
ಮನೆಗೊಂದು ಮಗು ಬರುವ ಸಮಯ ಬಹು ಅಮೂಲ್ಯವಾದದ್ದು. ಒಡಲೊಳಗೆ ಜೀವವೊಂದು ಮಿಸುಕಾಡುವ ಆ ಕ್ಷಣ ಹೆಣ್ಣಾದವಳಿಗೆ ಅನಿರ್ವಚನೀಯ. ಆ ದಿನಗಳ ಸಂತೋಷ, ಅರ್ಥವಾಗದ ಒತ್ತಡ, ಹೊಮ್ಮುವ ಭಾವಗಳ ಒರತೆ… ಎಲ್ಲವೂ ಅನುಭವಿಸಿಯೇ ತಿಳಿಯಬೇಕು. ಮಗುವೊಂದು ಆರೋಗ್ಯಪೂರ್ಣವಾಗಿ ಬೆಳೆಯುವಲ್ಲಿ ಮನೆಮಂದಿಯೆಲ್ಲರ ಹೊಣೆಗಾರಿಕೆಯಿದೆ ಎಂಬುದು ಮಾತ್ರ ಬೆಳಕಿನಷ್ಟು ಸತ್ಯ. ಆದರೆ ತಾಯಿ ಹೆತ್ತದ್ದು ಹೆಣ್ಣುಮಗುವಾದರೆ ಅವಳನ್ನೇ ದೂಷಿಸಿ ಅನಿಷ್ಟವೆಂದು ಕಾಣುವ ವಾತಾವರಣ ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಿರುವಾಗ ಮುದ್ದಾದ ಮಗುವೊಂದು ಜನಿಸುವುದರಲ್ಲಿ ತಂದೆಯ ಪಾತ್ರವೂ ಬಹಳ ಮುಖ್ಯ ಎಂಬುದನ್ನು ಮನದಟ್ಟುಮಾಡಿಕೊಡಬೇಕಾದ್ದು […]