
Month : August-2018 Episode : Author :
Month : August-2018 Episode : Author :
Month : August-2018 Episode : Author :
Month : August-2018 Episode : ನಿವೇದಿತಾ ಸ್ಮರಣ ಮಾಲಿಕೆ -10 Author : ಎಸ್.ಆರ್. ರಾಮಸ್ವಾಮಿ
ಶಿವೋ ಭೂತ್ವಾ ಶಿವಂ ಯಜೇತ್ ಎಂಬುದು ಪಾರಂಪರಿಕ ನಿರ್ದೇಶ.ಶಿವನನ್ನು ಆರಾಧಿಸಬೇಕಾದರೆ ತಾನೇ ಸ್ವಯಂ ಶಿವನಾಗಿರಬೇಕಾಗುತ್ತದೆ. ಅದರಂತೆ ಭಾರತಮಾತೆಯನ್ನು ಅರ್ಚಿಸಹೊರಟ ಭಗಿನಿ ನಿವೇದಿತಾ ಭಾರತಮಾತೆಯೊಡನೆ ಪೂರ್ಣ ತಾದಾತ್ಮ್ಯ ಹೊಂದಿದ್ದರು. ಭಾರತವನ್ನು ಕುರಿತ ಆಕೆಯ ಪರಿಜ್ಞಾನ ಅಷ್ಟು ಸಮಗ್ರವಾಗಿದ್ದಿತು. ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಕಾಲಿರಿಸಿದಾಗ ಅವರು ಅಲ್ಲಿ ಅಪರಿಚಿತರೇ ಆಗಿದ್ದರು. ಹಣ ಮೊದಲಾದ ಸೌಕರ್ಯಗಳ ವಿಷಯ ಹಾಗಿರಲಿ; ಅವರಿಗೆ ಪರಿಚಿತರೂ ಯಾರೂ ಇರಲಿಲ್ಲ. ಅವರಿಗೆ ಸಂಗಾತಿಯಾಗಿದ್ದುದು ಹಿಂದೂಧರ್ಮವನ್ನು ಕುರಿತ ಜ್ಞಾನ ಮಾತ್ರ. ಅದೊಂದೇ ಆಧಾರದ ಮೇಲೆ ಅವರು ತಮ್ಮನ್ನು ಪಾಶ್ಚಾತ್ಯಜಗತ್ತಿಗೆ ಪರಿಚಯಿಸಿಕೊಂಡರು. […]
Month : August-2018 Episode : Author : ಎಚ್ ಮಂಜುನಾಥ ಭಟ್
ಇಂದು ನಮ್ಮ ಸಮಾಜದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದ ಅಶಿಸ್ತು, ಅವ್ಯವಸ್ಥೆಗಳಿಂದ ರೋಸಿಹೋದ ಜನ ಇದಕ್ಕಿಂತ ಬ್ರಿಟಿಷರ ಆಳ್ವಿಕೆಯೇ ಒಳ್ಳೆಯದಿತ್ತು ಎಂದು ಆಗಾಗ ಉದ್ಗರಿಸುವುದನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯಕ್ಕೆ ಯಾವುದೂ ಪರ್ಯಾಯವಲ್ಲ ಎಂಬುದು ನಿಜವಾದರೂ ಜನರಾಡುವ ಮೇಲಿನ ಮಾತಿನಲ್ಲಿ ಸತ್ಯಾಂಶವಿರುವುದು ಪರಾಂಬರಿಸಿದಾಗ ಗೋಚರವಾಗುತ್ತದೆ. ದೈನಂದಿನ ಆಡಳಿತದ ಶಿಸ್ತು-ವ್ಯವಸ್ಥೆಗಳ? ಅಲ್ಲ; ನಮ್ಮ ನೈಜಸಂಪತ್ತಾದ ನೆಲ-ಜಲಗಳ ಸಂರಕ್ಷಣೆಯಲ್ಲಿ ಕೂಡ ನಾವು ಬ್ರಿಟಿಷರಿಂದ ಹಿಂದೆ ಬೀಳುತ್ತಿದ್ದೇವೇನೋ ಅನ್ನಿಸಿದರೆ ಆಶ್ಚರ್ಯವಿಲ್ಲ. ಬ್ರಿಟಿಷರು ನಮ್ಮ ಸಂಪತ್ತನ್ನು ಲೂಟಿಮಾಡಿ ಇಂಗ್ಲೆಂಡಿಗೆ ಸಾಗಿಸಿದರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರ ಆಡಳಿತಕ್ಕೆ ಅನುಕೂಲವಾಗಲೆಂದೋ ಅಥವಾ ಪ್ರಜಾಜನಕ್ಕೆ ಆನುಷಂಗಿಕವಾಗಿ ಏನಾದರೂ ಪ್ರಯೋಜನವಾದರೆ ಆಗಲಿ ಎಂದೋ ಅವರು ಕೈಗೊಂಡ […]
Month : August-2018 Episode : Author :
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಅತ್ಯಂತ ಮಹತ್ತ್ವದ ಖಾತೆಯನ್ನು ಹೊಂದಿರುವವರಲ್ಲಿ ನಿತಿನ್ ಗಡ್ಕರಿ ಪ್ರಮುಖರು. ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗವನ್ನು ಪೂರೈಸುವ ಬಾಧ್ಯತೆಯುಳ್ಳ, ದೇಶದ ನವಪೀಳಿಗೆಗಾಗಿ ಮೂಲಭೂತಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾದ ಗುರುತರವಾದ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಕೇಂದ್ರಸಂಪುಟದಲ್ಲಿ ಭೂಸಾರಿಗೆ ಮತ್ತು ಹೆದ್ದಾರಿ, ಜಲಸಾರಿಗೆ ಮತ್ತು ಜಲಸಂಪನ್ಮೂಲ ಹಾಗೂ ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಖಾತೆಗಳ ಸಚಿವರಾಗಿರುವ ಗಡ್ಕರಿಯವರನ್ನು ಇತ್ತೀಚೆಗೆ, ಉತ್ಥಾನದ ಆಗಸ್ಟ್ ೨೦೧೮ರ ಸ್ವಾತಂತ್ರ್ಯೋತ್ಸವ ವಿಶೇಷಾಂಕಕ್ಕಾಗಿ, ಸಂದರ್ಶಿಸಲಾಯಿತು. ಈ ಸಂದರ್ಭದಲ್ಲಿ ಅವರು ಹೆದ್ದಾರಿಗಳ […]
Month : August-2018 Episode : Author : ಎಸ್.ಆರ್. ರಾಮಸ್ವಾಮಿ
ಕೇಂದ್ರಸರ್ಕಾರದ ಅಂಗಗಳಾದ ಹತ್ತು ಮುಖ್ಯ ಇಲಾಖೆಗಳಲ್ಲಿ ಉನ್ನತ ಸ್ಥಾನಗಳಿಗೆ ಸರ್ಕಾರೀ ಅಧಿಕಾರ ರಚನೆಗೆ ಸೇರಿರದ ಹೊರಗಿನ ಅನುಭವಿ ತಜ್ಞರನ್ನು ಜಾಯಿಂಟ್ ಸೆಕ್ರೆಟರಿ ಟು ಗವರ್ನ್ಮೆಂಟ್ ಪದವಿಯಲ್ಲಿ ನೇಮಿಸಿಕೊಳ್ಳಲಾಗುತ್ತದೆಂದು ಕಳೆದ ಜೂನ್ ೧೮ರಂದು ಸರ್ಕಾರೀ ಪ್ರಕಟನೆಯೊಂದು ಹೊರಟಿದೆ. ಹಲವು ತಿಂಗಳ ಹಿಂದೆಯೆ ಸರ್ಕಾರ ಈ ದಿಶೆಯಲ್ಲಿ ಚಿಂತಿಸುತ್ತಿದೆಯೆಂದು ತಿಳಿಸಲಾಗಿತ್ತು. ಸರ್ಕಾರೇತರ ಸಂಸ್ಥೆಗಳಲ್ಲಿರುವ ಪ್ರತಿಭಾವಂತರ ಅನುಭವದ ಪ್ರಯೋಜನ ಸರ್ಕಾರೀ ಯೋಜನೆಗಳನ್ನು ರೂಪಿಸುವುದರಲ್ಲಿಯೂ ಕಾರ್ಯಾನ್ವಯದಲ್ಲಿಯೂ ಲಭ್ಯವಾಗಲಿ ಎಂಬುದು ಉದ್ದೇಶ. ಇದರಿಂದ ಆಡಳಿತದಲ್ಲಿ ಹೆಚ್ಚಿನ ಚೇತರಿಕೆ ಮೂಡಲೆಂಬುದು ನಿರೀಕ್ಷೆ. ಮೂರರಿಂದ ಐದು ವರ್ಷಗಳ ಅವಧಿಗೆ ಕರಾರಿನ ಮೇಲೆ ಈ ನೇಮಕ ನಡೆಯುತ್ತದೆ. ಎಷ್ಟೋ ವರ್ಷಗಳ ಹಿಂದಿನಿಂದಲೇ ಈ […]
Month : August-2018 Episode : Author : ಎಸ್.ಆರ್. ರಾಮಸ್ವಾಮಿ
ಎಷ್ಟೇ ಸದುದ್ದೇಶದ ಯೋಜನೆಗಳಾಗಿರಲಿ ಅವನ್ನು ಕಾರ್ಯಾನ್ವಯಗೊಳಿಸುವವರಲ್ಲಿ ಉತ್ಸಾಹವೂ ದಾರ್ಢ್ಯವೂ ಇರದಿದ್ದಲ್ಲಿ ಆ ಯೋಜನೆಗಳ ಪರಿಣಾಮ ಪರಿಮಿತವೇ ಆಗಿರುತ್ತದೆಂಬುದು ದೀರ್ಘಕಾಲದ ಅನುಭವ. ಶಿಕ್ಷಣಕ್ಷೇತ್ರವೂ ಇದಕ್ಕೆ ಹೊರತಲ್ಲ. ಇತ್ತೀಚೆಗೂ ೨೦೧೭-೧೮ರ ವರ್ಷಕ್ಕಾಗಿ ಹೊಸ ಶಿಕ್ಷಣನೀತಿಯೊಂದು ಕೇಂದ್ರಸರ್ಕಾರದಿಂದ ಘೋಷಿತವಾಗಿತ್ತು – ಎಂಬುದು ಸರ್ಕಾರಕ್ಕೆ ಸಮಸ್ಯೆಯ ಗಂಭೀರತೆಯ ಅರಿವಿದೆಯೆಂಬುದನ್ನು ಸೂಚಿಸುತ್ತದೆ. ಹಿಂದೆ ಅಮಲುಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ ಸುಯೋಜಿತವಾಗಿದ್ದರೂ ಕಾರ್ಯಾನ್ವಯದಲ್ಲಿ ವಿಕೃತಿಗಳು ತಲೆದೋರಿ ಈ ಕಾಯ್ದೆ ಇಲ್ಲದಿದ್ದರೆಯೆ ಮೇಲೆನಿಸುವ? ಆಯಾಸ ತಂದಿದೆ. ಈ ನ್ಯೂನತೆಗಳಿಗೆ ಸರ್ಕಾರೀ ಯಂತ್ರದಷ್ಟು ಖಾಸಗಿ ವಲಯವೂ ಹೊಣೆಗಾರಿಕೆ ಹೊರಬೇಕಾಗಿದೆಯೆಂಬುದು ಸ್ಪ?ವೇ ಆಗಿದೆ. ಉನ್ನತಶಿಕ್ಷಣದ ಗುಣವರ್ಧನೆ, ದೇಶಾದ್ಯಂತ ೨೦ ಆದರ್ಶರೀತಿಯ ಮಾದರಿ ಶಿಕ್ಷಣಸಂಕೀರ್ಣಗಳ ಸ್ಥಾಪನೆ ಮೊದಲಾದ […]
Month : August-2018 Episode : Author : ಎಸ್.ಆರ್. ರಾಮಸ್ವಾಮಿ
