“ಆಕೆ ಓರ್ವ ಐಕಾನ್ ಮತ್ತು ವಿಶನರಿ. ನಾನು ಆಕೆಯ ಸಂಗೀತವನ್ನು ಮೆಚ್ಚಿದ್ದೇನೆ, ಆದರೆ ವೇದಿಕೆಯ ಮೇಲೆ ಆಕೆ ತೋರುವ ವಿಕ್ಷಿಪ್ತತೆ ಮತ್ತು ಉದ್ಧಟತನಗಳನ್ನಲ್ಲ. ಆಕೆಗೆ ಸಂಗೀತದ ಕುರಿತು ಪ್ರಬಲವಾದ ಹಲವು ಸ್ವಂತ ಅಭಿಪ್ರಾಯಗಳಿದ್ದವು. ಅದು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲ. ತನ್ನ ಸಿಡುಕಿನ ಮೂಲಕ ಈಕೆ ಕೇಸರ್ಬಾಯಿ ಅವರನ್ನು ಹಿಂದೆಹಾಕಲು ನೋಡುತ್ತಿದ್ದಾಳೆಂದು ಹಲವರು ಭಾವಿಸಿದ್ದರು. ಕೇಸರ್ಬಾಯಿ ವರ್ತನೆ ಹೇಗಿದ್ದರೂ ಜನ ಆಕೆಯ ಸಂಗೀತವನ್ನು ಇಷ್ಟಪಟ್ಟರು. ಈ ಮಾತು ಕಿಶೋರಿ ಅವರ ವಿಷಯದಲ್ಲೂ ನಿಜವಾಯಿತು.”
ಇದು ಹಿಂದೂಸ್ತಾನಿ ಸಂಗೀತಗಾರ ಅರವಿಂದ್ ಪಾರೀಖ್ ಅವರು ಈಚೆಗೆ (ಏಪ್ರಿಲ್ ೩) ನಮ್ಮನ್ನು ಅಗಲಿದ ಹಿಂದೂಸ್ತಾನಿ ಸಂಗೀತದ ಪ್ರಖ್ಯಾತ ಗಾಯಕಿ ಕಿಶೋರಿ ಅಮೋನ್ಕರ್ ಅವರನ್ನು ಕುರಿತು ಹೇಳಿದ ಮಾತು. ಕಿಶೋರಿತಾಯಿ ಬಗ್ಗೆ ಬಹಳಷ್ಟು ಜನ ಇಂಥದ್ದೇ ಅಭಿಪ್ರಾಯವನ್ನು ಹೊಂದಿದ್ದಾರೆ.
ಕಿಶೋರಿ ಅಮೋನ್ಕರ್ (೧೯೩೨- ೨೦೧೭) ಸ್ವತಃ ಒಂದು ಘರಾಣೆ ಆಗಿದ್ದರು. ಅವರ ಸಂಗೀತವು ಹಲವು ಪ್ರಭಾವಗಳ ಮೊತ್ತವಾಗಿತ್ತು. ಕೇಳುವಾಗ ಅದು ಕೇವಲ ಜೈಪುರ್-ಅತ್ರೌಲಿ ಘರಾಣೆ ಅನ್ನಿಸುತ್ತಿರಲಿಲ್ಲ. ಪ್ರತಿಸಲವೂ ಅವರು ತಮ್ಮ ಘರಾಣೆ ಶೈಲಿಯ ಮರುಸೃಷ್ಟಿ ಮಾಡುತ್ತಿದ್ದರು.
ಇನ್ನು ಕಿಶೋರಿ ಅವರು ತನ್ನನ್ನು ತಾನು ಯಾವ ರೀತಿ ಮೌಲ್ಯಮಾಪನ ಮಾಡಿಕೊಂಡಿದ್ದಾರೆಂದು ನೋಡುವುದಾದರೆ ಅವರ ಒಂದು ಮಾತು ಹೀಗಿದೆ: “ಸ್ವರವನ್ನು ಆರಾಧಿಸಲು ನನ್ನ ತಾಯಿ ನನಗೆ ಕಲಿಸಿದಳು. ಆ ಸ್ವರಕ್ಕಾಗಿ ನಾನು ಹಂಬಲಿಸುತ್ತಾ ಬಂದಿದ್ದೇನೆ. ಸ್ವರ ಎಂದರೇನು? ಅದನ್ನು ನಾನು ಹೇಗೆ ಹಿಡಿಯಬಲ್ಲೆ? ನನಗೆ ಸ್ವರವೇ ದೇವರು. ನಾನೊಂದು ರಾಗವನ್ನು ಹಾಡುವಾಗ ನನಗೆ ಸ್ವರವನ್ನು ತೋರಿಸೆಂದು, ನನಗೆ ಸ್ವರದ ದರ್ಶನವಾಗಲಿ ಎಂದು ರಾಗವನ್ನು ಬೇಡುತ್ತೇನೆ. ಬಾಲ್ಯದಿಂದಲೇ ನನ್ನ ಮನಸ್ಸಿನಲ್ಲಿ ಇದ್ದ ಚಿಂತೆ ಒಂದೇ. ’ಅದನ್ನು (ಸ್ವರವನ್ನು) ನಾನು ಹೇಗೆ ನೋಡಬಲ್ಲೆ?’ ಎಂಬುದಾಗಿ.”
ಇಂತಹ ಹೇಳಿಕೆಗಳು ಮೋಡಿ ಮಾಡುವಂತೆಯೇ ಸಂಗೀತದ ವಿಷಯದಲ್ಲಿ ಈ ಬಗೆಯ ಹಂಬಲ – ಹಪಾಹಪಿ ಇರುವವರಿಗೆ ರಾಗ ಮತ್ತು ಘರಾಣೆಯ ನಿಯಮಗಳು ಕಷ್ಟ ಹಾಗೂ ಕಾಲ್ತೊಡಕು ಆಗಿರಲೇಬೇಕು ಎಂದು ತೋರದೇ ಇರುವುದಿಲ್ಲ. ಒಂದಂತೂ ನಿಜ; ಕಿಶೋರಿ ಅಮೋನ್ಕರ್ ಅವರ ಕಚೇರಿಗಳು ಕೇವಲ ಕೆಲವು ರಾಗಗಳ ಮತ್ತೊಂದು ಕಚೇರಿ ಆಗಿರುತ್ತಿರಲಿಲ್ಲ. ಮನಸ್ಸಿನ ಒಳಗಿರುವ ರಾಗದ ಒಳಗೆ ಪ್ರವೇಶಿಸಲು ನಡೆಸುವ ಹೋರಾಟವನ್ನು ಆಕೆ ಬಚ್ಚಿಡುತ್ತಾ ಇರಲಿಲ್ಲ. ಅದರಿಂದ ಸ್ವರದ ದರ್ಶನವಾಗುವ ಪವಾಡ ಸಂಭವಿಸುತ್ತಿತ್ತು. ಧ್ವನಿವರ್ಧಕ, ಶ್ರೋತೃಗಳ ವರ್ತನೆ – ಚಟುವಟಿಕೆ ಮುಂತಾದ ಅನೇಕ ಕಿಶೋರಿ ಅಮೋನ್ಕರ್ (೧೯೩೨- ೨೦೧೭) ಸ್ವತಃ ಒಂದು ಘರಾಣೆ ಆಗಿದ್ದರು. ಅವರ ಸಂಗೀತವು ಹಲವು ಪ್ರಭಾವಗಳ ಮೊತ್ತವಾಗಿತ್ತು. ಕೇಳುವಾಗ ಅದು ಕೇವಲ ಜೈಪುರ್-ಅತ್ರೌಲಿ ಘರಾಣೆ ಅನ್ನಿಸುತ್ತಿರಲಿಲ್ಲ. ಪ್ರತಿಸಲವೂ ಅವರು ತಮ್ಮ ಘರಾಣೆ ಶೈಲಿಯ ಮರುಸೃಷ್ಟಿ ಮಾಡುತ್ತಿದ್ದರು. ವಿಷಯಗಳು ಆಕೆಗೆ ಕಿರಿಕಿರಿ ಉಂಟುಮಾಡುತ್ತಿದ್ದವು. ಹೆಚ್ಚಿನ ಸಂಗೀತಗಾರರು ರಾಜಿಮಾಡಿಕೊಂಡು ಕಂಡೂಕಾಣದಂತಿದ್ದು ಕಚೇರಿಯನ್ನು ಮುಗಿಸುತ್ತಾರೆ. ಆದರೆ ಕಿಶೋರಿ ಅವರದ್ದು ಅಂತಹ ಜಾಯಮಾನವಲ್ಲ; ಎಲ್ಲವೂ ಪರಿಪೂರ್ಣ (ಠಿeಡಿಜಿeಛಿಣ) ಆಗಿರಬೇಕೆಂದು ಬಯಸುತ್ತಿದ್ದವರು. ಆಕೆ ಹಾಡಬೇಕಿದ್ದರೆ ಸ್ವರದ ದರ್ಶನವಾಗಬೇಕು ಎಂದು ಹಂಬಲಿಸುತ್ತಿದ್ದರು; ರಾಜಿ ಎಂಬುದು ಅವರಿಗೆ ಗೊತ್ತಿರಲಿಲ್ಲ.
ರೆಫರೆನ್ಸ್ ಲೈಬ್ರರಿ
ಪ್ರಸಿದ್ಧ ಸಂಗೀತಗಾರ್ತಿ ಶುಭಾ ಮುದ್ಗಲ್ ಅವರು ಒಂದೆಡೆ “ಕಿಶೋರಿತಾಯಿ ಅವರು ನಮಗೆ ಪರಾಮರ್ಶನ ಗ್ರಂಥಾಲಯ ಇದ್ದ ಹಾಗೆ. ಅವರ ಸಂಗೀತದಲ್ಲಿ ನಮಗೆ ತುಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಪ್ರಶ್ನೆಗಳು ಆಕೆಯ ಘರಾಣೆಯ ಸಂಬಂಧದ ಬಗ್ಗೆ ಇರಬಹುದು. ಉದಾಹರಣೆಗೆ ಕಿಶೋರಿ ಅವರ ಜೈಪುರ್-ಅತ್ರೌಲಿ ಘರಾಣೆ ಅವರ ತಾಯಿ ಮೋಗುಬಾಯಿ ಕುರ್ಡಿಕರ್ ಅವರಿಗಿಂತ ಹೇಗೆ ಭಿನ್ನ? ಅಥವಾ ಮೋಗುಬಾಯಿ ಅವರ ಇತರ ಶಿಷ್ಯರಾದ ಕಮಲ್ ತಾಂಬೆ ಹಾಗೂ ಕೌಸಲ್ಯಾ ಮಂಜೇಶ್ವರ್ ಅವರಿಗಿಂತ ಹೇಗೆ ಭಿನ್ನ? ತಾನು ಘರಾಣೆಯ ಮಿತಿಗಳಿಂದ ಬಿಡಿಸಿಕೊಂಡಿದ್ದರೆಂದು ಆಕೆ ಹೇಳುತ್ತಿದ್ದರಲ್ಲವೇ? ಅದು ನಿಜವೇ? ಅದು ಕಾಣಿಸುತ್ತಿತ್ತೆ? ತನ್ನ ಕಾಲದ ಅಥವಾ ಹಿಂದಿನ ದಿಗ್ಗಜರ ಸಂಗೀತದಿಂದ ಆಕೆ ಪ್ರಭಾವಿತರಾಗಿದ್ದರೆ? ಅವರು ನಾಸಿಕ ಸ್ವರವನ್ನು ಬಳಸುತ್ತಿದ್ದರೆ? ಆಕೆ ಸ್ವರವನ್ನು ಹಗುರವಾಗಿ ಅಲೆಯಂತೆ ಮಾಡುತ್ತಿದ್ದುದು ಹೇಗೆ?” ಮುಂತಾದ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇದಕ್ಕೆ ಉತ್ತರವೆಂಬಂತೆ ಕವಿ, ಲೇಖಕ ಯತೀಂದ್ರ ಮಿಶ್ರ ಅವರು “ಕಿಶೋರಿತಾಯಿ ಸ್ವತಃ ಒಂದು ಘರಾಣೆ ಆಗಿದ್ದರು. ಅವರ ಸಂಗೀತವು ಹಲವು ಪ್ರಭಾವಗಳ ಮೊತ್ತವಾಗಿತ್ತು. ಕೇಳುವಾಗ ಅದು ಕೇವಲ ಜೈಪುರ್-ಅತ್ರೌಲಿ ಘರಾಣೆ ಅನ್ನಿಸುತ್ತಿರಲಿಲ್ಲ. ಪ್ರತಿಸಲವೂ ಕಿಶೋರಿ ಅವರು ತಮ್ಮ ಘರಾಣೆ ಶೈಲಿಯ ಮರುಸೃಷ್ಟಿ ಮಾಡುತ್ತಿದ್ದರು. ಉದಾಹರಣೆಗೆ ಜೌನ್ಪುರಿ, ಶುದ್ಧ ಮಾಲಕಂಸ್ ರಾಗಗಳು. ಆಕೆ ಕೇವಲ ತಮ್ಮ ಘರಾಣೆಗೆ ನಿ?ರಾಗಿರುವ ಬದಲು ಅದರ ಸೌಂದರ್ಯಪ್ರಜ್ಞೆ(ಈಸ್ತೆಟಿಕ್) ಯನ್ನು ಬದಲಿಸುತ್ತಾ ಹೋದರು. ಪಾಠ್ಯದ ಸೂಕ್ಷ್ಮತೆಗಳಿಗೆ ಹೆಚ್ಚಿನ ಗಮನಕೊಟ್ಟರು. ಲಿಖಿತ ಸಾಲನ್ನು ಕುರುಡಾಗಿ ಅನುಸರಿಸುತ್ತಿರಲಿಲ್ಲ. ಸಾಹಿತ್ಯವನ್ನು ಸರಿಯಾಗಿ ತಿಳಿಯಲು ಸದಾ ಪ್ರಯತ್ನಿಸುತ್ತಿದ್ದರು. ಬಡೇ ಗುಲಾಂ ಅಲಿಖಾನ್, ವಿಲಾಯತ್ಖಾನ್ ಮತ್ತು ಗಿರಿಜಾದೇವಿ ಅವರು ಕಿಶೋರಿತಾಯಿಗೆ ಇಷ್ಟವಾದ ಸಂಗೀತಗಾರರು” ಎಂದಿದ್ದಾರೆ.
ಜೈಪುರ್-ಅತ್ರೌಲಿ ಘರಾಣೆಯನ್ನು ಅಮ್ಮನಿಂದಲೇ ಕಲಿತಿದ್ದರೂ ಕಿಶೋರಿ ಅಮೋನ್ಕರ್ ಅದರ ಸಾಧ್ಯತೆಗಳನ್ನು ವಿಸ್ತರಿಸಿದರು; ಕೆಲವು ನಿಯಮಗಳನ್ನು ಮೀರಿ ಮುಂದುವರಿದರು; ತಮ್ಮದೇ ಶೈಲಿಯನ್ನು ಕಂಡುಕೊಂಡರು – ಎಂಬುದು ಅವರ ಬೆಳವಣಿಗೆಯ ವಿವಿಧ ಮಜಲುಗಳನ್ನು ಸೂಚಿಸುತ್ತದೆ.
ಗೋವಾದ ಹಳ್ಳಿಯಿಂದ
ಕಿಶೋರಿಯ ಜನನ (ಏಪ್ರಿಲ್ ೧೦, ೧೯೩೨) ಆಗುವಷ್ಟರಲ್ಲಿ ತಾಯಿ ಮೋಗುಬಾಯಿ ಜೀವನದ ಪಥದಲ್ಲಿ ಬಹಳಷ್ಟು ಸಾಗಿಬಂದು ಆಗಿತ್ತು. ಆಕೆ ಗೋವಾದ ಕುರ್ಡಿ ಎನ್ನುವ ಒಂದು ಹಳ್ಳಿಯಿಂದ ಬಂದವರು. ವಯಸ್ಸು ೨೦ ವರ್ಷ ಆಗುವ?ರಲ್ಲಿ ತಾಯಿ ತೀರಿಹೋಗಿದ್ದರು. ಅವರದು ಕಲೆಗೆ ಸಮೀಪವಿದ್ದ ಮನೆತನವಾದ ಕಾರಣ ಆಕೆ ಜೀವನೋಪಾಯಕ್ಕಾಗಿ ಸಾತಾರ್ಕರ್ ಎನ್ನುವ ನಾಟಕಕಂಪೆನಿಯನ್ನು ಸೇರಿಕೊಂಡಿದ್ದರು; ಅಲ್ಲಿ ಆಕೆ ಹಾಡುಗಾರ್ತಿ ಮತ್ತು ಕಥಕ್ ನೃತ್ಯಗಾರ್ತಿ. ಕಂಪೆನಿ ಸಾಂಗ್ಲಿಯಲ್ಲಿ ಮೊಕ್ಕಾಂ ಹೂಡಿದ್ದಾಗ ಹಗಲುಹೊತ್ತು ಕಂಪೆನಿ ಒದಗಿಸಿದ ಮನೆಯಲ್ಲಿ ಆಕೆ ಸಂಗೀತಾಭ್ಯಾಸ ಮಾಡುತ್ತಿದ್ದಳು. ಅದನ್ನು ಕೇಳಿ ಸೀದಾ ಮನೆಯೊಳಗೆ ಬಂದ ಓರ್ವ ವ್ಯಕ್ತಿ ಮೆಚ್ಚುಗೆಯನ್ನು ಸೂಚಿಸಿದ್ದಲ್ಲದೆ ತಾವೇ ಆಕೆಗೆ ಸಂಗೀತವನ್ನು ಕಲಿಸುವುದಾಗಿಯೂ ಹೇಳಿದರು. ಅವರು ಬೇರಾರೂ ಅಲ್ಲ; ಜೈಪುರ್-ಅತ್ರೌಲಿ ಘರಾಣೆಗೆ ಗಟ್ಟಿ ಚೌಕಟ್ಟನ್ನು ಹಾಕಿದ ಮಹಾನ್ ಸಂಗೀತಗಾರ ಉಸ್ತಾದ್ ಅಲ್ಲಾದಿಯಾ ಖಾನ್ ಸಾಹೇಬ್. ಯುವತಿ ಮೋಗುಬಾಯಿ ಜೀವನದ ದಿಕ್ಕೇ ಬದಲಾಯಿತು. ಮುಂದೆ ಸುಮಾರು ಎರಡು ದಶಕ ಅಲ್ಲಾದಿಯಾ ಖಾನ್ರವರು ಮೋಗುಬಾಯಿಗೆ ಸಂಗೀತ ಕಲಿಸಿದರು. ಅದಕ್ಕಾಗಿ ಮೋಗುಬಾಯಿ ಮುಂಬಯಿ ಚಾಲ್ನಲ್ಲಿ ಮನೆ ಹಿಡಿದರು.
ಗೋವಾ ಮೂಲದ ಈ ಹೆಂಗಳೆಯರು ಕಾವ್ಯ, ನೃತ್ಯ, ಗಾಯನ, ವಾದನ, ಅವುಗಳ ಶಾಸ್ತ್ರ ಎಲ್ಲ ಬಲ್ಲವರು. ಬದಲಾದ ಸಾಮಾಜಿಕ ನಡವಳಿಕೆಯಂತೆ ಇವರು ತಮ್ಮ ಪೂರ್ವಿಕರಲ್ಲಿ ಇಲ್ಲದಿದ್ದ ವಿವಾಹಬಂಧಕ್ಕೆ ಒಳಗಾಗತೊಡಗಿದರು. ಮೋಗುಬಾಯಿ ಮಾಧವದಾಸ ಭಾಟಿಯಾ ಎಂಬವರನ್ನು ಮದುವೆಯಾದರು. ಮೊದಲ ಮಗಳು ಕಿಶೋರಿಗೆ ಆರುವ? ಇದ್ದಾಗ ಆತ ತೀರಿಕೊಂಡರು. ಮುಂಬಯಿ ಶಹರದಲ್ಲಿ ಮೂರು ಮಕ್ಕಳನ್ನು ಸಾಕುವ ಹೊಣೆ ಇನ್ನೂ ಸಣ್ಣ ವಯಸ್ಸಿನ ಮೋಗುಬಾಯಿ ಅವರದಾಯಿತು; ಗಾಯನವೇ ಜೀವನಕ್ಕೆ ಆಧಾರ.
ಮುಂಬಯಿಯಲ್ಲಿ ನೆಲಸಿದ ಮೇಲೂ ಕುರ್ಡಿಯ ಸಂಪರ್ಕ ಮುಂದುವರಿದಿತ್ತು. ಶಾಲೆಯ ರಜಾದಿನಗಳಲ್ಲಿ ಅಲ್ಲಿಗೆ ಹೋಗುತ್ತಿದ್ದುದನ್ನು ಕಿಶೋರಿ ನೆನಪಿಸಿಕೊಳ್ಳುತ್ತಿದ್ದರು. “ಕಕೋಡಕ್ಕೆ ಹೋಗಿ ಅಲ್ಲಿಂದ ಕುರ್ಡಿಗೆ ಎತ್ತಿನ ಗಾಡಿಯ ಪ್ರಯಾಣ. ಮಣ್ಣಿನ ರಸ್ತೆಯ ಎರಡೂ ಕಡೆ ಹೂವು ತುಂಬಿದ ಎತ್ತರದ ಮರಗಳು ಪರಿಮಳ ಬೀರುತ್ತಿದ್ದವು. ನಮ್ಮ ಮನೆಯ ಸುತ್ತಮುತ್ತ ಹಣ್ಣಿನ ಮರಗಳಿದ್ದವು. ಅಲ್ಲಿ ನನ್ನ ಮುತ್ತಜ್ಜಿಯ ಸಮಾಧಿ ಇತ್ತು” ಮುಂತಾಗಿ ಆಕೆ ಹೇಳಿದ್ದಿದೆ.
ಇಂಗ್ಲಿಷ್ ವಿದ್ಯಾಭ್ಯಾಸ
ಈ ನಡುವೆ ಕಿಶೋರಿಗೆ ವೈದ್ಯೆ ಆಗುವ ಕನಸು ಕೂಡ ಇತ್ತು. ಮುಂಬಯಿಯಲ್ಲಿ ಆಕೆ ಇಂಗ್ಲಿಷ್ ವಿದ್ಯಾಭ್ಯಾಸವನ್ನು ಪಡೆದಳು. ಇಂಗ್ಲಿಷ್, ಮರಾಠಿ, ಹಿಂದಿ ಮೂರೂ ಭಾಷೆಗಳಲ್ಲಿ ಅವರು ಭಾಷಣ ಮಾಡಲು, ಬರೆಯಲು ಸಮರ್ಥರಾಗಿದ್ದರು. ಅಮ್ಮನಿಂದ ಸಂಗೀತ ಕಲಿಯುವುದಲ್ಲದೆ ಅವರಿಗೆ ಸಾಥ್ ನೀಡಲು ಹೋಗುವುದಿತ್ತು. “ಅಮ್ಮ ನನ್ನಲ್ಲಿ ಸಂಗೀತದ ಬಗ್ಗೆ ಮಾತನಾಡುತ್ತಿರಲಿಲ್ಲ. ಆಕೆ ಹೇಳಿದ್ದನ್ನು ನಾನು ಪುನರುಚ್ಚಾರ ಮಾಡುತ್ತಿದ್ದೆ; ಏನನ್ನೂ ಕೇಳದೆ ಆಕೆಯನ್ನು ಕಾಪಿ ಮಾಡುತ್ತಿದ್ದೆ. ಆಕೆ ಕಟ್ಟುನಿಟ್ಟು. ಸ್ಥಾಯಿ ಮತ್ತು ಅಂತರವನ್ನು ಎರಡು ಸಲ ಮಾತ್ರ ಹಾಡುವಳು. ಅಷ್ಟರಲ್ಲೇ ನಾನು ಗ್ರಹಿಸಬೇಕು. ಅದರಿಂದ ನನಗೆ ಏಕಾಗ್ರತೆ ಬಂತು.
ಪ್ರ್ಯಾಕ್ಟಿಸ್ (ಅಭ್ಯಾಸ) ಮತ್ತು ಸಾಧನೆ ನಡುವೆ ವ್ಯತ್ಯಾಸವಿದೆ. ಪ್ರ್ಯಾಕ್ಟಿಸ್ ಎಂದರೆ ಉರು ಹೊಡೆಯುವುದು, ಅ?. ಸಾಧನೆ ಎಂದರೆ ಒಂದು ಹೆಜ್ಜೆ ಮುಂದೆ ಹೋಗುವುದು. ಅಲ್ಲಿ ನಡೆಯುವುದು, ಓಡುವುದು ನಾವೇ. ಗುರು ಅದಕ್ಕೆ ನಿಮಗೆ ಶಕ್ತಿ ನೀಡುತ್ತಾನೆ(ಳೆ). ಅದನ್ನು ಮಾಡದಿದ್ದರೆ ನೀವು ಸಾಮಾನ್ಯರಾಗಿ ಉಳಿಯುತ್ತೀರಿ. ನಾನು ಸಾಮಾನ್ಯಳಾಗಿ ಉಳಿಯದಂತೆ ಅಮ್ಮ ಎಚ್ಚರ ವಹಿಸಿದಳು” ಎಂದು ಕಿಶೋರಿ ಹೇಳಿದ್ದಾರೆ.
ಮೋಗುಬಾಯಿ ಕುರ್ಡಿಕರ್ ಅವರ ವೃತ್ತಿಜೀವನದ ಕಾಲದಲ್ಲಿ ಹೆಂಗಸರಿಗೆ ಹೆಚ್ಚು ಗೌರವ ಇರಲಿಲ್ಲ. ಕಾರ್ಯಕ್ರಮ ಕೊಡಲು ಹೋಗುವಾಗ ತಾಯಿ-ಮಗಳು ತೃತೀಯ ದರ್ಜೆ (ಗಾಂಧಿ ಕ್ಲಾಸ್) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅಮ್ಮನ ಹೆಗಲ ಮೇಲೆ ಮಗಳು ನಿದ್ದೆ ಮಾಡುತ್ತಿದ್ದಳು. ಮಗಳು ತಾಯಿಯ ಗಾಯನಕ್ಕೆ ತಂಬೂರ ನುಡಿಸುತ್ತಿದ್ದಳು. ಸಂಘಟಕರು ತಾಯಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿ ನೆನಪಾದಾಗ ಕಿಶೋರಿ ಅವರಿಗೆ ಅಳು ಬರುತ್ತಿತ್ತು. ಕೀಳು ಮಾಡಿ ಮಾತನಾಡುವುದು, ಕಡಮೆ ಸಂಭಾವನೆ ಕೊಡುವುದು, ಯಾರದೋ ಮನೆಯಲ್ಲಿ ವಸತಿ ವ್ಯವಸ್ಥೆ ಮಾಡುವುದು ಅದೆಲ್ಲ ಮಾಮೂಲು. “ಓರ್ವ ಶಾಸ್ತ್ರೀಯ ಸಂಗೀತಗಾರ್ತಿಗೆ ಕೊಡಬೇಕಾದ ಗೌರವವನ್ನೂ ಕೊಡುತ್ತಿರಲಿಲ್ಲ. ಸಂಗೀತದಲ್ಲಿ ದಂತಕಥೆಯಂತಿದ್ದ ಅವಳಿಗೆ ನೀಡುತ್ತಿದ್ದ ಈ ಕಳಪೆ ಉಪಚಾರ ನನ್ನಲ್ಲಿ ಆಳವಾದ ನೋವುಂಟು ಮಾಡಿತು. ಆದರೆ ಅಮ್ಮನಿಗೆ ಮೂವರು ಮಕ್ಕಳನ್ನು ಸಾಕಬೇಕಿತ್ತು. ಅವಳು ಹಾಗೆಯೇ ಮುಂದುವರಿದಳು. ಆದರೆ ನಾನೊರ್ವ ಸಂಗೀತಗಾರ್ತಿ ಆದಾಗ ಇದಕ್ಕೆಲ್ಲ ಅವಕಾಶ ನೀಡುವುದಿಲ್ಲ ಎಂದು ಅಂದೇ ನಿರ್ಧರಿಸಿದೆ. ಅದನ್ನು ನಾನು ಸಾಧಿಸಿದ್ದೇನೆ. ಸರಿಯಾದ ಹೊಟೇಲ್ ಸ್ವೀಟಿನಲ್ಲಿ ಉಳಿಯುತ್ತೇನೆ. ಕಾರನ್ನು ಕೇಳಿ ಪಡೆಯುತ್ತೇನೆ. ಎಲ್ಲ ಪಾವತಿಯನ್ನೂ ಸರಿಯಾಗಿ ಮಾಡುವಂತೆ ನೋಡಿಕೊಳ್ಳುತ್ತೇನೆ” ಎಂದಾಕೆ ಹೇಳಿದ್ದರು. ಅವರ ವರ್ತನೆಯಲ್ಲಿ ಕಂಡುಬಂದ ಅಹಂ ಮತ್ತು ಉದ್ಧಟತನಗಳ ಹಿಂದೆ ಬಾಲ್ಯದ ಈ ನೋವು ಇದ್ದಿರಲೇ ಬೇಕು.
