
ಉತ್ಥಾನ ಜೂನ್ 2018
Month : June-2018 Episode : Author :
Month : June-2018 Episode : Author :
Month : June-2018 Episode : ನಿವೇದಿತಾ ಸ್ಮರಣ ಮಾಲಿಕೆ -8 Author : ಎಸ್.ಆರ್. ರಾಮಸ್ವಾಮಿ
ಅರವಿಂದರು ೧೯೦೬ರಲ್ಲಿ ಆರಂಭಿಸಿದ ’ವಂದೇ ಮಾತರಂ’ ಇಂಗ್ಲಿಷ್ ನಿಯತಕಾಲಿಕಕ್ಕೆ ಲೇಖನಗಳನ್ನು ನೀಡಿ ಪತ್ರಿಕೆಯ ಪ್ರವರ್ತನೆಯಲ್ಲಿಯೂ ತೊಡಗಿಕೊಂಡು ಶ್ರಮಿಸಿದವರು ನಿವೇದಿತಾ. ಅದಕ್ಕೂ ಹಿಂದಿನಿಂದ ನಡೆಯುತ್ತಿದ್ದ ’ಯುಗಾಂತರ’ ಪತ್ರಿಕೆಯ ಬೆನ್ನೆಲುಬಾಗಿದ್ದವರೂ ನಿವೇದಿತಾರವರೇ. ೧೯೦೬ರ ಮಧ್ಯಭಾಗದಲ್ಲಿ ಇಡೀ ಬಂಗಾಳವನ್ನು ಆವರಿಸಿದ ತೀವ್ರಕ್ಷಾಮದ ಪರಿಹಾರಕಾರ್ಯದಲ್ಲಿ ನಿವೇದಿತಾ ತಮ್ಮ ಎಲ್ಲ ಅನುಯಾಯಿ ತಂಡದೊಡನೆ ತೊಡಗಿಕೊಂಡದ್ದು ಸಹಜವೇ ಆಗಿತ್ತು. ದಿನಗಳು ಕಳೆದಂತೆ ನಿವೇದಿತಾರವರ ಪ್ರಖರ ರಾಷ್ಟ್ರಭಕ್ತಿಯೂ ಸೇವಾಮನೋಭಾವವೂ ನಿರಂತರ ಶ್ರಮಮಗ್ನತೆಯೂ ಗೋಪಾಲಕೃ? ಗೋಖಲೆಯವರ ಮತ್ತಿತರ ನಾಯಕರ ಅಭಿಮಾನಕ್ಕೂ ಗೌರವಕ್ಕೂ ಪಾತ್ರವಾಗಿದ್ದವು. ೧೯೦೫-೬ರ ದಿನಗಳಲ್ಲಿ ವಂಗವಿಭಜನೆಗೆ […]
Month : June-2018 Episode : Author : ಸುಮನಾ ಮುಳ್ಳುಂಜ
ಡಾ. ರವೀಂದ್ರನಾಥ ಶಾನಭಾಗ ಅವರು ಮಣಿಪಾಲ ಯೂನಿವರ್ಸಿಟಿಯಲ್ಲಿ ೩೦ ವರ್ಷಗಳ ಕಾಲ ಫಾರ್ಮಕಾಲಜಿಯಲ್ಲಿ ಪ್ರೊಫೆಸರ್ ಆಗಿದ್ದು ಬಳಿಕ ಹಿಮಾಚಲ ಪ್ರದೇಶದ ಶೂಲಿನಿ ಯೂನಿವರ್ಸಿಟಿಯಲ್ಲಿ ಡೀನ್ ಆಗಿ ಸೇವೆ ಸಲ್ಲಿಸಿದವರು. ದೇಶ-ವಿದೇಶದ ಹಲವು ವಿಶ್ವವಿದ್ಯಾನಿಲಯಗಳಿಗೆ ಅತಿಥಿ ಉಪನ್ಯಾಸಕರಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಸುಮಾರು 30 ವರ್ಷಗಳಿಂದ ಬಳಕೆದಾರ ಮತ್ತು ಮಾನವ ಹಕ್ಕುಗಳ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ಶಾನಭಾಗರು, ಇದೇ ವಿಷಯದ ಕುರಿತಾಗಿ 12ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಪ್ರಸಕ್ತ ಮಾನವ ಹಕ್ಕುಗಳಿಗಾಗಿ, ಅದರಲ್ಲೂ ಯುವಜನರ ಮನಸ್ತಾಪಗಳು ಮತ್ತು ಹಿರಿಯರ […]
Month : June-2018 Episode : Author : ಎಚ್ ಮಂಜುನಾಥ ಭಟ್
