ಗಾಂಧಿಯವರ ಆರ್ಥಿಕಚಿಂತನೆಗಳು ಹಾಗೂ ವಿಚಾರಗಳು ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರವಕ್ಕಿಂತ ಅನೇಕ ದೃಷ್ಟಿಗಳಿಂದ ತೀರಾ ವಿಭಿನ್ನವಾಗಿರುವುದನ್ನು ನಾವು ಗಮನಿಸಬಹುದು. ಗಾಂಧಿಯವರ ಆರ್ಥಿಕ ಪರಿಕಲ್ಪನೆಗಳೇ ಹೊಸದು. ಅವರ ಚಿಂತನೆಯ ಮಾರ್ಗವೇ ಬೇರೆ. ಅವರ ಆರ್ಥಿಕ ಚಿಂತನೆಯ ಆಧಾರ ಮತ್ತು ಅಡಿಪಾಯವೇ ಬೇರೆ; ವಿಶ್ಲೇ?ಣೆಯ ರೀತಿಯೇ ಬೇರೆ. ಅವರು ಸೂಚಿಸಿದ ಪರ್ಯಾಯ ಆರ್ಥಿಕ ಮಾದರಿಯೇ ಬೇರೆ. ಸಮಸ್ಯೆಗಳನ್ನು ಪರಿಹರಿಸಲು ಅವರು ಸಲಹೆಮಾಡಿದ ಆರ್ಥಿಕ ನೀತಿಗಳೇ ಬೇರೆ. ಎಲ್ಲ ರೀತಿಯಿಂದ ಒಂದು ಹೊಸದಾದ ಆರ್ಥಿಕ ಚಿಂತನೆ ಮತ್ತು ಮಾರ್ಗವನ್ನೇ ಅವರು ಹುಟ್ಟುಹಾಕಿದರು. ಆದ ಕಾರಣ ಬಹಳ? ಅರ್ಥಶಾಸ್ತ್ರಜ್ಞರಿಗೆ ಅವರು ಪ್ರತಿಪಾದಿಸಿದ ಆರ್ಥಿಕನೀತಿ, ಸಲಹೆಗಳನ್ನು ಅರ್ಥಮಾಡಿಕೊಂಡು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗಾಂಧಿಯವರ ಆಲೋಚನೆಗಳು ಅಲ್ಲಿಯವರೆಗೆ ಇದ್ದ ಆರ್ಥಿಕ ತತ್ತ್ವ ಮತ್ತು ನೀತಿಗಳಿಗಿಂತ ವ್ಯತಿರಿಕ್ತವಾಗಿದ್ದವು. ಈ ಕಾರಣದಿಂದಲೇ ಗಾಂಧೀಯ ಪರಿಕಲ್ಪನೆಯ ಅರ್ಥಶಾಸ್ತ್ರವನ್ನು ಅರೆಬರೆಯಾಗಿ ಅರ್ಥಮಾಡಿಕೊಂಡಿರುವ ಹಾಗೂ ಒಪ್ಪಿಕೊಳ್ಳುವ ಸಂಪ್ರದಾಯವಾದಿ ಅರ್ಥಶಾಸ್ತ್ರಜ್ಞರು ಗಾಂಧಿ ಒಬ್ಬ ’ತಲೆತಿರುಕ’ ಎಂದೇ ಕರೆದಿದ್ದಾರೆ. ಜೊತೆಗೆ ಅವರು ರೂಪಿಸಿದ ಮತ್ತು ಸೂಚಿಸಿದ ಆರ್ಥಿಕಸಿದ್ಧಾಂತಗಳು ವ್ಯವಹಾರದಲ್ಲಿ ಸಾಧಿಸಲಾಗದ ಆದರ್ಶ, ಕೇವಲ ಕಾಲ್ಪನಿಕ ಎಂದು ಕರೆದರು. ಒಂದು ರೀತಿಯಲ್ಲಿ ನೋಡಿದರೆ ಇದು ನಿಜವೆಂದು ತೋರುತ್ತದೆ. ಕಾರಣ ಗಾಂಧಿ ರೂಪಿಸಿದ ’ಮಾದರಿ ಆರ್ಥಿಕ ವ್ಯವಸ್ಥೆ’ ಭಾರತದ ಧರ್ಮ, ಸಂಸ್ಕೃತಿ, ಪರಂಪರೆ ಮತ್ತು ಆದರ್ಶಗಳನ್ನು ಅರ್ಥಮಾಡಿಕೊಂಡವರಿಗೆ ಮಾತ್ರ ಸುಲಭವಾಗಿ ಅರ್ಥವಾದೀತು. ಇವುಗಳ ಗಂಧ-ಗಾಳಿಯೇ ಇಲ್ಲದ ಬೇರೆ ದೇಶದ ಅರ್ಥಶಾಸ್ತ್ರಜ್ಞರಿಗೆ ಅದು ಹೇಗೆ ತಾನೆ ತಿಳಿದೀತು? ಗಾಂಧಿಯ ಅನೇಕ ಆರ್ಥಿಕ ಪರಿಕಲ್ಪನೆಗಳು ಪಾಶ್ಚಾತ್ಯಪಂಡಿತರ ಚಿಂತನೆಗೂ ಮೀರಿ ನಿಂತಿರುವಂತಹವು; ಅವರ ಕಲ್ಪನೆಗೂ ಎಟಕುವಂತಹದ್ದಲ್ಲ. ಉದಾಹರಣೆಗೆ ಸತ್ಯ-ಅಹಿಂಸೆಯ ಮಾರ್ಗ, ಅಪರಿಗ್ರಹ, ನೈತಿಕಮೌಲ್ಯಗಳಿಗೆ ಒತ್ತು, ಗ್ರಾಮಸ್ವರಾಜ್ಯ, ಸ್ವದೇಶೀ, ದುಡಿಮೆಗೆ ಮಹತ್ತ್ವ, ಸರಳ ಜೀವನ, ಆರ್ಥಿಕ ವಿಕೇಂದ್ರೀಕರಣ, ಧರ್ಮದರ್ಶಿತ್ವ ಹಾಗೂ ಸರ್ವೋದಯದ ಪರಿಕಲ್ಪನೆ ಇತ್ಯಾದಿ.
ಗಾಂಧಿಯವರ ಆರ್ಥಿಕ ವಿಚಾರಧಾರೆ ಮೂಲಭೂತವಾಗಿ ಭಾರತೀಯಚಿಂತನೆ, ಜೀವನಪದ್ಧತಿ, ಜೀವನಮೌಲ್ಯಗಳಿಂದ ಬಹಳ? ಪ್ರಭಾವಿತವಾಗಿದೆ. ಅವರು ಭಾರತದ ಆರ್ಥಿಕಸಮಸ್ಯೆಗಳನ್ನು ಪರಿಹರಿಸಲು ಮತ್ತು ದೇಶದ ಪ್ರಗತಿಗೆ ಬೇಕಾದ ಅನೇಕ ಅಂಶಗಳನ್ನು ಒತ್ತಿಹೇಳಿದ್ದಾರೆ. ಅವರ ಏಕಮಾತ್ರ ಉದ್ದೇಶ ಭಾರತದ ಆರ್ಥಿಕ ಪುನರುತ್ಥಾನವಾಗಿತ್ತು. ಈ ಉದ್ದೇಶವನ್ನು ಕಾರ್ಯಗತ ಮಾಡಲು ಬೇಕಾದ ಆರ್ಥಿಕ ಪರಿಕಲ್ಪನೆಗಳು ಹಾಗೂ ನೀತಿ-ನಿಯಮಗಳ ಕಡೆಗೆ ಅವರು ಗಮನಹರಿಸಿದರು. ಅವರ ಉದ್ದೇಶ ಮತ್ತು ಮಾರ್ಗ ಅತ್ಯಂತ ಸ್ಪ?ವಾಗಿತ್ತು. ಅದರಲ್ಲಿ ಯಾವುದೇ ಸಂದೇಹ ಅವರಿಗಿರಲಿಲ್ಲ. ಆದ್ದರಿಂದ ಗಾಂಧಿಯವರ ಆರ್ಥಿಕ ಮಾದರಿ ನಮ್ಮ ದೇಶದ ಆರ್ಥಿಕ ಪ್ರಗತಿಗೆ ಮಾರ್ಗದರ್ಶಿಯಾಯಿತು. ಅವರ ಅನೇಕ ಕ್ರಾಂತಿಕಾರಕ ಚಿಂತನೆಗಳು ಅನೇಕರಿಗೆ ಸ್ಫೂರ್ತಿ, ಚೈತನ್ಯ ಮತ್ತು ಪ್ರೇರಣೆಯನ್ನು ನೀಡಿ ಹೊಸ ಆರ್ಥಿಕ ದೃಷ್ಟಿಕೋನವನ್ನು ಕೊಡುವುದರಲ್ಲಿ ಸಫಲವಾಯಿತು. ಈ ಹಿನ್ನೆಲೆಯಲ್ಲಿ ಗಾಂಧಿಯವರ ಆರ್ಥಿಕ ವಿಚಾರಧಾರೆ ಹೇಗೆ ಇತರ ಅರ್ಥಶಾಸ್ತ್ರಜ್ಞರಿಗಿಂತ ಭಿನ್ನವಾಗಿದೆ ಎಂಬುದನ್ನು ತಿಳಿಯುವ ಪ್ರಯತ್ನಮಾಡುವುದು ಇಲ್ಲಿ ವಿಹಿತವಾದೀತು.
‘ಆರ್ಥಿಕ ಮಾನವ’ Economic man) ಪರಿಕಲ್ಪನೆಯ ತಿರಸ್ಕಾರ, ‘ಜನಸಾಮಾನ್ಯ’ (Comman Man) ಅಥವಾ ‘ಸರ್ವಸಾಮಾನ್ಯ’ (Average Man) ತತ್ತ್ವದ ಸ್ವೀಕಾರ
ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಮಾನವರ ಆರ್ಥಿಕಜೀವನವನ್ನು ವಿಶ್ಲೇಷಣೆ ಮಾಡುವಾಗ ’ಆರ್ಥಿಕ ಮಾನವ’ ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ತಮ್ಮ ಆರ್ಥಿಕ ವಿಚಾರಧಾರೆಯನ್ನು ಸಮರ್ಥನೆ ಮಾಡಲು ಈ ಆರ್ಥಿಕ ಮಾನವನನ್ನು ಆಧಾರವಾಗಿಟ್ಟುಕೊಂಡಿದ್ದರು. ಅವರ ದೃಷ್ಟಿಯಲ್ಲಿ ಮಾನವನನ್ನು ಒಂದು ’ಬಯಕೆಗಳ ಪಿಂಡಿ’ ಅಥವಾ ಕಂತೆ ಎಂದು ಕರೆಯಲಾಗುತ್ತದೆ. ಬಯಕೆಗಳು ಅವನ ಹುಟ್ಟಿನ ಜೊತೆಗೆ ಉಗಮವಾಗಿ ಅವನ ಸಾವಿನಲ್ಲಿ ಮುಕ್ತಾಯಗೊಳ್ಳುತ್ತವೆ. ಹುಟ್ಟು-ಸಾವಿನ ನಡುವೆ ಅವನು ಉಸಿರಾಡುವವರೆಗೂ ಅವು ಅನಂತವಾಗಿರುತ್ತವೆ. ಆಸೆಗಳು ಅಪರಿಮಿತವಾದವು ಮತ್ತು ಕೊನೆ ಇಲ್ಲದವುಗಳು. ಆದ್ದರಿಂದ ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರ ಪ್ರಕಾರ ಮನುಷ್ಯನ ಎಲ್ಲ ಆರ್ಥಿಕ ಚಟುವಟಿಕೆಗಳ ಮೂಲ ಉದ್ದೇಶ ತನ್ನ ಆಸೆ-ಬಯಕೆಗಳನ್ನು ಗರಿಷ್ಠಸಾಧ್ಯ ರೀತಿಯಲ್ಲಿ ತೃಪ್ತಿಪಡಿಸಿಕೊಳ್ಳುವುದು.
ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರ ಪ್ರಕಾರ ಆರ್ಥಿಕ ಮಾನವ ತನ್ನ ಎಲ್ಲ ಚಟುವಟಿಕೆಗಳಲ್ಲೂ ಆರ್ಥಿಕ ಉದ್ದೇಶಗಳಿಂದ ಮಾತ್ರ ಪ್ರೇರಿತನಾಗಿರುತ್ತಾನೆ. ಅವನ ಅಂತಿಮ ಉದ್ದೇಶ ತನ್ನ ಸ್ವಂತ ಆರ್ಥಿಕ ಹಿತಾಸಕ್ತಿಯನ್ನು ಗರಿ?ತಮಗೊಳಿಸಿಕೊಳ್ಳುವುದು. ಸಮಾಜದ ಇತರ ವ್ಯಕ್ತಿಗಳ ಜೊತೆ ವ್ಯವಹರಿಸುವಾಗ ಅವನ ಸಂಬಂಧ ಕೇವಲ ಐಹಿಕ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಅವನು ಸದಾ ತನ್ನ ಬಯಕೆಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಪೂರ್ಣಗೊಳಿಸುವ ನಿರಂತರ ಪ್ರಯತ್ನ ಮಾಡುತ್ತಿರುತ್ತಾನೆ. ಅವನು ಒಬ್ಬ ಗರಿಷ್ಠೀಕರಿಸುವ ವ್ಯಕ್ತಿಯಾಗಿ ಎಲ್ಲರ ಮುಂದೆ ನಿಲ್ಲುತ್ತಾನೆ. ಹೀಗೆ ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಆರ್ಥಿಕಮಾನವನನ್ನು ತನ್ನ ಐಹಿಕ ಸುಖೋಪಭೋಗಗಳನ್ನು ಗರಿಷ್ಠೀಕರಿಸುವ ಒಂದು ಯಂತ್ರವನ್ನಾಗಿ ಮಾಡಿದರು. ಕೆಲ ವಿಮರ್ಶಕರು ಈ ರೀತಿಯ ಚಿತ್ರಣ ಎಲ್ಲ ರೀತಿಯ ನೈತಿಕ ಮೌಲ್ಯಗಳಿಗೆ ವಿರುದ್ಧವಾದುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾನ್ ರಸ್ಕಿನ್ ಅವರು ಈ ರೀತಿಯ ಆರ್ಥಿಕಮಾನವ ಎಂಬ ಪರಿಕಲ್ಪನೆ ’ಅರ್ಥವಿಲ್ಲದ ಇರುವಿಕೆ’ (Meaningless Entity) ಎನ್ನುತ್ತಾರೆ.
ಗಾಂಧೀಯ ಅರ್ಥಶಾಸ್ತ್ರದಲ್ಲಿ ಮೊಟ್ಟಮೊದಲಿಗೆ ಭೌತಿಕ ಉತ್ಕರ್ಷಕ್ಕೆ ಹೆಚ್ಚಿನ ಮಹತ್ತ್ವವಿಲ್ಲ. ಹಣದ ಮೂಲಕ ಅಳತೆ ಮಾಡುವಂತಹ ಐಹಿಕ ಸುಖ-ಸಂತೋಷಗಳಿಗೆ ಗಾಂಧಿಯವರ ಅರ್ಥಶಾಸ್ತ್ರದಲ್ಲಿ ಪ್ರಧಾನ್ಯವಿಲ್ಲ. ಒಬ್ಬ ಮನು?ನ ಒಳಿತು, ಸುಖ, ಸಂತೋಷ ಕೇವಲ ಅವನೊಬ್ಬನ ಪ್ರಯತ್ನದ ಮೇಲೆ ನಿರ್ಭರವಾಗಿರದೆ ಇಡೀ ಸಮಾಜದ ಕಲ್ಯಾಣಸಾಧನೆಯಲ್ಲಿ ಅಡಗಿದೆ ಎಂದು ಗಾಂಧಿ ತಿಳಿಸಿದ್ದಾರೆ. “ಒಬ್ಬ ವ್ಯಕ್ತಿಯ ಆರ್ಥಿಕ ಅಭ್ಯುದಯ ಸಾಮಾಜಿಕ ಅಭ್ಯುದಯದಿಂದ ವಿಮುಖವಾಗಿಲ್ಲ. ಬದಲಿಗೆ ಸಾಮಾಜಿಕ ಉತ್ಕರ್ಷವು ವ್ಯಕ್ತಿಯ ಆರ್ಥಿಕ ಹಿತವನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿಯ ಆರ್ಥಿಕ ಉನ್ನತಿ ಸಾಮಾಜಿಕ ಉನ್ನತಿಯಲ್ಲಿಡಗಿದೆ” ಎಂದು ಅವರು ಹೇಳಿದ್ದರು. ಸಾಮೂಹಿಕ ಆರ್ಥಿಕ ಪ್ರಗತಿ ವ್ಯಕ್ತಿಯ ಪ್ರಗತಿಗೆ ದಾರಿದೀಪವಾಗುತ್ತದೆ. ವ್ಯಕ್ತಿಯ ಆರ್ಥಿಕ ಸಮೃದ್ಧಿ ಮತ್ತು ಸಾಮೂಹಿಕ ಆರ್ಥಿಕ ಸಮೃದ್ಧಿ ಬೇರೆಬೇರೆಯಲ್ಲ. ಅವೆರಡೂ ಒಂದಕ್ಕೊಂದು ಪೂರಕ. ೧೯೦೮ರಲ್ಲಿ ಜಾನ್ ರಸ್ಕಿನ್ರವರು ಬರೆದ ’ಅನ್ಟು ದಿಸ್ ಲಾಸ್ಟ್’ ಪುಸ್ತಕ ಓದಿದ ನಂತರ ಗಾಂಧಿಯವರು ಹೇಳಿದ ಮಾತಿದು – “ದಿಢೀರಾಗಿ ವಾಸ್ತವತೆಯ ಮಾರ್ಪಾಟನ್ನು ನನ್ನ ಜೀವನದಲ್ಲಿ ಅದು ತಂದಿದೆ.” ಕಾರಣ ಮಾನವರು ನೈತಿಕಮೌಲ್ಯಗಳನ್ನು ಅರಿತು ಅದನ್ನು ಪಾಲನೆ ಮಾಡಿದಾಗ ಜೀವನದಲ್ಲಿ ಸುಖ-ಸಂತೋಷಗಳನ್ನು ಪಡೆಯಲು ಸಾಧ್ಯ. ಹೀಗಾಗಿ ಗಾಂಧಿಯವರು ಮಾನವೀಯ ಮೌಲ್ಯಗಳಿಗೆ ಮಹತ್ತ್ವದ ಸ್ಥಾನವನ್ನು ತಮ್ಮ ಆರ್ಥಿಕ ಚಿಂತನೆಗಳಲ್ಲಿ ನೀಡಿದ್ದಾರೆ.
ಗಾಂಧಿಯವರು ’ಆರ್ಥಿಕ ಮಾನವ’ ಪರಿಕಲ್ಪನೆಗೆ ಪರ್ಯಾಯವಾಗಿ ’ಜನಸಾಮಾನ್ಯ’ ಪರಿಕಲ್ಪನೆಯನ್ನು ಅಭಿವೃದ್ಧಿಗೊಳಿಸಿದರು. ಒಬ್ಬ ಸಾಮಾನ್ಯ ಮನುಷ್ಯ ತನ್ನ ಸಂಪಾದನೆಯ ಮೂಲದಿಂದ ಸಿಗುವ ಸಂಪನ್ಮೂಲಗಳಿಂದ ಸಂತೋಷಭರಿತ ಜೀವನನಿರ್ವಹಣೆ ಮಾಡುತ್ತಾನೆ. ಅವನು ತನ್ನ ಸಂಪಾದನೆಯ ಪರಿಧಿಯಲ್ಲಿ ತನ್ನ ಸುಖ- ಸಂತೋಷಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಅದೇ ವೇಳೆಗೆ ತನ್ನ ಆದಾಯ ಮತ್ತು ಅದರಿಂದ ಸಿಗುವ ಸಂತೋ?ದ ನಡುವಣ ಸಮತೋಲವನ್ನು ಕಾಪಾಡುವ ನಿರಂತರ ಪ್ರಯತ್ನವನ್ನೂ ಮಾಡುತ್ತಾನೆ. ’ಹಾಸಿಗೆ ಇದ್ದ? ಕಾಲು ಚಾಚು’ ಎನ್ನುವ ನಾಣ್ಣುಡಿ ಅವನ ಜೀವನನಿರ್ವಹಣೆಯ ಮಾರ್ಗದರ್ಶಿ ಸೂತ್ರ. ತನ್ನ ಆದಾಯದ ಇತಿಮಿತಿಯನ್ನು ತಿಳಿದ ಅವನು ತೃಪ್ತಿಯ ಗರಿಷ್ಠೀಕರಣದ ಅಮಲಿಗೆ ಒಳಗಾಗದೆ ಇದ್ದುದರಲ್ಲೇ ತೃಪ್ತಿ, ಸಂತೋ?ವನ್ನು ಕಾಣುವಂತಹ ಪ್ರವೃತ್ತಿ ಅವನದು. ಆದ್ದರಿಂದ ಅವನು ತನ್ನ ಹಾಸಿಗೆಯಿಂದ ಹೊರಗೆ ಕಾಲುಚಾಚುವ ಪ್ರಯತ್ನವನ್ನು ಸಾಮಾನ್ಯವಾಗಿ ಮಾಡುವುದಿಲ್ಲ (ಇದು ಜನಸಾಮಾನ್ಯನ ಆರ್ಥಿಕ ನಡವಳಿಕೆಯ ಚಿತ್ರಣ).
ಗಾಂಧಿಯವರು ಜನಸಾಮಾನ್ಯನು ಯಾವಾಗಲೂ ಕೇವಲ ತಾರ್ಕಿಕದೃಷ್ಟಿಯಿಂದ ಯೋಚಿಸದೆ ತನ್ನ ವಿವೇಕಯುಕ್ತ ನಡವಳಿಕೆಯಿಂದ ಭೌತಿಕ ಸುಖ-ಸಂತೋ?ಗಳನ್ನು ಅರಸುವಂತಹ ಹಾಗೂ ಆರ್ಥಿಕ ಸ್ವಹಿತಾಸಕ್ತಿಯನ್ನು ಗರಿ?ಗೊಳಿಸುವಂತಹವನಲ್ಲ ಎಂದು ದೃಢವಾಗಿ ಪ್ರತಿಪಾದನೆ ಮಾಡಿದರು. ಆದ ಕಾರಣ ಗಾಂಧಿಯವರು ’ಆರ್ಥಿಕ ಮಾನವ’ ಎಂಬ ಪರಿಕಲ್ಪನೆಯೇ ಅಸಂಗತವಾದದ್ದು ಮತ್ತು ಕೇವಲ ಕಾಲ್ಪನಿಕ ಎನ್ನುವ ತೀರ್ಮಾನಕ್ಕೆ ಬಂದರು.
“ಒಬ್ಬ ವ್ಯಕ್ತಿಯ ಆರ್ಥಿಕ ಅಭ್ಯುದಯ ಸಾಮಾಜಿಕ ಅಭ್ಯುದಯದಿಂದ ವಿಮುಖವಾಗಿಲ್ಲ. ಬದಲಿಗೆ ಸಾಮಾಜಿಕ ಉತ್ಕರ್ಷವು ವ್ಯಕ್ತಿಯ ಆರ್ಥಿಕ ಹಿತವನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿಯ ಆರ್ಥಿಕ ಉನ್ನತಿ ಸಾಮಾಜಿಕ ಉನ್ನತಿಯಲ್ಲಿಡಗಿದೆ”
‘ಬಯಕೆಗಳ ಸಂವರ್ಧನೆ’ ಅಲ್ಲ ’ಬಯಕೆಗಳ ನಿಗ್ರಹ’
ಇಡೀ ಪಾಶ್ಚಾತ್ಯ ಆರ್ಥಿಕವ್ಯವಸ್ಥೆ ’ಬಯಕೆಗಳ ಸಂವರ್ಧನೆ’ (Multiplicity of Wants) ಯನ್ನು ಆಧರಿಸಿದೆ. ಮನುಷ್ಯನ ಆಸೆಗಳು ಅನಂತವಾಗಿರುವುದರ ಜೊತೆಗೆ ವಾರ್ಧಕಸ್ವಭಾವವನ್ನು ಹೊಂದಿವೆ ಎಂಬ ಮೂಲಭೂತ ನಂಬಿಕೆಯ ಮೇಲೆ ಆ ಎಲ್ಲ ಅರ್ಥವ್ಯವಸ್ಥೆಗಳು ಕಾರ್ಯನಿರತವಾಗಿವೆ. ಮಾನವರ ಆದಷ್ಟು ಹೆಚ್ಚಿನ ಬಯಕೆಗಳನ್ನು ತೃಪ್ತಿಪಡಿಸುವಂತಹ ವ್ಯವಸ್ಥೆಯನ್ನು ಅಲ್ಲಿ ವ್ಯವಸ್ಥಿತವಾಗಿ ರೂಪಿಸಲಾಗಿದೆ. ಔದ್ಯೋಗೀಕರಣ, ನಗರೀಕರಣ, ಯಂತ್ರತಂತ್ರಜ್ಞಾನ ಇತ್ಯಾದಿ ಹೊಸಹೊಸ ಬಗೆಯಿಂದ ಸರಕು ಮತ್ತು ಸೇವೆಗಳ ಉತ್ಪಾದನೆ ಮಾಡಿ ಮಾನವನ ಬಯಕೆಗಳನ್ನು ಇನ್ನೂ ಹೆಚ್ಚು ಮಾಡುವುದರ ಮೂಲಕ ಜನರ ಜೀವನಮಟ್ಟವನ್ನು ಏರಿಸುವುದರಲ್ಲಿ ಸಫಲವಾಗಿವೆ. ಆರ್ಥಿಕಪ್ರಗತಿಯ ದರ, ಆದಾಯ ಮತ್ತು ಉದ್ಯೋಗದ ಮಟ್ಟ ಏರಿ ಅವನ ಆರ್ಥಿಕಜೀವನದ ಮಟ್ಟವೂ ವೃದ್ಧಿಸಲು ಸಹಕಾರಿಯಾಗಿದೆ. ಆರ್ಥಿಕ ಅಭ್ಯುದಯ ಮತ್ತು ಸಮೃದ್ಧಿಯು ಮಾನವನ ಸುಖ-ಸಂತೋ?ಗಳನ್ನು ಹೆಚ್ಚಿಸಲು ಕಾರಣವಾಯಿತು. ಇದು ಸಹಜವಾಗಿ ಅವನ ಬಯಕೆಗಳನ್ನು ಇನ್ನೂ ಹೆಚ್ಚುಹೆಚ್ಚು ವೈವಿಧ್ಯಗಳಿಂದ ತೃಪ್ತಿಪಡಿಸುವುದಕ್ಕೆ ನೆರವಾಯಿತು. ಇದು ಪಾಶ್ಚಿಮಾತ್ಯ ಅರ್ಥವ್ಯವಸ್ಥೆಯ ಸ್ವರೂಪ.
ಬಯಕೆಗಳನ್ನು ಹೆಚ್ಚುಹೆಚ್ಚು ತೃಪ್ತಿಪಡಿಸುವ ಮಾರ್ಗ ಗಾಂಧಿಯವರ ದೃಷ್ಟಿಯಲ್ಲಿ ಅನಿಷ್ಠಕಾರಕ.
