ಉತ್ಥಾನ ಆಗಸ್ಟ್ 2017
Month : September-2017 Episode : Author :
Month : September-2017 Episode : Author :
Month : September-2017 Episode : Author :
ಭಾವಸಾಮರ್ಥ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ ಭಾವದ ಸಾಮರ್ಥ್ಯ ಅದ್ಭುತ! ಜೀವನದಲ್ಲಿ ಬರುವ ಅಸಂಖ್ಯ ಸುಖ-ದುಃಖಗಳನ್ನು ಅದು ಅನುಭವಿಸುತ್ತದೆ. ನಮ್ಮ ಬದುಕಿಗೆ ಒಂದು ಹೊಸ ರೂಪವನ್ನು, ಮೆರಗನ್ನು ತರುತ್ತದೆ. ಹಿರಿಯರಿಗಿರುವ ಅನುಭವ ಕಿರಿಯರಿಗಿಲ್ಲ? ಕಿರಿಯರಿಗೆ ಇರುವ ಅನುಭವ ಬಾಲಕರಿಗಿಲ್ಲ. ಏಕೆಂದರೆ ಹಿರಿಯರು ದಶಕಗಳವರೆಗೆ ಅನೇಕ ಕಷ್ಟ-ನಷ್ಟಗಳನ್ನು, ಸುಖ-ದುಃಖಗಳನ್ನು ಅನುಭವಿಸಿ ಪರಿಪಕ್ವರಾಗಿರುತ್ತಾರೆ. ಅಂತೆಯೇ ಹಿರಿಯರಿಗೆ ಅಷ್ಟು ಘನತೆ-ಗೌರವಗಳನ್ನು ನಾವು ಕೊಡುತ್ತೇವೆ. ಅದು, ಭಾವ-ಅನುಭಾವದ ಸಾಮರ್ಥ್ಯ. ಈ ಭಾವವು ಮಧುರವಾದರೆ ಸುಖಾನುಭವ. ಅದು ಕಹಿಯಾದರೆ ದುಃಖಾನುಭವ! ಈ ಬದುಕೊಂದು ಅನಂತ ಆಗಸದಲ್ಲಿ […]
Month : September-2017 Episode : Author : ಭಾರತೀ ಕಾಸರಗೋಡು
ಸೋಮಯ್ಯ ಒಬ್ಬ ರೈತ. ಅವನ ಸಂಸಾರ ತುಂಬ ದೊಡ್ಡದು. ತಂದೆ-ತಾಯಿ, ತಮ್ಮಂದಿರು, ತಂಗಿಯರು, ಎಲ್ಲರನ್ನೂ ಅವನೇ ಪೊರೆಯಬೇಕಾಗಿತ್ತು. ಜೊತೆಗೆ ಅವನ ಹೆಂಡತಿ, ಮಕ್ಕಳು. ಆದರೆ ಸೋಮಯ್ಯ ಯಾವತ್ತೂ ಯಾವುದಕ್ಕೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ. ತನ್ನ ಪಾಲಿನ ಕೆಲಸಗಳನ್ನು ಅವನು ಪ್ರೀತಿಸುತ್ತಿದ್ದ. ಅವನ ದಿನಚರಿ ಕಷ್ಟಕರವಾಗಿತ್ತು. ಬೆಳಗಿನ ಜಾವ ಬೇಗನೇ ಏಳುತ್ತಿದ್ದ ಸೋಮಯ್ಯ. ಸೂರ್ಯ ಮೂಡುವ ಮೊದಲೇ ಹೊಲದಲ್ಲಿರುತ್ತಿದ್ದ. ಉಳುವುದು, ಬೀಜ ಬಿತ್ತುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ಹೀಗೆ ಬೇಸಾಯದ ಕೆಲಸಗಳನ್ನೆಲ್ಲ ಶ್ರದ್ಧೆಯಿಂದ ಮಾಡುತ್ತಿದ್ದ. ಮಧ್ಯಾಹ್ನ ಅವನ ಹೆಂಡತಿ […]
