ಬೆಂಗಳೂರು, ಆಗಸ್ಟ್ 7, 2024: ’ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ 2024’ರ ಪೋಸ್ಟರ್ ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹ ಕಾರ್ಯವಾಹರಾದ ಪಟ್ಟಾಭಿರಾಮ ಮತ್ತೂರು ಹಾಗೂ ಬೆಂಗಳೂರಿನ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ ಪ್ರಾದೇಶಿಕ ನಿರ್ದೇಶಕರಾದ ಡಿ. ಮಹೇಂದ್ರ ಅವರು ಬಿಡುಗಡೆ ಮಾಡಿದರು. ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್‌ಕುಮಾರ್ ಮೊಳಹಳ್ಳಿ ಅವರು ಉಪಸ್ಥಿತರಿದ್ದರು.
ಉತ್ಥಾನ ಮಾಸಪತ್ರಿಕೆಯು ಕಳೆದ ಹಲವು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ ೨೦೨೪ನೇ ಸಾಲಿನಲ್ಲಿ ಉತ್ಥಾನ ಮಾಸಪತ್ರಿಕೆ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ಜಗತ್ತು - ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಪ್ರಬಂಧವನ್ನು ಬರೆಯಬಹುದು. ಪ್ರಬಂಧವು ಕನ್ನಡದಲ್ಲಿ ಇರುತ್ತದೆ ಮತ್ತು ೧೫೦೦ ಪದಗಳು ಮೀರದಂತೆ ಇರಬೇಕು. ಸ್ಪರ್ಧೆಗೆ ಕಳುಹಿಸುವ ಪ್ರಬಂಧವು ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಪ್ರಬಂಧದ ಕೈಬರಹವನ್ನು (ಝೆರಾಕ್ಸ್ ಕಳುಹಿಸುವಂತಿಲ್ಲ) ಅಂಚೆ ಮೂಲಕ ಅಥವಾ ನುಡಿ/ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ [email protected] - ಈ ವಿಳಾಸಕ್ಕೆ ಇ-ಮೇಲ್ ಮೂಲಕ ಕಳುಹಿಸಬೇಕು.
ಪ್ರಬಂಧ ನಮಗೆ ತಲುಪಲು ಕೊನೆಯ ದಿನಾಂಕ: ಅಕ್ಟೋಬರ್ ೧೦, ೨೦೨೪.
ಆಯ್ಕೆಗೊಂಡ ಪ್ರಬಂಧಕ್ಕೆ ಮೊದಲ ಬಹುಮಾನ (ರೂ. ೧೦,೦೦೦), ಎರಡನೆಯ ಬಹುಮಾನ (ರೂ. ೭,೦೦೦), ಮೂರನೆಯ ಬಹುಮಾನ (ರೂ. ೫,೦೦೦) ಹಾಗೂ ಹತ್ತು ಮೆಚ್ಚುಗೆಯ ಬಹುಮಾನಗಳು (ತಲಾ ರೂ. ೨,೦೦೦) ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ’ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ - ೨೦೨೪,
’ಕೇಶವ ಶಿಲ್ಪ’, ಕೆಂಪೇಗೌಡನಗರ, ಬೆಂಗಳೂರು - ೦೪,
ಇ-ಮೇಲ್: [email protected] ದೂರವಾಣಿ: ೭೭೯೫೪ ೪೧೮೯೪
ವಿವರವನ್ನು ಲಗತ್ತಿಸಲಾಗಿದೆ.
ಮಂಗೇಶ್ ಭೇಂಡೆ ಅವರಿಂದ ಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ ೨೦೨೪’ರ ಪೋಸ್ಟರ್ ಬಿಡುಗಡೆ
Month : August-2024 Episode : Author :