ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಆಗಸ್ಟ್ 2018 > ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ರಾಜಕಾರಣ ಕೇವಲ ಒಂದು ಉಪಕರಣ : ನಿತಿನ್ ಗಡ್ಕರಿ

ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ರಾಜಕಾರಣ ಕೇವಲ ಒಂದು ಉಪಕರಣ : ನಿತಿನ್ ಗಡ್ಕರಿ

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅತ್ಯಂತ ಮಹತ್ತ್ವದ ಖಾತೆಯನ್ನು ಹೊಂದಿರುವವರಲ್ಲಿ ನಿತಿನ್ ಗಡ್ಕರಿ ಪ್ರಮುಖರು. ಮೋದಿಯವರ ಕನಸಿನ ನವಭಾರತದ  ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗವನ್ನು ಪೂರೈಸುವ ಬಾಧ್ಯತೆಯುಳ್ಳ, ದೇಶದ ನವಪೀಳಿಗೆಗಾಗಿ ಮೂಲಭೂತಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾದ ಗುರುತರವಾದ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಕೇಂದ್ರಸಂಪುಟದಲ್ಲಿ ಭೂಸಾರಿಗೆ ಮತ್ತು ಹೆದ್ದಾರಿ, ಜಲಸಾರಿಗೆ ಮತ್ತು ಜಲಸಂಪನ್ಮೂಲ ಹಾಗೂ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆಗಳ ಸಚಿವರಾಗಿರುವ ಗಡ್ಕರಿಯವರನ್ನು ಇತ್ತೀಚೆಗೆ, ಉತ್ಥಾನದ ಆಗಸ್ಟ್ ೨೦೧೮ರ ಸ್ವಾತಂತ್ರ್ಯೋತ್ಸವ ವಿಶೇಷಾಂಕಕ್ಕಾಗಿ, ಸಂದರ್ಶಿಸಲಾಯಿತು. ಸಂದರ್ಭದಲ್ಲಿ ಅವರು ಹೆದ್ದಾರಿಗಳ ಅಭಿವೃದ್ಧಿಕಾರ್ಯಗಳ ಕುರಿತಾಗಿ, ಒಳನಾಡು ಜಲಸಾರಿಗೆ ವಿಸ್ತರಣಾ ಯೋಜನೆಗಳ ಕುರಿತಾಗಿ, ಗಂಗಾ ಪುನರುಜ್ಜೀವನವೂ ಸೇರಿದಂತೆ ಹಲವು ವಿಷಯಗಳನ್ನು ಉದ್ದೇಶಿಸಿ ವಿವರಣೆ ನೀಡಿದರು. ನಿತಿನ್ ಗಡ್ಕರಿ ಜೊತೆಗಿನ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ:

ಪ್ರಶ್ನೆ: ದೇಶದ ಮೂಲಸೌಕರ್ಯಾಭಿವೃದ್ಧಿಯ ಪುನರ್ವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವ ಭಾಜಪ
ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ತತ್ಸಂಬಂಧಿ ಖಾತೆಯ ಸಚಿವರಾಗಿರುವ ನಿಮ್ಮ ದೃಷ್ಟಿಯಲ್ಲಿ ಅವುಗಳ ಸಾಕಾರಕ್ಕಾಗಿ ಇರುವ ಅವಕಾಶಗಳು ಹಾಗೂ ಸಾಮರ್ಥ್ಯಗಳು ಯಾವಾವವು?

ಉತ್ತರ: ನಾವು ಅಧಿಕಾರಕ್ಕೆ ಬಂದ ಬಳಿಕ ಪ್ರಧಾನಮಂತ್ರಿಯವರು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ರಸ್ತೆಸಾರಿಗೆ ವಲಯದಲ್ಲಿ ನಮಗೆ ಅದ್ಭುತವಾದ ಅವಕಾಶಗಳೂ ಸಾಮರ್ಥ್ಯಗಳೂ ಇವೆ. ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ೩.೮ ಲಕ್ಷ ಕೋಟಿ ರೂ. ಮೌಲ್ಯದ ೪೦೩ ಯೋಜನೆಗಳು ಸ್ಥಗಿತಗೊಂಡಿದ್ದವು. ಅದರಲ್ಲಿ ಈಗಲೂ ಕೆಲವು ಸಮಸ್ಯೆಗಳಿವೆ. ಈಗ ಕೂಡ ಒಟ್ಟು ೨೦-೨೫ ಸಾವಿರ ಕೋಟಿ ರೂ, ಅಂದಾಜು ವೆಚ್ಚದ ೨೨-೨೩ ಯೋಜನೆಗಳಿಗೆ ಚಾಲನೆ ದೊರೆತಿಲ್ಲ. ಅವುಗಳಿಗೆ ಚಾಲನೆ ಕೊಡಲು ಪ್ರಯತ್ನಿಸುತ್ತಿದ್ದೇವೆ. ನಾನು ಅಧಿಕಾರ ವಹಿಸಿಕೊಂಡ ಹೊಸದರಲ್ಲಿ ದಿನವೊಂದಕ್ಕೆ ಸರಿಸುಮಾರು ೨ ಕಿ.ಮೀ.ಗಳಷ್ಟು ರಸ್ತೆನಿರ್ಮಾಣದ ಕೆಲಸ ನಡೆಯುತ್ತಿತ್ತು, ೨೦೧೮ರ ಈ ದಿನದ ಹೊತ್ತಿಗೆ ಅದು ೨೮ ಕಿ.ಮೀ.ಗಳ? ಆಗಿದೆ. ೨೦೧೯ರ ಮಾರ್ಚ್ ಸಮಯಕ್ಕೆ ದಿನವೊಂದಕ್ಕೆ ೪೦ ಕಿ.ಮೀ.ಗಳಷ್ಟು ರಸ್ತೆನಿರ್ಮಾಣ ಕಾರ್ಯ ನಡೆಯಬೇಕು ಎನ್ನುವುದು ನಮ್ಮ ಗುರಿ. ಇವೆಲ್ಲ ನಿಜವೇ ಎಂದು ನಿಮಗೆ ಅನಿಸಬಹುದು.

ನೀವು ದೇಶದ ಯಾವುದೇ ಭಾಗಕ್ಕೆ ಹೋದರೂ ನಮ್ಮ ಯೋಜನೆಗಳು ಕಾರ್ಯಗತವಾದದ್ದನ್ನು, ಆಗುತ್ತಿರುವುದನ್ನು ಗಮನಿಸಬಹುದು. ನಮ್ಮನ್ನು ಟೀಕಿಸುವವರೂ ಇದನ್ನು ಒಪ್ಪಿಕೊಳ್ಳುತ್ತಾರೆ.