ಹೊಸಬಗೆಯ ಸ್ತ್ರೀವಾದವು ಅಸ್ತಿತ್ವಕ್ಕೆ ಬಂದ ಬಳಿಕ ಜಗತ್ತಿನ ಹಲವು ದೇಶಗಳಲ್ಲಿ ಅದು ಬಗೆಬಗೆಯ ಪರಿಣಾಮಗಳನ್ನು ಉಂಟುಮಾಡಿದೆ. ಭಾರತದಲ್ಲಿ ಅದು ಕೆಲವರ ಮೂಲಕ ಉಗ್ರಸ್ತ್ರೀವಾದದ ರೂಪವನ್ನು ಪಡೆದುಕೊಂಡಿತು. ಮಾತ್ರವಲ್ಲ, ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷ (೨೦೦೪-೧೪)ಗಳ ಅವಧಿಯಲ್ಲಿ ಅದಕ್ಕೆ ಅಧಿಕಾರಸ್ಥಾನದ ನಿಕಟ ಸಂಪರ್ಕವೂ ದೊರೆಯಿತು. ಸಮತೋಲನ ತಪ್ಪಿದೆ ಎನ್ನುವಷ್ಟು ಮಹಿಳೆಯರಿಗೆ ಪರವಾದ ಅನೇಕ ಶಾಸನಗಳನ್ನು ತರಲು ಅದಕ್ಕೆ ಸಾಧ್ಯವಾಯಿತು. ಅದರಿಂದ ನಷ್ಟವಾದದ್ದು, ಆಗುತ್ತಿರುವುದು ಹಿಂದೂ ಸಮಾಜಕ್ಕೆ; ಕಾರಣ ಹಿಂದೂ ವಿವಾಹ ಕಾಯ್ದೆಗೆ ಅನೇಕ ವಿಕೃತಿಗಳು ಸೇರಿಕೊಂಡದ್ದು. ಅದರ […]
Month : June-2018 Episode : Author : ಎಸ್.ಆರ್. ರಾಮಸ್ವಾಮಿ
ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ ಪ್ರಾರಭ್ಯ ವಿಘ್ನವಿಹತಾ ವಿರಮನ್ತಿ ಮಧ್ಯಾಃ | ವಿಘ್ನೆಃ ಪುನಃ ಪುನರಪಿ ಪ್ರತಿಹನ್ಯಮಾನಾಃ ಪ್ರಾರಬ್ಧಮುತ್ತಮಗುಣೌ ನ ಪರಿತ್ಯಜನ್ತಿ || – ನೀತಿಶತಕ “ಕಷ್ಟಗಳೂ ತೊಂದರೆಗಳೂ ಬಂದಾವೇನೋ ಎಂದು ಗಾಬರಿಗೊಂಡು ಅಧಮರು ಕೆಲಸವನ್ನು ಆರಂಭಿಸುವುದೇ ಇಲ್ಲ. ಮಧ್ಯಮರು ಆರಂಭಿಸಿದ ಮೇಲೆ ಸ್ವಲ್ಪ ವಿಘ್ನ ಒದಗಿದರೂ ಹಿಂದೆ ಸರಿದುಬಿಡುತ್ತಾರೆ. ಉತ್ತಮರಾದರೋ ಆತಂಕಗಳು ಬಂದರೂ ಧೃತಿಗೆಡದೆ ಅವನ್ನು ದಾಟುತ್ತ ಮುಂದೆ ಸಾಗುತ್ತಾರೆಯೇ ಹೊರತು ಪ್ರಯತ್ನವನ್ನು ಕೈಬಿಡುವುದಿಲ್ಲ.” ಜಗದ್ವ್ಯವಹಾರಗಳಲ್ಲಿ ಅನುತ್ಸಾಹಕರ ಸನ್ನಿವೇಶಗಳು ಎದುರಾಗುವುದು ಪ್ರಕೃತಿಸಹಜವೇ ಆಗಿದೆ. ಎಡರುತೊಡರುಗಳು […]
Month : June-2018 Episode : ರಹಸ್ಯಲಿಪಿ Author : ಎಸ್.ಆರ್. ರಾಮಸ್ವಾಮಿ
-೪- ಮುನ್ನಿಗೆ ಮದುವೆ ಮಾಡಿಸಿದರೆ ಅವಳ ಮನಃಸ್ಥಿತಿ ಸುಧಾರಿಸಬಹುದು ಎಂದು ಮನೆಯವರು ಆಲೋಚಿಸಿದರು. ಆದರೆ ಅವಳ ವರ್ತನೆಗಳನ್ನು ಗಮನಿಸಿದ್ದವರಾರೂ ಅವಳನ್ನು ಮದುವೆಯಾಗಲು ಮುಂದಾಗುವ ಸಂಭವ ಇರಲಿಲ್ಲ. ಅವಳಿಗೆ ದೆವ್ವ ಹಿಡಿದಿದೆ, ಅದರಿಂದಲೇ ಅವಳು ಹುಚ್ಚುಹುಚ್ಚಾಗಿ ಮಾತನಾಡುವುದು – ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಶಾಲೆಯ ಓದನ್ನೂ ಅವಳು ಕೈಬಿಟ್ಟಿದ್ದಳು. ಒಬ್ಬಳೇ ಕೋಣೆಯಲ್ಲಿ ಕುಳಿತು ಕಣ್ಣುಮುಚ್ಚಿ ತನ್ನಲ್ಲಿಯೇ ತಾನು ಏನೇನೋ ಮಾತನಾಡಿಕೊಳ್ಳುತ್ತಿದ್ದಳು. ಎದುರಿಗೆ ಯಾರೋ ಕುಳಿತಿರುವರೆಂದುಕೊಂಡು ಅವರಿಗೆ ವಿಚಿತ್ರ ವಿಷಯಗಳನ್ನು ಹೇಳುತ್ತಿದ್ದಳು. ವಾಸ್ತವವಾಗಿ ಅಲ್ಲಿ ಅವಳ ಹೊರತು ಬೇರಾರೂ ಇರುತ್ತಿರಲಿಲ್ಲ. […]