ಗಾಂಧಿಯವರು ತಮ್ಮ ಆರ್ಥಿಕಚಿಂತನೆಗಳಲ್ಲಿ ಶಾರೀರಿಕ ಶ್ರಮದ ಮಹತ್ತ್ವಕ್ಕೆ ವಿಶೇಷ ಗಮನವನ್ನು ಹರಿಸಿದ್ದಾರೆ. ಅವರಿಗೆ ದೈಹಿಕಶ್ರಮದ ಬಗ್ಗೆ ಅಪಾರ ಗೌರವವಿತ್ತು. ಆದ್ದರಿಂದ ಅವರು ವ್ಯಕ್ತಿಯು ಮಾಡುವ ಪ್ರತಿಯೊಂದು ಕೆಲಸಕ್ಕೂ ಗೌರವದ ಲೇಪ ತೊಡಿಸಿ ಅದಕ್ಕೆ ಮಹತ್ತ್ವದ ಸ್ಥಾನಮಾನವನ್ನು ಕೊಟ್ಟಿದ್ದಾರೆ. ಪ್ರತಿಯೊಬ್ಬ ಮನುಷ್ಯ ತನ್ನ ದೈನಂದಿನ ಆವಶ್ಯಕತೆಗಳನ್ನು ಪೂರೈಸಲು ಸಾಕ? ಶಾರೀರಿಕ ಪರಿಶ್ರಮ ಮಾಡಬೇಕೆಂದು ಅವರು ಆಗ್ರಹಿಸುತ್ತಿದ್ದರು. ದೈಹಿಕಶ್ರಮ ಎಂದರೆ ಕೈಕಾಲುಗಳಿಂದ ದುಡಿದು ಸಂಪಾದನೆ ಮಾಡುವುದು ಎಂದು ಅರ್ಥ.
“ಮನುಷ್ಯರು ತಮ್ಮ ಕೈಗಳ ಮೂಲಕ ಕೆಲಸ ಮಾಡಿ ಕಾಯಕದ ಗೌರವವನ್ನು ತಾನು ತಿಳಿದು, ಅರ್ಥಮಾಡಿಕೊಂಡು ಇತರರಿಗೆ ಅದರ ಮಹತ್ತ್ವವನ್ನು ತಿಳಿಸಿಕೊಡಬೇಕು (Mahatma, Vol. V. 1952); ಮನುಷ್ಯ ತನ್ನ ಸ್ವಂತ ಬೆವರಿನ ದುಡಿಮೆಯ ಮೂಲಕ ತನ್ನ ಅನ್ನವನ್ನು ತಾನು ಉಣ್ಣಬೇಕು ಎಂದು ಭಗವಂತ ಮಾನವನನ್ನು ಸೃಷ್ಟಿ ಮಾಡಿದ” – ಎಂದು ಗಾಂಧಿಯವರು ಯಾವಾಗಲೂ ಹೇಳುತ್ತಿದ್ದರು. ಬ್ರಹ್ಮನು ಮಾನವರನ್ನು ಸೃಷ್ಟಿಮಾಡಿರುವುದು ಅವರು ’ಅನ್ನಕಾಯಕ’ Bread Labour)ದ ಕರ್ತವ್ಯವನ್ನು ಪೂರ್ತಿ ಮಾಡಲಿ ಎಂದು. ದೈಹಿಕಶ್ರಮ ಪಡುವವನಿಗೆ ಮಾತ್ರ ಊಟ ಉಣ್ಣುವ ಹಕ್ಕು ಇದೆ ಎಂದು ಅವರು ನಿಷ್ಠುರವಾಗಿಯೆ ತಿಳಿಸಿದ್ದಾರೆ; ಸೇವೆಯ ಉದ್ದೇಶದಿಂದ ಪುರುಷ ಅಥವಾ ಸ್ತ್ರೀ ದೈಹಿಕಶ್ರಮವನ್ನು ಯಾವಾಗ ಮಾಡುತ್ತಾರೆಯೋ ಆಗ ಆತನಿಗೆ/ಆಕೆಗೆ ಜೀವಿಸುವ ಹಕ್ಕು ಲಭ್ಯವಾಗುತ್ತದೆ. ದೇವರು ಮಾನವನನ್ನು ಸೃಷ್ಟಿಮಾಡಿರುವುದು ಅವನು ತನ್ನ ಅನ್ನವನ್ನು ಸಂಪಾದಿಸುವ ಸಲುವಾಗಿ. ಯಾರು ಕ?ಪಟ್ಟು ದುಡಿಯದೆ ತನ್ನ ಅನ್ನವನ್ನು ತಿನ್ನುತ್ತಾನೋ ಅವನು ಕಳ್ಳನಂತೆ (Young India, 13.10.1921, p. 325).
ಮನುಷ್ಯ ತನ್ನ ಕೈಗಳ ದುಡಿಮೆಯಿಂದಲೇ ತನ್ನ ಅನ್ನವನ್ನು ಸಂಪಾದಿಸಬೇಕು ಎನ್ನುವ ದೈವೀ ನಿಯಮವನ್ನು ರಷ್ಯಾ ದೇಶದ ರೈತಬರಹಗಾರ ಟಿ.ಎಂ. ಬಾಂಡರಿಫ್ ಪ್ರತಿಪಾದಿಸಿದರು. ಅನಂತರ ಟಾಲ್ಸ್ಟಾಯ್ ಅವರು ಈ ನಿಯಮವನ್ನು ಹೆಚ್ಚು ಲೋಕಪ್ರಿಯಗೊಳಿಸಿ ಅದನ್ನು ’ಅನ್ನಕಾಯಕ’ ಎಂದು ಕರೆದರು. ಜಾನ್ ರಸ್ಕಿನ್ ತಮ್ಮ “ಅನ್ಟು ದಿಸ್ ಲಾಸ್ಟ್’ ಎನ್ನುವ ಕೃತಿಯಲ್ಲಿ ದೈಹಿಕಶ್ರಮದ ಮಹತ್ತ್ವವನ್ನು ಸಾರಿ ಹೇಳಿದರು. ಅವರೆಲ್ಲರ ಇಂಥ ಪರಿಕಲ್ಪನೆಯು ಗಾಂಧಿಯವರ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಅದು ಅವರ ಮನದಾಳದಲ್ಲಿದ್ದ ಯಂತ್ರ ತಂತ್ರಜ್ಞಾನದ ಬಳಕೆಯನ್ನು ಆದ? ಕಡಮೆ ಮಾಡಬೇಕೆಂಬ ಅವರ ನಂಬಿಕೆಯನ್ನು ಇನ್ನಷ್ಟು ಗಟ್ಟಿಮಾಡಿತು.
‘ಯಾರು ತ್ಯಾಗ ಮಾಡದೆ (ಶರೀರಶ್ರಮ ಹಾಕದೆ) ಊಟವನ್ನು ಮಾಡುತ್ತಾನೋ ಅವನು ಕಳ್ಳತನ ಮಾಡಿ ಊಟ ಮಾಡಿದ ಹಾಗೆ’ ಎಂಬ ಮಾತು ಭಗವದ್ಗೀತೆಯ ೩ನೇ ಅಧ್ಯಾಯದಲ್ಲೂ ಬರುತ್ತದೆ (M.K. Gandhi, 1933, p.35) ಇದೇ ತರಹದ ಮಾತು ಬೈಬಲ್ಲಿನಲ್ಲಿ ಕೂಡ ಉಲ್ಲೇಖವಾಗಿದೆ: “ನೀನು ನಿನ್ನ ಬೆವರು ಹರಿಸಿ ನಿನ್ನ ಅನ್ನವನ್ನು ಸಂಪಾದಿಸು.” ಕನ್ನಡನಾಡಿನ ಬಸವೇಶ್ವರರ ’ಕಾಯಕವೇ ಕೈಲಾಸ’ ಮತ್ತು ರವೀಂದ್ರನಾಥರ ’ಕೆಲಸವೇ ಪೂಜೆ’ (Work is Worship) ಎನ್ನುವ ಮಾತುಗಳು ಗಾಂಧಿಯವರನ್ನು ಬಹಳವಾಗಿ ಪ್ರಭಾವಿಸಿವೆ.
ಈ ದೈವೀ ನಿಯಮದ ಪ್ರಕಾರ ಪ್ರತಿಯೊಬ್ಬ ಮನುಷ್ಯ ತನ್ನ ಅನ್ನವನ್ನು ಸ್ವಂತ ಕೈಗಳ ದುಡಿಮೆಯಿಂದಲೇ ಗಳಿಸಬೇಕು. ಪ್ರತಿಯೊಬ್ಬ ಸಾಮಾನ್ಯ ಹಾಗೂ ಆರೋಗ್ಯಕರವಾದ ಮನುಷ್ಯ ಬದುಕಲು ಒಂದಲ್ಲ ಒಂದು ರೀತಿಯ ದೈಹಿಕಶ್ರಮವನ್ನು ಹಾಕಬೇಕಾದ ಅಗತ್ಯವನ್ನು ಗಾಂಧಿಯವರು ಆಗ್ರಹಿಸಿದರು. ಕಾರ್ಮಿಕ, ರೈತ, ಬಡವ ಮಾತ್ರವಲ್ಲ, ಕೋಟ್ಯಧಿಪತಿಯೂ ಸಹ ಕಷ್ಟಪಟ್ಟು ದೈಹಿಕಶ್ರಮದ ಮೂಲಕವೇ ತನ್ನ ಅನ್ನ ಸಂಪಾದಿಸಬೇಕೆಂದರು. ಶ್ರಮ ಇಲ್ಲದೆ ಊಟವಿಲ್ಲ; ದುಡಿಯದವನಿಗೆ ಊಟ ಮಾಡುವ ಹಕ್ಕಿಲ್ಲ ಎನ್ನುವುದರ ಮೂಲಕ ಅವರು ಬೆವರಿನ ಬೆಲೆಯನ್ನು ಮನಗಾಣಿಸಿದರು.
ದೈವೀ ನಿಯಮದ ಪ್ರಾಮುಖ್ಯ
ಪ್ರತಿಯೊಬ್ಬ ವ್ಯಕ್ತಿ ತನ್ನ ಅಗತ್ಯ ಅಪೇಕ್ಷೆಗಳನ್ನು ಪೂರೈಸಿಕೊಳ್ಳುವುದಕ್ಕೆ ಸಾಧ್ಯವಾದ ಮಟ್ಟಿಗೆ ಶರೀರಶ್ರಮ ಮಾಡಬೇಕೆಂಬುದು ಗಾಂಧೀಯ ಅರ್ಥಶಾಸ್ತ್ರದ ಪ್ರಮುಖ ಅಂಶ. ದೈಹಿಕಶ್ರಮದಲ್ಲಿ ಉತ್ಪಾದನೆಯ ಮೌಲ್ಯ (production value) ಇರುವುದರ ಜೊತೆಗೆ ಶ್ರಮಗೌರವದ ಸಾಮಾಜಿಕ ಮೌಲ್ಯವೂ (social value of labour dignity) ಇದೆ. ಮೂಲಭೂತ ಆವಶ್ಯಕತೆಗಳಾದ ಅನ್ನ, ವಸ್ತ್ರ, ವಸತಿ ಇತ್ಯಾದಿಗಳ ಉತ್ಪಾದನೆಗಾಗಿ ಪ್ರತಿಯೊಬ್ಬರೂ ಸ್ವಲ್ಪಮಟ್ಟಿಗೆ ಶಾರೀರಿಕ ಶ್ರಮ ಹಾಕಿದರೆ ಆ ವಸ್ತುಗಳ ಉತ್ಪಾದನೆಯಲ್ಲಿ ಹೆಚ್ಚಳವಾಗುವುದರ ಜೊತೆಗೆ ’ಬುದ್ಧಿಜೀವಿ’ ಹಾಗೂ ’ಶ್ರಮಜೀವಿ’ ಎಂಬ ನೀಚೋಚ್ಚ ಭೇದಗಳು ಮಾಯವಾಗುವುದು ಎಂದರು. ಅನ್ನಕಾಯಕವೇ ಜೀವನಪದ್ಧತಿ. ಕೆಲಸವೇ ಜೀವನ. ಶ್ರಮ ಕೇವಲ ಮಾರಾಟಕ್ಕಿಟ್ಟ ಆರ್ಥಿಕ ಸಂಪನ್ಮೂಲವಲ್ಲ. ಶ್ರಮವೇ ಪೂಜೆ. ಕೆಲಸವೇ ದೇವರ ಪೂಜೆ. ಯಾವ ಕೆಲಸವೂ ಸಣ್ಣದೂ ಅಲ್ಲ, ದೊಡ್ಡದೂ ಅಲ್ಲ ಎಂದರು.