ಈಗ ನಾವು ೧೨ ಎಕ್ಸ್‌ಪ್ರೆಸ್ ಹೈವೇ ನಿರ್ಮಿಸುತ್ತಿದ್ದೇವೆ. ಭಾರತದಲ್ಲೇ ಮೊದಲ ಬಾರಿಗೆ ಈಗಾಗಲೆ ೨ ಎಕ್ಸ್‌ಪ್ರೆಸ್ ಹೈವೇಗಳನ್ನು ನಿರ್ಮಿಸಿದ್ದೇವೆ. ಒಂದು, ದೆಹಲಿಯ ವರ್ತುಲ ರಸ್ತೆ (ರಿಂಗ್‌ರೋಡ್); ಇದು ದೆಹಲಿಯ ಶೇ. ೨೭ರಷ್ಟು ಮಾಲಿನ್ಯವನ್ನು ಕಡಮೆಗೊಳಿಸಲು ನೆರವಾಗುತ್ತದೆ. ಎರಡನೆಯದ್ದು, ೧೪ ಲೇನ್‌ಗಳ ದೆಹಲಿ-ಮೀರತ್ ಎಕ್ಸ್‌ಪ್ರೆಸ್ ಹೈವೇ. ಪ್ರಸ್ತುತ ಚಂಡೀಗಢದಲ್ಲಿ ಕೆಲಸ ಆರಂಭಿಸಿದ್ದೇವೆ, ಭೂಸ್ವಾಧೀನ ಕಾರ್ಯ ಮುಗಿದಿದೆ. ಮೈಸೂರು-ಬೆಂಗಳೂರು ೮-ಲೇನ್ ಹೈವೇ ನಿರ್ಮಾಣಕಾರ್ಯವೂ ಈಗಾಗಲೇ ಆರಂಭವಾಗಿದೆ. ಮುಂದೆ, ಬೆಂಗಳೂರು-ಹೈದರಾಬಾದ್ ಎಕ್ಸ್‌ಪ್ರೆಸ್‌ವೇ ಕಾರ್ಯವನ್ನು ಸದ್ಯದಲ್ಲೇ ಆರಂಭಿಸಲಿದ್ದೇವೆ.

ಒಂದು ಲಕ್ಷ ಕೋಟಿ ರೂ. ವೆಚ್ಚದ ದೆಹಲಿ-ಮುಂಬಯಿ ಎಕ್ಸ್‌ಪ್ರೆಸ್ ಹೈವೇ ಪ್ರಾಜೆಕ್ಟ್ ಕೂಡ ಆರಂಭಿಸುತ್ತಿದ್ದೇವೆ. ಇದರಲ್ಲಿ ೪೦ ಸಾವಿರ ಕೋಟಿ ರೂ. ವೆಚ್ಚದ ಕೆಲಸ ಈಗಾಗಲೇ ನಡೆದಿದ್ದು ಟೆಂಡರ್  ಕಾರ್ಯಗಳು ಮುಗಿದಿವೆ. ಇದು ಅತ್ಯಂತ ಪ್ರಮುಖ ಪ್ರಾಜೆಕ್ಟ್ ಆಗಿದ್ದು, ದೆಹಲಿ-ಮುಂಬಯಿ ಜೋಡಣೆಯನ್ನು ದೆಹಲಿ-ಅಹಮದಾಬಾದ್-ಸೂರತ್-ಮುಂಬಯಿ ಪ್ರಕಾರ ಮಾಡಿದರೆ ಭೂಸ್ವಾಧೀನಕ್ಕೆ ೧೬ ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ಇದರಂತೆ ಭೂಸ್ವಾಧೀನಕ್ಕೆ ಒಂದು ಹೆಕ್ಟೇರ್‌ಗೆ ೭.೫ ಲಕ್ಷ ಕೋಟಿ ರೂ. ವೆಚ್ಚವಾಗುತ್ತದೆ. ಅದಕ್ಕಾಗಿ ಜೋಡಣೆಯನ್ನು ದೆಹಲಿ-ಆಲ್ವಾರ್‌ಜೈರ-ಸವಾಯ್‌ ಮಾಧೋಪುರ್-ಮಧ್ಯಪ್ರದೇಶದ ಮೂಲಕ ಗುಜರಾತ್‌ನ ವಡೋದರ ಮಾರ್ಗವಾಗಿ ಬದಲಾಯಿಸುತ್ತಿದ್ದೇವೆ. ಇದರಿಂದಾಗಿ ದೆಹಲಿ-ಮುಂಬಯಿ ನಡುವಿನ ದೂರ ೧೨೫ ಕಿ.ಮೀ. ಅಷ್ಟು ಕಡಮೆಯಾಗುತ್ತದೆ. ಅಲ್ಲದೆ ಭೂಸ್ವಾಧೀನ ವೆಚ್ಚವೂ ೧೬ ಸಾವಿರ ಕೋಟಿ ರೂ. ನಷ್ಟು ಕಡಮೆಯಾಗುತ್ತದೆ. ಈ ಯೋಜನೆಯ ಉದ್ದೇಶ ಕೇವಲ ಹೆದ್ದಾರಿಯ ಅಭಿವೃದ್ಧಿಯಷ್ಟೇ ಅಲ್ಲ; ಈ ಹೆದ್ದಾರಿಯು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶದ ಮೂಲನಿವಾಸಿಗಳು ವಾಸಿಸುವ ಗುಡ್ಡಗಾಡುಪ್ರದೇಶ ಹಾಗೂ ಹಿಂದುಳಿದ ಪ್ರದೇಶಗಳ ಮೂಲಕ ಹಾದುಹೋಗುವುದರಿಂದ ಆ ಪ್ರದೇಶಗಳ ಅಭಿವೃದ್ಧಿಗೂ ನೆರವಾಗುತ್ತದೆ ಮತ್ತು ಆಯಾ ರಾಜ್ಯಗಳ ಬೆಳವಣಿಗೆಗೆ ಹೊಸ ಸಾಧನವಾಗಿ ಒದಗುತ್ತದೆ. ಕೈಗಾರಿಕಾ ಬೆಳವಣಿಗೆಗೆ ಕಾರಣವಾಗುವುದಲ್ಲದೆ, ಕೈಗಾರಿಕೆಗಳ ಕೇಂದ್ರೀಕರಣವಾಗುವುದನ್ನು ತಪ್ಪಿಸುತ್ತದೆ. ಉದ್ದಿಮೆಗಳಿಗೆ ಉತ್ತಮ ಹೆದ್ದಾರಿಗಳು ಅತ್ಯವಶ್ಯ. ಇದಕ್ಕಾಗಿ ಎಕ್ಸ್‌ಪ್ರೆಸ್ ಹೈವೇಗಳು ಮತ್ತು ಹೆದ್ದಾರಿಸನಿಹದ ಸ್ಮಾರ್ಟ್‌ಸಿಟಿಗಳನ್ನು ನಿರ್ಮಿಸುವ ಮೂಲಕ ಸರಕುಸಾಗಣೆ ವ್ಯವಸ್ಥೆಯನ್ನು ಪೋಷಿಸುವುದು ನಮ್ಮ ಗುರಿಯಾಗಿದೆ. ಮೂಲಸೌಕರ್ಯಾಭಿವೃದ್ಧಿಯ ವಿ?ಯಕ್ಕೆ ಬಂದಾಗ ಎಲ್ಲವನ್ನೂ ಒಳಗೊಂಡಿರುವಂಥದ್ದು ಈ ಕಾರ್ಯತಂತ್ರ.