ತಾಯಿಯೇ ಗುರು
“ಶ್ರೋತೃಗಳಿಗೆ ಯಾವುದು ಹಿತ ಅದನ್ನು ಕೊಡು; ಪ್ರಿಯವಾದದ್ದನ್ನಲ್ಲ” ಎಂದು ಅಮ್ಮ ಮಗಳಿಗೆ ಹೇಳುತ್ತಿದ್ದರು. ಅದಕ್ಕೆ ವಿವರಣೆ ನೀಡುತ್ತಾ “ಯಾವುದಕ್ಕೆ ಚಪ್ಪಾಳೆ ಬರುತ್ತದೋ ಅದು ಪ್ರಿಯವಾದದ್ದು; ಕಲೆಯ ನೈಜರೂಪವನ್ನು ತೋರಿಸುವುದು ಹಿತವಾದದ್ದು. ಅದು ಒಬ್ಬ ಕಲಾವಿದನ ಕರ್ತವ್ಯ” ಎಂದು ಹೇಳಿದ್ದರು. “ಒಮ್ಮೆ ನನಗೆ ತಿಂಗಳಲ್ಲಿ ನಾಲ್ಕು ಕಾರ್ಯಕ್ರಮಗಳಿಗೆ ಆಹ್ವಾನ ಬಂತು. ಆಗ ಅಮ್ಮ ’ರೈಲಿನಲ್ಲಿ ಹೋಗಿ ಬರುವುದು ಸೇರಿ ಒಂದು ಕಾರ್ಯಕ್ರಮವೆಂದರೆ ನಾಲ್ಕುದಿನ. ತಿಂಗಳಿನ ೧೬ ದಿನ ಹೋಯಿತು. ಇನ್ನು ಪ್ರ್ಯಾಕ್ಟಿಸ್ ಮಾಡುವುದು ಯಾವಾಗ?’ ಎಂದು ಕೇಳಿದರು. ಅಮ್ಮ ಹೇಳಿದ್ದು ಒಮ್ಮೆ ಮಾತ್ರ. ನಾನದನ್ನು ಇದುವರೆಗೂ ನಡೆಸಿಕೊಂಡು ಬಂದಿದ್ದೇನೆ. ಮನೆ, ಎರಡು ಮಕ್ಕಳ ಸಂಸಾರ ಹೇಗೆ ನಡೆಸಿದೆ ಗೊತ್ತಿಲ್ಲ. ಆದರೆ ಎಲ್ಲವೂ ಸಲೀಸಾಗಿ ನಡೆದಿದೆ. ಎಂದೂ ಹಣದ ಕೊರತೆ ಆದುದಿಲ್ಲ” ಎಂದು ಕಿಶೋರಿಯಮ್ಮ ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಸಾಮಾನ್ಯವಾಗಿ ತಿಂಗಳಿನಲ್ಲಿ ಒಪ್ಪಿಕೊಳ್ಳುತ್ತಿದ್ದುದು ಗರಿ? ಎರಡು ಕಚೇರಿಗಳು ಮಾತ್ರ.
ಆರಂಭದಿಂದಲೂ ಭಾವನೆಗಳ ಸೆಳೆತವಿದ್ದ ಕಿಶೋರಿ ಅಮೋನ್ಕರ್ ಒಂದು ಹಂತದಲ್ಲಿ ಸುಗಮಸಂಗೀತವನ್ನು ಇಷ್ಟಪಟ್ಟಿದ್ದಿದೆ. ಅದೇ ಹೊತ್ತಿನಲ್ಲಿ ೧೯೬೪ರಲ್ಲಿ ಅವರು ವಿ. ಶಾಂತಾರಾಮ್ ಅವರ ’ಗೀತ್ ಗಾಯಾ ಪತ್ಥರೋಂನೇ’ ಸಿನೆಮಾಕ್ಕೆ ಒಂದು ಹಾಡನ್ನು ಹಾಡಿದರು. ಅದರಿಂದ ತಾಯಿ ಮೋಗುಬಾಯಿ ಎಷ್ಟು ಸಿಟ್ಟಾದರೆಂದರೆ “ಇನ್ನು ಕೂಡ ನೀನು ಸಿನೆಮಾಕ್ಕೆ ಹಾಡುವುದಾದರೆ ನನ್ನ ಎರಡು ತಂಬೂರವನ್ನು ಮುಟ್ಟಬೇಡ” ಎಂದುಬಿಟ್ಟರು. ಆ ಮಾತು ನನಗೆ ಬಿಗಿಯಾದ ಏಟಿನಂತೆ ಅಪ್ಪಳಿಸಿದ್ದು ಈಗಲೂ ನೆನಪಿಗೆ ಬರುತ್ತದೆ” ಎಂದಾಕೆ ಹೇಳುತ್ತಿದ್ದರು. “ನನಗೆ ಕಲಿಸಲು ಅಮ್ಮನಿಗೆ ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಸಮಯವೆಲ್ಲ ಸಂಗೀತಪಾಠಕ್ಕೆ ಹೋಗುತ್ತಿತ್ತು. ನಾನು ರೂಮಿನ ಹೊರಗೆ ಕುಳಿತು ಕೇಳುತ್ತಾ ಇದ್ದೆ” ಎಂದಾಕೆ ಹೇಳಿದ್ದಿದೆ.
“ಅಮ್ಮ ಹೇಳುತ್ತಿದ್ದಳು – ಹಾಡುವಾಗ ಮುಖ ಸೌಮ್ಯ ಇರಬೇಕು; ಸಿಟ್ಟು ಇತ್ಯಾದಿ ಸಲ್ಲದು. ಅನಗತ್ಯವಾಗಿ ತಾರಸ್ಥಾಯಿಯಲ್ಲಿ ಹಾಡುವುದು ಮುಂತಾದ ಪ್ರದರ್ಶನ(ಶೋಮ್ಯಾನ್ಶಿಪ್)ದಿಂದ ಶ್ರೋತೃಗಳ ಹೃದಯವನ್ನು ಮುಟ್ಟಲು ಅಸಾಧ್ಯ. ರಾಗದ ಭಾವನಾತ್ಮಕ ಸ್ವರೂಪವನ್ನು ಗಮನಿಸಿ ಅದನ್ನು ಶ್ರೋತೃಗಳಿಗೆ ಮುಟ್ಟಿಸು – ಎಂಬುದಾಗಿ.” ಇದನ್ನು ಮುಂದೆ ಕಿಶೋರಿಯವರು ಬಹು ಚೆನ್ನಾಗಿ ಮಾಡಿದರು.
ಕಿಶೋರಿ ಅವರ ಸಂಗೀತ ನಿಮಗೆ ಹೇಗೆ ಮುಟ್ಟಿತು ಎಂದು ಶಿ? ಆರತಿ ಅಂಕುಲಿಕರ್ ಅವರಲ್ಲಿ ಕೇಳಿದಾಗ ಅವರು “ಅವರ ಸಂಗೀತ ಲಕ್ಷಾಂತರ ಜನರಿಗೆ ಮುಟ್ಟಿದೆ. ನಾನು ಅವರಲ್ಲೊಬ್ಬಳು. ಅವರ ಸಂಗೀತ ನನಗೇನು ಮಾಡಿತೆಂದು ನೀವು ಕೇಳಿದರೆ, ಅದು ಬಾಗಿಲುಗಳನ್ನು ತೆರೆಯಿತು ಅಥವಾ ನನ್ನ ಮನಸ್ಸಿನ ಒಳಗಿನ ಕತ್ತಲೆಯ ಜಾಗಗಳನ್ನು ತೋರಿಸಿತು ಎಂದು ಹೇಳುತ್ತೇನೆ. ಅದರಿಂದಾಗಿಯೇ ಶಾಸ್ತ್ರೀಯ ಸಂಗೀತ ಅರ್ಥವಾಗದವರು ಕೂಡ ಅವರ ಸಂಗೀತಕ್ಕೆ ಕರಗುತ್ತಾರೆ; ಅದು ಆತ್ಮಕ್ಕೆ ತಟ್ಟುತ್ತದೆ. ಆಕೆ ಹಳೆಯ ಸಂಗೀತಸಿದ್ಧಾಂತಗಳನ್ನು ಓದಿ ಚರ್ಚಿಸುತ್ತಿದ್ದರು; ಶಿ?ರೊಂದಿಗೆ ಕೂಡ ಚರ್ಚಿಸುತ್ತಿದ್ದರು. ಪ್ರತಿಯೊಂದು ಶ್ರುತಿಯೂ ಷಡ್ಜವಾಗಲು ಸಾಧ್ಯ ಎನ್ನುತ್ತಿದ್ದರು” ಎಂದಿದ್ದಾರೆ. “ಅಮ್ಮ ನನಗೆ ಸ್ಥಾಯಿ, ಅಂತರ ಮಾತ್ರ ಕಲಿಸಿದ್ದಲ್ಲ. ಸುರ್(ಸ್ವರ)ನ ಭಾ? ಕೂಡ ಕಲಿಸಿದಳು; ಅದು ಯಾವುದೇ ಭಾವನೆ-ಚಿಂತನೆಗಳನ್ನು ಅಭಿವ್ಯಕ್ತಿಸಬಲ್ಲದು” ಎಂದು ಕಿಶೋರಿ ಹೇಳಿದ್ದಾರೆ.
ಹಲವರಿಂದ ಕಲಿತದ್ದು
ಮೊದಲು ಕಟ್ಟುನಿಟ್ಟಾಗಿ ತಾನು ಮಾತ್ರ (ಜೈಪುರ್- ಅತ್ರೌಲಿ ಘರಾಣೆ) ಕಲಿಸಿದ ಮೋಗುಬಾಯಿ ಮುಂದೆ ಮಗಳಿಗೆ ಬೇರೆ ಗುರುಗಳಿಂದಲೂ ಸಂಗೀತಶಿಕ್ಷಣವನ್ನು ಕೊಡಿಸಿದರು. ಬೇಂಡಿಬಜಾರ್ ಘರಾಣೆಯ ಅಂಜನಾಬಾಯಿ ಮಾಲ್ಪೇಕರ್, ಆಗ್ರಾ ಘರಾಣೆಯ ಅನ್ವರ್ ಹುಸೇನ್ಖಾನ್, ಗ್ವಾಲಿಯರ್ ಘರಾಣೆಯ ಶರತ್ಚಂದ್ರ ಅರೋಳ್ಕರ್ ಮತ್ತು ಮೋಹನ್ರಾವ್ ಪಾಲೇಕರ್ ಅವರಿಂದೆಲ್ಲ ಕಿಶೋರಿ ಕಲಿತರು. ಅವರ ಮೇಲೆ ಗೋವಾದವರೇ ಆದ ಬಾಲಕೃ? ಬುವಾ ಪರ್ವತ್ಕರ್ ಅವರ ಪ್ರಭಾವ ಕೂಡ ಇತ್ತು. ಪದ್ಮಾ ತಲ್ವಾಲ್ಕರ್, ಮಾಲಿನಿ ರಾಜೂರ್ಕರ್, ಲಕ್ಷ್ಮೀಶಂಕರ್, ಪ್ರಭಾ ಅತ್ರೆ, ಶೋಭಾ ಗುರ್ತು ಅವರುಗಳಿಂದಲೂ ಕಿಶೋರಿ ಪ್ರಭಾವಿತರಾದರು ಮತ್ತು ಅಂಥವರ ಸಾಲಿಗೆ ಸೇರಿದರು. ವಿವಿಧ ಘರಾಣೆಗಳ ಸಂಗೀತಗಾರರಿಂದ ಅಷ್ಟಿ? ತೆಗೆದುಕೊಂಡು ತನ್ನ ಶೈಲಿಯನ್ನು ರೂಪಿಸಿಕೊಂಡುದರಲ್ಲಿ ಆಕೆ ಪಂಡಿತ್ ಭೀಮಸೇನ ಜೋಷಿ ಅವರನ್ನು ಹೋಲುತ್ತಾರೆ. ಸಂಗೀತಶಾಸ್ತ್ರಜ್ಞ ಮೋಹನ್ ನಾಡಕರ್ಣಿ ಅವರ ಪ್ರಕಾರ ಹಿಂದೂಸ್ತಾನಿ ಸಂಗೀತದಲ್ಲಿ ಹೊಸದಾಗಿ ಒಂದು ಚಳವಳಿಯನ್ನು ಆರಂಭಿಸಿದ ಇಬ್ಬರಲ್ಲಿ ಕಿಶೋರಿ ಒಬ್ಬರು (ಇನ್ನೊಬ್ಬರು ಕುಮಾರ್ ಗಂಧರ್ವ).
ಸಂಪ್ರದಾಯ (ಪರಂಪರೆ) ಮತ್ತದರ ಶಾಸ್ತ್ರೀಯ ಮೌಲ್ಯಗಳ ಬಗ್ಗೆ ಕಿಶೋರಿ ಅಮೋನ್ಕರ್ ಅವರಿಗೆ ಆಳವಾದ ಗೌರವವಿತ್ತು. ಆದರೆ ಸ್ವಂತ ಅಭಿವ್ಯಕ್ತಿ, ಸ್ವಂತಿಕೆ ಮತ್ತು ಒರಿಜಿನಾಲಿಟಿಗೆ ಆಕೆ ಪ್ರಯತ್ನಿಸಿದರು. ಜೈಪುರ್-ಅತ್ರೌಲಿ ಘರಾಣೆಯಿಂದ ಹೊರಗೆ ಹೋಗಿ ಹೊಸ ವಿ?ಯಗಳನ್ನು ಸೇರಿಸಿಕೊಂಡರು. ಸ್ವರಾನುಸಾರಿಯಾದ ರಾಗವಿಸ್ತಾರವನ್ನು ಆಕೆ ಬಯಸಿದರು. ಗ್ವಾಲಿಯರ್ ಘರಾಣೆಯಂತೆ ಸ್ವರದಿಂದ ಸ್ವರಕ್ಕೆ ಆಲಾಪವನ್ನು ಬೆಳೆಸುತ್ತಾ ಹೋಗುವ ಕ್ರಮ ಜೈಪುರ್ ಘರಾಣೆಯಲ್ಲಿಲ್ಲ. ಇದರಲ್ಲಿ ಆಲಾಪ್ ಸ್ವರಗಳ ಗುಂಪಿನಿಂದ (ಫ್ರೇಸ್) ಗುಂಪಿಗೆ ಸಾಗುತ್ತದೆ; ಹಾಗೂ ತಾಳದ ಬಿಗಿ ಹೆಚ್ಚು. ಇದಕ್ಕೆ ಅಲ್ಲಾದಿಯಾ ಖಾನ್ರ ಧ್ವನಿಯಲ್ಲಿನ ಒಂದು ತೊಂದರೆಯೂ ಕಾರಣವೆಂದು ಹೇಳಲಾಗುತ್ತದೆ. ಖಾನ್ರ ಶಿಷ್ಯರೆಲ್ಲ ಈ ಶೈಲಿಯನ್ನು ಒಪ್ಪಿಕೊಂಡು ಗಟ್ಟಿಗೊಳಿಸಿದರೆ ಕಿಶೋರಿ ಅವರಿಗೆ ಇದೊಂದು ಬಂಧನ ಎನ್ನಿಸಿತು; ಈ ಶೈಲಿಯಲ್ಲಿ ಸ್ವರಗಳ ಮಧ್ಯೆ ಹುಡುಕಾಟ, ರಾಗದ ಸರಿಯಾದ ಆವಿಷ್ಕಾರ ಸಾಧ್ಯವಾಗುವುದಿಲ್ಲ ಅನ್ನಿಸಿತು. ಈಕೆಗೆ ತಾಳವ್ಯವಸ್ಥೆಯ ಒಳಗಿದ್ದೇ ಸ್ವಾತಂತ್ರ್ಯ ಪಡೆಯುವ ಹಂಬಲ; ಮತ್ತು ಈ ಶೈಲಿಯಲ್ಲಿನ ಏಕತಾನತೆಯನ್ನು ಒಡೆಯಬೇಕೆಂದು ಕಿಶೋರಿ ತನ್ನ ಸಂಗೀತಕ್ಕೆ ಬೇಕೆನಿಸಿದ ದೊಡ್ಡ ಚೌಕಟ್ಟನ್ನು ಹಾಕಿಕೊಂಡರು; ಸಂಗೀತಗ್ರಂಥಗಳ ಅಧ್ಯಯನ ಮಾಡಿದರು; ಭಾವನೆಯ ಮೂಲಕ ಸಂಗೀತವನ್ನು ಪಡೆಯುವ ಶೋಧಕ್ಕೆ ಹೊರಟರು.