ಮನುಷ್ಯನ ಅಗತ್ಯಗಳನ್ನು ಪೂರೈಸಲು ವಿವಿಧ ರೀತಿಯ ಸರಕು ಹಾಗೂ ಸೇವೆಗಳ ಉತ್ಪಾದನೆ ಅನಿವಾರ್ಯ. ಅದಕ್ಕೋಸ್ಕರ ಬೇರೆ ಬೇರೆ ರೀತಿಯ ದೈಹಿಕ ಶ್ರಮದ ಅಗತ್ಯವಿದೆ. ಕೃಷಿಸಂಬಂಧಿತ ವಸ್ತುಗಳ ಉತ್ಪಾದನೆ, ನೂಲನ್ನು ನೇಯುವುದು, ಬಟ್ಟೆಯನ್ನು ಸಿದ್ಧಪಡಿಸುವುದು, ಮರಗೆಲಸ, ಚಿನ್ನ ಬೆಳ್ಳಿಯ ಕೆಲಸ, ಲೋಹದ ಕೆಲಸ, ಚರ್ಮದ ಕೆಲಸ ಮತ್ತು ಅಗತ್ಯ ಸೇವೆಗಳಾದ ಭಾವಿಯನ್ನು ಶುದ್ಧೀಕರಿಸುವುದು, ರಸ್ತೆಗುಡಿಸುವುದು, ಜಾಡಮಾಲಿ ಕೆಲಸ ಇತ್ಯಾದಿಗಳೆಲ್ಲ ಅನ್ನಕಾಯಕದ ಗುಂಪಿಗೆ ಸೇರಿವೆ. ಆದ್ದರಿಂದ ಪ್ರತಿಯೊಬ್ಬರೂ ಶ್ರಮಗೌರವವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಬದುಕಲು ಬೇಕಾದ ಎಲ್ಲ ರೀತಿಯ ಸರಕು ಹಾಗೂ ಸೇವೆಗಳ ಉತ್ಪಾದನೆಯಲ್ಲಿ ತೊಡಗಿದ ದೈಹಿಕ ದುಡಿಮೆಯ ಮಹತ್ತ್ವ ಒಂದೇ ಆಗಿದೆ. ಅನ್ನಕಾಯಕದ ಕೆಲಸದಲ್ಲಿ ಮೇಲು-ಕೀಳು ಎಂಬುದಿಲ್ಲ. ಹೀಗೆ ಗಾಂಧಿಯವರು ಪ್ರತಿಯೊಬ್ಬ ಮಾನವನ ಜೀವನದಲ್ಲಿ ಶ್ರಮದ ಮಹತ್ತ್ವವನ್ನು ತಿಳಿಸಿದರು. ಅವರು ಕೇವಲ ಶ್ರಮಗೌರವದ ವಿಶೇಷತೆಯನ್ನು ಬೋಧಿಸದೆ ಅದನ್ನು ಸ್ವತಃ ತಮ್ಮ ಜೀವನದಲ್ಲಿಯೂ ಅನುಷ್ಠಾನಕ್ಕೆ ತಂದು ಇತರರಿಗೆ ಮೇಲ್ಪಂಕ್ತಿಯನ್ನು ಹಾಕಿದರು. ಕಾಂಗ್ರೆಸ್ ಪಕ್ಷದ ಅನೇಕ ಸಮಾವೇಶ, ಅಧಿವೇಶನಗಳಲ್ಲಿ ಸ್ವತಃ ಅವರು ಕಕ್ಕಸುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿ ಮಾತು ಮತ್ತು ಕೃತಿಯ ನಡುವಣ ಅಂತರವನ್ನು ತೆಗೆದುಹಾಕಿದರು.
ಅನ್ನಕಾಯಕದ ಕರ್ತವ್ಯ
ದೇವರು ಪ್ರತಿಯೊಬ್ಬನಿಗೂ ತನ್ನ ದಿನನಿತ್ಯದ ಆವಶ್ಯಕತೆಗೆ ಮೀರಿ ದುಡಿಯುವ ಶಕ್ತಿ ಕೊಟ್ಟಿದ್ದಾನೆ. ಈ ಶಕ್ತಿಯನ್ನು ಯಾರು ಸರಿಯಾಗಿ ಉಪಯೋಗ ಮಾಡಿಕೊಳ್ಳುವರೋ ಅಂತಹವರಿಗೆ ತಪ್ಪದೆ ಕೆಲಸ ಸಿಗುತ್ತದೆ. ಶ್ರಮಗೌರವದ ಮಹತ್ತ್ವ ಅರಿತು ಕೆಲಸಮಾಡುವವರಿಗೆ ನಿರುದ್ಯೋಗ ಎಂಬುದೇ ಇಲ್ಲ ಎನ್ನುವುದು ಗಾಂಧಿಯವರ ಅಚಲ ನಂಬಿಕೆ. ಪ್ರಾಮಾಣಿಕತೆಯಿಂದ ಮಾಡಿದ ಯಾವುದೇ ರೀತಿಯ ಶ್ರಮ ಕೀಳಲ್ಲ; ಕ?ಪಟ್ಟು ಸಂಪಾದಿಸಿದ ಪ್ರತಿ ಪೈಸೆಯೂ ಮಹತ್ತ್ವದ್ದು ಎಂದರು ಅವರು. ಪ್ರತಿಯೊಬ್ಬ ವ್ಯಕ್ತಿ ಬದುಕಲು ತನ್ನ ಅನ್ನಕ್ಕಾಗಿ ಮಾತ್ರ ದುಡಿದರೆ ಪ್ರತಿಯೊಬ್ಬರಿಗೂ ಸಾಕ? ಪ್ರಮಾಣದ ಆಹಾರ ಮತ್ತು ಬಿಡುವು ದೊರೆಯುವುದು. ಆಗ ವಿವಿಧ ರೀತಿಯ ಕಾಯಿಲೆ, ಕಷ್ಟಕಾರ್ಪಣ್ಯಗಳು ದೂರವಾಗಿ ಜನಸಂಖ್ಯೆಯ ಪ್ರಮಾಣ ಹೆಚ್ಚಾಯಿತು ಎಂಬ ಕೂಗು ಇರುವುದಿಲ್ಲ. ಅಂತಹ ಶಾರೀರಿಕ ಶ್ರಮ ನಿಜವಾಗಿಯೂ ಅತೀ ಹೆಚ್ಚಿನ ತ್ಯಾಗದ ಪ್ರತಿಫಲವಾಗುತ್ತದೆ. ನಿಜಮನು? ತನ್ನ ಶಾರೀರಿಕ ಹಾಗೂ ಮಾನಸಿಕ ಶಕ್ತಿಯಿಂದ ವಿವಿಧ ರೀತಿಯ ಕಾರ್ಯಚಟುವಟಿಕೆಗಳನ್ನು ನಡೆಸುತ್ತಾನೆ. ಈ ಎಲ್ಲ ಶ್ರಮವೂ ಸಹ ಇತರರ ಒಳಿತಿನ ಪ್ರೀತಿಗಾಗಿ. ಪರಿಣಾಮವಾಗಿ ಬಡವ-ಶ್ರೀಮಂತ, ಮೇಲು-ಕೀಳು, ಹೆಚ್ಚು-ಕಡಮೆ, ಸ್ಪೃಶ್ಯ- ಅಸ್ಪೃಶ್ಯ ಎನ್ನುವ ಭೇದಭಾವಗಳು ದೂರವಾಗುತ್ತವೆ.
ಗಾಂಧಿಯವರ ಪ್ರಕಾರ ಇದು ಕಾರ್ಯಗತವಾಗದಂತಹ ಆದರ್ಶ ಸ್ಥಿತಿ (unattainable ideal). ಆದರೆ ನಾವು ಆ ಸ್ಥಿತಿಯನ್ನು ತಲಪಲು ನಮ್ಮ ಪ್ರಯತ್ನವನ್ನು ಬಿಡಬಾರದು. ಅನ್ನಕಾಯಕದ ಸಂಪೂರ್ಣ ಕೆಲಸ ಮಾಡಲು ಸಾಧ್ಯವಾಗದಿದ್ದರೂ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ದೈಹಿಕಶ್ರಮದಿಂದ ನಮ್ಮ ಅನ್ನವನ್ನು ನಾವು ದುಡಿಯುವ ಪ್ರಯತ್ನ ಮಾಡಿದರೆ ಆ ಆದರ್ಶ ಸ್ಥಿತಿಯನ್ನು ಮುಟ್ಟುವ ದಿಕ್ಕಿನೆಡೆಗೆ ಬಹುದೂರ ಪ್ರಯಾಣ ಮಾಡಿದಂತಾಗುತ್ತದೆ. ಆಗ ನಮ್ಮ ಬಯಕೆಗಳು ಸಹಜವಾಗಿ ಕಡಮೆಯಾಗುವುದು. ನಮ್ಮ ಆಹಾರದಲ್ಲಿ ಸರಳತೆ ಬರುವುದು. ನಾವು ಆಗ ಬದುಕುವುದಕ್ಕಾಗಿ ತಿನ್ನುತ್ತೇವೆ, ತಿನ್ನುವುದಕ್ಕಾಗಿ ಬದುಕುವುದಿಲ್ಲ. ಯಾರಿಗೆ ಇದರ ಬಗ್ಗೆ ಅನುಮಾನವಿದೆಯೋ ಅಂತಹವರು ಮೊದಲು ಅನ್ನಕಾಯಕ ಮಾಡಿ ಅದರಿಂದ ತಮ್ಮ ಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ನೋಡಿ ಆನಂದಿಸಲಿ. ತಮ್ಮ ಶಾರೀರಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲಿ. ಆಗ ಅವರಿಗೆ ತಾನು ಇಲ್ಲಿಯವರೆಗೆ ನಂಬಿದ ಅನೇಕ ಸಂಗತಿಗಳು ಸರಿಯಲ್ಲ ಎಂದು ಅವರಿಗೇ ಅನ್ನಿಸುತ್ತದೆ. (Harijan, 29.6.1935, p.156)
ಮಾನವ ತನ್ನ ದೈಹಿಕ ಆವಶ್ಯಕತೆಗಳನ್ನು ಶಾರೀರಿಕ ಕ್ರಿಯೆಯಿಂದಲೇ ಪೂರೈಸಬೇಕು. ಮಾನಸಿಕ, ಬೌದ್ಧಿಕ ಶ್ರಮ ನಮ್ಮ ಆತ್ಮತೃಪ್ತಿಗಾಗಿ ಮಾತ್ರ. ಅದು ಯಾವುದೇ ರೀತಿಯ ಹಣಸಂದಾಯದ ಬೇಡಿಕೆಯನ್ನು ನಿರ್ಮಿಸಬಾರದು. ನಿಜವಾದ ಆದರ್ಶಸ್ಥಿತಿಯಲ್ಲಿ ವೈದ್ಯರು, ವಕೀಲರು ಮತ್ತು ಇತರರು ತಮ್ಮ ಸ್ವಂತದ ಲಾಭಕ್ಕಲ್ಲದೆ ಸಮಾಜದ ಒಳಿತಿಗಾಗಿ ಪರಿಶ್ರಮ ಹಾಕುವರು. ಪ್ರತಿಯೊಬ್ಬರೂ ಅನ್ನಕಾಯಕದ ನಿಯಮವನ್ನು ಪಾಲಿಸಿದರೆ ಆಗ ಅದು ನಮ್ಮ ಸಮಾಜರಚನೆಯಲ್ಲಿ ಒಂದು ರೀತಿಯ ಮೌನಕ್ರಾಂತಿಯನ್ನೆ ಮಾಡುತ್ತದೆ. ಸ್ವಂತ ಅಸ್ತಿತ್ವದ ಹೋರಾಟಕ್ಕೆ ಬದಲಾಗಿ ಪರಸ್ಪರ ಸೇವೆಗಾಗಿ ಹೋರಾಟ ಮಾಡಿದಾಗ ಮನು?ನಿಗೆ ವಿಜಯ ಸಿಗುತ್ತದೆ. ಆಗ ’ಪಾಶವೀ ನಿಯಮ’ದ (The law
of brute) ಜಾಗದಲ್ಲಿ ’ಮಾನವೀಯ ನಿಯಮ’ವು (The law of man) ವಿರಾಜಮಾನವಾಗುತ್ತದೆ. ಹೀಗೆ ಪ್ರತಿಯೊಬ್ಬ ಮನು? ಬೆವರುಹರಿಸಿ ಜೀವನ ನಡೆಸಲು ಪ್ರಾರಂಭಿಸಿದರೆ ಈ ಭೂಮಿ ಒಂದು ಸ್ವರ್ಗವಾಗುತ್ತದೆ. (Harijan. 29.6.1935. p. 156)
