ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2017

ಉತ್ಥಾನ ಮೇ 2017

ಸರ್ವೇ ಜನಾಃ ಸುಖಿನೋ ಭವಂತು

ಸರ್ವೇ ಜನಾಃ ಸುಖಿನೋ ಭವಂತು

  ವೃತ್ತಿಯಲ್ಲಿ ವಕೀಲನಾಗಿರುವ ಗಣಪತಿಭಾವ ಮೊನ್ನೆ ಮನೆಗೆ ಬಂದಿದ್ದ. ತಣ್ಣಗಿನ ಆಸರಿಗೆ ಎಂದು ತಂಗಿ ತಂದುಕೊಟ್ಟ ಮಜ್ಜಿಗೆ-ಬೆಲ್ಲ ಕುಡಿದವನು ಇದ್ದಕ್ಕಿದ್ದಂತೆ ಹೇಳಿದ: “ಈ ಒಂದು ಹೇಳಿಕೆ ಇದೆಯಲ್ಲ ರಮೇಶ, ’ಸರ್ವೇ ಜನಾಃ ಸುಖಿನೋ ಭವಂತು’ ಎಂದು – ಅದು ತಪ್ಪು ಎಂದು ನನಗೆ ಅನ್ನಿಸ್ತಿದೆ.” ಇವನಿಂದ ಇದೆಂಥ ವಿರೋಧಾತ್ಮಕ ಆಣಿಮುತ್ತು ಎಂದು ನಾನು ದಿಙ್ಮೂಢನಾಗಿ ಅವನತ್ತ ನೋಡಿದೆ. ಅದಕ್ಕೆ ಕಾರಣವೂ ಇತ್ತು. ಈ ವಕೀಲಭಾವ ಪರಂಪರೆ, ಸನಾತನಧರ್ಮ, ಗೀತೆ ಇವುಗಳನ್ನು ಹೇಗೆ ವಿರೋಧಿಸಿ ಪತ್ರಿಕೆಯಲ್ಲಿ ತನ್ನ ಹೆಸರು […]

ಚುನಾವಣೆಗಳ ಫಲಶ್ರುತಿ

ದಶಕಗಳುದ್ದಕ್ಕೂ ಬೆಳೆಸಿರುವ ಗಲೀಜುಗಳು ಏಕಾಏಕಿ ನಿವಾರಣೆಯಾಗಲಾರವು. ಆದರೆ ಈಚಿನ ಚುನಾವಣೆಗಳ ಫಲಿತ ಆಶಾಸ್ಪದವಾಗಿದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ. ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳ ಫಲಿತಗಳಲ್ಲಿ ಹಲವು ಕೌತುಕಗಳು ತುಂಬಿವೆ. ಮೊತ್ತಮೊದಲನೆಯದಾಗಿ ಚುನಾವಣೆಗಳಿಗೆ ಕೆಲವೇ ದಿನಗಳ ಹಿಂದೆ ’ತಜ್ಞ’ರನೇಕರು ನುಡಿದಿದ್ದ ಭವಿ?ವಾಣಿಗಳು ಈಗ ನಗೆಪಾಟಲೆನಿಸಿವೆ. ಭವಿಷ್ಯವಾಣಿಗಳಿಗೂ ವಾಸ್ತವ ಫಲಿತಗಳಿಗೂ ಇರುವ ಅಗಾಧ ಅಂತರವನ್ನು ಕುರಿತು ಯೋಚಿಸುವಾಗ ಅನೇಕ ಸಮೀಕ್ಷಕರು ತಾವು ಏನೇನೋ ಕಾರಣಗಳಿಂದ ಬಯಸುವ ಪರಿಣಾಮಗಳಿಗೆ ಸಾಧ್ಯತೆಯ ಗವುಸನ್ನು ಹೊದಿಸಿ ಮತದಾರರಿಗೆ ’ಮಾರ್ಗದರ್ಶನ’ ಮಾಡಲೆಳಸುತ್ತಾರೆಯೇ – ಎಂಬ ಶಂಕೆ ಮೂಡುತ್ತದೆ. […]

ವಿಷದ ನಂಟು

ಆಸುರೀಶಕ್ತಿಗಳ ಪ್ರಾಬಲ್ಯದಿಂದ ಧರೆಯನ್ನು ರಕ್ಷಿಸುವುದು ಎಷ್ಟು ದುರ್ಗಮವೆಂಬುದನ್ನು ಸಾಕ್ಷ್ಯಪಡಿಸಿರುವ ಒಂದು ಇತ್ತೀಚಿನ ಪ್ರಕರಣವೆಂದರೆ ಎಂಡೋಸಲ್ಫಾನ್ ವಿರುದ್ಧ ಜನರು ನಡೆಸಬೇಕಾಗಿಬಂದ ದೀರ್ಘಸಮರ. ಈ ಕೀಟನಾಶಕ ಎಷ್ಟು ಮಾರಕವೆಂಬುದು ಈಗ್ಗೆ ಇಪ್ಪತ್ತು ವರ್ಷ ಹಿಂದೆಯೇ ಮನವರಿಕೆಯಾಗಿತ್ತು. ಇದರಿಂದ ಜನ್ಯವಾದ ವಿಷವು ನೆಲಜಲಮೂಲಗಳನ್ನೆಲ್ಲ ವ್ಯಾಪಿಸಿ ಜನರ ಮೆದುಳಿನ ಜೋಗರಿಕೆ, ದೈಹಿಕ-ಮಾನಸಿಕ ಮಾಂದ್ಯ, ಅಪಸ್ಮಾರ, ಪಿತ್ತಕೋಶದ ಮತ್ತು ರಕ್ತದ ಕ್ಯಾನ್ಸರ್, ಆಸ್ತಮಾ, ಸಂತಾನಹೀನತೆ ಮೊದಲಾದ ಹಲವಾರು ವ್ಯಾಧಿಗಳಿಗೆ ಎಂಡೋಸಲ್ಫಾನ್ ಕಾರಣವಾಗುವುದೆಂಬುದು ಸಿದ್ಧಪಟ್ಟಿದೆ. ಈ ಹಿನ್ನೆಲೆಯಿದ್ದರೂ – ವಿಶೇಷವಾಗಿ ದಕ್ಷಿಣಕನ್ನಡ, ಕಾಸರಗೋಡು, ಕೇರಳ ಭಾಗಗಳಲ್ಲಿ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