ಘರಾಣೆಯನ್ನು ಮೀರಿದ್ದು
ಇನ್ನೊಂದು ಅಂಶವೆಂದರೆ, ಜೈಪುರ್-ಅತ್ರೌಲಿ ಘರಾಣೆಯವರಿಗೆ ಛೋಟಾಖ್ಯಾಲ್ ಇಷ್ಟವಿಲ್ಲ. ಆದರೆ ಕಿಶೋರಿ ಅವರಿಗೆ ಬೇರೆಬೇರೆ ಭಾವನಾಲೋಕಗಳನ್ನು ಸೃಷ್ಟಿಸಲು ಇದು ಅಗತ್ಯ ಅನ್ನಿಸಿತು. ಛೋಟಾಖ್ಯಾಲಿನ ಸಾಹಿತ್ಯದಿಂದಲೂ ರಸಾನುಭೂತಿ ಸಾಧ್ಯ ಅನ್ನಿಸಿತು. ಅದಕ್ಕೆ ತಾನೇ ಸುಂದರ ಬಂದೀಶ್ಗಳನ್ನು ರಚಿಸಿದರು. ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕ ಟಿ.ಎಂ. ಕೃಷ್ಣ ಅವರು, ಕಿಶೋರಿತಾಯಿ ಅವರ ಸಂಗೀತದ ಧ್ಯಾನಸ್ಥ ಗುಣ, ಅವರ ?ಡ್ಜಕ್ಕಿರುವ ತಾಕತ್ತನ್ನು ಉಲ್ಲೇಖಿಸುವುದರ ಜೊತೆಗೆ “ಅವರ ರಾಗಪ್ರಸ್ತುತಿ ಉಳಿದೆಲ್ಲರ ಪ್ರಸ್ತುತಿಗಿಂತ ಭಿನ್ನವಾಗುವುದು ಆಕೆ ರಾಗದಲ್ಲಿ ಬಳಸುವ ವಿಶೇಷ ಸಂಗತಿಗಳಿಂದ ಮಾತ್ರವಲ್ಲ; ಜೊತೆಗೆ ತಾನು ಹಾಡುವ ಪ್ರತಿಯೊಂದೂ ಸ್ವರ ಹಾಗೂ ಸ್ವರಗುಂಪುಗಳಲ್ಲಿ ಆಕೆ ತುಂಬುವ ಗುಣಮಟ್ಟ(ಕ್ವಾಲಿಟಿ)ದಿಂದ ಬಂದದ್ದು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಾಠ್ಯದ ಸೂಕ್ಷ್ಮತೆಗಳಿಗೆ ಹೆಚ್ಚಿನ ಗಮನಕೊಟ್ಟ ಕಿಶೋರಿ, ಲಿಖಿತಸಾಲನ್ನು ಕುರುಡಾಗಿ ಅನುಕರಿಸುತ್ತಿರಲಿಲ್ಲ. ಸಾಹಿತ್ಯವನ್ನು ಸರಿಯಾಗಿ ತಿಳಿದುಕೊಳ್ಳಲು ಸದಾ ಪ್ರಯತ್ನಿಸುತ್ತಿದ್ದರು.
ರಾಗದ ಬಗೆಗೆ ಕಿಶೋರಿ ಅವರ ಪರಿಕಲ್ಪನೆ ಎಂದರೆ – “ಸಂಗೀತವು ಜಗತ್ತಿನ ಅತ್ಯಂತ ಅಮೂರ್ತ ವಿಷಯವಾಗಿದ್ದು, ರಾಗಕ್ಕೆ ಮಿತಿ ಎಂಬುದಿಲ್ಲ. ಒಂದು ರಾಗದ ಎರಡು ಸ್ವರಗಳ ನಡುವೆ ಭಾವನೆಗಳ ಒಂದು ಪ್ರಪಂಚ ಇರುತ್ತದೆ. ಈ ಭಾವಗಳನ್ನು ವ್ಯಕ್ತಪಡಿಸುವುದಕ್ಕೆ ಒಂದು ರಾಗದಲ್ಲಿ ಅಪಾರ ಸಾಧ್ಯತೆ ಇರುತ್ತದೆ. ಪೂರ್ತಿ ಅರ್ಪಣಾ ಮನೋಭಾವದಿಂದ ಅದನ್ನು ಕಲಿಯಬೇಕಷ್ಟೇ. ಅದಕ್ಕಾಗಿ ಸಾಧನೆ ಅನಿವಾರ್ಯ. ಅದಕ್ಕೆ ಪ್ರ್ಯಾಕ್ಟಿಸ್ ಮಾಡಿದರೆ ಸಾಲದು. ರಾಗಗಳ ಸ್ವರಗಳ ನಿಕಟ ಸಂಬಂಧವನ್ನು ಬೆಳೆಸಬೇಕು; ಅದು ಸ್ನೇಹ ಬೆಳೆಸಿದಂತೆ. ಇತರರ ಭಾವನೆಗಳನ್ನು ಗೌರವಿಸುವುದು, ಕಾಳಜಿ ವಹಿಸುವುದು ಮತ್ತು ಸುಖದುಃಖಗಳನ್ನು ಹಂಚಿಕೊಂಡಂತೆ. ರಾಗ ಒಂದು ಜೀವಂತ ವಿ?ಯವಾಗಿದ್ದು, ಅದರೊಂದಿಗೆ ಸ್ನೇಹ ಮಾಡಬೇಕು. ಎಚ್ಚರದಿಂದ ಭಾವನೆಗಳ ಸಹಿತವಾಗಿ ಅದನ್ನು ಅಭಿವ್ಯಕ್ತಿಸಬೇಕು, ಅರ್ಹವಾದ ರೀತಿಯಲ್ಲಿ ವಿಸ್ತರಿಸಬೇಕು” ಎಂಬುದಾಗಿತ್ತು.
ಮುಂದುವರಿದು “ಪ್ರೀತಿಯ ಹಲವು ಛಾಯೆಗಳು ಇರುವಂತೆಯೇ ಸ್ವರಕ್ಕೂ ಹಲವು ಛಾಯೆಗಳು ಇರುತ್ತವೆ. ಭೂಪ್, ಶುದ್ಧಕಲ್ಯಾಣ್ ಮತ್ತು ದೇಶ್ಕಾರ್ ರಾಗಗಳು ಒಂದೇ ರಾಗದಂತೆ ಕೇಳುತ್ತವೆ. ಆದರೆ ಭೂಪ್ನ ಗಾಂಧಾರ ಉಳಿದ ಎರಡರ ಗಾಂಧಾರಕ್ಕಿಂತ ಭಿನ್ನ. ಒಂದು ನಿರ್ದಿ? ಸ್ವರದ ಸರಿಯಾದ ಸ್ಥಳವನ್ನು ಗುರುತಿಸುವುದು ಸವಾಲು ನೀಡುವಂಥದ್ದು. ಏಕೆಂದರೆ ಅದು ಜಾರುವ ದಾರಿ – ಸ್ವರದ ಜಗತ್ತಿನಲ್ಲಿ ಆದಿ-ಅಂತ್ಯ ಎಂಬುದಿಲ್ಲ. ಅದಕ್ಕೆ ಮಿತಿ ಇಲ್ಲ; ಅದು ಅಳತೆಗೆ ಸಿಗುವುದಿಲ್ಲ. ನಾನು ಸ್ವರಗಳ (ನೋಟ್ಸ್) ಮೂಲಕ ಭಾವನೆಗಳನ್ನು ಹೊರಹಾಕಲು ಪ್ರಯತ್ನಿಸುತ್ತೇನೆ” ಎಂದವರು ಹೇಳಿದ್ದರು.
ಸಾಹಿತ್ಯದ ಒಲವು
“ಇನ್ನು ಸಾಹಿತ್ಯದ ವಿಷಯ; ಬೋಲ್ ಮತ್ತು ಬಂದೀಶ್ಗಳು. ಉದಾಹರಣೆಗೆ ಬಾಗೇಶ್ರೀ ರಾಗದ ಒಂದು ಕೃತಿಯಲ್ಲಿ ರಾಧೆ ಕೃಷ್ಣನಿಗಾಗಿ ಎಲ್ಲ ಕಡೆ ಹುಡುಕುತ್ತಿದ್ದಾಳೆ. ಗೆಳತಿಯಲ್ಲಿ ನೆರವಾಗುವಂತೆ ಕೇಳುತ್ತಾಳೆ. ಆಗ ಸಿಗುವ ಆಶಾಕಿರಣ ಇದೆ ಎನ್ನುವ ಭಾವವು ಪಂಚಮದ ಒಂದು ಸ್ಪರ್ಶದಲ್ಲಿದೆ” ಎಂದ ಕಿಶೋರಿತಾಯಿ, ಭಾವನೆಗಳ ತೀವ್ರತೆಯನ್ನು ತಾನು ಬೇರೆಬೇರೆ ಜೋಡಣೆಗಳ ಮೂಲಕ ಮಾಡುತ್ತಿರುವುದಾಗಿ ಹೇಳಿದ್ದರು. ಮುಂದುವರಿದು “ಈ ದಿನಗಳಲ್ಲಿ ರಾಗ ಎಂಬುದೊಂದು ಕ್ಲೀ? ಆಗಿದೆ. ನನಗೆ ವಾದಿ- ಸಂವಾದಿ(ರಾಗದ ಅತಿಮುಖ್ಯ ಮತ್ತು ಎರಡನೇ ಮುಖ್ಯ ಸ್ವರ)ಯಲ್ಲಿ ನಂಬಿಕೆ ಇಲ್ಲ; ಹಾಗೆಯೇ ಪಕಡ್(ರಾಗವನ್ನು ಗುರುತಿಸಲು ನೆರವಾಗುವ ಸ್ವರಗಳು)ನಲ್ಲೂ ನಂಬಿಕೆ ಇಲ್ಲ. ನಿಜವೆಂದರೆ, ನಮ್ಮಲ್ಲಿ ರಾಗದ ಹನ್ನೊಂದು ಲಕ್ಷಣಗಳಿವೆ. ಅವು ರಾಗದ ವಾತಾವರಣವನ್ನು ಸೃಷ್ಟಿಸುತ್ತವೆ. ಆದ್ದರಿಂದ ಕೇವಲ ’ಮಪಧಾಗರೇಸಾ’ವನ್ನೇ ಏಕೆ ಅನುಸರಿಸಬೇಕು? ರಿ?ಭದಿಂದ ಸೀದಾ ಧೈವತಕ್ಕೆ, ಗಾಂಧಾರ ಅಥವಾ ಮಧ್ಯಮದಿಂದ ಸೀದಾ ಧೈವತಕ್ಕೆ ಏಕೆ ಹೋಗಬಾರದು? ನಾನು ನನಗೆ ಒಳಗಿನಿಂದ ಅನ್ನಿಸುವಂತೆ ಸ್ವರಗಳ ಚಿಂತನಾತ್ಮಕ ಬಳಕೆಯ ಮೂಲಕ ಅಭಿವ್ಯಕ್ತಿ ಮತ್ತು ಭಾವನೆಗಳ ವೈವಿಧ್ಯವನ್ನು ಶೋಧಿಸುತ್ತಾ ಹೋಗುತ್ತೇನೆ” ಎಂದವರು ಹೇಳಿದ್ದರು.
“ಗಾಯನ ಅಥವಾ ವಾದನದ ಅತಿಮುಖ್ಯ ಭಾಗ ಆಲಾಪ್. ಅದು ತಾಸುಗಟ್ಟಲೆ ನಡೆಯಬಹುದು. ಅದರಲ್ಲಿ ಗಮನಿಸಬೇಕಾದುದೆಂದರೆ ಅದನ್ನು ಚೆನ್ನಾಗಿ ಮಾಡಬೇಕು; ಪುನರುಕ್ತಿ ಸಲ್ಲದು. ಇವತ್ತಿನ ದುರಂತವೆಂದರೆ ಅದನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿಬಿಡುತ್ತಾರೆ. ಮತ್ತೆ ತಾಳವಾದ್ಯಗಳ ಸಹಕಾರದೊಂದಿಗೆ ಲಯದ ರೋಮಾಂಚನದತ್ತ ಧಾವಿಸುತ್ತಾರೆ. ಆದರೆ ಸಂಗೀತ ಇರುವುದು ಉದ್ರೇಕಿಸಲು ಅಥವಾ ಚಪ್ಪಾಳೆ ಗಿಟ್ಟಿಸಲು ಅಲ್ಲ” ಎಂದು ಅವರು ಅಂಥವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ರಾಗಗಳ ಬಗೆಗೆ ಕಿಶೋರಿ ಅಮೋನ್ಕರ್ ಅವರದ್ದು ಏಕಕಾಲಕ್ಕೆ ಭಾವನಾತ್ಮಕ ಮತ್ತು ಬೌದ್ಧಿಕ ನಿಲವು ಎಂದು ವಿಶ್ಲೇಷಿಸಲಾಗಿದೆ. ತನ್ನ ಸಂಗೀತದ ಬಗ್ಗೆ ಆಕೆ ತುಂಬ ಚಿಂತಿಸುತ್ತಿದ್ದರು. ನಮ್ಮ ಸಂಗೀತ ಏಕೆ ಶ್ರುತಿ ಪ್ರಧಾನ? ಕೇವಲ ಸ್ವರ-ಆಧಾರಿತ ಏಕೆ ಅಲ್ಲ ಎಂದೆಲ್ಲ ಅವರು ಯೋಚಿಸುತ್ತಿದ್ದರು. “ರಾಗದ ಎರಡು ಸ್ವರಗಳ ನಡುವಣ ಖಾಲಿಜಾಗದಲ್ಲಿ ಭಾವನೆಗಳ ಜಗತ್ತಿದೆ; ಏಕೆಂದರೆ ಅಲ್ಲಿ ಶ್ರುತಿ ಇದೆ. ಸೂಕ್ತ ಶ್ರುತಿಯನ್ನು ಸರಿಯಾಗಿ ಬಳಸಿದಾಗ ಒಂದು ರಾಗದ ಸ್ವರಗಳ ಜೋಡಣೆಯಾಗುತ್ತದೆ. ಅದರಿಂದ ರಾಗವು ಭಾವನೆಗಳ ಅಭಿವ್ಯಕ್ತಿಯ ಅಗಾಧ ಸಾಧ್ಯತೆಯನ್ನು ಪಡೆದುಕೊಳ್ಳುತ್ತದೆ” ಎಂದವರು ಸಂದರ್ಶನವೊಂದರಲ್ಲಿ ಹೇಳಿದ್ದರು. ತಮ್ಮ ಚಿಂತನೆಗಳನ್ನು ಅವರು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಗಳಲ್ಲಿ ಹೇಳಿದ್ದಿದೆ.
