
ಮೇಜರ್ ಡೇವಿಡ್ ಮಣ್ಲೂನ್ ಅವರು ಮಣಿಪುರಕ್ಕೆ ಸೇರಿದವರು. ಅವರ ಕುಟುಂಬ ನೆಲಸಿದ್ದು ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ. ಡೇವಿಡ್ ಅವರ ತಂದೆ ಮಣ್ಲೂನ್ ಖಮ್ಜಲಮ್ ಅವರೂ ಭಾರತೀಯ ಸೈನ್ಯದಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೈನಿಕ ತರಬೇತಿ ಪಡೆದ ಡೇವಿಡ್ ಅವರು ಸೇರ್ಪಡೆಗೊಂಡಿದ್ದು ನಾಗಾ ರೆಜಿಮೆಂಟಿನ ಮೊದಲನೇ ಬೆಟಾಲಿಯನ್ಗೆ. ಪ್ರಾರಂಭದ ಐದು ವರ್ಷ ಉತ್ತರ ಕಾಶ್ಮೀರದಲ್ಲಿ ಕಾರ್ಯ ಮಾಡಿ ಅನುಭವ ಸಂಪಾದಿಸಿದ ಡೇವಿಡ್, ಮುಂದೆ ನಿಯುಕ್ತಿಗೊಂಡಿದ್ದು ಈಶಾನ್ಯ ಭಾರತದ ಉಗ್ರ ನಿಯಂತ್ರಣ ಕಾರ್ಯಾಚರಣೆಗೆ. ಇಲ್ಲಿ ಅನೇಕ ನಾಗಾ […]