ನಿಜವಾದ ಸಂತೋಷವು ಬಯಕೆಗಳನ್ನು ತೃಪ್ತಿಪಡಿಸುವುದರ ಬದಲು ಬಯಕೆಗಳ ಪ್ರಮಾಣವನ್ನು ಕಡಮೆ ಮಾಡುವುದರಿಂದ ಒದಗುವುದು ಎಂದು ಗಾಂಧಿ ನಂಬಿದ್ದರು. ಗಾಂಧೀಯ ಅರ್ಥವ್ಯವಸ್ಥೆ ಮನುಷ್ಯನ ಭೌತಿಕ ಬಯಕೆಗಳ ನಿಗ್ರಹದ ಮೇಲೆ ಆಧಾರಿತವಾಗಿದೆ. ಇದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳ ಚಿಂತನೆಯ ಪರಿಣಾಮ. ಅವರ ದೃಷ್ಟಿಯಲ್ಲಿ ’ಗರಿಷ್ಠ ತೃಪ್ತಿ’ ಎನ್ನುವುದು ನಾವು ಯಾವ ಪ್ರಮಾಣದಲ್ಲಿ ಸರಕು ಮತ್ತು ಸೇವೆಗಳನ್ನು ಅನುಭೋಗ ಮಾಡುತ್ತೇವೆ ಎನ್ನುವುದರ ಮೇಲೆ ನಿಂತಿಲ್ಲ. ಬದಲಿಗೆ ಅದು ಸಂತೃಪ್ತಿ ಹೊಂದಿದ ನಮ್ಮ ಮನಸ್ಸಿನ ಭಾವನೆಯ ಮೇಲೆ ನಿರ್ಭರವಾಗಿರುತ್ತದೆ. ಮನುಷ್ಯ ಒಂದು ಸಾರಿ ತನ್ನ ಭೌತಿಕ ಬಯಕೆಗಳನ್ನು ತೃಪ್ತಿಪಡಿಸುವ ಕಾರ್ಯದಲ್ಲಿ ನಿರತನಾದನೆಂದರೆ ಅದಕ್ಕೆ ಕೊನೆ ಎಂಬುದೇ ಇಲ್ಲ. ಎಲ್ಲಿ ನಿಲ್ಲಿಸಬೇಕೆಂದು ಅವನಿಗೆ ತಿಳಿಯುವುದಿಲ್ಲ. ತಾನು ಇನ್ನೂ ಹೆಚ್ಚಿನ ಪ್ರಮಾಣದ ತೃಪ್ತಿಯನ್ನು ಪಡೆಯಬೇಕೆನ್ನುವ ಅವನ ಆಸೆಯೇ ಎಲ್ಲ ಮೂಲಭೂತ ಸಮಸ್ಯೆಗಳಿಗೆ ಕಾರಣ. ಇದು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಾಗಿ ಉಳಿದಿಲ್ಲ. ಪ್ರಪಂಚದ ಎಲ್ಲ ವ್ಯಕ್ತಿಗಳ ಸಮಸ್ಯೆಯೂ ಇದೇ ಆಗಿದೆ.
ಗಾಂಧಿಯವರ ಪ್ರಕಾರ – “ಮನುಷ್ಯ ತನ್ನ ಬಯಕೆಗಳನ್ನು ಹೆಚ್ಚುಹೆಚ್ಚು ತೃಪ್ತಿಪಡಿಸುತ್ತಾ ಹೋದರೆ ಅವನಿಗೆ ಹೆಚ್ಚು ಸಂತೋಷ ಸಿಗುವುದರ ಬದಲು ಅವನು ಮತ್ತಷ್ಟು ಅಸಂತೋಷಭರಿತನಾಗುತ್ತಾನೆ. ಅವನ ಅತೃಪ್ತಿ ಹೆಚ್ಚುತ್ತಾ ಹೋಗುತ್ತದೆ. ಭೌತಿಕಸ್ವರ್ಗದ ಎಲ್ಲ ರೀತಿಯ ಸುಖ-ಸಂತೋಷಗಳನ್ನು ಹೊಂದುವ ಅಂತಿಮಗುರಿಯನ್ನು ಮುಟ್ಟಿದರೂ ಸಹ ಮನುಷ್ಯನಿಗೆ ನೆಮ್ಮದಿ ಮತ್ತು ಶಾಂತಿ ಸಿಗುವುದಿಲ್ಲ” (Mahatma Gandhi, The Last Phase, Vol – II, 1958, p.139).
ಬದಲಿಗೆ, ಮನುಷ್ಯ ತನ್ನ ಅಗತ್ಯದ ಹಾಗೂ ಮಿತವಾದ ಬಯಕೆಗಳನ್ನು ತೃಪ್ತಿಪಡಿಸುವ ಕಾರ್ಯ ಕೈಗೊಂಡು ಅಗತ್ಯವಲ್ಲದ ಬಯಕೆಗಳಿಗೆ ಕಡಿವಾಣ ಹಾಕಬೇಕು. ಆಗ ಮಾತ್ರ ನಿಜವಾದ ಸಂತೋಷ ಸಿಗಲು ಸಾಧ್ಯ. ಈ ಜಗತ್ತಿನಲ್ಲಿ ಎಲ್ಲರ ಅನಿವಾರ್ಯ ಮತ್ತು ಮಿತವಾದ ಬಯಕೆಗಳನ್ನು ತೃಪ್ತಿಪಡಿಸಲು ಅಗತ್ಯವಾದ ಸಂಪನ್ಮೂಲಗಳು ನಮಗೆ ಸಿಗುತ್ತವೆ, ಅದಕ್ಕೆ ಕೊರತೆಯಾಗುವುದಿಲ್ಲ. ಗಾಂಧಿಯವರ ಮಾತಿನಲ್ಲಿ ಹೇಳುವುದಾದರೆ, “ಎಲ್ಲ ಅಗತ್ಯಗಳನ್ನು ತೃಪ್ತಿಪಡಿಸಲು ಪ್ರಕೃತಿ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸಿದೆ; ಆದರೆ ಅವನ ದುರಾಸೆಗಳನ್ನಲ್ಲ.” ಎಂತಹ ವಾಸ್ತವಿಕ ಮತ್ತು ಮಾರ್ಮಿಕ ಮಾತು ಇದು!
’ಆಧುನಿಕ ನಾಗರಿಕತೆಯ ವ್ಯಾಧಿ ಎಂದರೆ ಅದು ಐಹಿಕ ಸುಖ-ಸಂತೋ?ಗಳಿಗೆ ಅತಿಹೆಚ್ಚಿನ ಮಹತ್ತ್ವ ನೀಡಿರುವುದು. ಪ್ರಗತಿಪರ ಶ್ರೀಮಂತ ದೇಶಗಳು ಆದ? ಹೆಚ್ಚುಹೆಚ್ಚು ಸುಖ-ಸಾಧನಗಳ ಮತ್ತು ಭೋಗವಸ್ತುಗಳ ಉತ್ಪಾದನೆ ಮತ್ತು ಅವುಗಳ ಅನುಭೋಗದ ಕಡೆಗೆ ಹೆಚ್ಚಿನ ಗಮನ ಹರಿಸಿರುವುದು ನಿಜವಾಗಿಯೂ ದುಃಖದ ಸಂಗತಿ. ಅತ್ಯಾಧುನಿಕ ಯಂತ್ರಗಳ ಬಳಕೆಯಿಂದ ಹೆಚ್ಚು ಸರಕು ಮತ್ತು ಸೇವೆಗಳನ್ನು ಉತ್ಪಾದಿಸಿ ಪೂರೈಕೆಮಾಡಿ ಅದರ ಮೂಲಕ ಆಸೆಗಳನ್ನು ಇನ್ನ? ವರ್ಧಿಸುವಂತೆ ಮಾಡುವುದರಿಂದ ಪ್ರಪಂಚ ಒಂದು ಹೆಜ್ಜೆ ಮುಂದೆ ಇಟ್ಟಿದೆ ಎಂದು ನಾನು ನಂಬಲಾರೆ. ಮೃಗೀಯ ಹಸಿವೆಯನ್ನು ಹೆಚ್ಚು ಮಾಡಲು ಪ್ರಪಂಚದ ತುತ್ತತುದಿಗಾದರೂ ಹೋಗಿ ಅವುಗಳನ್ನು ತೃಪ್ತಿ ಪಡಿಸಲೋಸುಗ ದೂರ ಮತ್ತು ಸಮಯವನ್ನು ಕಡಮೆ ಮಾಡುತ್ತೇನೆ ಎನ್ನುವ ಅವನ ಹುಚ್ಚು ಕಲ್ಪನೆ ಮತ್ತು ಪ್ರಯತ್ನಕ್ಕೆ ನಾನು ಮನಃಪೂರ್ವಕವಾಗಿ ಜುಗುಪ್ಸೆ ಪಡುತ್ತೇನೆ. ಆಧುನಿಕ ನಾಗರಿಕತೆ ಈ ಎಲ್ಲ ವಿ?ಯಗಳಿಗೆ ಸಮರ್ಥನೆಯನ್ನು ನೀಡುವುದಾದರೆ ಅದನ್ನು ನಾನು ಭಗವಂತನ ವೈರಿ ಅಥವಾ ಸೈತಾನಮನೋಭಾವನೆ ಎಂದು ಕರೆಯುತ್ತೇನೆ’ – ಎಂದು ಗಾಂಧಿ ಹೇಳಿದ್ದು ಇದೆ (Young India, 17.3. 1927, p. 85).
ಗಾಂಧಿಯವರ ದೃಷ್ಟಿಯಲ್ಲಿ “ಮನಸ್ಸು ಒಂದು ನೆಮ್ಮದಿರಹಿತ ಪಕ್ಷಿಯ ಹಾಗೆ; ಹೆಚ್ಚು ಪಡೆದಂತೆಲ್ಲ ಮತ್ತಷ್ಟು ಪಡೆಯಬೇಕೆಂಬ ದುರಾಸೆಪೀಡಿತ ಅತೃಪ್ತ ಹಕ್ಕಿಯ ಹಾಗೆ”(Hind Swaraj, 1908).
ಮನುಷ್ಯನು ಸ್ವಭಾವತಃ ಆಸೆಬುರುಕ. ಕಣ್ಣಿಗೆ ಬಿದ್ದದ್ದನ್ನೆಲ್ಲ ತನ್ನದನ್ನಾಗಿ ಮಾಡಿಕೊಳ್ಳುವ, ಅನುಭವಿಸುವ ಚಪಲ ಆತನದು. ತನ್ನಲ್ಲಿಲ್ಲದಿದ್ದರೆ ಬೇರೆಯವರಿಂದ ಪಡೆಯುವ, ಕಿತ್ತುಕೊಳ್ಳುವ ಪ್ರವೃತ್ತಿ ಅವನಲ್ಲಿದೆ. ಆ ಪ್ರವೃತ್ತಿಯಿಂದಾಗಿ ಆತ ಸರಿ-ತಪ್ಪುಗಳ ಪರಿಜ್ಞಾನ ಕಳೆದುಕೊಳ್ಳುತ್ತಾನೆ. ತನ್ನಲ್ಲಿರುವ ಬುದ್ಧಿ, ತಂತ್ರ ಕೊನೆಗೆ ಹಿಂಸೆಯನ್ನೂ ಪ್ರಯೋಗಿಸುತ್ತಾನೆ. ಇದು ಸಮಾಜವಿರೋಧಿ ಕೃತ್ಯ ಎಂಬ ಅರಿವು ಇದ್ದರೂ ಆಸೆಗೆ ಸಿಲುಕಿದ ಮನಸ್ಸು ಬುದ್ಧಿಪೂರ್ವಕವಾಗಿಯೇ ಈ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ. ಕೊನೆಗೆ ಅವನು ಆಸೆಗಳ ದಾಸನಾಗುತ್ತಾನೆ. ತಾನು ಎಂತಹ ಪ್ರಪಾತಕ್ಕೆ ಎಸೆಯಲ್ಪಡುತ್ತಿದ್ದೇನೆ ಎಂಬ ಎಚ್ಚರವೂ ಅವನಿಗಿರುವುದಿಲ್ಲ. ಸರಿ-ತಪ್ಪುಗಳ ವಿವೇಚನೆ ಕಳೆದುಕೊಂಡ ಮನುಷ್ಯ ರಾಕ್ಷಸನಾಗುತ್ತಾನೆ; ಹಿಂಸೆಯ ಸಹಾಯ ಪಡೆಯುತ್ತಾನೆ.
ಈ ಕಾರಣದಿಂದ “ನಿನ್ನ ಮನಸ್ಸಿನ ಮೇಲೆ ಲಗಾಮು ಹಾಕು” ಎಂದು ಗಾಂಧಿಯವರು ಹೇಳುತ್ತಾರೆ. “ಅದು ದಾಂಧಲೆ ಮಾಡಿದರೆ ಶಮನ ಮಾಡು. ಕನಿಷ್ಟ ಅಗತ್ಯಗಳಿಗೆ ನಿನ್ನನ್ನು ನೀನು ನಿಗ್ರಹಿಸಿಕೋ. ಇದ್ದುದರಲ್ಲಿ ಸಾಕು ಎನ್ನುವ ಸಂತೃಪ್ತಿಪಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚಿನದು ಇನ್ನೇನೂ ಬೇಡ ಎನ್ನುವ ಪರಿಜ್ಞಾನ ಬೆಳಗಬೇಕು. ಈ ದಾರಿಯಲ್ಲಿ ನಡೆದ ಮನುಷ್ಯನಿಗೆ ತೃಪ್ತಿ ಸಿಕ್ಕಿದಾಗ ಅವನು ಬೇರೆಯವರೆಡೆಗೂ ತನ್ನ ಗಮನ ಹರಿಸುತ್ತಾನೆ. ಪರರ ಕಷ್ಟಸುಖಗಳಿಗೆ ಸ್ಪಂದಿಸುತ್ತಾನೆ. ಸಮಾಜದ ಇತರರ ಬಗೆಗಿನ ತನ್ನ ಕರ್ತವ್ಯದ ಬಗ್ಗೆ ಜಾಗೃತನಾಗುತ್ತಾನೆ.”