ಮನುಷ್ಯನ ವಿಶೇಷ ಪ್ರತಿಭೆಯ ಬಗ್ಗೆ ಹೆಚ್ಚು ಹೇಳುವ ಆವಶ್ಯಕತೆ ಇಲ್ಲ. ಪ್ರತಿಯೊಬ್ಬ ಮನುಷ್ಯ ತನ್ನ ಅನ್ನವನ್ನು ಸಂಪಾದಿಸಲು ಶ್ರಮಹಾಕಿದರೆ ವೈದ್ಯರು, ವಕೀಲರು, ಕವಿಗಳು ಮತ್ತಿತರರು ತಮ್ಮ ವಿಶೇಷ ಪ್ರತಿಭೆಯನ್ನು ಸಮಾಜದ ಇತರರ ಒಳಿತಿಗಾಗಿ ಉಪಯೋಗಿಸಬೇಕೆಂಬ ಕರ್ತವ್ಯಪ್ರಜ್ಞೆ ಜಾಗೃತವಾಗುತ್ತದೆ. ಅವರ ನಿಃಸ್ವಾರ್ಥ ಕರ್ತವ್ಯದಿಂದ ಒಳ್ಳೆಯ ಹಾಗೂ ಶ್ರೀಮಂತ ಸಮಾಜದ ನಿರ್ಮಾಣವಾಗುತ್ತದೆ. ಯಾರು ಅಹಿಂಸೆ, ಸತ್ಯದ ಆರಾಧನೆ ಮತ್ತು ಬ್ರಹ್ಮಚರ್ಯೆಯನ್ನು ಸಹಜಕ್ರಿಯೆ ಎಂದು ಪರಿಗಣಿಸುತ್ತಾರೋ ಅವರಿಗೆ ನಿಜವಾದ ಅನ್ನಕಾಯಕದ ಆಶೀರ್ವಾದವಾಗುತ್ತದೆ. (Mahatma. Vol VII. 1953. p.389)
ಅನ್ನಕಾಯಕ ಮಾಡಲು ಕಾರಣಗಳು
ದೈಹಿಕಶ್ರಮದ ಮೂಲಕ ಕೆಲಸಮಾಡದೇ ಯಾವ ಮನು?ನು ತಾನೆ ತನ್ನ ಅನ್ನವನ್ನು ತಿನ್ನಲು ಅರ್ಹನಾಗುತ್ತಾನೆ? – ಎನ್ನುವ ಪ್ರಶ್ನೆಯನ್ನು ಗಾಂಧಿಯವರು ಕೇಳುತ್ತಾರೆ. ಪ್ರತಿಯೊಬ್ಬನೂ ತನ್ನ ಬೆವರು ಸುರಿಸಿ ದುಡಿದು ತಿನ್ನಬೇಕು. ದೈಹಿಕ ಶ್ರಮವಿಲ್ಲದೆ ಯಾವ ಮನು?ನಿಗೂ ಅನ್ನ ತಿನ್ನುವ ಹಕ್ಕಿಲ್ಲ ಎಂದು ನಿರ್ದಾಕ್ಷಿಣ್ಯದಿಂದ ಅವರು ತಿಳಿಸಿದರು. ಶಾರೀರಿಕ ಶ್ರಮ ಹಾಕುವುದು ಮನು?ನ ದೈನಂದಿನ ಸಹಜ ಕ್ರಿಯೆ. ಅದು ನಿಸರ್ಗನಿಯಮ. ದುಡಿಮೆ ಇಲ್ಲದೆ ಊಟವಿಲ್ಲ ಎನ್ನುವುದು ಅನುಭವದ ಮಾತು. ಅದರಿಂದ ಅವನ ಆರೋಗ್ಯವೂ ಸುಧಾರಿಸೀತು. ದುಡಿಮೆಯಿಂದ ಅವನ ಶರೀರ ಸುಸ್ಥಿತಿಯಲ್ಲಿರಲು ಸಾಧ್ಯ. ಶ್ರಮಜೀವನ ಸುಖೀ ಜೀವನದ ರಹಸ್ಯ. ಬೆಳಗ್ಗೆಯಿಂದ ರಾತ್ರಿಯವರೆಗೆ ಶ್ರಮದಿಂದ ದುಡಿದು ಅನ್ನ ತಿನ್ನುವವನಿಗೆ ರಾತ್ರಿ ಸುಖವಾದ ನಿದ್ರೆಯು ಬರುತ್ತದೆ. ಅದರಿಂದ ನಿತ್ಯೋತ್ಸಾಹ ಅವನಿಗೆ.
ಒಬ್ಬ ಕೋಟ್ಯಧಿಪತಿ ತನ್ನ ಆಹಾರದ ನಂತರ ಬೆಳಗ್ಗೆಯಿಂದ ಸಂಜೆಯವರೆಗೆ ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತಾ ವಿಶ್ರಾಂತಿ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಅವನಿಗೆ ತನ್ನ ಜೀವನದ ಬಗ್ಗೆ ಜುಗುಪ್ಸೆ ಬರುತ್ತದೆ. ತಾನು ತೆಗೆದುಕೊಂಡ ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ತನ್ನ ಹಸಿವೆಯನ್ನು ಹೆಚ್ಚುಮಾಡಲು ಶಾರೀರಿಕ ವ್ಯಾಯಾಮವನ್ನು ಮಾಡಬೇಕಾಗುತ್ತದೆ. ಪ್ರತಿಯೊಬ್ಬನಿಗೂ, ಬಡವನಾಗಲಿ ಅಥವಾ ಶ್ರೀಮಂತನಾಗಲಿ, ಅವನಿಗೆ ಒಂದಲ್ಲ ಒಂದು ರೀತಿಯ ವ್ಯಾಯಾಮದ ಆವಶ್ಯಕತೆ ಇದೆ. ಆದ್ದರಿಂದ ಈ ವ್ಯಾಯಾಮವನ್ನೇ ಉತ್ಪಾದಕ ಅನ್ನಕಾಯಕವನ್ನಾಗಿ ಏಕೆ ಪರಿವರ್ತನೆ ಮಾಡಿಕೊಳ್ಳಬಾರದು ಎಂದು ಗಾಂಧಿ ಪ್ರಶ್ನಿಸುತ್ತಾರೆ. ಅನ್ನಕಾಯಕದಿಂದ ಮನುಷ್ಯನ ಹಸಿವು ಹೆಚ್ಚಿ ಅವನು ತಿಂದ ಆಹಾರ ಪೂರ್ಣವಾಗಿ ಪಚನವಾಗಲು ಸಹಕಾರಿಯಾಗುತ್ತದೆ. ಒಬ್ಬ ರೈತ ಬೆಳಗ್ಗೆಯಿಂದ ಸಂಜೆಯವರೆಗೆ ತನ್ನ ಹೊಲಗದ್ದೆಗಳಲ್ಲಿ ಶಾರೀರಿಕ ಶ್ರಮದಲ್ಲಿ ನಿರತನಾಗಿರುವುದರಿಂದ ಅವನಿಗೆ ಯಾರೂ ಸಹ ಉಸಿರಾಟದ ವ್ಯಾಯಾಮ – ಪ್ರಾಣಾಯಾಮ ಅಥವಾ ಶಾರೀರಿಕ ವ್ಯಾಯಾಮ ಮಾಡು ಎಂದು ಹೇಳುವುದಿಲ್ಲ. ಅವನಿಗೆ ಬೇರಾವ ರೀತಿಯ ವ್ಯಾಯಾಮದ ಅಗತ್ಯವೂ ಇರುವುದಿಲ್ಲ. ನಮ್ಮ ದೇಶದಲ್ಲಿ ಬಹಳಷ್ಟು ರೈತಾಪಿ ಜನರಿದ್ದಾರೆ. ಸ್ವಂತ ಶಾರೀರಿಕ ಶ್ರಮದಿಂದ ತಮ್ಮ ಹೊಲಗದ್ದೆಗಳಲ್ಲಿ ಉಳುಮೆ ಮಾಡಿ ಎಷ್ಟು ಆರೋಗ್ಯದಿಂದ, ಸಂತೋಷದಿಂದ ಹಾಗೂ ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ! ಪ್ರಪಂಚದ ಉಳಿದ ಜನರೂ ಸಹ ಇದೇ ಮಾರ್ಗದಲ್ಲಿ ಅನ್ನಕಾಯಕದ ಮೂಲಕ ತಮ್ಮ ಅನ್ನವನ್ನು ದುಡಿದರೆ ಸಂತಸವಲ್ಲವೇ? – ಇದು ಗಾಂಧಿಯವರು ಕೇಳುವ ಮಾತು.
ದೈಹಿಕಶ್ರಮವನ್ನು ಒಂದು ಶಾಪ ಎಂದು ಪರಿಗಣಿಸುವ ಅಧ್ಯಾತ್ಮವಾದಿಗಳ ಬಗ್ಗೆ ಅವರಿಗೆ ಅಪಾರವಾದ ಕೋಪವಿತ್ತು. ಪ್ರತಿಯೊಬ್ಬ ನಿಷ್ಕ್ರಿಯ ಮನು? ಇತರರಿಗೆ ಹೊರೆಯಾಗುತ್ತಾನೆ. ಆದಕಾರಣ ಅವರು ನಿಷ್ಕ್ರಿಯತೆಯನ್ನು ಯಾವತ್ತೂ ಖಂಡಿಸುತ್ತಾರೆ. ಯಾರೂ ಸಹ ಬಹಳ ಕಾಲದವರೆಗೆ ಶಾರೀರಿಕ ಶ್ರಮವನ್ನು ಮಾಡದೆ ಸುಮ್ಮನಿರಲು ಸಾಧ್ಯವಿಲ್ಲ. ’ಅಗೋಚರ/ಅವ್ಯಕ್ತ ನಿರುದ್ಯೋಗ’ (disguised
unemployment- ಹತ್ತು ಜನ ಮಾಡುವ ಕೆಲಸವನ್ನು ಇಪ್ಪತ್ತು ಜನ ಹಂಚಿಕೊಂಡು ಮಾಡುವ ಕೆಲಸಕ್ಕೆ ಅಗೋಚರ/ಅವ್ಯಕ್ತ ನಿರುದ್ಯೋಗ ಎಂದು ಕರೆಯುತ್ತಾರೆ) ಭಾರತೀಯ ಹಳ್ಳಿಗಳಲ್ಲಿ ಸರ್ವೇಸಾಮಾನ್ಯ. ನಮ್ಮ ರೈತರು ವ?ದ ಆರೇಳು ತಿಂಗಳುಗಳ ಕಾಲ ಮಾತ್ರ ಕೃಷಿಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಂಡಿರುತ್ತಾರೆ. ಉಳಿದ ನಾಲ್ಕೈದು ತಿಂಗಳ ನಿಷ್ಕ್ರಿಯಕಾಲವನ್ನು ಕೃಷಿಸಂಬಂಧಿತ ಇತರ ಚಟುವಟಿಕೆಗಳಾದ ತೋಟಗಾರಿಕೆ, ರೇ? ವ್ಯವಸಾಯ, ಹೈನುಗಾರಿಕೆ, ಮೀನುಗಾರಿಕೆ, ಕಾಗದ, ಮೋಂಬತ್ತಿ ತಯಾರಿಕೆ ಇತ್ಯಾದಿ ಆರ್ಥಿಕಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರ ಮೂಲಕ ತಮ್ಮ ದೈಹಿಕಶ್ರಮದ ಉಪಯೋಗ ಮಾಡಿ ಅರೆಕಾಲಿಕ ಉದ್ಯೋಗ ದೊರಕಿಸಿಕೊಂಡು ತಮ್ಮ ಆದಾಯವನ್ನು ಹೆಚ್ಚುಮಾಡಿಕೊಂಡರೆ ಉತ್ತಮ – ಎಂದು ಗಾಂಧಿಯವರು ಹೇಳುತ್ತಾರೆ.
ನಮ್ಮೆಲ್ಲರಿಗೆ ತಿಳಿದಿರುವ ಹಾಗೆ ಪ್ರಕೃತಿನಿಯಮದ ಪ್ರಕಾರ ಮನು? ತನ್ನ ಅನ್ನವನ್ನು ಶಾರೀರಿಕ ಶ್ರಮದ ಮೂಲಕ ಸಂಪಾದಿಸಬೇಕು. ತನ್ನ ಬೌದ್ಧಿಕ ಶಕ್ತಿಯನ್ನು ಆವರ್ಧಕ ಭೌತಿಕ ಆಸೆಗಳ ಕಡೆಗೆ ಹರಿಸಬಾರದು. ಆತ್ಮಶಕ್ತಿಯನ್ನು ನಾಶಮಾಡುವ ಸುಖ- ಭೋಗಗಳಿಗೆ ತನ್ನೆಲ್ಲ ಶಕ್ತಿಯನ್ನು ವ್ಯಯ ಮಾಡಬಾರದು. ಜೀವನಮೌಲ್ಯಗಳನ್ನು ಎತ್ತಿಹಿಡಿಯವಂಥ ಪ್ರಯತ್ನ ನಿರಂತರ ಮಾಡಬೇಕು. ಪರಮಾತ್ಮನ ಇಚ್ಛೆಯನ್ನು ಅರಿಯುವ ಪ್ರಯತ್ನ ಮಾಡಬೇಕು. ಮಾನವಜನಾಂಗದ ಸೇವೆ ಮಾಡುವುದರ ಮೂಲಕ ತನ್ನ ನಿಜವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರ ಕಡೆಗೆ ಗಮನ ಹರಿಸಬೇಕು. (The Collected Works of Mahatma Gandhi, Vol. X. p. 130)
ಗಾಂಧಿಯವರು ಮೈಗಳ್ಳತನವನ್ನು ಖಂಡಿಸಿದರು. ಯಂತ್ರಗಳ ಅತಿಬಳಕೆಗೆ ಅವರ ವಿರೋಧವಿತ್ತು. ಯಂತ್ರಗಳ ಉಪಯೋಗದ ಬದಲು ಮಾನವನ ಶಾರೀರಿಕ ಶ್ರಮಕ್ಕೆ ಹೆಚ್ಚಿನ ಮಹತ್ತ್ವವನ್ನು ನೀಡಿದರು. ಮನು? ತನ್ನ ದೈಹಿಕಶ್ರಮದಿಂದ ದುಡಿಯಬೇಕೇ ಹೊರತು ಯಂತ್ರಗಳ ಸಹಾಯದಿಂದ ಅಲ್ಲ. ವಿವಿಧ ರೀತಿಯ ಸೇವೆ ಸರಕುಗಳ ಉತ್ಪಾದನೆಗೆ ಅನಗತ್ಯವಾಗಿ ಯಂತ್ರಗಳನ್ನು ಬಳಸದೆ ’ಮಾನವಶ್ರಮ’ದ ಉಪಯೋಗವಾಗಬೇಕು ಎಂದರು. ಯಂತ್ರಗಳ ಬಳಕೆಯಿಂದ ಮಾನವರ ದೈಹಿಕಶ್ರಮ ವ್ಯರ್ಥವಾಗಬಾರದು. ಬದಲಿಗೆ ಅದರ ಸದುಪಯೋಗವಾಗಬೇಕು ಎಂದು ಹೇಳಿದರು. ಯಂತ್ರಗಳು ಯಾವುದೇ ಕಾರಣಕ್ಕೂ ಮನುಷ್ಯನನ್ನು ಉದ್ಯೋಗದಿಂದ ಹೊರತಳ್ಳುವಂತಿರಬಾರದು. ಯಂತ್ರದ ಕಾರಣದಿಂದಾಗಿ ಮಾನವ ನಿರುದ್ಯೋಗಿಯಾಗಬಾರದು. ಗಾಂಧಿಯವರು ಯಂತ್ರಗಳ ಅತಿಬಳಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿ, ದೈಹಿಕ ಶ್ರಮಕ್ಕೆ ಹೆಚ್ಚಿನ ಮಹತ್ತ್ವ ನೀಡಿದ ಕಾರಣ ಬಹಳ? ವಿಮರ್ಶಕರು ಅವರನ್ನು ’ಮಧ್ಯಯುಗೀನ ನೀತಿಬೋಧಕ ವ್ಯಕ್ತಿ’ ಎಂದು ಕರೆದರು. ’ಮನುಷ್ಯನ ಪ್ರಗತಿಯ ಗಡಿಯಾರವನ್ನು ಹಿಂದಕ್ಕೆ ನಡೆಸುವ ಪ್ರಯತ್ನ ಅವರದು’ ಎಂದರು.
ಶ್ರಮಪೂಜೆ
ಪ್ರತಿಯೊಬ್ಬ ವ್ಯಕ್ತಿ ದಿನದಲ್ಲಿ ಒಂದು ಗಂಟೆಯಾದರೂ ದೈಹಿಕಶ್ರಮವನ್ನು ಬಡವರು ಮಾಡುವಂತೆ ಮಾಡಿದರೆ ಆಗ ನಾವು ಅವರ ಜೊತೆಗೆ ನಮ್ಮನ್ನು ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ. ತನ್ಮೂಲಕ ಮಾನವತೆಯ ಜೊತೆಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕಿಂತ ಪವಿತ್ರವಾದ ರಾಷ್ಟ್ರೀಯ ಕೆಲಸ ಇನ್ನಾವುದೂ ಇಲ್ಲ ಎಂದು ಗಾಂಧಿಯವರು ಭಾವಿಸಿದ್ದಾರೆ. ಇದಕ್ಕಿಂತ ಒಳ್ಳೆಯ ದೇವರಪೂಜೆ ಇನ್ನಾವುದಿದೆ? – ಎಂದು ಅವರು ಪ್ರಶ್ನೆಮಾಡುತ್ತಾರೆ. ದೇವರ ಹೆಸರಿನಲ್ಲಿ ಬಡವರ ಸೇವೆಗಾಗಿ ಶ್ರಮಹಾಕುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. (Young India, 20.10.1921, p. 329)
ದೇವರ ಹೆಸರಿನಲ್ಲಿ ಅವನಿಗೆ ಸಮರ್ಪಿಸಿದ ಕೆಲಸ ಯಾವುದೂ ಸಣ್ಣದಲ್ಲ. ಸಮರ್ಪಣೆಯ ಭಾವದಿಂದ ಮಾಡಿದ ಎಲ್ಲ ಕೆಲಸಗಳಿಗೂ ಸರಿಸಮಾನ ಶ್ರೇ?ತೆ ಇರುತ್ತದೆ. ಜಾಡಮಾಲಿ ಒಬ್ಬ ರಾಜನು ಮಾಡುವ ಕೆಲಸದ ರೀತಿ ಸರಿಸಮಾನ ವೈಶಿ?ವನ್ನು ಪಡೆಯುತ್ತಾನೆ. ಕಾರಣ ದೇವರ ಹೆಸರಿನಲ್ಲಿ ಕೇವಲ ವಿಶ್ವಸ್ಥನಾಗಿ ರಾಜ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನ? – ಎಂದು ಗಾಂಧಿ ಹೇಳಿದ್ದಿದೆ. (Young India, 25-11-1926, p. 414)
ಸೇವೆಯು ಅಹಿಂಸೆ ಮತ್ತು ಪ್ರೀತಿಯ ಬೇರುಗಳಿಲ್ಲದೆ ಸಾಧ್ಯವಿಲ್ಲ. ನಿಜವಾದ ಪ್ರೀತಿಯು ಸಮುದ್ರದಂತೆ ಯಾವ ಗಡಿಯೂ ಇಲ್ಲದೆ ಇರುವಂತಹದ್ದು. ಅದು ಏರಿಳಿತದ ಮೂಲಕ ಎಲ್ಲೆಡೆ ಪಸರಿಸುತ್ತದೆ. ಎಲ್ಲ ಗಡಿಗಳನ್ನು ದಾಟಿ ಇಡೀ ಪ್ರಪಂಚವನ್ನು ಆವರಿಸುತ್ತದೆ. ಈ ರೀತಿಯ ಸೇವೆ ಅನ್ನಕಾಯಕವಿಲ್ಲದೆ ಸಾಧ್ಯವಿಲ್ಲ. ಭಗವದ್ಗೀತೆಯಲ್ಲಿ ಹೇಳಿದ ಹಾಗೆ ಇದೊಂದು ಯಜ್ಞದ ರೀತಿ. ಒಬ್ಬ ಪುರು? ಅಥವಾ
ಗಾಂಧಿಯವರು ಮೈಗಳ್ಳತನವನ್ನು ಖಂಡಿಸಿದರು. ಯಂತ್ರಗಳ ಅತಿಬಳಕೆಗೆ ಅವರ ವಿರೋಧವಿತ್ತು. ಯಂತ್ರಗಳ ಉಪಯೋಗದ ಬದಲು ಮಾನವನ ಶಾರೀರಿಕ ಶ್ರಮಕ್ಕೆ ಹೆಚ್ಚಿನ ಮಹತ್ತ್ವವನ್ನು ನೀಡಿದರು. ಮನು? ತನ್ನ ದೈಹಿಕಶ್ರಮದಿಂದ ದುಡಿಯಬೇಕೇ ಹೊರತು ಯಂತ್ರಗಳ ಸಹಾಯದಿಂದ ಅಲ್ಲ. ಮಹಿಳೆ ಸೇವೆ ಮಾಡುವ ಸಲುವಾಗಿ ಅನ್ನಕಾಯಕ ಮಾಡಿದಾಗ ಮಾತ್ರ ಅವನು/ಅವಳು ಬದುಕಲು ಅರ್ಹರಾಗುತ್ತಾರೆ. (Young India, 20.9. 1928, p. 320)
ಶ್ರಮದ ಮಹತ್ತ್ವ
