ನಾನು ಒಳಹೊಕ್ಕಾಗ ಗೋಡೆಯ ಮೇಲಿದ್ದ ಗಡಿಯಾರ ಏಳು ಗಂಟೆ ತೋರಿಸುತ್ತಿತ್ತು. ನನಗೆ ಅಪಾಯಿಂಟ್ಮೆಂಟ್ ಇದ್ದದ್ದೂ ಏಳುಗಂಟೆಗೇ. ನಾನೇ ಅಂದಿನ ಕೊನೆಯ ಪೇಷೆಂಟ್. ಸಾಲಾಗಿ ಜೋಡಿಸಿದ್ದ ಆಸನಗಳಲ್ಲೊಂದರಲ್ಲಿ ಕುಳಿತೆ. ಎದುರಿಗಿದ್ದ ಚಿಕಿತ್ಸಾ ಕೋಣೆಯಿಂದ ಅಸ್ಪ?ವಾದ ಮಾತುಗಳು ಕೇಳಿಸುತ್ತಿತ್ತು. ಮುಂದಿದ್ದ ಟೇಬಲ್ ಮೇಲೆ ಚಲ್ಲಾಪಿಲ್ಲಿಯಾಗಿ ಹರಡಿದ್ದ ಹಳೆಯ ಫಿಲ್ಮೀ ನಿಯತಕಾಲಿಕೆಯಲ್ಲೊಂದು ಎತ್ತಿಕೊಂಡು ಪುಟ ತಿರುಗಿಸತೊಡಗಿದೆ.
ಯಾವ ನಟ ಯಾರ್ಯಾರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾನೆ, ಯಾರ್ಯಾರ ಮದುವೆಯ ನಿಶ್ಚಿತಾರ್ಥ ನಡೆಯಲಿದೆ, ಯಾರ್ಯಾರಿಗೆ ರಹಸ್ಯವಾಗಿ ಮದುವೆಯಾಗಿದೆ, ಯಾರ್ಯಾರ ನಡುವೆ ಅನೈತಿಕ ಸಂಬಂಧವಿದೆ, ಯಾರ್ಯಾರ ಮದುವೆ ಮುರಿಯಲಿದೆ, ಯಾರ್ಯಾರಿಗೆ ಮಗುವಾಗಲಿದೆ ಇಂತಹ ತಲೆಹೋಗುವಂತಹ ವಿಷಯಗಳ ಬಗ್ಗೆ ಚರ್ಚೆ, ಚಿತ್ರಗಳಿಂದ ಪತ್ರಿಕೆ ತುಂಬಿತ್ತು! ಇವೆಲ್ಲದರ ಬಗ್ಗೆ ಜ್ಞಾನ ಅ?ಂದು ಮುಖ್ಯವೇ? ಈ ಜ್ಞಾನ ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಹೆಡೆ ಎತ್ತಿದರೂ ಇಂತಹ ಪತ್ರಿಕೆಗಳ ಜನಪ್ರಿಯತೆ ಅರ್ಥವಾಗದ ಒಗಟಾಗಿ ಕಾಡಿತು. ಬಹುಶಃ ಹಲ್ಲುನೋವಿನಿಂದ ಬರುವ ರೋಗಿಗಳು ಇಂತಹ ಮಸಾಲಾಲೇಪಿತ ವರದಿಗಳ ಮೇಲೆ ಕಣ್ಣು ಹಾಯಿಸಿದಾಗ, ಅವು ಅಫೀಮಿನಂತೆ ಕೆಲಸಮಾಡಿ ನೋವು ತಾತ್ಕಾಲಿಕವಾಗಿ ಶಮನವಾಗಲಿ ಎಂದು ವೈದ್ಯರೇ ಅವುಗಳನ್ನಿಲ್ಲಿ ಇಟ್ಟಿರಬಹುದಾದ ಸಾಧ್ಯತೆ ಕಂಡಿತು!
ಎದುರಿನ ಕೋಣೆ ಇನ್ನೂ ಮುಚ್ಚೇ ಇತ್ತು. ಒಳಗಿನಿಂದ ಮಾತುಗಳೂ ಕೇಳಿಸುತ್ತಲೇ ಇತ್ತು. ಇನ್ನೂ ಎ? ಹೊತ್ತೋ ಎಂದುಕೊಳ್ಳುತ್ತಾ ಗಡಿಯಾರ ನೋಡಿದೆ. ಏಳೂಕಾಲಾಗಿತ್ತು. ನನ್ನಮಟ್ಟಿಗೆ ಹದಿನೈದು ನಿಮಿ? ಒಂದು ಗಂಟೆಯಿಂದ ಕಾಯುತ್ತಿರುವಂತೆ ಅನಿಸಿತು. ಸಾಪೇಕ್ಷವಾದ ಮಂಡಿಸಿದ ಐನ್ಸ್ಟೀನನಿಗೆ ನಮೋ ಹೇಳಿಕೊಳ್ಳುತ್ತಿದ್ದಾಗಲೇ ಆಕೆ ಕಣ್ಣಿಗೆ ಬಿದ್ದಿದ್ದು.
ಅರೆ! ಈಕೆ ಎಲ್ಲಿಂದ ಇಳಿದು ಬಂದ್ಲು? ಈವರೆಗೆ ಕಣ್ಣಿಗೇ ಬಿದ್ದಿರಲಿಲ್ಲವೇ ಎಂಬ ಆಶ್ಚರ್ಯ ನನಗೆ. ನನ್ನ ಮಕ್ಕಳ ಪ್ರಕಾರ ನನಗೆ ಅನ್ಯಮನಸ್ಕತೆ ಹೆಚ್ಚಂತೆ, ಮುಂದೆ ಒಂದಾನೆ ಮಲಗಿದ್ದರೂ ನಾನು ಗಮನಿಸದೆ ದಾಟಿಹೋಗುತ್ತೇನಂತೆ! ಇದ್ದರೂ ಇರಬಹುದು ಎಂದೆನಿಸಿ ನನ್ನ ಗಮನ ಅವಳತ್ತ ಹರಿಸಿದೆ. ಅದ್ಯಾಕೋ ಅವಳೂ ನನ್ನತ್ತಲೇ ನೋಡುತ್ತಿದ್ದಾಳೆ ಎಂದೆನಿಸಿ ಬೇರೆಡೆ ಗಮನ ಹರಿಸಿದೆ. ಕುತೂಹಲವಿದ್ದರೂ ದೃಷ್ಟಿಸಿ ನೋಡುವುದು ನಾಗರಿಕ ವರ್ತನೆ ಅಲ್ಲವಲ್ಲಾ. ನಾನಲ್ಲದೆ ನನ್ನ ಸ್ಥಾನದಲ್ಲಿ ಗ್ರಾಜ್ಯುಯೇಟ್ ಅಲ್ಲದ ನನ್ನ ಅಮ್ಮನೋ ಅಜ್ಜಿಯೋ ಇದ್ದಿದ್ದರೆ ಸ್ವಲ್ಪವೂ ಸಂಕೋಚಪಡದೆ ಪಕ್ಕಸರಿದು ಏನು ತೊಂದರೆ, ಯಾವ ಹಲ್ಲುನೋವು. ಯಾವೂರು, ಯಾರ ಪೈಕಿ ಇತ್ಯಾದಿ ವಿವರಗಳನ್ನೆಲ್ಲಾ ತಮ್ಮದಾಗಿಸಿಕೊಂಡು ಬಿಡುತ್ತಿದ್ದರು! ನನ್ನ ಮೊದಲ ಹೆರಿಗೆಯಾದಾಗ ನನ್ನ ಪಕ್ಕದ ಪೇ?ಂಟಿನ ತಾಯಿಯೊಡನೆ ನನ್ನಮ್ಮ ಎಂತಹ ಗಾಢ ಸ್ನೇಹ ಬೆಳೆಸಿಕೊಂಡರೆಂದರೆ, ಮುಂದೆ ಎ? ವ?ಗಳವರೆಗೆ ಅವರಲ್ಲಿ ಪತ್ರ ವ್ಯವಹಾರವಿತ್ತು!
