“ರಾತ್ರಿ ಮಲಗಿದಾಗ ನಿಮ್ಮ ಅಮ್ಮನ ಕೆಮ್ಮು ಸಹಿಸಲಾಗುವುದಿಲ್ಲ.”
“ಡಾಕ್ಟರ್ ಬಳಿ ಕರೆದುಕೊಂಡು ಹೋಗುತ್ತೇನೆ.” ಮಗನ ಮಾತು.
“ಡಾಕ್ಟರ್ ಬಳಿಗೇಕೆ? ಸುಮ್ಮನೆ ದುಡ್ಡು ದಂಡ. ಜೀರಿಗೆ ಮೆಣಸಿನ ಕಾಳಿನ ಕ?ಯ ಕೊಟ್ರೆ ಸರಿ.”
* ****
“ಚಟ್ನಿ ಬೇಕಂತೆ. ಪ್ರತಿದಿನ ರುಚಿಗಳಿಗೇನು ಕಡಮೆ ಇಲ್ಲ” ಸೊಸೆಯ ಸಿಡಿಮಿಡಿ.
“ಅಪ್ಪನಿಗೋಸ್ಕರ ಪ್ರತಿದಿನ ಮಾಡಿಮಾಡಿ ಅಭ್ಯಾಸ ಅಲ್ಲವೇ?”
“ತಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು. ನಿಧಾನವಾಗಿ ಮಾಡಿಮಾಡಿ ಬಡಿಸುವುದಕ್ಕೆ ನನಗೂ ಬಿಡುವಿರಬೇಕಲ್ಲ! ಕೆಲಸಕ್ಕೆ ಹೋಗಬೇಕು. ಅ? ಅಲ್ಲ, ನೀವೇ ನಿಮ್ಮಮ್ಮನಿಗೆ ಹೇಳಿಬಿಡಿ. ಮಾತನಾಡದೆ ಬಿದ್ದಿರುವುದಾದರೆ ಇಲ್ಲಿ ಇರಿಸಿಕೊಳ್ತೇವೆ. ಇಲ್ಲದೇ ಹೋದರೆ ಹಳ್ಳಿಗೆ ಹೊರಟು ಹೋಗಲಿ.”
“ಅಪ್ಪ ಹೋದ ಮೇಲೆ ಅಲ್ಲಿ ಒಂಟಿಯಾದಳೆಂದೇ ಅಲ್ಲವೇ, ನಾವು ಇಲ್ಲಿಗೆ ಕರೆದುಕೊಂಡು ಬಂದಿದ್ದು?”
“ಅದೇ ನೀವು ಮಾಡಿದ ತಪ್ಪು; ನಿಮ್ಮ ತಂದೆಯವರು ಇರುವವರೆಗೂ ಎಷ್ಟು ಕರೆದರೂ ಅವರು ಬರಲೇ ಇಲ್ಲವಲ್ಲ.”
“ಅಪ್ಪ ಬಹಳ ಖಂಡಿತವಾದಿಯಲ್ವೇ? ಎಲ್ಲಿಯೂ ಅವರಿಗೆ ಅಡ್ಜೆಸ್ಟ್ ಆಗುತ್ತಿರಲಿಲ್ಲ. ಊಟ, ತಿಂಡಿ ವಿ?ಯದಿಂದ ಹಿಡಿದು ಎಲ್ಲದರಲ್ಲೂ ಅವರು ಅಂದುಕೊಂಡಂತೆಯೇ ಮಾಡಿಸಿಕೊಳ್ಳುತ್ತಿದ್ದರು.”
