ಕಣ್ಣುಗಳೆದುರು ಆರ್ತಳಾದ ಪಾಂಚಾಲೆಯ ದೀನಸ್ಥಿತಿ ಸ್ತಬ್ಧಚಿತ್ರವಾಗಿ ಕಟ್ಟುತ್ತಿದೆ…
ಪ್ರಾತಿಕಾಮಿ
Month : December-2015 Episode : Author : ರಾಧಾಕೃಷ್ಣ ಕಲ್ಚಾರ್
Month : December-2015 Episode : Author : ರಾಧಾಕೃಷ್ಣ ಕಲ್ಚಾರ್
Month : December-2015 Episode : Author : ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು
ಒಂದು ಅರಣ್ಯದಲ್ಲಿ ಸಾವಿರಾರು ಮಂಗಗಳ ದೊಡ್ಡ ಸಮೂಹವಿತ್ತು. ಮಂಗಗಳಿಗೆ ನಾವು ‘ಚಂಚಲಪ್ರಾಣಿ’ ಎನ್ನುತ್ತೇವೆ. ಆದರೆ ಅವು ಬಹಳ ಜಾಣ. ಒಂದೇ ಜಾಗದಲ್ಲಿ ಕುಳಿತರೆ ನಮಗೆ ಏನೊ ಗಂಡಾಂತರ ಕಾದಿದೆ ಎಂದು ಮಂಗಗಳು ಬಲ್ಲವು. ಅಂತೆಯೇ ಅವು ದಿನವಿಡೀ ಅತ್ತಿಂದಿತ್ತ ಅಲೆದಾಡುತ್ತಿರುತ್ತವೆ. ಒಂದು ದಿನ ಆ ಮಂಗಗಳು ವಿಶಾಲವಾದ ಪ್ರದೇಶಕ್ಕೆ ಬಂದವು. ಅಲ್ಲೊಂದು ಗಗನಚುಂಬಿಯಾಗಿ ಬೆಳೆದ ಬಿದಿರಿನ ಮರವಿತ್ತು. ಸುಮಾರು ಎರಡು ನೂರು ಅಡಿ ಎತ್ತರವಾಗಿತ್ತು. ಬಹಳ ದಿನಗಳಿಂದ ಮಂಗಗಳು ತಮ್ಮ ಸಮೂಹಕ್ಕೆ ಒಬ್ಬ ರಾಜನನ್ನು ಆರಿಸಬೇಕು ಎಂದುಕೊಂಡಿದ್ದವು. […]
Month : December-2015 Episode : ಧಾರಾವಾಹಿ -೫ Author : ನಾಗೇಶ್ ಕುಮಾರ್ ಸಿ.ಎಸ್
ಇಲ್ಲಿಯವರೆಗೆ……. ವಿಜಯ್ ಮತ್ತು ಲೂಸಿಯಾ `ರಚನಾ ಪೈಂಟಿಂಗ್ಸ್ ಶಾಪೀ’ಗೆ ತೆರಳಿದಾಗ ಅಲ್ಲಿ ರಚನಾ ಮತ್ತು ಅವರ ಪತಿ, ಪೊಲೀಸ್ ಕಮಿಷನರ್ ಅವರು ಭೇಟಿಯಾದರು. ದತ್ತಕದ ವಿಚಾರ ಪ್ರಶ್ನಿಸಿದಾಗ ಕಮೀಶನರ್ ಇಬ್ಬರನ್ನೂ ಗದರಿ ಕಳುಹಿಸಿದರು….. ಲೂಸಿ ಆಫೀಸ್ಗೆ ತೆರಳಿದರೆ, ವಿಜಯ್ ರಚನಾ ಮನೆಯ ಹಿತ್ತಲಲ್ಲಿದ್ದುಕೊಂಡು ಅವರ ಮಾತನ್ನು ಕದ್ದಾಲಿಸಿದಾಗ ರಚನಾಳ ಮಗಳೇ ಮೃದುಲಾ; ಜಾನಿ ಇವರನ್ನೂ ಕೂಡ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಎನ್ನುವ ವಿಷಯ ತಿಳಿಯುತ್ತದೆ….. ಅನಂತರ, ರಚನಾ ತನ್ನ ಮನೆಯಿಂದ ತಂದೆಯ ಮನೆಗೆ ತೆರಳುತ್ತಾಳೆ. ಆಗ ವಿಜಯ್ ಕೂಡ […]
Month : December-2015 Episode : Author : ಎಚ್ಚೆಮ್