ಕ್ರಾಂತಿಕಾರಕ ಹೇಳಿಕೆಗಳನ್ನು ನೀಡಲು ಕಿಶೋರಿ ಅಮೋನ್ಕರ್ ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಒಮ್ಮೆ ಅವರು, “ಘರಾಣೆ ಎನ್ನುವಂಥದ್ದೇನೂ ಇಲ್ಲ. ಇರುವುದು ಸಂಗೀತ ಮಾತ್ರ. ಸಂಗೀತವನ್ನು ಘರಾಣೆಗಳಲ್ಲಿ ಬಂಧಿಸಿ ಇಡಲಾಗಿದೆ; ಅದು ಸಮಾಜವನ್ನು ಜಾತಿಗಳ ಮೂಲಕ ಒಡೆದಂತೆ. ಈ ಕಲೆಯ ಮಿತಿಗಳನ್ನು ಶಿ?ರಿಗೆ ಕಲಿಸಬಾರದು; ಏಕೆಂದರೆ ಮಿತಿಗಳೇ ಇಲ್ಲ. ಆದರೆ ನಮಗೆ ಇದರ ವ್ಯಾಕರಣ ಗೊತ್ತಿರಬೇಕು; ಅದಕ್ಕಾಗಿಯೇ ಅಲಂಕಾರ ಮತ್ತು ರಾಗಗಳನ್ನು ಕಲಿಸುವುದು” ಎಂದು ಅಭಿಪ್ರಾಯ ಪಟ್ಟಿದ್ದರು.
ನಾಪತ್ತೆಯಾದ ಸ್ವರ
೧೯೬೦-೭೦ರ ದಶಕಗಳಲ್ಲಿ ಕಿಶೋರಿ ಅಮೋನ್ಕರ್ ದೊಡ್ಡ ಸಂಖ್ಯೆಯ ಶ್ರೋತೃಗಳಿಗೆ (ಪ್ರತಿಷ್ಠಿತ ಕಚೇರಿಗಳು) ಹಾಡಲು ಆರಂಭಿಸಿದರು. ಅವರ ಸಂಗೀತ ಕ್ಯಾಸೆಟ್ ಮತ್ತು ರೆಕಾರ್ಡ್ಗಳ ಮೂಲಕ ಖಾಸಗಿ ಸಂಗ್ರಹಗಳಿಗೆ ಸೇರಿತು. ಆಗ ಎರಗಿದ್ದು ಅವರು ಸ್ವರವನ್ನು ಪೂರ್ತಿಯಾಗಿ ಕಳೆದುಕೊಂಡ ಸಂದರ್ಭ. ವಯಸ್ಸು ೨೫ ವರ್ಷ ಆಗುವಾಗ ಶಾರೀರ ಇದ್ದಕ್ಕಿದಂತೆ ಪೂರ್ತಿಯಾಗಿ ಕುಸಿಯಿತು; ಏನಾದರೂ ಬೇಕಿದ್ದರೆ ಬರೆದುತೋರಿಸಬೇಕಾದ ಪರಿಸ್ಥಿತಿ. ಆಧುನಿಕ ಔಷಧಗಳು, ವ್ಯಾಯಾಮ ಯಾವುದೂ ಫಲ ನೀಡಲಿಲ್ಲ. ಸುಮಾರು ಎರಡು ವ? ಆ ದೈನ್ಯಾವಸ್ಥೆ ಮುಂದುವರಿಯಿತು. ತನ್ನ ಸಾಧನಾ ಕೊಠಡಿಯಲ್ಲಿ ಕತ್ತಲೆಯಲ್ಲಿ ಕುಳಿತುಕೊಂಡು ಏನನ್ನೋ ಚಿಂತಿಸುತ್ತಿದ್ದರು. ಆಗ ಪುಣೆಯ ಸಂತ ಸರ್ದೇಶ್ಮುಖ್ ಮಹಾರಾಜ್ರನ್ನು ಭೇಟಿ ಮಾಡಿದರು; ಅವರ ಮಾರ್ಗದರ್ಶನ ಮತ್ತು ಆಯುರ್ವೇದ ಚಿಕಿತ್ಸೆಯಿಂದ ಸ್ವರ ಮರಳಿತು. ಒಮ್ಮೆ ಆ ಅವಧಿಯ ಬಗ್ಗೆ ಪ್ರಶ್ನೆ ಬಂದಾಗ ಆಕೆ “ನನ್ನ ಸ್ವರ ಮರಳುತ್ತದೆಂಬ ಗಟ್ಟಿ ನಂಬಿಕೆ ಇತ್ತು. ಆಗ ನಾನು ’ಆಹತನಾದ’ದ ಬದಲು ’ಅನಾಹತನಾದ’ದ ಬಗ್ಗೆ ಗಮನಿಸುತ್ತಿದ್ದೆ; ಮತ್ತು ನನ್ನ ಸಂಗೀತದ ಕುರಿತು ಧ್ಯಾನಿಸುತ್ತಿದ್ದೆ” ಎಂದು ಉತ್ತರಿಸಿದ್ದರು. “ಹೊರಗಡೆ ಹಾಡಲು ಗಂಟಲು ಇಲ್ಲದಿದ್ದರೇನು? ನನ್ನೊಳಗೆ ಹಾಡಿಕೊಳ್ಳಬಹುದಲ್ಲ? ನಾನು ಅದನ್ನೇ ಮಾಡುತ್ತಿದ್ದೆ. ಅಂತರಂಗಕ್ಕೆ ಬದ್ಧವಾಗಿ ಹಾಡುವುದು, ನನಗೆ ನಾನು ನಿಷ್ಠಳಾಗಿ ಸ್ವರ ತೆಗೆಯುವುದು. ಆಗ ಅರ್ಥವಾಯಿತು. ಮುಂದೆ ಸ್ವರ ಬಂದ ಅನಂತರ ನಾನು ಹಾಡಿದ್ದು ಪ್ರೇಕ್ಷಕರಿಗಾಗಿ ಇರಲಿಲ್ಲ, ಕಛೇರಿ ಮುಗಿದ ಬಳಿಕ ನಾನು ಕೈಜೋಡಿಸುವುದು ಪ್ರೇಕ್ಷಕರ ರೂಪದಲ್ಲಿ ಎದುರು ಕಾಣುವ ರಾಘವೇಂದ್ರಸ್ವಾಮಿಗಳಿಗೆ ಆಗಿರುತ್ತಿತ್ತು” ಎಂದು ಆಕೆ ಹೇಳಿದ್ದರು. ಆ ಅವಧಿಯ ಒಂದು ಉತ್ಪನ್ನವೆಂಬಂತೆ ಕಿಶೋರಿ ಬಹಳಷ್ಟು ಅಧ್ಯಾತ್ಮದ ಮೊರೆಹೊಕ್ಕರು. ರಾಘವೇಂದ್ರಸ್ವಾಮಿಗಳ ಭಕ್ತೆಯಾಗಿ ಮಾರ್ಪಟ್ಟ ಅವರು ಕನ್ನಡದಲ್ಲೂ ಕೀರ್ತನೆಗಳನ್ನು ಹಾಡಿದ್ದರು.
ಸಂಗೀತ: ಕಿಶೋರಿ ಅಮೋನ್ಕರ್ ಕಂಡಂತೆ
- ಶಾಸ್ತ್ರೀಯ ಸಂಗೀತವನ್ನು ಕುರಿತು ಅಪೂರ್ವ ಒಳನೋಟಗಳಿರುವ ಬಹಳ? ಮಾತುಗಳನ್ನು ಕಿಶೋರಿ ಅಮೋನ್ಕರ್ ವಿವಿಧ ಸಂದರ್ಭಗಳಲ್ಲಿ ಹೇಳಿದ್ದಾರೆ; ಅವುಗಳಲ್ಲಿ ಕೆಲವು ಹೀಗಿವೆ:
- ಉತ್ತರಭಾರತದಲ್ಲಿ ಶಾಸ್ತ್ರೀಯ ಸಂಗೀತವನ್ನು ಮನೋರಂಜನೆ ಎಂದು ನೋಡುತ್ತಾರೆ; ನಾನದರ ವಿರೋಧಿ. ನಾವು ಹಾಡುವಾಗ ಜನ ಹಾಲಿನೊಳಗೆ ಬರುವುದು, ಹೋಗುವುದು ಮಾಡುತ್ತಿರುತ್ತಾರೆ. ಮದ್ರಾಸಿನಲ್ಲೂ (ಚೆನ್ನೈ) ಅಷ್ಟು. ಅದು ಅವರ ತಪ್ಪಲ್ಲ. ತಿರುಪತಿಯ ಬಾಲಾಜಿ ನಿಮ್ಮ ಮುಂದೆ ನಿಂತಿದ್ದರೆ ನೀವೇನು ಮಾಡುತ್ತೀರಿ? ನಿಂತಲ್ಲಿಂದ ಕದಲುವುದಿಲ್ಲ, ಅಲ್ಲವೆ? ನಾನು ನನ್ನನ್ನು ಮರೆತು ಹಾಡುವುದು, ನೀವು ನಿಮ್ಮನ್ನು ಮರೆತು ಕೇಳುವುದು ಆಗಬೇಕು.
- ಸಂಗೀತ ಹಾಡುವುದು, ತಾಲೀಮು ನಡೆಸುವುದು, ಕಚೇರಿ ಮಾಡುವುದು ಎಲ್ಲವೂ ಬೇರೆ ಬೇರೆ. ಇವು ಸಂಗೀತದ ಮೂರು ಮುಖಗಳು. ನಾನು ಹಾಡುವುದಕ್ಕೆ ಮಹತ್ತ್ವ ನೀಡುತ್ತೇನೆ. ಅದು ನಿಮ್ಮ ಆತ್ಮದ ಜೊತೆಗೆ ಮಾತನಾಡಿದಂತೆ; ಅದೊಂದು ಬಗೆಯ ಸಂಪರ್ಕ.
- ನನ್ನ ಪ್ರಕಾರ ಭಾರತೀಯ ಸಂಗೀತವೆಂದರೆ ಭಾವನೆಗಳ ಅಭಿವ್ಯಕ್ತಿ. ನಾನು ’ಐ ಲವ್ ಯು’ ಎಂದರೆ ನಿಮಗೆ ಅದನ್ನು ಅಳೆಯಲು ಸಾಧ್ಯವೆ? ನೀವು ಆ ಕಂಪನ(ವೈಬ್ರೇಶನ್)ವನ್ನು ಅನುಭವಿಸಬೇಕ?. ನಾವು ನಮ್ಮ ಸಂಗೀತವನ್ನು ಕೆಲವು ಚೌಕಟ್ಟುಗಳಿಗೆ ಒಳಪಡಿಸಿದ್ದೇವೆ. ಉತ್ತರಭಾರತದಲ್ಲಿ ಪ್ರತಿ ರಾಗವನ್ನೂ ಆಲಾಪ್, ವಿಸ್ತಾರ್, ಅನಂತರ ಆಲಾಪ್ಗಳಿಗೆ ಶಬ್ದಗಳನ್ನು ಹಾಕುವುದು, ತಾನ್ನಲ್ಲಿ ಶಬ್ದಗಳು, ಮತ್ತೆ ದ್ರುತ್ – ಹೀಗೆ ನಿರ್ದಿಷ್ಟ ರೀತಿಯಲ್ಲಿ ಹಾಡಲಾಗುತ್ತದೆ. ನನ್ನ ಪ್ರಕಾರ ಇಲ್ಲಿ ದ್ರುತ್ ಹಾಡುವುದು ಅಗತ್ಯವಿಲ್ಲ. ಏಕೆಂದರೆ ಅದು ಬೇರೆಯದೇ ಆದ ಭಾವನೆಯನ್ನು ನೀಡುತ್ತದೆ. ಅಶಾಂತ ಸ್ಥಿತಿಯಲ್ಲಿದ್ದಾಗ ಅಥವಾ ತೀವ್ರವಾದ ಭಾವನೆ ಇದ್ದಾಗ ಅದನ್ನು ಹಾಡಬೇಕು; ಆದರೆ ನಾವು ಹಾಗೆ ಮಾಡುವುದಿಲ್ಲ.
- ಕರ್ನಾಟಕ ಸಂಗೀತದಲ್ಲಿ ಕೂಡ ಭಾವನೆಗಳ ನಿರಂತರತೆಗೆ ಅಡ್ಡಿಯುಂಟುಮಾಡಲಾಗುತ್ತದೆ. ಕಚೇರಿ ನಡೆಯುವಾಗ ವಯೊಲಿನ್ಗೆ ಕೆಲವು ಸಮಯ ಮತ್ತು ಮೃದಂಗಕ್ಕೆ ಕೆಲವು ಸಮಯ ಬ್ರೇಕ್ ಕೊಡಲಾಗುತ್ತದೆ; ಅಂದರೆ ಅದು ಭಾವನೆಗಳಿಂದ ಬ್ರೇಕ್.
- ಭಾರತೀಯ ಸಂಗೀತ ಒಂದೇ ಎಂಬುದು ನನ್ನ ಭಾವನೆ. ಎರಡು ಪದ್ಧತಿಗಳು ಪ್ರಾಯೋಗಿಕವಾಗಿ, ಪರಿಸರದ ಸಾಂಸ್ಕೃತಿಕ ಶಕ್ತಿಯಿಂದ ಬಂದಂಥವು. ಸಂಗೀತ ವೈಶ್ವಿಕ(ಯೂನಿವರ್ಸಲ್)ವಾದದ್ದು; ನೀವು ಚೌಕಟ್ಟು ಬದಲಿಸಬಹುದು. ಆದರೆ ಭಾವನೆಗಳನ್ನು ಬದಲಿಸಲು ಅಸಾಧ್ಯ. ಇದು ಸ್ವರಗಳ ಲೋಕ. ನೀವು ತುಂಬಾ ಸಾಹಿತ್ಯ ಅಥವಾ ತುಂಬಾ ಲಯದ ದೊಂಬರಾಟವನ್ನು ಸೇರಿಸಬಾರದು. ತಾಳವಾದ್ಯದವರೊಂದಿಗೆ ನಡೆಸುವ ದೊಂಬರಾಟ ಸಂಗೀತವಲ್ಲ. ಇದೆಲ್ಲ ಕೇವಲ ಕಸರತ್ತು. ಕಸರತ್ತಿನ ಕಲಾವಿದರು ಶ್ರೋತೃಗಳನ್ನು ಶೋಷಿಸುತ್ತಾರೆ. ಕಚೇರಿಯಿಂದ ಉದ್ರೇಕಗೊಳ್ಳಬೇಕೆಂದು ಶ್ರೋತೃಗಳಿಗೆ ಅನ್ನಿಸುವಂತೆ ಮಾಡುತ್ತಾರೆ. ಇದು ಭಾರತದ ಶಾಸ್ತ್ರೀಯ ಸಂಗೀತದ ತತ್ತ್ವಕ್ಕೆ ವಿರುದ್ಧವಾದದ್ದು; ಭಾರತೀಯ ಸಂಗೀತದ ಗುರಿ ಶಾಂತಿಯನ್ನು ತರುವುದು.