ಪ್ರಶ್ನೆ: ಸಾಮಾನ್ಯವಾಗಿ ಭೂಸ್ವಾಧೀನ ಪ್ರಕ್ರಿಯೆಯು ನಿಮ್ಮ ಈ ಮಹತ್ತ್ವಾಕಾಂಕ್ಷೆಯ ಕಾರ್ಯಕ್ಕೆ ಅಡ್ಡಿಯಾಗುತ್ತಿದೆಯೆ? ಈ ಸವಾಲನ್ನು ತಾವು ಹೇಗೆ ಸಮರ್ಥವಾಗಿ ನಿರ್ವಹಿಸುತ್ತಿದ್ದೀರಿ?

ಉತ್ತರ: ಸದ್ಯಃ ನಮಗೆ ಭೂಸ್ವಾಧೀನಕ್ಕೆ ಏನೂ ಅಡ್ಡಿಗಳು ಎದುರಾಗುತ್ತಿಲ್ಲ. ಭೂಸ್ವಾಧೀನದಿಂದಾಗಿ ಮುಂದೆ ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು ಎಂಬುದು ಜನಸಾಮಾನ್ಯರ ಗ್ರಹಿಕೆಯಾಗಿದೆ. ಹೊಸ ಭೂಸ್ವಾಧೀನ ಕಾಯಿದೆಯು ಭೂಸ್ವಾಧೀನದ ದರವನ್ನು ಹೆಚ್ಚಿಸಿದೆ. ಸಾಮಾನ್ಯ ಮಾರುಕಟ್ಟೆ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ದರ ಈಗ ಭೂಮಾಲಿಕರಿಗೆ ಸಿಗುತ್ತಿದೆ. ನಿಜ ಹೇಳಬೇಕೆಂದರೆ ರಸ್ತೆ ಕಾರ್ಯಗಳಿಗೆ ಭೂಸ್ವಾಧೀನ ನೀಡಲು ಅವರು ತಾವಾಗಿಯೇ ಮುಂದೆ ಬರುತ್ತಿದ್ದಾರೆ. ನಾವು ರಸ್ತೆನಿರ್ಮಾಣಕ್ಕಾಗಿ ಯಥೇಚ್ಛವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ; ನಮಗೆ ಯಾವುದೇ ರೀತಿಯ ಅಡ್ಡಿಗಳು ಎದುರಾಗಿಲ್ಲ.

ಪ್ರಶ್ನೆ: ಇಂತಹ ದೊಡ್ಡ ದೊಡ್ಡ ಯೋಜನೆಗಳಿಗೆಲ್ಲಹಣವನ್ನು ಎಲ್ಲಿಂದ ಹೊಂದಿಸುತ್ತೀರಿ?

ಉತ್ತರ: ನಮಗೆ ಹಣದ ಸಮಸ್ಯೆ ಏನೇನೂ ಇಲ್ಲ. ನಮ್ಮ ಇಲಾಖೆಗೆ ಮುಂಗಡಪತ್ರದಲ್ಲಿ ದೊರೆತಿರುವುದು ೫೫ ಸಾವಿರ ಕೋಟಿ ರೂಪಾಯಿಗಳು. ಇದು ಪ್ರತಿವ? ೨೦ ಸಾವಿರ ಕೋಟಿ ರೂ.ಗಳಷ್ಟು ಏರಿಕೆಯಾಗುತ್ತದೆ. ನಾಲ್ಕು ವ?ಗಳ ಬಜೆಟ್‌ನಿಂದ ಒಟ್ಟಾರೆಯಾಗಿ ಸುಮಾರು ೩ ಲಕ್ಷ ಕೋಟಿ ರೂ. ಆಗಬಹುದು. ಅದರಲ್ಲಿ ತೆರಿಗೆ ವಿನಾಯಿತಿಯಿರುವ ಬಾಂಡ್‌ಗಳ ಮೂಲಕ ೭೦ ಸಾವಿರ ಕೋಟಿ ರೂ. ಬರಬಹುದು. ಪ್ರತಿ ವರ್ಷ ಸುಂಕ (ಟೋಲ್) ಸಂಗ್ರಹದಿಂದ ಸುಮಾರು ಹತ್ತು ಸಾವಿರ ಕೋಟಿ ರೂ. ಬರುತ್ತದೆ. ನಾವು ಈಗಾಗಲೆ ೧೦೩ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ೧೫ ವರ್ಷಗಳ ಸುಂಕದ ತೆರಿಗೆಯನ್ನು ಸೆಕ್ಯುರಿಟಿಗೆ ಒಳಪಡಿಸಬೇಕಾಗಿದ್ದು ಅದು ಸುಮಾರು ಒಂದು ಲಕ್ಷ ಕೋಟಿ ರೂ. ಆಗಬಹುದು. ಈ ರೀತಿಯಲ್ಲಿ ಇದು ಸುಮಾರು ೫ ಲಕ್ಷ ಕೋಟಿ ರೂ. ಆಗುತ್ತದೆ. ಇವಲ್ಲದೆ ಸರ್ಕಾರಿ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಕೆಲವು ಯೋಜನೆಗಳಿವೆ. ಆದ್ದರಿಂದ ನಮಗೆ ಹಣದ ಕೊರತೆ ಸಮಸ್ಯೆ ಅಲ್ಲವೇ ಅಲ್ಲ.

ಪ್ರಶ್ನೆ: ಭೂಸ್ವಾಧೀನ, ಉಪಕರಣಗಳ ಸ್ಥಳಾಂತರ ಮೊದಲಾಗಿ ಯಾವುದೇ ಯೋಜನೆಯ ನಿರ್ಮಾಣವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಮಾತ್ರವಲ್ಲ ಕಾರ್ಯಾರಂಭಪೂರ್ವ ಅನುದಾನವನ್ನೂ ಕೂಡ ಖಾಸಗಿ ವಲಯಕ್ಕೆ ನೀಡಲಾಗುತ್ತಿದೆ. ಹೀಗೆ ಯೋಜನಾವೆಚ್ಚದಲ್ಲಿ ಬಹುಪಾಲನ್ನು ಸರ್ಕಾರವೇ ಭರಿಸುತ್ತಿದ್ದರೂ, ಸುಂಕ (ಟೋಲ್) ಸಂಗ್ರಹಿಸುವ ಮೂಲಕ ಖಾಸಗಿ ಕಂಪೆನಿಗಳು ಲಾಭಾಂಶವನ್ನು ಲೂಟಿಮಾಡುತ್ತಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ. ಹೆದ್ದಾರಿಗಳಲ್ಲಿ ಮತ್ತು ಇತರ ಸೌಲಭ್ಯ ಸ್ಥಳಗಳಲ್ಲಿ ಸುಂಕಸಂಗ್ರಹದ ಅಗತ್ಯದ ಬಗ್ಗೆ ನಿಮ್ಮ ಸಮರ್ಥನೆ ಏನು?