ನಮ್ಮ ಬಯಕೆಗಳನ್ನು ತಣಿಸಲು ಪ್ರಯತ್ನಿಸಿದಷ್ಟೂ ಅದು ಇನ್ನೂ ಹೆಚ್ಚು ಕೆರಳಿ ಲಂಗುಲಗಾಮಿಗೆ ಸಿಗದ ಹಾಗೆ ಆಗುತ್ತದೆ. ಆದ ಕಾರಣ ನಮ್ಮ ಪೂರ್ವಜರು ಆಸೆಗಳಿಗೆ ಒಂದು ಮಿತಿಯನ್ನು ಹಾಕಿದರು. ಅದಕ್ಕೆ ಎಲ್ಲೆಯನ್ನು ಗುರುತಿಸಿದರು. ಅವರು ಸಂತೋಷವನ್ನು ಮಾನಸಿಕರೂಪದಲ್ಲಿ ಕಂಡರೇ ವಿನಾ ದೈಹಿಕ ತೃಪ್ತಿಯಲ್ಲಲ್ಲ. ಅವರ ದೃಷ್ಟಿಯಲ್ಲಿ ಒಬ್ಬ ಮನು? ಶ್ರೀಮಂತನಾದ ಕಾರಣಕ್ಕೆ ಸಂತೋಷವಾಗಿರಬೇಕು ಎಂದೇನಿಲ್ಲ. ಹಾಗೆಯೇ ಒಬ್ಬ ಮನು? ಬಡವನಾದ ಮಾತ್ರಕ್ಕೆ ದುಃಖಿತನಾಗಿರಬೇಕೆಂದೂ ಇಲ್ಲ. ಸಾಮಾನ್ಯವಾಗಿ ಎಲ್ಲರ ಅನುಭವ ಎಂದರೆ ಶ್ರೀಮಂತರಿಗಿಂತ ಬಡವರೇ ಹೆಚ್ಚು ಸುಖಿಗಳು. ಈ ಕಾರಣದಿಂದ ನಮ್ಮ ಪೂರ್ವಿಕರು ಸುಖ- ಸಾಧನಗಳ ಹಾಗೂ ಭೋಗವಸ್ತುಗಳಿಂದ ದೂರವಿರುವ ಪ್ರೇರಣೆ ನೀಡಿದರು.
“ಮನುಷ್ಯನು ಸರಳ ಜೀವನ, ಉನ್ನತ ವಿಚಾರಗಳಿಂದ ಯಾವಾಗ ಕೆಳಗಿಳಿಯುವನೆಂದರೆ ತನ್ನ ನಿತ್ಯಜೀವನದಲ್ಲಿ ಆತ ಬಯಕೆಗಳನ್ನು ಹೆಚ್ಚುಮಾಡಿಕೊಳ್ಳಲು ಪ್ರಾರಂಭಿಸಿದಾಗ. ಮನುಷ್ಯನ ನಿಜವಾದ ಸಂತೋಷ ಅವನ ಸಂತೃಪ್ತ ಮನೋಭಾವದಲ್ಲಿದೆ. ಯಾರು ಯಾವಾಗ ಜೀವನದಲ್ಲಿ ಎಲ್ಲವನ್ನೂ ಇಟ್ಟುಕೊಂಡು ಅಸಂತೋಷಿಗಳಾಗುತ್ತಾರೆ ಎಂದರೆ ಆಸೆಗಳಿಗೆ ದಾಸರಾದಾಗ. ಆಸೆಗಳಿಗೆ ದಾಸರಾಗುವುದಕ್ಕಿಂತ ಹೆಚ್ಚಿನ ದಾಸ್ಯತೆ ಬೇರೊಂದಿಲ್ಲ. ನಮ್ಮ ಋಷಿಮುನಿಗಳು ಬಹಳ ಹಿಂದಿನ ಕಾಲದಿಂದಲೂ ಅತ್ಯಂತ ಉನ್ನತ ಸ್ಥಾನದಲ್ಲಿ ನಿಂತು ಹೇಳುತ್ತಿದ್ದ ಮಾತುಗಳೆಂದರೆ ಮನು? ತನಗೆ ತಾನೇ ಶತ್ರು ಮತ್ತು ಒಳ್ಳೆಯ ಸ್ನೇಹಿತ. ದಾಸನಾಗುವುದು ಅಥವಾ ಬಿಡುವುದು ಅವನ ಕೈಯಲ್ಲೇ ಇದೆ. ಒಬ್ಬ ವ್ಯಕ್ತಿಗೆ ನಿಜವಾದದ್ದು ಇಡೀ ಸಮಾಜಕ್ಕೆ ಅನ್ವಯವಾಗುತ್ತದೆ.” (Harijan 1.2. 1942, p. 27)
ಗಾಂಧಿಯವರ ಪ್ರಕಾರ ’ಪಾಶ್ಚಿಮಾತ್ಯ ಆರ್ಥಿಕ ವ್ಯವಸ್ಥೆಗಳು ಐಹಿಕ ಸುಖ-ಭೋಗಗಳ ಅನುಭೋಗದಿಂದ ಬಯಕೆಗಳನ್ನು ಇನ್ನೂ ಹೆಚ್ಚು ವರ್ಧಿಸುವಂತೆ ಮಾಡುತ್ತವೆ. ಅವರ ದೃಷ್ಟಿಯಲ್ಲಿ ಭೌತಿಕವಸ್ತುಗಳು ನಶ್ವರ. ಆದ್ದರಿಂದ ಅವುಗಳ ಅನುಭೋಗದಿಂದ ಶಾಶ್ವತ ಸಂತೋಷ ಮತ್ತು ಸಂಪೂರ್ಣ ತೃಪ್ತಿ ಅಸಾಧ್ಯ. ಒಂದು ಹಂತದ ನಂತರ ಅದು ಸಂತೋಷವನ್ನು ವೃದ್ಧಿಸುವುದರ ಬದಲು ನಿಜವಾಗಿಯೂ ಕಡಮೆ ಮಾಡುತ್ತದೆ.
ತಮ್ಮ ಜೀವನಮಟ್ಟವನ್ನು ಹೆಚ್ಚಿಸುವ ಸಲುವಾಗಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು, ಒಂದು ದೇಶ ಇನ್ನೊಂದು ದೇಶವನ್ನು ಸುಲಿಗೆ, ಶೋಷಣೆ ಮಾಡುವ ಪ್ರವೃತ್ತಿ ಇಂದು ಎಲ್ಲೆಡೆ ಕಂಡುಬರುತ್ತಿದೆ. ಈ ಕಾರಣದಿಂದ ಸಾಮ್ರಾಜ್ಯಶಾಹಿತ್ವ, ಪ್ರಪಂಚದ ಮಹಾಯುದ್ಧಗಳು, ಹೊಟ್ಟೆಕಿಚ್ಚು, ದ್ವೇಷ, ಅಸಂತೋಷ, ಜೀವನಾವಶ್ಯಕ ವಸ್ತುಗಳ ಉತ್ಪಾದನೆಯ ಬದಲು ಭೋಗವಸ್ತುಗಳ ಉತ್ಪಾದನೆ, ಸಾಮಾನ್ಯರ ಹಿತವನ್ನು ಬಲಿಗೊಟ್ಟು ಅನಗತ್ಯವಾದ, ಅಗತ್ಯವಲ್ಲದಂತಹ ಫ್ಯಾಶನ್ಗಳ ಮೋಹದ ಮನೋಭಾವನೆಯ ಬೆಳವಣಿಗೆ ಇತ್ಯಾದಿ ಎಲ್ಲೆಡೆ ಕಂಡುಬರುತ್ತಿದೆ. ಗಾಂಧಿಯವರ ಈ ವಿಚಾರವನ್ನು ಅನೇಕ ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರು ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಅದೇ ರೀತಿಯ ಅಭಿಪ್ರಾಯಗಳನ್ನು ಇತ್ತೀಚೆಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ರೂಪ್ಕೆ ಬೆಳವಣಿಗೆ ಹೊಂದುತ್ತಿರುವ ದೇಶದ ಜನ ತಮ್ಮ ಭೌತಿಕ ಜೀವನಮಟ್ಟವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡುತ್ತಿರುವ ವಿವಿಧ ಪ್ರಯತ್ನಗಳನ್ನು ಕಂಡು ಈ ರೀತಿ ಹೇಳುತ್ತಾರೆ – “ಗಾಂಧಿಯವರು ಹೇಳಿದ ಮಾನವೀಯ ಬುದ್ಧಿಮತ್ತೆಯ ಸಿದ್ಧಾಂತವನ್ನು ಬಿಟ್ಟು ಸಮಾಜವಾದವನ್ನು ಅನುಸರಿಸುತ್ತಿರುವುದು ಅತ್ಯಂತ ವಿಷಾದನೀಯ ಸಂಗತಿ” ಎಂದು. ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಕೇವಲ ಭೌತಿಕವಸ್ತುಗಳನ್ನು ಉತ್ಪಾದಿಸಿದರೆ ಮಾತ್ರ ಸಾಧ್ಯ ಎನ್ನುವ ಮಾತನ್ನು ಗಾಂಧಿಯವರು ಅಲ್ಲಗಳೆಯುತ್ತಾರೆ. ಬದಲಿಗೆ ನಮ್ಮ ಆಸೆಗಳು ತೀವ್ರಗತಿಯಲ್ಲಿ ವೃದ್ಧಿಯಾಗುತ್ತಿರುವ ಕಾರಣ ಕೇವಲ ಭೌತಿಕವಸ್ತುಗಳ ಉತ್ಪಾದನೆಯಿಂದ ಮಾತ್ರ ಮಾನವನ ಸುಖ-ಸಂತೋ?ಗಳನ್ನು ಹೆಚ್ಚುಮಾಡಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು.
ಪ್ರಪಂಚದ ಅನೇಕ ಶ್ರೀಮಂತ ದೇಶಗಳ ಮತ್ತು ಬಡದೇಶಗಳಲ್ಲಿರುವ ಶ್ರೀಮಂತರ ಅನುಭವ ಈ ಮಾತನ್ನು ಪುಷ್ಟೀಕರಿಸುತ್ತದೆ. ಆದಕಾರಣ ಗಾಂಧಿಯವರು ’ಆಸೆಗಳಿಲ್ಲದ ಸ್ಥಿತಿ’ಯ ನಿರ್ಮಾಣದ ಅನಿವಾರ್ಯತೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಇದನ್ನೇ ಅವರು ’ಕಣ್ಣಿಗೆ ಕಾಣುವಂತಹ’ ಅಥವಾ ’ಎದ್ದುತೋರುವಂತಹ ಸರಳತೆ’ (Conspicuous Austerity) ಎಂದು ಕರೆದರು. ಅವರ ಜೀವನದ ಒಂದು ಬಹಳ ಮುಖ್ಯವಾದ ಜೀವನತತ್ತ್ವ ’ಸರಳ ಜೀವನ, ಉನ್ನತ ಚಿಂತನೆ’. ಈ ಕಾರಣಕ್ಕಾಗಿ ಅವರನ್ನು ’ಒಡಂಬಡಿಕೆ ಮಾಡಿಕೊಳ್ಳದ ವ್ಯಾವಹಾರಿಕ ಆದರ್ಶ ಪುರುಷ’ ಎಂದು ಬಹಳಷ್ಟು ಜನರು ಗುರುತಿಸುತ್ತಿದ್ದರು.
“ನಮ್ಮ ನಾಗರಿಕತೆ, ಸಂಸ್ಕೃತಿ ಮತ್ತು ಸ್ವರಾಜ್ಯ – ಇವು ಹೆಚ್ಚುತ್ತಹೋಗುವ ಆಸೆಗಳ ಮೇಲೆ ನಿರ್ಭರವಾಗಿಲ್ಲ” ಎಂದು ಸ್ಪಷ್ಟವಾದ ಮಾತುಗಳಲ್ಲಿ ಗಾಂಧಿಯವರು ಹೇಳಿದ್ದಾರೆ. ಬದಲಾಗಿ ಸ್ವಂತ ಆಸೆಗಳ ಮೇಲೆ ಕಡಿವಾಣ ಹಾಕಿಕೊಳ್ಳುವುದು, ಇಚ್ಛಾಪೂರ್ವಕವಾಗಿ ಕಡಮೆ ಮಾಡಿಕೊಳ್ಳುವುದು ಮತ್ತು ಅನಪೇಕ್ಷಮನೋಭಾವ ಬೆಳೆಸಿಕೊಳ್ಳುವಂತೆ ತಿಳಿಸಿದರು. “ನಾಗರಿಕತೆ ಎಂದರೆ ಆಸೆಗಳ ಅನಂತತೆ ಅಲ್ಲ. ಬದಲಾಗಿ ಆಸೆಗಳನ್ನು ಇಚ್ಛಾಪೂರ್ವಕವಾಗಿ ನಿಯಂತ್ರಿಸುವುದು” ಎಂದು ಅವರು ಹೇಳುತ್ತಿದ್ದರು. ಈ ರೀತಿ ಮಾಡಿದಾಗಲೇ ನಿಜವಾದ ಸಂತೋಷ ವೃದ್ಧಿಯಾಗುತ್ತದೆ; ತೃಪ್ತಿ ದೊರೆಯುತ್ತದೆ ಮತ್ತು ಜನರ ಸೇವೆ ಮಾಡುವ ನಮ್ಮ ಸಾಮರ್ಥ್ಯ ಹೆಚ್ಚುತ್ತದೆ.