ಮೌನಿಯಾಗಿದ್ದ ಆ ಅವಧಿಯಲ್ಲಿ ಕಿಶೋರಿ ಅಮೋನ್ಕರ್ ಸಂಗೀತದ ಬಗ್ಗೆ ಆಳವಾಗಿ ಚಿಂತಿಸಿದರು. ಮರಳಿ ಹಾಡಲು ಆರಂಭಿಸಿದಾಗ ಆಕೆಗೆ ನಿಯಮಗಳನ್ನು ಮುರಿದು ತನ್ನದಾದ ಶೈಲಿಯನ್ನು ರೂಪಿಸಲು ಸುಲಭವಾಯಿತು. ಸಂಗೀತದ ವಲಯದಲ್ಲಿ ಅದು ಅಪರೂಪದ ಸಂದರ್ಭ. “ಆರಂಭದಿಂದಲೂ ನನಗೆ ನಾನು ತುಂಬ ಒಂಟಿ ಎನಿಸುತ್ತಾ ಇತ್ತು. ಅದಕ್ಕೆ ಮೊದಲ ಕಾರಣ ಅಮ್ಮ ಏನು ಕಲಿಸುತ್ತಿದ್ದಳೆಂಬುದು ನನಗೆ ಗೊತ್ತಿರಲಿಲ್ಲ. ನಿರಂತರ ಗಾಯನ ಮತ್ತು ಕಲಿಕೆಯಿಂದ ಸ್ವರ (ಸುರ್) ಎಂದರೇನೆಂದು ಸ್ವಲ್ಪ ತಿಳಿಯಿತು. ಅದರಿಂದ ಸ್ವರಗಳ ಏರಿಳಿತದ ಬಗ್ಗೆ ಸ್ವಲ್ಪ ತಿಳಿಯಿತು. ಶುದ್ಧಕಲ್ಯಾಣ್ ರಾಗದ ರೇ(ರಿ?ಭ್) ಮತ್ತು ಭೂಪ್ನ ರೇ ನಡುವಣ ವ್ಯತ್ಯಾಸ ಏನೆಂದು ತಿಳಿಯಿತು. ಸ್ವರ ಅದೇ. ಆದರೆ ಈ ರಾಗಗಳಲ್ಲಿ ಅದು ಕಾಣಿಸಿಕೊಳ್ಳುವ ರೀತಿ ಸ್ವಲ್ಪ ಭಿನ್ನ. ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನನ್ನೊಳಗೆ ಆಳವಾಗಿ ಇಳಿದು ನೋಡಬೇಕಾಯಿತು. ಆಗ ರಾಗಗಳು ಜೀವಂತ ವ್ಯಕ್ತಿಗಳಂತೆ ಕಂಡವು. ಒಂದು ರಾಗವನ್ನು ಪ್ರೀತಿಯಿಂದ ಚಿತ್ರಿಸುತ್ತಾ ಅದರ ಪರಮೋಚ್ಚ ಸ್ವರವನ್ನು ತಲಪಿದಾಗ ರಾಗ ನಮ್ಮ ಮುಂದೆ ಒಬ್ಬ ವ್ಯಕ್ತಿಯಂತೆ ನಿಲ್ಲಬೇಕು. ಆ ವ್ಯಕ್ತಿಯನ್ನು ನಾನು ನೋಡುತ್ತಿದ್ದೇನೆ. ನೀವು (ಶ್ರೋತೃಗಳು) ಕೂಡ ನೋಡುವಂತೆ ಗಾಯನ ಇರಬೇಕು. ಸಂಗೀತದ ಮೂಲಕ ನಾನು ಅಮೂರ್ತವನ್ನು ಅನುಭವಿಸುತ್ತಿದ್ದೇನೆ. ಆದ್ದರಿಂದಲೇ ನೀವು ನನ್ನನ್ನು ಕೇಳುತ್ತೀರಿ” ಮುಂತಾಗಿ ಅವರ ಮಾತುಗಳು ಆಧ್ಯಾತ್ಮಿಕದ ಸ್ವರೂಪವನ್ನು ಕೂಡ ಪಡೆದುಕೊಂಡುಬಿಡುತ್ತವೆ. ಕಿಶೋರಿ ಅವರ ಜೇನಿನ ಕಂಠದಲ್ಲಿ ಮೀರಾ ಮತ್ತು ಕಬೀರ್ ಭಜನ್ಗಳು ಶ್ರೋತೃಗಳಿಗೆ ತುಂಬ ಇಷ್ಟವಾದವು. ಅವು ಧ್ಯಾನದ ಅನುಭವವನ್ನು ನೀಡುತ್ತಿದ್ದವು.
ಕಣ್ಣ ಮುಂದೆ ರಾಗದ ಮೂರ್ತಿ
ನಾನು ಒಂದು ರಾಗವನ್ನು ಹಾಡಲು ನಿರ್ಧರಿಸಿದಾಗ (ಉದಾ – ಸಂಪೂರ್ಣ ಮಾಲಕಂಸ್) ನನಗೆ ಅದರ ದರ್ಶನ ಆಗಬೇಕು; ಇಲ್ಲವಾದರೆ ಅಲ್ಲಿ ಕಿಶೋರಿ ಮಾತ್ರ ಇರುತ್ತಾಳೆ. ಹಾಡುವ ರಾಗದ ಮಡಿಲಿನಲ್ಲಿ (ತೊಡೆಯ ಮೇಲೆ) ಕುಳಿತುಕೊಳ್ಳಬೇಕು. ರಾಗದೇವತೆಗೆ ಅಲ್ಲೇ ಸಾ?ಂಗ ನಮಸ್ಕರಿಸಬೇಕು. ಒಳಗಿನ ಭಾವನೆಗಳು ತೀವ್ರವಾದಾಗ ಒಂದು ಸ್ವರ ಹುಟ್ಟುತ್ತದೆ. ಅದು ನಿಮ್ಮ ಕಂಠದಿಂದ ಹೊರಹೊಮ್ಮಬೇಕು. ಏಳು ಸ್ವರಗಳ ನಡುವೆ ಶ್ರುತಿಗಳು ಇರುತ್ತವೆ. ಸ್ವರಗಳ ನಡುವೆ ಶ್ರುತಿ ಕೆಲಸ ಮಾಡುವುದು ಹಿಂದೂಸ್ತಾನಿ ಸಂಗೀತದ ಸಾರ. ಬೇರೆ ಯಾವುದೇ ಸಂಗೀತಪ್ರಕಾರದಲ್ಲಿ ಶ್ರುತಿಗಳ ಈ ಪರಿಕಲ್ಪನೆ ಇಲ್ಲ. ಅಪರಿಮಿತವಾದ ಈ ಶ್ರುತಿಗಳಿಗೆ ನೊಟೇಶನ್ ಹಾಕುವುದು ಅಸಾಧ್ಯ. ಆದ್ದರಿಂದ ನನ್ನ ಘರಾಣೆಯಲ್ಲಿ ಅದರ ನೊಟೇಶನ್ ಇಲ್ಲ. ಅದೇಕೆ ಬೇಕು? ನಾನು ನಿಸರ್ಗಕ್ಕೆ ಹತ್ತಿರವಿರಲು ಮತ್ತು ಕಲೆಯನ್ನು ಆದಷ್ಟು ಸಹಜ(ನೈಸರ್ಗಿಕ)ವಾಗಿ ಇರಿಸಲು ಬಯಸುತ್ತೇನೆ” ಎಂದು ಕಿಶೋರಿ ವಿವರಿಸಿದ್ದರು.
ಕಂಡದ್ದು ಕಂಡ ಹಾಗೆ
ನಿರ್ಭೀತಿ ಮತ್ತು ಅನಿಸಿದ್ದನ್ನು ಹಾಗೆಯೇ ಹೇಳುವುದಕ್ಕೆ ಪ್ರಸಿದ್ಧರಾದವರು ಗಾಯಕಿ ಪದ್ಮವಿಭೂ?ಣ ಕಿಶೋರಿ ಅಮೋನ್ಕರ್ ಅವರು. ಅವರ ಕೆಲವು ದಿಟ್ಟ ಹೇಳಿಕೆಗಳನ್ನು ಇಲ್ಲಿ ಗಮನಿಸಬಹುದು:
- ಮಹಾರಾಷ್ಟ್ರ ಸರ್ಕಾರ ತನ್ನ ’ಸಪ್ತರಂಗ್ ಉತ್ಸವ’ದಲ್ಲಿ ಶಾಸ್ತ್ರೀಯ ಸಂಗೀತದ ಜೊತೆಗೆ ಚಿತ್ರಸಂಗೀತ, ಸೂಫಿ ಸಂಗೀತ ಮತ್ತು ಗಜಲ್ಗಳನ್ನು ಕೂಡ ಸೇರಿಸುತ್ತದೆ. ಅದು ಸರಿಯಲ್ಲ. ನಿಮಗೆ ಲಯ (ತಾಳವಾದ್ಯಗಳ ಗದ್ದಲ) ಮತ್ತು ಗಲಾಟೆ ಮಾತ್ರ ಬೇಕಾದರೆ ಅಂಥವರನ್ನೇ ಕರೆದು ಕಾರ್ಯಕ್ರಮ ಮಾಡಿಸಿ; ಅದರಲ್ಲಿ ಶಾಸ್ತ್ರೀಯ ಸಂಗೀತವನ್ನು ಸೇರಿಸಿ ಅದರ ಪಾವಿತ್ರ್ಯಕ್ಕೆ ಅಗೌರವ ತೋರಿಸುವುದೇಕೆ?
- ರಿಯಾಲಿಟಿ ಶೋಗಳಲ್ಲಿ ಶಾಸ್ತ್ರೀಯ ಸಂಗೀತವೇ? ಏನು ರಿಯಾಲಿಟಿ? ಯಾರ ರಿಯಾಲಿಟಿ? ನಾನು ಅಂತಹ ಕೆಲವನ್ನು ನೋಡಿದ್ದೇನೆ. ಅಲ್ಲಿ ಹಾಡುಗಾರಿಕೆಯ ದೊಂಬರಾಟವನ್ನು ಮಕ್ಕಳಿಗೆ ಸಂಗೀತ ಎಂದು ತಿಳಿಸಲಾಗುತ್ತದೆ. ಅಲ್ಲಿ ಸ್ವರದ ಹಿಂದೆ ಹೋಗುವ ಕ್ರಮ ಇಲ್ಲ. ಅಲ್ಲಿನ ತೀರ್ಪುಗಾರರೆನ್ನುವ ಗುರು-ಮಹಾಗುರುಗಳು ಕಳಪೆಯಾದುದನ್ನು ಪ್ರೋತ್ಸಾಹಿಸುವ ಮೂಲಕ ಸಂಗೀತಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಈ ಸ್ಪರ್ಧೆಗಳನ್ನು ಅವರು ’ಮಹಾಯುದ್ಧ’ ಎಂದು ಕರೆಯುತ್ತಾರೆ. ಸಂಗೀತವು ಶಾಂತಿಯನ್ನು ತರಬೇಕೇ ಹೊರತು ಯುದ್ಧವನ್ನಲ್ಲ.
- ಸರ್ಕಾರ ನನಗೆ ’ಭಾರತರತ್ನ’ ಪ್ರಶಸ್ತಿಯನ್ನು ಕೊಡುವುದು ಬೇಡ. ಸಚಿನ್ ತೆಂಡೂಲ್ಕರ್ಗೆ ಅದನ್ನು ನೀಡಿರುವಾಗ ನನ್ನನ್ನು ಆ ವಿಭಾಗ(ಕೆಟಗರಿ)ದಲ್ಲಿ ಸೇರಿಸದಿರುವುದೇ ಉತ್ತಮ.
- ವಿಶ್ವವಿದ್ಯಾಲಯಗಳಲ್ಲಿ ಸಂಗೀತಬೋಧನೆಯ ಕ್ರಮ ಸರಿಯಾಗಿಲ್ಲ. ಸಂಗೀತದಲ್ಲಿ ಎಂ.ಫಿಲ್., ಪಿಎಚ್.ಡಿ. ಮಾಡಿದವರಿಗೂ ತಂಬೂರಿ ಶ್ರುತಿ ಮಾಡುವುದು ಹೇಗೆ, ರಿಯಾಜ್ ಮಾಡುವ ಕ್ರಮ ಹೇಗೆ ಎಂಬುದು ಗೊತ್ತಿರುವುದಿಲ್ಲ. ನಿಜವೆಂದರೆ ಇಂದಿನ ಬೋಧನಾಕ್ರಮವೇ ಪ್ರಶ್ನಾರ್ಹವಾಗಿದೆ. ಸಂಗೀತದಂತಹ ಭಾರತೀಯ ವಿಷಯಗಳನ್ನು ಭಾರತೀಯ ಕ್ರಮದಲ್ಲೇ ಕಲಿಸಬೇಕು. ಪಾಶ್ಚಾತ್ಯ ಕ್ರಮದಲ್ಲಲ್ಲ. ನನ್ನ ತಾಯಿ ನನಗೊಂದು ರಾಗವನ್ನು ಕಲಿಸುವಾಗ ಅದು ಥಿಯರಿಯ ಕಲಿಕೆ ಕೂಡಾ ಆಗಿರುತ್ತಿತ್ತು; ಥಿಯರಿ ನಾವು ಪ್ರ್ಯಾಕ್ಟಿಸ್ ಮಾಡುವುದಕ್ಕಿಂತ ಭಿನ್ನ ಅಲ್ಲ. ಸಂಗೀತವನ್ನು ಸಣ್ಣ ಪ್ರಾಯದಿಂದಲೇ ಕಲಿಸಬೇಕು. ಸಾವಿರದಲ್ಲಿ ಒಂದು ಮಗುವಿನಲ್ಲಿ ಬೆಳಕಿನ ಕಿಡಿ ಹೊತ್ತಿಕೊಂಡರೂ ಆ ಪ್ರಯತ್ನ ಸಾರ್ಥಕ.
- “ನೀವು ಸಂದರ್ಶನ ಮಾಡಲು ಇಲ್ಲಿಗೆ (ನಿವಾಸಕ್ಕೆ) ಬಂದುದರಿಂದ ಸಂತೋ?ವಾಯಿತು. ಆದರೆ ನಿಮ್ಮ ಪ್ರಶ್ನೆಗೆ ನಾನು ಉತ್ತರಿಸುವ ಮೊದಲು ನಿಮಗೆ (ಶಾಸ್ತ್ರೀಯ) ಸಂಗೀತದ ಬಗ್ಗೆ ಎ? ಗೊತ್ತು ಎಂಬುದು ನನಗೆ ತಿಳಿಯಬೇಕಾಗಿದೆ.”
(ಸಂದರ್ಶಕರೊಬ್ಬರಿಗೆ ಹೇಳಿದ್ದು)
ಫ್ಯೂಶನ್ ಸಂಗೀತದಲ್ಲಿ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸುವುದೆಂಬ ಹೆಸರಿನಲ್ಲಿ ರಾಗಗಳನ್ನು ತೆಳುಗೊಳಿಸಲಾಗುತ್ತದೆ. ಆದರೆ ಪ್ರೀತಿಯನ್ನು ಹಂಚಿಕೊಳ್ಳಲು ಸಾಧ್ಯವೇ? ’ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಎಂಬುದು ಸಂಗೀತದ ಮೂಲಕ ನಾನು ಎಲ್ಲರಿಗೂ ನೀಡಬಯಸುವ ಸಂದೇಶ. ಪ್ರೀತಿಯನ್ನು ಹೇಗೆ ಅಭಿವ್ಯಕ್ತಿಸಬೇಕೆಂಬುದು ಆಯಾ ಸಂಗೀತಗಾರರಿಗೆ ಬಿಟ್ಟ ವಿಷ.
