ಉತ್ಥಾನ ನವೆಂಬರ್ 2023
Month : November-2023 Episode : Author :
Month : November-2023 Episode : Author :
Month : November-2023 Episode : Author :
Month : November-2023 Episode : Author :
Month : November-2023 Episode : Author : ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳು
ಭಗವಂತನು ಬಹಿರಂಗದಲ್ಲಿ ಸಕಲ ಸೃಷ್ಟಿಯಾಗಿ ತೋರಿದನು. ಅವನೇ ನಮ್ಮ ಅಂತರಂಗದಲ್ಲಿ ಹೃದಯದ ಮಾಧುರ್ಯವಾಗಿ ನೆಲೆಸಿದನು. ಅತ್ತ ಲಕ್ಷ್ಯವಿಲ್ಲದ್ದರಿಂದ ನಮಗೆ ಭಗವತ್ಪ್ರೇಮದ ಭಾವ ಬರುತ್ತಿಲ್ಲ. ನಮ್ಮ ಹೃದಯದಲ್ಲಿ ಹುದುಗಿರುವ ಈ ಪರಮ ಪ್ರೇಮವನ್ನು ಅನುಭವಿಸುವುದೇ ಭಕ್ತಿ! ಒಬ್ಬ ತರುಣ ಶಿಷ್ಯ. ಸಶಕ್ತ, ಸುಂದರಾಂಗ, ಸುಸಂಸ್ಕಾರಿ. ಗುರುಗಳ ಸೇವೆಯನ್ನು ಶ್ರದ್ಧೆಯಿಂದ ಮಾಡಿಕೊಂಡಿದ್ದ. ಸದಾ ಗುರುಸಾನ್ನಿಧ್ಯದಲ್ಲಿಯೇ ಇರುತ್ತಿದ್ದ. ಒಂದು ದಿನ ಗುರುಗಳೊಂದಿಗೆ ಪಯಣ ಹೊರಟ. ಬಿಸಿಲು ದಿನ. ನಡೆದು ನಡೆದು ದಣಿದರು. ಅಲ್ಲೊಂದು ಹಳ್ಳ. ಹಳ್ಳದ ದಡದಲ್ಲೊಂದು ಮರ. ಆ ಮರದಡಿ […]
Month : November-2023 Episode : ಬೇತಾಳ ಕಥೆಗಳು - 2 Author : ಡಾ. ಎಚ್.ಆರ್. ವಿಶ್ವಾಸ
ದೇಶಾಂತರಕ್ಕೆ ಹೋದ ತಾಪಸನು ಊರಿಂದೂರಿಗೆ ಅಲೆಯುತ್ತ ವಕ್ರೋಲಕವೆಂಬ ಗ್ರಾಮಕ್ಕೆ ಬಂದನು. ಅಲ್ಲಿ ಯಾವನೋ ಒಬ್ಬ ಬ್ರಾಹ್ಮಣನ ಮನೆಯಲ್ಲಿ ಅತಿಥಿಯಾಗಿ ನಿಂತನು. ಬ್ರಾಹ್ಮಣನು ಅತಿಥಿಯನ್ನು ಸತ್ಕರಿಸಿ ಊಟಕ್ಕೆ ಕುಳ್ಳಿರಿಸಿದನು. ಊಟ ಮಾಡುತ್ತಿರುವಾಗ ಒಂದು ಮಗುವು ತುಂಬ ಚಂಡಿ ಹಿಡಿದು ಅಳುವುದಕ್ಕೆ ಮೊದಲು ಮಾಡಿತು. ಯಾರು ಎಷ್ಟು ಸಮಾಧಾನ ಮಾಡಿದರೂ ಸುಮ್ಮನಾಗಲಿಲ್ಲ. ಮನೆಯ ಯಜಮಾನಿಯು ಕೋಪಗೊಂಡು, ಆ ಮಗುವನ್ನು ಎತ್ತಿ ಉರಿಯುತ್ತಿದ್ದ ಬೆಂಕಿಯಲ್ಲಿ ಹಾಕಿಬಿಟ್ಟಳು. ಮಗು ಉರಿದು ಬೂದಿಯಾಗಿಹೋಯಿತು! ತ್ರಿವಿಕ್ರಮಸೇನನು ಅದೇ ಮುಳ್ಳುಮುತ್ತುಗದ ಮರದ ಬುಡಕ್ಕೆ ಬಂದನು. ಉರಿಯುತ್ತಿದ್ದ ಚಿತೆಗಳ […]
