ಎಷ್ಟೇ ಸದುದ್ದೇಶದ ಯೋಜನೆಗಳಾಗಿರಲಿ ಅವನ್ನು ಕಾರ್ಯಾನ್ವಯಗೊಳಿಸುವವರಲ್ಲಿ ಉತ್ಸಾಹವೂ ದಾರ್ಢ್ಯವೂ ಇರದಿದ್ದಲ್ಲಿ ಆ ಯೋಜನೆಗಳ ಪರಿಣಾಮ ಪರಿಮಿತವೇ ಆಗಿರುತ್ತದೆಂಬುದು ದೀರ್ಘಕಾಲದ ಅನುಭವ. ಶಿಕ್ಷಣಕ್ಷೇತ್ರವೂ ಇದಕ್ಕೆ ಹೊರತಲ್ಲ. ಇತ್ತೀಚೆಗೂ ೨೦೧೭-೧೮ರ ವರ್ಷಕ್ಕಾಗಿ ಹೊಸ ಶಿಕ್ಷಣನೀತಿಯೊಂದು ಕೇಂದ್ರಸರ್ಕಾರದಿಂದ ಘೋಷಿತವಾಗಿತ್ತು – ಎಂಬುದು ಸರ್ಕಾರಕ್ಕೆ ಸಮಸ್ಯೆಯ ಗಂಭೀರತೆಯ ಅರಿವಿದೆಯೆಂಬುದನ್ನು ಸೂಚಿಸುತ್ತದೆ.
ಹಿಂದೆ ಅಮಲುಗೊಳಿಸಿದ್ದ ಶಿಕ್ಷಣ ಹಕ್ಕು ಕಾಯ್ದೆ ಸುಯೋಜಿತವಾಗಿದ್ದರೂ ಕಾರ್ಯಾನ್ವಯದಲ್ಲಿ ವಿಕೃತಿಗಳು ತಲೆದೋರಿ ಈ ಕಾಯ್ದೆ ಇಲ್ಲದಿದ್ದರೆಯೆ ಮೇಲೆನಿಸುವ? ಆಯಾಸ ತಂದಿದೆ. ಈ ನ್ಯೂನತೆಗಳಿಗೆ ಸರ್ಕಾರೀ ಯಂತ್ರದಷ್ಟು ಖಾಸಗಿ ವಲಯವೂ ಹೊಣೆಗಾರಿಕೆ ಹೊರಬೇಕಾಗಿದೆಯೆಂಬುದು ಸ್ಪ?ವೇ ಆಗಿದೆ. ಉನ್ನತಶಿಕ್ಷಣದ ಗುಣವರ್ಧನೆ, ದೇಶಾದ್ಯಂತ ೨೦ ಆದರ್ಶರೀತಿಯ ಮಾದರಿ ಶಿಕ್ಷಣಸಂಕೀರ್ಣಗಳ ಸ್ಥಾಪನೆ ಮೊದಲಾದ ಈಗಿನ ಸರ್ಕಾರದ
ಸಂಕಲ್ಪಿತ ಯೋಜನೆಗಳು ಸ್ವಾಗತಾರ್ಹ.
ಭಾರತದಲ್ಲಿ ಒಟ್ಟಾರೆ ಶಿಕ್ಷಣದ ಮಟ್ಟ ಕುಸಿದಿದೆ ಎಂದು ಬಿಲ್ ಗೇಟ್ಸ್ ಇಲ್ಲಿಯ ಭೇಟಿಯಲ್ಲಿ ಹೇಳಬೇಕಾಗಿ ಬಂದಿತು. ಇದೀಗ ಶಿಕ್ಷಣಕ್ಷೇತ್ರದ ಪರಿಸ್ಥಿತಿ ಚಿಂತೆ ತರಬೇಕಾದ ಮಟ್ಟದಲ್ಲಿದೆಯೆಂಬುದನ್ನು ಅಲ್ಲಗಳೆಯಲಾಗದು. ಗ್ರಾಮಾಂತರಗಳ ಅಸಂಖ್ಯ ಶಾಲೆಗಳನ್ನು ಒಬ್ಬರೋ ಇಬ್ಬರೋ ಶಿಕ್ಷಕರು
ನಿರ್ವಹಿಸಬೇಕಾದ ಸ್ಥಿತಿ ಇದೆ. ಇತ್ತೀಚಿನ ಶಿಕ್ಷಣದ ಸ್ಥಿತಿ ಕುರಿತ ವಾರ್ಷಿಕ ವರದಿAnnual State of Education Report) ನೀಡಿರುವ ವಿವರಗಳು ವಿ?ದ ತರುತ್ತವೆ. ಕಂಪ್ಯೂಟರಿನ ಪರಿಚಯ ಹಾಗಿರಲಿ; ಕಾಲುಭಾಗದಷ್ಟು ಮಕ್ಕಳು ಮಾತೃಭಾಷೆಯನ್ನೂ ಸುಲಭವಾಗಿ ಓದಲಾರರು; ಶೇ. ೫೭ರಷ್ಟು ಮಕ್ಕಳಿಗೆ ತೀರಾ ಪ್ರಾಥಮಿಕ ಮಟ್ಟದ ಗಣಿತದ ಪರಿಜ್ಞಾನವೂ ಇಲ್ಲ; ಶೇ. ೧೪ರಷ್ಟು ಮಕ್ಕಳಿಗೆ ಭಾರತದ ಭೂಪಟದ ಪರಿಚಯವೂ ಇಲ್ಲ; ಶೇ. ೩೬ರಷ್ಟು ಮಕ್ಕಳಿಗೆ ದೇಶದ ರಾಜಧಾನಿ ಯಾವುದೆಂಬುದು ತಿಳಿದಿಲ್ಲ.
ಪಾಲಕರ ಭಾಗವಹಿಸುವಿಕೆಗೂ ಅವಕಾಶವಿರುವ ರಾಷ್ಟ್ರಮಟ್ಟದ ಶಿಕ್ಷಕ ವೇದಿಕೆಯ ರಚನೆ, ವಿಶ್ವವಿದ್ಯಾಲಯ ಧನದಾನ ಆಯೋಗವನ್ನು ಹೆಚ್ಚು ಕ್ರಿಯಾಶೀಲಗೊಳಿಸುವ ಪ್ರಯತ್ನ, ಶಾಲಾಶುಲ್ಕ ನಿಯಂತ್ರಣ, ಕೌಶಲಾಭಿವೃದ್ಧಿಗೆ ವಿಶೇಷ ಗಮನ – ಮೊದಲಾದ ಕೇಂದ್ರಸರ್ಕಾರದ ಈಚಿನ
ಕ್ರಮಗಳು ದೇಶದಲ್ಲಿನ ಶಿಕ್ಷಣಮಟ್ಟವನ್ನು ಉನ್ಮುಖಗೊಳಿಸುವಂತಾಗಲಿ.