ಉತ್ತರ: ನಮ್ಮ ಸರ್ಕಾರದಿಂದ ನಡೆಯುವ ಎಲ್ಲ ಯೋಜನೆಗಳೂ ಪಾರದರ್ಶಕವಾಗಿವೆ. ನಿರ್ಮಿಸು-
ನಿರ್ವಹಿಸು-ಹಸ್ತಾಂತರಿಸು (ಬಿಲ್ಡ್-ಆಪರೇಟ್‌ಟ್ರಾ ಫರ್) ಮಾದರಿಯ ಯೋಜನೆಗಳಲ್ಲಿ ಒಂದು ಕಂಪೆನಿಯು ನಾವು ಯೋಜನೆಯನ್ನು ಪೂರ್ತಿಗೊಳಿಸಿ ೧೦ ವರ್ಷಗಳ ಕಾಲ ಸುಂಕವನ್ನು ಸಂಗ್ರಹಿಸುತ್ತೇವೆ ಎಂದು ಹೇಳುತ್ತದೆ. ಇನ್ನೊಂದು ಕಂಪೆನಿಯು ೯ ವರ್ಷಗಳವರೆಗೆ ಸಂಗ್ರಹಿಸುತ್ತೇವೆ ಎಂದರೆ ಮಗದೊಂದು ಎಂಟು ವ?ಗಳ ಅವಧಿಯನ್ನು ಹೇಳುತ್ತದೆ ಎಂದಿರುವಾಗ, ಯಾವ ಕಂಪೆನಿಯ ಆಯ್ಕೆ ಉತ್ತಮವಾಗಿರುತ್ತದೋ ಆ ಕಂಪೆನಿಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಅನುಮತಿಯನ್ನು ನೀಡುತ್ತೇವೆ. ಸುಂಕ ಸಂಗ್ರಹಿಸುವುದು ಸರ್ಕಾರವೇ. ಪ್ರತಿಯೊಂದು ಒಪ್ಪಂದವೂ ಪಾರದರ್ಶಕವಾಗಿರುತ್ತದೆ. ಉದಾಹರಣೆಗೆ, ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿಯಲ್ಲಿ ಗುತ್ತಿಗೆದಾರ ಕಂಪೆನಿಯು ಬಿಲ್ಲಿನ ಶೇ. ೧೮ರ? ಮೊತ್ತವನ್ನು ಪಡೆಯುತ್ತಿದೆ. ನಾವು ಸಂಪೂರ್ಣ ಪಾರದರ್ಶಕವಾಗಿ, ಭ್ರಷ್ಟಾಚಾರಮುಕ್ತವಾಗಿ ವ್ಯವಹರಿಸುತ್ತೇವೆ. ನನ್ನ ನಾಲ್ಕು ವ?ಗಳ ಅವಧಿಯಲ್ಲಿ,
ನಾವು ೧೦ ಲಕ್ಷ ಕೋಟಿ ರೂ. ಮೊತ್ತದಷ್ಟು ಗುತ್ತಿಗೆಗಳಿಗೆ ಅನುಮತಿ ನೀಡಿದ್ದೇವೆ. ಯಾವನೇ ಗುತ್ತಿಗೆದಾರನು ನನ್ನ ಬಳಿಗೆ ಬಂದಿಲ್ಲ. ಎಲ್ಲ ಪ್ರಕ್ರಿಯೆಗಳೂ ಪಾರದರ್ಶಕವಾಗಿ, ಭ್ರಷ್ಟಾಚಾರರಹಿತವಾಗಿ ಮತ್ತು ಗುಣಮಟ್ಟದ ಖಾತ್ರಿಯನ್ನು ಗಮನದಲ್ಲಿರಿಸಿಕೊಂಡು ನಡೆದಿವೆ.

ಪ್ರಶ್ನೆ: ಭಾರತ್‌ಮಾಲಾ ಮತ್ತು ಸಾಗರ್‌ಮಾಲಾ ಯೋಜನೆಗಳ ಕುರಿತು ದಯವಿಟ್ಟು ವಿವರಿಸುವಿರಾ?

ಉತ್ತರ: ಭಾರತ್‌ಮಾಲಾ ಯೋಜನೆಯು ದೇಶದ ರಸ್ತೆಸಾರಿಗೆಕ್ಷೇತ್ರದ ಬೆಳವಣಿಗೆಗೆ ಮಹತ್ತ್ವದ ಕೊಡುಗೆಯನ್ನು ನೀಡುತ್ತದೆ. ಈ ಯೋಜನೆ ಗುಜರಾತ್‌ನಲ್ಲಿ ಆರಂಭವಾಗಿ, ಮುಂದೆ ರಾಜಸ್ಥಾನ, ಪಂಜಾಬ್‌ಗೆ ಸಾಗುತ್ತದೆ. ಅಲ್ಲಿಂದ ಜಮ್ಮು-ಕಾಶ್ಮೀರವನ್ನು ಒಳಗೊಂಡು, ಆನಂತರ ಹಿಮಾಚಲಪ್ರದೇಶ,
ಉತ್ತರಾಖಂಡದ ಮೂಲಕ ಸಾಗಿ ಉತ್ತರ ಪ್ರದೇಶ, ಬಿಹಾರವನ್ನು ದಾಟಿ ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ ಸೇರಿದಂತೆ ಮಣಿಪುರ-ಮಿಜೋರಂನಲ್ಲಿನ ಇಂಡೋ-ಮ್ಯಾನ್ಮಾರ್ ಗಡಿಯವರೆಗೆ ತಲಪುತ್ತದೆ. ಪಶ್ಚಿಮದಿಂದ ಪೂರ್ವಕ್ಕೆ ಸಂಪರ್ಕಿಸುವ ಈ ಸಂಪರ್ಕಮಾರ್ಗವನ್ನು ನಕಾಶೆಯಲ್ಲಿ ನೋಡಿದರೆ ಭಾರತಮಾತೆಯ ಕೊರಳಿಗೆ ತೋಡಿಸಿದ ಮಾಲೆಯಂತೆ ತೋರುವುದು. ಹಾಗಾಗಿ ಈ ಯೋಜನೆಯನ್ನು ಭಾರತ್‌ಮಾಲಾ ಎಂದು ಹೆಸರಿಸಲಾಗಿದೆ.

ಭಾರತ್‌ಮಾಲಾ ಯೋಜನೆಯಲ್ಲಿ ನಾವು ೬೦ ಸಾವಿರ ಕಿ.ಮೀ. ರಸ್ತೆನಿರ್ಮಾಣಕ್ಕೆ ಯೋಜನೆಯನ್ನು
ಸಿದ್ಧಗೊಳಿಸಿಕೊಂಡಿದ್ದೇವೆ. ಮೊದಲನೇ ಹಂತದಲ್ಲಿ ರೂ. ೭.೫ ಲಕ್ಷ ಕೋಟಿ ವೆಚ್ಚದಲ್ಲಿ ೨೪ ಸಾವಿರ ಕಿ.ಮೀ. ರಸ್ತೆ ನಿರ್ಮಾಣವಾಗಲಿದೆ. ಪ್ರಸಕ್ತ ವರ್ಷದ ಡಿಸೆಂಬರ್ ಕೊನೆಯ ಒಳಗಾಗಿ ಯೋಜನೆಯ ಶೇ.
೫೦ ಭಾಗದಷ್ಟು ಕೆಲಸ ಆರಂಭವಾಗಲಿದೆ.

