ಕಾಲೇಜು ವಿದ್ಯಾರ್ಥಿಗಳಿಗಾಗಿ,’ಉತ್ಥಾನ’ ಪ್ರಬಂಧ ಸ್ಪರ್ಧೆ – 2025
ವಿಷಯ: ಶತಮಾನ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ: ವಿಚಾರ, ವಿಶೇಷತೆ ಮತ್ತು ಕೊಡುಗೆ.
1925ರಲ್ಲಿ ವಿದ್ಯಾರ್ಥಿಗಳ, ಯುವಜನರ ನಡುವೆ ಪ್ರಾರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ದೇಶಾದ್ಯಂತ ತನ್ನ ಬೇರು-ಬಿಳಲುಗಳನ್ನು ವಿಸ್ತರಿಸಿಕೊಂಡಿದೆ. ಭಾರತದಾಚೆಗೂ ಸಂಘದ ರೆಂಬೆ-ಕೊಂಬೆಗಳು ಚಾಚಿವೆ. ಜಾತಿ, ಭಾಷೆ, ಪ್ರಾಂತಗಳ ಗಡಿ-ಬೇಲಿಗಳನ್ನು ದಾಟುತ್ತಾ ಸಮಾಜಜೀವನದ ಎಲ್ಲ ರಂಗಗಳಲ್ಲಿ ಸಂಘ ವ್ಯಾಪಿಸಿದೆ. ಆರಂಭದ ದಿನಗಳಿಂದಲೂ ಟೀಕೆ, ಟಿಪ್ಪಣಿ, ಪ್ರಶ್ನೆ, ವಿರೋಧಗಳನ್ನು ಎದುರಿಸುತ್ತಲೇ ಸಂಘ ’ದೇಶ ಕಟ್ಟುವ’ ತನ್ನ ಕಾಯಕವನ್ನು ಶಾಂತವಾಗಿ ಅವಿಶ್ರಾಂತವಾಗಿ ಮಾಡುತ್ತಲೇ ಇದೆ.
ಜಾಗತಿಕ ಪ್ರಭಾವಗಳು, ಚಿಕ್ಕದಾಗುತ್ತಿರುವ ಕುಟುಂಬಗಳು, ಹೆಚ್ಚುತ್ತಿರುವ ವ್ಯಕ್ತಿಕೇಂದ್ರಿತ ಬದುಕು – ಮೊದಲಾದ ಸನ್ನಿವೇಶಗಳಿದ್ದರೂ ಪ್ರತಿವರ್ಷ ಸಮಾಜಕಾರ್ಯಕ್ಕಾಗಿ ವಿದ್ಯಾವಂತ ಯುವಸಮುದಾಯ ಸಂಘದಂಗಳಕ್ಕೆ ಬರುತ್ತಲೇ ಇದ್ದಾರೆ. ಏನಿದು ಸಂಘದ ಸೆಳೆತ? ಆರೆಸ್ಸೆಸ್ ನ ವಿಚಾರಗಳೇನು? ಅದರ ವಿಶೇಷತೆಗಳೇನು? ರಾಷ್ಟ್ರೀಯ ಏಕಾತ್ಮತೆಗೆ ಕೊಡುಗೆಗಳೇನು?
ಈ ಮೇಲಿನ ವಿಷಯದ ಕುರಿತಾಗಿ ೨೦೦೦ ಪದಗಳಿಗೆ ಮೀರದಂತೆ ಪ್ರಬಂಧವನ್ನು ಬರೆದು ಈ ಕೆಳಗಿನ ವಿಳಾಸಕ್ಕೆ ಇಮೇಲ್ ಅಥವಾ ಅಂಚೆ ಮೂಲಕ ಕಳುಹಿಸಿ.
ಬಹುಮಾನಗಳು
ಮೊದಲ ಬಹುಮಾನ: ರೂ. 15,೦೦೦/-
ಎರಡನೆಯ ಬಹುಮಾನ: ರೂ. 12,೦೦೦/-
ಮೂರನೆಯ ಬಹುಮಾನ: ರೂ. 10,೦೦೦/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. 2,೦೦೦/-
ಸ್ಪರ್ಧೆಯ ನಿಯಮಗಳು:
ಈ ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ.
ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜೊತೆಗೆ ಭಾವಚಿತ್ರವೂ ಇರಬೇಕು.
ಪ್ರಬಂಧವನ್ನು ನುಡಿ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ಪಿಡಿಎಫ್ ಮತ್ತು word file – ಎರಡನ್ನೂ) [email protected] – ಈ ವಿಳಾಸಕ್ಕೆ ಇ-ಮೇಲ್ ಮೂಲಕವೂ ಕಳುಹಿಸಬಹುದು. ಜೆರಾಕ್ಸ್/ಪೋಟೋ ಪಿಡಿಎಫ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.
ಬಹುಮಾನಿತ ಪ್ರಬಂಧಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸಿಕೊಳ್ಳುವ ಹಕ್ಕನ್ನು ’ಉತ್ಥಾನ’ವು ಕಾಯ್ದಿರಿಸಿಕೊಂಡಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಬಂಧವನ್ನು ಹಿಂದಿರುಗಿಸುವ ವ್ಯವಸ್ಥೆ ಇರುವುದಿಲ್ಲ.
ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಪ್ರಬಂಧ ನಮಗೆ ತಲಪಲು ಕೊನೆಯ ದಿನಾಂಕ: ಅಕ್ಟೋಬರ್ 10, 2025
ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:
ಸಂಪಾದಕರು
’ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – 2025
’ಕೇಶವ ಶಿಲ್ಪ’, ಕೆಂಪೇಗೌಡನಗರ ಮುಖ್ಯರಸ್ತೆ,
ಕೆಂಪೇಗೌಡನಗರ, ಬೆಂಗಳೂರು – 560 004
ದೂರವಾಣಿ: 77954 41894
ಇ-ಮೇಲ್: [email protected]