ಸಂಗೀತದಲ್ಲಿ ನಿಮ್ಮ ಯಾವುದಾದರೂ ಆಶೋತ್ತರ ಈಡೇರದೆ ಉಳಿದಿದೆಯೆ? – ಎನ್ನುವ ಪ್ರಶ್ನೆಗೆ ಆಕೆ “ನಾನು ಈಗಷ್ಟೆ ಆರಂಭಿಸಿದಂತಿದೆ. ನಾನೇನೂ ಕಲಿತಿಲ್ಲ. ಏಕೆಂದರೆ ಸ್ವರದ ಮೇಲೆ ನನಗೆ ಈಗಲೂ ಹಿಡಿತ ಇಲ್ಲ. ಸ್ವರ ಎಂಬುದು ಗಾಳಿಯಾದರೆ ನಾನು ಕಾಂಕ್ರೀಟ್. ನನ್ನ ಕಂಠದಿಂದ ಪರಿಪೂರ್ಣ ಸ್ವರ ಬಂದ ದಿನ ನನ್ನ ದೇಹ ಉಳಿದಿರುವುದಿಲ್ಲ; ಆಗಲೇ ಸಾಯುತ್ತೇನೆ. ನಾನು ಆ ರೀತಿ ಸಾಯಬೇಕೆಂಬುದು ದೇವರಲ್ಲಿ ನನ್ನ ಪ್ರಾರ್ಥನೆ” ಎಂದು ಉತ್ತರಿಸಿದ್ದರು.
ಆದರೆ ಕಿಶೋರಿ ಅವರು ಶಾಸ್ತ್ರೀಯ ಪರಂಪರೆಯಲ್ಲಿ ತನ್ನ ಘರಾಣೆಯ ಸಂಪರ್ಕವನ್ನು ಕಡಿದುಕೊಂಡು ಬೇರೆ ವಿಷಯಗಳನ್ನು ಸೇರಿಸಿದ್ದು ಕೆಲವು ಮಡಿವಂತರಿಗೆ ’ದೈವನಿಂದೆ’ಯಂತೆ ತೋರಿತು. ಕಿಶೋರಿತಾಯಿ ಅವರ ಭೂಪ್ ರಾಗದ ವಿನಿಕೆ ವ್ಯಾಪಕ ಶ್ಲಾಘನೆಗೆ ಪಾತ್ರವಾದದ್ದು. ಆದರೆ ಮಡಿವಂತರು ಅದನ್ನು ತಿರಸ್ಕರಿಸಿ ಅದು ಭೂಪ್, ದೇಶ್ಕಾರ್ ಮತ್ತು ಶುದ್ಧಕಲ್ಯಾಣ್ಗಳ ನಡುವೆ ಸುಳಿದಾಡುತ್ತವೆ ಎಂದರು. ಆ ಸಂಬಂಧವಾಗಿ ಆಕೆ ಹೀಗೆ ಹೇಳಿದ್ದಾರೆ: “ಜನ ನನ್ನನ್ನು ಬಂಡುಕೋರಳೆಂದು ಕರೆಯುತ್ತಾರೆ. ಆದರೆ ನನಗೆ ಹಾಗೆನಿಸುವುದಿಲ್ಲ. ನಾನು ತೀವ್ರವಾದಿ; ಸತ್ಯವನ್ನು ಹೇಳುತ್ತೇನೆ. ನೀವು ಅತ್ಯುಚ್ಚ ಸ್ಥಿತಿಗೆ ತಲಪಿದಾಗ ಅಮೂರ್ತವೂ (ಚಿbsಣಡಿಚಿಛಿಣ) ರೂಪವನ್ನು ಪಡೆದುಕೊಳ್ಳುತ್ತದೆ. ಆಗ ವಿಮರ್ಶಕರ ಮಾತಿಗೆ ಬೆಲೆ ಇರುವುದಿಲ್ಲ. ನಾನೇ ನನ್ನ ಬಹುದೊಡ್ಡ ವಿಮರ್ಶಕಿ”. ಇದು ಕೇವಲ ಮಾತಲ್ಲ. ಲೈವ್ ಕಚೇರಿಗಳ ಟೇಪ್ಗಳನ್ನು ಮನೆಯಲ್ಲಿ ಕೇಳಿ ತಪ್ಪುಗಳನ್ನು ಸರಿಮಾಡಿಕೊಳ್ಳುವ ಕ್ರಮವನ್ನು ಅವರು ಅನುಸರಿಸುತ್ತಿದ್ದರಂತೆ.
“ನಮ್ಮ ಸಂಗೀತವು ಐದನೇ ವೇದ. ವೇದಗಳು ನಮಗೆ ಬ್ರಹ್ಮವಿದ್ಯೆಯನ್ನು ಕಲಿಸುತ್ತವೆ. ಸಂಗೀತವೆಂಬ ದಿವ್ಯಕಲೆಯ ಬಗ್ಗೆ ನೀವು ಚಿಂತಿಸುತ್ತಾ ಧ್ಯಾನಿಸುತ್ತಾ ಹೋದರೆ ಒಂದು ಸ್ವರದ ಅಂತಿಮಗುರಿಯನ್ನು ತಲಪುತ್ತೀರಿ. ಅದೇ ಬ್ರಹ್ಮ. ಅದನ್ನು ತಲಪಲು ನಾನು ಪ್ರಯತ್ನಿಸುತ್ತೇನೆ. ಈ ಕಲೆಗೆ ಧ್ಯಾನ ಅಗತ್ಯ. ನಾನು ಜನರನ್ನು ಪ್ರೀತಿಸುವುದಿಲ್ಲ ಎಂದಲ್ಲ; ಅವರಿಂದಾಗಿಯೇ ನಾನು ಈ ಮಟ್ಟಕ್ಕೆ ಏರಿದ್ದೇನೆ. ನಾನು ನಿಮ್ಮೆಲ್ಲರನ್ನು (ಶ್ರೋತೃಗಳನ್ನು) ರಾಘವೇಂದ್ರಸ್ವಾಮಿಗ ಅವತಾರ ಎಂದು ತಿಳಿಯುತ್ತೇನೆ. ನಾನು ಹಾಡಿದಾಗ ನೀವು ರಾಘವೇಂದ್ರರಾಗುತ್ತೀರಿ” ಎನ್ನುವ ಮಟ್ಟಕ್ಕೆ ಅವರು ಸಂಗೀತವನ್ನು ಒಯ್ಯುತ್ತಾರೆ.
ಕೋಪ-ಸಿಡುಕು
ಕಿಶೋರಿ ಅಮೋನ್ಕರ್ ಅವರ ಕೋಪ-ತಾಪ- ಸಿಡುಕುಗಳು ಅವರ ಸಂಗೀತದ? ಪ್ರಸಿದ್ಧ ಎಂದರೆ ತಪ್ಪಲ್ಲ. ಶ್ರೋತೃಗಳೊಂದಿಗೆ ವ್ಯವಹರಿಸುವಾಗ ಅವರಿಗೆ ತಾಳ್ಮೆ ಕಡಮೆ; ಸಿಟ್ಟಾಗುವುದು, ಸಿಡುಕಿನಿಂದ ನಡೆದುಕೊಳ್ಳುವುದು ಮಾಮೂಲು. ಆಕೆಯನ್ನು ಹಲವು ಸಲ ಮೋಗುಬಾಯಿ ಅವರ ಸಮಕಾಲೀನರಾದ ಕೇಸರ್ಬಾಯಿ ಕೇರ್ಕರ್ ಅವರೊಂದಿಗೆ ಹೋಲಿಸುತ್ತಾರೆ; ಆಕೆ ಕೂಡ ಶ್ರೋತೃಗಳೊಂದಿಗೆ ಒರಟಾಗಿ ವರ್ತಿಸುತ್ತಿದ್ದರು. ಶ್ರೋತೃಗಳ ವರ್ತನೆ ಸರಿ ಇಲ್ಲ ಎಂದು ಅಥವಾ ಧ್ವನಿವರ್ಧಕ ತೊಂದರೆ ಕೊಡುತ್ತಿದೆ ಎಂದು ಕಿಶೋರಿ ಅವರು ಕಚೇರಿ ಮಧ್ಯದಲ್ಲಿ ಎದ್ದುಹೋದ ಘಟನೆಗಳೂ ಇವೆ.
ಅದರಲ್ಲಿ ಕಿಶೋರಿ ವ್ಯಕ್ತಿ ಯಾರೆಂದು ನೋಡಿದವರಲ್ಲ. ಕಾಶ್ಮೀರದ ಒಂದು ಕಚೇರಿಯಲ್ಲಿ ಹಿರಿಯ ರಾಜಕೀಯ ಮುಂದಾಳು ಫರೂಕ್ ಅಬ್ದುಲ್ಲಾ ಉಪಸ್ಥಿತರಿದ್ದರು. ಸಭೆಯಲ್ಲಿ ಹಣ್ಣಿನ ತಟ್ಟೆ ಅಡ್ಡಾಡುತ್ತಿತ್ತು. ಒಮ್ಮೆಗೇ ಹಾಡುವುದನ್ನು ನಿಲ್ಲಿಸಿದ ಕಿಶೋರಿತಾಯಿ ಅದು ನಿಂತ ಮೇಲೆ ಗಾಯನವನ್ನು ಮುಂದುವರಿಸಿದರು. ಒಮ್ಮೆ ಆ ಬಗ್ಗೆ ವಿವರಣೆ ನೀಡುತ್ತಾ “ಕಾಶ್ಮೀರದ ಒಂದು ಕಚೇರಿಯ ವೇಳೆ ಓರ್ವ ಉದ್ಯಮಿಯ ಪತ್ನಿ ನಾನು ಹಾಡುವಾಗ ಪಾನ್ಗೆ ಆರ್ಡರ್ ಮಾಡಿದಳು. ಆಗ ನಾನು ನಿಲ್ಲಿಸಿ ’ನಾನೇನಾದರೂ ಕೋಥಾದಲ್ಲಿ ಹಾಡುತ್ತಾ ಇದ್ದೇನೆಯೇ?’ ಎಂದು ಕೇಳಿದೆ. ದೆಹಲಿಯಲ್ಲಿ ಒಮ್ಮೆ ಕಚೇರಿ ಮಧ್ಯದ ಬ್ರೇಕ್ನಲ್ಲಿ ವಾಶ್ರೂಮಿಗೆ ಹೋಗಬೇಕು ಎಂದೆ. ಅಲ್ಲಿ ವ್ಯವಸ್ಥೆ ಇರಲಿಲ್ಲ. ಅದರಿಂದಾಗಿ ಉಳಿದುಕೊಂಡಿದ್ದ ಹೊಟೇಲಿಗೆ ಹೋಗಿಬರಬೇಕಾಯಿತು. ಅದರಿಂದ ಸ್ವಲ್ಪ ತಡವಾಗಿರಬೇಕು; ಹೀಗೆ ಆಡಿದರೆ ಯಾರಿಗೆ ಸಿಟ್ಟು ಬರುವುದಿಲ್ಲ ಹೇಳಿ?” ಎಂದು ಆಕೆ ವಾಪಸು ಪ್ರಶ್ನಿಸುತ್ತಾರೆ.
ಕೆಲವೊಮ್ಮೆ ಅವರು ವಿಪರೀತ ತಡಮಾಡಿದ ಕಾರಣ ಸಂಘಟಕರ ಕುತ್ತಿಗೆಗೆ ಬರುತ್ತಿತ್ತು. ಮುಂಬಯಿಯಲ್ಲಿ ಒಮ್ಮೆ ಹಾಲಿನಲ್ಲಿ ಶ್ರೋತೃಗಳು ಕಾದು ಸಹನೆ ಕಳೆದುಕೊಳ್ಳುತ್ತಿದ್ದರೆ ಆಕೆ ಮನೆಯಲ್ಲಿ ದೇವರ ಪೂಜೆಗೆ ಮಾಲೆ ಕಟ್ಟುತ್ತಿದ್ದರಂತೆ. ಬೇಗ ಬನ್ನಿ ಎಂದರೆ ಆಕೆ ಆಕ್ಷೇಪಿಸುತ್ತಾ, “ರಾಗದ ಸ್ವರೂಪವನ್ನು ಕಾಣಲು ನಾನು ಕಾಯುತ್ತಾ ಇದ್ದೇನೆ. ಅದಿಲ್ಲದೆ ಅಲ್ಲಿಗೆ ಸೀದಾ ಹೋಗಿ ಹಾಡುವುದು ಹೇಗೆ?” ಎಂದು ಪ್ರಶ್ನಿಸಿದರು. ಆಕೆಗೆ ಸಿದ್ಧಗೊಳ್ಳಲು ಒಂದೆರಡು ತಾಸೇ ಬೇಕಾಯಿತು. ಮುಂದೆ ಅದ್ಭುತವಾದ ಯಮನ್ ಹಾಡಿ ಶ್ರೋತೃಗಳನ್ನು ಖುಷಿಪಡಿಸಿದರೆಂಬುದು ಬೇರೆ ವಿಚಾರ.
ಏನಿದ್ದರೂ ಕಿಶೋರಿತಾಯಿ ಅವರ ಕಚೇರಿ ಎಂದರೆ ಸಂಘಟಕರು ಹೆದರಿಕೊಂಡು ಇರುತ್ತಿದ್ದುದು ಸತ್ಯ. ಮೂಗಿನ ಮೇಲೆ ಕೋಪ, ಬೈಗುಳ ಸದಾ ಸಿದ್ಧ. ಬಿಳಿಕಾರೇ ಬೇಕೆಂದು ಬೇಡಿಕೆ ಇಡುವರು. ವೇದಿಕೆಯ ಬೆಳಕು ಆಕೆಯತ್ತ ಮುಖ ಮಾಡಿರಬಾರದು. ವೇದಿಕೆಗೆ ಉಜ್ಜ್ವಲ ಬೆಳಕು ಸಲ್ಲದು; ಬಹುತೇಕ ಕತ್ತಲೆಯಲ್ಲೇ ಕುಳಿತು ಹಾಡುವುದು. ಮೋಗುಬಾಯಿ ಅವರ ಕಾಲದಲ್ಲಿ ಹೆಚ್ಚಿನ ಸಂಗೀತಗಾರ್ತಿಯರಿಗೆ ಕಲೆಯಲ್ಲಿ ಉನ್ನತ ಸಾಧನೆ ಇದ್ದರೂ ಸಂಘಟಕರು ಸರಿಯಾದ ಗೌರವ ಕೊಡುತ್ತಿರಲಿಲ್ಲ; ಕಿಶೋರಿ ಅವರು ಅದನ್ನು ಮರೆತಿರಲಿಲ್ಲ; ಕ್ಷಮಿಸಿರಲೂ ಇಲ್ಲ.