ಯಾರು ‘ಜನಪರ’ ಮತ್ತು ಯಾರು ‘ಜನಪರ’ ಅಲ್ಲ (ಅಥವಾ ‘ಜನವಿರೋಧಿ’) ಎಂಬ ಬಗ್ಗೆ ನಮ್ಮ ರಾಜಕಾರಣಿಗಳ ನಡುವೆ ಮಾತ್ರವಲ್ಲ; ಸಮಾಜದಲ್ಲಿ ಕೂಡ ಒಂದು ಬಗೆಯ ಸ್ಪರ್ಧೆಯೇ ಏರ್ಪಟ್ಟಿರುವುದನ್ನು ಕಾಣುತ್ತೇವೆ. ಈ ವಿಭಜನೆ ಹೇಗಿರುತ್ತದೆಂದರೆ ‘ಜನಪರ’ ಅಲ್ಲದವರೆಲ್ಲ ‘ಜನವಿರೋಧಿ’ ಆಗಿರಲೇಬೇಕು; ಇದಕ್ಕೆ ಹೊರತಾಗಿ ಬೇರೆರೀತಿಯ ಜನ ಇರಲು ಸಾಧ್ಯವೇ ಇಲ್ಲ ಎಂಬಂತಿರುತ್ತದೆ. ಇದರಲ್ಲಿ ಸಾಮಾನ್ಯವಾಗಿ ನಾನು ಅಥವಾ ನನ್ನ ಗುಂಪು ‘ಜನಪರ’; ಉಳಿದವರೆಲ್ಲ ‘ಜನವಿರೋಧಿ’ಗಳು. ಬಹುತೇಕ ಎಲ್ಲರೂ ‘ಜನಪರ’ ಎಂಬ ಹಣೆಪಟ್ಟಿಯ ಕೆಳಗೆ ಸೇರಿಕೊಳ್ಳುವ ತವಕದಲ್ಲಿರುವುದರಿಂದ ಇದರ ನಿರ್ಣಯವೂ […]
Month : December-2015 Episode : Author : ಶ್ರೀಹರ್ಷ ಪೆರ್ಲ
ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆ ಮೊಬೈಲ್ ಆಪ್ಗಳ ಸಂಖ್ಯೆ ಕೂಡ ಲೆಕ್ಕವಿಲ್ಲದಷ್ಟು ಬೆಳೆದಿದೆ. ಸುದ್ದಿ ಓದಲು, ಸಂಗೀತ ಕೇಳಲು, ವಿಡಿಯೋ ನೋಡಲು, ಚಾಟ್ ಮಾಡಲು….. ಹೀಗೆ ಹಲವು ಆಪ್ಗಳು ನಿಮ್ಮ ಮೊಬೈಲಿನಲ್ಲಿ ತುಂಬಿರುತ್ತವೆ. ಆಪ್ಗಳ ರಾಶಿಯಿಂದ ಅಗತ್ಯವಿರುವವುಗಳನ್ನು ಹುಡುಕಿ ಹೆಕ್ಕಿಕೊಳ್ಳುವುದೇ ಒಂದು ಕೆಲಸ. ಕೆಲವನ್ನು ನೀವು ಬೇಕೆಂದಾಗ ಅನುಷ್ಠಾಪಿಸಿಕೊಳ್ಳಬಹುದಾಗಿದ್ದು, ಕೆಲವು ಆಪ್ಗಳು ನಿಮ್ಮ ಬಳಿ ರೆಡೀ ಇದ್ದರೆ ಯಾವಾಗಲಾದರೂ ಉಪಯೋಗಕ್ಕೆ ಬರುತ್ತದೆ. ಕೆಲವು ಅಂತಹವುಗಳ ಪರಿಚಯ ಇಲ್ಲಿದೆ.
Month : December-2015 Episode : Author :
Month : December-2015 Episode : Author :
ದ್ವಿಪಾದ ಪೀಠಾಸನ ಮತ್ತು ಊರ್ಧ್ವ ಧನುರಾಸನ ಇವುಗಳು ಕೂಡ ಪೃಷ್ಠ, ಭುಜ ಹಾಗೂ ಬೆನ್ನಿನ ಭಾಗದಲ್ಲಿ ಶೇಖರವಾಗಿರುವ ಕೊಬ್ಬನ್ನು ಬಹುಬೇಗ ಕರಗಿಸುತ್ತವೆ. ಇವು ಬೆನ್ನನ್ನು ಹಿಂದಕ್ಕೆ ಬಗ್ಗಿಸಿ ಮಾಡುವ ಆಸನಗಳು. ಆದ್ದರಿಂದ ಆಸನದ ಸ್ಥಿತಿಗೆ ಹೋಗುವಾಗ ಯಾವತ್ತು ಉಸಿರನ್ನು ತೆಗೆದುಕೊಳ್ಳುತ್ತಾ ಹೋಗಬೇಕು ಮತ್ತು ಸ್ಥಿತಿಯಿಂದ ಮರಳುವಾಗ ಉಸಿರನ್ನು ಬಿಡುತ್ತಾ ಬರಬೇಕು. ದ್ವಿಪಾದ ಪೀಠಾಸನ ಮೊದಲಿಗೆ ಜಮಖಾನದ ಮೇಲೆ ಅಂಗಾತ ಮಲಗಿ. ಬಳಿಕ ಮೊಣಕಾಲುಗಳನ್ನು ಮಡಿಸಿ, ಎಡಗೈಯಿಂದ ಎಡಗಾಲ ಮಣಿಕಟ್ಟನ್ನೂ, ಬಲಗೈಯಿಂದ ಬಲಗಾಲ ಮಣಿಕಟ್ಟನ್ನೂ ಭದ್ರವಾಗಿ ಹಿಡಿದುಕೊಳ್ಳಿ. ಅನಂತರ […]
