ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ನವೆಂಬರ್ 2018 > ಶತ್ರುಗಳನ್ನು ಸದೆಬಡಿಯಲು ರಕ್ಷಣಾಬಲಗಳ ಸಾಮರ್ಥ್ಯ ಹಿಂದೆಂದಿಗಿಂತ ಹೆಚ್ಚು ಸಮೃದ್ಧಗೊಂಡಿದೆ : ನಿರ್ಮಲಾ ಸೀತಾರಾಮನ್

ಶತ್ರುಗಳನ್ನು ಸದೆಬಡಿಯಲು ರಕ್ಷಣಾಬಲಗಳ ಸಾಮರ್ಥ್ಯ ಹಿಂದೆಂದಿಗಿಂತ ಹೆಚ್ಚು ಸಮೃದ್ಧಗೊಂಡಿದೆ : ನಿರ್ಮಲಾ ಸೀತಾರಾಮನ್

ನರೇಂದ್ರ ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಜಟಿಲವಾದದ್ದು ಮತ್ತು ತೀಕ್ಷ್ಣಮತಿಯನ್ನು ಅಪೇಕ್ಷಿಸುವ ಸಚಿವಖಾತೆ ‘ರಕ್ಷಣಾ ಮಂತ್ರಾಲಯ’. ಅಂತಹ ಮಹತ್ತರ ಮಂತ್ರಾಲಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್ ಅವರು ಹೊಂದಿದ್ದಾರೆ. ‘ಉತ್ಥಾನ’ ಮಾಸಪತ್ರಿಕೆಗಾಗಿ  ಇತ್ತೀಚೆಗೆ ಬೆಂಗಳೂರಿನಲ್ಲಿ ಮಾನ್ಯ ಸಚಿವರ ಸಂದರ್ಶನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ದೇಶದ ರಕ್ಷಣಾ ವ್ಯವಸ್ಥೆಯ ಹೆಚ್ಚಿನ ಗುಣವತ್ತತೆಗಾಗಿ ಕೇಂದ್ರಸರ್ಕಾರ ಕೈಗೊಳ್ಳುತ್ತಿರುವ ಹಲವು ಉಪಕ್ರಮಗಳ ಬಗೆಗೆ ವಿವರಣೆ ನೀಡಿದರು.  ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಪ್ರಶ್ನೆ: ಭಾಜಪ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಹತ್ತ್ವದ ರಕ್ಷಣಾ ಖಾತೆಯ ಸಚಿವರಾಗಿರುವ ನಿಮ್ಮ ದೃಷ್ಟಿಯಲ್ಲಿ ದೇಶದಭದ್ರತೆಯ ಸುವ್ಯವಸ್ಥೆಯ ಸಾಕಾರಕ್ಕಾಗಿ ಇರುವ ಅವಕಾಶಗಳು ಹಾಗೂ ಸಾಮರ್ಥ್ಯಗಳು ಯಾವಾವವು?

ಉತ್ತರ: ಸದ್ಯದ ಪರಿಸ್ಥಿತಿಯಲ್ಲಿ, ನಮ್ಮ ಆದ್ಯ ಗಮನವು ಸೇನೆಯನ್ನು ಸಂಪೂರ್ಣ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೊಂದುವಂತೆ ಸಜ್ಜುಗೊಳಿಸುವುದಕ್ಕೆ ನೀಡಲಾಗಿದೆ. ಈ ಹಿಂದೆ ಇದ್ದಂಥ ಶಸ್ತ್ರಾಸ್ತ್ರಗಳ ಕೊರತೆಯನ್ನು ತೊಡೆದುಹಾಕುವ ಮೂಲಕ, ಸೇನೆಯ ಶಸ್ತ್ರಸಾಮರ್ಥ್ಯವನ್ನು ಸಮೃದ್ಧವಾಗಿಸುತ್ತಿದ್ದೇವೆ. ದೇಶದ ಗಡಿಪ್ರದೇಶದುದ್ದಕ್ಕೂ ಸಂಪರ್ಕವ್ಯವಸ್ಥೆಯು ಸಮರ್ಪಕವಾಗಿದೆ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳುತ್ತಿದ್ದೇವೆ. ವಾಯುಸೇನೆಯೂ ಯಾವುದೇ ಕೊರತೆ ಇಲ್ಲದೆ, ತನ್ನ ಕಾರ್ಯವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದುವಂತೆ ನೋಡಿಕೊಳ್ಳುತ್ತಿದ್ದೇವೆ.