ಭಾರತೀಯ ತತ್ತ್ವಜ್ಞಾನ ’ಎಲ್ಲವನ್ನೂ ಪರಿತ್ಯಜಿಸು’ (Renounce everything) ಎನ್ನುತ್ತದೆ. ಬದುಕಿರುವವರೆಗೂ ಈ ಶರೀರ ಇರುವುದು ನಮ್ಮ ಆಸೆಗಳನ್ನು ತೃಪ್ತಿಪಡಿಸಿಕೊಳ್ಳಲು ಅಲ್ಲ. ಬದಲಾಗಿ ಇತರರ ಸೇವೆಗಾಗಿ. ಗಾಂಧಿಯರ ಪ್ರಕಾರ – “ಮನು?ನ ಶರೀರ ಇರುವುದು ತನ್ನ ಇಚ್ಛೆಗಳನ್ನು ಪೂರ್ತಿಗೊಳಿಸಿಕೊಳ್ಳುವುದಕ್ಕಲ್ಲ. ಬದಲಾಗಿ ಇತರರ ಸೇವೆಗಾಗಿ. ಜೀವನದ ನಿಜವಾದ ಸಂತೋ?ವಿರುವುದು ನಿರಾಕರಿಸುವುದರಲ್ಲಿ. ಪರಿತ್ಯಜಿಸುವಿಕೆಯೇ ಜೀವನ. ಬಯಕೆಗಳ ಅಮಲೇರಿಸುವಿಕೆಯು ಸಾವಿನಲ್ಲಿ ಪರ್ಯವಸಾನವಾಗುತ್ತದೆ” (Harijan, 24.2. 1946. p. 19)
“ನಾವು ಊಟ, ತಿಂಡಿ, ಪಾನೀಯಸೇವನೆ ಮಾಡುವುದು, ನಡೆಯುವುದು, ನಿದ್ರೆ ಮಾಡುವುದು ಎಲ್ಲವೂ ಜನಸೇವೆಗಾಗಿ. ಅಂತಹ ಒಂದು ಮಾನಸಿಕಸ್ಥಿತಿ ನಿಜವಾದ ಸಂತೋಷವನ್ನು ಮತ್ತು ಹೊಸ ದೃಷ್ಟಿಕೋನವನ್ನು ತಂದುಕೊಡುತ್ತದೆ. ’ಪರಿತ್ಯಜಿಸುವಿಕೆಯೇ ಜೀವನ’. ಎಲ್ಲವನ್ನೂ ಪರಿತ್ಯಜಿಸು. ನಿನ್ನದೆಲ್ಲವನ್ನೂ ದೇವರಿಗೆ ಸಮರ್ಪಿಸಿ ಜೀವಿಸು. ಬದುಕಿಗೆ ನಿಜವಾದ ಅರ್ಥ ’ಎಲ್ಲವನ್ನೂ ವರ್ಜಿಸುವುದು.’ ಜೀವನದ ತೃಪ್ತಿ ಪರಿತ್ಯಜಿಸುವಿಕೆಯಲ್ಲಿದೆ. ಬಯಕೆಗಳನ್ನು ತಣಿಸುವುದರಿಂದ ನಮ್ಮ ಜೀವನ ಸಾವಿನಲ್ಲಿ ಪರ್ಯವಸಾನಗೊಳ್ಳುತ್ತದೆ. ಸೇವೆಗಾಗಿ ಮಾಡಿದ ಪರಿತ್ಯಜಿಸುವಿಕೆ ನಿಜವಾಗಿಯೂ ಅಳಿಸಲಾಗದ, ತೊಡೆದುಹಾಕಲಾಗದ ಸಂತೋ?ವನ್ನು ನಮಗೆ ನೀಡುತ್ತದೆ. ಕಾರಣ ಆ ’ಅಮೃತಮಯ ಆನಂದ’ ಒಳಗಿನಿಂದ ಹೊರಹೊಮ್ಮುತ್ತದೆ. ಈ ರೀತಿಯ ಆನಂದವಿಲ್ಲದೆ ದೀರ್ಘಾವಧಿಯ ಜೀವನ ಸಾಧ್ಯವಿಲ್ಲ. ಅಕಸ್ಮಾತ್ ಸಾಧ್ಯವಾದರೂ ಅಂತಹ ಜೀವನ ಸಾರ್ಥಕವಾದುದಲ್ಲ. ಮನು? ಆದ? ಕಡಮೆ ಸಂಪತ್ತು ಮತ್ತು ಬಯಕೆಗಳನ್ನು ಹೊಂದಿದ್ದರೆ ಅವನು ’ಭಾಗ್ಯಶಾಲಿ’. ಜೀವನ ಭೋಗಿಸಲು ಅಲ್ಲ, ಇನ್ನೊಬ್ಬರ ಸೇವೆಯಲ್ಲಿ ನಮ್ಮ ಶರೀರ, ಮನಸ್ಸು ಮತ್ತು ಆತ್ಮಗಳನ್ನು ಸಮರ್ಪಿಸಬೇಕು” (Speeches and Writings of Mahatma Gandhi, 4th Ed., p. 353-55).
ಇದರ ಅರ್ಥ ಒಬ್ಬ ವ್ಯಕ್ತಿ ತನ್ನ ಸಂಪತ್ತನ್ನೆಲ್ಲ ತೊರೆಯಬೇಕೆಂದೇನಲ್ಲ. ಮನುಷ್ಯ ಸಂತೋಷವಾಗಿರಬೇಕಾದರೆ ಮತ್ತು ಅವನ ಆಧ್ಯಾತ್ಮಿಕ ಪ್ರಗತಿಯಾಗಬೇಕಾದರೆ ಸ್ವಲ್ಪಮಟ್ಟಿನ ಭೌತಿಕ ವಸ್ತುಗಳ ಅನುಭೋಗದ ಅಗತ್ಯವಿದೆ. ಆದರೆ ಅಗತ್ಯಗಳ ಪೂರೈಕೆ ಒಂದು ಹಂತವನ್ನು ದಾಟಿ ಮುಂದೆ ಹೋಗಬಾರದು. ಇಲ್ಲದಿದ್ದರೆ ಅದು ಅವನಲ್ಲಿ ಭೌತಿಕ, ಬೌದ್ಧಿಕ ವಿ?ಯಲಂಪಟತೆಯನ್ನು ಕೆರಳಿಸಿ ಅವನ ಅವನತಿಗೆ ಕಾರಣವಾಗುತ್ತದೆ. ಇದರ ನಿಜವಾದ ಅರ್ಥ ಒಬ್ಬ ವ್ಯಕ್ತಿ ಎಲ್ಲ ವಿಧವಾದ ಬಂಧನದಿಂದ ಮುಕ್ತನಾಗಿ ಭಗವಂತನಿಂದ ಬಳುವಳಿಯಾಗಿ ಬಂದ ಈ ಶರೀರ, ಸಂಪತ್ತು ಮತ್ತು ಸರ್ವಸ್ವವನ್ನೂ ಅವನ ಸೇವೆಗೆ ಸಮರ್ಪಿಸುವುದೇ ಉತ್ತಮ ದಾರಿ ಎಂದು ಹೇಳಿದರು.
ಆದರೆ “ಆಸೆಗಳನ್ನು ಮಿತಗೊಳಿಸಿ” ಎಂಬ ಮಾತನ್ನು ಗಾಂಧಿಯವರ ವಿಮರ್ಶಕರು ಬೇರೆಬೇರೆ ರೀತಿ ಅರ್ಥೈಸಿದರು. ವೈರಾಗ್ಯವುಳ್ಳ ಸಮಾಜದ ನಿರ್ಮಾಣ ಮಾಡಲು ಗಾಂಧಿಯವರು ಹೊರಟಿದ್ದಾರೆ. ಆದ್ದರಿಂದ ಅಂತಹ ಸಮಾಜವು ಅರ್ಥಶಾಸ್ತ್ರವನ್ನು ಪರಿಗಣಿಸಬೇಕಿಲ್ಲ ಎಂಬ ಟೀಕೆ ಮಾಡಿದರು. ಅವರ ವಿಮರ್ಶಕರು ಗಾಂಧಿಯವರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದರು; ಗಾಂಧಿಯವರು ನುಡಿದಿದ್ದುದು – “ಮನುಷ್ಯ ಅನಗತ್ಯವಾದ ಆಸೆಗಳಿಗೆ ದಾಸನಾಗದೆ ತನ್ನ ಕಲ್ಯಾಣವನ್ನು ಸಾಧಿಸಿಕೊಳ್ಳಬೇಕು” ಎಂದು.
ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರ ಪ್ರಕಾರ ಅತ್ಯಂತ ಮುಂದುವರಿದ ದೇಶಗಳಲ್ಲಿ ಬಹುಮುಖ್ಯವಾದ ಆದರ್ಶವೆಂದರೆ – ಕಡಮೆ ಕೆಲಸ ಮಾಡಿ, ಅತಿಹೆಚ್ಚಿನ ಹಣವನ್ನು ಸಂಪಾದಿಸಿ, ಕಂತುರೂಪದಲ್ಲಿ ಸಾಮೂಹಿಕ ಉತ್ಪಾದನೆಯಿಂದ ದೊರಕುವ ಉತ್ಕೃಷ್ಟ ದರ್ಜೆಯ ಸರಕು ಸೇವೆಗಳನ್ನು ಉಪಯೋಗಿಸಿ ಅದರಿಂದ ಗರಿಷ್ಠ ತೃಪ್ತಿಯನ್ನು ಪಡೆಯುವುದೇ ಆಗಿದೆ. ಆಧುನಿಕ ಮಾನವ ನಿಜವಾದ ಹಣರೂಪಿ ಆದಾಯದಿಂದ ವಿವಿಧ ವಸ್ತುಗಳನ್ನು ಖರೀದಿಸಿ, ಅನುಭೋಗಿಸಿ ಅದರಿಂದ ಬರುವ ಆನಂದವನ್ನು ಮಾತ್ರ ತನ್ನ ಗಮನದಲ್ಲಿಟ್ಟುಕೊಂಡು ಉಳಿದದ್ದೆಲ್ಲವನ್ನೂ ತನ್ನ ಯೋಚನಾ ಪರಿಧಿಯಿಂದ ಹೊರಗಿಟ್ಟಿದ್ದಾನೆ.
ಆದ್ದರಿಂದ ಗಾಂಧಿಯವರು ಮತ್ತೆಮತ್ತೆ – “ಎಲ್ಲಿಯವರೆಗೆ ಹಣವಂತರು ತಮ್ಮ ಹಣ ಮತ್ತು ಆಭರಣಗಳನ್ನು ಹಸಿವಿನಿಂದ ನರಳುವ ಸಾವಿರಾರು ಬಡವರ ಏಳಿಗೆಗಾಗಿ ’ವಿಶ್ವಸ್ಥನಿಧಿ’ಯ ರೂಪದಲ್ಲಿ ಇಡುವುದಿಲ್ಲವೋ, ಅಲ್ಲಿಯವರೆಗೆ ಭಾರತಕ್ಕೆ ಮುಕ್ತಿ ಇಲ್ಲ” ಎಂದು ಕಳಕಳಿಯಿಂದ ಹೇಳುತ್ತಿದ್ದರು. ಅವರ ಪ್ರಕಾರ, ಭಾರತ ತನ್ನ ಸಾವಿರಾರು ಗುಡಿಕೈಗಾರಿಕೆಗಳನ್ನು ಸ್ಥಾಪಿಸಿ ತನ್ಮೂಲಕ ಜಗತ್ತಿಗೆ ಶಾಂತಿಯನ್ನು ಕೊಡಲು ಸಾಧ್ಯವಾಗುವುದು ಭಾರತೀಯರು ಸರಳ ಮತ್ತು ಉದಾತ್ತ ಜೀವನವನ್ನು ನಡೆಸಿದಾಗ ಮಾತ್ರ. ಆಗ ಸ್ವತಂತ್ರ ಭಾರತಕ್ಕೆ ತನ್ನ ಕರ್ತವ್ಯವನ್ನು ನಿಭಾಯಿಸುವ ಶಕ್ತಿ ಪ್ರಾಪ್ತವಾಗುತ್ತದೆ. ಉನ್ನತ ಚಿಂತನೆಸಂಕೀರ್ಣತೆಯಿಂದ ಕೂಡಿದ ಭೌತಿಕಜೀವನಕ್ಕೆ ಧನಪಿಶಾಚಿಯ ಆರಾಧನೆಯ ಪರಿಣಾಮದಿಂದ ಅಸಂಬದ್ಧವೆನಿಸಿದೆ. ಜೀವನದ ಎಲ್ಲ ರೀತಿಯ ಶ್ರೇಷ್ಠತೆ ಸಾಧ್ಯವಾಗುವುದು ನಾವು ಉದಾತ್ತ ಜೀವನ ನಡೆಸಿದಾಗ ಮಾತ್ರ (Harijan.,1.9. 1946, p. 285).
ಗಾಂಧಿಯವರ ಪ್ರಕಾರ ಮನುಷ್ಯ ಹೆಚ್ಚುಹೆಚ್ಚು ಭೌತಿಕ ಆಸೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನ ಮಾಡುವುದರಿಂದ ಅನೇಕ ರೀತಿಯ ಅನಪೇಕ್ಷಿತ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.” ಅವುಗಳು ಯಾವಾವುಗಳೆಂದು ನೋಡೋಣ.