Month : December-2015 Episode : Author :
ಗಾದೆಗಳು ಹುಟ್ಟಿಕೊಂಡಿದ್ದು ಹೆಚ್ಚಾಗಿ ಗ್ರಾಮೀಣ ಹಿನ್ನೆಲೆಯಲ್ಲಿ; ಜನಸಾಮಾನ್ಯರನ್ನು ಎಚ್ಚರಿಸುವ ಉದ್ದೇಶದಿಂದಾಗಿ. ಹಳ್ಳಿಯಕಡೆ ಹೆಚ್ಚಾಗಿ ಹುಲ್ಲಿನ ಮನೆಗಳು. ಮಳೆಗಾಲ ಪ್ರಾರಂಭವಾಗುವ ಮೊದಲೇ ಪ್ರತಿವರ್ಷ ಮಾಡಿಗೆ ಹೊದಿಸಿದ ಹುಲ್ಲನ್ನು ಬದಲಾಯಿಸಬೇಕು. ಆದರೆ ಒಬ್ಬ ಸೋಮಾರಿ ನಾಳೆ ಮಾಡಿದರಾಯ್ತು ಎಂದು ಮುಂದೂಡುತ್ತಲೇ ಬರುತ್ತಾನೆ. ಮಳೆ ಪ್ರಾರಂಭವಾಗಿ ಬಿಡುತ್ತದೆ. ಮನೆಯೊಳಗೆಲ್ಲ ಸೋರುವ ನೀರು. ಮೈ ಒದ್ದೆಯಾಗಿ ಗಂಡ ನಡುಗುತ್ತಾ ಕೂತಿದ್ದನ್ನು ನೋಡಿದ ಅವನ ಹೆಂಡತಿ `ನಾಳೆ ಎಂದವನ ಮನೆ ಹಾಳು’ ಎಂದು ಬಯ್ಯುತ್ತಾಳೆ. ಯಾವುದೇ ಕಾರ್ಯವಿರಲಿ, ಅದನ್ನು ಸಕಾಲದಲ್ಲಿ ಮಾಡಿ ಮುಗಿಸದಿದ್ದರೆ ನಷ್ಟ […]
Month : December-2015 Episode : Author : ಗೀತಾ ಅರವಿಂದ್
ಹಗುರವಿದೆಯೆಂದು ತೇಲದು ಭಾರವಿದೆಯೆಂದು ಮುಳುಗದು ನೀರಿನಲಿ ವಸ್ತುವು ವಸ್ತುವಿನ ಸಾಂದ್ರತೆ ನೀರಿನ ಸಾಂದ್ರತೆಗಿಂತ ಹೆಚ್ಚಿದ್ದಲ್ಲಿ ಮುಳುಗುವುದು ಕಡಮೆಯಿದ್ದಲ್ಲಿ ತೇಲುವುದು ನೀರಿನಲಿ ವಸ್ತುವು ಭಾರ ಮತ್ತು ಹಗುರ ಇರುವುದರಿಂದ ವಸ್ತುಗಳು ಮುಳುಗುತ್ತದೆ, ತೇಲುತ್ತದೆ ಎಂದರೆ ತಪ್ಪಾಗುತ್ತದೆ ಎಂಬುದು ಈಗಾಗಲೇ ಹಿಂದಿನ ಸಂಚಿಕೆಯಲ್ಲಿ ತಿಳಿದುಕೊಂಡಿದ್ದೇವೆ. ಹಾಗಾದರೆ ಕೆಲವು ವಸ್ತುಗಳು ನೀರಿನಲ್ಲಿ ಮುಳುಗಲು ಅಥವಾ ತೇಲಲು ಕಾರಣವೇನು ಎಂಬ ಪ್ರಶ್ನೆ ಉಳಿದಿದೆ. ವಸ್ತುಗಳು ಯಾವುದಾದರೂ ದ್ರವದಲ್ಲಿ ಮುಳುಗುವುದು, ತೇಲುವುದನ್ನು ವಸ್ತುಗಳ ಮತ್ತು ದ್ರವಗಳ ಸಾಂದ್ರತೆಯ ಆಧಾರದ ಮೇಲೆ ನಿರ್ಧರಿಸಬಹುದು. ಅಂದರೆ ಯಾವುದೇ […]
Month : December-2015 Episode : Author : ಕೇಬಿ