“ಅಬ್ಬಬ್ಬ, ಹಳ್ಳಿಯಲ್ಲಿರುವವರಿಗೆ ಅ? ಅಭ್ಯಾಸಗಳು ಅಂದರೆ, ಪಟ್ಟಣದಲ್ಲಿರುವವರಿಗೆ ಅಭ್ಯಾಸಗಳು ಇರುವುದಿಲ್ಲವೇನು? ಇಲ್ಲಿರುವವರಿಗೂ ಸಹ ಅಭ್ಯಾಸಗಳು ಇರುವುದಿಲ್ಲವೇ? ಇಲ್ಲಿರುವವರು ಸಹ ಮನುಷ್ಯರೇ. ದೊಡ್ಡದಾಗಿ ನಿಮ್ಮಪ್ಪನ ವಿ?ಯ ಹೇಳುವುದಕ್ಕೆ ಬರುತ್ತೀರಿ” ಸೊಸೆಯ ಸಿಡುಕಿನ ಮಾತುಗಳು.
ಮಗನ ಮೌನ.
“ಅಮ್ಮ ಹಳ್ಳಿಯಲ್ಲಿ ಇದ್ದವಳಾದರೂ ಇಲ್ಲಿಗೆ ಬಂದ ನಂತರ ಏನೋ ಒಂದು ಕೆಲಸ ಹಚ್ಚಿಕೊಂಡು ಮಾಡುತ್ತಲೇ ಇರುತ್ತಿದ್ದಳು. ಕೆಲಸದವಳು ಒಣಹಾಕಿದ ಬಟ್ಟೆಗಳನ್ನು ತಂದು ಮಡಿಚಿಡುವುದು, ಮನೆ ಶುಚಿಯಾಗಿಡುವುದು, ರಾತ್ರಿ ಹೊತ್ತು ಚಪಾತಿ ಮಾಡುವುದು, ಇವೆಲ್ಲಾ ಅಮ್ಮ ಮಾಡುವ ಕೆಲಸಗಳೇ ಅಲ್ಲವೇ? ಇದೆಲ್ಲಾ ಲೆಕ್ಕಕ್ಕೆ ಬರುವುದಿಲ್ಲವಲ್ಲ ಇವಳಿಗೆ?” ಮಗನ ಸ್ವಗತ.
*****
“ಮತ್ತೊಬ್ಬ ವ್ಯಕ್ತಿಗೆ ಬಿಟ್ಟಿಊಟ ಹಾಕುತ್ತ, ನಾನು ದುಡಿಯುತ್ತಾ ಇರುವುದು ನನ್ನಿಂದ ಸಾಧ್ಯವಿಲ್ಲ. ಮೇಲಾಗಿ ಆ ಕೆಮ್ಮು ಎಂತಹುದೋ ಏನೋ? ಕರೆದುಕೊಂಡು ಹೋಗಿ ಹಳ್ಳಿಯಲ್ಲಿ ಬಿಟ್ಟು ಬನ್ನಿ.”
“ಖಾಯಿಲೆ ಜಾಸ್ತಿ ಆದರೆ ಡಾಕ್ಟರಿಗೆ ತೋರಿಸಬೇಕೆ ಹೊರತು ಕೆಮ್ಮುತ್ತಾ ಇದ್ದೀಯಾ, ಹೊರಟು ಹೋಗು ಎಂದು ಹೇಳಲು ಸಾಧ್ಯವೇ?”
“ಹಾಗಾದರೆ ಏನು ನೀವು ಹೇಳುವುದು? ಇಲ್ಲಿ ನಾನು ಅವಸ್ಥೆ ಪಟ್ಟರೂ ಪರವಾಗಿಲ್ಲ. ಇನ್ನು ಸಾಕು ಮಾಡಿ, ಆಕೆಯನ್ನು ಹಳ್ಳಿಗೆ ಕಳುಹಿಸಿಬಿಡಿ.”
ಹೆಂಡತಿಯನ್ನು ಎದುರು ಹಾಕಿಕೊಳ್ಳಲಾಗದ ಅಸಹಾಯಕತೆ, ಅಮ್ಮ ಆದರೆ ಅರ್ಥಮಾಡಿಕೊಳ್ಳುತ್ತಾರೆ. ಜೀವನಪರ್ಯಂತ ಹೆಂಡತಿಯೊಡನೆ ಸಹಬಾಳ್ವೆ ನಡೆಸಬೇಕಲ್ಲ! ಅದಕ್ಕೆ ಆಕೆಯ ಕಡೆಗೇ ಬಾಗುವುದು.
ಸೊಸೆಯ ಗೊಣಗುವಿಕೆಗೆ ಎರಡು ತಿಂಗಳು ವಿಶ್ರಾಂತಿ.
“ನಿಮ್ಮ ಅಮ್ಮ ಏನು ಖಾಯಿಲೆ ಅಂಟಿಸಿಹೋದರೋ ಏನೋ? ಈ ಹಾಳು ಮೈಕೈ ನೋವು ಕಡಮೆಯಾಗುತ್ತಲೇ ಇಲ್ಲ. ಜ್ವರ ಬೇರೆ ಆಗಾಗ ಬಾಧಿಸುತ್ತಿದೆ.”
“ನಿನಗೆ ಹು?ರಿಲ್ಲದಿದ್ದರೂ ಕಾರಣ ಅಮ್ಮನೇನಾ?”
“ಆಕೆ ಊರಿಗೆ ಹೋದಂದಿನಿಂದ ನನಗೆ ಹು?ರಿಲ್ಲ!”
“ಡಾಕ್ಟರ್ ಬಳಿ ಹೋಗೋಣವೇ?”
“ಖಾಯಿಲೆ ಬಂದ ನಂತರ ಹೋಗದಿದ್ದರಾಗುವುದೇ?”
“ಅಮ್ಮನಿಗೆ ಖಾಯಿಲೆ ಆದರೆ ಮಾತ್ರ ಇದು ಅನ್ವಯಿಸುವುದಿಲ್ಲವೇ?” ಮಗನಿಗೆ ಆಲೋಚನೆಗಳೇ ಹೊರತು ಆವೇಶ ಕಡಮೆ. ಅದಕ್ಕೆ ಮನಸ್ಸಿನಲ್ಲೇ ಅಂದುಕೊಂಡನೇ ಹೊರತು ಹೆಂಡತಿಯನ್ನು ಏನೂ ಕೇಳಲಿಲ್ಲ.
“ಎಷ್ಟು ದಿನದಿಂದ ನಿಮಗೆ ಹುಷಾರಿಲ್ಲ?” ಡಾಕ್ಟರ್ ಪ್ರಶ್ನೆ.
“ಒಂದೂವರೆ ತಿಂಗಳಿನಿಂದ. ಆಗಾಗ ನೋವು ಬರುತ್ತಿದೆ. ಜ್ವರ ಬರುತ್ತಿದೆ.”
“ಕೆಲಸ ಹೆಚ್ಚಾಗಿ ಮಾಡುತ್ತಿದ್ದೀರ?”
“ಇಲ್ಲ, ಕೆಲಸ ಅಂತಹ ಹೆಚ್ಚಾಗೇನೂ ಇಲ್ಲ. ಮಾಮೂಲೇ”
“ಏನಾದರೂ ಟೆನ್ಶನ್ ಇದೆಯೇ?”
“ಇಷ್ಟು ದಿನ ಇತ್ತು, ಈಗ ಇಲ್ಲ” ಅತ್ತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಿದಳು.
“ಹತ್ತುದಿನ ಈ ಔ?ಧಿ ಬಳಸಿ ನೋಡಿ, ಕಡಮೆಯಾಗದಿದ್ದರೆ ಬ್ಲಡ್ ಟೆಸ್ಟ್ ಎ ಮಾಡ್ಸೋಣ”
ಹತ್ತು ದಿನಗಳಲ್ಲಿ ಏನೂ ಕಡಮೆಯಾಗದಿರಲು ಟೆಸ್ಟುಗಳು, ರಿಪೋರ್ಟುಗಳು ಎಲ್ಲ ಆದವು.