ಭೀರುಃ ಪಲಾಯಮಾನೋsಪಿ ನಾವೇಷ್ಟವ್ಯೋ ಬಲೀಯಸಾ| ಕದಾಚಿಚ್ಛೂರತಾಮೇತಿ ಮರಣೇ ಕೃತನಿಶ್ಚಯಃ || – ಸುಭಾಷಿತಸುಧಾನಿಧಿ “ಪುಕ್ಕಲನು ಹೆದರಿ ಓಡಿಹೋಗುತ್ತಿದ್ದಾಗಲೂ ಅವನನ್ನು ಅವನ ಪಾಡಿಗೆ ಬಲಿಷ್ಠನು ಬೆನ್ನುಹತ್ತದೆ ಬಿಡಬೇಕು. ಏಕೆಂದರೆ ಒಮ್ಮೊಮ್ಮೆ ತಾನು ಸಾಯುವುದು ನಿಶ್ಚಿತವೆನಿಸಿದಾಗ ಅಂತಹವನಲ್ಲಿ ಹಿಂದೆ ಇರದಿದ್ದ ಅಪಾರ ಶೌರ್ಯದ ಸಂಚಯವಾಗಿರುತ್ತದೆ.” ಸುಪ್ತವಾಗಿದ್ದ ಶಕ್ತಿಯೆಲ್ಲ ಪ್ರಾಣಾಂತಕ ಸನ್ನಿವೇಶ ಎದುರಾದಾಗ ಒಗ್ಗೂಡಿ ಬರುತ್ತದೆ. ಜಿಂಕೆಯನ್ನು ಹುಲಿ ಬೆನ್ನುಹತ್ತಿದಾಗ ಜಿಂಕೆ ತಾನು ಸಾಮಾನ್ಯವಾಗಿ ಓಡುತ್ತಿದ್ದುದರ ನಾಲ್ಕುಪಟ್ಟು ವೇಗದಿಂದ ಓಡುತ್ತದೆ. ಹುಲಿಗೆ ಅದು ಒಪ್ಪತ್ತಿನ ಡಿನ್ನರ್ ಮಾತ್ರ; ಜಿಂಕೆಗೆ ಅದು ಬದುಕು-ಸಾವಿನ ಪ್ರಶ್ನೆ. ಅನ್ಯೋಕ್ತಿ ಪ್ರಕಾರದ […]
Month : August-2018 Episode : Author : ಸಂತೋಷ್ ಜಿ.ಆರ್.
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರಸರ್ಕಾರ ಅಭಿವೃದ್ಧಿಗೆಂದು ಸಾಲುಸಾಲಾಗಿ ಘೋಷಿಸುತ್ತಿರುವ ಅನೇಕ ಯೋಜನೆಗಳು ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲೇಬೇಕಾದ ಮತ್ತು ಹೊಸಹೊಸ ರಸ್ತೆಗಳನ್ನು ನಿರ್ಮಿಸಲೇಬೇಕಾದ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿವೆ. ಯೂರೋಪಿನ ಅನೇಕ ದೇಶಗಳು ಅತ್ಯುತ್ತಮ ರಸ್ತೆಗಳನ್ನು ಹೊಂದಿವೆ, ಏಕೆಂದರೆ ಆ ದೇಶಗಳು ಮುಂದುವರಿದಿವೆ ಎಂಬುದು ಸಾಮಾನ್ಯರ ಅನಿಸಿಕೆ. ಆದರೆ ಭಾರತ ದರ್ಶನ ಖ್ಯಾತಿಯ ವಿದ್ಯಾನಂದ ಶೆಣೈಯವರು ಇದನ್ನು ಬೇರೆ ರೀತಿಯೇ ಹೇಳುತ್ತಿದ್ದರು. ಯೂರೋಪಿನ ಅನೇಕ ದೇಶಗಳು ರಸ್ತೆಗಳನ್ನು ಚೆನ್ನಾಗಿ ನಿರ್ಮಿಸಿಕೊಂಡವು; ಹೀಗಾಗಿ ಅವು ಅಭಿವೃದ್ಧಿಗೊಂಡಿವೆ. ಇದು ನಿಜವಾದ ಮಾತೇ ಆಗಿದೆ. ದೇಶದ ಅಭಿವೃದ್ಧಿಗೆ ಸಾರಿಗೆ ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾಗಿರಬೇಕಾದದ್ದು ಮೊದಲನೇ ಅಂಶವಾಗಿದೆ. ದೇಶದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪಯಣಿಸುವುದೊಂದು […]