ಜೀವನದಲ್ಲಿ ನಾವು ಗೆಲ್ಲಬಹುದು, ಸೋಲಬಹುದು; ಆದರೆ ಪಕ್ವವಾಗುವುದೇ ಜೀವನಸಾಫಲ್ಯ. ಶಾರೀರಿಕ ಅಚ್ಚುಕಟ್ಟು ಮತ್ತು ಶಿಸ್ತುಬದ್ಧ ವ್ಯಾಯಾಮ ಒಂದು ಗಟ್ಟಿತನದ ಮನಸ್ಥಿತಿಯನ್ನು ತಂದೊಡ್ಡುತ್ತವೆ. ದೇಶಖೊವ್ ರಾಗದ ಉದ್ದೇಶವೂ ಇದೇ ಆಗಿದೆ.
ದೇಶಖೊವ್ ರಾಗಿಣಿಯ ಕುರಿತಾದ ಕಲಾಕೃತಿಯನ್ನು ಮೊದಲಿಗೆ ನೋಡಿದಾಗ ರಾಗಕ್ಕೂ ಕುಸ್ತಿ ಪೈಲ್ವಾನ್ ಅಖಾಡಾಕ್ಕೂ ಎಲ್ಲಿಯ ಸಂಬಂಧ ಎಂದು ಕ್ಷಣಕಾಲ ನಾವು ಅಚ್ಚರಿಗೊಳ್ಳಬಹುದು. ಆದರೆ ದೇಶಖೊವ್ ರಾಗದ ಆಂತರ್ಯವನ್ನು ಗಮನಿಸುತ್ತ ಹೋದರೆ ಈ ದೃಶ್ಯರೂಪಕವು ನಮ್ಮನ್ನು ದಂಗುಬಡಿಸಿಬಿಡುತ್ತದೆ. ಅದಕ್ಕೆ ಕಾರಣ ದೇಶಖೊವ್ ರಾಗವೇ ನಮ್ಮ ತನು-ಮನಗಳನ್ನು ನವಿರೇಳಿಸುವಂತೆ ಮಾಡಿಬಿಡುವುದು.
ಭೈರವ ರಾಗದ ಐದನೇ ಪುತ್ರ ರಾಗಿಣಿ ದೇಶಖೊವ್ ಯೌವನದ ಸಂಕೇತವಾಗಿದೆ. (ಭೈರವಸ್ಯ ಪಂಚಮಃ ಪುತ್ರೋ ದೇಶಖೊವಃ). ಈ ರಾಗವನ್ನು ದೇವ್ಸಖ್ಯ ಎಂತಲೂ ಕರೆಯುತ್ತಾರೆ. ಸಂಗೀತವು ಶ್ರೋತೃವನ್ನು ಭಾವೋದ್ವೇಗಗೊಳಿಸಿ ದೇಹ ನವಿರೇಳುವಂತೆ ಮಾಡುವುದೇ ಈ ರಾಗದ ವಿಶೇ? ಗುಣವಾಗಿದೆ. ಆತ್ಮಾಭಿಮಾನವನ್ನು ಜಾಗೃತಗೊಳಿಸಿ ಅಂತರಂಗದಲ್ಲಿ ಆ ಕುರಿತಾದ ಅಸಾಧಾರಣ ಭಾವಾವೇಶವನ್ನು ಹೊಮ್ಮಿಸುವ ಮೂಲಕ ಆ ಕ್ಷಣಕ್ಕೆ ಆ ವಿಚಾರಕ್ಕೆ ಪ್ರತಿಕ್ರಿಯಿಸುವ ಅವಸರಿಕೆಯ ಚಡಪಡಿಕೆಯೊಂದನ್ನು ನಮ್ಮೊಳಗೆ ತಂದೊಡ್ಡುವಂಥ ಶಕ್ತಿ ಈ ರಾಗಕ್ಕಿದೆ. ದೇವಸೃಷ್ಟಿಯ ಸೊಬಗನ್ನು ವಿಸ್ಮಯಭಾವಗೊಳಿಸಿ ಆ ಸೃಷ್ಟಿ-ಸ್ಥಿತಿಗೆ ಕಾರಣವಾದ ಧೀಮಂತ ಶಕ್ತಿಯನ್ನು ನೆನೆದು ರೋಮಾಂಚನಗೊಳ್ಳುವುದು ಒಂದಾದರೆ; ಆ ವಿಸ್ಮಯ ಸೃಷ್ಟಿ ಸ್ಥಿತಿಯ ಭಾಗಿಗಳಾಗಿರುವ ನಾವೂ ಅದರ ಒಂದು ಅಂಶವೇ ಎಂಬ ಗೋಚರಿಕೆಯನ್ನು ನಮ್ಮೊಳಗಿನ ಭಾವಾವೇಶದ ಪ್ರತಿಕ್ರಿಯೆಯೊಂದಕ್ಕೆ ಕಾರಣವಾಗಿಸುತ್ತದೆ ಈ ರಾಗ. ಅದಕ್ಕಾಗಿ ದೇಹ ನವಿರೇಳಿಸುವ ಕ್ರಿಯೆಯ ರೂಪಕವೇ ರಾಗಮಾಲಾದ ಈ ಚಿತ್ರಗಳು. ಶಾರೀರಿಕ ಅಚ್ಚುಕಟ್ಟು ಮತ್ತು ಶಿಸ್ತುಬದ್ಧ ವ್ಯಾಯಾಮ ಒಂದು ಗಟ್ಟಿತನದ ಮನಃಸ್ಥಿತಿ ತಂದೊಡ್ಡುತ್ತವೆ.
ಜೀವನದಲ್ಲಿ ನಾವು ಗೆಲ್ಲಬಹುದು, ಸೋಲಬಹುದು; ಆದರೆ ಪಕ್ವವಾಗುವುದೇ ಜೀವನಸಾಫಲ್ಯ. ಇದೇ ಮಾತನ್ನು ಡಿವಿಜಿ ಅವರು ಹೇಳುತ್ತಾರೆ:
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು|
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ||
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |
ಗಟ್ಟಿತನ ಗರಡಿ ಫಲ – ಮಂಕುತಿಮ್ಮ ||
(ಕಗ್ಗ ೫೮೮)
ರಾಗವು ಶಾರೀರಿಕ ಪಕ್ವತೆ ಮತ್ತು ಗಟ್ಟಿಗೊಳಿಸುವ ರೂಪಕವಾದ್ದರಿಂದ ಕ್ರೀಡಾಮನೋಭಾವದ ಉದ್ದೇಶವೇ ಹಿಂದಿನ ಭಾರತೀಯರದ್ದಾಗಿತ್ತು. ಸಂಗೀತಕಾರ ಹರಿವಲ್ಲಭನೂ ಈ ರಾಗಕ್ಕೆ ಕ್ರೀಡೆಯನ್ನು ದೃಶ್ಯರೂಪಕವಾಗಿ ಉಲ್ಲೇಖಿಸಿದ್ದಾನೆ. ’ಸಂಗೀತದಾಮೋದರ’ದಲ್ಲಿಯೂ ದೇಶಖೊವ್ ರಾಗಿಣಿಯು ಕ್ರೀಡಾಪಟು (ಪುರುಷ) ರೂಪಧಾರಿಯಾಗಿದೆ. ಭಾರತೀಯರು ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಕ್ರೀಡೋತ್ಸವದ ಆರಂಭದ ಸಂದರ್ಭದಲ್ಲಿ ಇದೇ ರಾಗದಲ್ಲಿ ಹಾಡುತ್ತಿದ್ದರೆಂದು ಸ್ಟೇಲ್ಲಾ ಕ್ರಾಮ್ರೀಚ್ ಒಳಗೊಂಡಂತೆ ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಗ್ರೀಕ್ ದೇಶದ ಒಲಿಂಪಿಕ್ ಕ್ರೀಡೆಯಂತೆ ಭಾರತದಲ್ಲೂ ಈ ಪ್ರಕಾರದ ಕ್ರೀಡೋತ್ಸವಗಳು ಚಾಲ್ತಿಯಲ್ಲಿದ್ದಿರಬಹುದು.
*****
೧೭ನೇ ಶತಮಾನದ ರಾಗಮಾಲಾ ಕೃತಿಗಳಲ್ಲಿ ಕಾಣುತ್ತಿದ್ದ ಗ್ರಾಮೀಣ, ಗಿರಿ-ಕಣಿವೆಗಳ ದೇಸೀ ಪ್ರಭಾವವು ಮೊಘಲ್ ಸಂಸ್ಥಾನದ ಪೋ?ಣೆಯಲ್ಲಿ ರಚನೆಗೊಳ್ಳತೊಡಗಿದಂತೆ ಸಂಗೀತದಲ್ಲಿನ ಅನ್ಯ ಪ್ರಭಾವ-ಪ್ರಯೋಗಗಳಿಗೆ ಅನುಗುಣವಾಗಿ ಚಿತ್ರರಚನೆಯ ಸ್ವರೂಪದಲ್ಲೂ ಬದಲಾವಣೆಯಾಗತೊಡಗಿತು. ಹಳ್ಳಿ ಸೊಗಡಿನಿಂದ ರಾಜಧಾನಿಯಂಥ ಪರಿಸರ, ಪ್ರಭುತ್ವದ ಆಸರೆ, ಆಜ್ಞೆಗಳು; ಕಲಾವಿದರ ಅಭಿವ್ಯಕ್ತಿ ರೀತಿ ವಿಧಾನಗಳು – ಇವು ಬದಲಾವಣೆಗೆ ಒಳಪಟ್ಟವು; ಹಾಗೂ ಆ ವೇಳೆಗಾಗಲೇ ಯೂರೋಪಿಯನ್ ರಾಷ್ಟ್ರಗಳ ವಾಣಿಜ್ಯ ಸಂಬಂಧಗಳ ಕಾರಣದಿಂದಾಗಿ ಮೊಘಲ್ ರಾಜಧಾನಿಗಳಲ್ಲಿ ಪಾಶ್ಚಿಮಾತ್ಯದ ’ರಿಯಲಿಸಂ ಪಂಥ’ದ ಪ್ರಭಾವವೂ ಕಲಾಕೃತಿಗಳ ಮೇಲೆ ಆಗತೊಡಗಿತ್ತು.
ವ್ಯಾಯಾಮಶಾಲೆಯಲ್ಲಿನ ತಾಲೀಮು ನಡೆಸುತ್ತಿರುವ ಯುವಕರ ಇನ್ನೊಂದು ಕಲಾಕೃತಿ (ಚಿತ್ರ ೨) ೧೭ನೇ ಶತಮಾನದ ಕೊನೆಯ ಭಾಗದಲ್ಲಿ ರಚಿತಗೊಂಡಿದ್ದು, ಬಿಕನೇರ್ ಪ್ರದೇಶದ್ದು, ಶುದ್ಧ ದೇಶಖೊವ್ ರಾಗದ ಭಾವತೀವ್ರತೆಯನ್ನು ಸಾಂಕೇತಿಕಗೊಳಿಸಿರುವ ಈ ಚಿತ್ರವು ಮೊಘಲ್ ಅರಸರ ಆಶ್ರಯದಲ್ಲಿ ರಚಿತಗೊಂಡಿರುವಂಥದ್ದು. ಈ ಕೃತಿಯಲ್ಲಿ ತರುಣರಿಬ್ಬರೂ ದೇಹತಾಲೀಮುಗೊಳಿಸುತ್ತಿದ್ದು, ಜೊತೆಗೆ ಸುತ್ತಲಿನ ಪರಿಸರವು ಒಂದು ವ್ಯಾಯಾಮಶಾಲೆಯದ್ದಾಗಿದೆ. ಕೃತಿಯಲ್ಲಿನ ಹಿನ್ನೆಲೆಯಲ್ಲಿನ ಗೋಡೆ ಮತ್ತು ನೆಲದ ಹಾಸು ಖಾಲಿಯಾಗಿ ಚಿತ್ರಿಸಿರುವ ರಚನೆಯನ್ನು ಗಮನಿಸಿ, ಈ ಮೊದಲಿನ ಮಿನಿಯೇಚರ್ ಕೃತಿಗಳಲ್ಲಿ ವಾಸ್ತುರಚನೆಗೆ ಹೋಲಿಸಿದ್ದಲ್ಲಿ ಹಲವು ವ್ಯತ್ಯಾಸವನ್ನು ಇಲ್ಲಿ ಗುರುತಿಸಬಹುದು. ಕಟ್ಟಡದ ದಿಗ್ದರ್ಶನ (Perspective) ವಿಧಾನವನ್ನು ಇಲ್ಲಿ ಕಲಾವಿದ ಅನುಸರಿಸಲು ಪ್ರಯತ್ನಿಸಿದ್ದಾನೆ. ಆ ಮೂಲಕ ಕಟ್ಟಡವು ಚೌಕಾಕಾರ ಇಲ್ಲವೆ ಅಷ್ಟಭುಜಾಕೃತಿಯಲ್ಲಿದೆ ಎಂಬುದನ್ನು ನೋಡುಗರಿಗೆ ಅರಿವಿಗೆ ಬರುವಂತೆ ಮಾಡುವುದು ಆತನ ಉದ್ದೇಶವಾಗಿದೆ. ದೇಹವನ್ನು ದ?ಪು?ಗೊಳಿಸಿ ಹಾಗೂ ಶಾರೀರಿಕ ಅಂಗರಚನೆಯಲ್ಲಿ ಒಂದು ರೀತಿಯ ಪಕ್ವತೆಯನ್ನು ತರಲು ಇಲ್ಲಿ ಕಲಾವಿದ ಯತ್ನಿಸಿದ್ದಾನೆ. ದೇಹರಚನೆ, ಅಂಗಾಂಗ ಮತ್ತು ವಾಸ್ತುರಚನೆಗಳಲ್ಲಿ ಒಂದು ಪರಿಪೂರ್ಣ-ಪ್ರಬುದ್ಧತೆ ಕಾಣಲೆಂಬಂತೆ ಒತ್ತುನೀಡಲಾಗಿದೆ. ಈ ಪ್ರಕಾರದಲ್ಲಿ ಕಲಾಕೃತಿ ರಚಿಸುವ ವಿಧಾನ ಭಾರತೀಯ ಕಲಾಪರಂಪರೆಯಲ್ಲಿ ಹಿಂದೆ ಇರಲಿಲ್ಲ, ಇದೊಂದು ಪಾಶ್ಚ್ಯಾತ್ಯದ ಪ್ರಭಾವವೇ ಆಗಿದೆ. ಇದರ ಹೊರತಾಗಿಯೂ ಶುದ್ಧ ಗ್ರಾಮೀಣ ಪರಿಸರದಲ್ಲಿನ ಅಪ್ಪಟ ಭಾರತೀಯ ಮನಸ್ಸುಗಳು ದೇಶಖೊವ್ ಕುರಿತು ಪ್ರತಿಕ್ರಿಯಿಸಿದುದು ಇನ್ನೊಂದು ಕೃತಿಯಲ್ಲಿ (ಚಿತ್ರ ೩) ವ್ಯಕ್ತಗೊಂಡಿದೆ. ಇಲ್ಲಿ ಯಾವ ಪ್ರಭಾವವೂ ಗಾಢವಾಗಿ ಗೋಚರಿಸುವುದಿಲ್ಲವಾದರೂ ಆ ವೇಳೆಗಾಗಲೇ ಶಾಸ್ತ್ರೀಯ ಸಂಗೀತದ ಹೊಸ ಪ್ರಯೋಗಗಳ ಫಲವಾಗಿ ಕೇಳುಗನ ಹೃದಯವನ್ನು ಸಂಪನ್ನಗೊಳಿಸುವುದ?ಕ್ಕೆ ಸೀಮಿತಗೊಳಿಸದೇ ಆತನ ಮನೋದ್ವೇಗದ ಉನ್ಮಾದತೆಯೆಡೆಗೆ ಕೊಂಡೊಯ್ಯುವುದೂ ಸಂಗೀತದ ಹೊಸ ಕೆಲಸವಾಯಿತು. ಸಭಾ-ಸಂಸ್ಥಾನಗಳ ಪಾಲಿಗೆ ರೋಚಕ ಅನುಭವಗೊಳಿಸುವುದೇ ಹೊಸ ಬಗೆಯ ಸಂಗೀತದ ಉದ್ದೇಶವಾಗತೊಡಗಿತು