದ ಹಣದ ಯಥಾಯೋಗ್ಯ ಬಳಕೆಯ ಕುರಿತಾಗಿ ಸರಿಯಾದ ಆಡಿಟ್ ರಿಪೋರ್ಟ್ ಇಲ್ಲದ ಕಾರಣ ಕೇಂದ್ರವು ಸಂಬಂಧಿತ ಅನುದಾನವನ್ನು ನಿಲ್ಲಿಸುತ್ತಿದೆ ಮತ್ತು ಕಾರ್ಯಕ್ಕನುಗುಣವಾಗಿ ಕಡಿತಗೊಳಿಸುತ್ತಿದೆ.
’ಶಾರದಾ ಚಿಟ್ಫಂಡ್’ ಮತ್ತು ’ರೋಸ್ ವ್ಯಾಲಿ’ ಹಗರಣಗಳಲ್ಲಿ ಈಗಾಗಲೇ ತೃಣಮೂಲದ ಇಬ್ಬರು ಎಂಪಿಗಳು ಜೈಲು ಸೇರಿದ್ದಾರೆ. ಕೋಲ್ಕತಾ ಹೈಕೋರ್ಟ್ ’ನಾರದ’ ಕುಟುಕು ಕಾರ್ಯಾಚರಣೆಯ ಕೇಸನ್ನು ಸಿಬಿಐಗೆ ವರ್ಗಾಯಿಸಿದೆ. ಇದನ್ನು ತಡೆಯುವಂತೆ ಮಮತಾ ಸರ್ಕಾರ ಸುಪ್ರೀಂಕೋರ್ಟ್ಗೆ ಹೋಯಿತು. ಆದರೆ ಸಿಬಿಐ ವಿಚಾರಣೆಗೆ ತಡೆಯೊಡ್ಡಲು ಸುಪ್ರಿಂಕೋರ್ಟ್ ನಿರಾಕರಿಸುವುದರ ಮೂಲಕ ಆಕೆ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಿಬಿಐ ಈಗಾಗಲೇ ಡಜನ್ಗೂ ಹೆಚ್ಚು ಟಿಎಂಸಿ ನಾಯಕರ ಮೇಲೆ ಎಫ್ಐಆರ್ ದಾಖಲಿಸಿದೆ.
ತನ್ನ ಅಜೆಂಡಾದ ಧೋರಣೆಗಳಿಗೆ ವಿರುದ್ಧವಾಗಿ ಕೇಂದ್ರ ವರ್ತಿಸುತ್ತಿರುವುದು ಆಕೆಗೆ ಬಿಸಿತುಪ್ಪವಾಗಿದೆ. ಇತ್ತೀಚೆಗೆ ಕೋಲ್ಕತಾದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಬಿಜೆಪಿ ಕಾರ್ಯಾಲಯದ ಮೇಲೆ ತೃಣಮೂಲ ಕಾಂಗ್ರೆಸ್ ಬೆಂಬಲಿಗರಿಂದ ನಡೆದ ದಾಳಿಯ ಸಂದರ್ಭದಲ್ಲಿ ಕೇಂದ್ರಸರ್ಕಾರ ತುರ್ತಾಗಿ ಕೇಂದ್ರೀಯ ಪಡೆಗಳನ್ನು ರವಾನಿಸಿ ಬಿಜೆಪಿ ಕಚೇರಿಯ ಭದ್ರತೆಗೆ ನಿಯೋಜಿಸಿತು. ಕೇಂದ್ರದ ಈ ನಡೆಯು ಬಿಜೆಪಿ ಕಾರ್ಯಕರ್ತರಿಗೆ ಕೇಂದ್ರಸರ್ಕಾರವು ನಮ್ಮೊಟ್ಟಿಗಿದೆ ಮತ್ತು ರಾಜ್ಯಸರ್ಕಾರದ ವಿರುದ್ಧದ ಸಂಘ?ದಲ್ಲಿ ನಮ್ಮನ್ನು ಸಂರಕ್ಷಿಸುತ್ತದೆ ಎಂಬ ಭಾವವನ್ನು ಬಲವಾಗಿ ಮೂಡಿಸಿದೆ.
