ಉತ್ಥಾನ ಅಕ್ಟೋಬರ್ 2023
Month : October-2023 Episode : Author :
Month : October-2023 Episode : Author :
Month : October-2023 Episode : Author : ಅಣಕು ರಾಮನಾಥ್
ಚಕ್ಕುಲಿಗೂ ಕೃಷ್ಣನಿಗೂ ಅದೆಂತಹ ಸಂಬಂಧವೋ! ‘ಆಣೋರಣೀಯನಾ ಮಹತೋಮಹೀಯನಾ; ಅಪ್ರಮೇಯ ಅನಂತನ ಆಡಿಸಿದಳೆಶೋದೆ’ ಎಂದಾಗಲೆಲ್ಲ ನನಗೆ ಚಕ್ಕುಲಿಯದೇ ನೆನಪು. ಅಣುವಿನಲ್ಲಿ ಅಣುವಾಗುವಷ್ಟು ಪುಡಿ ಮಾಡಿ ತಿನ್ನುವ ‘ವಸಡೈವ ದಂತಪಂಕ್ತಿಃ’ ಆಗಿರುವ ಬೊಚ್ಚುಬಾಯಿಗರಿಗೂ ಅಷ್ಟೇ ರುಚಿಕರವಾಗಿ ವೇದ್ಯವಾಗುವುದರಿಂದ ಆಣೋರಣೀಯ; ಇಡಿಯಿಡಿಯಾಗಿ ಕಬಳಿಸಲು ಮೊಸಳೆಬಾಯನ್ನು ತೆರೆದು ಕೂರುವ ಕಿಟ್ಟಂಭಟ್ಟರಿಗೂ ಅಷ್ಟೇ ರುಚಿಕರವೆನಿಸುವುದರಿಂದ ಮಹತೋಮಹೀಯ. ಹಬ್ಬ ಹರಿದಿನ ಇತ್ಯಾದಿಗಳ ಪ್ರಮೇಯ (ಸಂದರ್ಭ)ವಿಲ್ಲದೆಯೂ ಕೇವಲ ಕುರುಕಲಿಗೂ ತಯಾರಿಸುವುದರಿಂದ ಇದು ಅಪ್ರಮೇಯ. ಇದರ ರುಚಿಯ ಬಯಕೆ ಅನಂತ. ಇಂತಹ ತಿಂಡಿಯನ್ನು ಯಶೋದೆಯು ಕರಿದು, ಕೃಷ್ಣನನ್ನು ಕರೆದು, […]
Month : October-2023 Episode : Author : ತೃಪ್ತಿ ಹೆಗಡೆ
“ಅತೀತ…” “ಪ್ರಸಿದ್ಧ ಚಿತ್ರಕಲಾವಿದ ಶ್ರೀನಿವಾಸ್ ರಾಘವ್ರಿಂದ ಈ ಬಾರಿ ರಚನೆಯಾಗುತ್ತಿರುವ ಅಪರೂಪದ ಚಿತ್ರ. ಇನ್ನು ಒಂದು ವಾರದಲ್ಲಿ ನಡೆಯಲಿರುವ ಚಿತ್ರಜಾತ್ರೆಯಲ್ಲಿ ನಿಮ್ಮೆಲ್ಲರ ಮುಂದೆ…” ಎಂದು ಚಿತ್ರಜಾತ್ರೆಯ ಆಯೋಜಕರು ಬೀದಿ ಬೀದಿಯಲ್ಲಿ ಅನೌನ್ಸ್ ಮಾಡುತ್ತಿದ್ದರು. “ಇವೆಲ್ಲ ಬೇಕಾ? ಇನ್ನೂ ಚಿತ್ರ ರಚನೆಯೇ ಆಗಿಲ್ಲ. ಈಗ್ಲೇ ಇಷ್ಟು ಹೈಪ್ ಕೊಟ್ರೆ ಹೇಗೆ ಹೇಳಿ” ಎಂದ ಶ್ರೀನಿವಾಸ್ರನ್ನು ಆಯೋಜಕ ನಾಯಕ್ ತುಸು ಸಲಿಗೆ, ಹುಸಿಕೋಪದಲ್ಲೇ ನಿಂದಿಸಿದ್ದರು. “ನೀವ್ ಬಿಡಿ ಸರ್, ತುಂಬಿದ್ ಕೊಡ ತುಳಕಲ್ಲ ಅನ್ನೋ ಹಾಗೆ. ಇಷ್ಟೆಲ್ಲ ಟ್ಯಾಲೆಂಟ್ ಇಟ್ಕೊಂಡು […]
Month : October-2023 Episode : Author : ಪ್ರೇಮಶೇಖರ