ವಿದ್ಯಾವಂತರೆನಿಸಿದ ಇಂದಿನ ಸಿಟಿ ಮಂದಿ ಮನು? ಮನು?ರೊಳಗಿನ ಸಂಬಂಧಗಳು ಸೇರಿ ಒಂದಾಗಿ ಹೋಗದಂತೆ ಸಿಮೆಂಟಿನ ಕವಚದೊಳಗೆ ಅಡಗಿಕೊಂಡುಬಿಟ್ಟು, ಅಪರಿಚಿತರನ್ನು ಕಂಡರೆ ಒಂದು ನಗೆಬೀರಲೂ ಆಗದ? ಬಿಗುಮಾನ ತೋರುತ್ತಾರೆ. ಆದರೆ ಇದೆಲ್ಲಾ ಆಧುನಿಕ ನಾಗರಿಕತೆ ತೊಡಿಸಿದ ಮುಖವಾಡಗಳ?. ಅದರ ಹಿಂದೆ ಇದ್ದೇಇರುತ್ತಲ್ಲಾ ಕೆಟ್ಟ ಆಸಕ್ತಿ ಹಾಗೂ ಕುತೂಹಲ! ಬೇರೆಲ್ಲೋ ನೋಡುವಂತೆ ನಟಿಸಿ ಕಳ್ಳನೋಟ ಹರಿಸಿದೆ. ಅವಳ ಎಡಗೆನ್ನೆ ಬಾತುಕೊಂಡಿದ್ದು ಸ್ಪ?ವಾಗಿತ್ತು. ಪಾಪ. ಎಲ್ಲೋ ಹಲ್ಲು ಹುಳಿತಿರಬೇಕು. ಅದೆ? ದಿನಗಳಿಂದ ಹೀಗೆ ನರಳುತ್ತಿದ್ದಾಳೋ? ಕಂಡಕಂಡಲ್ಲಿ ಸಿಕ್ಕಸಿಕ್ಕಿದ್ದು ತಿಂದು ಸೋಮಾರಿತನದಿಂದ ಕೂಡಲೇ ಹಲ್ಲು ಶುದ್ಧ ಮಾಡದಿದ್ದಲ್ಲಿ ಇನ್ನೇನಾಗಲು ಸಾಧ್ಯ? ಎಲ್ಲಾ ಪತ್ರಿಕೆಗಳಲ್ಲಿ, ಟಿ.ವಿ. ವಾಹಿನಿಗಳಲ್ಲಿ ಟೂತ್ಪೇಸ್ಟಿನ, ಮೌತ್ ವಾಷಿನ ಪ್ರಾಯೋಜಕರು ಹಲ್ಲಿನ ಸಂರಕ್ಷಣೆಯ ಬಗ್ಗೆ, ಜೊತೆಗೆ ಅವರ ಅದ್ಭುತ ವಿನ್ಯಾಸದ ಟೂತ್ಬ್ರಷ್ಷಿನ ಬಗ್ಗೆ ನಗಾರಿ ಹೊಡೆಯುತ್ತಿದ್ದರೂ ಕಿವುಡಳಂತೆ ಹಲ್ಲುನೋವಿನಿಂದ ಕಪಾಳ ಊದಿಸಿಕೊಂಡು ಬಂದು ಕುಳಿತಿದ್ದಾಳಲ್ಲಾ ಪುಣ್ಯಾತ್ಗಿತ್ತಿ! ಅದ್ಯಾಕೋ ಅವಳ ಕೆನ್ನೆಯ ಬಾವು ಕಂಡು ನನ್ನ ದವಡೆಯಲ್ಲೂ ಶೂಲದಿಂದ ಚುಚ್ಚಿದಂತಾಗಿ ನವಿರಾಗಿ ಆ ಭಾಗ ಉಜ್ಜಿಕೊಂಡೆ.