ಮನೋರಂಜನೆ ಅಲ್ಲ
ಅದಲ್ಲದೆ ತನ್ನ ಸಂಗೀತವನ್ನು ಕೇಳಲು ಬರುವವರು ಸಂಗೀತದ ಬಗ್ಗೆ ತನ್ನದೇ ರೀತಿಯ ತೀವ್ರಭಾವನೆಯನ್ನು ಹೊಂದಿರಬೇಕೆಂದು ಆಕೆ ಬಯಸಿದರು; ಸಂಗೀತವನ್ನು ಯಾರೂ ಲಘುವಾಗಿ ಪರಿಗಣಿಸಬಾರದು. ಆಕೆಯ ಹೋರಾಟ ಸಾಮಾಜಿಕವೂ ಹೌದು, ಆಧ್ಯಾತ್ಮಿಕವೂ ಹೌದು. “ಜನ ನಾನು ಮುಂಗೋಪಿ, ಉದ್ಧಟತನದವಳು ಎನ್ನುತ್ತಾರೆ. ಕಚೇರಿಯಲ್ಲಿ ನಾನು ನಗಾಡಿದ್ದು, ಶ್ರೋತೃಗಳ ಜೊತೆ ಮಾತನಾಡಿದ್ದು ಯಾರಾದರೂ ನೋಡಿದ್ದಾರಾ? ಆಗ ನಾನು ನನ್ನ ದೇಹವನ್ನು ಮರೆಯಬೇಕು. ಅದಕ್ಕೆ ನನಗೆ ಶ್ರೋತೃಗಳ ಸಹಕಾರ ಬೇಕು. ಅವರು ಮಧ್ಯಪ್ರವೇಶ ಮಾಡಬಾರದು. ಸಂಗೀತವು ಮನೋರಂಜನೆ ಅಲ್ಲ ಎಂಬುದನ್ನವರು ತಿಳಿದುಕೊಳ್ಳಬೇಕು. ನಾನು ಶ್ರೋತೃಗಳನ್ನು ಆಕರ್ಷಿಸಲು ಹಾಡುವುದಲ್ಲ. ಗ್ಯಾಲರಿಗಂತೂ ನಾನು ಹಾಡುವುದೇ ಇಲ್ಲ. ಶ್ರೋತೃಗಳು ಕಲಾವಿದರ ಏಕಾಂತಕ್ಕೆ ಭಂಗ ತರಬಾರದು. ನಾನು ಕತ್ತಲೆಯಲ್ಲೇ ಕುಳಿತು ಹಾಡುವುದಕ್ಕೆ ಕಾರಣವಿದೆ. ಮುಖದ ಮೇಲಿಂದ ಬೆಳಕು ಹಾಕಿದಾಗ ಧ್ಯಾನಸ್ಥ ಸ್ಥಿತಿಗೆ ಹೋಗಲು ಆಗುವುದಿಲ್ಲ” ಎಂದು ಆಕೆ ಒಮ್ಮೆ ತೋಡಿಕೊಂಡಿದ್ದರು.
“ಕಚೇರಿಗೆ ಮುನ್ನ ನಾನು ಯಾರನ್ನೂ ಗ್ರೀನ್ರೂಮಿಗೆ ಬಿಟ್ಟುಕೊಳ್ಳುವುದಿಲ್ಲ. ಕಚೇರಿ ಮುಗಿದ ಮೇಲೆ ಹಿರಿಯ ಸಂಗೀತಗಾರರು ಅಥವಾ ವಿಮರ್ಶಕರ ಜೊತೆ ಮಾತನಾಡುವುದಿಲ್ಲ. ಗ್ರೀನ್ರೂಮಿಗೆ ಯಾರನ್ನೂ ಬಿಡದಿರಲು ಕಾರಣವೇನೆಂದರೆ, ಅಲ್ಲಿ ನಾನು ನನ್ನ ರಾಗವನ್ನು ತಂಬೂರಿಯ ಜೊತೆ ಹೊಂದಿಸುತ್ತಾ ಇರುತ್ತೇನೆ. ಅದು ಸಾಧ್ಯವಾಗುವ ತನಕ ನನಗೆ ಕಾರ್ಯಕ್ರಮದ ಬಗ್ಗೆ ಆತ್ಮವಿಶ್ವಾಸ ಇರುವುದಿಲ್ಲ. ಕಚೇರಿಯ ಅನಂತರ ನಾನು ಇನ್ನೊಂದು ವಲಯದಲ್ಲಿರುತ್ತೇನೆ. ಯಾರ ಜೊತೆಗೂ ವ್ಯವಹರಿಸುವಷ್ಟು ಶಕ್ತಿ ಇರುವುದಿಲ್ಲ” ಎಂದು ಅವರು ವಿವರಣೆ ನೀಡಿದ್ದಿದೆ. “ಆಕೆಯದು ವಿಕ್ಷಿಪ್ತ ವರ್ತನೆ. ಮಹಾಮೂಡಿ. ಸಂಘಟಕರಿಗೆ ಕಿರಿಕಿರಿ. ಆಕೆಯ ಪ್ರಪಂಚದಲ್ಲಿ ಕಲೆಯ? ಮುಖ್ಯ, ಉಳಿದುದೆಲ್ಲ ಅಮುಖ್ಯ. ಇದು ಅಹಂಕಾರ ಅಲ್ಲ; ಸೃಜನಶೀಲತೆಯ ಬಗೆಗಿನ ಅಂತರ್ಮುಖತೆ” ಎಂದು ಸಮಾಧಾನ ಸೂಚಿಸಿದವರು ಲೇಖಕ, ಪ್ರಾಧ್ಯಾಪಕ ಕೆ. ಮಹಾಲಿಂಗಭಟ್.
ಸ್ವರಮಂಡಲ ಏಕೆ?
ಉಳಿದಂತೆ ಸರಳತೆಯೇ ಎದ್ದುಕಾಣುತ್ತಿದ್ದ ಕಿಶೋರಿ ಅವರ ದೇಹ ಎ? ಸಣಕಲೆಂದರೆ ತಂಬೂರಿಯನ್ನು ಆಧರಿಸಲು ಕಷ್ಟ ಎನಿಸುವಷ್ಟು. “ನಿಮಗೆ ಗೊತ್ತಾ, ನಾನು ಸ್ವರಮಂಡಲ ಬಳಸಲು ತೊಡಗಿದ್ದು ತಂಬೂರಿ ಹಿಡಿಯಲು ನನಗೆ ತ್ರಾಣವಿಲ್ಲದ್ದರಿಂದ. ಸ್ವರಮಂಡಲದ ಸಣ್ಣ ಸರಿಗೆಗಳ ಮೇಲೆ ಒಮ್ಮೆ ಬೆರಳು ಓಡಿದರಾಯಿತು; ರಾಗದ ಸೂಕ್ಷ್ಮಾತಿಸೂಕ್ಷ್ಮ ಸ್ವರಲೋಕಕ್ಕೆ ನಾನು ಸೇರಿಕೊಂಡಾಯಿತು” ಎಂದು ಆಕೆ ಒಮ್ಮೆ ವಿವರಣೆ ನೀಡಿದ್ದರು.
ಕಿಶೋರಿ ಅಮೋನ್ಕರ್ ಜೊತೆಗಿನ ತಮ್ಮ ನಿಡುಗಾಲದ ಒಡನಾಟವನ್ನು ಸ್ಮರಿಸಿಕೊಂಡ ಸಂತೂರ್ವಾದಕ ಪಂಡಿತ್ ಶಿವಕುಮಾರ್ ಶರ್ಮ ಅವರು, “ಬಹುಬೇಗ ನನಗೆ ಆಕೆ ಅಸಾಮಾನ್ಯ ಸಂಗೀತಗಾರ್ತಿ ಎನಿಸಿತು. ಹಲವು ಮಹಾನ್ ಸಂಗೀತಗಾರರಿದ್ದಾರೆ. ಅವರದ್ದೇ ವಿಶೇಷ ಇರುತ್ತದೆ. ಆದರೆ ಈಕೆ ಪೂರ್ತಿ ವಿಭಿನ್ನ ವ್ಯಕ್ತಿ” ಎಂದಿದ್ದಾರೆ. “ನನಗೆ ಆಕೆಯಲ್ಲಿ ಮೆಚ್ಚುಗೆಯಾದ ಮೊದಲ ಅಂಶವೆಂದರೆ, ವೇದಿಕೆಗೆ ಬಂದಾಗ ಆಕೆಯ ಉದ್ದೇಶ ಮನೋರಂಜನೆ ಆಗಿರುವುದಿಲ್ಲ. ಆಕೆ ತುಂಬ ಆಧ್ಯಾತ್ಮಿಕತೆ ಇದ್ದವರು. ಆಕೆ ಶ್ರೋತೃಗಳತ್ತ ನೋಡುತ್ತಿರಲಿಲ್ಲ; ತನ್ನಲ್ಲೇ ಮುಳುಗಿ ಇರುತ್ತಿದ್ದರು. ಕೆಲವುಸಲ ಶುರುಮಾಡುವುದು ತಡ. ಶುರುಮಾಡಿದ ಮೇಲೆ ಬೇರೆಯೇ ಜಗತ್ತಿನಲ್ಲಿ ಇರುತ್ತಿದ್ದರು. ಜನ ತನ್ನ ಬಗ್ಗೆ ಏನು ಮಾತನಾಡುತ್ತಾರೆ ಎಂಬ ಬಗ್ಗೆ ಆಕೆಗೆ ಚಿಂತೆ ಇರುತ್ತಿರಲಿಲ್ಲ. ಜೀವನದಲ್ಲಿ ಆಕೆಗೆ ತನ್ನದೇ ನಿಯಮಗಳಿದ್ದವು. ಇಷ್ಟವಾದಲ್ಲಿ ಕಚೇರಿ ಮಾಡುತ್ತಿದ್ದರು. ಏಕಾಗ್ರತೆಗೆ ಭಂಗ ಬಂದರೆ ಸಹಿಸುತ್ತಿರಲಿಲ್ಲ. ಅತಿಸೂಕ್ಷ್ಮ ಪ್ರವೃತ್ತಿ. ಮೃದುಹೃದಯಿ; ಬೆಚ್ಚಗಿನ ಆತ್ಮೀಯತೆ. ತುಂಬ ಜನರಿಗೆ ಆಕೆ ಅರ್ಥವಾಗಲಿಲ್ಲ. ಆಕೆಯ ಸಂಗೀತ ಸಂಗೀತಗಾರರು ಕೂಡ ಅನುಭವಿಸುವಂಥದ್ದು. ಆಕೆಗೊಂದು ಘರಾಣೆ ಇತ್ತು; ಆದರೆ ಆಕೆಯ ಸಂಗೀತ ಆಕೆಯದೇ. ಆಕೆಯ ತಾಯಿಯದ್ದು ಮತ್ತು ಆಕೆಯ ಸಂಗೀತ ಕೇಳಿದರೆ ಮೂಲ ಅದು, ವ್ಯಾಖ್ಯಾನ ಈಕೆಯದ್ದು ಅನ್ನಿಸದೆ ಇರುವುದಿಲ್ಲ” ಎಂದು ಕೂಡ ಶರ್ಮ ವಿಶ್ಲೇಷಿಸಿದ್ದಾರೆ.
ಖ್ಯಾತ ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ ಅವರದ್ದು ಇನ್ನೊಂದು ಬಗೆಯ ಅನುಭವ. ಎರಡು ವರ್ಷಗಳ ಹಿಂದೆ ಕಿಶೋರಿತಾಯಿ ಅವರ ಶಿಷ್ಯರು ಹುಟ್ಟುಹಬ್ಬದ ವೇಳೆ ಆಕೆಯನ್ನು ಅಭಿನಂದಿಸಲು ಬಯಸಿದರು. “ಹೇಗೆ ಮಾಡುವುದೆಂದು ಕೇಳಿದಾಗ ಕಿಶೋರಿ ಅವರು ನನ್ನನ್ನು ಕರೆಯಲೇಬೇಕು. ’ಅವಳ ಸಂಗೀತ ನನಗೆ ತುಂಬ ಇಷ್ಟ. ಹುಟ್ಟುಹಬ್ಬದ ದಿನ ನಾನು ಅವಳ ಸಂಗೀತ ಕೇಳಬೇಕು’ ಎಂದರು. ಆ ಸಂದರ್ಭಕ್ಕಾಗಿ ನಾವು ಪುಣೆಗೆ ಹೋದಾಗ ಆಕೆ ಸಾರ್ವಜನಿಕವಾಗಿ ತಮಗೆ ನನ್ನ ಸಂಗೀತ ಇಷ್ಟು ಎಂದರು. ಅವರಂತಹ ದಂತಕಥೆಯಿಂದ ಅಂತಹ ಮೆಚ್ಚುಗೆ ಬಂದದ್ದು ನನಗೆ ದೊಡ್ಡ ಆಶೀರ್ವಾದವಾಗಿತ್ತು. ಆಗಾಗ ನನಗೆ ಫೋನ್ ಮಾಡಿ ಏನಾದರೂ ಆಮಂತ್ರಣ ಕಳುಹಿಸುತ್ತಿದ್ದರು; ಬರುವಂತೆ ಒತ್ತಾಯಿಸುತ್ತಿದ್ದರು” ಎನ್ನುವ ಪರ್ವೀನ್ ಸುಲ್ತಾನಾ, “ಆಕೆ ಎಲ್ಲ ಭಾರತೀಯ ಸಂಗೀತಗಾರರಿಗೆ ಒಂದು ಕೊಡೆಯಂತಿದ್ದರು” ಎಂದು ಬಣ್ಣಿಸಿದ್ದಾರೆ.
ನಿಧನಕ್ಕೆ ಕೇವಲ ವಾರದ ಹಿಂದೆ ನಡೆಸಿದ ಒಂದು ಕಚೇರಿಯಲ್ಲಿ ಕಿಶೋರಿತಾಯಿ ಎರಡನೇ ರಾಗದ ಬಳಿಕ ಒಮ್ಮೆಲೆ ನಿಲ್ಲಿಸಿಬಿಟ್ಟರು; ಮುಕ್ತಾಯದ ಭಜನ್ ಕೂಡಾ ಹಾಡಲಿಲ್ಲ; ಆಯಾಸ ಆಗಿರಬೇಕು. ಅಂದು ಆಕೆ “ನನ್ನ ಕೊನೆಯುಸಿರು ಇರುವತನಕ ನಿಮಗಾಗಿ ಹಾಡುವಂತೆ ಆಶೀರ್ವದಿಸಿ” ಎಂದು ಶ್ರೋತೃಗಳನ್ನು ವಿನಂತಿಸಿದರು. ಅಂದರೆ ಅವರು ಕೊನೆಯತನಕವೂ ಹಾಡಿದರಲ್ಲವೇ?
ಒಟ್ಟಿನಲ್ಲಿ ಕೆಲವರು ಕಿಶೋರಿತಾಯಿ ಅವರಲ್ಲಿ ಆಕ?ಕ ಮಾತೃಹೃದಯ ಕಂಡರೆ ಮತ್ತೆ ಕೆಲವರು ಕಿರಿಕಿರಿ ಉಂಟುಮಾಡುತ್ತಾರೆಂದು ಗೊಣಗುತ್ತಿದ್ದರು. ಇವು ಆಕೆಯ ವ್ಯಕ್ತಿತ್ವದ ವಿಭಿನ್ನ ಮುಖಗಳು. “ಆಕೆ ಸಂಗೀತಗಾರ್ತಿಯಾಗಿ ದಂತಕಥೆ ಎನಿಸಿದರೂ ದೋ?ಗಳಿಂದ ಮನು?ಳು. ಇದೇ ನನಗೆ ಸ್ಫೂರ್ತಿ ಕೊಡುವ ಅಂಶ” ಎಂದವರು ಶುಭಾ ಮುದ್ಗಲ್.