- ಅತಿ ಹೆಚ್ಚು ಹಣಸಂಪಾದನೆ ಮಾಡುವ ಪ್ರವೃತ್ತಿ
ಮನುಷ್ಯ ಹೆಚ್ಚುಹೆಚ್ಚು ಭೌತಿಕ ಆಸೆಗಳನ್ನು ತೃಪ್ತಿಪಡಿಸುವ ಸಲುವಾಗಿ ಹೆಚ್ಚುಹೆಚ್ಚು ಐಶ್ವರ್ಯವನ್ನು ಸಂಪಾದಿಸಲು ಪ್ರಯತ್ನ ಪಡುವನು. ಶಕ್ತಿಶಾಲಿಯಾದ ಶ್ರೀಮಂತ ಹಣಸಂಪಾದನೆ ಮಾಡಲಾಗದ ಇತರ ಜನರ ಶೋಷಣೆ ಮಾಡಿ ಸಂಪತ್ತನ್ನು ಶೇಖರಿಸಿ ತನ್ನ ಭೌತಿಕ ಬಯಕೆಗಳನ್ನು ತೃಪ್ತಿಪಡಿಸುವ ಪ್ರಯತ್ನ ಮಾಡುತ್ತಾನೆ. ಈ ಉದ್ದೇಶ ಪೂರ್ತಿಮಾಡಲು ಅವನು ಆವಶ್ಯಕತೆ ಮೀರಿ ಹಣವನ್ನು ಶೇಖರಿಸುತ್ತಾನೆ. ಆದುದರಿಂದ ಅದು ಅವನಿಗೂ ಉಪಯೋಗವಾಗದೆ ನಿರರ್ಥಕವಾಗುತ್ತದೆ. ಆದರೆ ಲಕ್ಷಾಂತರ ಮಂದಿ ಬದುಕಲು ಹಣವಿಲ್ಲದೆ ನರಳಿ ಸಾಯುತ್ತಿದ್ದಾರೆ. ಶ್ರೀಮಂತ ತನ್ನ ಹೆಚ್ಚುವರಿ ಹಣವನ್ನು ಬಡವರಿಗೆ ಕೊಡಲು ಮುಂದೆ ಬರುವುದಿಲ್ಲ ಮತ್ತು ಅವರ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಉತ್ಸಾಹ ತೋರುವುದಿಲ್ಲ. ಹೀಗೆ ಹೆಚ್ಚುವರಿ ಹಣವನ್ನು ತಾನೂ ಉಪಯೋಗಿಸದೆ ಇತರರಿಗೂ ಕೊಡದೆ ದುರುಪಯೋಗ ಮಾಡುತ್ತಾನೆ. ಪ್ರತಿಯೊಬ್ಬ ಮನುಷ್ಯ ತನಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡರೆ ಯಾರೊಬ್ಬರಿಗೂ ತೊಂದರೆ ಆಗದೆ ಎಲ್ಲರೂ ಸಂತೋ?ದಿಂದ, ತೃಪ್ತಿಯಿಂದ ಜೀವನ ನಡೆಸಬಹುದು. - ವರ್ಗಸಂಘರ್ಷಕ್ಕೆ ಹಾದಿ
ಹೆಚ್ಚುಹೆಚ್ಚು ಭೌತಿಕಬಯಕೆಗಳನ್ನು ತೀರಿಸುವ ಪ್ರಯತ್ನದಲ್ಲಿ ಶಕ್ತಿಶಾಲಿ ಶ್ರೀಮಂತರು ಬಡವರ ಶೋಷಣೆ, ಸುಲಿಗೆ ಮಾಡಲು ಪ್ರಾರಂಭಿಸುತ್ತಾರೆ. ಇದು ಸಮಾಜದಲ್ಲಿ ಸ್ಪಷ್ಟವಾಗಿ ಎರಡು ವರ್ಗಗಳನ್ನು ನಿರ್ಮಾಣ ಮಾಡುತ್ತದೆ – ಉಳ್ಳವರು (Haves) ಮತ್ತು ಇಲ್ಲದವರು (Have-nots) ಎಂದು. ಇದು ವರ್ಗಸಂಘರ್ಷ ಮತ್ತು ಸಾಮಾಜಿಕ ಅಶಾಂತಿಗೆ ನಾಂದಿಯಾಗಿತ್ತದೆ. ಸಾಮ್ರಾಜ್ಯಶಾಹಿ, ವಸಾಹತುಶಾಹಿ ಪ್ರವೃತ್ತಿಗಳು ಒಬ್ಬ ಮನುಷ್ಯ ಇನ್ನೊಬ್ಬನನ್ನು, ಒಂದು ದೇಶ ಇನ್ನೊಂದು ದೇಶವನ್ನು ಶೋಷಣೆ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತವೆ. ಇವೆಲ್ಲವೂ ಹಿಂಸೆಗೆ ಪ್ರೇರಣೆ ನೀಡುತ್ತವೆ ಮತ್ತು ಮಾನವಿಕ ಸಮಾಜಕ್ಕೆ ಭದ್ರವಾದ ತಳಪಾಯವನ್ನು ಮತ್ತು ಹೊಸದಾದ ವ್ಯವಸ್ಥೆಯನ್ನು ನಿರ್ಮಿಸಲು ಅಡ್ಡಿಯಾಗುತ್ತವೆ. - ಬಡವ, ಬಲ್ಲಿದ ವರ್ಗಗಳ ನಿರ್ಮಾಣ ಮತ್ತು ಲಾಭದಾಯಕ ವಸ್ತುಗಳ ಉತ್ಪಾದನೆ
ಮಿತಿಮೀರಿದ ಬಯಕೆಗಳು ಇನ್ನೊಂದು ರೀತಿಯ ಕೆಟ್ಟ ಪರಿಣಾಮವನ್ನು ಆರ್ಥಿಕ ವ್ಯವಸ್ಥೆಯ ಮೇಲೆ ಬೀರುತ್ತವೆ. ಕೇವಲ ಕೆಲವೇ ಶ್ರೀಮಂತ ವ್ಯಕ್ತಿಗಳು ಬಡವರ ಹೊಟ್ಟೆಯ ಮೇಲೆ ಹೊಡೆದು ಹೆಚ್ಚಿನ ಪ್ರಮಾಣದ ಸರಕು ಮತ್ತು ಸೇವೆಗಳ ಅನುಭೋಗ ಮಾಡುತ್ತಾರೆ. ಶ್ರೀಮಂತರ ಬಳಿ ಹೇರಳ ಧನರಾಶಿ ಇರುವುದರಿಂದ ಅವರು ತಮಗೆ ಬೇಕೆನಿಸಿದುದೆಲ್ಲವನ್ನೂ ಭೋಗಿಸುವ ಅವಕಾಶ ಕಲ್ಪಿತವಾಗುತ್ತದೆ. ಬಡವರು ಮಾತ್ರ ಹಣದ ಅಭಾವದಿಂದ ದಿನದ ಎರಡು ಹೊತ್ತು ಊಟಮಾಡಲೂ ಆಗದ ಸ್ಥಿತಿಯುಂಟಾಗುತ್ತದೆ. ಹೀಗಾಗಿ ‘ಬಡವರು’ ಮತ್ತು ’ಬಲ್ಲಿದರು’ ಎಂಬ ಎರಡು ಪ್ರತ್ಯೇಕ ಗುಂಪಿನ ಉದಯವಾಗುತ್ತದೆ. ಇದರ ಜೊತೆಗೆ ಉತ್ಪಾದನೆಗಳ ಕೊರತೆಯ ಕಾರಣ ಕೇವಲ ಆಯ್ದ ಕೆಲವೇ ವಸ್ತುಗಳ ಮತ್ತು ಸೇವೆಗಳ ಉತ್ಪಾದನೆ ಸಾಧ್ಯವಾಗುತ್ತದೆ. ಆದಕಾರಣ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿ ಯಾವ ವಸ್ತುಗಳ ಉತ್ಪಾದನೆಯಿಂದ ಅತಿಹೆಚ್ಚಿನ ಲಾಭ ದೊರೆಯುವುದೋ ಅಂತಹ ವಸ್ತುಗಳು ಮಾತ್ರ ಉತ್ಪಾದನೆ ಆಗುತ್ತವೆ. ಅನುಭೋಗಿಗಳಿಗೆ ಹೆಚ್ಚಿನ ಉಪಯುಕ್ತತೆ ಸಿಗುವುದೋ ಇಲ್ಲವೋ ಎಂಬುದರ ಬಗ್ಗೆ ಹೆಚ್ಚಿನ ಕಾಳಜಿ ಅಲ್ಲಿ ಇರುವುದಿಲ್ಲ. - ಹೆಚ್ಚು ಹೆಚ್ಚು ಬಯಕೆಗಳ ಪೂರೈಕೆಯಿಂದ ಅಸಂತುಷ್ಟ ಮಾನವರ ಸೃಷ್ಟಿ
ಇನ್ನೊಂದು ಖೇದದ ವಿಷಯವೆಂದರೆ ಪ್ರತಿವ್ಯಕ್ತಿಗೂ ತಾನು ಕಲ್ಪಿಸಿದ ತೃಪ್ತಿ ಸಿಕ್ಕಿದರೂ ಕೂಡ ಅದರ ಪರಿಣಾಮವಾಗಿ ಆಸೆಗಳು ಇನ್ನೂ ಹೆಚ್ಚಾಗಿ ಮನು? ಮೊದಲಿಗಿಂತಲೂ ಹೆಚ್ಚು ಅಸಂತುಷ್ಟನಾಗುತ್ತಾನೆ. ನಿಜ ಹೇಳಬೇಕೆಂದರೆ ಗಾಂಧಿಯವರು ಎಂದೂ ಜೀವನದಲ್ಲಿ ವೈರಾಗ್ಯ ಮನೋಭಾವನೆ ಮತ್ತು ತ್ಯಾಗದ ಬೋಧನೆ ಮಾಡಲಿಲ್ಲ. ಹಾಗೆ ನೋಡಿದರೆ ಗಾಂಧಿಯವರು ತಮ್ಮ ಸ್ವಂತ ಜೀವನದಲ್ಲಿ ಸುಖ-ಭೋಗಗಳ ಅನುಭವವನ್ನು ಪಡೆದವರೇ ಆಗಿದ್ದರು. ಪ್ರತಿಯೊಬ್ಬ ಮನುಷ್ಯ ತನ್ನ ಕನಿಷ್ಠತಮ ಅಗತ್ಯಗಳನ್ನು ಮಾತ್ರ ಪೂರೈಸಿಕೊಂಡು ತನ್ನ
ಸಾಮ್ರಾಜ್ಯಶಾಹಿ, ವಸಾಹತುಶಾಹಿ ಪ್ರವೃತ್ತಿಗಳು ಒಬ್ಬ ಮನುಷ್ಯ ಇನ್ನೊಬ್ಬನನ್ನು, ಒಂದು ದೇಶ ಇನ್ನೊಂದು ದೇಶವನ್ನು ಶೋಷಣೆ ಮಾಡಲು ಅವಕಾಶ ಕಲ್ಪಿಸಿ ಕೊಡುತ್ತವೆ. ಇವೆಲ್ಲವೂ ಹಿಂಸೆಗೆ ಪ್ರೇರಣೆ ನೀಡುತ್ತವೆ ಮತ್ತು ಮಾನವಿಕ ಸಮಾಜಕ್ಕೆ ಭದ್ರವಾದ ತಳಪಾಯವನ್ನು ಮತ್ತು ಹೊಸದಾದ ವ್ಯವಸ್ಥೆಯನ್ನು ನಿರ್ಮಿಸಲು ಅಡ್ಡಿಯಾಗುತ್ತವೆ. ಆಸೆಗಳ ಪ್ರಮಾಣಕ್ಕೆ ಒಂದು ಮಿತಿಯನ್ನು ಹಾಕಿಕೊಳ್ಳಬೇಕು. ಕಾರಣ ಆಸೆಗಳಿಗೆ ಮಿತಿಯಿಲ್ಲ ಮತ್ತು ಎಲ್ಲ ಆಸೆಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಹೆಚ್ಚುಹೆಚ್ಚು ಬಯಕೆಗಳನ್ನು ಪೂರೈಸಲು ಪ್ರಾರಂಭಮಾಡಿದನೆಂದರೆ ಅದರಿಂದ ಅವನು ಹೆಚ್ಚಿನ ಸಂತೋ? ಪಡೆಯುತ್ತಾನೆ ಎಂದೇನೂ ಇಲ್ಲ. ಬದಲಾಗಿ ಅವನು ಇನ್ನೂ ಹೆಚ್ಚುಹೆಚ್ಚು ಚಡಪಡಿಸುವ ಅಸ್ವಸ್ಥ ವ್ಯಕ್ತಿಯಾಗಿ ಅಶಾಂತಿಯಿಂದ ಕೂಡಿದವನಾಗುತ್ತಾನೆ. - ಜನಸಂಖ್ಯಾ ವೃದ್ಧಿ ಮತ್ತು ಬಯಕೆಗಳ ಆವರ್ಧನೆಯಿಂದ ಜಾಗತಿಕ ಉತ್ಪಾದನೆಗೆ ಮಿತಿ “ತೀವ್ರಗತಿಯ ಜಾಗತಿಕ ಜನಸಂಖ್ಯಾ ವೃದ್ಧಿಯ ಜೊತೆಗೆ ಮಾನವನ ಆಸೆಗಳೂ ಸಹ ವರ್ಧಿಸಿದರೆ ಆಗ ಜಾಗತಿಕ ಉತ್ಪಾದನೆ ಅದನ್ನು ಸರಿಗಟ್ಟಲು ಸಾಧ್ಯವೇ?” – ಎಂದು ಗಾಂಧಿ ಪ್ರಶ್ನಿಸಿದ್ದಾರೆ. ಜನಸಂಖ್ಯಾ ಬೆಳವಣಿಗೆಗೆ ಮತ್ತು ಮಾನವನ ಆಸೆಗಳಿಗೆ ಯಾವುದೇ ಮಿತಿ ಇಲ್ಲ. ಆದರೆ ಗಾಂಧಿಯವರ ಪ್ರಕಾರ ಜಾಗತಿಕ ಉತ್ಪಾದನೆಗೆ ಪ್ರಮುಖವಾಗಿ ಎರಡು ಮಿತಿಗಳುಂಟು. ಮೊದಲನೆಯದಾಗಿ ಜಾಗತಿಕ ನಾಗರಿಕತೆಯ ಆವಶ್ಯಕತೆಗೆ ಅಗತ್ಯವಾದ ಪೆಟ್ರೋಲ್ ಮತ್ತು ಅನೇಕ ರೀತಿಯ ಖನಿಜಗಳು ನಿಶ್ಚಿತಪ್ರಮಾಣದಲ್ಲ? ದೊರೆಯುವುದರಿಂದ ಜಾಗತಿಕ ಉತ್ಪಾದನೆಯನ್ನು ಅಪರಿಮಿತ ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಎರಡನೆಯದಾಗಿ ಹೆಚ್ಚಿನ ಉತ್ಪಾದನೆಗೆ ಹೆಚ್ಚಿನ ರೀತಿಯ ಕೈಗಾರಿಕೀಕರಣ ಮತ್ತು ಕೃಷಿಯ ಯಾಂತ್ರೀಕರಣದ ಅನಿವಾರ್ಯತೆ ಹೆಚ್ಚಾಗಿ ಅದರಿಂದ ವಾತಾವರಣ ಕಲುಷಿತಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಅದರಿಂದ ಮುಂಬರುವ ದಶಮಾನ/ಶತಮಾನಗಳಲ್ಲಿ ಜಗತ್ತು ಹೊಸಹೊಸ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ – ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