ಪ್ರಶ್ನೆ: ನಮ್ಮ ದೇಶದ ರಕ್ಷಣಾ ಮಂತ್ರಿಯಾಗಿ ನೀವು ಹಲವು ಮಿಲಿಟರಿ ಕ್ಯಾಂಪ್‌ಗಳಿಗೆ, ಗಡಿಪ್ರದೇಶಗಳಿಗೆ ಭೇಟಿ ನೀಡಿದ್ದೀರಿ. ಬಂಗ್ಲಾದೇಶೀಯರ ಅಕ್ರಮ ವಲಸೆ ಮತ್ತು ಗಡಿಭದ್ರತೆಯ ಬಗ್ಗೆ ತಮ್ಮ ವಿಶ್ಲೇಷಣೆ ಏನು? ಈ ದೃಷ್ಟಿಯಲ್ಲಿ ನಮ್ಮ ಗಡಿಪ್ರದೇಶಗಳು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿವೆ?

ಉತ್ತರ: ಈ ವಿಚಾರವಾಗಿ ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆ ಜೊತೆಜೊತೆಯಾಗಿ ಕಾರ್ಯನಿರ್ವಹಿಸುತ್ತಿವೆ. ಅಕ್ರಮ ಒಳನುಸುಳುವಿಕೆ ಗಂಭೀರ ಸಮಸ್ಯೆಯೇ ಆಗಿದೆ. ಗಡಿಪ್ರದೇಶಗಳಲ್ಲಿ ಮಾರುವೇ?ದಲ್ಲಿ ಬರುತ್ತಿರುವ ಉಗ್ರಗಾಮಿಗಳನ್ನೇ ಆಗಲಿ, ಅಕ್ರಮ ವಲಸಿಗರ ಪ್ರವೇಶವನ್ನೇ ಆಗಲಿ ನಾವು ಸಮರ್ಥವಾಗಿ ತಡೆಯುತ್ತಿದ್ದೇವೆ. ಗೃಹ ಇಲಾಖೆಯ ಜೊತೆಗೂಡಿ, ಗಡಿಪ್ರದೇಶ ಮತ್ತು ಭಾರತದ ಎಲ್ಲೆಡೆಯಲ್ಲೂ ಸಕ್ರಿಯವಾಗಿ ಅಕ್ರಮ ವಲಸೆಯನ್ನು, ಉಗ್ರಗಾಮಿಗಳ ಒಳನುಸುಳುವಿಕೆಯನ್ನು ತಡೆಯಲಾಗುತ್ತಿದೆ.

