‘ಸಿನೆಮಾ ಸಂಗೀತಕ್ಕೇ ಹೋಗಬೇಡಿ, ನಿಸರ್ಗದಲ್ಲೇ ಸಂಗೀತವಿದೆ; ಆಸ್ವಾದಿಸಿ’ ಎಂದ ಹಂಸಲೇಖ
ಇನ್ನೂ ತಂತ್ರಜ್ಞಾನ ಮುನ್ನೆಲೆಗೆ ಬಂದಿರದ ಕಾಲ; ಸಿನೆಮಾಗಳು ಇನ್ನೇನು ತನ್ನ ಹೆಜ್ಜೆಗಳನ್ನಿಡುತ್ತ ದೃಢವಾಗಿ ನಿಲ್ಲುವ ಹಂತದಲ್ಲಿದ್ದ ಕಾಲ. ಅಂತಹ ಸಮಯದಲ್ಲಿ ಕನ್ನಡ ಸಿನೆಮಾಕ್ಕೆ ಉತ್ತಮ ಗುಣಮಟ್ಟದ ಸಂಗೀತ, ಸಾಹಿತ್ಯವನ್ನು ನೀಡಿದ ಕೀರ್ತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ಸುಮಾರು 30 ವರ್ಷಗಳಿಂದ ಕನ್ನಡ ಸಿನೆಮಾ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತ ಬಂದಿರುವ ಹಂಸಲೇಖ ಅವರದ್ದು ರಂಗಭೂಮಿ, ಸಿನೆಮಾ, ಜಾನಪದ – ಹೀಗೆ ಸಂಗೀತ-ಸಾಹಿತ್ಯಗಳಲ್ಲಿ ಬಹುಮುಖವಾದ ಮೇರುವ್ಯಕ್ತಿತ್ವ. ಅವರು ಸಂಗೀತಕ್ಷೇತ್ರದ ಯುವಪ್ರತಿಭೆಗಳಿಗೆ ಸದಾ ಮಾರ್ಗದರ್ಶಕರು. ಇತ್ತೀಚೆಗೆ ‘ಉತ್ಥಾನ’ ಮಾಸಪತ್ರಿಕೆ ಹಂಸಲೇಖ ಅವರೊಂದಿಗೆ ನಡೆಸಿದ ಸಂವಾದದ ಪೂರ್ಣಪಾಠವನ್ನು ಇಲ್ಲಿ ನಮ್ಮ ಓದುಗರಿಗಾಗಿ ನೀಡುತ್ತಿದ್ದೇವೆ.