- ಶೂನ್ಯ ಬೆಳವಣಿಗೆಯ ತಪ್ಪು ಕಲ್ಪನೆ
ಗಾಂಧಿಯವರ ಕಲ್ಪನೆಯ ಕೂಸಾದ ’ಆಸೆಗಳಿಗೆ ಸ್ವ- ನಿಯಂತ್ರಣ ಮತ್ತು ಅಗತ್ಯಗಳ ಸರಳೀಕರಣ’ ಮಂತ್ರವು ’ಶೂನ್ಯ ಬೆಳವಣಿಗೆ’ (Zeಡಿo ಉಡಿoತಿಣh) ಪರಿಕಲ್ಪನೆಗೆ ಜನ್ಮನೀಡಿದೆ ಎಂದು ಅವರ ಬಹಳ? ಟೀಕಾಕಾರರು ಅಭಿಪ್ರಾಯಪಟ್ಟಿದ್ದಾರೆ. ಟೀಕಾಕಾರರು – ಒಬ್ಬ ಮನು? ಸರಳ ಜೀವನ ನಡೆಸಲು ಪ್ರಾರಂಭಿಸಿದರೆ ಇತರರೂ ಸಹ ಅದನ್ನು ಅನುಕರಿಸುವುದು ಸಾಧ್ಯ. ಇದು ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಾರಣ ಮನು? ಬಯಕೆಗಳನ್ನು ಕಡಮೆ ಮಾಡಿದರೆ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಕಡಮೆಯಾಗಿ ಆರ್ಥಿಕ ಪ್ರಗತಿ ಶೂನ್ಯ ಸ್ಥಿತಿಗೆ ಬರಬಹುದು. ಇದು ಯಾವುದೇ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೆ ಮಾರಕವಾಗುತ್ತದೆ – ಎಂದು ವಿಶ್ಲೇ?ಣೆ ಮಾಡಿದ್ದಾರೆ. ಅರ್ಥಶಾಸ್ತ್ರ ಓದಿದ ಯಾವನೇ ಸಾಮಾನ್ಯ ವ್ಯಕ್ತಿಗೆ ಈ ತರ್ಕ ಸ್ವಲ್ಪಮಟ್ಟಿಗೆ ಸರಿ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ವಿಷಯದ ಆಳಕ್ಕೆ ಇಳಿದು ನೋಡಿದರೆ ನಮಗೆ ಬೇರೆಯದೇ ಚಿತ್ರಣ ದೊರೆಯುತ್ತದೆ. ಇಲ್ಲಿಯೂ ಸಹ ಟೀಕಾಕಾರರು ಗಾಂಧಿಯವರನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ. ಕಾರಣ ಇಷ್ಟೇ : ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ಆರ್ಥಿಕ ವ್ಯವಸ್ಥೆಯಲ್ಲಿ ಬಡವರ ಮತ್ತು ಜನಸಾಮಾನ್ಯರ ಪ್ರಮಾಣ ಒಟ್ಟು ಜನಸಂಖ್ಯೆಯಲ್ಲಿ ಹೆಚ್ಚಾಗಿರುವ ಕಾರಣ ಅವರ ಜೀವನಮಟ್ಟವನ್ನು ಹೆಚ್ಚಿಸಲು ಮತ್ತು ಸುಖಮಯ ಜೀವನ ನಡೆಸಲು ಸುಖಸಾಧನಗಳ ಮತ್ತು ಭೋಗವಸ್ತುಗಳ ಉತ್ಪಾದನೆ ಕಡಮೆ ಮಾಡಿ ಅದರ ಜಾಗದಲ್ಲಿ ಜೀವನಾವಶ್ಯಕ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಬೇಕು. ಅದರ ಮೂಲಕ ಪ್ರತಿ ಪ್ರಜೆಗೂ ಅಗತ್ಯಪ್ರಮಾಣದಲ್ಲಿ ಈ ವಸ್ತುಗಳು ಸಿಗಬೇಕು ಎಂಬುದು ಗಾಂಧಿಯವರ ಉದ್ದೇಶ. ಇಲ್ಲಿ ಉತ್ಪಾದನೆಯನ್ನು ವೈವಿಧ್ಯ(Diversification)ಗೊಳಿಸುತ್ತೇವೆಯೇ ಹೊರತು ಒಟ್ಟು ಉತ್ಪಾದನೆಯ ಪ್ರಮಾಣವನ್ನು ಕಡಮೆ ಮಾಡುವ ಪ್ರಶ್ನೆಯೇ ಇಲ್ಲ. ಇದು ವಾಸ್ತವತೆಗೆ ಹಿಡಿದ ಕನ್ನಡಿ. ಆದ್ದರಿಂದ ಆರ್ಥಿಕ ವ್ಯವಸ್ಥೆಯು ಶೂನ್ಯ ಬೆಳವಣಿಗೆಯ ಸ್ಥಿತಿಯನ್ನು ತಲಪುವ ಅಪಾಯವಿಲ್ಲ. “ಅಪರಿಮಿತ ಆಸೆಗಳ ಹಿಂದೆ ಬಿದ್ದ ಮನು? ಹೆಚ್ಚುಹೆಚ್ಚು ಸಂಪಾದನೆ ಮಾಡಬೇಕು ಎನ್ನುವ ಹಂಬಲವನ್ನು ಬೆಳೆಸಿಕೊಂಡು ತನ್ನ ಜೀವನದಲ್ಲಿ ಹೆಚ್ಚು ಭೋಗಿಸಬೇಕೆಂಬ ಹುಚ್ಚನ್ನು ಬಿಡಬೇಕು” ಎಂದು ಗಾಂಧಿಯವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಪ್ರಾಯಃ ಈ ಕಲ್ಪನೆಯೇ ಕೆಲವು ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರು ಇಂದು ಹೇಳುವ “ಆರ್ಥಿಕ ಬೆಳವಣಿಗೆಗೆ ಮಿತಿಯನ್ನು ಹೇರಬೇಕು” ಎಂಬ ಮಾತಿಗೆ ಆಧಾರವಾಗಿದೆ ಎಂದು ನಾವು ಪರಿಗಣಿಸಬಹುದು.
ಗಾಂಧಿಯವರು ನಿಜಾರ್ಥದಲ್ಲಿ ಆರ್ಥಿಕ ಬೆಳವಣಿಗೆಗೆ ಒಂದು ಮಿತಿಯನ್ನು ಹಾಕಬೇಕು ಎಂಬುದನ್ನು ಬೆಂಬಲಿಸಿದ್ದಾರೆ. ಕಾರಣ: ಔದ್ಯೋಗೀಕರಣ, ಕೈಗಾರಿಕೀಕರಣ, ನಗರೀಕರಣ, ತಂತ್ರಜ್ಞಾನದ ಬೆಳವಣಿಗೆ ಇತ್ಯಾದಿಗಳು ಮುಗಿದುಬಿಡುವ ಪ್ರಾಕೃತಿಕ ಸಂಪನ್ಮೂಲಗಳ (Exhaustible Resources) ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಜೊತೆಗೆ ವಾತಾವರಣವನ್ನು ಕಲುಷಿತಗೊಳಿಸುತ್ತದೆ. ಮಿತಿಮೀರಿದ ದುಡಿಮೆಯ ಪರಿಣಾಮವು ಪ್ರತಿ ಮನು? ಮತ್ತು ಇಡೀ ಮಾನವಜನಾಂಗ ತನ್ನ ಆಸೆಗಳ ಮೇಲೆ ಒಂದು ಮಿತಿ ಮತ್ತು ಕಡಿವಾಣ ಹಾಕಿಕೊಳ್ಳುವುದಕ್ಕೆ ಅತ್ಯಗತ್ಯ. ಆಸೆಗಳ ಮೇಲೆ ಮಿತಿ ಹಾಕಬೇಕು ಮತ್ತು ಅದರ ತೃಪ್ತಿಗೆ ಕಡಿವಾಣ ಹಾಕಬೇಕು ಎಂಬ ಅವರ ವಿಚಾರವು ಆರ್ಥಿಕವಾಗಿ ಮತ್ತು ಮೌಲ್ಯಗಳ ಆಧಾರದ ಮೇಲೆ ಸಮರ್ಥನೀಯವಾಗಿದೆ. - ಪ್ರಾಪಂಚಿಕ ಅಶಾಂತಿಯ ಸೃಷ್ಟಿ
ಭೌತಿಕವಸ್ತುಗಳ ಮತ್ತು ಸುಖಭೋಗಗಳ ಕಡೆಗೆ ಹೆಚ್ಚಿನ ಮಹತ್ತ್ವ ನೀಡುತ್ತಿರುವುದು ಮತ್ತು ಮಾನವೀಯ ಮೌಲ್ಯಗಳ ಕಡೆಗಣನೆ ಇಂದು ಜಗತ್ತಿನಲ್ಲಿ ಅಶಾಂತಿಗೆ ಬಹುಮುಖ್ಯ ಕಾರಣವಾಗಿದೆ ಎಂದು ಗಾಂಧಿಯವರು ಹೇಳಿದ್ದಾರೆ. ಇಂದು ಜಗತ್ತು ಶಾಂತಿ, ಸಮಾಧಾನ, ಸಂತೋಷ ಮತ್ತು ನಿಜವಾದ ಸಮೃದ್ಧಿಗಳಿಂದ ದೂರವಾಗುತ್ತಿರುವ ಕಾರಣ ಎಂದರೆ ಮನುಷ್ಯನ ಆಸೆ ಒಂದು ಮಿತಿಯನ್ನು ದಾಟಿ ಆವರ್ಧಕ ಪ್ರವೃತ್ತಿಯನ್ನು ಪಡೆದಿರುವುದು. ಗಾಂಧಿಯವರು ಬಹಳ ವ?ಗಳ ದೀರ್ಘ ಅನುಭವ ಮತ್ತು ಕಲಿಕೆಯಿಂದ ಪ್ರಪಂಚದ ಅಶಾಂತಿಗೆ ಮೂರು ಪ್ರಮುಖ ಕಾರಣಗಳನ್ನು ನೀಡಿದ್ದಾರೆ. ಮೊದಲನೆಯದು ಹೆಚ್ಚುತ್ತಿರುವ ಬಯಕೆಗಳು. ಎರಡನೆಯದು ಸಂಕೀರ್ಣ ಯಂತ್ರಗಳ ಬಳಕೆ. ಮೂರನೆಯದಾಗಿ ಅತಾರ್ಕಿಕವಾದ ಮತ್ತು ಅಸಂಬದ್ಧವಾದ ವಿತರಣಪದ್ಧತಿಗಳು. ಈವತ್ತಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದರೆ ಅವರು ಅಂದು ವ್ಯಕ್ತಪಡಿಸಿದ ಅಭಿಪ್ರಾಯಗಳು ಎ? ಸಮಂಜಸವಾಗಿವೆ ಎಂದು ಅನ್ನಿಸದಿರದು. - ‘ನಿಜವಾದ ಸಂತೋಷ’ದ ತಪ್ಪು ವ್ಯಾಖ್ಯೆ
ಇಂದು ಎಲ್ಲ ಅರ್ಥಶಾಸ್ತ್ರಜ್ಞರು ಹೇಳುವ ಮಾತೆಂದರೆ ನಮ್ಮ ಜೀವನದ ಬಹುಮುಖ್ಯ ಉದ್ದೇಶವೆಂದರೆ ಅನುಭೋಗದಿಂದ ಗರಿ? ಸಂತೋ? ಪಡೆಯುವುದು. ಆದರೆ ಅವರು ‘ನಿಜವಾದ ಸಂತೋಷ’ ಎಂದರೇನು ಎಂಬುದನ್ನು ವಿವರಿಸುವಲ್ಲಿ ವಿಫಲರಾಗುತ್ತಾರೆ. ಅವರ ಪ್ರಕಾರ ಯಾವ ವ್ಯಕ್ತಿ ಹೆಚ್ಚಿನ ಪ್ರಮಾಣದ ಸರಕು/ಸೇವೆಗಳನ್ನು ಉಪಭೋಗಿಸುತ್ತಾನೋ ಅವನಿಗೆ ಹೆಚ್ಚಿನ ಸಂತೋಷ ಸಿಗುತ್ತದೆ. ಆದರೆ ಗಾಂಧಿಯವರ ಪ್ರಕಾರ ಇದು ನಿಜವಾದ ಸಂತೋಷವಲ್ಲ. ಸಂತೋಷ ಎನ್ನುವುದು ಕೇವಲ ಭೌತಿಕ ಮತ್ತು ಶಾರೀರಿಕ ಆವಶ್ಯಕತೆಗಳನ್ನು ಪೂರೈಸುವುದು ಮಾತ್ರವಲ್ಲ, ಅದರ ಜೊತೆಗೆ ಸಾಮಾನ್ಯ ಜೀವನದಿಂದ ಮೇಲೆ ಬರುವಂತಹ ಉದಾತ್ತಗುಣಗಳ ವರ್ಧನೆಯಿಂದ ನಮ್ಮ ಸಂತೋಷ ನಿರ್ಭರವಾಗುತ್ತದೆ. ಜೀವನ ಕೇವಲ ಭೋಗಿಸುವುದಕ್ಕಲ್ಲ. ಬದಲಾಗಿ ಇತರರಿಗೆ ಸಹಾಯಮಾಡಲೂ ಇದೆ. - ಕೇನ್ಸ್ರ ಸಾಮಾನ್ಯ ಸಿದ್ಧಾಂತ ಭಾರತೀಯ ಅರ್ಥವ್ಯವಸ್ಥೆಗೆ ಅನ್ವಯವಾಗದು
