
ಮಣ್ಣಿನಿಂದ ಮೇಲೆದ್ದು ಪುನಃ ಮಣ್ಣಿನೊಳಗೆ ನುಗ್ಗಿದಂತಿದ್ದ ಎರಡು ಬೇರುಗಳ ಕೆಳಗೆ ನುಸುಳುತ್ತಾ ಮಕ್ಕಳು ಏನನ್ನೋ ಹಾಡಿಕೊಳ್ಳುತ್ತಿದ್ದವು. ಈ ಭೂಮಿಯ ಮಣ್ಣನ್ನೆಲ್ಲ ಈ ಬೇರುಗಳೆ ಹಿಡಿದಿಟ್ಟಿರಬಹುದೆ? ಜಗದೀಶ್ವರನ ಮಗಳು ಒಂದು ಬೇರನ್ನು ಹಿಡಿದುಕೊಂಡು, “ಇದು ನನ್ನ ಬೇರು, ನಾನಿಲ್ಲಿಂದ ಯಾರನ್ನು ಹೋಗಲು ಬಿಡಲ್ಲ” ಎಂದು ಉಳಿದವರಿಗೆ ತಾಕೀತು ಮಾಡುತ್ತಿದ್ದಳು. ಬಿಡದಿದ್ದರೆ ಹಿಡುಕೋ ಎಂದು ಉಳಿದವುಗಳೆಲ್ಲ ಆ ಬೇರಿನ ಕೆಳಗೆ ತೆವಳಿಕೊಂಡು ತಮ್ಮಷ್ಟಕ್ಕೇ ಆಟ ಮುಂದುವರಿಸಿದವು. ಪರಮೇಶ್ವರ ಎರಡೆರಡು ಬಾರಿ ಪಂಚಾಯತಿ ಸೇರಿಸಿಬಿಟ್ಟನಲ್ಲ. ಹಿಡಿದ ಹಠ ಬಿಡಲಾರ. ಒಮ್ಮೆ ಕೆಳಗಿನ […]