“ಅನ್ನಕಾಯಕಕ್ಕೆ ಅದರದ್ದೇ ಆದ ಮಹತ್ತ್ವವಿದೆ; ಅದನ್ನು ಮತ್ತೆ ಮಹತ್ತ್ವ ನೀಡಿ ವೈಭವೀಕರಿಸಬೇಕಾಗಿಲ್ಲ. ಏಕೆಂದರೆ ಕಾಯಕವಿಲ್ಲದೆ ಜೀವನವಿಲ್ಲ. ಅದು ಮನು?ನ ಸಹಜ ಕ್ರಿಯೆ. ಈಗ ನಾನು ಕೇವಲ ಭಗವದ್ಗೀತೆಯಲ್ಲಿ ಹೇಳಿರುವ ಮಾತನ್ನು ಪುನರುಚ್ಚಾರ ಮಾಡುತ್ತಿದ್ದೇನೆ. ಗೀತೆಯಲ್ಲಿ ಶ್ರೀಕೃ? ಈ ರೀತಿ ಹೇಳುತ್ತಾನೆ: ’ನಾನು ನಿದ್ರೆ ಮಾಡದೆ ಸದಾ ನನ್ನ ಕರ್ತವ್ಯವನ್ನು ಮಾಡದಿದ್ದರೆ ಆಗ ನಾನು ಮಾನವರಿಗೆ ತಪ್ಪು ಉದಾಹರಣೆಯನ್ನು ಕೊಟ್ಟಂತೆ ಆಗುತ್ತಿತ್ತು.’ ಭಗವಾನ್ ಬುದ್ಧನೊಡನೆ ಮುಖಕ್ಕೆ ಮುಖ ಕೊಟ್ಟು ಮಾತನಾಡುವ ಅವಕಾಶ ನನಗೆ ಸಿಕ್ಕಿದ್ದರೆ ಆಗ ಯಾವುದೇ ರೀತಿಯ ಹಿಂಜರಿಕೆಯಿಲ್ಲದೆ ’ಕಾಯಕದ ಮಹತ್ತ್ವ ತಿಳಿಸದೆ ನೀನು ಏಕೆ ಧ್ಯಾನದ ಮಹತ್ತ್ವವನ್ನು ಬೋಧಿಸಿದೆ?’ ಎಂದು ಕೇಳುತ್ತಿದ್ದೆ. ಅದೇ ರೀತಿ ನಾನು ಸಂತ ತುಕಾರಾಂ, ನಾಮದೇವರನ್ನು ಭೇಟಿಮಾಡಿದ್ದರೂ ಈ ಪ್ರಶ್ನೆಯನ್ನು ಕೇಳುತ್ತಿದ್ದೆ” – ಎಂದು ದೃಢವಾಗಿ ತಮ್ಮ ಅಭಿಪ್ರಾಯವನ್ನು ಗಾಂಧಿಯವರು ಸ್ಪ?ಪಡಿಸಿದ್ದಾರೆ. (Harijan, 2.11.1935, p. 298)
ಎಲ್ಲಿಯವರೆಗೆ ಶಾರೀರಿಕವಾಗಿ ಸಶಕ್ತರಾದ ಒಬ್ಬ ಪುರು? ಅಥವಾ ಮಹಿಳೆ ಕೆಲಸ ಅಥವಾ ಊಟವಿಲ್ಲದೆ ಇರುತ್ತಾರೋ ಅಂತಹ ಪರಿಸ್ಥಿತಿಯಲ್ಲಿ ನಾವು ಒಂದು ಹೊತ್ತು ಪೂರ್ತಿ ಊಟಮಾಡುವುದು ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ನಾಚಿಕೆ ಪಡಬೇಕು. (Young India, 6.10. 1921, p. 314)
ನಮ್ಮ ದೇಶದಲ್ಲಿರುವ ಅತೀವ ಬಡತನ ಮತ್ತು ನಿರುದ್ಯೋಗವನ್ನು ಕಂಡು ಅನೇಕ ಬಾರಿ ಗಾಂಧಿ ಕಣ್ಣೀರು ಸುರಿಸಿದ್ದಾರೆ. ನಿಜ ಹೇಳಬೇಕೆಂದರೆ ಈ ಪರಿಸ್ಥಿತಿಗೆ ನಮ್ಮ ಆಸಡ್ಡೆ, ಅನಾದರಣೆ ಮತ್ತು ಅಜ್ಞಾನಗಳು ಕಾರಣ. ಶ್ರಮಗೌರವವನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಒಬ್ಬ ಶೂ ಮಾಡುವವನು ಆ ಕೆಲಸವನ್ನು ಬಿಟ್ಟು ಬೇರೇನೂ ಮಾಡುವುದಿಲ್ಲ. ಅವನ ಪ್ರಕಾರ ಉಳಿದೆಲ್ಲ ಕೆಲಸಗಳೂ ಅವನ ಗೌರವಕ್ಕೆ ಕುಂದು ತರುವಂಥವು. ಈ ರೀತಿಯ ತಪ್ಪು ಕಲ್ಪನೆಗಳು ನಮ್ಮಿಂದ ದೂರವಾಗುವ ಆವಶ್ಯಕತೆ ಇದೆ. ಗಾಂಧಿಯವರ ಅನುಭವದ ಪ್ರಕಾರ – ನಮ್ಮ ದೇಶದಲ್ಲಿ ಪ್ರಾಮಾಣಿಕವಾಗಿ ತಮ್ಮ ಕೈಕಾಲುಗಳ ಮೂಲಕ ಕೆಲಸಮಾಡಬೇಕೆನ್ನುವವರಿಗೆ ಸಾಕ? ಉದ್ಯೋಗಗಳಿವೆ. ದೇವರು ಪ್ರತಿಯೊಬ್ಬರಿಗೂ ಕೆಲಸಮಾಡುವ ಶಕ್ತಿ ಮತ್ತು ತನಗೆ ಬೇಕಾದದ್ದಕ್ಕಿಂತ ಹೆಚ್ಚು ಅನ್ನವನ್ನು ಸಂಪಾದಿಸುವ ಶಕ್ತಿ ನೀಡಿದ್ದಾನೆ. ಯಾರು ತಮ್ಮ ಶಕ್ತಿಯನ್ನು ಉಪಯೋಗಿಸಿ ದುಡಿಯುವ ಪ್ರಯತ್ನ ಮಾಡುತ್ತಾರೋ ಅವರಿಗೆ ಖಂಡಿತವಾಗಿ ಕೆಲಸ ಸಿಗುತ್ತದೆ. ಪ್ರಾಮಾಣಿಕತೆಯಿಂದ ಸಂಪಾದಿಸುವ ಯಾವುದೇ ಕೆಲಸ ಕೀಳಲ್ಲ. ಮನು? ದೇವರು ತನಗೆ ಕೊಟ್ಟ ಕೈಕಾಲುಗಳನ್ನು ಉಪಯೋಗಿಸಲು ಮನಸ್ಸುಮಾಡಬೇಕ?. ನಿರುದ್ಯೋಗಿ ಪುರು? ಅಥವಾ ಮಹಿಳೆಯರು ಎಷ್ಟು ಸಂಖ್ಯೆಯಲ್ಲಿದ್ದರೂ ಸಹ ಸರ್ಕಾರ ಅವರಿಗೆ ಅನ್ನಕಾಯಕ ಮಾಡಲು ಅವಕಾಶ ಕಲ್ಪಿಸಿಕೊಡಬೇಕು.(Harijan, 11.1.1948, p. 507).
ಸಾಮಾಜಿಕ ಕ್ರಾಂತಿ
ಪ್ರಪಂಚದಾದ್ಯಂತ ಶ್ರಮ ಮತ್ತು ಬಂಡವಾಳದ ನಡುವೆ ಸಂಘ?ವಿದೆ. ಇದು ಎಲ್ಲರಿಗೂ ತಿಳಿದ ವಿ?ಯ. ಬಡವರು ಸಹಜವಾಗಿ ಶ್ರೀಮಂತರನ್ನು ನೋಡಿ ಕರುಬುತ್ತಾರೆ. ಪ್ರತಿಯೊಬ್ಬರೂ ತಮ್ಮ ಅನ್ನಕ್ಕಾಗಿ ತಾವೇ ದೈಹಿಕಶ್ರಮವನ್ನು ಮಾಡಿದಾಗ ಬಡವ-ಶ್ರೀಮಂತರ ನಡುವಿನ ಅಂತರ ಕಡಮೆಯಾಗುತ್ತದೆ. ಶ್ರೀಮಂತರು ಇರುವುದು ಸಹಜ. ಆದರೆ ಅವರು ತಮ್ಮ ಆಸ್ತಿಗೆ ಧರ್ಮದರ್ಶಿಗಳಾಗಿ ಅದನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಬೇಕು. (Ibid, p. 35-36)
ಮನುಷ್ಯನ ಪ್ರಸ್ತುತ ಆವಶ್ಯಕತೆಯನ್ನು ಪೂರೈಸುವುದಕ್ಕಿಂತ ಹೆಚ್ಚಿನದನ್ನು ದೇವರು ಎಂದೂ ಸೃಷ್ಟಿಸುವುದಿಲ್ಲ. ಆದಕಾರಣ ಯಾರಾದರೊಬ್ಬರು ತಮಗೆ ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಪಡೆಯಲು ಪ್ರಯತ್ನಿಸಿದರೆ ಅವನು ತನ್ನ ನೆರೆಯವರನ್ನು ದಾರಿದ್ರ್ಯಕ್ಕೆ ತಳ್ಳಿದಂತಾಗುತ್ತದೆ. ಬಹಳ ಜನ ತಮ್ಮ ಆವಶ್ಯಕತೆಗಿಂತ ಹೆಚ್ಚಿನದನ್ನು ಗಳಿಸುವ ಪ್ರಯತ್ನಮಾಡುವ ಕಾರಣ ಪ್ರಪಂಚದ ಅನೇಕ ಭಾಗಗಳಲ್ಲಿ ಜನ ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿ ಕೊಡುವ ಉಡುಗೊರೆಯನ್ನು ನಾವು ಇಚ್ಛೆಗೆ ತಕ್ಕಂತೆ ಸ್ವೀಕರಿಸಬಹುದು. ಆದರೆ ಪ್ರಕೃತಿಯ ಆಯ-ವ್ಯಯ ಪಟ್ಟಿಯಲ್ಲಿ ಖರ್ಚು ಯಾವಾಗಲೂ ಜಮೆಗೆ ಸಮನಾಗಿರುತ್ತದೆ. ಹಾಗಾಗಿ ಜಮಾ- ಖರ್ಚು ಪಟ್ಟಿ ಸಮತೋಲದಲ್ಲಿರುತ್ತದೆ. ಯಾವುದೇ ಕಾಲಂ ಅಸಂತುಲಿತವಾಗಿರುವುದಿಲ್ಲ. (Ashram Observances in Action, pp. 62-63; 1955)
“ಯಾವ ರೀತಿಯಲ್ಲಿ ಪಶುಪಕ್ಷಿಗಳು ತಮ್ಮ ಜೀವನಾವಶ್ಯಗಳನ್ನು ಪ್ರಕೃತಿಯಿಂದ ಪೂರ್ತಿಯಾಗಿ ಪಡೆಯುತ್ತವೆಯೋ ಅದೇ ರೀತಿ ಪ್ರತಿಯೊಬ್ಬ ಮಾನವನಿಗೆ ಅದನ್ನು ಪಡೆಯುವ ಹಕ್ಕು ಇದೆ. ಪ್ರತಿಯೊಂದು ಹಕ್ಕೂ ಸಹ ಬಾಧ್ಯತೆಯನ್ನು ಹೊಂದಿರುತ್ತದೆ. ಹಕ್ಕಿಗೆ ತಕ್ಕ ಹಾಗೆ ಕರ್ತವ್ಯವನ್ನು ನಿರ್ವಹಿಸಿದರೆ ಆಗ ಮೂಲಭೂತ ಸಮಾನತೆ ಬರಲು ಸಾಧ್ಯ. ಅದಕ್ಕೆ ಸರಿಸಮವಾಗಿ ಕೈಕಾಲುಗಳ ಮೂಲಕ ದೈಹಿಕಶ್ರಮ ಮಾಡಬೇಕು. ಯಾರು ತಮ್ಮ ಶ್ರಮಕ್ಕೆ ಸಿಗುವಂತಹ ಪ್ರತಿಫಲವನ್ನು ತಪ್ಪಿಸುವ ಪ್ರಯತ್ನ ಮಾಡುತ್ತಾರೋ ಅಂತಹವರ ಜೊತೆಗೆ ನಾನು ಅಸಹಕಾರವನ್ನು ಮಾಡಬೇಕಾಗುತ್ತದೆ” ಎಂದು ಗಾಂಧಿಯವರು ನಿ?ರವಾಗಿ ನುಡಿದದ್ದಿದೆ.(Young India, 26.3.1931, p. 49)