ಈ ಮುಂಚೆ ಸ್ಥಳೀಯ ಪೊಲೀಸ್ ಬೆಂಬಲವಿದೆಯೆಂದು ಬಿಜೆಪಿ ಕಾರ್ಯಕರ್ತರೊಂದಿಗೆ ಕಲಹಕ್ಕಿಳಿಯುತ್ತಿದ್ದ ತೃಣಮೂಲದ ಬೆಂಬಲಿಗರಲ್ಲಿಯೂ ಈ ಬೆಳವಣಿಗೆ ಅಧೈರ್ಯವನ್ನು ಮೂಡಿಸಿದೆ. ೨೦೧೧ರಿಂದೀಚೆಗೆ ಪಂಚಾಯತ್ ಮತ್ತು ಮುನಿಸಿಪಾಲಿಟಿ ಸದಸ್ಯರಿಗೆ ಹಣದ ಆಮಿಷವೊಡ್ಡಿ, ಅಥವಾ ಪೊಲೀಸರ ಸಹಾಯದಿಂದ ಬೆದರಿಸಿ ಸ್ಥಳೀಯಸಂಸ್ಥೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇಂದ್ರವು ರಾಜ್ಯ ಬಿಜೆಪಿ ಪ್ರಮುಖರ ಭದ್ರತೆಯ ಕುರಿತಾದ ವಿಷಯಗಳಿಗೆ ಶೀಘ್ರ ಸ್ಪಂದಿಸುತ್ತಿರುವುದನ್ನು ಕಂಡು ಗಲಭೆಗೆ ಅಡಿಯಿಡುವ ಮುನ್ನ ಯೋಚಿಸುವಂತಾಗಿದೆ.
ನವೋತ್ಸಾಹದ ರಾಮನವಮಿ
ಈ ಬಾರಿಯ ರಾಮನವಮಿ ಆಚರಣೆ ಬಂಗಾಳದ ಹಿಂದೂಗಳಲ್ಲಿ ತುಸು ಜಾಗೃತಿಯನ್ನು ಮೂಡಿಸಿರುವುದು ಖಂಡಿತ ಸುಳ್ಳಲ್ಲ. ಬಂಗಾಳದ ’ಹಿಂದು ಜಾಗರಣ ಮಂಚ್’ ಸಂಘಟನೆಯು ಕೋಲ್ಕತಾ ಮತ್ತು ರಾಜ್ಯದಾದ್ಯಂತ ರಾಮನವಮಿಯಂದು ಮೆರವಣಿಗೆಗಳನ್ನು ಮಾಡಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಆದರೆ ಕೋಲ್ಕತಾದ ನಗರಪಾಲಿಕೆ ಇದಕ್ಕೆ ಅನುಮತಿಯನ್ನು ನಿರಾಕರಿಸಿತ್ತು. ಕಡೆಗೆ ರಾಮನವಮಿ ಆಚರಣೆಗೂ ನ್ಯಾಯಾಲಯದ ಮೊರೆಹೊಗಬೇಕಾಯಿತು. ಕೋಲ್ಕತಾ ಹೈಕೋರ್ಟ್ ಉತ್ಸವಕ್ಕೆ ಅನುಮತಿ ನೀಡದಿರುವ ಸರ್ಕಾರದ ಆದೇಶವನ್ನು ಖಂಡಿಸಿ ರಾಮಭಕ್ತರ ಪರ ವಹಿಸಿತು. ಇದೊಂದು ಕಾನೂನಾತ್ಮಕ ಜಯ. ಆದರೆ ನವಮಿಗೆ ಒಂದೆರಡು ದಿನಗಳು ಮಾತ್ರ ಉಳಿದಿದ್ದವು.
ಮೌನ ತಲಾಖ್
ಇಡೀ ದೇಶದಲ್ಲಿಂದು ಬಿಸಿಬಿಸಿ ಚರ್ಚೆಯಾಗುತ್ತಿರುವ ’ತ್ರಿವಳಿ ತಲಾಖ್’ ಪದ್ಧತಿಯ ಕುರಿತಂತೆ ಮಮತಾ ಬ್ಯಾನರ್ಜಿ ಇದುವರೆಗೆ ತುಟಿ ಬಿಚ್ಚಿಲ್ಲ. ಈ ಅಮಾನವೀಯ ಪದ್ಧತಿಯ ರದ್ದತಿಯ ಕುರಿತಾಗಿ ಮಾತನಾಡಿದಲ್ಲಿ ತಾನು ನೆಚ್ಚಿಕೊಂಡಿರುವ ಕಟ್ಟಾ ಮುಸ್ಲಿಂಮತೀಯರಿಂದ ವಿರೋಧಕ್ಕೊಳಗಾಗಬಹುದೆಂಬ ಚಿಂತೆ ಆಕೆಯದು. ಕೇಂದ್ರದಿಂದ ಮುಸಲ್ಮಾನರ ಉಲ್ಲೇಖ ಯಾವುದೇ ರೀತಿಯಲ್ಲಾದರೂ ಸರಿ ಕೂಡಲೆ ಮುಗಿಬಿದ್ದು ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದ ಮಮತಾ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಸ್ವತಃ ಮಹಿಳೆಯಾಗಿದ್ದರೂ ಅಲ್ಪಸಂಖ್ಯಾತ ಸೋದರಿಯರ ನೋವಿಗೆ ಸ್ಪಂದಿಸುತ್ತಿಲ್ಲ. ಕೇಂದ್ರದ ಜವಳಿ ಖಾತೆ ಮಂತ್ರಿ ಸ್ಮೃತಿ ಇರಾನಿಯವರು ’ಈ ವಿ?ಯವಾಗಿ ಮಮತಾ ಬ್ಯಾನರ್ಜಿಯವರ ಹೇಳಿಕೆಗೆ ಎದುರು ನೋಡುತ್ತಿದ್ದೇನೆ’ ಎಂದು ಬಹಿರಂಗವಾಗಿ ಸವಾಲೆಸೆದಿದ್ದರೂ ಆಕೆ ತುಟಿಬಿಚ್ಚದೆ ಮೌನವಾಗಿದ್ದಾರೆ. `ಇದು ಮುಸಲ್ಮಾನರೊಳಗಿನ ಆಂತರಿಕ ವಿಷಯ’ ಎಂದು ಸರ್ಕಾರದ ವಕ್ತಾರರು ಹೇಳಿಕೆ ನೀಡಿ ತಲಾಖ್ನಿಂದ ಅಂತರ ಕಾಯ್ದುಕೊಂಡಿದ್ದಾರೆ.
