ಉತ್ಥಾನ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತ ಎಚ್. ಮಂಜುನಾಥ್ ಭಟ್ ಅವರು ಆಗಸ್ಟ್ 17ರಂದು ಬೆಳಿಗ್ಗೆ 6.30ಕ್ಕೆ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ಸಂಜೆ ಅಂತಿಮ ವಿಧಿವಿಧಾನಗಳು ಅವರ ಹುಟ್ಟೂರಾದ ಕುಂದಾಪುರದ ಹಾರ್ಯಾಡಿಯಲ್ಲಿ ನಡೆಯಿತು.
*
ಶ್ರೀ ಎಚ್. ಮಂಜುನಾಥ ಭಟ್ ಅವರು ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದ ಮೇಲೆ ಒಂದೆರಡು ವರ್ಷ ಶಿಕ್ಷಕ ವೃತ್ತಿ ಮುಗಿಸಿ 1977ರಲ್ಲಿ ಪತ್ರಿಕೋದ್ಯಮಕ್ಕೆ ಪ್ರವೇಶ. ಮಂಗಳೂರಿನ ’ನವಭಾರತ’, ’ಮುಂಗಾರು’, ’ಕನ್ನಡಜನ ಅಂತರಂಗ’, ’ಉದಯವಾಣಿ’ ದಿನಪತ್ರಿಕೆಗಳಲ್ಲಿ ಸೇವೆ ಮುಗಿಸಿ 2009ರಲ್ಲಿ ನಿವೃತ್ತಿ.
ತಮ್ಮ ಸುದೀರ್ಘ ಆದರ್ಶ ಪತ್ರಕರ್ತ ಜೀವನದ ನಡೆಸಿರುವ ಶ್ರೀಯುತರು ನಿವೃತ್ತಿಯ ನಂತರ 2010ರಿಂದ ತಮ್ಮ ಕೊನೆಯ ದಿನಗಳವರೆಗೆ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಉತ್ಥಾನ ಮಾಸಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಜೀವನಚರಿತ್ರೆಗಳಾದ ’ಗತ್ತಿಲ್ಲದ ಗುತ್ತಿನವರು’, ’ಸೇವಾಬಂಧು’ ಮುಂತಾದವು ಇವರ ಸ್ವಂತ ಕೃತಿಗಳು. ’ಶ್ರೀಪದ’ ಉದ್ಯಾವರ ಮಾಧವಾಚಾರ್ಯರ ’ಲಗು-ಬಿಗು ಪ್ರಬಂಧಗಳು’ ಮುಂತಾದವು ಇವರ ಸಂಪಾದಿತ ಕೃತಿಗಳು. ಸೀತಾರಾಮ್ ಗೋಯಲ್ ಅವರ ‘ಮುಸ್ಲಿಂ ಪ್ರತ್ಯೇಕತಾವಾದ’, ‘ಭಾರತದ ಸೆಕ್ಯುಲರಿಸಂ’, ‘ಇಸ್ಲಾಂ ಆಕ್ರಾಂತ-ಹಿಂದೂ ದೇವಾಲಯಗಳು’ – ಸೇರಿದಂತೆ ಹಲವಾರು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ಧಾರೆ.
ಹಾರ್ಯಾಡಿ ಮಂಜುನಾಥ್ ಭಟ್ ನಿಧನ
Month : August-2025 Episode : Author :