Month : September-2017 Episode : Author : ಆರತಿ ಪಟ್ರಮೆ
’ಕೃಪಾಮಯಿ ಮಕ್ಕಳಬಳಗ’ದ ವತಿಯಿಂದ ಇಬ್ಬರು ಯುವಸಾಧಕರಿಗೆ ಸನ್ಮಾನ ಮತ್ತು ಮಕ್ಕಳಿಗೆ ಅವರಿಂದ ಸ್ಫೂರ್ತಿಯ ಮಾತುಗಳನ್ನು ಕೇಳಿಸುವುದಕ್ಕಾಗಿ ಇತ್ತೀಚೆಗೆ ’ಪ್ರೇರಣಾ’ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಸಾಧನೆಯಲ್ಲಿ ತನ್ನ ಅಪ್ಪ-ಅಮ್ಮನ ಪಾತ್ರದ ಬಗ್ಗೆ ಹೇಳುತ್ತಾ ’ನೀನೇನೇ ಮಾಡು ಮಗೂ, ನೀನು ನಮ್ಮ ಮಗ ಎನ್ನುವ ಒಂದು ಮಾತು ಅವರಿಂದ ಬಂದರೂ ಸಾಕು, ಅದು ಆನೆಯ ಬಲ ತುಂಬುತ್ತದೆ’ ಎಂದು ಭಾವುಕನಾದ. ಖಂಡಿತ, ಇದನ್ನು ನಾವು ಎಷ್ಟು ಸಲ ಮರೆತು ಬಿಡುತ್ತೇವೆ. ತಂದೆ ತಾಯಿಯಾಗಿ ನಮ್ಮ […]
Month : September-2017 Episode : Author : ಕುಮುದಾ ಪುರುಷೋತ್ತಮ್
ನಾನು ಒಳಹೊಕ್ಕಾಗ ಗೋಡೆಯ ಮೇಲಿದ್ದ ಗಡಿಯಾರ ಏಳು ಗಂಟೆ ತೋರಿಸುತ್ತಿತ್ತು. ನನಗೆ ಅಪಾಯಿಂಟ್ಮೆಂಟ್ ಇದ್ದದ್ದೂ ಏಳುಗಂಟೆಗೇ. ನಾನೇ ಅಂದಿನ ಕೊನೆಯ ಪೇಷೆಂಟ್. ಸಾಲಾಗಿ ಜೋಡಿಸಿದ್ದ ಆಸನಗಳಲ್ಲೊಂದರಲ್ಲಿ ಕುಳಿತೆ. ಎದುರಿಗಿದ್ದ ಚಿಕಿತ್ಸಾ ಕೋಣೆಯಿಂದ ಅಸ್ಪ?ವಾದ ಮಾತುಗಳು ಕೇಳಿಸುತ್ತಿತ್ತು. ಮುಂದಿದ್ದ ಟೇಬಲ್ ಮೇಲೆ ಚಲ್ಲಾಪಿಲ್ಲಿಯಾಗಿ ಹರಡಿದ್ದ ಹಳೆಯ ಫಿಲ್ಮೀ ನಿಯತಕಾಲಿಕೆಯಲ್ಲೊಂದು ಎತ್ತಿಕೊಂಡು ಪುಟ ತಿರುಗಿಸತೊಡಗಿದೆ. ಯಾವ ನಟ ಯಾರ್ಯಾರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾನೆ, ಯಾರ್ಯಾರ ಮದುವೆಯ ನಿಶ್ಚಿತಾರ್ಥ ನಡೆಯಲಿದೆ, ಯಾರ್ಯಾರಿಗೆ ರಹಸ್ಯವಾಗಿ ಮದುವೆಯಾಗಿದೆ, ಯಾರ್ಯಾರ ನಡುವೆ ಅನೈತಿಕ ಸಂಬಂಧವಿದೆ, ಯಾರ್ಯಾರ ಮದುವೆ […]
Month : September-2017 Episode : Author : ಸಿ.ಆರ್. ಸತ್ಯ