ನೈಜ ಸೇವೆ
ಬುದ್ಧಿವಂತಿಕೆಯ ಅನ್ನಕಾಯಕ ಯಾವತ್ತೂ ಉನ್ನತಶ್ರೇಣಿಯ ಸಮಾಜಸೇವೆ. ಮನು? ತನ್ನ ಸ್ವಂತ ಪರಿಶ್ರಮದಿಂದ ರಾಷ್ಟ್ರೀಯ ಸಂಪತ್ತಿಗೆ ತನ್ನ ಕೊಡುಗೆಯನ್ನು ಸಲ್ಲಿಸುವುದಕ್ಕಿಂತ ಹೆಚ್ಚಿನ ಮಹತ್ತ್ವ ಇನ್ನಾವುದಿದೆ? ಮನು?ನ ಕಾಯಕ ಅವನ ವ್ಯಕ್ತಿತ್ವ ಹಾಗೂ ಅಸ್ತಿತ್ವವನ್ನು ಸೂಚಿಸುತ್ತದೆ. ಇಲ್ಲಿ ಬುದ್ಧಿವಂತಿಕೆಯ ಶ್ರಮ ಎಂಬ ಗುಣವಾಚಕ ಏಕೆಂದರೆ ಶ್ರಮವನ್ನು ಸಮಾಜಸೇವೆ ಎಂದು ಪರಿಗಣಿಸಬೇಕಾದರೆ ಅದರ ಹಿಂದೆ ನಿಶ್ಚಿತ ಉದ್ದೇಶ ಇರಬೇಕು. ಪ್ರತಿಯೊಬ್ಬ ಶ್ರಮಿಕನೂ ತಾನು ಸಮಾಜಸೇವೆ ಮಾಡುತ್ತಿದ್ದೇನೆ ಎನ್ನುವನು; ಒಂದು ರೀತಿಯಲ್ಲಿ ಅವನು ಸಮಾಜಸೇವೆ ಮಾಡುತ್ತಿರುವುದು ನಿಜ. ಆದರೆ ಅನ್ನಕಾಯಕಕ್ಕೆ ಇನ್ನೂ ಹೆಚ್ಚಿನ ಮಹತ್ತ್ವದ ಅರ್ಥವಿದೆ. ಯಾವ ಶ್ರಮಿಕನು ಸಮಾಜದ ಎಲ್ಲ ಬಾಂಧವರ ಸಾಮೂಹಿಕ ಹಿತಕ್ಕಾಗಿ ಶ್ರಮಿಸುತ್ತಾನೋ ಅಂತಹ ವ್ಯಕ್ತಿಯ ಶ್ರಮ ಧನ್ಯ. ಆದ್ದರಿಂದ ಆ ವ್ಯಕ್ತಿಯ ಅನ್ನಕಾಯಕ ಸಮಾಜಸೇವೆಗಿಂತ ಭಿನ್ನವಾಗಿರುವುದಿಲ್ಲ ಎಂದು ಗಾಂಧಿಯವರು ಅಭಿಪ್ರಾಯಪಟ್ಟಿದ್ದಾರೆ. (Harijan, 1.6. 1935, p. 125)
ಅನ್ನಕಾಯಕದ ಅನ್ವಯಿಸುವಿಕೆ
ಪ್ರತಿಯೊಬ್ಬರೂ ಸ್ವಚ್ಛತೆಯಿಂದ ಇರುವುದಕ್ಕಾಗಿ ಜಾಡಮಾಲಿಯ ಕೆಲಸ ಮಾಡಬೇಕು. ಆಹಾರಸೇವನೆಯ? ಅದರ ವಿಸರ್ಜನೆಯೂ ಮುಖ್ಯ. ತನ್ನ ಮಲವಿಸರ್ಜನೆಯ ನಂತರ ಕಕ್ಕಸನ್ನು ಸ್ವಚ್ಛಮಾಡಲು ಪ್ರತಿಯೊಬ್ಬರೂ ಸಹ ಜಾಡಮಾಲಿಯ ಕೆಲಸ ಮಾಡಬೇಕು. ಎಲ್ಲರೂ ಮಾಡಲು ಸಾಧ್ಯವಾಗದ ಪಕ್ಷದಲ್ಲಿ ಪ್ರತಿ ಮನೆಯವರು ಈ ಸ್ವಚ್ಛವನ್ನು ಮಾಡುವ ವ್ಯವಸ್ಥೆಯನ್ನು ತಾವೇ ಮಾಡಬೇಕು. ಈ ಕೆಲಸವನ್ನು ಮಾಡಲು ಸಮಾಜದಲ್ಲಿ ಒಂದು ಬೇರೆ ವರ್ಗವೇ ನಿರ್ಮಾಣವಾಗಿರುವುದನ್ನು ಅನೇಕ ವ?ಗಳಿಂದ ನೋಡಿ ಗಾಂಧಿಯವರು ದುಃಖಿಸಿದ್ದಾರೆ. ಸಮಾಜದಲ್ಲಿ ಈ ದೊಡ್ಡ ತಪ್ಪು ಬಹಳ ವ?ಗಳಿಂದ ಆಚರಣೆಯಲ್ಲಿರುವುದನ್ನು ಕಂಡು ಅವರ ಮನಸ್ಸಿಗೆ ಬಹಳ ಖೇದವಾಗಿದೆ. ’ಈ ಅಗತ್ಯ ನೈರ್ಮಲ್ಯದ ಕೆಲಸ ಮಾಡುವಂತಹ ವ್ಯಕ್ತಿಗಳನ್ನು ಯಾರು ಸಮಾಜದ ಅತ್ಯಂತ ಕೆಳಮಟ್ಟದ ಸ್ಥಳದಲ್ಲಿ ಇಟ್ಟಿದ್ದಾರೆ ಎಂಬುದಕ್ಕೆ ಯಾವುದೇ ರೀತಿಯ ಐತಿಹಾಸಿಕ ದಾಖಲೆ ಇಲ್ಲ. ಅಂತಹ ವ್ಯಕ್ತಿಗಳು ಯಾರೇ ಆದರೂ ಸಹ ಅವರು ನಮಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ. ಬಾಲ್ಯದಿಂದಲೇ ನಾವೆಲ್ಲರೂ ಸಹ ಒಂದು ರೀತಿಯ ಜಾಡಮಾಲಿಗಳು ಎಂಬ ಭಾವನೆ ನಮ್ಮಲ್ಲಿ ಮೂಡಿ ಬರಬೇಕು. ಮತ್ತು ಆ ದಿಕ್ಕಿನಲ್ಲಿ ಬಹಳ ಸುಲಭವಾಗಿ ಈ ಕೆಲಸವನ್ನು ಅತ್ಯಂತ ಬುದ್ಧಿವಂತಿಕೆಯಿಂದ ಮಾಡಿದಾಗ ಮನುಷ್ಯನ ನಿಜವಾದ ಗುಣಮಟ್ಟ ಹೆಚ್ಚಿದೆ ಎಂದು ಶ್ಲಾಘಿಸಬಹುದು’ – ಎಂದು ಗಾಂಧಿಯವರು ಸ್ಪಷ್ಟಪಡಿಸಿದ್ದಾರೆ. (From Yeravada Mandir, p. 36-37)
ಶ್ರಮವಿಭಜನೆ
“ನಾನು ಶ್ರಮವಿಭಜನೆಯನ್ನು ಒಪ್ಪುತ್ತೇನೆ. ಆದರೆ ನಾನು ಕೂಲಿಯಲ್ಲಿ ಸಮಾನತೆಯನ್ನು ಎತ್ತಿ ಹಿಡಿಯುತ್ತೇನೆ. ವಕೀಲರು, ವೈದ್ಯರು, ಶಿಕ್ಷಕರು, ಭಂಗಿಯವನು ತೆಗೆದುಕೊಳ್ಳುವ ಸಂಬಳಕ್ಕಿಂತ ಹೆಚ್ಚು ಅರ್ಹರಲ್ಲ. ಆಗ ಮಾತ್ರ ಶ್ರಮವಿಭಜನೆ ದೇಶವನ್ನು ಮೇಲೆತ್ತಲು ಸಾಧ್ಯ. ಇದು ಬಿಟ್ಟು ಇನ್ನಾವುದೇ ರಾಜಮಾರ್ಗ ನಿಜವಾದ ನಾಗರಿಕತೆ ಅಥವಾ ಸಂತೋ?ಕ್ಕೆ ಇಲ್ಲ” (Harijan, 23.3.1947,
p. 316) ಎನ್ನುವ ಗಾಂಧಿಯವರು, “ಅನ್ನಕಾಯಕವೇ ಅರ್ಥಶಾಸ್ತ್ರದ ನಿಜವಾದ ಜೀವನರೀತಿ. ಇದರ ಅರ್ಥ ಪ್ರತಿಯೊಬ್ಬ ಮನು? ತನ್ನ ಅನ್ನ ಮತ್ತು ಬಟ್ಟೆಗಾಗಿ ಶಾರೀರಿಕ ಶ್ರಮವನ್ನು ಹಾಕಬೇಕು. ಅನ್ನಕಾಯಕದ ಬೆಲೆ ಮತ್ತು ಅಗತ್ಯದ ಮನವರಿಕೆ ಮಾಡಿಸಿದರೆ ಆಗ ಅನ್ನ ಬಟ್ಟೆಯ ಆವಶ್ಯಕತೆಯೇ ಏಳುವುದಿಲ್ಲ. ನೀವು ಜಮೀನಿನಲ್ಲಿ ಕೆಲಸ ಮಾಡದೆ, ನೂಲನ್ನು ತೆಗೆಯದೆ ಅಥವಾ ಬಟ್ಟೆಯನ್ನು ನೇಯದೆ ಇದ್ದರೆ ಬೆತ್ತಲೆಯಾಗಿ ಮತ್ತು ಹಸಿವಿನಿಂದ ಇರಬೇಕಾಗಬಹುದು” ಎಂಬ ಮಾತನ್ನು ನಾನು ಯಾವುದೇ ರೀತಿಯ ಅಂಜಿಕೆ ಇಲ್ಲದೆ ಜನಗಳಿಗೆ ಅತ್ಯಂತ ವಿಶ್ವಾಸದಿಂದ ಹೇಳುತ್ತಾರೆ. (Harijan, 7.9. 1947, p. 316)
“೧೯೨೫ರಲ್ಲಿ ನಾನು ಮೊದಲು ಹೇಳಿದ ಮಾತನ್ನು ಮತ್ತೊಮ್ಮೆ ಸ್ಪ?ಪಡಿಸುತ್ತೇನೆ. ಪ್ರತಿ ಯುವಕ/ ಯುವತಿಯರು ಒಂದು ವಯೋಮಿತಿಯ ನಂತರ ಯಾರು ರಾಜ್ಯದ ಅನ್ನಕಾಯಕಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಾರೋ ಅಂತಹವರಿಗೆ ಮಾತ್ರ ಮತ ಚಲಾಯಿಸುವ ಹಕ್ಕನ್ನು ನೀಡಬೇಕು” – ಎಂಬುದು ಗಾಂಧಿಯವರ ಸ್ಪಷ್ಟಭಿಪ್ರಾಯವಾಗಿತ್ತು.(Harijan, 2.3. 1947, p. 46)
ಬೌದ್ಧಿಕಶಕ್ತಿಯಿಂದ ಮನುಷ್ಯ ತನ್ನ ಅನ್ನವನ್ನು ಸಂಪಾದಿಸಲಾರನೆ? – ಎಂದರೆ, ಇಲ್ಲ. ಶರೀರದ ಆವಶ್ಯಕತೆಗಳನ್ನು ಶರೀರವೇ ಪೂರೈಸಬೇಕು. ಬೌದ್ಧಿಕಶಕ್ತಿ ಕೇವಲ ಮನುಷ್ಯನ ಸಂತೋಷ ಮತ್ತು ಆತ್ಮತೃಪ್ತಿಗೋಸ್ಕರವಾಗಿ. ಅದು ಯಾವಾಗಲೂ ಹಣದ ಸಂಭಾವನೆಯನ್ನು ಕೇಳಬಾರದು.
ಶರೀರದ ಸಂರಕ್ಷಣೆ ದೈಹಿಕಶ್ರಮದಿಂದ ಬರಬೇಕು. ಹಾಗೂ ಬೌದ್ಧಿಕಶ್ರಮ ಮಾನವನ ಸಾಂಸ್ಕೃತಿಕಬುದ್ಧಿಯ ಬೆಳವಣಿಗೆಗೆ ಅವಶ್ಯ. ಶ್ರಮವಿಭಜನೆ ಅತ್ಯಗತ್ಯವಾದದ್ದು. ಶಾರೀರಿಕ ಶ್ರಮದಲ್ಲಿ ವರ್ಗ ಇರಬೇಕೇ ಹೊರತು ದೈಹಿಕಶ್ರಮ ಮಾಡುವವರು ಮತ್ತು ಬೌದ್ಧಿಕ ಶ್ರಮ ಮಾಡುವವರು ಎಂಬ ಎರಡು ವರ್ಗದ ಆವಶ್ಯಕತೆ ಸಮಾಜದಲ್ಲಿ ಇಲ್ಲ. (Mahatma, Vol III 1952, p. 349)
ಬೌದ್ಧಿಕ ಶ್ರಮ
ಅನ್ನಕಾಯಕ ವಿವಿಧ ರೀತಿಯದ್ದಾಗಿದೆ. ಅದರ ಒಂದು ರೀತಿ ಶಾರೀರಿಕ ಶ್ರಮವಾದರೆ, ಬೌದ್ಧಿಕ ಶ್ರಮ ಇನ್ನೊಂದು ರೀತಿಯದು. ಬೌದ್ಧಿಕ ಕೆಲಸ ಮನು?ನ ಕಾಯಕ ಯೋಜನೆಯಲ್ಲಿ ನಿಶ್ಚಿತವಾಗಿಯೂ ಮಹತ್ತ್ವದ ಸ್ಥಾನ ಪಡೆದಿದೆ. ಗಾಂಧಿಯವರು ಬೌದ್ಧಿಕ ಶ್ರಮದ ಬೆಲೆಯನ್ನು ಕಡಮೆ ಮಾಡುವುದಿಲ್ಲ. ಆದರೆ ಅವರ ಅಭಿಪ್ರಾಯದಂತೆ, ಬೌದ್ಧಿಕ ಶಕ್ತಿ ಶಾರೀರಿಕಶ್ರಮಕ್ಕೆ ಪರ್ಯಾಯವಲ್ಲ. ನಾವೆಲ್ಲರೂ ಹುಟ್ಟಿರುವುದು ಸಾಮಾನ್ಯಜನರ ಒಳಿತು ಮತ್ತು ಏಳಿಗೆಗಾಗಿ. ನಿಜವಾಗಿಯೂ ಅನೇಕ ಬಾರಿ ಯೋಚಿಸಿದಾಗ ಶಾರೀರಿಕ ಶ್ರಮಕ್ಕಿಂತ ಬೌದ್ಧಿಕ ಶ್ರಮ ಶ್ರೇ?ವೆಂದು ಕಂಡರೂ ಸಹ ಅದು ದೈಹಿಕ ಶ್ರಮಕ್ಕೆ ಪರ್ಯಾಯವಾಗಲಾರದು. ಬೌದ್ಧಿಕ ಆಹಾರ ಖಂಡಿತವಾಗಿಯೂ ನಾವು ತೆಗೆದುಕೊಳ್ಳುವ ಧಾನ್ಯ/ಕಾಳುಗಳ ಆಹಾರಕ್ಕಿಂತ ಶ್ರೇ?ವಾದರೂ ಸಹ ಅದು ದೈಹಿಕ ಶ್ರಮಕ್ಕೆ ಸರಿಸಮವಾಗಲಾರದು. ನಿಶ್ಚಿತವಾಗಿಯೂ ಭೂಮಿಯ ಮೇಲೆ ಬೆಳೆಯುವ ವಸ್ತುಗಳಿಲ್ಲದೆ ಬೌದ್ಧಿಕ ಶಕ್ತಿಯ ಬೆಳವಣಿಗೆ ಸಾಧ್ಯವೇ ಇಲ್ಲ. (Young India, 15.10. 1925, p. 355-56).
ಗಾಂಧಿಯವರು ಶರೀರಶ್ರಮಕ್ಕೆ ಹೆಚ್ಚಿನ ಮಹತ್ತ್ವ ನೀಡುತ್ತಾರೆ; ಏಕೆಂದರೆ ಯಾವುದೇ ಮನು? ಅದರಿಂದ ಋಣಮುಕ್ತನಾಗಲಾರ. ಅದು ಮನು?ನ ಬೌದ್ಧಿಕ ಉತ್ಪನ್ನಗಳ ಗುಣಮಟ್ಟವನ್ನು ವೃದ್ಧಿಪಡಿಸಲು ಸಹಕಾರಿಯಾಗುತ್ತದೆ. (Harijan, 23.2.1947, p. 36)
ಬೌದ್ಧಿಕಶಕ್ತಿಯಿಂದ ಮನು? ತನ್ನ ಅನ್ನವನ್ನು ಸಂಪಾದಿಸಲಾರನೆ? – ಎಂದರೆ, ಇಲ್ಲ. ಶರೀರದ ಆವಶ್ಯಕತೆಗಳನ್ನು ಶರೀರವೇ ಪೂರೈಸಬೇಕು. ಬೌದ್ಧಿಕಶಕ್ತಿ ಕೇವಲ ಮನು?ನ ಸಂತೋ? ಮತ್ತು ಆತ್ಮತೃಪ್ತಿಗೋಸ್ಕರವಾಗಿ. ಅದು ಯಾವಾಗಲೂ ಹಣದ ಸಂಭಾವನೆಯನ್ನು ಕೇಳಬಾರದು. ಆದರ್ಶದ ಸ್ಥಿತಿಯಲ್ಲಿ ವೈದ್ಯರು, ವಕೀಲರು ಮತ್ತಿತರರು ತಮ್ಮ ಸ್ವಂತಕ್ಕಾಗಿ ದುಡಿಯದೆ ಸಮಾಜದ ಒಟ್ಟಾರೆ ಹಿತಕ್ಕಾಗಿ ದುಡಿಯುವರು. (Harijan, 29.6.1935, p. 156) ಒಬ್ಬ ಶ್ರಮಿಕ ಟೇಬಲ್ ಬಳಿ ಕುಳಿತು ಏನನ್ನೂ ಬರೆಯಲಾರ. ಆದರೆ ಜೀವನಪೂರ್ತಿ ಟೇಬಲ್ ಬಳಿ ಕೆಲಸ ಮಾಡುವಾತ ನಿಶ್ಚಿಯವಾಗಿ ಶಾರೀರಿಕ ಶ್ರಮವನ್ನು ಮಾಡಲು ಸಾಧ್ಯ. Harijan, 18.1.1948, p. 520).
ಶಾರೀರಿಕ ಶ್ರಮಿಕ ಮತ್ತು ಬೌದ್ಧಿಕ ಶ್ರಮಿಕ ಎಂದು ಪ್ರಪಂಚದಲ್ಲಿ ಎರಡು ವರ್ಗಗಳ ನಿರ್ಮಾಣವಾಗುತ್ತಿದೆ ಎನ್ನುವ ಮಾತನ್ನು ಹೇಳಿದರೆ ಗಾಂಧಿಯವರು ನಗುತ್ತಾ – “ಮನು? ತನ್ನ ಬುದ್ಧಿಯನ್ನು ಕೇವಲ ಬರೆಯುವುದರಿಂದ, ಓದುವುದರಿಂದ ಅಥವಾ ದಿನವಿಡೀ ಭಾ?ಣ ಮಾಡುವುದರಿಂದ ಬೆಳೆಸಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ದೈಹಿಕಶ್ರಮ ಅಗತ್ಯ. ನಾನು ದಿನಕ್ಕೆ ೮ ಗಂಟೆಗಳ ಕಾಲ ಶಾರೀರಿಕ ಶ್ರಮವನ್ನು ಅನೇಕ ತಿಂಗಳ ಕಾಲ ಮಾಡಿಕೊಂಡು ಬಂದಿದ್ದೇನೆ. ಆದರೂ ಸಹ ನಾನು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ದಣಿದಿಲ್ಲ. ಅನೇಕ ಬಾರಿ ನಾನು ದಿನಕ್ಕೆ ೪೦ ಮೈಲುಗಳ? ನಡೆದಾಗಲೂ ದಣಿದಂತೆ ಭಾಸವಾಗಲಿಲ್ಲ” ಎನ್ನುತ್ತಾರೆ. (Harijan, 29.6.1935, p. 156).
ಇಚ್ಛಾಪೂರ್ವಕ ಆಯ್ಕೆ
ಹಳ್ಳಿಗಳಿಗೆ ಹಿಂದಿರುಗಿ ಎಂದರೆ ಅನ್ನಕಾಯಕದ ಭಾವಕ್ಕೆ ನಿಶ್ಚಿತವಾದ ಇಚ್ಛಾಪೂರ್ವಕ ಒಪ್ಪಿಗೆಯನ್ನು ಕೊಟ್ಟಂತೆ. ವಿಮರ್ಶಕರು ಈ ರೀತಿ ಹೇಳುತ್ತಾರೆ – ಲಕ್ಷಾಂತರ ಮಕ್ಕಳು ಭಾರತದ ಹಳ್ಳಿಗಳಲ್ಲಿ ಬದುಕುತ್ತಿದ್ದಾರೆ. ಆದರೆ ಅವರು ಅಲ್ಲಿ ಅರೆಹೊಟ್ಟೆಯ ಜೀವನ ನಡೆಸುತ್ತಿದ್ದಾರೆ. ಇದು ಅತ್ಯಂತ ಕಹಿ ಸತ್ಯ. ಆದರೆ ನಾವು ಗಮನಿಸಿದ ಹಾಗೆ ಇದು ಇಚ್ಛಾಪೂರ್ವಕ ವಿಧೇಯತೆಯಲ್ಲ ಅಥವಾ ಜೀವಿತವಲ್ಲ. ಬಹುಶಃ ಹತ್ತಿರದ ಪಟ್ಟಣಗಳಲ್ಲಿ ಕೆಲಸಮಾಡಲು ಅವಕಾಶ ಕಲ್ಪಿಸಿದರೆ ದೈಹಿಕಶ್ರಮದ ಕೆಲಸದಿಂದ ಜಾರಿಕೊಳ್ಳಲು ಅವರಿಗೆ ಸಾಧ್ಯವಾಗಬಹುದು.