ಇನ್ನು ಸಾಗರ್‌ಮಾಲಾ ಯೋಜನೆಯನ್ನು ತೆಗೆದುಕೊಂಡರೆ, ಸಮುದ್ರ ಮತ್ತು ಒಳನಾಡಿನ ಜಲಮಾರ್ಗಗಳ ಮೂಲಕ ಸರಕನ್ನು ಸಾಗಿಸುವ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ರೂ. ೧೬ ಲಕ್ಷ ಕೋಟಿಗಳ? ಬಂಡವಾಳವನ್ನು ಹೂಡಲು ಬಯಸಿದ್ದೇವೆ. ಅದರಲ್ಲಿ ಸರಿಸುಮಾರು ರೂ. ೬ ಲಕ್ಷ ಕೋಟಿಯ? ಬಂಡವಾಳವನ್ನು ಬಂದರು-ರೈಲ್ವೇ ನಡುವಣ ಸಂಪರ್ಕವನ್ನು ಉತ್ತಮಗೊಳಿಸಲು ಹಾಗೂ ಬಂದರುಗಳನ್ನು ಆಧುನಿಕೀಕರಣಗೊಳಿಸಲು ಮತ್ತು ಯಂತ್ರಸಜ್ಜಿತಗೊಳಿಸಲು ಹೂಡಲಾಗುತ್ತದೆ. ರೂ. ೨.೮ ಲಕ್ಷ ಕೋಟಿಗಳಷ್ಟು ಮೌಲ್ಯದ ಯೋಜನೆಗಳನ್ನು ಕೈಗೆತ್ತಿಕೊಂಡು ಈಗಾಗಲೇ ಕಾರ್ಯಾರಂಭ ಮಾಡಿದ್ದೇವೆ. ವಿಶೇಷ ಆರ್ಥಿಕ ವಲಯಗಳು (ಎಸ್.ಇ.ಜೆಡ್.), ಕರಾವಳಿ ಅಭಿವೃದ್ಧಿ ವಲಯಗಳು, ಉದ್ದಿಮೆಗಳ ಸಮೂಹ, ಆಟೋಮೊಬೈಲ್ ಸಮೂಹ, ಪೀಠೋಪಕರಣಗಳ ತಯಾರಕರ ಸಮೂಹ ಮತ್ತು ರಾಸಾಯನಿಕ ತಯಾರಕರ ಸಮೂಹಗಳ ಮೂಲಕ ನಾವು ರೂ. ೧೨ ಲಕ್ಷ ಕೋಟಿ ಹೂಡಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಜವಾಹರಲಾಲ್ ನೆಹರೂ ಪೋರ್ಟ್ನಲ್ಲಿ ಒಂದು ಮೊಬೈಲ್ ಕಂಪೆನಿಯು ೫೦ ಎಕರೆ ಜಾಗವನ್ನು ವಿಶೇಷ ಆರ್ಥಿಕ ವಲಯಕ್ಕಾಗಿ ಸ್ವಾಧೀನಪಡಿಸಿಕೊಂಡಿದೆ. ಆ
ಕಂಪೆನಿಯು ಆಗಾಮಿ ಮೂರು ವರ್ಷಗಳ ಒಳಗಾಗಿ ೧ ಲಕ್ಷ ೨೦ ಸಾವಿರ ಜನರಿಗೆ ಉದ್ಯೋಗವನ್ನು ನೀಡುವ ವಾಗ್ದಾನ ನೀಡಿದೆ. ಭಾರತದಲ್ಲಿ ಮೊದಲ ಬಾರಿಗೆ ಈ ರೀತಿ ಬಂದರು ಆಧಾರಿತ ಅಭಿವೃದ್ಧಿಕಾರ್ಯದ ವೇಗವರ್ಧನೆ ಮಾಡಲಾಗುತ್ತಿದೆ ಮತ್ತು ಇದು ರಾಷ್ಟ್ರದ ಆರ್ಥಿಕ ಬೇಳವಣಿಗೆಗೆ ಬಹುದೊಡ್ಡ ಕೊಡುಗೆಯನ್ನು ನೀಡುವ ಸಾಧ್ಯತೆಯಿದೆ.

ನಾವು ಇದೀಗ ಒಳನಾಡು ಜಲಮಾರ್ಗಗಳನ್ನು ಕೂಡ ಅಭಿವೃದ್ಧಿಪಡಿಸುತ್ತಿದ್ದೇವೆ. ಇದೇ ಕಾರಣಕ್ಕಾಗಿ ೧೧೧ ನದಿಗಳನ್ನು ಒಳನಾಡಿನ ಜಲಮಾರ್ಗಗಳಾಗಿ ಪರಿವರ್ತಿಸಲು ಗುರುತಿಸಿಕೊಳ್ಳಲಾಗಿದೆ. ಅವುಗಳಲ್ಲಿ ೧೦ ಜಲಮಾರ್ಗಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳಿಸಲಾಗುವುದು. ಬರಾಕ್, ಬ್ರಹ್ಮಪುತ್ರಾ, ಗಂಗಾ, ಬಕ್ಕಿಂಗ್‌ಹ್ಯಾಮ್ ಕಾಲುವೆ, ಸುವರ್ಣರೇಖಾ ಮುಂತಾದವುಗಳು ಅವುಗಳಲ್ಲಿ ಕೆಲವು. ಈ ಜಲಮಾರ್ಗಗಳು ಸರಕುಸಾಗಣೆಗೆ, ಮಾನವಸಂಚಾರಕ್ಕೆ – ಎರಡಕ್ಕೂ ಬಳಕೆಗೊಳ್ಳಲಿವೆ.

ಗಂಗಾನದಿಗೆ ಸಂಬಂಧಿಸಿದಂತೆ ೪,೦೦೦ ಕೋಟಿ ರೂ. ಅಂದಾಜು ವೆಚ್ಚದ ಗುತ್ತಿಗೆಗಳನ್ನು ಈಗಾಗಲೆ
ನೀಡಲಾಗಿದೆ. ವಾರಾಣಸಿಯಿಂದ ಹಲ್ದಿಯಾವರೆಗಿನ ೧,೬೨೦ ಕಿ.ಮೀ. ಉದ್ದದ ಜಲಮಾರ್ಗವನ್ನು ಈಗಾಗಲೆ ನಿರ್ಮಿಸಲಾಗಿದೆ. ವಾರಾಣಸಿ, ಹಲ್ದಿಯಾ ಮತ್ತು ಸಾಹೇಬ್‌ಗಂಜ್ ನಡುವಣ ಬಹೂಪಯೋಗಿ ಜಾಲದ ಕಾಮಗಾರಿ ನಡೆಯುತ್ತಿದೆ. ವಾರಾಣಸಿ ಮತ್ತು ಹಲ್ದಿಯಾ ನಡುವೆ ೪೦ ಕಡೆಗಳಲ್ಲಿ ಜಲಬಂದರುಗಳನ್ನು (ವಾಟರ್ ಪೋರ್ಟ್ಸ್) ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ ಇಪ್ಪತ್ತು ತೇಲುವ ಬಂದರುಗಳಾದರೆ ಉಳಿದ ಇಪ್ಪತ್ತು ಕಾಂಕ್ರೀಟ್ ನಿರ್ಮಿತ ಸ್ಥಿರ ಬಂದರುಗಳು. ಫರಕ್ಕಾ ದ್ವಾರವನ್ನು
ಜಲಸಾರಿಗೆಗೆ ದ್ವಾರವಾಗಿ ಪರಿವರ್ತಿಸುತ್ತಿದ್ದು ಅದನ್ನು ದೋಣಿಸಂಚಾರಕ್ಕೆ ಬಳಸಿಕೊಳ್ಳಲಾಗುವುದು.