ಹೊಟ್ಟೆಯೊಳಗೆ ಅದೆಷ್ಟು ಹೊತ್ತಿನಿಂದ ಅದೇನೇನಿತ್ತೋ, ಬಾಯಿಯನ್ನು ಅದೆಷ್ಟು ಹೊತ್ತಿನಿಂದ ತೊಳೆಯದೆ ಬಿಟ್ಟಿದ್ದರೋ. ಆ ದುರ್ವಾಸನೆಗೆ ಕ್ಷಣದಲ್ಲಿ ನನ್ನ ಹೊಟ್ಟೆಯೆಲ್ಲ ತೊಳೆಸಿಹೋಯಿತು. ನನ್ನ ಕಣ್ಣು, ಬಾಯಿ ಗಕ್ಕನೆ ಮುಚ್ಚಿಕೊಂಡವು. ಮಾಯದಂತೆ ಆ ಗಳಿಗೆಯಲ್ಲೂ ಸೌಜನ್ಯ ಜಾಗೃತಗೊಂಡು, ಮೂಗಿನತ್ತ ಮೇಲೆದ್ದ ಕೈಯನ್ನು ಅರ್ಧದಲ್ಲೇ ತಡೆದು ನಿಲ್ಲಿಸಿತು. ಕಣ್ಣು ತೆರೆದರೆ ಸ್ಟೌವ್ ಮುಂದೆ ನಿಂತ ಆಕೆ ಹಾಲಿನ ಪಾತ್ರೆಯನ್ನು ಮೇಲೆತ್ತಿ ಬಾಯಿಯ ಹತ್ತಿರ ಕೊಂಡೊಯ್ಯುತ್ತಿದ್ದರು. ಅದಕ್ಕೆ ಮತ್ತೆರಡು ಸಲ ಪೂ ಫೂ… ಉಫ್ ಉಫ್ ಎಂದು ಊದಿ. ಪುಟ್ಟ ಪಾತ್ರೆಗೆ ಇನ್ನಷ್ಟು […]
Month : October-2023 Episode : Author : ಡಾ.ಜಿ.ಎಸ್. ವೇಣುಗೋಪಾಲ್
ಸಂಗೀತಲೋಕದ ಹಾಡುಗಾರರಾಗಲಿ, ವಾಗ್ಗೇಯಕಾರರಾಗಲಿ ಸಾಮಾನ್ಯವಾಗಿ ಗಂಭೀರ ಸ್ವಭಾವದವರು ಎಂದೇ ಭಾವಿಸಲಾಗುತ್ತದೆ. ಬಹುತೇಕ ಇದು ಸರಿಯೂ ಹೌದು. ಸಂಗೀತವನ್ನು ರಚಿಸುವಾಗ ಅಥವಾ ಹಾಡುವಾಗ ಅವರ ಬುದ್ಧಿ ಮತ್ತು ಭಾವಗಳು, ಲಘುಲಹರಿಗೆ ಹೋದಲ್ಲಿ ಒಟ್ಟಾರೆ ಸಂಗೀತ ಅಥವಾ ಕೃತಿಯ ಸಾತತ್ಯಕ್ಕೆ ಚ್ಯುತಿ ಒದಗುವ ಸಾಧ್ಯತೆ ಇದೆ. ಆದರೂ ಹಾಸ್ಯಪ್ರಜ್ಞೆಯು ಸಂಗೀತದ ಹುರುಪನ್ನು ಮತ್ತು ಹೊಳಪನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ. ಸಂಗೀತ ಪ್ರಪಂಚದಲ್ಲಿ ಇಂತಹ ಹಾಸ್ಯಪ್ರಸಂಗಗಳು ಅನೇಕ. * * * ತಮ್ಮ ವಿಶಿಷ್ಟ ಗಾಯನದಿಂದ ಸಂಗೀತ ರಸಿಕರ ಮನಸೂರೆಗೊಂಡಿದ್ದ ಮಧುರೈ […]
Month : October-2023 Episode : Author : ಎಂ.ಬಿ. ಹಾರ್ಯಾಡಿ
ಕಲ್ಕತ್ತಾ ಸಂಬಂಧವಾಗಿ ನಡೆದ ಯುದ್ಧದಲ್ಲಿ ಮೊದಲ ಗುಂಡು ಹಾರಿದ್ದು ಸಿರಾಜ್ನ ಸೈನ್ಯದಿಂದಲ್ಲ; ಕಂಪೆನಿಯ ಸೈನ್ಯದಿಂದ. ಅದು ಕಲ್ಕತ್ತಾದಲ್ಲಿ ಕೂಡ ಅಲ್ಲ; ಹೂಗ್ಲಿಯ ತನ್ನಾ ಕೋಟೆಯಲ್ಲಿ. ಅಲ್ಲಿ ನವಾಬನ ಸೇನೆ ಇತ್ತು. ನದಿಯಲ್ಲಿ ಕಲ್ಕತ್ತಾದ ಕೆಳಭಾಗದಲ್ಲಿ ತನ್ನಾ ಕೋಟೆ ಇತ್ತು. ಕಂಪೆನಿ ಅಲ್ಲಿಗೆ ನಾಲ್ಕು ಹಡಗುಗಳನ್ನು ಕಳುಹಿಸಿತ್ತು. ಆದರೆ ಕಾದಾಟವಿಲ್ಲದೆ ಕೋಟೆ ಸಿರಾಜ್ ವಶವಾಯಿತು; ಮದ್ದುಗುಂಡುಗಳನ್ನು ಕೂಡ ವಶಪಡಿಸಿಕೊಂಡರು. ಮರುದಿನ ಸಿರಾಜ್ನ ೩–೪ ಸಾವಿರ ಸೈನಿಕರು ಬಂದರು. ಆ ಸೇನೆ ದಕ್ಷಿಣದಲ್ಲಿ ಚಂದ್ರನಗರದ (ಚಂದ್ರನಾಗೋರ್) ಬಳಿ ಮತ್ತು ಹೂಗ್ಲಿಯ […]
Month : October-2023 Episode : Author : ಎಸ್. ಎಸ್. ನರೇಂದ್ರಕುಮಾರ್
ಚಂದ್ರನ ದಕ್ಷಿಣಧ್ರುವಕ್ಕೆ ಇಳಿಯಲು ಭಾರತದೊಂದಿಗೆ ಪೈಪೋಟಿಗೆ ಇಳಿದ ರಷ್ಯಾ ಭಾರತದ ಯಶಸ್ವೀ ಲ್ಯಾಂಡಿಂಗ್ಗೆ ಕೆಲವೇ ದಿನಗಳ ಮುನ್ನ ಲೂನಾ–೨೫ ಬಾಹ್ಯಾಕಾಶ ನೌಕೆಯನ್ನು ದಕ್ಷಿಣಧ್ರುವದಲ್ಲಿ ಇಳಿಸಲು ಹೋಗಿ ವಿಫಲವಾಯಿತು; ಚಂದ್ರನ ಮೇಲೆ ಬಿದ್ದು ಛಿದ್ರಗೊಂಡಿತು. ಆದರೆ ಭಾರತ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರನ ಮೇಲೆ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ನಂತರದ ನಾಲ್ಕನೇ ದೇಶವಾಗಿ ಹೊರಹೊಮ್ಮಿತು. ಆದರೆ ಆ ದೇಶಗಳ ಯಶಸ್ಸಿನ ರುಚಿ ಕಂಡಿದ್ದು ಹಲವು ಪ್ರಯತ್ನಗಳ ನಂತರವಷ್ಟೇ. ಆದರೆ ಭಾರತವು ಎರಡನೇ […]
Month : October-2023 Episode : Author : ಎಸ್.ಆರ್. ರಾಮಸ್ವಾಮಿ
ಭಾಷಾಶ್ರದ್ಧೆ ಇರುವವರಿಗೆ ನಾವು ಹೇಳಬಹುದಾದ ಕಿವಿಮಾತು: ಅವರು ಅಳವಡಿಸಿಕೊಳ್ಳಬಹುದಾದ ಮೊದಲ ಅಭ್ಯಾಸವೆಂದರೆ ಪುಸ್ತಕವನ್ನೋ ಪತ್ರಿಕೆಯನ್ನೋ ಓದುವಾಗ ಎಲ್ಲೆಲ್ಲಿ ಯಾವಾವ ಶಬ್ದರೂಪಗಳು ಹೇಗೆಹೇಗೆ ಬಳಕೆಗೊಂಡಿವೆ ಎಂಬುದನ್ನು ತಪ್ಪದೆ ಗಮನಿಸುವುದು. ಇದು ಮಾತ್ರ ವಿಶ್ಲೇಷಣೆಗೂ ಪರೀಕ್ಷಣೆಗೂ ದಾರಿ ಮಾಡಬಲ್ಲದು. ಎರಡನೆಯದು: ಬರಹಗಾರರು ತಮ್ಮ ಮಟ್ಟಿಗಾದರೂ ಕೆಲವು ನಿಯಮಗಳನ್ನಿರಿಸಿಕೊಂಡು ಒಂದೊಂದು ಶಬ್ದದ ತಾವೇ ನಿರ್ಧರಿಸಿಕೊಂಡ ಒಂದು ರೂಪವನ್ನು ಮಾತ್ರ ಬಳಸುವುದು. ಮೂರನೆಯದು: ಅರ್ಥದ ಖಚಿತತೆಯು ತಮ್ಮ ರಚನೆಯ ಆಕಾರದಲ್ಲಿಯೂ ಬಿಂಬಿತವಾಗಬೇಕೆಂದು ಶ್ರದ್ಧೆ ವಹಿಸುವುದು. ಈ ಮೂರಲ್ಲದೆ ನಿಘಂಟುವಿನ ಸತತ ಬಳಕೆ ಮತ್ತಿತರ […]