ಮಾನವನ ಮಾನಸಿಕ, ದೈಹಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಪರಿಣತಿಗಳ ಉತ್ಕೃಷ್ಟ ಮಟ್ಟಗಳನ್ನು ಪರೀಕ್ಷಿಸಲು ಈಗ ನಮ್ಮಲ್ಲಿ ಸಾವಿರಾರು ರೀತಿಯ ಸ್ಪರ್ಧೆಗಳು ಚಾಲನೆಯಲ್ಲಿವೆ. ಒಲಿಂಪಿಕ್ಸ್ ಕ್ರೀಡಾಕೂಟ, ಫಾರ್ಮುಲಾ-ಒನ್ ಕಾರ್ರೇಸ್, ಲಿಮ್ಕಾ ದಾಖಲೆಗಳಲ್ಲಿ ಕಾಣುವ ಸಾವಿರಾರು ಪಂದ್ಯಗಳು, ಚೆಸ್ ಆಟ ಮತ್ತು ಸಾಹಸಗಳು (ಇವುಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಎಷ್ಟು ಇಡ್ಲಿಗಳನ್ನು ತಿನ್ನಬಹುದು ಎಂಬ ಸ್ಪರ್ಧೆಯೂ ಸೇರಿದೆ!) ಇವೇ ಕೆಲವು ಉದಾಹರಣೆಗಳು. ಮೊದಲ ಘಟ್ಟದಲ್ಲಿ, ಈ ಸ್ಫರ್ಧೆಗಳು ಮಾನವನ ದೈಹಿಕ ಮತ್ತು ಮಾನಸಿಕ ಸಾಹಸಗಳಿಗೆ ಮೀಸಲಾಗಿದ್ದು ಅನಂತರ ತಾಂತ್ರಿಕ ಮತ್ತು ವೈಜ್ಞಾನಿಕ […]
Month : September-2017 Episode : Author : ಮ.ಸು. ಸುಲೋಚನ
“ರಾತ್ರಿ ಮಲಗಿದಾಗ ನಿಮ್ಮ ಅಮ್ಮನ ಕೆಮ್ಮು ಸಹಿಸಲಾಗುವುದಿಲ್ಲ.” “ಡಾಕ್ಟರ್ ಬಳಿ ಕರೆದುಕೊಂಡು ಹೋಗುತ್ತೇನೆ.” ಮಗನ ಮಾತು. “ಡಾಕ್ಟರ್ ಬಳಿಗೇಕೆ? ಸುಮ್ಮನೆ ದುಡ್ಡು ದಂಡ. ಜೀರಿಗೆ ಮೆಣಸಿನ ಕಾಳಿನ ಕ?ಯ ಕೊಟ್ರೆ ಸರಿ.” * **** “ಚಟ್ನಿ ಬೇಕಂತೆ. ಪ್ರತಿದಿನ ರುಚಿಗಳಿಗೇನು ಕಡಮೆ ಇಲ್ಲ” ಸೊಸೆಯ ಸಿಡಿಮಿಡಿ. “ಅಪ್ಪನಿಗೋಸ್ಕರ ಪ್ರತಿದಿನ ಮಾಡಿಮಾಡಿ ಅಭ್ಯಾಸ ಅಲ್ಲವೇ?” “ತಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ನಿಧಾನವಾಗಿ ಮಾಡಿಮಾಡಿ ಬಡಿಸುವುದಕ್ಕೆ ನನಗೂ ಬಿಡುವಿರಬೇಕಲ್ಲ! ಕೆಲಸಕ್ಕೆ ಹೋಗಬೇಕು. ಅ? ಅಲ್ಲ, ನೀವೇ ನಿಮ್ಮಮ್ಮನಿಗೆ ಹೇಳಿಬಿಡಿ. ಮಾತನಾಡದೆ […]
Month : September-2017 Episode : Author : ಡಾ|| ಕೆ. ಜಗದೀಶ ಪೈ
ಮನುಷ್ಯನು ಒಂಟಿಯಾಗಿ ಈ ಭೂಮಿಗೆ ಬರುತ್ತಾನೆ; ಒಂಟಿಯಾಗಿಯೇ ಈ ಭೂಮಿಯನ್ನು ಬಿಟ್ಟು ಹೋಗುತ್ತಾನೆ. ಜನನ-ಮರಣವೆಂಬುದು ಒಂಟಿಯಾದರೂ ಅದರ ನಡುವಿನ ಜೀವನ ಮಾತ್ರ ಒಂಟಿಯಾಗಿರುವುದಿಲ್ಲ. ಬದುಕಿಗೆ ಸಮಾಜದ ಆಧಾರ, ನೆರವು ಬೇಕೇ ಬೇಕು; ಏಕೆಂದರೆ ಮನು?ನು ಸಂಘಜೀವಿ. ಈ ಸೃಷ್ಟಿಯಲ್ಲಿ ಮನುಷ್ಯ ಮಾತ್ರವಲ್ಲ, ಎಲ್ಲ ಜೀವಿಗಳೂ ಸಂಘಜೀವಿಗಳೇ. ಸಮಾಜವಿಲ್ಲದೆ ನಾವು ಬದುಕುವುದು ಅಸಾಧ್ಯ; ಆದರೆ ಸಮಾಜ ನಾವಿಲ್ಲದೆಯೂ ಬದುಕುತ್ತದೆ. ಅಂದರೆ ನಮ್ಮ ಬದುಕಿಗೆ ಸಮಾಜ ಅನಿವಾರ್ಯವೇ ವಿನಾ ಸಮಾಜದ ಜೀವಂತಿಕೆಗೆ ನಮ್ಮ ಆವಶ್ಯಕತೆ ಇಲ್ಲ. ಆದ್ದರಿಂದ ನಮ್ಮ ಜೀವನಕ್ಕೆ […]