ಕಾರ್ಯಕರ್ತರ ಉತ್ಸಾಹ ಮೇರೆಮೀರಿ ಹರಿಯತೊಡಗಿತು. ಕೋಲ್ಕತಾ ಒಂದರಲ್ಲೇ ೨೨ ರ್ಯಾಲಿಗಳು ಮತ್ತು ಇಡೀ ರಾಜ್ಯದಲ್ಲಿ ೧೫೦ಕ್ಕೂ ಹೆಚ್ಚು ಪ್ರಮುಖ ಶೋಭಾಯಾತ್ರೆಗಳನ್ನು ನಡೆಸಲಾಯಿತು. ಅಸುರಕ್ಷಿತ ಭಾವನೆಯಿಂದ ಹೊರಬರಲೇಬೇಕೆಂದು ಹತಾಶ ಹಿಂದೂಗಳು ನಿರ್ಧರಿಸಿದ್ದಂತಿತ್ತು. ಮಹಿಳೆಯರು ಮಕ್ಕಳೆನ್ನದೆ ಸಹಸ್ರಾರು ಮಂದಿ ರಾಮನವಮಿ ಪ್ರಯುಕ್ತದ ಈ ಮೆರವಣಿಗೆಗಳಲ್ಲಿ ಭಾಗವಹಿಸಿದ್ದರು.
ದೇಶವಿಭಜನೆಯ ನಂತರ ಇಲ್ಲಿಯವರೆಗೂ ಕೇವಲ ಮುಸಲ್ಮಾನ ಗುಂಪುಗಳು ಮಾರಕಾಸ್ತ್ರಗಳನ್ನು ಝಳಪಿಸುತ್ತಾ ತಮಗಿಷ್ಟ ಬಂದಂತೆ ಮೆರವಣಿಗೆ ತೆಗೆಯುತ್ತಿದ್ದುದನ್ನು ಕಂಡಿದ್ದ ಬಂಗಾಳ ಪರಿವರ್ತನೆಯ ಹೊಸಗಾಳಿಯನ್ನು ಈ ವರ್ಷ ಆಸ್ವಾದಿಸಿತು. ರಾಮನವಮಿಯ ಶೋಭಾಯಾತ್ರೆಗಳಲ್ಲಿ ಹಿಂದೂಯುವಕರು ಖಡ್ಗಧಾರಿಗಳಾಗಿ ವಿಜೃಂಭಿಸಿದರು. ಮರೆತಿದ್ದ ಕ್ಷಾತ್ರಶಕ್ತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುತ್ತೇವೆಂಬ ಸಂದೇಶವನ್ನು ತಮ್ಮನ್ನು ನಿರ್ಲಕ್ಷಿಸುತ್ತಿದ್ದವರಿಗೆ ತಲಪಿಸಿದರು. ಹಿಂದೂಗುಂಪುಗಳು ಗಲಭೆಗೆ ತಯಾರು ಮಾಡಿಕೊಂಡಿದ್ದಾರೆ, ಕಿಡಿಗೇಡಿ ಕೃತ್ಯಗಳಿಗೆ ಕೈಹಚ್ಚುತ್ತಾರೆ ಎಂದೆಲ್ಲ ಪ್ರಚುರಪಡಿಸುತ್ತಿದ್ದ ತೃಣಮೂಲಿಗಳು ಎಲ್ಲೆಡೆ ನಡೆದ ಮೆರವಣಿಗೆಗಳು ಮತ್ತು ಅದಕ್ಕೆ ಸಿಕ್ಕ ಅಭೂತಪೂರ್ವ ಜನಸ್ಪಂದನ ನೋಡಿ ದಿಗ್ಭ್ರಮೆಗೊಳಗಾದರು. ಅಂದು ಶೇ. ೨೫ಕ್ಕಿಂತ ಹೆಚ್ಚು ಮುಸಲ್ಮಾನರೇ ಇರುವ ಸುರಿಯಂತಹ ಅನೇಕ ನಗರಗಳಂತೂ ಅಕ್ಷರಶಃ ಸ್ತಬ್ಧಗೊಂಡವು. ಹಿಂದೂಗಳೂ ಶಕ್ತಿಯ ಅಲೆಗಳನ್ನು ಸೃಷ್ಟಿಸಬಲ್ಲರೆಂಬುದು ಸಾಬೀತಾಯಿತು. ಅನೇಕ ಕಡೆ ಪೊಲೀಸರು ಮೆರವಣಿಗೆಗಳನ್ನು ತಡೆದರಾದರೂ ಕಾರ್ಯಕರ್ತರು ಮುನ್ನುಗ್ಗಿದರು. ’ಜೈ ಶ್ರೀರಾಂ’ ಘೋ?ಣೆ ಮೊಳಗಿಸಿದವರ ಮೇಲೆ ಪೊಲೀಸರು ವಿನಾಕಾರಣ ಲಾಠಿ ಬೀಸಿದರು. ಇವೆಲ್ಲ ಹಿಂದೂಗಳಲ್ಲಿ ಈಗ ಅಸ್ಮಿತೆಯ ಪ್ರಶ್ನೆ ಜಾಗೃತಗೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಿವೆ. (ಮಮತಾಪ್ರಣೀತ ಈ ದೌರ್ಜನ್ಯವನ್ನು ನೋಡಿಯೇ ಯುವ ಬಿಜೆಪಿ ನಾಯಕನೊಬ್ಬ ’ಮಮತಾ ತಲೆಗೆ ರೂ. ೧೧ ಲಕ್ಷ ಕೊಡುವೆ’ ಎಂದದ್ದು. ಇತರರಿಗೆ ಇದು ಅತಿರೇಕದ ಹೇಳಿಕೆ ಅನ್ನಿಸಿದರೂ ಅಂದಿನ ದೌರ್ಜನ್ಯವನ್ನು ಕಣ್ಣಾರೆ ಕಂಡವರು ಈ ಹೇಳಿಕೆಯನ್ನು ಸಮರ್ಥಿಸದಿದ್ದರೂ, ಮಮತಾರ ನಡವಳಿಕೆಯನ್ನಂತೂ ತೀವ್ರವಾಗಿ ಖಂಡಿಸುತ್ತಿದ್ದಾರೆ.)
ಇದಾದ ನಂತರ ರಾಜ್ಯ ಬಿಜೆಪಿ ಅಧ್ಯಕ್ಷರಾದ ದಿಲೀಪ್ ಘೋಷ್ ಸೇರಿದಂತೆ ಅನೇಕ ಬಿಜೆಪಿ ಮತ್ತು ರಾ.ಸ್ವ. ಸಂಘದ ಪ್ರಮುಖರ ಮೇಲೆ ಸಾರ್ವಜನಿಕವಾಗಿ ಆಯುಧಗಳನ್ನು ಪ್ರದರ್ಶಿಸಿದ್ದಾರೆ ಎಂದು ಪೊಲೀಸರು ಕೇಸುಗಳನ್ನು ದಾಖಲಿಸಿದರು. ಆದರೆ ಮುಸಲ್ಮಾನರು ಪದ್ಧತಿಯೆಂಬಂತೆ ತಮ್ಮೆಲ್ಲ ಮೆರವಣಿಗೆಗಳಲ್ಲಿ ಮಾರಕಾಸ್ತ್ರಗಳನ್ನು ಬರೀ ತೋರಿಸುವುದಿರಲಿ, ಪ್ರತ್ಯಕ್ಷ ದಂಗೆಗಳಲ್ಲಿ ತೊಡಗಿದ್ದರೂ ಜಾಣಕುರುಡನ್ನು ಪ್ರದರ್ಶಿಸುತ್ತಿದ್ದರು.
ನೆನಪಾದ ಹನುಮ
ಕೋಲ್ಕತಾದಲ್ಲಿ ಈ ವರ್ಷ ನಡೆದ ರಾಮನವಮಿಯ ಮೆರವಣಿಗೆಗಳು ಬಿಜೆಪಿಯ ತಂತ್ರ ಎಂದು ತನ್ನ ರಾಜಕೀಯ ಬುದ್ದ್ಧಿಯಿಂದ ಗ್ರಹಿಸಿದ ಮಮತಾ ’ರಾಮನವಮಿಯನ್ನು ಬಿಜೆಪಿ ಹೈಜಾಕ್ ಮಾಡಿದೆ, ಹಿಂದುತ್ವ ಬಿಜೆಪಿಯ ಸ್ವತ್ತಲ್ಲ’ ಎಂದು ಹೇಳತೊಡಗಿದರು! ಉತ್ತರಪ್ರದೇಶದಂತೆ ಇಲ್ಲೂ ಹಿಂದುತ್ವದ ಅಲೆಯೆಬ್ಬಿಸುವ ಮೂಲಕ ಬಿಜೆಪಿ ತೃಣಮೂಲವನ್ನು ಬಗ್ಗುಬಡಿಯುತ್ತದೆ ಎಂಬ ಭಯ ಈಗೀಗ ಅವರಿಗೆ ಆವರಿಸುತ್ತಿದೆ. ಹಿಂದೂಗಳು ಒಂದಾದರೆ ಅದೂ ಸಹ ಕಡೆಗಣಿಸಲಾಗದ ಶಕ್ತಿಯೇ. ತನ್ನ ಮುಸಲ್ಮಾನಪರ ನೀತಿಗಳಿಂದಾಗಿ ’ಕೌಂಟರ್ ಪೋಲರೈಜೇಷನ್’ (ಪ್ರತಿ ಧ್ರುವೀಕರಣ) ಆದೀತೆಂಬ ಅಂದಾಜು ಸಹ ಮಮತಾರಿಗಿದೆ ಬಿಜೆಪಿ ವಿರುದ್ಧ ಕಾಂಗ್ರೆಸ್, ಕಮ್ಯುನಿಸ್ಟ್ ಸೇರಿದಂತೆ ಎಲ್ಲಾ ಪಕ್ಷಗಳ ’ಮಹಾ ಘಟ್ಬಂಧನ್’ ಠುಸ್ಸೆಂದಿರುವುದರಿಂದ ಹೊಸ ಯೋಜನೆಗಳನ್ನು ಮಾಡತೊಡಗಿದ್ದಾರೆ. ರಾಮನವಮಿಯ ಯಶಸ್ಸು ಕಂಡು ತಾನೂ ಸಹ ಮೃದು ಹಿಂದುತ್ವ ನೀತಿಯನ್ನನುಸರಿಸುವ ಇಂಗಿತವನ್ನು ಮಮತಾ ಹೊರಗೆಡಹಿದರು. ಆದರೂ ತನ್ನ ಸಾಂಪ್ರದಾಯಿಕ ವೋಟ್ಬ್ಯಾಂಕಾದ ಮುಸಲ್ಮಾನರು ಕೈಬಿಟ್ಟುಹೋಗುವ ಭಯದಿಂದ ಪರೀಕ್ಷಾರ್ಥ ಹೆಜ್ಜೆಗಳನ್ನಿಡಲು ಆರಂಭಿಸಿದ್ದಾರೆ. ಇದೇ ವಿಚಾರವಾಗಿ ಮುಂದುವರಿದು ಏಪ್ರಿಲ್ ೧೧ರಂದು ಬಂಗಾಳದ ಜನರಿಗೆ ಹನುಮಜಯಂತಿಯ ಶುಭಾಶಯಗಳನ್ನು ಆಕೆ ಕೋರಿದರು.
ಬೀರಭೂಮ್ ಜಿಲ್ಲೆಯ ಪ್ರಬಲ ಟಿಎಂಸಿ ನಾಯಕ ಅನುಬ್ರತ ಮಂಡಲ್ ತನ್ನ ಜಿಲ್ಲೆಯ ಎಲ್ಲಾ ಬ್ಲಾಕ್ಗಳಲ್ಲಿ ಹನುಮಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಿದರು. ಬುರ್ದಾನ್ ಮತ್ತು ನಾಡಿಯಾ ಜಿಲ್ಲೆಗಳಲ್ಲೂ ಇದೇ ರಿತಿ ಸಾರ್ವಜನಿಕ ಹನುಮಜಯಂತಿಗಳಾದವು. ಇವು ನೇರ ತೃಣಮೂಲ ಕಾಂಗ್ರೆಸಿನ ಕಾರ್ಯಕ್ರಮಗಳಲ್ಲದಿದ್ದರೂ ಮಮತಾರ ಅನುಮತಿಯ ಮೇರೆಗೆ ನಡೆದವೆಂದು ಹೇಳಲಾಗುತ್ತಿದೆ. ಅದೇ ಪಕ್ಷದೊಳಗಿನ ಮತ್ತೊಂದು ಗುಂಪು ಈ ರೀತಿಯ ಕಾರ್ಯಕ್ರಮಗಳಲ್ಲಿ ನಾವು ಪಾಲ್ಗೊಳ್ಳುವುದರ ಮೂಲಕ ಹಿಂದುತ್ವವನ್ನು ಮುನ್ನೆಲೆಗೆ ತಂದಂತಾಗುತ್ತದೆ ಮತ್ತು ಪರೋಕ್ಷವಾಗಿ ಬಿಜೆಪಿಗೆ ಲಾಭವಾಗುತ್ತದೆ ಎಂದು ಸಹ ವಾದಿಸುತ್ತಿದೆ.
ರಾ.ಸ್ವ. ಸಂಘದ ನಿರ್ಣಯ
ರಾಜ್ಯದಾದ್ಯಂತ ನಿಧಾನವಾಗಿ ಹೆಚ್ಚುತ್ತಾ ೧೨,೦೦೦ದವರೆಗೆ ತಲಪಿರುವ ರಾ.ಸ್ವ. ಸಂಘದ ಶಾಖೆಗಳು ಪಶ್ಚಿಮ ಬಂಗಾಳದ ಹಿಂದುಗಳಲ್ಲಿ ಸಂಘಟಿತಭಾವ ಬರಬೇಕಾದ ಅಗತ್ಯವನ್ನು ಮನಗಾಣಿಸುತ್ತಿವೆ. ಇದೇ ಮಾರ್ಚ್ನಲ್ಲಿ ಕೊಯಮತ್ತೂರಿನಲ್ಲಿ ನಡೆದ ’ಅಖಿಲ ಭಾರತ ಪ್ರತಿನಿಧಿ ಸಭಾ’ದಲ್ಲಿ ರಾ.ಸ್ವ. ಸಂಘ ಬಂಗಾಳದ ಬೆಳವಣಿಗೆಗಳ ಕುರಿತು ಆತಂಕವನ್ನು ವ್ಯಕ್ತಪಡಿಸಿ, ಹಿಂದೂಗಳ ರಕ್ಷಣೆ ಮತ್ತು ದೇಶವಿರೋಧಿ ಜಿಹಾದಿ ಶಕ್ತಿಗಳ ದಮನಕ್ಕೆ ಕೇಂದ್ರವನ್ನು ಆಗ್ರಹಿಸಿ ನಿರ್ಣಯವನ್ನು ಸ್ವೀಕರಿಸಿದೆ. ಇದರಿಂದಾಗಿ ಈಗ ರಾಜ್ಯದ ವಿದ್ಯಮಾನಗಳ ಕುರಿತು ಇಡೀ ರಾ?ದ ಜನತೆ ಚಿಂತಿಸುವಂತಾಗಿದೆ.
ಪಶ್ಚಿಮ ಬಂಗಾಳದ ವರ್ತಮಾನ ಪರಿಸ್ಥಿತಿಯನ್ನು ನೋಡಿದರೆ ರಾ.ಸ್ವ. ಸಂಘದಂತಹ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳ ಪಾತ್ರ ಅನಿವಾರ್ಯವಾಗಿ ಹೆಚ್ಚಾಗಬೇಕಿದೆ. ಇವು ಬಹು ಶ್ರಮವನ್ನು ವ್ಯಯಿಸಿ ಸಮಾಜದಲ್ಲಿ ಸುಧಾರಣೆಯನ್ನು ತರಬೇಕಿದೆ. ವೋಟಿನ ರಾಜಕೀಯವು ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿ ಹದಗೆಡಿಸಿದೆ. ರೋಗಗ್ರಸ್ತ ಬಂಗಾಳವನ್ನು ಸರಿದಾರಿಗೆ ತರಲು ರಾಷ್ಟ್ರೀಯತೆಯ ಭಾವನೆಯನ್ನು ಉದ್ದೀಪಿಸುವುದೇ ಏಕಮೇವ ಮದ್ದು. ಅದು ನಿಃಸ್ವಾರ್ಥವಾಗಿ ರಾಷ್ಟ್ರಹಿತದ ಕಾರ್ಯ ಮಾಡುವ ಮತ್ತು ಸಂಘಟನೆಯಲ್ಲಿ ಸಿದ್ಧಹಸ್ತವೆನಿಸಿದ ರಾ.ಸ್ವ. ಸಂಘದಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ.
ಆರದ ಗಾಯ
ಬೀರ್ಭೂಮ್ (ವೀರಭೂಮಿ) ಜಿಲ್ಲೆಯಲ್ಲಿ ಕಂಗಲ ಪಹಾಡಿ ಎಂಬುದೊಂದು ಹಳ್ಳಿ. ಇಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಹಿಂದೂ ಮನೆಗಳಿವೆ. ಮುಸಲ್ಮಾನರ ಮನೆಗಳ ಸಂಖ್ಯೆ ೨೫. ಈ ಹಳ್ಳಿಯ ಜನರು ೨೦೧೧ರವರೆಗೆ ನವರಾತ್ರಿ ಉತ್ಸವಕ್ಕೆಂದು ಬೇರೆ ಬೇರೆ ಗ್ರಾಮಗಳಿಗೆ ಹೋಗುತ್ತಿದ್ದರು. ಆದರೆ ಕೆಲವು ಕಾರಣಗಳಿಂದ ಹಳ್ಳಿಯ ಪ್ರಮುಖರು ಒಂದಾಗಿ ಇನ್ನು ಮುಂದೆ ನಮ್ಮ ಹಳ್ಳಿಯಲ್ಲೇ ದುರ್ಗಾಪೂಜೆಯ ಕಾರ್ಯಕ್ರಮಗಳನ್ನು ಆರಂಭಿಸೋಣ ಎಂದು ನಿಶ್ಚಯಿಸಿದರು. ಆದರೆ ಇದನ್ನು ಸಹಿಸದ ಗ್ರಾಮದ ಮುಸಲ್ಮಾನರು ಸರ್ಕಾರಕ್ಕೆ ದೂರು ನೀಡಿದರು. ಅಲ್ಪಸಂಖ್ಯಾತರನ್ನು ಖುಷಿಪಡಿಸುವ ಸಲುವಾಗಿ ಇಲ್ಲಿಯವರೆಗೂ ಇಲ್ಲಿ ದುರ್ಗಾಪೂಜೆಗೆ ಅನುಮತಿಯನ್ನು ನಿರಾಕರಿಸಲಾಗುತ್ತಿದೆ. ಉತ್ಸವಕ್ಕೆ ಅನುಮತಿ ನೀಡಿದರೆ ಶಾಂತಿ ಭಂಗವಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಒಂದು ಹಳ್ಳಿಯ ಹಿಡಿಯಷ್ಟು ಪುಂಡ ಮುಸಲ್ಮಾನರನ್ನು ನಿಯಂತ್ರಿಸಲು ಸರ್ಕಾರದ ಬಳಿ ವ್ಯವಸ್ಥೆಯಿಲ್ಲ. ಆದರೆ ಲಕ್ಷಾಂತರ ಹಿಂದೂಗಳು ಮಾತ್ರ ಸದಾಕಾಲ ಶಾಂತಿಯಿಂದ ತಮ್ಮ ವಿರುದ್ಧ ಇರುವ ಅನ್ಯಾಯದ ಆದೇಶಗಳನ್ನು ಶಿರಸಾವಹಿಸಿ ಪಾಲಿಸಬೇಕು. ಇದು ಮಮತಾ ರಾಜ್ಯದಲ್ಲಿ ಹಿಂದೂಗಳ ಸ್ಥಿತಿ. ಅನೇಕ ವರ್ಷಗಳಿಂದ ಉತ್ಸವಕ್ಕೆಂದು ತಯಾರಿಸಿದ ದುರ್ಗೆಯ ಮೂರ್ತಿ ಪ್ರತಿಷ್ಠಪನೆಗೊಳ್ಳದೆ, ಪೂಜೆಯಾಗದೆ ಹಾಗೇ ಉಳಿದುಕೊಂಡಿದೆ. ಸಕಲ ಶಸ್ತ್ರಾಸ್ತ್ರಗಳನ್ನು ಹಿಡಿದ ಆ ಮೂರ್ತಿಯನ್ನು ನೋಡಿದಾಗಲೆಲ್ಲ ಹಿಂದುಗಳೆದೆಯಲ್ಲಿ ಆಳವಾದ ಗಾಯದ ನೋವು ಇನ್ನಷ್ಟು ಹೆಚ್ಚುತ್ತದೆ.
ರಾಮನೊಂದಿಗೆ ಬಿಜೆಪಿ
೧೯೯೦ರ ರಾಮಜನ್ಮಭೂಮಿ ಆಂದೋಲನದ ಅಲೆಯನ್ನೇರಿದ ನಂತರ ಬಂಗಾಳದ ನೆಲದಲ್ಲಿ ಬಿಜೆಪಿಯ ಮತಗಳಿಕೆಯ ಪ್ರಮಾಣ ನಿಧಾನವಾಗಿ ಹೆಚ್ಚಾಗುತ್ತಾ ಬಂದಿದೆ. ಆಗ ಡಂಡಂ ಮತ್ತು ಕೃಷ್ಣನಗರ ಎಂಬ ಎರಡು ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಮೂರು ಲೋಕಸಭಾಕ್ಷೇತ್ರಗಳನ್ನು ಗೆದ್ದಿದೆ. ಅದೇ ವರ್ಷದ ನವೆಂಬರ್ನಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಮತ್ತು ಎಡಪಕ್ಷಗಳನ್ನು ಹಿಂದಿಕ್ಕಿ ಎರಡನೇ ಸ್ಥಾನ ಗಳಿಸಿದೆ. ಇದನ್ನು ಅರ್ಧಶತಮಾನಕ್ಕೂ ಹೆಚ್ಚು ಕಾಲ ಅನುಭವಿಸಿದ ದಬ್ಬಾಳಿಕೆಯ ವಿರುದ್ಧದ ಹಿಂದೂಗಳ ಧ್ವನಿಯೆಂದೇ ಅರ್ಥೈಸಲಾಗುತ್ತಿದೆ. ಏಕೆಂದರೆ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ತೃಣಮೂಲ ಕಾಂಗ್ರೆಸ್ – ಮೂರೂ ಆಡಳಿತಗಳು ಪೈಪೋಟಿಗೆ ಬಿದ್ದವರಂತೆ ಮುಸಲ್ಮಾನರಿಗೆ ಕುಮ್ಮಕ್ಕು ನೀಡುತ್ತಿದ್ದರು. ಕೋಮುಗಲಭೆಗಳಾದ ಸಂದರ್ಭಗಳಲ್ಲಂತೂ ಅಮಾಯಕ ಹಿಂದೂಗಳ ದುರ್ಗತಿಯನ್ನು ಕೇಳುವವರೇ ಇರುತ್ತಿರಲಿಲ್ಲ. ಇಷ್ಟು ದಿನ ಬಹುಸಂಖ್ಯೆಯಲ್ಲಿದ್ದರೂ ಜಾತಿ-ಜಾತಿಗಳಲ್ಲಿ ಹಂಚಿಹೋಗಿರುವ ಹಿಂದೂಗಳ ಅಸಂಘಟಿತ ಸ್ಥಿತಿಯೇ ಅವರನ್ನು ಮುಸಲ್ಮಾನರೆದುರು ದುರ್ಬಲಗೊಳಿಸಿತ್ತು. ಈಗೀಗ ಸ್ವಲ್ಪಮಟ್ಟಿನ ಜಾಗೃತಿಯ ಲಕ್ಷಣಗಳು ಗೋಚರಿಸುತ್ತಿವೆ.