ಗಡಿಭದ್ರತೆ ಎನ್ನುವ ವಿಶಾಲ ಚೌಕಟ್ಟನ್ನು ಹೊಂದಿರುವ ವಿಚಾರಕ್ಕೆ ಬಂದಾಗ, ನಿರಂತರವಾಗಿ ಮಿಲಿಟರಿ ತಾಲೀಮುಗಳು ಮತ್ತು ವಾಯುಸೇನೆಯ ಅಭ್ಯಾಸಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ನಡೆದ ’ಗಗನಶಕ್ತಿ’ ಕಾರ್ಯಾಚರಣೆಯು ನಮ್ಮ ವಾಯುಸೇನೆಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಗಡಿಪ್ರದೇಶಗಳಿಗೆ ಅಗತ್ಯವಿರುವ ಸೈನಿಕಪಡೆಗಳನ್ನು, ಯುದ್ಧಸಾಮಗ್ರಿಗಳನ್ನು ೨೪ ಗಂಟೆಯ ಒಳಗೆ, ರಕ್ಷಣಾ ಸಂಪನ್ಮೂಲಗಳು ದೇಶದ ವಿವಿಧೆಡೆಗಳಲ್ಲಿ ಹರಡಿದ್ದರೂ ಕೂಡ, ಯಾವುದೇ ಹೆಚ್ಚಿನ ಕಷ್ಟವಿಲ್ಲದೆ ತಲಪಿಸಬಹುದು ಎನ್ನುವುದನ್ನು ಈ ಕಾರ್ಯಾಚರಣೆ ಸಾಬೀತುಪಡಿಸಿದೆ. ಈ ರೀತಿಯಾಗಿ ಸರಹದ್ದು ಹಾಗೂ ನಾಗರಿಕ ರಕ್ಷಣಾ ದೃಷ್ಟಿಯಿಂದ ಎಂತಹದ್ದೇ ವಿಪತ್ಕರ ಸನ್ನಿವೇಶಗಳು ಎದುರಾದರೂ ಅವುಗಳನ್ನು ಎದುರಿಸಲು ಸರ್ವಸನ್ನದ್ಧವಾಗಿರಲು ಆದ್ಯತೆಯನ್ನು ನೀಡುತ್ತಿದ್ದೇವೆ.

ಪ್ರಶ್ನೆ: ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ರಕ್ಷಣಾ ಇಲಾಖೆಯಲ್ಲಿ ಆಗಿರುವಂತಹ ಗಮನಾರ್ಹ ಬದಲಾವಣೆಗಳು ಏನೇನು?

ಉತ್ತರ: ಮೊದಲನೆಯದಾಗಿ, ನಿಮ್ಮ ನೆನಪಿನಲ್ಲಿ ಇದ್ದರೆ, ಮೋದಿ ನೇತೃತ್ವದ ಈ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಮುಖವಾಗಿ ಚರ್ಚೆಯಾಗುತ್ತಿದ್ದ ವಿಚಾರ ಎಂದರೆ ನಮ್ಮ ಭೂಸೇನೆ, ವಾಯುಸೇನೆ, ನೌಕಾಸೇನೆಗಳು ಯುದ್ಧದ ಪರಿಸ್ಥಿತಿ ಎದುರಾದರೆ ಸ್ವರಕ್ಷಣೆಗೆ ಅಗತ್ಯವಾದಷ್ಟು ಶಸ್ತ್ರಸನ್ನದ್ಧವಾಗಿವೆಯೇ ಎನ್ನುವುದಾಗಿತ್ತು. ಈ ಮೂರೂ ಪಡೆಗಳು ಶತ್ರುಗಳ ಜೊತೆಗೆ ಹೋರಾಡಿ ಗೆಲ್ಲಲು ಅಗತ್ಯವಾದಷ್ಟು ಶಸ್ತ್ರಾಸ್ತ್ರಗಳು ಅವುಗಳ ಬಳಿ ಇವೆಯೇ; ಬುಲೆಟ್‌ಪ್ರೂಫ್ ಸಮವಸ್ತ್ರಗಳು ಇವೆಯೇ; ಏರ್‌ಕ್ರಾಫ್ಟ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲವೇ? – ಮುಂತಾದ ಪ್ರಶ್ನೆಗಳು ದಿನನಿತ್ಯ ಕೇಳಿಬರುತ್ತಿದ್ದವು. ಅದೇ ಇಂದು, ಬುಲೆಟ್‌ಪ್ರೂಫ್ ಸಮವಸ್ತ್ರದಿಂದ ಹಿಡಿದು ಸಮರ್ಥ ಏರ್‌ಕ್ರಾಫ್ಟ್, ಶಸ್ತ್ರಾಸ್ತ್ರ ಮುಂತಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಮ್ಮ ರಕ್ಷಣಾಬಲ ಅತ್ಯಂತ ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ನೆಲ, ಜಲ, ವಾಯುಪಡೆ – ಈ ನಮ್ಮ ಯಾವುದೇ ಪಡೆಯು ಬಲಹೀನತೆಯನ್ನು ಹೊಂದಿಲ್ಲ. ನನ್ನ ಪ್ರಕಾರ, ಇದುವೇ ಅತ್ಯಂತ ಗುರುತರವಾದ ಬದಲಾವಣೆ.