Month : September-2017 Episode : Author : ಬಸ್ತಿ ಸದಾನಂದ ಪೈ
ನಾನು ಭಾರತದಿಂದ ಹೊರಟಾಗಿನ ಮಹತ್ತ್ವಾಕಾಂಕ್ಷೆಯ ಬದುಕು ನನ್ನದಾಗಿದೆ. ಮಹಿಳಾ ಉದ್ಯಮಿಗಳಲ್ಲಿ ಜಗತ್ತಿನಲ್ಲಿಯೇ ನಂಬರ್ಒನ್ ಎಂದು ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಕಾಣಿಸಿದೆ. ನನ್ನೆಲ್ಲಾ ಕನಸುಗಳು ಸಾಕಾರಗೊಂಡಿವೆ. ಆದರೆ…. ಆಫೀಸಿನಿಂದ ವಸುಮತಿ ಮನೆಗೆ ಬಂದಾಗ ಗಡಿಯಾರದ ಮುಳ್ಳು ರಾತ್ರಿ ಒಂದು ಘಂಟೆ ತೋರಿಸುತ್ತಿತ್ತು. ಮಗಳು ಸುರೇಖಾಳೊಡನೆ ಮಾತಾಡಬೇಕಾಗಿತ್ತು ಎಂಬುದು ನೆನಪಾಯಿತು. ಆದರೆ ಅಲ್ಲಿ ಈಗ ರಾತ್ರಿ ಮೂರು ಘಂಟೆ. ಸಕ್ಕರೆಯ ನಿದ್ದೆಯಲ್ಲಿರಬಹುದು. ನಿದ್ದೆಗೆ ಭಂಗವಾಗುವುದು ಬೇಡ ಎಂದು ಸುಮ್ಮನಾದಳು. ಒಂದು ವರ್ಷದ ನಂತರ ಇದೀಗ ಕರೆಮಾಡಿದ್ದಳು. ಒಂದು ವರ್ಷದ ಹಿಂದೆ […]
Month : September-2017 Episode : ಗಾಂಧೀಯ ಅರ್ಥಶಾಸ್ತ್ರ - ೪ Author : ಪ್ರೋ. ಎಂ. ಎಂ. ಗುಪ್ತ
ಗಾಂಧಿಯವರು ತಮ್ಮ ಆರ್ಥಿಕಚಿಂತನೆಗಳಲ್ಲಿ ಶಾರೀರಿಕ ಶ್ರಮದ ಮಹತ್ತ್ವಕ್ಕೆ ವಿಶೇಷ ಗಮನವನ್ನು ಹರಿಸಿದ್ದಾರೆ. ಅವರಿಗೆ ದೈಹಿಕಶ್ರಮದ ಬಗ್ಗೆ ಅಪಾರ ಗೌರವವಿತ್ತು. ಆದ್ದರಿಂದ ಅವರು ವ್ಯಕ್ತಿಯು ಮಾಡುವ ಪ್ರತಿಯೊಂದು ಕೆಲಸಕ್ಕೂ ಗೌರವದ ಲೇಪ ತೊಡಿಸಿ ಅದಕ್ಕೆ ಮಹತ್ತ್ವದ ಸ್ಥಾನಮಾನವನ್ನು ಕೊಟ್ಟಿದ್ದಾರೆ. ಪ್ರತಿಯೊಬ್ಬ ಮನುಷ್ಯ ತನ್ನ ದೈನಂದಿನ ಆವಶ್ಯಕತೆಗಳನ್ನು ಪೂರೈಸಲು ಸಾಕ? ಶಾರೀರಿಕ ಪರಿಶ್ರಮ ಮಾಡಬೇಕೆಂದು ಅವರು ಆಗ್ರಹಿಸುತ್ತಿದ್ದರು. ದೈಹಿಕಶ್ರಮ ಎಂದರೆ ಕೈಕಾಲುಗಳಿಂದ ದುಡಿದು ಸಂಪಾದನೆ ಮಾಡುವುದು ಎಂದು ಅರ್ಥ. “ಮನುಷ್ಯರು ತಮ್ಮ ಕೈಗಳ ಮೂಲಕ ಕೆಲಸ ಮಾಡಿ ಕಾಯಕದ ಗೌರವವನ್ನು […]