“ಮಲಗಿಕೊಳ್ಳಿ, ಟೆಸ್ಟ್ ಮಾಡ್ತೀನಿ” ಎಂದರು ಡಾಕ್ಟರು.
ಸ್ಟೆತಾಸ್ಕೋಪಿನಿಂದ ಎಲ್ಲಾ ನೋಡಿದ ನಂತರ ಎಲ್ಲಿ ಒಂದು ಸಲ ಕೈ ಮೇಲಕ್ಕೆತ್ತಿ, ನಿಮಗೆ ಇಲ್ಲಿ ನೋವಾಗುತ್ತಿದೆಯೇ?” ಎಂದರು ಬ್ರೆಸ್ಟ್ ಅಮುಕುತ್ತಾ.
“ನೋವೇನೂ ಇಲ್ಲ. ಆದರೆ ಗಡ್ಡೆಯಂತೆ ಏನೋ ತಾಕುತ್ತಿದೆ. ಒಂದು ತಿಂಗಳಿನಿಂದಲೂ ಹಾಗೆಯೇ ಇದೆ. ನೋವೇನೂ ಇಲ್ಲವಲ್ಲಾ ಎಂದು ನಾನೂ ಗಮನ ಕೊಡಲಿಲ್ಲ.”
“ನೀವು ಹೊರಗೆ ಕುಳಿತಿರಿ. ಒಂದೆರಡು ಟೆಸ್ಟ್ಗೆ ಬರೆದುಕೊಡ್ತೀನಿ” ಎಂದು ಹೇಳಿ ಡಾಕ್ಟರು ಗಂಡನನ್ನು ಅಲ್ಲೇ ಇರುವಂತೆ ಸಂಜ್ಞೆ ಮಾಡಿದರು.
ಗಂಡ ಹೊರಗೆ ಬಂದ ನಂತರ “ಏನು ಮತ್ತೆ ಟೆಸ್ಟ್ಗಳು ಎನ್ನುತ್ತಿದ್ದಾರೆ?” ಎಂದು ಕೇಳಿದಳು.
“ಬಯಾಪ್ಸಿ ಮಾಡಿಸಿಕೊಳ್ಳಬೇಕಂತೆ.”
“ಏಕೆ?”
“ಕ್ಯಾನ್ಸರ್ ಎಂದು ಅನುಮಾನವಂತೆ.”
“ನನಗೇಕೆ ಕ್ಯಾನ್ಸರ್ ಬರುತ್ತೆ?”
“ಯಾರಿಗಾದರೂ ಬರಬಹುದು. ನಿಜಕ್ಕೂ ಅದು ಕ್ಯಾನ್ಸರ್ ಆಗಿರಬೇಕೆಂದೇನಿಲ್ಲ. ಒಂದು ವೇಳೆ ಕ್ಯಾನ್ಸರ್ ಆಗಿದ್ದರೆ ಗಡ್ಡೆ ತೆಗೆದುಹಾಕುತ್ತಾರೆ.”
“ಕ್ಯಾನ್ಸರ್ ಅ?ಕ್ಕೇ ನಿಲ್ಲುವುದಿಲ್ಲವೇನೋ?”
“ನೋಡೋಣ. ಮೊದಲು ಬಯಾಪ್ಸಿ ಆಗಲಿ.”
’ಇದೇ ಖಾಯಿಲೆ ನಮ್ಮಮ್ಮನಿಗೆ ಬಂದಿದ್ದರೆ?’ ಅಂತಹ ಯೋಚನೆ ಮಾಡಲೂ ಆತನಿಗೆ ಭಯವಾಯಿತು.