Month : November-2023 Episode : Author : ಆರತಿ ಪಟ್ರಮೆ
ಪುಸ್ತಕದ ಪರಿಚಯವನ್ನು 8-10 ನಿಮಿಷದ ವಿಡಿಯೋಗಳ ಮೂಲಕ ಫೇಸ್ಬುಕ್ ಮತ್ತು ಯೂಟ್ಯೂಬ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಒದಗುವಂತೆ ಮಾಡುವ ಪ್ರಯತ್ನವಾಗಿ ಸುಕೃತಿ ಪುಸ್ತಕ ಪರಿಚಯ ಅರಳಿಕೊಂಡಿತು. ಸಹೃದಯಿ ಓದುಗರ ತಂಡವನ್ನೊದು ರೂಪಿಸಿಕೊಂಡು ಒಂದೊಂದೇ ಪುಸ್ತಕದ ಪರಿಚಯಾತ್ಮಕ ವಿಡಿಯೋವನ್ನು ಪ್ರಚುರಪಡಿಸುವ ಈ ಪ್ರಯತ್ನ ನಡೆಯಿತು, ಇನ್ನೂ ಮಹಾನ್ ತಪವಿದೆಂಬಂತೆ ನಡೆಯುತ್ತಲೇ ಇದೆ. ಸುಕೃತಿಯ ಜನುಮದಿನ ಏಪ್ರಿಲ್ 14! 65 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿದ್ದಾರೆನ್ನಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದೇ ಸುಕೃತಿಯೂ ಆಕೃತಿ ತಳೆದದ್ದು ಇದರ […]
Month : November-2023 Episode : Author : ಪ. ರಾಮಕೃಷ್ಣ ಶಾಸ್ತ್ರಿ ತೆಂಕಕಾರಂದೂರು ಬೆಳ್ತಂಗಡಿ
1920ರಲ್ಲಿ ಗಾಂಧಿ ಕರನಿರಾಕರಣೆಯ ಅಸಹಕಾರ ಚಳವಳಿಗೆ ಮುಂದಾಗಲು ಕರೆ ನೀಡಿದ್ದೇ ಕನ್ನೆಗಂಟಿ ಹನುಮಂತುವಿನ ಬಂಡಾಯಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿತು. ಯಾವೊಬ್ಬ ರೈತ ಕೂಡ ಬ್ರಿಟಿಷ್ ಸರಕಾರಕ್ಕೆ ಈ ಸುಂಕವನ್ನು ನೀಡಬಾರದೆಂದು ಅವರು ನಾಲ್ಕಾರು ಗ್ರಾಮಗಳ ರೈತರನ್ನು ಒಗ್ಗೂಡಿಸಿದರು. ಆಗ ಬ್ರಿಟಿಷ್ ಅಧಿಕಾರಿಗಳು ಗ್ರಾಮಕ್ಕೆ ಬಂದು ಸುಂಕ ನಿರಾಕರಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಭಾರತದಾದ್ಯಂತ ಧಗಧಗಿಸಿದ ಸ್ವಾತಂತ್ರ್ಯ ಸಂಗ್ರಾಮದ ದಳ್ಳುರಿಯ ನಡುವೆ ಆಂಧ್ರಪ್ರದೇಶದ ಒಂದು ಹಳ್ಳಿಯಿಂದ ಸಿಡಿದೆದ್ದ ಘೋಷಣೆಯೊಂದು ಬ್ರಿಟಿಷ್ ಆಡಳಿತಗಾರರ […]
Month : November-2023 Episode : Author : ಆರತಿ ಪಟ್ರಮೆ