ಈಕೆಗೆ ಎಷ್ಟು ವಯಸ್ಸಾಗಿದ್ದೀತು? ಮದುವೆಯಾಗಿರಬಹುದೇ? ಮನಸ್ಸು ಕಡಿವಾಣ ಬಿಚ್ಚಿದ ಕುದುರೆಯಂತೆ ನಾನಾ ದಿಕ್ಕುಗಳಲ್ಲಿ ಓಡತೊಡಗಿತು. ನೋಡಿದರೆ ನಡುವಯಸ್ಸು ದಾಟಿದಂತಿದ್ದಾಳೆ. ಮದುವೆಯಾಗದೇನು ಧಾಡಿ? ವಯಸ್ಸಿಗೆ ಬಂದ ಮಕ್ಕಳೂ ಇದ್ದಿರಬೇಕು. ಅಥವಾ ಆಗುವ ವಯಸ್ಸಿನಲ್ಲಿ ಸೂಕ್ತ ವರ ಸಿಗದೆ ಅವಿವಾಹಿತಳಾಗಿಯೇ ಉಳಿದಿದ್ದಾಳೋ? ಹೇಗಾದರಾಗಲಿ ನೋಡಿಯೇ ಬಿಡೋಣವೆಂದು ಎಲ್ಲಿಯೋ ನೋಡುವಂತೆ ಮತ್ತೊಮ್ಮೆ ನಟಿಸಿ ಅವಳ ಕುತ್ತಿಗೆ ಪಾದಗಳನ್ನು ಪರೀಕ್ಷಿಸಿದೆ. ಆಕೆ ಬಲು ಜಾಣೆ. ಕುತ್ತಿಗೆಯನ್ನು ಸೆರಗಿನಿಂದ ಮುಚ್ಚಿ ಪಾದ ಮುಚ್ಚುವಂತಹ ಪಾದರಕ್ಷೆ ಧರಿಸಿದ್ದಳು! ಹಿಂದೊಮ್ಮೆ ಸಹೋದ್ಯೋಗಿಯೊಬ್ಬಳು ಹೇಳಿದ್ದಿದು. ಆಕೆ ದಿನಾ ಮನೆ ಬಿಟ್ಟು ಬಸ್ಸ್ಟಾಪಿಗೆ ಬರುವ ವೇಳೆಗೆ ಸರಿಯಾಗಿ ಉಡಾಳರಿಬ್ಬರು ತಪ್ಪದೆ ಹಿಂಬಾಲಿಸಿ ಬಂದು ಬಸ್ ಬರುವವರೆಗೆ ಗೇಲಿಮಾಡುತ್ತಾ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರಂತೆ. ನೋಡುವ? ನೋಡಿ ಒಂದು ದಿನ ತಾಳಿಯನ್ನು ಕಾಣುವಂತೆ ಮೇಲೆಹಾಕಿ ಕಾಲುಂಗುರ ಕಾಣುವಂತೆ ಒಂದು ಕಾಲನ್ನು ತುಸು ಮುಂದೆ ಚಾಚಿ ನಿಂತಿದ್ದಳಂತೆ. ನೋಡುತ್ತಲೇ ಜಾಗ ಖಾಲಿಮಾಡಿದ ಅವರಿಂದ ಮುಂದೆಂದೂ ಕಿರುಕುಳವಾಗಲಿಲ್ಲವಂತೆ! ಮೂಲೆ ಸೇರಿರುವ ಇವೆರಡು ವಸ್ತುಗಳನ್ನು ಇಂದಿನ ಯುವತಿಯರು ಹೊರತೆಗೆದು ಉಪಯೋಗಿಸಿದರೆ ಬಹುಶಃ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯದಿಂದ ಪಾರಾಗಬಹುದೇನೋ.
ಆಕೆ ಕುಳಿತಿದ್ದ ಭಂಗಿಯಲ್ಲಿ ಬೊಜ್ಜು ಸ್ಪಷ್ಟವಾಗಿ ಕಾಣುತ್ತಿತ್ತು. ಆಲ್ಲಾ, ಈ ಪಾಟಿ ಬೊಜ್ಜು ಬೆಳೆಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಈ ಪೆದ್ದು ಹೆಂಗಸಿಗೆ ತಿಳಿಯದೇ? ಲತೆಯಂತೆ ಬಳುಕುವ ದೇಹ ಕಾಪಾಡಿಕೊಂಡು ಬರುವುದು ಸೌಂದರ್ಯಕ್ಕಷ್ಟೇ ಅಲ್ಲದೆ ಆರೋಗ್ಯಕ್ಕೂ ಒಳ್ಳೆಯದೆಂದು ತಜ್ಞವೈದ್ಯರು, ತಾವು ತಜ್ಞರೆಂಬ ಭ್ರಮೆಯಲ್ಲಿರುವವರು ಮೀಡಿಯಾದ ಮೂಲಕ ಸೂರು ತೂತಾಗುವಂತೆ ಕಹಳೆಯೂದುತ್ತಿದ್ದರೂ ಈಕೆ ಕಿವಿಗೆ ಹತ್ತಿ ತುರುಕಿ ಕುಳಿತಿದ್ದಾಳೋ? ಸಿಕ್ಕಾಪಟ್ಟೆ ಜಂಕ್ಫುಡ್ ಅರ್ಥಾತ್ ಕಚಡಾ ಆಹಾರ ತಿನ್ನುವ ಚಪಲ ಈಕೆಗಿರಬೇಕು. ಅದಕ್ಕೇ ಈ ಪಾಟಿ ಮೈ ಬೆಳೆದಿದೆ.