Month : October-2023 Episode : Author : ಬಿ.ಎನ್. ಶಶಿಕಿರಣ್
ಡಿ.ವಿ.ಜಿ.ಯವರ (೧೭.೩.೧೮೮೭–೭.೧೦.೧೯೭೫) ೪೮ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ವಿಶೇಷ ಲೇಖನ ಪ್ರಕಟವಾಗುತ್ತಿದೆ. ೧೯೨೭ರ ಆರಂಭದಲ್ಲಿ ಡಿ.ವಿ.ಜಿ. ಇಂಗ್ಲಿಷಿನಲ್ಲಿ ಬರೆದ ಈ ಲೇಖನ ಇದೀಗ ಮೊತ್ತಮೊದಲಿಗೆ ಕನ್ನಡದಲ್ಲಿ ಅನುವಾದಗೊಂಡು ಪ್ರಕಟಗೊಳ್ಳುತ್ತಿದೆ. ಲೇಖನದ ವಿಷಯವೂ ವಿಶಿಷ್ಟವಾಗಿದೆ: ಬಿ.ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ೧೯ನೇ ಶತಾಬ್ದದ ಅಂತ್ಯದಲ್ಲಿ ಹೊಸಗನ್ನಡ ಸಾಹಿತ್ಯದ ಉದ್ಗಮವಾಗಿದ್ದಿತಾದರೂ, ಕನ್ನಡ ಸಾಹಿತ್ಯದ ‘ನವೋದಯ’ ಪರ್ವದ ಉನ್ಮೇಷ ಕಾಲವೆಂದು ಇಪ್ಪತ್ತನೆಯ ಶತಾಬ್ದದ ಮೊದಲ ಎರಡು ದಶಕಗಳನ್ನು ಗುರುತಿಸುವ ಪರಿಪಾಟಿ ಇದೆ. ಈ ನವೋದಯ–ಯುಗದ ‘ಮುಂಗಿರಣ’ವೆಂದು ‘ಕನ್ನಡದ ಕಣ್ವ’ ಬಿ.ಎಂ.ಶ್ರೀ. ಅವರ […]
Month : October-2023 Episode : Author : ಎಚ್ ಮಂಜುನಾಥ ಭಟ್
ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶಾಶ್ವತ ಶತ್ರುಗಳೂ ಇಲ್ಲ ಎನ್ನುವ ಮಾತನ್ನು ಒಪ್ಪಿಕೊಂಡು ಮುಂದುವರಿಯೋಣ. ಇನ್ನು ಮೋದಿಯವರ ಬಗೆಗೆ ಹೇಳುವುದಾದರೆ ಅವರು ಅಂದಿನಿಂದ ಇಂದಿನವರೆಗೂ ಒಂದೇ ರೀತಿ ಇದ್ದಾರೆ. ಮಿತಿಯಿಲ್ಲದ ಒಬ್ಬ ರಾಷ್ಟ್ರಭಕ್ತನಾಗಿ, ರಾಷ್ಟ್ರಸೇವಕನಾಗಿ ರಾಷ್ಟ್ರಕ್ಕೆ ತನ್ನ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತ ಬಂದಿದ್ದಾರೆ. ಭಾರತೀಯ ಜನತಾಪಕ್ಷಕ್ಕೆ ಸಂಬಂಧಪಟ್ಟು ಹೇಳುವುದಾದರೆ ಅವರೊಬ್ಬ ಅಪ್ರತಿಮ ಸಂಘಟಕನಾಗಿ ಕಾಣುತ್ತಾರೆ; ಕ್ರಮೇಣ, ಮುಖ್ಯವಾಗಿ ಅವರು ಪ್ರಧಾನಿಯಾದ ಅನಂತರ ಪಕ್ಷವನ್ನು ತಮಗೆ ವಿಶಿಷ್ಟವಾದ ರೀತಿಯಲ್ಲಿ ಬೆಳೆಸಿದ್ದಾರೆ; ಆ ರೀತಿಯಲ್ಲಿ ಹೊಸದಾಗಿ ರೂಪಗೊಂಡ ಬಿಜೆಪಿಗೆ ಅವರೇ […]