ಅನೇಕ ವಿಶ್ಲೇಷಣಕಾರರ ಅಭಿಪ್ರಾಯದಂತೆ ಗಾಂಧಿಯವರ ಅನುಭೋಗದ ಮಾದರಿ (Consumption model) ಬಹಳ ನಿಷ್ಠುರವಾದದ್ದು. ಅವರ ದೃಷ್ಟಿಯಲ್ಲಿ ಗಾಂಧಿಯವರು ಹೇಳುವ ’ಆಸೆಗಳನ್ನು ಕಡಮೆಮಾಡಿ’ ಕಲ್ಪನೆ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಲಾರ್ಡ್ ಕೇನ್ಸ್ ಹೇಳುವಂತೆ – ಮನುಷ್ಯ ಉದ್ದೇಶಪೂರ್ವಕವಾಗಿ ಬಯಕೆಗಳನ್ನು ಕಡಮೆಮಾಡಿಕೊಂಡು ’ಅನುಭೋಗದ ಪ್ರಮಾಣ’ (Consumption level)ವನ್ನು ಕಡಮೆಮಾಡಿದರೆ ಅದು ’ಕೊರತೆಯುಳ್ಳ ಅನುಭೋಗ’ಕ್ಕೆ (Deficit consumption) ಮತ್ತು ’ಸಮರ್ಥ ಬೇಡಿಕೆಯಲ್ಲಿನ ಕೊರತೆ’ಗೆ (Deficit in effective demand) ಹಾಗೂ ಕೊನೆಗೆ ’ಆರ್ಥಿಕ ಕುಸಿತ’ಕ್ಕೆ (Depression) ಕಾರಣವಾಗುತ್ತದೆ. ಅವರ ವಿಶ್ಲೇಷಣೆಯ ತರ್ಕ ಈ ರೀತಿಯದ್ದಾಗಿದೆ: ಮನು? ತನ್ನ ಬಯಕೆಗಳನ್ನು ಉದ್ದೇಶಪೂರ್ವಕವಾಗಿ ಕಡಮೆ ಮಾಡಿದಾಗ ಸರಕು ಮತ್ತು ಸೇವೆಗಳ ಬೇಡಿಕೆ ಕಡಮೆಯಾಗಿ ಅನುಭೋಗದ ಪ್ರಮಾಣ ಕಡಮೆ ಆಗುತ್ತದೆ. ಹೀಗಾಗಿ ಉತ್ಪಾದನಾ ಪ್ರಮಾಣ, ಆದಾಯದ ಮತ್ತು ಉದ್ಯೋಗದ ಪ್ರಮಾಣ ಇದೇ ಆರ್ಥಿಕ ವ್ಯವಸ್ಥೆಯಲ್ಲಿ ಕಡಮೆಯಾಗಿ ಬೆಲೆಕುಸಿತಕ್ಕೆ ಕಾರಣವಾಗುತ್ತದೆ. ಅಮೆರಿಕದಲ್ಲಿ ೧೯೨೯- ೩೬ರ ಅವಧಿಯಲ್ಲಿ (Great Depression) ’ಮಹಾ ಆರ್ಥಿಕ ಮುಗ್ಗಟ್ಟು’ ಇದರ ನೇರ ಪರಿಣಾಮ – ಎಂದು ಅವರು ತಮ್ಮ ’ಸಾಮಾನ್ಯ ಸಿದ್ಧಾಂತ’ (General Theory) ಪುಸ್ತಕದಲ್ಲಿ ವಿವರಣೆ ನೀಡಿದ್ದಾರೆ. ಆಧುನಿಕ ಅರ್ಥಶಾಸ್ತ್ರಜ್ಞರು ಬಹಳಷ್ಟು ಮಟ್ಟಿಗೆ ಕೇನ್ಸ್ ಮತ್ತು ಸಾಮ್ಯುವಲ್ಸನ್ ಅವರಿಂದ ಪ್ರಭಾವಿತರಾಗಿರುವುದು ನಮಗೆ ಕಂಡುಬರುತ್ತದೆ. ಪಾಶ್ಚಿಮಾತ್ಯ ಅರ್ಥಶಾಸ್ತ್ರಜ್ಞರಿಗೆ ಗಾಂಧಿಯವರ ’ಆಸೆಗಳಿಗೆ ಮಿತಿಯನ್ನು ಹಾಕಿ’ ಎಂಬ ಕಲ್ಪನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಭಾರತೀಯ ಪರಂಪರೆಯ ಋಷಿಮುನಿಗಳ ’ಸರಳ ಜೀವನ’ ಮತ್ತು ಅವರ ಕಲ್ಪನೆಯ ’ಜೀವನದಲ್ಲಿನ ಸಂತೋ?’ವನ್ನೂ ಅರ್ಥಮಾಡಿಕೊಂಡು ಜೀರ್ಣಿಸಲು ಸಾಧ್ಯವಾಗಲೇ ಇಲ್ಲ. - ಕೊಳ್ಳುಬಾಕ ಸಂಸ್ಕೃತಿಯ ಉದಯ
ಕೈಗಾರಿಕೀಕರಣ (Industrialisation) ಮುಕ್ತಾಯಗೊಳ್ಳದಂತಹ ಭೌತಿಕ ಮೌಲ್ಯಗಳನ್ನು ಕಡಮೆ ಮಾಡುತ್ತದೆ ಎಂದು ಗಾಂಧಿಯವರು ನಂಬಿದ್ದರು. ಆದ ಕಾರಣ ಭಾರತದಲ್ಲಿ ಯಾವ ಕಾರಣಕ್ಕೂ ಕೈಗಾರಿಕೀಕರಣ ಆಗಬಾರದು ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಈ ವಿಷಯದಲ್ಲಿ ಅವರು ಯಾವುದಕ್ಕೂ ಹೊಂದಾಣಿಕೆಮಾಡಿಕೊಳ್ಳದ ಬದ್ಧತೆ ಹೊಂದಿದ್ದರು. ಕೈಗಾರಿಕೀಕರಣದಿಂದ ಹೆಚ್ಚಿನ ಪ್ರಮಾಣದ ಗ್ರಾಹಕ ಸರಕು ಸೇವೆಗಳು ಉತ್ಪಾದನೆಯಾಗುತ್ತವೆ. ತನ್ಮೂಲಕ ಜನಸಮೂಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಕೊಳ್ಳುವ ಅನಿಷ್ಠ ಪ್ರವೃತ್ತಿ ಬೆಳೆದು ’ಕೊಳ್ಳುಬಾಕ ಸಂಸ್ಕೃತಿ’ಯ ಉಗಮಕ್ಕೆ ಕಾರಣವಾಗುತ್ತದೆ ಎಂದು ಅವರು ಅಚಲವಾಗಿ ನಂಬಿದ್ದರು. ಅದರಿಂದ ಜನರ ಐಹಿಕ ಜೀವನಮಟ್ಟ ಹೆಚ್ಚಾಗುವುದೇ ಹೊರತು ಅವರ ಸಂತೃಪ್ತಿ ಹೆಚ್ಚಾಗುವುದಿಲ್ಲ ಎಂಬುದು ಅವರ ತರ್ಕ. ಆದ್ದರಿಂದ ಅವರು ಈ ಪಾಶ್ಚಿಮಾತ್ಯ ’ಕೊಳ್ಳುಬಾಕ ಸಂಸ್ಕೃತಿ’ಗೆ ಸಂಪೂರ್ಣವಾಗಿ ವಿರೋಧಿಯಾಗಿದ್ದರು. ಹಿಂದೂ ಪವಿತ್ರಗ್ರಂಥಗಳು ಮತ್ತು ಇತರ ಧಾರ್ಮಿಕ ಕೃತಿಗಳು ಅವರಲ್ಲಿ ’ಮಿತವ್ಯಯ’ ಹಾಗೂ ’ವೈರಾಗ್ಯ’ದ ಮನೋಭಾವನೆಯನ್ನು ಬೆಳೆಸಿತ್ತು. ಆದ್ದರಿಂದ ಅವರು ಐಹಿಕವಾದವನ್ನು ನಿರಾಕರಿಸಿ ಆಧ್ಯಾತ್ಮಿಕ ಮತ್ತು ಸಮರಸತಾ ಭಾವನೆಗೆ ಹೆಚ್ಚಿನ ಮಹತ್ತ್ವವನ್ನು ತಮ್ಮ ಆರ್ಥಿಕ ಚಿಂತನೆಯಲ್ಲಿ ನೀಡಿದರು. ಅವರಿಗೆ ಐಹಿಕ ಜೀವನದ ಪ್ರಗತಿಗಿಂತ ಮೌಲ್ಯಯುತ ಜೀವನ ಮಹತ್ತ್ವ ಪೂರ್ಣವಾಗಿತ್ತು. ಪಾಶ್ಚಾತ್ಯ ಬರಹಗಾರ ಎರ್ಹಾರ್ಡ್ ಅವರು ಬರೆದ ’ಸ್ಪರ್ಧೆಯಿಂದ ಸಮೃದ್ಧಿ’ (Prosperity through Competition) ಎಂಬ ಪುಸ್ತಕದಲ್ಲಿ ಈ ರೀತಿ ಹೇಳಿದ್ದಾರೆ: “ಆರ್ಥಿಕಮಂತ್ರಿಯಾದ ನಾನು ಯಾವುದೇ ಕಾರಣದಿಂದ ಜನರ ನೈತಿಕ ಉನ್ನತಿಗೆ
ಜವಾಬ್ದಾರನಲ್ಲ. ನನ್ನ ನಿರ್ದಿ? ಕೆಲಸವೆಂದರೆ ಜನರು ಆಸೆಯಿಂದ ಮುಕ್ತರಾಗಿ ನಿಶ್ಚಿಂತೆಯಿಂದ ಜೀವನ ನಡೆಸುವ ಹಾಗೆ ಮಾಡುವುದು.” ಆರ್ಥಿಕ ಸಮಸ್ಯೆಗಳಿಗೆ ಗಾಂಧಿಯವರ ಉತ್ತರ ಅರ್ಥಶಾಸ್ತ್ರದ ಪರಿಧಿಯಿಂದ ಹೊರಗಿರುವ ಕಾರಣ ಪಾಶ್ಚಾತ್ಯ ವಿದ್ವಾಂಸರಿಗೆ ಅವರ ಆರ್ಥಿಕ ವಿಚಾರಧಾರೆಯನ್ನು ಯಾವತ್ತೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. - ಭೌತಿಕ ಸಂಪತ್ತಿಗಿಂತ ಮಾನವ ಸಂಪತ್ತಿನ ಮಹತ್ತ್ವ
ಗಾಂಧಿಯವರು ತಮ್ಮ ಆರ್ಥಿಕ ಚಿಂತನೆಗಳಲ್ಲಿ ಸಂಪತ್ತಿನ ಉತ್ಪಾದನೆಗಿಂತ ಸಂಪತ್ತನ್ನು ಉತ್ಪಾದಿಸುವ ಮಾನವರಿಗೆ ಹೆಚ್ಚಿನ ಮಹತ್ತ್ವ ಕೊಟ್ಟಿದ್ದಾರೆ. ಅವರ ಪ್ರಕಾರ ಮಾನವರೇ ಸಂಪತ್ತು; ’ಚಿನ್ನ, ಬೆಳ್ಳಿಯಲ್ಲ’ ಎಂದು ಅವರು ಸ್ಪ?ವಾಗಿ ತಿಳಿಸಿದ್ದಾರೆ. ಯಾವ ದೇಶ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸುಖೀಮಾನವರ ನಿರ್ಮಾಣ ಮಾಡುತ್ತದೆಯೋ ಅದೇ ಶ್ರೀಮಂತ ದೇಶ. ಅಂತಹ ಸುಖೀಮಾನವರು ತಮ್ಮ ಸ್ವಂತ ಜೀವನಶೈಲಿಯ ಮೇಲ್ಪಂಕ್ತಿಯಿಂದ ಸಹಜವಾಗಿ ಇತರರನ್ನು ಪ್ರಭಾವಿತಗೊಳಿಸುತ್ತಾರೆ ಎಂಬುದು ಅವರ ಸ್ಪಷ್ಟ ನುಡಿಯಾಗಿತ್ತು. - ಗಾಂಧೀಯ ಅರ್ಥಶಾಸ್ತ್ರದ ಮಹತ್ತ್ವದ ಅರಿವು
ಇತ್ತೀಚಿನ ದಿನಗಳ ಬೆಳವಣಿಗೆಯನ್ನು ಗಮನಿಸಿದರೆ ಅನೇಕ ಸಮಕಾಲೀನ ಪಾಶ್ಚಾತ್ಯ ಚಿಂತಕರು ’ಗಾಂಧೀಯ ಅರ್ಥಶಾಸ್ತ್ರ’ದ ಸಮರ್ಥನೆಯನ್ನು ಮಾಡುತ್ತಿರುವುದು ಕಂಡುಬರುತ್ತಿದೆ. ಈ ದಿಕ್ಕಿನಲ್ಲಿ ’ಕೈಗಾರಿಕಾ ನಾಗರಿಕತೆಯ ಸಾಂಸ್ಕೃತಿಕ ಪ್ರತಿಷ್ಠಾನ’ ಈ ರೀತಿ ಹೇಳಿದೆ: “ಬರುವ ದಶಮಾನ ಮತ್ತು ಶತಮಾನಗಳಲ್ಲಿ ಮಾನವಸಮಾಜ ಕೈಗಾರಿಕಾ ನಾಗರಿಕತೆ ವಿಜ್ಞಾನಿಗಳ, ಇಂಜಿನಿಯರುಗಳ ಮತ್ತು ಅರ್ಥಶಾಸ್ತ್ರಜ್ಞರ ಮೇಲೆ ಆದಷ್ಟು ಕಡಮೆ ನಿರ್ಭರವಾಗುತ್ತದೆ. ಇಂದಿನ ಯಾಂತ್ರೀಕೃತ ಮತ್ತು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಬದುಕುತ್ತಿರುವ ಮನುಷ್ಯ ’ಪರಿಪೂರ್ಣ ಮಾನವ ವ್ಯಕ್ತಿತ್ವ’ದ ಹುಡುಕಾಟವನ್ನು ಪ್ರಾರಂಭಿಸಿದ್ದಾನೆ. ಇದೀಗ ಸಾಮೂಹಿಕ ಉತ್ಪಾದನೆ (Mass production), ಸ್ವಯಂ ಚಲನಶಕ್ತಿ (Automation) ಮತ್ತು ಅಣುಶಕ್ತಿರಹಿತ ಹಾಗೂ ಆಧುನಿಕ ಕೈಗಾರಿಕಾ ಪದ್ಧತಿಯ ಅನಾಹುತಗಳಿಂದ ಮುಕ್ತಗೊಳಿಸುವ, ದೇವತಾಸೇವೆ ಸಲ್ಲಿಸುವ ರೂಪದಲ್ಲಿ ಇನ್ನೊಂದು ’ಹೊಸ ಆನಂದದಾಯಕ ಆರ್ಥಿಕವ್ಯವಸ್ಥೆ’ಯ ನಿರ್ಮಾಣವಾಗಬೇಕಾಗಿದೆ” ಎಂದು ತಿಳಿಸಿದೆ.
(ಮುಂದುವರಿಯುವುದು)