ಪ್ರಶ್ನೆ: ಇತ್ತೀಚೆಗೆ ತಾವು ಉದ್ಘಾಟಿಸಿದ ’ಡಿಫೆನ್ಸ್ ಸ್ಟಾರ್ಟ್‌ಅಪ್ ಚಾಲೆಂಜ್’ ಕುರಿತಾಗಿ ಸಂಕ್ಷಿಪ್ತವಾಗಿ ದಯವಿಟ್ಟು ತಿಳಿಸುವಿರಾ?

ಉತ್ತರ: ಡಿಫೆನ್ಸ್ ಸ್ಟಾರ್ಟ್‌ಅಪ್ ಚಾಲೆಂಜ್‌ನಲ್ಲಿ, ನಮ್ಮ ಇಲಾಖೆಯು ಕೆಲವು ಸವಾಲುಗಳನ್ನು ಆಯ್ಕೆಮಾಡಿಕೊಂಡಿದೆ. ಈ ಸವಾಲುಗಳನ್ನು ಯುವಜನರ ಮುಂದಿಡಲಾಗಿದೆ. ನಾವು ಅವರಿಂದ ಇವುಗಳಿಗೆ ಪರಿಹಾರವನ್ನು ಬಯಸುತ್ತಿದ್ದೇವೆ. ಪರಿಹಾರವು ಸಂಬಂಧಿತ ಪಡೆಯ ಅರ್ಹ ಅಧಿಕಾರಿಗಳಿಂದ ಪರೀಕ್ಷಿಸಲ್ಪಡುತ್ತದೆ. ಸಂಬಂಧಿತ ಪಡೆಗೆ ಬಳಸಿಕೊಳ್ಳಬಹುದಾದ, ಸೂಕ್ತವಾದ ಪರಿಹಾರ ಎಂದು ಪರಿಗಣಿಸಲ್ಪಟ್ಟಲ್ಲಿ, ನಾವು ಅದರ ಸ್ವಾಮ್ಯವನ್ನು (ಪೇಟೆಂಟ್) ಪಡೆಯುತ್ತೇವೆ; ಮತ್ತು ವ್ಯಾವಹಾರಿಕ ಮಟ್ಟದಲ್ಲಿ ನಿರ್ಮಾಣಕಾರ್ಯದಲ್ಲಿ ಅದನ್ನು ಬಳಸಿಕೊಳ್ಳಲಾಗುತ್ತದೆ.

ಪ್ರಶ್ನೆ: ಸಾಮಾಜಿಕ ಜಾಲತಾಣಗಳಲ್ಲಿ, ಆಗಾಗ ಚರ್ಚೆಯಾಗುವ ವಿಷಯವೆಂದರೆ, ’ನಮ್ಮ ಶಾಲೆಗಳಲ್ಲಿ ಕಡ್ಡಾಯವಾಗಿ ಸೇನಾ ತರಬೇತಿ ಇರಬೇಕು ಮತ್ತು ಕನಿಷ್ಠ ಎರಡು ವರ್ಷಗಳಾದರೂ ಸೇನೆಯಲ್ಲಿ ಸೇವೆಯನ್ನು ಮಾಡಬೇಕು’ ಎನ್ನುವುದು. ಈ ಅಭಿಪ್ರಾಯಗಳಿಗೆ ತಮ್ಮ ಪ್ರತಿಕ್ರಿಯೆ ಏನು?