ಛೆ, ಪಾಪ. ನನಗೇಕೆ ಈಕೆಯ ಮೇಲೆ ಇ?ಂದು ಅಸಹನೆ? ಆಕೆ ತಿನ್ನುವುದನ್ನು ನಾನೇನು ಕಂಡಿರುವೆನೇ? ದಿನಕ್ಕೆ ಮೂರುಬಾರಿ ಕಂಠಪೂರ್ತಿ ಹಾಲು-ಮೊಸರು, ಎಣ್ಣೆ-ಬೆಣ್ಣೆಯುಕ್ತ ಆಹಾರ ತಿಂದು ಮಧ್ಯೆಮಧ್ಯೆ ಹಾಳೂ- ಮೂಳೂ ಬಾಯಾಡಿಸುತ್ತಾ ಲೀಟರ್ಗಟ್ಟಲೇ ಕಾಫಿ ಟೀ ಹೀರುತ್ತಿದ್ದರೂ, ಫ್ಯಾನ್ ವೇಗ ಸ್ವಲ್ಪ ಜೋರಾದರೆ ಹಾರಿಹೋಗುವ ಕಡ್ಡೀ ಖಂಡೇರಾಯರಿಲ್ಲವೇ? ಅಂತೆಯೇ ಊಟ ಮಾಡುವುದಿರಲಿ, ಸುಮ್ಮನೇ ಅದನ್ನು ಮೂಸಿದರೂ ತೂಕ ಹೆಚ್ಚುವ ಗುಂಡಮ್ಮಗಳಿಲ್ಲವೇ? ಆಯುರ್ವೇದ ಪಂಡಿತರು ಹೇಳುವಂತೆ ಅವರವರ ಪ್ರಕೃತಿಯ ದೋ?ಗಳೇ ಕಾರಣ ಎಂದು ಆಕೆಯ ಬಗ್ಗೆ ವಿಚಿತ್ರ ಸಹಾನುಭೂತಿಯುಂಟಾಯಿತು. ಇವೆಲ್ಲಾ ಒಂದೆರಡೇ ಕ್ಷಣ.
ಮತ್ತೊಮ್ಮೆ ಅವಳತ್ತ ನೋಟ ಹರಿಸಿದೆ. ಆಯಮ್ಮನ ಕಪ್ಪುಕೂದಲು ಕಣ್ಣಿಗೆ ರಾಚಿತು. ಸ್ವಾಭಾವಿಕವಾದ ಕೂದಲ ಕಪ್ಪಿಗಿಂತಲೂ ಕಪ್ಪಂಕಪ್ಪು. ಬಣ್ಣ ಜಡಿದದ್ದು ಸ್ಪ?ವಾಗಿತ್ತು. ಅಲ್ಲಾ, ನೋಡಿದ ಕೂಡಲೇ ಬಣ್ಣಬಳಿದದ್ದು ಎಂದು ತಿಳಿಯುವಂತಿದ್ದರೆ ಬಳಿದೇನು ಪ್ರಯೋಜನ? ಯಾರನ್ನು ಯಾಮಾರಿಸಲು ಈ ಸಂಚು? ನಮ್ಮಜ್ಜಿ ತಾತನ ಪೀಳಿಗೆಯವರು ಬಳಿಯುತ್ತಿದ್ದರೆ? ಅವರು ತಮ್ಮಲ್ಲಿ ಒಂದು ಗುಲಗಂಜಿ ತೂಕದ ಬೆಳ್ಳಿ ಇಲ್ಲದಿದ್ದರೂ ತಮ್ಮಲ್ಲಿದ್ದ ಬೆಳ್ಳಿ ಕೂದಲನ್ನು ಹೆಮ್ಮೆಯಿಂದ ಮೆರೆಸುತ್ತಾ ತಮ್ಮ ಹಿರಿತನವನ್ನು ಸಂಭ್ರಮಿಸುತ್ತಿರಲಿಲ್ಲವೇ? ಆಗೆಲ್ಲಾ ಅರವತ್ತಾದರೆ ತೀರಿತು. ಸಂಭ್ರಮದ ??ಬ್ದಿಯಲ್ಲಿ ಉಡುಗೊರೆಯಾಗಿ ಹೆಚ್ಚಿನವರು ಕೊಡುತ್ತಿದ್ದುದು ಊರುಗೋಲೇ. ಅವರೂ ಅದನ್ನು ಸ್ಟೈಲಾಗಿ ಹಿಡಿದು ಹಲ್ಲಿನ ಡಾಕ್ಟರರ ಬಳಿಗೆ ಹೋಗಿ ಎಲ್ಲಾ ಹಲ್ಲು ಕೀಳಿಸಿಕೊಂಡು ಅ? ಸ್ಟೈಲಾಗಿ ಹಲ್ಲಿನ ಸೆಟ್ ಹಾಕಿಸಿಕೊಂಡು ಬಂದುಬಿಡುತ್ತಿದ್ದರು. ಇತ್ತ ಅಜ್ಜಿಗೆ ಅರವತ್ತಾದರೆ ಮನೆಯ ವಹಿವಾಟೆಲ್ಲಾ ಸೊಸೆಯಂದಿರಿಗೆ ಒಪ್ಪಿಸಿ ತಾವು ಹಾಯಾಗಿ ಮೊಮ್ಮಕ್ಕಳ ಆರೈಕೆ, ಪೂಜೆ-ಪುನಸ್ಕಾರ, ಭಜನೆ, ಹೂಬತ್ತಿ ಹೊಸೆಯುತ್ತಾ ಕಥಾಕಾಲಕ್ಷೇಪ ಕೇಳುತ್ತಾ ಇದ್ದಲ್ಲಿಯೇ ವಾನಪ್ರಸ್ಥಾಶ್ರಮಕ್ಕೆ ಕಾಲಿಟ್ಟು ಬಿಡುತ್ತಿದ್ದರು.
ನಮ್ಮ ಪೀಳಿಗೆಯವರೆಲ್ಲಾ ಯಯಾತಿಯ ವಂಶಸ್ಥರೇ. ವಾರ್ಧಕ್ಯವನ್ನು ಆದ? ಮುಂದೂಡುವ ಪ್ರಯತ್ನ. ಕೂದಲಿಗೆ ಬಣ್ಣ. ಮುಖದ ಸುಕ್ಕಿಗೆ ಮೈಮಾಟಕ್ಕೆ ಶಸ್ತ್ರಚಿಕಿತ್ಸೆ, ಬಿದ್ದುಹೋಗುವ ಹಲ್ಲಿಗೆ ರೂಟ್ಕೆನಾಲ್. ಯೌವನದ ನಾನಾ ಮುಖವಾಡ ಹಾಕಲು ಒಂದು ಭಾರೀ ಉದ್ಯಮವೇ ಮೇಲೆದ್ದಿದೆ.
ನಮ್ಮ ಪಾತು ಕೂದಲು ನರೆಯುತ್ತಿದ್ದಂತೆ ಕೂದಲಿಗೆ ಕೃತ್ರಿಮ ರಂಗು ಬೇಡ, ಸ್ವಾಭಾವಿಕವಾಗಿಯೇ ಇರಲಿ ಎಂದು ಪ್ರತಿಜ್ಞೆಮಾಡಿದ್ದು ನಿಜ, ಆದರೆ ಆ ಪ್ರತಿಜ್ಞೆ ಹೆಚ್ಚುದಿನ ಉಳಿಯದಿದ್ದುದೂ ನಿಜ. ಒಮ್ಮೆ ಗಾಂಧಿಬಜಾರಿಗೆ ಹೋಗುವ ರಸ್ತೆಯಲ್ಲಿ ಪನ್ನೇರಳೆ ಹಣ್ಣು ಮಾರುವ ತಳ್ಳುಗಾಡಿಯಲ್ಲಿ ಹಣ್ಣು ಕೊಂಡು ಹಣಕೊಟ್ಟು ಚಿಲ್ಲರೆ ಪಡೆಯಲು ಮರೆತು ಮುಂದೆ ಒಂದೆರಡು ಹೆಜ್ಜೆ ಇಟ್ಟಿದ್ದಳ?. “ಅಜ್ಜಿ, ಬಾಕಿ ಚಿಲ್ರೆ ಬೇಡ್ವಾ?” ಅಂಗಡಿಯವ ಕೇಳಿದ. ಪಾಪ ಪಾತು. ಅವ ಇನ್ಯಾರನ್ನೋ ಕರೆಯುತ್ತಿದ್ದಾನೆಂದುಕೊಂಡು ಮುಂದೆ ಹೋಗುತ್ತಲೇ ಇದ್ದಳು. “ಅಜ್ಜೀ, ನಿಮ್ಮನ್ನೇ ಕರೀತಿರೋದು. ಇಕೋ ಚಿಲ್ರೆ ತೊಗೋಳ್ಳಿ” ಎಂದನಂತೆ. ತಿರುಗಿ ನೋಡಿದಾಗ ಹೆಚ್ಚುಕಮ್ಮಿ ಅವಳ? ವಯಸ್ಸಿನವ ಅಜ್ಜೀ ಎಂದು ಕರೆದದ್ದು ತನ್ನನ್ನೇ ಎಂದು ತಿಳಿದಾಗ ಹಿಡಿದು ಚಚ್ಚಿಬಿಡುವ? ಕೋಪ ಬಂತಂತೆ. ಕಿವಿಗೇ ಬೀಳದವಳಂತೆ ವೇಗವಾಗಿ ನಡೆದು ಬಸ್ ಏರಿದಳಂತೆ. ಪಾಪ ಪಾತು ಅಂದು ಎಡಮಗ್ಗುಲಿನಲ್ಲಿ ಎದ್ದಿರಬೇಕು. ಬಸ್ಸಿನಲ್ಲಿದ್ದ ಹುಡುಗಿಯೊಬ್ಬಳು ಬಾಯ್ಮುಚ್ಚಿಕೊಂಡು ತನ್ನಾಸನದಲ್ಲಿ ಕುಕ್ಕರ ಬಡಿದಿರಬೇಕೋ ಬೇಡವೋ? ಬಸ್ಸೇ ಪ್ರತಿಧ್ವನಿಸುವಂತೆ “ಅಜ್ಜಿ, ಇಲ್ಲಿ ಬಂದು ಕುಳಿತುಕೊಳ್ಳಿ” ಎನ್ನುತ್ತಾ ಆಸನ ಬಿಟ್ಟೆದ್ದಳಂತೆ. ಪಾತು ಎಲ್ಲೋ ನೋಡುತ್ತಾ ನಿಂತೇ ಇದ್ದಳಂತೆ. ಅ?ರಲ್ಲಿ ರಂಗ ಪ್ರವೇಶಮಾಡಿದ ಬಸ್ಸಿನ ಡ್ರೈವರ್ ಆ ಹುಡುಗಿಗೆ “ಮುದುಕಮ್ಮನಿಗೆ ಕಿವುಡು ಅಂತ್ಕಾಣುತ್ತೆ, ನಾ ಹೇಳ್ತೀನಿ” ಎಂದು ಪಾತುವಿನ ಕಿವಿಯಬಳಿ ಬಂದು ಕಿರುಚಿದನಂತೆ. “ಅಜ್ಜಮ್ಮಾ, ಆ ಹುಡ್ಗಿ ಜಾಗ ಬಿಟ್ಟವ್ಳೆ. ಹೋಗಿ ಕುಂತ್ಕಳಿ. ನೀವೆಲ್ಲಾದ್ರೂ ಬಿದ್ದು ಗಿದ್ದು ಗಾಯಮಾಡ್ಕೊಂಡ್ರೆ ನಮ್ಮ ಕುತ್ಗೇಗೆ ಬರುತ್ತೆ” ಎಂದನಂತೆ ಟಿಕೆಟ್ ಹರಿಯುತ್ತಾ. ಪಾರೂಗೆ ಅಳು ಬರುವುದೊಂದೇ ಬಾಕಿ.
