2018, ಕವಿ ಎಂ. ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ವರ್ಷ (ಜನನ: ೧೮.೨.೧೯೧೮ರಂದು ಕುಂದಾಪುರದ ಮೊಗೇರಿಯಲ್ಲಿ). ಅವರು ಕನ್ನಡ ಸಾಹಿತ್ಯಕ್ಕೆ ಹೊಸತೊಂದು ದಾರಿಯನ್ನು ನೀಡಿದ ನೇತಾರ; ಕನ್ನಡ ಭಾಷೆ, ಸೂಕ್ಷ್ಮತೆಗೆ, ಸಾಹಿತ್ಯ ವಿಮರ್ಶೆಗೆ ಹೊಸ ದೃಷ್ಟಿಯನ್ನೂ, ಪ್ರಬುದ್ಧತೆಯನ್ನೂ ನೀಡಿದವರು. ’ನವ್ಯಕಾವ್ಯ’ ಎನ್ನುವ ಹೊಸದಿಶೆಗೆ ಚಾಲನೆ ನೀಡಿದ ಅಡಿಗರು, ಕನ್ನಡ ಕಾವ್ಯಲೋಕದಲ್ಲಿ ಒಂದು ಬಗೆಯ ಕ್ರಾಂತಿಗೆ ಮುನ್ನುಡಿ ಬರೆದವರೂ ಹೌದು. ಅರ್ಥಪೂರ್ಣ ನವ್ಯಕಾವ್ಯಗಳನ್ನು ನೀಡಿದ ಮಹಾನ್ ಮಾನವತಾವಾದಿ ಅಡಿಗರನ್ನು ಕುರಿತು ಹತ್ತಿರದ ಬಂಧುವಾಗಿ ಅವರೊಡನೆ ಒಡನಾಟ ಹೊಂದಿದ್ದ ಎಚ್. ಡುಂಡಿರಾಜ್, ಅಡಿಗರ ನವ್ಯಸಾಹಿತ್ಯ ಚಳವಳಿಯಿಂದ ಪ್ರಭಾವಿತರಾಗಿ ಬರೆವಣಿಗೆ ಆರಂಭಿಸಿ ಬಹುಎತ್ತರಕ್ಕೆ ಬೆಳೆದ ಕವಿ-ಸಾಹಿತಿ ಮತ್ತು ಭಾಷಾಶಾಸ್ತ್ರಜ್ಞ ಡಾ| ಕೆ.ವಿ. ತಿರುಮಲೇಶ್, ಅಡಿಗರ ಎರಡನೇ ಮಗ ಡಾ| ಎಂ.ಜಿ. ಪ್ರದ್ಯುಮ್ನ ಅವರು ಸಾಂದರ್ಭಿಕವಾಗಿ ಬರೆದ ಲೇಖನ ಹಾಗೂ ಸಂದರ್ಶನ ಇಲ್ಲಿದೆ.
ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದ ಸ್ಮರಣೆ
Month : April-2018 Episode : Author :