ಒಬ್ಬ ಸ್ವಾಮಿಗೆ ಒತ್ತಾಯಪೂರ್ವಕ ವಿಧೇಯತೆ ಎಂದರೆ ಅದು ಒಂದು ರೀತಿಯ ಗುಲಾಮಿತನ. ಆದರೆ ಒಬ್ಬ ಮಗ ತನ್ನ ತಂದೆಗೆ ಸ್ವ-ಇಚ್ಛೆಯಿಂದ ವಿಧೇಯನಾಗಿದ್ದರೆ ಅದನ್ನು ನಾವು ’ವಿಧೇಯ ಮಗ’ ಎಂದು ವೈಭವೀಕರಿಸುತ್ತೇವೆ. ಅದೇ ರೀತಿ ನಾವು ಒತ್ತಾಯಪೂರ್ವಕ ವಿಧೇಯತೆಯನ್ನು ಅನ್ನಕಾಯಕ ನಿಯಮಕ್ಕೆ ಅನ್ವಯಮಾಡಿದರೆ ಅದು ಬಡತನ, ಕಾಯಿಲೆಗಳು ಮತ್ತು ಅಸಂತೋಷವನ್ನು ಉಂಟುಮಾಡುತ್ತದೆ. ಅದು ಒಂದು ರೀತಿಯ ಗುಲಾಮತನ ಕೂಡ. ಇಚ್ಛಾಪೂರ್ವಕ ವಿಧೇಯತೆ ನಮ್ಮಲ್ಲಿ ಆನಂದ ಮತ್ತು ಆರೋಗ್ಯವನ್ನು ತಂದುಕೊಡುವಂತಿರಬೇಕು. ಈ ರೀತಿಯ ಆರೋಗ್ಯವೇ ನಿಜವಾದ ಸಂಪತ್ತು; ಚಿನ್ನದ ಹಾಗೂ ಬೆಳ್ಳಿಯ ನಾಣ್ಯಗಳಲ್ಲ – ಎಂಬುದು ಗಾಂಧಿಯವರ ಸ್ಪಷ್ಟಭಿಪ್ರಾಯ. (Harijan, 29.6.1935, p. 156)
ದೈಹಿಕ ಶ್ರಮವಿಲ್ಲದೆ ಊಟವಿಲ್ಲ
ಗಾಂಧೀಯ ಅಹಿಂಸೆಯ ಕಲ್ಪನೆಯ ಪ್ರಕಾರ ಯಾವುದೇ ಆರೋಗ್ಯವಂತ ವ್ಯಕ್ತಿ ಪ್ರಾಮಾಣಿಕವಾಗಿ ದೈಹಿಕ ಶ್ರಮವನ್ನು ಹಾಕದಿದ್ದರೆ ಅಂತಹ ವ್ಯಕ್ತಿಗೆ ಉಚಿತವಾಗಿ ಊಟಹಾಕುವುದನ್ನು ಅವರು ಸಹಿಸುವುದಿಲ್ಲ ಮತ್ತು ಅಧಿಕಾರವಿದ್ದರೆ ಅಂತಹ ಊಟದ ವ್ಯವಸ್ಥೆಯನ್ನೇ ನಿಲ್ಲಿಸಿಬಿಡುತ್ತೇನೆ ಎನ್ನುತ್ತಾರೆ. ಏಕೆಂದರೆ ಅದು ಸೋಮಾರಿತನ, ಮೈಗಳ್ಳತನ, ಕಪಟತನ ಹಾಗೆಯೇ ಅಪರಾಧವನ್ನೂ ಪ್ರೋತ್ಸಾಹಿಸುತ್ತದೆ. ಅಂತಹ ದಾರಿತಪ್ಪಿದ ಔದಾರ್ಯದಿಂದ ದೇಶದ ಸಂಪತ್ತು ವಸ್ತುಗಳ ರೂಪದಲ್ಲಾಗಲಿ, ಅಧ್ಯಾತ್ಮದಲ್ಲಾಗಲಿ ಹೆಚ್ಚಾಗುವುದರ ಬದಲು, ದಾನಿಗಳು ಬುದ್ಧಿವಂತಿಕೆಯಿಂದ ಬೇರೆ ಬೇರೆ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮಗೋಸ್ಕರ ದುಡಿಯುವಂತಹ ಪುರುಷ/ಮಹಿಳೆಯರಿಗೆ ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣದಲ್ಲಿ ಆಹಾರವನ್ನು ನೀಡಿದರೆ ಎಷ್ಟು ಸೊಗಸಲ್ಲವೇ? – ಎಂದು ಕೇಳುತ್ತಾರೆ.
“ನಾನು ಸ್ವಂತವಾಗಿ ಯೋಚಿಸುವುದೇನೆಂದರೆ ಚರಕದಲ್ಲಿ ನೇಯುವ ಅಥವಾ ಬೇರಾವುದೇ ಮಾರ್ಗದಲ್ಲಿ ಬಟ್ಟೆಯನ್ನು ಉತ್ಪಾದನೆ ಮಾಡುವ ಕಾರ್ಯಪದ್ಧತಿ ನಿಜವಾಗಿಯೂ ಒಂದು ಆದರ್ಶದ ಉದ್ಯೋಗ. ಆ ಉದ್ಯೋಗ ಸಿಗದಿದ್ದರೆ ಬೇರಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ’ಶ್ರಮವಿಲ್ಲದೆ ಊಟವಿಲ್ಲ’ ಎಂಬುದು ನಿಯಮವಾಗಬೇಕು” – ಎನ್ನುತ್ತಾರೆ ಗಾಂಧಿ. (Young India. 13.8.1925, p. 282) “ಭಿಕ್ಷೆಬೇಡುವುದನ್ನು ಪ್ರೋತ್ಸಾಹಿಸುವುದು ತಪ್ಪು ಎಂದು ನನ್ನ ಮನೋಭಾವನೆ. ಆದರೆ ನಾನು ಒಬ್ಬ ಭಿಕ್ಷುಕನನ್ನು ಕೆಲಸವಿಲ್ಲದೆ ಮತ್ತು ಆಹಾರವಿಲ್ಲದೆ ಕಳುಹಿಸುವುದಿಲ್ಲ. ಅವನು ಕೆಲಸಮಾಡದಿದ್ದರೆ ಅವನಿಗೆ ಆಹಾರವನ್ನು ಕೊಡುವುದಿಲ್ಲ. ಯಾರು ದೈಹಿಕವಾಗಿ ಕೆಲಸಮಾಡಲು ಅಶಕ್ತರಾಗಿರುತ್ತಾರೋ ಅಂತಹವರಿಗೆ ಸರ್ಕಾರ ಸಹಾಯ ಮಾಡಬೇಕು. ಇಲ್ಲಿಯೂ ಸಹ ಬಹಳ? ಅನ್ಯಾಯ ನಡೆಯುತ್ತದೆ. ಶರೀರ ಊನವಾಗಿದೆ, ಕಣ್ಣು ಕಾಣುವುದಿಲ್ಲ ಎಂದು ಸುಳ್ಳು ಹೇಳಿಕೊಂಡು ಅನೇಕರು ಅನ್ಯಾಯದ ಮಾರ್ಗದಲ್ಲಿ ಲಾಭಗಳಿಸಿ ಶ್ರೀಮಂತರಾಗಿದ್ದಾರೆ. ಅಂತಹವರನ್ನು ಈ ರೀತಿಯ ಪ್ರಲೋಭನೆಗೆ ಒಳಮಾಡದೆ ನಿರಾಶ್ರಿತರ ಶಿಬಿರಗಳಿಗೆ ಕಳುಹಿಸುವುದು ಒಳ್ಳೆಯದು.” (Harijan, 11.5.1935, p. 99)
ಕಾಯಕದ ಸಂದರ್ಭದಲ್ಲಿ ಬಿಡುವು ಒಂದು ಹಂತದವರೆಗೆ ಒಳ್ಳೆಯದು ಮತ್ತು ಅವಶ್ಯ. ದೇವರು ಮನುಷ್ಯನನ್ನು ಸೃಷ್ಟಿಮಾಡಿರುವುದು ಅವನು ತನ್ನ ಬೆವರಿನ ದುಡಿಮೆಯ ಮೂಲಕ ಸಂಪಾದಿಸಿ ಜೀವನ ನಡೆಸುವ ಸಲುವಾಗಿ. ಗಾರುಡಿಗನ ಟೋಪಿಯಿಂದ ಹಿಡಿದು ನಮಗೆ ಬೇಕಾಗಿರುವುದೆಲ್ಲವನ್ನೂ ನಾವೇ ಉತ್ಪಾದಿಸಲು ಸಾಧ್ಯವೇ ಎಂಬ ಪ್ರಶ್ನೆ ಮತ್ತು ದಿಗಿಲು ಅನೇಕ ಬಾರಿ ಗಾಂಧಿಯವರನ್ನು ಕಾಡಿದ್ದಿದೆ. (Harijan, 16.5.1936, p. 111).
“ಒಂದುವೇಳೆ ಅಮೆರಿಕ ದೇಶದಿಂದ ಕೆಲವು ಕೋಟ್ಯಧಿಪತಿಗಳು ಬಂದು ದಯಾಪರತೆಯಿಂದ ನಮಗೆ ಬೇಕಾದ ಎಲ್ಲ ರೀತಿಯ ಆಹಾರವಸ್ತುಗಳನ್ನು ತಮ್ಮ ದೇಶದಿಂದ ಕಳುಹಿಸಿಕೊಡಲು ಸಿದ್ಧರಿದ್ದಾರೆ ಎಂದರೂ, ಅದು ನಮ್ಮ ಅಳಿವು-ಉಳಿವಿನ ಮೂಲಭೂತ ತತ್ತ್ವಕ್ಕೆ ಧಕ್ಕೆಯನ್ನುಂಟುಮಾಡುವ ಕಾರಣ ಅಂತಹ ಸಂದರ್ಭದಲ್ಲಿ ನಾನು ನಿರ್ದಾಕ್ಷಿಣ್ಯವಾಗಿ ಅವರ ಆ ಪ್ರಸ್ತಾವನೆಯನ್ನು ತಿರಸ್ಕರಿಸುತ್ತೇನೆ” – ಎಂದು ಗಾಂಧಿಯವರು ಒಮ್ಮೆ ತಮ್ಮ ’ಹರಿಜನ’ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ. (Harijan, 7.12.1935, p. 341)
ಸ್ವದೇಶೀ ಚಿಂತನೆಗೆ ಆಧಾರ
ಗಾಂಧಿಯವರ ಅನ್ನಕಾಯಕದ ಕಲ್ಪನೆ ವ್ಯಕ್ತಿಗತ ಚಟುವಟಿಕೆಯ ದೃಷ್ಟಿಕೋನದಿಂದ ಸ್ವದೇಶೀ ಚಿಂತನೆಗೆ ನೈತಿಕ ನೆಲೆಗಟ್ಟನ್ನು ಒದಗಿಸುತ್ತದೆ. ಯಾವುದೇ ಮನು? ತನ್ನ ಸ್ವಂತ ಶ್ರಮದಿಂದ ಜೀವನಾವಶ್ಯಕತೆಗಳನ್ನು ಉತ್ಪಾದನೆ ಮಾಡಿದಾಗ ಮಾತ್ರ ಸ್ವಾವಲಂಬಿಯಾಗಲು ಸಾಧ್ಯ. ಇದು ಎರಡು ಸಂದರ್ಭಗಳಲ್ಲಿ ಸಾಧ್ಯ: ಒಂದು – ಒಬ್ಬ ಇನ್ನೊಬ್ಬನ ಮೇಲೆ ಅವಲಂಬಿಸಿದಾಗ; ಎರಡು – ಒಬ್ಬ ಇನ್ನೊಬ್ಬರನ್ನು ಶೋ?ಣೆ ಮಾಡಿದಾಗ. ಆದರೆ ಈ ಎರಡೂ ಮಾರ್ಗಗಳು ನನಗೆ ಸಹ್ಯವಾಗುವುದಿಲ್ಲ ಎಂದು ಗಾಂಧಿಯವರೇ ಹೇಳಿದ್ದಾರೆ. ಕಾರಣ – ಅವು ಹಿಂಸೆ, ಪರಕೀಯತೆ, ಪರಾವಲಂಬಿತನ ಮತ್ತು ಅಮಾನವೀಯತೆಯಿಂದ ಕೂಡಿದುದಾಗಿದೆ. ಆದ ಕಾರಣ ಅನ್ನಕಾಯಕದ ಮಹತ್ತ್ವವೇ ಹೆಚ್ಚು. ಇಲ್ಲಿ ಪ್ರಮುಖವಾದ ಪ್ರಶ್ನೆ ಎಂದರೆ – ಒಬ್ಬ ಮನು? ತಾನು ಇನ್ನೊಬ್ಬರಿಂದ ಸಾಮಗ್ರಿಗಳನ್ನು ಪಡೆಯಲು ಎಷ್ಟು ಸಮಯ ಉಪಯೋಗ ಮಾಡಿದ್ದಾನೆ ಹಾಗೂ ತನಗೆ ಅವಶ್ಯವಾದ ಇನ್ನಿತರ ವಸ್ತುಗಳನ್ನು ವಿನಿಮಯಮಾಡಿಕೊಳ್ಳಲು ಎಷ್ಟು ಸಮಯ ಹಿಡಿದಿದೆ ಎಂಬುದು. ಸ್ವದೇಶೀ ವ್ಯಾಖ್ಯಾನ ಎರಡನೆ ಅಂಶವನ್ನು ಸಮರ್ಥಿಸುತ್ತದೆ.
(ಮುಂದುವರಿಯುವುದು)