ಒಮ್ಮೆ ಅವ್ಳು ಮದುವೇಗೆ ಹೋದ್ಲಂತೆ. ವಧುವರರೂ ಸೇರಿ ಅಲ್ಲಿದ್ದ ಅ? ದಂಪತಿಗಳೂ ಪಾತುವಿಗೆ ನಮಸ್ಕರಿಸಿದ್ದೂ ನಮಸ್ಕರಿಸಿದ್ದೇ. “ನೀವು ಹಿರೇರು. ನೀವು ಆಶೀರ್ವಾದ ಮಾಡಿ ಎಂದು ಸರದಿಪ್ರಕಾರ ನಿಂತು ಸಾ?ಂಗ ಹಾಕಿದಾಗ ಪಾತೂಗೆ ಹಣೆಹಣೆ ಚಚ್ಚಿಕೊಳ್ಳೋ ಹಾಗಾಯ್ತಂತೆ. ಅಂದಿನಿಂದ ಅವ್ಳಲ್ಲಿ ಶುರುವಾಯ್ತು ನೋಡಿ ಬದಲಾವಣೆ. ಕಾರಣವಿಲ್ದೆ ಸುಸ್ತು ಸಂಕಟ. ಎಲ್ಲದರಲ್ಲೂ ನಿರುತ್ಸಾಹ, ವೈರಾಗ್ಯ ಭಾವ. ಲವಲವಿಕೆಯಿಂದ ಓಡಾಡುತ್ತಿದ್ದವಳು ಮಾತೆತ್ತಿದರೆ ನನ್ ಕೈಲಿ ಆಗೋಲ್ಲ ಎಂದು ಕೈಯಾಡಿಸಿ ಕುಳಿತುಬಿಡೋಕ್ಕೆ ಶುರು ಮಾಡಿದ್ಲು. ಬಾಯ್ಬಿಟ್ಟರೆ “ಯಾರಿಗೆ ಯಾರುಂಟು ಎರವಿನ ಸಂಸಾರ ನೀರಮೇಲಣ ಗುಳ್ಳೆ ನಿಜವಲ್ಲ” ಎಂದು ತತ್ತ್ವಪದ ಸಾಗುತ್ತಿತ್ತು. ನೋಡುವ? ನೋಡಿದ ಅವಳ ಗಂಡ ಹೇರ್ಡೈ ಬಾಟ್ಲಿ ಅವಳ ಮುಂದೆ ಕುಕ್ಕಿ ಹಚ್ಚಿಕೊಳ್ಳುವಂತೆ ಫರ್ಮಾನು ಹೊರಡಿಸಿದರಂತೆ. ಅಂದಿನಿಂದಲೇ ಅಜ್ಜಿಯಾಗಿದ್ದೋಳು ಮತ್ತೆ ಆಂಟಿಯಾದಳು. ಮೊದಲಿನ ಉತ್ಸಾಹ ಲವಲವಿಕೆ ಇಮ್ಮಡಿಗೊಂಡು ಹಿಂದಿರುಗಿತು.
ಚಿಕಿತ್ಸಾ ಕೋಣೆಯ ಬಾಗಿಲು ತೆರೆದ ಸಹಾಯಕಿ ನನ್ನನ್ನು ಬರಲು ಸಂಜ್ಞೆ ಮಾಡಿದಳು. ನಾನು ಕೋಣೆ ಪ್ರವೇಶಿಸಿ ಬಾಗಿಲು ಹಾಕುತ್ತಾ ಆಕೆಯತ್ತ ಮತ್ತೊಮ್ಮೆ ನೋಡಿದೆ. ಆಕೆ ನಾಪತ್ತೆಯಾಗಿಬಿಟ್ಟಿದ್ದಳು! ಸುಳಿವು ಕೊಡದೆ ಬಂದವಳು ಹಾಗೆಯೇ ಅದೃಶ್ಯವಾಗಿಬಿಟ್ಟಿದ್ದಳು! ನಾ ಕುಳಿತಿದ್ದ ಆಸನ ನೋಡಿದೆ. ಪಕ್ಕದ ಗೋಡೆಗೆ ಒಂದು ದೊಡ್ಡ ನಿಲವುಗನ್ನಡಿ ಜೋಡಿಸಿದ್ದರು!