ಪ್ರಶ್ನೆ: ರೈಲ್ವೇ, ರಸ್ತೆ ಹಾಗೂ ಜಲಮಾರ್ಗ – ಒಂದಕ್ಕೊಂದು ಹೊಂದಾಣಿಕೆ ಹೇಗೆ? ನದಿಗಳನ್ನು
ಜಲಮಾರ್ಗಗಳಾಗಿ ಪರಿವರ್ತಿಸುವ ನಿಮ್ಮ ಯೋಜನೆಯ ದೂರದೃಷ್ಟಿಯೇನು?

ಉತ್ತರ: ಇಲ್ಲಿ ಹೊಂದಾಣಿಕೆಯ ಪ್ರಶ್ನೆ ಬರುವುದಿಲ್ಲ. ಇಂದು ರಸ್ತೆಮಾರ್ಗವನ್ನು ಬಳಸುವುದರಿಂದ ೧೦ ರೂಪಾಯಿ ವೆಚ್ಚವಾದರೆ, ರೈಲ್ವೇಯಲ್ಲಿ ೬ ರೂಪಾಯಿ ಖರ್ಚಾಗುತ್ತದೆ. ಇವುಗಳಿಗೆ ಹೋಲಿಸಿದರೆ
ಜಲಮಾರ್ಗದಲ್ಲಿ ಕೇವಲ ಒಂದು ರೂಪಾಯಿಯಷ್ಟು ವೆಚ್ಚವಾಗುತ್ತದೆ. ಆದ್ದರಿಂದ ನಾವು ಒಳನಾಡು
ಜಲಸಾರಿಗೆಗೆ ಹೆಚ್ಚು ಮಹತ್ತ್ವವನ್ನು ನೀಡುತ್ತಿದ್ದೇವೆ.

ಪ್ರಶ್ನೆ: ದೇಶದ ಇತರ ಖಾಸಗಿ ಬಂದರುಗಳು ನಷ್ಟವನ್ನು ಅನುಭವಿಸುತ್ತಿರುವಾಗ, ನಿಮಗೆ ಮಾತ್ರ ಸಾರ್ವಜನಿಕ ವಲಯದ ಬಂದರು ಮತ್ತು ಹಡಗುಕಟ್ಟೆಗಳು ಇಷ್ಟೊಂದು ಬೃಹತ್‌ಪ್ರಮಾಣದ ಲಾಭ ಗಳಿಸುವಂತೆ ಮಾಡಲು ಹೇಗೆ ಸಾಧ್ಯವಾಯಿತು?

ಉತ್ತರ: ಕೇವಲ ಲಾಭಗಳಿಕೆಯಲ್ಲ? ಅಲ್ಲ, ಸಾರ್ವಜನಿಕ ವಲಯದ ಬಂದರು ಮತ್ತು ಹಡಗುಕಟ್ಟೆಗಳು ಎಲ್ಲ ಆಯಾಮಗಳಲ್ಲೂ ಪ್ರಗತಿಯನ್ನು ಸಾಧಿಸುತ್ತಿವೆ. ನಾನು ಇದೀಗ ವಿಶಾಖಪಟ್ಟಣದಲ್ಲಿ ನಮ್ಮ ಬಂದರು ಮತ್ತು ಹಡಗುಕಟ್ಟೆಗಳ ಕಾರ್ಯಗಳ ಪರಾಮರ್ಶೆ ಸಭೆಯನ್ನು ಮುಗಿಸಿ ಬಂದಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ಮೊದಲ ವರ್ಷ ನಮ್ಮ ಬಂದರುಗಳ ಲಾಭಗಳಿಕೆ ೩,೦೦೦ ಕೋಟಿ ರೂ.; ಎರಡನೇ ವ? ಅದು ೪,೦೦೦ ಕೋಟಿ ರೂ.; ಮೂರನೇ ವ? ೫,೦೦೦ ಕೋಟಿ ರೂ. ಮತ್ತು ೪ನೇ
ವರ್ಷ ಅದು ೭,೦೦೦ ಕೋಟಿ ರೂ. ಆಗಿದೆ. ಇದು ಸಾಧ್ಯವಾಗಿರುವುದು ಕಾರ್ಯಕ್ಷಮತೆ, ಭ್ರಷ್ಟಾಚಾರಮುಕ್ತ ವ್ಯವಸ್ಥೆ, ಯಾಂತ್ರೀಕರಣ, ಡಿಜಿಟಲೀಕರಣ ಮತ್ತು ಬಂದರುಗಳ ಸಾಮರ್ಥ್ಯವೃದ್ಧಿಯಿಂದಾಗಿ. ಇದೀಗ ಬಂದರುಗಳ ಯಾಂತ್ರೀಕರಣ ಹಾಗೂ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವೃದ್ಧಿಗಾಗಿ ೨.೮ ಲಕ್ಷ ಕೋಟಿ ರೂ. ಗಳನ್ನು ಬಂಡವಾಳವಾಗಿ ಹೂಡಲಾಗಿದೆ.

ಪ್ರಶ್ನೆ: ಪರ್ಯಾಯ ಇಂಧನಮೂಲಗಳನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಸಾರ್ವಜನಿಕ ಸಾರಿಗೆಯನ್ನು ಅಭಿವೃದ್ಧಿಪಡಿಸುವ ಕಡೆಗೆ ಸರ್ಕಾರ ಎಷ್ಟರಮಟ್ಟಿಗೆ ಆಸಕ್ತವಾಗಿದೆ?

ಉತ್ತರ: ಪರ್ಯಾಯ ಇಂಧನ ಹಾಗೂ ಜೈವಿಕ ಇಂಧನದ ಬಳಕೆಯ ಬಗ್ಗೆ ನಾವು ಅತಿಹೆಚ್ಚು ಮಹತ್ತ್ವವನ್ನು ನೀಡುತ್ತಿದ್ದೇವೆ. ರಾ.ಸ್ವ. ಸಂಘದ ಸರಸಂಘಚಾಲಕರಾಗಿ ಮಾನ್ಯ ಸುದರ್ಶನ್‌ಜೀ ನಮ್ಮೊಡನಿದ್ದಾಗ, ಅವರು ಪರ್ಯಾಯ ಇಂಧನವಾಗಿ ಜೈವಿಕಇಂಧನಗಳಾದ ಮೆಥನಾಲ್, ಇಥೆನಾಲ್, ಜೈವಿಕ-ಡೀಸೆಲ್ ಮತ್ತು ವಿದ್ಯುಚ್ಛಕ್ತಿಯ ಬಳಕೆಯ ಬಗ್ಗೆ ಆಗ್ರಹಿಸುತ್ತಿದ್ದರು. ಮೊದಲಬಾರಿಗೆ ಈಗ ನಾವು
ಇಂಧನವಾಗಿ ಮೆಥನಾಲನ್ನು ಬಳಸತೊಡಗಿದ್ದೇವೆ.  ಅಸ್ಸಾಮಿನ ಒಂದು ಪೆಟ್ರೋಲಿಯಂ ಕಂಪೆನಿಯು
ಈಗಾಗಲೇ ದಿನವೊಂದಕ್ಕೆ ೧೦೦ ಟನ್‌ಗಳ? ಮೆಥನಾಲ್ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಒಂದು ಪ್ರಾಯೋಗಿಕ ಯೋಜನೆಯಾಗಿ, ಮರ್ಸಿಡೀಸ್ ಮತ್ತು ವೋಲ್ವೋ ಕಂಪೆನಿಗೆ ೧೦ ಬಸ್‌ಗಳನ್ನು ಮೆಥನಾಲ್ ಬಳಸಿ ಚಲಿಸುವುದಕ್ಕಾಗಿ ನೀಡಿದ್ದೇವೆ. ಮೆಥನಾಲ್ ಲೀಟರ್‌ಗೆ ೧೮ ರೂಪಾಯಿ ಆದರೆ, ಡೀಸೆಲ್‌ಗೆ ೬೦ ರೂಪಾಯಿ. ಇಷ್ಟೇ ವ್ಯತ್ಯಾಸ!