ಉತ್ತರ: ಹೌದು, ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿರುವುದನ್ನು ನಾನೂ ಗಮನಿಸಿದ್ದೇನೆ. ಆದರೆ ನಾವು ಸದ್ಯಕ್ಕೆ ಈ ವಿಚಾರದ ಕುರಿತಾಗಿ ಯಾವುದೇ ನಿರ್ಧಾರವಾಗಲಿ, ಯೋಚನೆಯಾಗಲಿ ಮಾಡಿಲ್ಲ.

ಪ್ರಶ್ನೆ: ಹೆಣ್ಣುಮಕ್ಕಳಿಗೆ ಸೇನೆಯಲ್ಲಿ ಅವಕಾಶ ನೀಡುವ ಕುರಿತಾಗಿ ಯಾವ ರೀತಿಯ ಬದಲಾವಣೆಯಾಗಿದೆ?

ಉತ್ತರ: ನರೇಂದ್ರ ಮೋದಿಯವರೇ ಸ್ವತಃ ಈ ವಿಚಾರವಾಗಿ ಸ್ಪ?ತೆ ನೀಡಿದ್ದಾರೆ. ಹೆಣ್ಣುಮಕ್ಕಳಿಗೆ ಸೇನೆಯಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ. ಅಲ್ಪಾವಧಿ ಸೇವೆಯಿಂದ (ಶಾರ್ಟ್ ಸರ್ವಿಸ್ ಕಮಿಷನ್) ಮುಂದುವರಿದು ಪೂರ್ಣಾವಧಿ ಸೇವೆಯಲ್ಲಿ (ಪರ್ಮನೆಂಟ್ ಕಮಿಷನ್) ಸೇವೆ ಸಲ್ಲಿಸಲು ಈಗ ಹೆಣ್ಣುಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ.

ಪ್ರಶ್ನೆ: ಇತ್ತೀಚಿನ ಮಾಧ್ಯಮ ವರದಿಗಳು ಕಾಶ್ಮೀರದ ಯುವಕರು ಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳುತ್ತಿವೆ; ಉದಾಹರಣೆಗೆ ಈಚೆಗೆ ಹುತಾತ್ಮರಾದ ಶಹೀದ್ ಔರಂಗಜೇಬ್. ಇದೇ ಸಮಯದಲ್ಲಿ, ಕಣಿವೆಯ ಯುವಕರು ಉಗ್ರವಾದವನ್ನು ಕೂಡ ಅಪ್ಪಿಕೊಳ್ಳುತ್ತಿದ್ದಾರೆನ್ನಲಾಗಿದೆ. ಈ ಪರಿಸ್ಥಿತಿಯನ್ನು ನೀವು ಯಾವ ರೀತಿಯಾಗಿ ನೋಡುತ್ತೀರಿ?

ಉತ್ತರ: ಶಹೀದ್ ಔರಂಗಜೇಬ್ ವಿಚಾರವಾಗಿ ತಾವು ಹೇಳಿರುವುದರಿಂದ, ನಾನು ಹೇಳಲೇಬೇಕಾದ ವಿ?ಯಗಳು ಇವೆ. ನಾನು ಔರಂಗಜೇಬನ ಮನೆಗೆ ಹೋಗಿದ್ದ ಸಂದರ್ಭದಲ್ಲಿ, ಆತನ ಕುಟುಂಬ ಮತ್ತು ಹಳ್ಳಿಯವರೆಲ್ಲರೂ ನನ್ನನ್ನು ಭೇಟಿಮಾಡಲೆಂದು ಬಂದಿದ್ದರು. ಮನೆಗೆ ಬರುತ್ತಿದ್ದವರು ಈತನ ಸಾವಿನ ಕುರಿತಾಗಿ ಸಹಜವಾಗಿಯೆ ಅತ್ಯಂತ ದುಃಖವನ್ನು ವ್ಯಕ್ತಪಡಿಸಿದರು. ಆದರೆ ಆತನ ತಾಯಿಯ ಮಾತು ಹೀಗಿತ್ತು: “ನನಗೆ ಇನ್ನೂ ನಾಲ್ಕು ಜನ ಮಕ್ಕಳಿದ್ದಾರೆ. ಇವರೆಲ್ಲರನ್ನೂ ನಾನು ಸೇನೆಗೆ ಸೇರಿಸಲು ಬಯಸುತ್ತೇನೆ. ತನ್ಮೂಲಕ ಕಣಿವೆಯಲ್ಲಿ ಅತ್ಯಂತ ಬಲಿ?ವಾದ ಸೇನೆಯನ್ನು ನಾವು ಹೊಂದಬಹುದು. ಈ ರೀತಿಯ ಉಗ್ರವಾದವನ್ನು ನಾವು ಒಪ್ಪಿಲೊಳ್ಳಲು ಸಾಧ್ಯವೇ ಇಲ್ಲ. ಕಣಿವೆಯು ಸಹಜಸ್ಥಿತಿಗೆ ಮರಳಲು ಭಾರತೀಯ ಸೇನೆಗೆ ಯಾವ ಮಟ್ಟಿನ ಸಹಾಯ ಮಾಡಲೂ ನಾವು ಸಿದ್ಧರಿದ್ದೇವೆ.” ಆದರೆ ಇಂತಹ ಕುಟುಂಬಗಳಿಗೆ ಬೆದರಿಕೆಯೂ ಇದೆ ಎನ್ನುವುದನ್ನೂ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಎರಡೂ ವಿಚಾರಗಳನ್ನು, ಅಂದರೆ ಸೇನೆಗೆ ಕಣಿವೆಯ ಯುವಜನತೆ ಸೇರುತ್ತಿರುವುದು ಮತ್ತು ಅವರ ಕುಟುಂಬಗಳಿಗೆ ಭದ್ರತೆ ಒದಗಿಸುವುದು – ಈ ಸವಾಲನ್ನು ಜೊತೆಜೊತೆಯಾಗಿ ಸ್ವೀಕರಿಸಿ ಪರಿಹಾರವನ್ನು ಯೋಜಿಸುತ್ತಿದ್ದೇವೆ.

ಪ್ರಶ್ನೆ: ಎ.ಎಫ್.ಎಸ್.ಪಿ.ಎ. (ಆರ್ಮ್ಡ್ ಫೋರ್ಸಸ್ ಸ್ಪೆಷಲ್ ಪವರ್ ಆಕ್ಟ್ – ಸಶಸ್ತ್ರಪಡೆಗಳ ವಿಶೇಷ ಅಧಿಕಾರ ಕಾಯಿದೆ) ಕುರಿತಾಗಿ ’ಮಾನವಹಕ್ಕುಗಳ ಉಲ್ಲಂಘನೆ’ ಎನ್ನುವ ದೊಡ್ಡ ಕೂಗು ಕೇಳಿಬರುತ್ತದೆ. ಇದರ ವಾಸ್ತವಾಂಶ ಏನು?

ಉತ್ತರ: ಸದ್ಯಕ್ಕೆ ಇದು ನ್ಯಾಯಾಲಯದ ಅಂಗಳದಲ್ಲಿದೆ. ಹಲವು ಸೈನಿಕರು, ಅಧಿಕಾರಿಗಳು ತಮ್ಮ ಸುರಕ್ಷತೆಯನ್ನು ಬಯಸಿದ್ದರು. ಅವರೂ ನ್ಯಾಯಾಲಯದ ಮೊರೆಹೋಗಿದ್ದಾರೆ. ಈ ವಿಚಾರವಾಗಿ ಸದ್ಯಃ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನ್ಯಾಯಾಲಯ ಏನು ಹೇಳುತ್ತದೆ ಎನ್ನುವುದಕ್ಕೆ ಕಾಯಬೇಕಿದೆ.

ಪ್ರಶ್ನೆ: ಈಶಾನ್ಯ ರಾಜ್ಯಗಳಲ್ಲಿ ಚೀಣಾ ನಿರಂತರವಾಗಿ ಆಕ್ರಮಣಶೀಲವಾಗಿದೆ. ಈಶಾನ್ಯ ರಾಜ್ಯಗಳಲ್ಲಿನ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ತಿಳಿಸಬಹುದೇ?

ಉತ್ತರ: ಅರುಣಾಚಲ ಪ್ರದೇಶದ ಕೆಲವು ಕಡೆಗಳಲ್ಲಿ  ಅತಿಯಾದ ಅಕ್ರಮ ಒಳನುಸುಳುವಿಕೆ ಆಗುತ್ತಿತ್ತು ಮತ್ತು ಈಗ ಅದನ್ನು ಗಡಿಪ್ರದೇಶಗಳಲ್ಲಿ ಸಮರ್ಥವಾಗಿ ತಡೆಹಿಡಿಯಲಾಗಿದೆ. ಇದರ ಪರಿಣಾಮವಾಗಿ ಹಿಮಾಲಯದ ಗಡಿಯುದ್ದಕ್ಕೂ ಪರಿಸ್ಥಿತಿಯು ನಿಯಂತ್ರಣದಲ್ಲಿದೆ.

ಪ್ರಶ್ನೆ: ಗಡಿಪ್ರದೇಶದಲ್ಲಿ ಉಗ್ರರನ್ನು ದೇಶದೊಳಕ್ಕೆ ನುಗ್ಗಿಸುತ್ತಿದ್ದ ಶತ್ರುದೇಶಗಳಿಗೆ ’ಸರ್ಜಿಕಲ್ ಸ್ಟ್ರೈಕ್’ ಬಹಳ ಸ್ಪ?ವಾದ ಉತ್ತರವಾಗಿತ್ತು. ಇದರ ಬಳಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆಯೇ?

ಉತ್ತರ: ಹೌದು, ನಮ್ಮ ಕಡೆಯಿಂದ ಸ್ಪ?ವಾದ ಸಂದೇಶ ತಲಪಿರುವುದನ್ನು ಕಾಣಬಹುದು. ಗಡಿರೇಖೆಯನ್ನು ಮೀರಿ ಬಂದರೆ ಅಥವಾ ಅಕ್ರಮವಲಸಿಗರ ಸೋಗಿನಲ್ಲಿ ಉಗ್ರಗಾಮಿಗಳು ದೇಶದ ಒಳಕ್ಕೆ ಬಂದರೆ ಅವರನ್ನು ನಾವು ನಿರ್ದಾಕ್ಷಿಣ್ಯವಾಗಿ ಮುಗಿಸುತ್ತೇವೆ ಎನ್ನುವ ಸಂದೇಶವನ್ನು ಈಗ ಶತ್ರುಗಳು ಅರಿತುಕೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್‌ನಲ್ಲಿ ನಾವು ಯಾವತ್ತೂ ಮರೆಯಬಾರದ ವಿಚಾರವೆಂದರೆ – ನಮ್ಮ ಸೈನಿಕರು ಮಲಗುತ್ತಿದ್ದ ನೆಲೆಗಳ ಮೇಲೆ ದಾಳಿ ನಡೆಸಿ, ಸೈನಿಕರ ಜೀವವನ್ನು ಅವರು ತೆಗೆಯುತ್ತಿದ್ದರು; ಮತ್ತು ಅದಕ್ಕೆ ನಾವು ಯಾವುದೇ ಪ್ರತ್ಯುತ್ತರ ನೀಡಲು ಸಾಧ್ಯವಾಗಬಾರದು ಎನ್ನುವುದು ಅವರ ನಿರೀಕ್ಷೆಯಾಗಿತ್ತು. ಆದರೆ ಸರ್ಜಿಕಲ್ ಸ್ಟ್ರೈಕ್ ಮೂಲಕ ನಾವು ಅವರಿಗೆ ಸ್ಪ?ವಾಗಿ ರವಾನಿಸಿದ ಸಂದೇಶವೆಂದರೆ – ’ಉಗ್ರಗಾಮಿಗಳು ನೀವು ನಮ್ಮನ್ನು ತಲಪಲು ಸಾಧ್ಯ ಎನ್ನುವುದಾದರೆ, ನಮಗೆ ನಿಮ್ಮನ್ನು ತಲಪುವುದು ಅಸಾಧ್ಯವೇನಲ್ಲ. ನಿಮ್ಮನ್ನು ಸದೆಬಡಿಯಲು ನಮ್ಮ ಸೇನೆ ಎಲ್ಲ ಸಾಮರ್ಥ್ಯವನ್ನು ಹೊಂದಿದೆ’ ಎನ್ನುವುದಾಗಿದೆ.