*****
“ಆಪರೇಷನ್ ಆಗಲೇಬೇಕು ಎಂದು ಡಾಕ್ಟರ್ ಹೇಳಿದರಲ್ಲ…! ನಮ್ಮಮ್ಮನನ್ನು ಕರೆಸಿಕೊಳ್ಳುತ್ತೇನೆ” ಎಂದಳು ಆಕೆ.
ಜೊತೆಗೊಬ್ಬರು ಬೇಕೆಬೇಕಲ್ಲ….! ಅವರಮ್ಮ ಬಂದರೇನೇ ಒಳ್ಳೆಯದಲ್ಲವೇ? ಅಡ್ಜಸ್ ಆಗಲು ಪ್ರಾಬ್ಲಂ ಆಗುವುದಿಲ್ಲ.” ಎಂದುಕೊಂಡ ಮನಸ್ಸಿನಲ್ಲೆ.
ಆಕೆ ಅವರಮ್ಮನಿಗೆ ಫೋನ್ ಮಾಡಿದಳು. ವಿ?ಯವನ್ನು ಹೇಳಿ ನಂತರ “ಅಮ್ಮ ನನಗೆ ನಿನ್ನ ಅಗತ್ಯವಿದೆ. ಒಂದು ತಿಂಗಳು ಇಲ್ಲೇ ಇರುವಂತೆ ಬರಬಲ್ಲೆಯಾ?” ಕೇಳಿದಳು.
“ಒಂದು ತಿಂಗಳು ಕ? ಕಣಮ್ಮಾ. ನಂಗೂ ಮೈಯಲ್ಲಿ ಹು?ರಿರುವುದಿಲ್ಲ.”
“ಮೊದಲು ಬಾಮ್ಮಾ. ಆಮೇಲೆ ನೋಡೋಣ.”
ಒಂದು ವಾರದಲ್ಲಿಯೇ ಆಪರೇಷನ್ ಫಿಕ್ಸ್ ಆಯಿತು. ಆಕೆಗೆ ಅವರಮ್ಮ ಬಂದಿದ್ದು ತುಂಬಾ ರಿಲೀಫ್ ಎನ್ನಿಸಿತು. ಮಗಳಿಗೆ ಬಂದ ಕ? ಕೇಳಿ ’ಏನೂ ಆಗುವುದಿಲ್ಲ ಸುಮ್ಮನಿರು ಮಗಳೇ’ ಎಂದು ಮಗಳನ್ನು ಸಮಾಧಾನಪಡಿಸುತ್ತಾ ತಾನೂ ಅತ್ತಳು.
“ಈವತ್ತು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗ್ತೀನಿ. ನಿಮ್ಮ ಅಳಿಯ ಅಲ್ಲೇ ಇರ್ತಾರೆ. ನೀನು ಮನೆಯಲ್ಲಿ ನೋಡಿಕೊಳ್ಳಬೇಕಮ್ಮ” ಎಂದು ಹೇಳಿ ಹೊರಟಳು.
*****
ಮನೆಗೆ ಬಂದ ನಂತರ ನೋಡಿದರೆ ಮನೆಯೆಲ್ಲಾ ಸಿಕ್ಕಾಪಟ್ಟೆ ಗಲೀಜಾಗಿದೆ.
“ಮನೆಯೆಲ್ಲಾ ಏನಮ್ಮ ಹೀಗಿದೆ?”
“ಆಸ್ಪತ್ರೆಯಿಂದ ಈಗ ತಾನೆ ಮನೆಗೆ ಬಂದಿದ್ದೀಯ. ರೂಮಿಗೆ ಹೋಗಿ ರೆಸ್ಟ್ ತೆಗದುಕೊಳ್ಳಮ್ಮ” ತಾಯಿ ಮಗಳಿಗೆ ಹೇಳಿದಳು.
“ಅದಲ್ಲಮ್ಮಾ! ಕೆಲಸದವಳು ಬಂದಿಲ್ಲವೇ?”
“ಕೆಲಸದವಳು ಎ? ಹೊತ್ತು ಇರುತ್ತಾಳೆ? ಅರ್ಧಗಂಟೆಯಲ್ಲಿ ಕೆಲಸ ಮುಗಿಸಿ ಓಡಿಹೋಗುತ್ತಾಳೆ. ಸಣ್ಣಪುಟ್ಟ ಕೆಲಸಗಳು ಮಾಡಿಕೊಳ್ಳಲಿಕ್ಕೂ ನನ್ನ ಕೈಯಲ್ಲಿ ಆಗುವುದಿಲ್ಲ, ಏನು ಮಾಡಲಿ?”
“ನಮ್ಮ ಅತ್ತೆ ಇದ್ದಾಗಲೂ ಇದೇ ಕೆಲಸದವಳೇ. ಆದರೆ ಮನೆ ನೀಟಾಗಿ ಇರುತ್ತಿತ್ತು.” (ಮೆಲ್ಲಗೆ ಗೊಣಗಿಕೊಂಡಳು.)
“ಏನೋ, ಆಕೆನೂ ಮಾಡುತ್ತಿದ್ದರೇನೋ.”
“ನಿಜವೇ. ಆಕೆಯೇ ಮಾಡುತ್ತಿದ್ದರೇನೋ?” (’ನನಗೆ ಆಗ ಗೊತ್ತಾಗಲೇ ಇಲ್ಲ’ ಎಂದುಕೊಂಡಳು ಮನಸ್ಸಿನಲ್ಲಿ.)
“ಎರಡು ದಿನಕ್ಕೆ ನೀನು ಮನೆಗೆ ಬಂದು ಬಿಟ್ಟೆಯಲ್ಲಾ. ಇನ್ನು ನಾನು ಹೋಗುತ್ತೇನೆ ಕಣೇ. ಮೊಣಕಾಲು ನೋವು, ಎಲ್ಲಾ ಕೆಲಸ ಮಾಡಲಾಗುವುದಿಲ್ಲ. ಸದ್ಯಃ ದೇವರ ದಯೆಯಿಂದ ನಿನ್ನ ಆಪರೇ?ನ್ ಸಕ್ಸಸ್ ಆಯ್ತು. ಆರಾಮಾಗಿ ಮನೆಗೆ ಬಂದೆ.”
“ಇನ್ನೂ ಕೆಲವು ದಿವಸ ರೆಸ್ಟ್ ತೆಗೆದುಕೊಳ್ಳಬೇಕಮ್ಮ.”
“ಹಾಗಾದರೆ ಒಂದು ಕೆಲಸ ಮಾಡು. ನಿಮ್ಮ ಅತ್ತೆಯನ್ನು ಕರೆಸಿಕೊ.”
ಆ ಮಾತು ಕೇಳಿ ಅಸಹಾಯಳಾಗಿ ನೋಡಿದಳು.
“ಏನ್ರೀ, ಅಮ್ಮ ಊರಿಗೆ ಹೋಗುತ್ತೇನೆ ಅನ್ನುತ್ತಿದಾಳೆ. ಅತ್ತೆಯನ್ನು ಕರೆಸಿದರೆ ಒಳ್ಳೆಯದೇನೋ.”
“ಅಗತ್ಯವಿದ್ದಾಗ ಮಾತ್ರ ಅಮ್ಮ ಬೇಕೆ?” ಆತನಿಗೂ ಮಾತನಾಡಲು ಒಂದು ಅವಕಾಶ.
“ಹಾಗೇನೂ ಹಂಗಿಸಬೇಕಾಗಿಲ್ಲ” ಅಸಹಾಯತೆ ಮಿಳಿತಗೊಂಡ ಕೋಪ.
“ಸರಿ, ಕರೆದುಕೊಂಡು ಬರುತ್ತೇನೆ.”