ಮನೆಯ ಹೆಣ್ಣುಮಕ್ಕಳ ಆರೋಗ್ಯ ಹದಗೆಟ್ಟರೆ ಇಡಿಯ ಬದುಕೇ ಹಳಿತಪ್ಪಿದಂತಾಗುತ್ತದೆ. ಮೊದಲಾದರೆ ಮನೆಗಳಲ್ಲಿ ಕೂಡುಕುಟುಂಬಗಳಿದ್ದವು, ಒಬ್ಬರಲ್ಲದಿದ್ದರೆ ಮತ್ತೊಬ್ಬರು ಅಡುಗೆಮನೆಯ ಜವಾಬ್ದಾರಿ ಹೊತ್ತು ಮನೆಯ ರಥದ ಗಾಲಿಗಳು ಮುನ್ನಡೆಯುವಂತೆ ಮಾಡುತ್ತಿದ್ದರು. ಅಥವಾ ಮನೆಯಲ್ಲಿ ಇಬ್ಬರೋ ಮೂವರೋ ಮಕ್ಕಳಿದ್ದರೆ ಕೆಲಸಗಳನ್ನು ಹಂಚಿಕೊಳ್ಳುತ್ತಿದ್ದರು. ಇಂದು ಪರಿಸ್ಥಿತಿ ಬೇರೆಯೇ. ಮನೆಯಲ್ಲಿರುವ ಮಕ್ಕಳಿಗಾದರೂ ಶಾಲಾಕಾಲೇಜುಗಳ ಒತ್ತಡದ ನಡುವೆ ಮನೆಗೆಲಸಗಳಿಗೆ ಎಳೆಯುವಂತೆಯೇ ಇಲ್ಲ ಎನ್ನುವಂತಾಗಿದೆ. ಹೀಗಿರುತ್ತ ಅಮ್ಮನ ಆರೋಗ್ಯ ಕೆಟ್ಟರೆ ಅವರಾದರೂ ಏನು ಮಾಡಿಯಾರು? ಪರಿಣಾಮ – ಮನೆಯ ಯಜಮಾನನ ಮೇಲಿನ ಕೆಲಸಗಳ ಹೊರೆ ಇನ್ನಿಲ್ಲದಂತೆ ಹೆಚ್ಚುತ್ತಿದೆ. […]
Month : November-2023 Episode : ಭಾಗ - 4 Author : ರಾಧಾಕೃಷ್ಣ ಕಲ್ಚಾರ್
ಸೆರೆಮನೆಯಲ್ಲಿದ್ದ ಸಾಂಬನಿಗೆ ಏನಾದರೂ ಹಾನಿ ಮಾಡುತ್ತಾರೋ ಎಂಬ ಆತಂಕ ನನಗಿತ್ತು. ಆದರೆ ಹಿರಿಯಜ್ಜ ಭೀಷ್ಮರು ಅದಕ್ಕೆ ಆಸ್ಪದ ಕೊಡಲಾರರು ಎಂದು ಭರವಸೆಯೂ ಇತ್ತು. ಅದಕ್ಕೆ ಕಾರಣ ಸಾಂಬನ ಬಗ್ಗೆ ಅಜ್ಜನಿಗೆ ಮೆಚ್ಚುಗೆ ಇತ್ತು ಎಂದಲ್ಲ. ಕೃಷ್ಣನ ಕುರಿತು ಅಜ್ಜನಿಗೆ ಆದರವಿದ್ದರೂ ಸಾಂಬನ ಕುಲೀನತೆ ತಮಗಿಂತ ಕಡಮೆ ಎಂಬ ತಿರಸ್ಕಾರ ಒಳಗಿಂದೊಳಗೆ ಅಜ್ಜನಿಗೂ ಇದ್ದಿರಬಹುದು. ಆದರೆ ಸಾಂಬನಿಗೆ ತೊಂದರೆ ಕೊಡದಂತೆ ಅವರು ಕಟ್ಟುನಿಟ್ಟು ಮಾಡಿದ್ದರಂತೆ. ಇದು ಒಂದು ರಾಜನೀತಿಯ ಕೌಶಲ ಅಷ್ಟೆ. ಯಾದವರು ದಿನೇ ದಿನೇ ಪ್ರಬಲರಾಗುತ್ತಿದ್ದಾರೆ. ಸಾಂಬನನ್ನು […]
Month : November-2023 Episode : Author : ಸವಿತಾ ಮಾಧವ ಶಾಸ್ತ್ರಿ
ಇನ್ನೇನು ಕ್ರಿಸ್ಮಸ್ ರಜೆ ಹತ್ತಿರ ಬಂತು. ಆರವ್ ಮನೆಯಲ್ಲೇ ಇರುತ್ತಾನೆ. ಅವನ ಜೊತೆ ಚೆಸ್ ಆಡಬೇಕು. ಅವನಿಗೆ ಚೆಸ್ ಆಡಲು ಬರುವುದಿಲ್ಲ. ತಾನು ಕಾಲೇಜು ದಿನಗಳಿಂದಲೂ ಚೆಸ್ ಚಾಂಪಿಯನ್. ಮೊಮ್ಮಗನಿಗೆ ಚೆಸ್ ಕಲಿಸಿಕೊಡಬೇಕು ಎಂದು ಆಸೆಯಿಂದ ಆ ದಿನ ಸಂಜೆ ವಾಕಿಂಗ್ನಿಂದ ಮರಳಿ ಬರುವಾಗ ಚೆಸ್ ಬೋರ್ಡ್ ಮನೆಗೆ ತಂದರು ನರಹರಿರಾಯರು. ಅವತ್ತು ಮಗ–ಸೊಸೆ ಶಾಪಿಂಗ್ ಮುಗಿಸಿ ಲೇಟಾಗಿ ಮನೆಗೆ ಬಂದರು. ಮಗ ರಂಜನ್ “ಅಪ್ಪಾ, ಆರವ್ಗೆ ಕ್ರಿಸ್ಮಸ್ ರಜೆ ಇದೆ. ಹೀಗಾಗಿ ನಾವು ಒಂದು ಹತ್ತು […]