ಬಂಗಾಳದ ೭೪,೦೦೦ಕ್ಕೂ ಹೆಚ್ಚಿನ ಚುನಾವಣೆ ಬೂತ್(ಮತಗಟ್ಟೆ)ಗಳ ಸಂಖ್ಯೆಗೆ ಹೋಲಿಸಿದರೆ ಬಿಜೆಪಿಯ ಈಗಿನ ಶಕ್ತಿ ಸಾಲದೆಂದೆನಿಸಿದರೂ ಅದು ಅತ್ಯಂತ ವೇಗವಾಗಿ ಮತ್ತು ಸೈದ್ಧಾಂತಿಕವಾಗಿ ಹೊಸಹೊಸ ಜನಸಮೂಹಗಳನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುತ್ತಿದೆ. ಬಂಗಾಳವನ್ನು ತನ್ನ ಆದ್ಯತೆಯ ಪಟ್ಟಿಯೊಳಗೆ ಸೇರಿಸಿಕೊಂಡಿರುವ ಅಮಿತ್ ಶಾ ತಮ್ಮ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಸಮಯವನ್ನು ಅಲ್ಲಿಗೆ ನೀಡುತ್ತಿದ್ದಾರೆ. ಕಳೆದ ತಿಂಗಳ ಪ್ರವಾಸದಲ್ಲಿ ನಕ್ಸಲ್ಬಾರಿಗೂ ಭೇಟಿನೀಡಿ ಅಚ್ಚರಿ ಮೂಡಿಸಿದ್ದರು. ಕೇಂದ್ರ ಮಂತ್ರಿ ರಾಜನಾಥ್ಸಿಂಗರ ನೇತೃತ್ವದಲ್ಲಿ ೪೦ಕ್ಕೂ ಹೆಚ್ಚು ಬಿಜೆಪಿ ರಾಷ್ಟ್ರೀಯ ನಾಯಕರು ಬಂಗಾಳದಾದ್ಯಂತ ಪಕ್ಷದ ಸಂಘಟನೆಗಾಗಿ ಪ್ರವಾಸ ಕೈಗೊಳ್ಳಲಿದ್ದಾರೆ. ೨೦೧೮ರಲ್ಲಿ ಬಂಗಾಳದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗಳ ಹೊತ್ತಿಗೆ ಬಿಜೆಪಿ ಕಾರ್ಯಕರ್ತರ ಜಾಲವನ್ನು ಪ್ರಬಲವಾಗಿ ವಿಸ್ತರಿಸಿಕೊಳ್ಳಬೇಕೆಂಬುದು ಇದರ ಗುರಿ. ಏಕೆಂದರೆ ೨೦೧೯ರ ಲೋಕಸಭಾ ಚುನಾವಣೆಗಳಿಗೆ ಇದೊಂದು ಸೂಚ್ಯಂಕವಾಗಿದೆ.
ಒಟ್ಟು ೪೨ ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ ೧೨ರಲ್ಲಿ ಜಯಗಳಿಸಲು ಬೇಕಾದ ಕಾರ್ಯಯೋಜನೆಯನ್ನು ಬಿಜೆಪಿ ಗುರುತಿಸಿದೆ. ಶೀಘ್ರವಾಗಿ ಕುಸಿಯುತ್ತಿರುವ ಇತರೆಲ್ಲ ಪಕ್ಷಗಳ ಜನಪ್ರಿಯತೆಯು ಬಿಜೆಪಿಯನ್ನೊಂದು ಪ್ರಬಲ ಶಕ್ತಿಯಾಗಿ ರಾಜ್ಯದಲ್ಲಿ ನೆಲೆಗೊಳಿಸಬಹುದು, ಅದು ನಾವು ಸದ್ಯದಲ್ಲೆದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಾದೀತು ಎಂಬ ನಿರೀಕ್ಷೆಯಲ್ಲಿದ್ದಾರೆ ಬಂಗಾಳದ ಹಿಂದೂಗಳು.