ಪ್ರಶ್ನೆ: ರಜೆಯ ಮೇಲೆ ಊರಿಗೆ ಬರುವ ಹಲವರು ಸೈನಿಕರ ಮಾತು ಎಂದರೆ ’ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ನಮಗೆ ಆತ್ಮವಿಶ್ವಾಸ ಹೆಚ್ಚಿದೆ’ – ಎನ್ನುವುದಾಗಿದೆ. ಇದಕ್ಕೆ ಕಾರಣ ಏನು?

ಉತ್ತರ: ನರೇಂದ್ರ ಮೋದಿಯವರು ಸೇನಾಪಡೆಗಳಿಗೆ, ಅವಶ್ಯವಾದ ಸೂಕ್ತ ಕ್ರಮವನ್ನು ಕೈಗೊಳ್ಳಲು ಸ್ಥಳೀಯ ಮಟ್ಟದಿಂದ ಸ್ವಾತಂತ್ರ್ಯವನ್ನು ನೀಡಿದ್ದಾರೆ. ’ರಿಮೋಟ್ ಕಂಟ್ರೋಲ್’ ಎನ್ನುವ ವ್ಯವಸ್ಥೆ ಈಗ ಇಲ್ಲ. ಅಗತ್ಯ ಕಾರ್ಯಾನುಷ್ಠಾನದ ಸ್ವಾತಂತ್ರ್ಯವನ್ನು (ಪ್ರೊಫೆಷನಲ್ ಫ್ರೀಡಂ) ಸೇನೆಯು ಪಡೆದುಕೊಂಡಿರುವುದೇ ಈ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ.
ಪ್ರಶ್ನೆ: ನಿಮ್ಮ ಕಾರ್ಯಯೋಜನೆಗಳ ಅನುಷ್ಠಾನದ ವಿಷಯಕ್ಕೆ ಬಂದಾಗ ಪ್ರಧಾನಿಗಳ ಕಾರ್ಯಾಲಯ ಮತ್ತು ಅಧಿಕಾರಿವರ್ಗ ಸಕಾರಾತ್ಮಕವಾಗಿ ಸಹಕರಿಸುತ್ತಿವೆ ಎಂದು ನಿಮಗೆ ಅನಿಸಿದೆಯೆ?

ಉತ್ತರ: ಖಂಡಿತವಾಗಿಯೂ; ಅವರೆಲ್ಲರ ಸಂಪೂರ್ಣವಾದ ಸಹಕಾರವಿರುವ ಕಾರಣದಿಂದಲೇ, ನಾನು ಇ?ರಮಟ್ಟಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ.

ಪ್ರಶ್ನೆ: ಕೊನೆಯದಾಗಿ ನಮ್ಮ ಓದುಗರಿಗೆ ನಿಮ್ಮ ಸಂದೇಶ ಏನು?

ಉತ್ತರ: ಸುಳ್ಳುಸುದ್ದಿಗಳಿಗೆ ಕಿವಿಕೊಡದಿರಿ. ಧನಾತ್ಮಕವಾದ ವಿಚಾರಗಳನ್ನು ಹೆಚ್ಚುಹೆಚ್ಚು ತಿಳಿದುಕೊಳ್ಳಿ ಮತ್ತು ಇತರರಿಗೂ ತಿಳಿಸಿ. ಧನ್ಯವಾದಗಳು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