*****
“ಸ್ವಲ್ಪ ಹಾರ್ಲಿಕ್ಸ್ ಕುಡಿ ಮಗೂ, ತಿಂಡಿ ತಿಂದ ನಂತರ ಮೂಸಂಬಿ ರಸ ತೆಗೆದುಕೊಡುತ್ತೇನೆ” ಎಂದು ಹೇಳುತ್ತಿರುವ ಅತ್ತೆಯವರ ಕಡೆಗೆ ಅಕ್ಕರೆಯಿಂದ ನೋಡಿದಳು.
’ಮನೆಯಲ್ಲಿ ಎಲ್ಲಾ ಕೆಲಸಗಳೂ ಕ್ರಮಬದ್ಧವಾಗಿ ನಡೆದುಕೊಂಡು ಹೋಗುತ್ತಿವೆ. ಮಾವನವರ ಶಿಸ್ತಿನ ಟ್ರೈನಿಂಗ್ ಇರಬಹುದು’ ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳದೆ ಇರಲಾಗಲಿಲ್ಲ.
“ಏಳಬೇಡಮ್ಮಾ, ಊಟ ಇಲ್ಲಿಗೇ ತರುತ್ತೇನೆ’ ಆಶ್ಚರ್ಯ, ಅತ್ತೆಯವರು ಒಬ್ಬ ತಾಯಿಯಂತೆ ಆದರಿಸುತ್ತಿದ್ದಾರೆ.
ಕ್ಯಾನ್ಸರ್ನಿಂದ ತಾನು ಎಷ್ಟು ದಿನ ಬದುಕಿರುತ್ತೇನೆ? ಕೆಮ್ಮುತ್ತಾಳೆಂದು ತಾನು ಅತ್ತೆಯ ಬಗೆಗೆ ಅಸಹ್ಯಪಟ್ಟುಕೊಂಡೆನಲ್ಲಾ? ಎಪ್ಪತ್ತರ ಆಕೆ ತನ್ನ ಆರೈಕೆಗೆ ಹೇಗೆ ಸೊಂಟಕಟ್ಟಿ ನಿಂತಿದ್ದಾರೆ. ಮನಸ್ಸಿನಲ್ಲಿಯೇ ವಂದನೆ ಸಲ್ಲಿಸಿದಳು. ಇ? ದಿನದ ತನ್ನ ವರ್ತನೆಯ ಬಗ್ಗೆ ಜುಗುಪ್ಸೆ ಉಂಟಾಯಿತು. ಸಾವಿಗೆ ಹತ್ತಿರವಾಗುತ್ತಿರುವೆನೆಂದೇ ತನ್ನಲ್ಲಿ ಈ ಬದಲಾವಣೆಯೇ?
ವೃದ್ಧಾಪ್ಯದಲ್ಲಿರುವವರಿಗೆ ಸರಿಸಾಟಿ ನಾವಾಗುವುದು ಸಾಧ್ಯವೇ? ಅಥವಾ ಖಾಯಿಲೆಯಿಂದಿರುವ ನಮಗೆ ವೃದ್ಧರ ಆರೈಕೆಯೇ? – ಏನೂ ತೀರ್ಮಾನಿಸಲಾಗದೆ ಅತ್ತೆಯವರ ಕೈಗಳನ್ನು ಹಿಡಿದುಕೊಂಡು ಕಣ್ಣೀರಿನ ಅಭಿ?ಕ ಮಾಡಿದಳು.
ಕೂಡಲೇ ಆಕೆ ಅಕ್ಕರೆಯಿಂದ ತಮ್ಮ ಅಪ್ಪುಗೆಯಲ್ಲಿ ಸಾಂತ್ವನ ನೀಡಿದರು.
ಮನುಷ್ಯನಲ್ಲಿರುವ ಒಳ್ಳೆಯತನಕ್ಕೆ… ಮಾನವತೆಗೆ….
– ತೆಲುಗು ಮೂಲ: ಲಕ್ಷ್ಮೀ ರಾಘವ