ಮೊದಲ ಹಂತದ ಇಥೆನಾಲ್ ಆಗಿ ನಾವು ಮೊಲಾಸಸ್‌ನಿಂದ (ಕಾಕಂಬಿ) ಇಥೆನಾಲ್ ತಯಾರಿಸುತ್ತಿದ್ದೇವೆ. ಹೆಚ್ಚುಹೆಚ್ಚು ಇಥೆನಾಲನ್ನು ಉತ್ಪಾದಿಸುವುದಕ್ಕಾಗಿ ನಾವು ಕಬ್ಬಿನಿಂದ ಬಿ-ಹೆವಿ
ಮೊಲಾಸಸನ್ನು ಬಳಸಿಕೊಳ್ಳುತ್ತಿದ್ದೇವೆ.

ಎರಡನೆಯ ಹಂತದ ಇಥೆನಾಲನ್ನು ನಾವು ಅರಳೆ-ಪುರಳೆ, ಭತ್ತದ ಹುಲ್ಲು, ಗೋಧಿಹುಲ್ಲು, ಕಬ್ಬಿನ ಸಿಪ್ಪೆಯಲ್ಲದೆ ಪ್ಲಾಸ್ಟಿಕ್, ಲೋಹ ಮತ್ತು ಗಾಜಿನಿಂದ ಪ್ರತ್ಯೇಕಿಸಿದ ಘನತ್ಯಾಜ್ಯಗಳಿಂದ ಉತ್ಪಾದಿಸುತ್ತೇವೆ. ಇನ್ನು ಮೂರನೇ ಹಂತದ ಇಥೆನಾಲನ್ನು ಜೋಳ, ರೈ ಮತ್ತು ಆಹಾರಧಾನ್ಯಗಳಿಂದ ಉತ್ಪಾದಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ರೂ. ೮ ಲಕ್ಷ ಕೋಟಿಯಷ್ಟು ಮೌಲ್ಯದ ಕಚ್ಚಾ ತೈಲದ ಆಮದನ್ನು ನಿಲ್ಲಿಸಬಹುದು.

ಇದರ ಅರ್ಥ – ೨ ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳವಾಗಿ ಜೈವಿಕ ಇಂಧನದಲ್ಲಿ ತೊಡಗಿಸಿದರೆ, ಇಂಧನಸಮಸ್ಯೆಗೆ ಪರಿಹಾರವಾಗಿ, ನಾವು ಒಂದು ಮಾಲಿನ್ಯಮುಕ್ತ, ಕಡಮೆ ಬೆಲೆಯ, ಆಮದಿಗೆ ಪರ್ಯಾಯವಾದ ಸ್ಥಳೀಯ, ಸ್ವದೇಶೀ, ಬದಲಿ ಇಂಧನಮೂಲವನ್ನು ಹೊಂದಲು ಸಾಧ್ಯವಿದೆ. ಇದು ಕೃಷಿಕ್ಷೇತ್ರದಲ್ಲೂ ಕೂಡ ವೈವಿಧ್ಯವನ್ನು ತರುವ ಮೂಲಕ ಅದನ್ನು ಇಂಧನ ಮತ್ತು ಶಕ್ತಿಯ ಉತ್ಪಾದನೆಯತ್ತ ಹೊರಳಿಸಬಹುದು. ಒಂದು ವೇಳೆ ಕೃಷಿಕ್ಷೇತ್ರದಲ್ಲಿ ಈ ರೀತಿ ೨ ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳವಾಗಿ ತೊಡಗಿಸಿದ್ದೇ ಆದರೆ ಅದು ಗ್ರಾಮೀಣ ಪ್ರದೇಶದ ೫೦ ಲಕ್ಷಕ್ಕೂ ಅಧಿಕ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸಬಲ್ಲದು.

ಇಥೆನಾಲ್ ಕೇವಲ ಅಗ್ಗವಷ್ಟೇ ಅಲ್ಲ, ಅದು ಮಾಲಿನ್ಯಮುಕ್ತವೂ ಹೌದು. ನಾಗಪುರದಲ್ಲಿ ೩೫ ಬಸ್‌ಗಳು ಶತ ಪ್ರತಿಶತ ಜೈವಿಕ-ಇಥೆನಾಲ್ ಇಂಧನದಿಂದ ಚಲಿಸುತ್ತಿವೆ. ೨,೦೦೦ ಎಲೆಕ್ಟ್ರಿಕ್ ಟ್ಯಾಕ್ಸಿಗಳು
ನಾಗಪುರದಲ್ಲಿ ಓಡಾಡುತ್ತಿವೆ. ಕಡಮೆ ಖರ್ಚಿನ ಮತ್ತು ಮಾಲಿನ್ಯಮುಕ್ತ ಭವಿ?ಕ್ಕಾಗಿ ನಾವು ಹೊಂದಿರುವ ಅತ್ಯಂತ ಮಹತ್ತ್ವದ ಪರ‍್ಯಾಯ ಇಂಧನಮೂಲ ಇವೇ ಆಗಿವೆ. ನಮ್ಮ ದೇಶವನ್ನು ಮಾಲಿನ್ಯಮುಕ್ತವಾಗಿಸುವ ನಿಟ್ಟಿನಲ್ಲಿ ಇದು ನಮ್ಮ ಯಶೋಗಾಥೆಯೂ ಹೌದು.

ಪ್ರಶ್ನೆ: ಗಂಗಾ ಪುನರುಜ್ಜೀವನ ಮತ್ತು ನಮಾಮಿಗಂಗೇ ಯೋಜನೆಗಳ ಪ್ರಗತಿ ಯಾವ ಹಂತದಲ್ಲಿದೆ?ದಯವಿಟ್ಟು ವಿವರಿಸುವಿರಾ?

ಉತ್ತರ: ನಮಾಮಿ ಗಂಗೇ ಒಂದು ಯಶಸ್ವೀ ಯೋಜನೆಯಾಗಿದೆ. ೨೫೦ ಯೋಜನೆಗಳ ಪೈಕಿ ೪೭ ಯೋಜನೆಗಳು ಪೂರ್ಣಗೊಂಡಿವೆ. ೧೧೦ ಯೋಜನೆಗಳ ಕಾರ್ಯ ಅತ್ಯಂತ ಭರದಿಂದ ಸಾಗಿದೆ. ಕೇವಲ ಗಂಗೆಯ? ಅಲ್ಲ, ಯಮುನಾ, ಗಂಗೆಯ ಉಪನದಿಗಳು, ಅಲ್ಲದೆ ೪೦ ಇನ್ನಿತರ ನದಿಗಳನ್ನೂ ಸೇರಿಸಿಕೊಂಡು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಮುಂದಿನ ವರ್ಷ, ೨೦೧೯ರ ಮಾರ್ಚ್ ತಿಂಗಳಿಗೆ ಮೊದಲು ಗಂಗಾ ಶುದ್ಧೀಕರಣ ಕಾರ್ಯದಲ್ಲಿ ಶೇ. ೭೦-೮೦ರಷ್ಟು ಯಶಸ್ಸನ್ನು ಸಾಧಿಸಲಿದ್ದೇವೆ.

ಪ್ರಶ್ನೆ: ಒಂದೆಡೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಏರುತ್ತಲೇ ಇದೆ; ಇನ್ನೊಂದೆಡೆ ಅಪಘಾತಗಳೂ ಹೆಚ್ಚುತ್ತಲಿವೆ. ಈ ಸಮಸ್ಯೆಗಳಿಗೆ ಪರಿಹಾರವಾಗಿ ನಿಮ್ಮ ಕಾರ್ಯಯೋಜನೆಗಳೇನೇನು?

ಉತ್ತರ: ಈ ಒಂದು ಕ್ಷೇತ್ರದಲ್ಲಿ ನಮ್ಮ ಕಾರ್ಯದ ಬಗ್ಗೆ ನಾವು ಇನ್ನೂ ತೃಪ್ತರಾಗಿಲ್ಲ. ಕೇವಲ ಶೇ. ೪ರಷ್ಟು ಅಪಘಾತಗಳನ್ನು ಕಡಮೆಗೊಳಿಸಲು ಸಾಧ್ಯವಾಗಿದೆ. ಆದರೆ ಇದರಲ್ಲಿ ನಮ್ಮ ಗುರಿಯಿರುವುದು ಶೇ.೫೦ರಷ್ಟು ಯಶಸ್ಸನ್ನು ಸಾಧಿಸುವುದು. ಸದ್ಯಃ ಭಾರತದಲ್ಲಿ ೫ ಲಕ್ಷಗಳ? ಅಪಘಾತಗಳು ಸಂಭವಿಸುತ್ತವೆ. ಇದರಲ್ಲಿ ೧,೫೦,೦೦೦ ಮಂದಿ ಮೃತಿಯನ್ನು ಹೊಂದುತ್ತಿದ್ದಾರೆ. ಈ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ನಾವು ಹೊಸ ಮೋಟಾರು ವಾಹನ ಕಾಯಿದೆಯನ್ನು ತರಲು ಸಂಕಲ್ಪಿಸಿದ್ದೇವೆ. ಆದರೆ ಅದು ಸಂಸತ್ತಿನ ಅನುಮೋದನೆಯನ್ನು ಇನ್ನೂ ಪಡೆದುಕೊಳ್ಳಬೇಕಾದ
ಹಂತದಲ್ಲೇ ಇದೆ. ಒಮ್ಮೆ ಈ ಕಾಯಿದೆ ಅಮಲಿಗೆ ಬಂದಿದ್ದೇ ಆದರೆ, ಹೆಚ್ಚಿನ ಮೊತ್ತದ ದಂಡ ವಿಧಿಸುವುದೇ ಮುಂತಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುತ್ತದೆ. ಆದರೆ ಇದಕ್ಕೆಲ್ಲ ಸಾಕ? ಸಮಯಾವಕಾಶ ಬೇಕಾಗುತ್ತದೆ.

ಪ್ರಶ್ನೆ: ನಿಮ್ಮ ಕಾರ್ಯಯೋಜನೆಗಳ ಅನುಷ್ಠನದ ವಿಷಯಕ್ಕೆ ಬಂದಾಗ ಪ್ರಧಾನಿಗಳ ಕಾರ್ಯಾಲಯ
ಮತ್ತು ಅಧಿಕಾರಿವರ್ಗ ಸಕಾರಾತ್ಮಕವಾಗಿ  ಸಹಕರಿಸುತ್ತಿವೆ ಎಂದು ನಿಮಗೆ ಅನಿಸುತ್ತದೆಯೆ?

ಉತ್ತರ: ನಮಗೆ ಇಷ್ಟೆಲ್ಲ ಸಾಧ್ಯವಾಗಿರುವುದು ನಾಯಕರ ನಾಯಕತ್ವ ಮತ್ತು ನಿರ್ವಹಣಾ ಕೌಶಲದಿಂದಾಗಿಯೆ. ನನ್ನ ಕಾರ್ಯಾಲಯದಲ್ಲಿ ಒಂದು ಘೋಷವಾಕ್ಯವನ್ನು ಬರೆಸಿದ್ದೇನೆ. ಅದರಲ್ಲಿ ಹೀಗೆ ಬರೆದಿದೆ: ಕಾರ್ಯಗಳನ್ನು ಸಾಧಿಸುವುದರಲ್ಲಿ ಯಶಸ್ವಿಯಾಗುವವರನ್ನು ಮಾತ್ರ ನಾನು ನನ್ನ ಕಾರ್ಯಾಲಯದಲ್ಲಿ ನೋಡಲು ಬಯಸುತ್ತೇನೆ. ನಾವು ಒಂದು ನಿರ್ಧಾರವನ್ನು ಹೊಂದಿ ಕೆಲಸವನ್ನು
ಮಾಡುತ್ತೇವೆ ಮತ್ತು ಅದರಲ್ಲಿ ಯಶಸ್ಸನ್ನು ಕಾಣುತ್ತೇವೆ.

ಪ್ರಶ್ನೆ: ಕೊನೆಯದಾಗಿ ನಮ್ಮ ಓದುಗರಿಗೆ ನಿಮ್ಮ ಸಂದೇಶ ಏನು?

ಉತ್ತರ: ನಾವು ರಾಷ್ಟ್ರೀಯ ಮನೋಭಾವವನ್ನು ಹೊಂದಿರುವ ಮಂದಿ. ನಮಗೆ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ರಾಜಕಾರಣವು ಒಂದು ಉಪಕರಣವಷ್ಟೆ. ನಾವು ನಮ್ಮ ರಾಷ್ಟ್ರವನ್ನು ಒಂದು ಉಜ್ಜ್ವಲ ಭವಿಷ್ಯವುಳ್ಳ ಬಲಿಷ್ಠ ಮತ್ತು ಎಲ್ಲ ರೀತಿಯಿಂದಲೂ ಪರಮವೈಭವವನ್ನು ತೋರುವಂತೆ ಮಾಡಲು
ದೃಢನಿಶ್ಚಯವನ್ನು ತಳೆದಿದ್ದೇವೆ. ಇದುವೆ ನಮ್ಮ ರಾಷ್ಟ್ರೀಯತೆ. ನಾವೆಲ್ಲರೂ ಇದನ್ನು ಸಾಧಿಸುವುದಕ್ಕಾಗಿ ಶ್ರಮಿಸಬೇಕಾಗಿದೆ ಮತ್ತು ನಮ್ಮ ಮಟ್ಟಿಗೆ ಇದುವೇ ಪ್ರೇರಕ ಮತ್ತು ಸ್ಫೂರ್ತಿದಾಯಕ ಅಂಶವಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat