-೪-
ಮುನ್ನಿಗೆ ಮದುವೆ ಮಾಡಿಸಿದರೆ ಅವಳ ಮನಃಸ್ಥಿತಿ ಸುಧಾರಿಸಬಹುದು ಎಂದು ಮನೆಯವರು ಆಲೋಚಿಸಿದರು. ಆದರೆ ಅವಳ ವರ್ತನೆಗಳನ್ನು ಗಮನಿಸಿದ್ದವರಾರೂ ಅವಳನ್ನು ಮದುವೆಯಾಗಲು ಮುಂದಾಗುವ ಸಂಭವ ಇರಲಿಲ್ಲ. ಅವಳಿಗೆ ದೆವ್ವ ಹಿಡಿದಿದೆ, ಅದರಿಂದಲೇ ಅವಳು ಹುಚ್ಚುಹುಚ್ಚಾಗಿ ಮಾತನಾಡುವುದು – ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಶಾಲೆಯ ಓದನ್ನೂ ಅವಳು ಕೈಬಿಟ್ಟಿದ್ದಳು. ಒಬ್ಬಳೇ ಕೋಣೆಯಲ್ಲಿ ಕುಳಿತು ಕಣ್ಣುಮುಚ್ಚಿ ತನ್ನಲ್ಲಿಯೇ ತಾನು ಏನೇನೋ ಮಾತನಾಡಿಕೊಳ್ಳುತ್ತಿದ್ದಳು. ಎದುರಿಗೆ ಯಾರೋ ಕುಳಿತಿರುವರೆಂದುಕೊಂಡು ಅವರಿಗೆ ವಿಚಿತ್ರ ವಿಷಯಗಳನ್ನು ಹೇಳುತ್ತಿದ್ದಳು. ವಾಸ್ತವವಾಗಿ ಅಲ್ಲಿ ಅವಳ ಹೊರತು ಬೇರಾರೂ ಇರುತ್ತಿರಲಿಲ್ಲ.
ಇಲ್ಲಿಯವರೆಗೆ…
ಅತೀಂದ್ರಿಯಶಕ್ತಿ ಹೊಂದಿದ್ದ ಮುನ್ನಿ (ಹೆಲೀನಾ ಪೆತ್ರೋವ್ನಾ ಬ್ಲಾವಟ್ಸ್ಕಿ) ಸಮುದ್ರದಂಡೆಯಲ್ಲಿ ತನ್ನ ಜೊತೆಗಾರರಿಗೆ ಅಲ್ಲಿ ಸಿಕ್ಕಿದ ಮೂಳೆ, ಮೀನುಗಳ ಇತಿಹಾಸವನ್ನೆಲ್ಲ ಹೇಳುತ್ತಿದ್ದಳು. ರಾತ್ರಿ ನಿದ್ರೆ ಮಾಡುವಾಗಲೆಲ್ಲ ’ಕುದುರೆಸವಾರ ಬಂದು ನಮ್ಮನ್ನೆಲ್ಲ ಮುಗಿಸುತ್ತಾನೆ’ ಎಂದು ಕೂಗಾಡುತ್ತಿದ್ದಳು. ಭಯಗೊಂಡ ತಾಯಿ ಚರ್ಚಿಗೆ ಕರೆದೊಯ್ದು ಪಾದ್ರಿಯ ಆದೇಶದ ಪ್ರಕಾರ ಮೊಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದಳು. ಮುನ್ನಿಯ ತಾಯಿ ಆಕೆಯ ಶಾಲೆಗೆ ಹೋದಾಗ ಅಲ್ಲಿಯೂ ಮುನ್ನಿಯ ಮೇಲೆ ಶಿಕ್ಷಕಿ ದೂರು ಹೇಳುತ್ತಾಳೆ. ಈ ಮಧ್ಯೆ ಮುನ್ನಿಯ ತಾಯಿಯ ಕಡೆಯ ನೆಂಟ ನಿಕೋಲಾಯ್ ಮನೆಗೆ ಬಂದ. ಮುನ್ನಿಯ ಸಮಾಚಾರವನ್ನೆಲ್ಲ ಕೇಳಿ ಈಕೆ ಕತೆಪುಸ್ತಕ ಓದಿದ್ದರಿಂದಲೇ ಹೀಗಾಡುತ್ತಾಳೆ ಎಂದು ಶಾಲೆಯ ಮುಖ್ಯಸ್ಥೆಯಂತೆಯೇ ಆತನೂ ಅಭಿಪ್ರಾಯ ಪಟ್ಟ. ಮುನ್ನಿ ’ಜಾರ್ಜಿಯಾದಲ್ಲಿರುವ ನಿಕೋಲಾಯ್ ತಮ್ಮ ಚೆಕೋವ್ ಸತ್ತುಹೋಗಿದ್ದಾನೆ, ಆತನ ಶರೀರ ಮಾತ್ರ ಇಲ್ಲಿ ಸುತ್ತಾಡುತ್ತಿದೆ’ ಎಂದಾಗ ಆಕೆ ಹೇಳಿದ ಪ್ರಕಾರವೇ ಕೆಲವೇ ದಿನಗಳಲ್ಲಿ ಚೆಕೋವ್ ತೀರಿಕೊಂಡ ವಾರ್ತೆ ತಿಳಿದುಬರುತ್ತದೆ…..
ತಂದೆ ಪೆತ್ರೋ ಅಲೆಕ್ಸೆಯೆವಿಚ್ ರಾಜಮನೆತನದವನು; ಯುಕ್ರೇನ್ ರಾಜ್ಯದಲ್ಲಿ ಜಾರ್ ಚಕ್ರವರ್ತಿಯ ಸಿಬ್ಬಂದಿಯಲ್ಲಿದ್ದ ರಾಜೋದ್ಯೋಗಿ. ದೊಡ್ಡ ಜಮೀನ್ದಾರ ಕೂಡಾ. ಅಂತಹ ಗಣ್ಯ ವ್ಯಕ್ತಿಗೆ ಇಂತಹ ಮಗಳು ಹುಟ್ಟಿದ್ದಾಳಲ್ಲ – ಎಂದು ಬಂಧುಗಳು ಆಡಿಕೊಳ್ಳುತ್ತಿದ್ದರು. ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು:
ನಿನ್ನ ಮಗಳು ಕೆಳದರ್ಜೆಯ ಸಂಗಡಿಗರೊಡನೆ ಸಮುದ್ರದ ದಂಡೆಯಲ್ಲಿ ಕವಡೆಯಾಟ, ಇನ್ನೂ ಬೇರೆ ಆಟಗಳನ್ನು ಆಡುತ್ತಿರುತ್ತಾಳೆ. ಆ ಜನರ ಅಂತಸ್ತು ಏನು, ನಮ್ಮ ಅಂತಸ್ತು ಏನು?
ಬಂಧುಗಳು ಹೀಗನ್ನುತ್ತಿದ್ದುದನ್ನು ಪೆತ್ರೋ ತನ್ನ ಪತ್ನಿ ಹೆಲೀನಾಗೂ ಹೇಳಿದ. ಹೆಲೀನಾ ಜರ್ಮನಿ-ಮೂಲದವಳು. ತನ್ನ ಮಗಳನ್ನು ದೊಡ್ಡ ರೀತಿಯಲ್ಲಿ ಬೆಳೆಸಲು ಪ್ರಯತ್ನಿಸಿದ್ದಳು. ಆದರೆ ಅದು ಸಾಧ್ಯವಾಗಿರಲಿಲ್ಲ. ಚಿಕ್ಕಂದಿನಿಂದಲೇ ಮುನ್ನಿಯನ್ನು ಕ್ರಿಶ್ಚಿಯನ್ ಆರ್ಥೊಡಾಕ್ಸ್ ಚರ್ಚಿಗೆ ಕರೆದುಕೊಂಡು ಹೋಗಿ ತಲೆಯ ಮೇಲೆ ಮಂತ್ರಜಲ ಪ್ರೋಕ್ಷಿಸುವ ಸಂಸ್ಕಾರವನ್ನು ಮಾಡಿಸಿದ್ದಳು. ಆ ಸಂಸ್ಕಾರದ ಅರ್ಥ ಅವಳು ಯೇಸುವಿನ ರಕ್ಷಣೆಯಲ್ಲಿ ಇರುತ್ತಾಳೆ ಎಂದು.
ಹೀಗಿರುವಾಗ ಇವಳಲ್ಲಿ ಸೈತಾನ-ಪ್ರಭಾವಿತವೆನಿಸುವ ಚರ್ಯೆಗಳು ಸೇರಿಕೊಂಡಿರುವುದು ಹೇಗೆ?
* * * * *
ಅದೊಂದು ಸಂಜೆ ಮುನ್ನಿ ಸಮುದ್ರತೀರಕ್ಕೆ ಹೋಗಿ ಕುಳಿತಿದ್ದಳು. ಕಣ್ಣಿನ ನೋಟದ ದೂರ- ಪರಿಧಿಯಲ್ಲಿ ಮೇಲಣ ಮುಗಿಲೂ ಕೆಳಗಣ ಸಮುದ್ರವೂ ಕೂಡಿಕೊಂಡಂತೆ ಕಾಣುತ್ತಿತ್ತು. ಆಕಾಶದಲ್ಲಿ ಮೋಡಗಳು ಇದ್ದಂತೆ ಸಮುದ್ರದ ಮೇಲೆ ಅಲೆಗಳು ಸರಣಿಸರಣಿಯಾಗಿ ಸಾಗುತ್ತಿದ್ದವು.
ಮುನ್ನಿ ಸಮುದ್ರವನ್ನು ಏಕಾಗ್ರತೆಯಿಂದ ದಿಟ್ಟಿಸುತ್ತಿದ್ದಳು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ನೀಲಿಬಣ್ಣದ ಸಮುದ್ರ ಬೆಳ್ಳಗಾದಂತೆನಿಸಿತು. ಆ ಬಿಳುಪಿನ ನಡುವಿನಿಂದ ಒಂದು ಬಿಳಿಯ ಕುದುರೆ ಮೇಲಕ್ಕೆ ಎದ್ದುಬಂದಿತು. ಕುದುರೆಯ ಮೇಲೆ ರಾವುತನೊಬ್ಬ ಕುಳಿತಿದ್ದ. ಕುದುರೆಯು ಭೂಮಿಯ ಮೇಲೆ ನಡೆಯುವ? ಸರಾಗವಾಗಿ ಸಮುದ್ರದ ಅಲೆಗಳ ಮೇಲೆ ವೇಗವಾಗಿ ಓಡುತ್ತ ತೀರಕ್ಕೆ ಬಂದಿತು.
ರಾವುತನು ಕೆಳಗಿಳಿದು ವಿಚಾರಿಸಿದ:
ಅಮ್ಮಾ, ಕುಶಲದಿಂದಿದ್ದೀಯಾ?
ಅಯ್ಯಾ, ನೀವು ಯಾರು? ನಾನು ನಿಮಗೆ ಹೇಗೆ ಪರಿಚಯ?
ಅಮ್ಮಯ್ಯ, ನೀನು ನನಗೆ ಹಲವಾರು ಜನ್ಮಗಳಿಂದ ಪರಿಚಿತಳೇ. ನಿಮ್ಮ ತಾಯಿ ಹೆಲೀನಾಳನ್ನೂ ಬಲ್ಲೆ. ಇನ್ನು ಮುಂದೆ ನಡೆಯಲಿರುವ ಕ್ರಿಮಿಯಾ ಯುದ್ಧದ ಬಗೆಗೂ ಬಲ್ಲೆ.
ಕ್ರಿಮಿಯಾ ಯುದ್ಧವೆ?
ಹೌದು. ಅಂತಹದೊಂದು ಯುದ್ಧ ಮುಂದೆ
ನಡೆಯುವುದಿದೆ. ಆಗ ಇಂಗ್ಲಿ?ರಿಗೂ ರ?ನರಿಗೂ ನಡುವೆ ವೈಮನಸ್ಯ ಏರ್ಪಡುತ್ತದೆ. ಆಗ ನೀನು ಜಾಗ್ರತೆಯಿಂದ ಇರಬೇಕಾಗುತ್ತದೆ.
ಅದೇಕೆ?
ಏಕೆಂದರೆ ನಿನ್ನ ತಂದೆ ನಿನ್ನನ್ನು ಲಂಡನ್ನಿಗೆ ಕರೆದುಕೊಂಡು ಹೋಗುತ್ತಾರೆ, ಆದ್ದರಿಂದ.
ಅಯ್ಯಾ, ನೀವಾರೋ ಅತೀಂದ್ರಿಯಶಕ್ತಿಯುಳ್ಳ ದೇವಪುರು?ನಂತೆ ಕಾಣುವಿರಿ. ನಿಮ್ಮ ಹೆಸರೇನು? ಎಲ್ಲಿಂದ ಬಂದಿರಿ? ಏತಕ್ಕಾಗಿ ಬಂದಿದ್ದೀರಿ?
ಅಮ್ಮಯ್ಯಾ, ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ, ಕೇಳು. ನನ್ನ ಹೆಸರು ಆರ್ಯಯೋಗಿ. ನಾನು ಮಗಧ ಸಾಮ್ರಾಜ್ಯದಿಂದ ಬಂದೆ.
ಅದು ಇರುವುದೆಲ್ಲಿ?
ಅದು ಭಾರತದೇಶದಲ್ಲಿ ಗಂಗಾನದಿಯ ತೀರದಲ್ಲಿ ಇದೆ.
ಮುನ್ನಿಯ ಮನಸ್ಸಿನಲ್ಲಿ ಮೌರ್ಯ, ಆರ್ಯ ಎಂಬೆರಡು ಶಬ್ದಗಳು ಬೆರೆತುಕೊಂಡುಬಿಟ್ಟಿದ್ದವು.
ಅಯ್ಯಾ, ಮೌರ್ಯಯೋಗಿಗಳೆ, ನೀವು ಇಲ್ಲಿಗೆ ಯಾರನ್ನು ನೋಡಲು ಬಂದಿದ್ದೀರಿ?
ನಿನ್ನನ್ನು ನೋಡುವುದಕ್ಕಾಗಿಯೆ ಬಂದೆನಮ್ಮ. ನೀನು ಕಾರಣಜನ್ಮಳು. ಸ್ವಲ್ಪ ಸಮಯದ ತರುವಾಯ ನೀನು ಭಾರತಕ್ಕೆ ಬರುತ್ತಿದ್ದೀ. ಅಲ್ಲಿ ನಿನ್ನಿಂದ ನಡೆಯಬೇಕಾದ ಕಾರ್ಯ ಇದೆ. ಇಲ್ಲಿ ನೋಡು, ಈ ಬಿಳಿಯ ಕುದುರೆಯ ಹೆಸರು ಉಚ್ಚೈಃಶ್ರವಸ್ಸು. ಇದನ್ನು ನಾನು ನಿನಗೆ ಉಡುಗೊರೆಯಾಗಿ ಕೊಡುತ್ತಿದ್ದೇನೆ. ಇಂದಿನಿಂದ ನೀನು ಈ ಕುದುರೆಯನ್ನೇರಿ ಪ್ರಪಂಚವನ್ನೆಲ್ಲ ಪರ್ಯಟಿಸಬಹುದು. ಈ ಕುದುರೆ ದೇವೆಂದ್ರನಿಗೆ ಸೇರಿದುದು, ಕ್ಷೀರಸಮುದ್ರದಲ್ಲಿ ಹುಟ್ಟಿದುದು. ಹೊರಗಿನವರ ದೃಷ್ಟಿಗೆ ನೀನು ಹಡಗಿನಲ್ಲಿಯೊ ಆನೆಯ ಮೇಲೆಯೊ ಒಂಟೆಯ ಮೇಲೆಯೊ ಪ್ರಯಾಣ ಮಾಡುತ್ತಿರುವಂತೆ ಕಾಣುತ್ತಿರುತ್ತದೆ. ಆದರೆ ವಾಸ್ತವವಾಗಿ ನಿನ್ನ ಪರ್ಯಟನೆ ನಡೆಯುವುದು ಈ ಬಿಳಿಯ ಕುದುರೆಯ ಮೇಲೆಯೆ. ಈ ಸಂಗತಿ ನಿನಗೆ ಮತ್ತು ನನಗೆ ಹೊರತು ಮೂರನೆಯವರಿಗೆ ತಿಳಿಯುವುದಿಲ್ಲ.
ಮೌರ್ಯಯೋಗಿಗಳೆ! ಇ?ಗಿ ನೀವು ಯಾರು? ಮನು?ರೋ ದೇವತೆಯೋ ದೈವವೋ?
ಅಮ್ಮಯ್ಯ, ಕೇಳು. ಮನು?ನಿಗೆ ಶರೀರ ಇರುತ್ತದೆ. ಅದು ಪಂಚಭೂತಗಳು ಸೇರಿ ನಿರ್ಮಾಣಗೊಂಡಿರುತ್ತದೆ. ಮರ, ಕಾಡು, ಮನು?, ಜಂತು ಎಲ್ಲವೂ ಪಂಚಭೂತಗಳಿಂದಲೇ ಆಗಿರುವವು. ಆದರೆ ದೇವತೆಗಳ ಶರೀರವು ಕೇವಲ ತೇಜಸ್ಸಿನಿಂದಲೆ
ನಿರ್ಮಾಣಗೊಂಡಿರುತ್ತದೆ, ಆದುದರಿಂದ ಅದು ಕಣ್ಣಿಗೆ ಕಾಣಲೇಬೇಕೆಂಬ ಅನಿವಾರ್ಯತೆ ಇಲ್ಲ. ಇಲ್ಲಿ ಗಾಳಿಯಲ್ಲಿ ಎ? ಸೂಕ್ಷ್ಮಕ್ರಿಮಿಗಳು ಇರುತ್ತವ?. ಅವು ಕಣ್ಣಿಗೆ ಕಾಣುತ್ತವೆಯೆ? ಮನು?ರಿಗೆ ಕಾಲುಕೈಗಳು ಇರುತ್ತವೆ. ಪಕ್ಷಿಗಳಿಗೆ ರೆಕ್ಕೆಗಳು ಇರುತ್ತವೆ. ಕೆಲವು ಜಂತುಗಳಿಗೆ ಕೊಂಬುಗಳು ಇರುತ್ತವೆ. ಹೀಗೆ ನಮ್ಮ ಭೌತಿಕ ಸೃಷ್ಟಿಯನ್ನು ಸ್ಥಾವರ-ಜಂಗಮ ರೂಪಗಳಲ್ಲಿ ಊಹಿಸಿಕೊಳ್ಳಬಲ್ಲೆವು. ಆದರೆ ಇದಕ್ಕೆ ಭಿನ್ನವಾದ ರೀತಿಯ ಸೃಷ್ಟಿಯೂ ಇರಬಹುದು. ಭೂಮಿಯ ಮೇಲೆ ಒಂದು ರೀತಿ, ಆಕಾಶ ಸಮುದ್ರ ಇತರ ಗೋಳಗಳಲ್ಲಿ ಬೇರೆಬೇರೆ ರೂಪಗಳಲ್ಲಿ ಇರಬಹುದು. ನಾವು ನೀರಿನೊಳಗಡೆ ಬದುಕಲಾರೆವು. ಮೀನುಗಳು ಭೂಮಿಯ ಮೇಲೆ ಬದುಕಲಾರವು. ಇದೊಂದು ಸೃಷ್ಟಿರಹಸ್ಯ.”
“ಆರ್ಯಸ್ವಾಮಿಗಳೆ! ನಿಮ್ಮನ್ನು ನಾನು ಮೌರ್ಯ ಎಂದೇ ಕರೆಯಲು ಇಚ್ಛಿಸುತ್ತೇನೆ. ತಮಗೆ ಅತೀಂದ್ರಿಯಜ್ಞಾನವಿರುವಂತಿದೆ. ಆದುದರಿಂದ ದಯವಿಟ್ಟು ನನ್ನ ವಂಶದ ಚರಿತ್ರೆಯ?ನ್ನೂ ನನಗೆ ತಿಳಿಸಿರಿ.”
ಆರ್ಯಸ್ವಾಮಿಯು ಬ್ಲಾವಟ್ಸ್ಕಿಯ ವಂಶಚರಿತ್ರೆಯನ್ನು ಸಾಂಗವಾಗಿ ತಿಳಿಸಿದ.
* * * * *
“ಮುನ್ನಿ, ನಿನ್ನ ತಾಯಿಯ ಹೆಸರು ಹೆಲೀನಾ. ನಿನ್ನ ತಂದೆಯ ಹೆಸರು ಪೆತ್ರೋ. ನೀನು ಹುಟ್ಟಿದುದು ನಿಮ್ಮ ಕಾಲಗಣನೆಯ ಲೆಕ್ಕದಲ್ಲಿ ೧೨ ಆಗಸ್ಟ್ ೧೮೩೧ರಂದು. ನಿನಗೆ ಚಿಕ್ಕಂದಿನಲ್ಲಿಯೆ ಕ್ಯಾಥೊಲಿಕ್ ಚರ್ಚಿನಲ್ಲಿ ಮಂತ್ರದೀಕ್ಷೆ ಕೊಟ್ಟಿದ್ದರು.
ಕಲುಷಿತ ನೀರನ್ನು ಕುಡಿದುದರಿಂದ ಹೆಲೀನಾಗೆ ಕಾಲರಾ ವ್ಯಾಧಿ ತಗುಲಿತು. ವೈದ್ಯರು ಆಕೆ ಉಳಿಯುವ ಭರವಸೆಯನ್ನು ಬಿಟ್ಟಿದ್ದರು. ಆದರೂ ನಿನ್ನ ಪುಣ್ಯದಿಂದಲೋ ಏನೋ ಆಕೆ ಉಳಿದುಕೊಂಡಳು. ಹೆಲೀನಾ ರ?ದ ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ ಜನಿಸಿದವಳು. ನಿನ್ನ ತಂದೆ ಪೆತ್ರೋ ಜರ್ಮನಿ ದೇಶಸ್ಥ. ನಿನಗೆ ಫ್ರೆಂಚ್ ಇಂಗ್ಲಿ? ಭಾ?ಗಳೂ ಬರುತ್ತವೆ. ನೀನು ನಿನ್ನ ಕುಟುಂಬದ ಅಂತಸ್ತಿಗೆ ಹೊಂದದ ಬಡಮಕ್ಕಳೊಡನೆ ಸಮುದ್ರತೀರದಲ್ಲಿ ಮರಳಿನಲ್ಲಿ ಗೂಡು ಕಟ್ಟುತ್ತಲೋ ಬೇರೆ ಆಟಗಳನ್ನು ಆಡುತ್ತಲೋ ಕಾಲ ಕಳೆಯುತ್ತೀ ಎಂದು ಮನೆಯವರ ಅಸಮಾಧಾನ. ಆದರೆ ಇಡೀ ಸಮಾಜದ ಬಗೆಗೆ ನಿನಗೆ ತುಂಬಾ ಪ್ರೇಮ.
ಕೆಲವೇ ದಿನಗಳಲ್ಲಿ ನಿನ್ನ ತಂದೆ ನಿನ್ನನ್ನು ಲಂಡನ್ನಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಪಿಯಾನೊ ವಾದನವನ್ನು ಕಲಿತುಕೋ. ಕೆಲ ಸಮಯದ ತರುವಾಯ ನಿನ್ನ ತಂದೆಗೆ ಸೇಂಟ್ ಪೀಟರ್ಸ್ಬರ್ಗ್ಗೆ ವರ್ಗವಾಗುತ್ತದೆ. ಅಲ್ಲಿಂದ ನಿನ್ನ ಬದುಕಿಗೆ ಹೊಸ ತಿರುವು ಬರುತ್ತದೆ. ಇಡೀ ಮಾನವತೆಗೆ ದುರ್ಲಭವಾದ ಅತೀಂದ್ರಿಯ ವಿಜ್ಞಾನವನ್ನು ಜನರ ಮಟ್ಟಕ್ಕೆ ತಂದು ಪ್ರಸಾರ ಮಾಡುವ ಹೊಣೆಗಾರಿಕೆ ನಿನಗೆ ಇದೆ. ಅದು ನಿನ್ನಿಂದ ಮಾತ್ರ ಸಾಧ್ಯವಾಗುತ್ತದೆ.
ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನೀನು ಬರವಣಿಗೆಯ ಕ್ರಮಗಳನ್ನು ಕಲಿತುಕೋ. ಮೊದಲಿಗೆ ಇಂಗ್ಲಿಷಿನ ಬರಹಗಳನ್ನು ಅನುವಾದ ಮಾಡು. ಅದರಿಂದ ಬರವಣಿಗೆ ಅಭ್ಯಾಸವಾಗುತ್ತದೆ. ಒಂದ? ಕಾಲಾನಂತರ ನಿನಗೆ ಗೌತಮಬುದ್ಧನ ಸಾಕ್ಷಾತ್ಕಾರ ಆಗುತ್ತದೆ. ವೇದಸಾಹಿತ್ಯವನ್ನೂ ನೀನು ಅವಗತ ಮಾಡಿಕೊಳ್ಳುತ್ತೀ. ನೀನು ಪೋಲೆಂಡಿನಿಂದ ಹಿಂದಿರುಗಿದ ಮೇಲೆ ನಿನಗೆ ಒಬ್ಬ ತಮ್ಮನ ಜನನವಾಗುತ್ತದೆ. ಹೆಲೀನಾಳ ಮೂವರು ಮಕ್ಕಳನ್ನು ನಿನ್ನ ಅಜ್ಜ ಆಂಡ್ರೇಯ್ ಪಾಲನೆ ಮಾಡುತ್ತಾನೆ. ಆ ನಡುವೆಯೇ ನಿಮ್ಮ ಮನೆಯಲ್ಲಿ ಒಂದು ಸಾವು ಆಗುತ್ತದೆ. ನಿನ್ನ ಮುತ್ತಾತ ಫ್ರಾನ್ಸಿನಿಂದ ಓಡಿಹೋಗಿ ರ? ತಲಪುತ್ತಾನೆ.
ಈಗಲಾದರೂ ನನ್ನ ಮಾತುಗಳನ್ನು ನಂಬುತ್ತೀಯಾ?”
“ಅಯ್ಯಾ, ತೇಜೋಮೂರ್ತಿಯೆ, ಯಾವುದೋ ಅಹಿತಕರ ಘಟನೆಗಳು ನಡೆಯುತ್ತವೆಂದು ಸೂಚಿಸಿದಿರಿ. ಅದನ್ನು ಕುರಿತು ದಯವಿಟ್ಟು ವಿವರಿಸಿರಿ.”
“ಆಗಲಿ, ಹೇಳುತ್ತೇನೆ. ನಿನ್ನ ತಮ್ಮನ ನಿಧನವಾಗುತ್ತದೆ. ನಿನ್ನ ಸೋದರಿ ನಿನ್ನಲ್ಲಿ ಅತಿಶಯ ಪ್ರೇಮ ಬೆಳೆಸಿಕೊಂಡು ನಿನ್ನೊಡನೆಯೆ ಸಂಚರಿಸುತ್ತಾಳೆ. ನಿನ್ನ ಬಗೆಗೆ ಇತರರಿಗೆ ತಿಳಿಸುತ್ತಿರುತ್ತಾಳೆ.”
ಮುನ್ನಿ ಮಂತ್ರಮುಗ್ಧಳಾದಳು. ಏಕೆಂದರೆ ತನ್ನ ಕುಟುಂಬದ ಬಗೆಗೆ ತೇಜೋಮೂರ್ತಿ ಹೇಳಿದುದೆಲ್ಲ ಸತ್ಯಸಂಗತಿಗಳೇ ಆಗಿದ್ದವು. ಸಾಶಾ ಮರಣ ಕುರಿತೂ ತನಗೆ ಕೆಲವು (ಅಂತರ್ದರ್ಶನ) ’ವಿಜನ್’ಗಳಾಗಿದ್ದವು.
ಮುನ್ನಿ ತನ್ನ ನೀಲಿ ಕಣ್ಣುಗಳಿಂದ ಮುಗಿಲಿನತ್ತ ನೋಡುತ್ತ ಸ್ತಬ್ಧಳಾಗಿಬಿಟ್ಟಳು. ಮೌರ್ಯಸ್ವಾಮಿ ಅದೃಶ್ಯನಾದ. ಬಿಳಿಯ ಕುದುರೆ ಸಮುದ್ರದ ಅಲೆಗಳ ಮೇಲಿನಿಂದ ಭೂಮಿಗೆ ಬಂದಿತು.
“ಅಮ್ಮಯ್ಯ, ಇನ್ನು ಮುಂದೆ ನೀನು ನನ್ನ ಯಜಮಾನತಿ. ನನ್ನನ್ನು ಏರಿ ಕುಳಿತುಕೋ. ನಿನ್ನ ಕ?ಸುಖಗಳನ್ನು ನನ್ನಲ್ಲಿ ಹೇಳಿಕೊಳ್ಳಬಹುದು. ನಾವಿಬ್ಬರೂ ಪ್ರಪಂಚವನ್ನೆಲ್ಲ ಸುತ್ತಬೇಕಾಗಿದೆ. ಏನೇನೋ ರಹಸ್ಯಗಳನ್ನು ತಿಳಿದುಕೊಳ್ಳಬೇಕಾಗಿದೆ. ಅವನ್ನು ಮಾನವತೆಗೆ ತಿಳಿಸಿ ಎಲ್ಲರಿಗೂ ಸುಖಶಾಂತಿಗಳನ್ನು ಕಲ್ಪಿಸಬೇಕಾಗಿದೆ” ಎಂದಿತು, ಉಚ್ಚೈಶ್ರವಸ್ಸು.
ಮುನ್ನಿ ಕುದುರೆಯನ್ನು ಏರಿದಳು.
ಆ ಶ್ವೇತಾಶ್ವವು ತನ್ನ ಜೂಲನ್ನು ಹಾಗೂ ಹೀಗೂ ಆಡಿಸುತ್ತ ನಾಟ್ಯಭಂಗಿ ಮೆರೆಯುತ್ತ ಮರಳನ್ನು ಕಾಲಿನಿಂದ ಹಿಂದಕ್ಕೆ ಸರಿಸುತ್ತ ಧಾವಿಸಿತು.
ಮುನ್ನಿ ಕುದುರೆಯ ಭಂಗಿಯನ್ನು ಗಮನಿಸುತ್ತಿದ್ದಳು. ವಿಶೇ?ವೆಂದರೆ ಅದರ ಕಾಲುಗಳು ಭೂಮಿಗೆ ತಾಗಿದಂತೆಯೆ ಇರಲಿಲ್ಲ. ಎಂದರೆ ಅದು ಭೂಮಿಯ ಸ್ಪರ್ಶವಿಲ್ಲದೆಯೆ ಚಲಿಸುತ್ತಿತ್ತು. ಮುನ್ನಿ ಮನೆ ಸೇರಿಕೊಂಡಳು.
-೫-
ಹೆಲೀನಾಗೆ ಕಾಲರಾ ಅಂಟಿಕೊಂಡಿತು. ಅದು ಸೋಂಕು ವ್ಯಾಧಿಯಾದುದರಿಂದ ಮುನ್ನಿ ಕೂಡಾ ಹಾಸಿಗೆ ಹಿಡಿದಳು. ಸ್ಥಳೀಯ ವೈದ್ಯರು ಏನೂ ಮಾಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿದರು. ತಾಯಿ-ಮಗಳು ಇಬ್ಬರೂ ಉಳಿಯುವ ಸಂಭವ ಕಡಮೆ ಎಂದರು.
ತಂದೆ ಪೆತ್ರೋ ಆರ್ಥೊಡಾಕ್ಸ್ ಚರ್ಚಿಗೆ ಹೋಗಿ ಸಾಂಪ್ರದಾಯಿಕ ಪೂಜೆಗಳನ್ನು ಮಾಡಿಸಿದ. ಮೋಂಬತ್ತಿ ಹಚ್ಚಿದ, ಊದುಬತ್ತಿ ಹೊತ್ತಿಸಿದ, ಸ್ವರ್ಗಕ್ಕೆ ಕೇಳಿಸುವಂತೆ ಗಟ್ಟಿಯಾಗಿ ಗಂಟೆಯನ್ನು ಮೊಳಗಿಸಿದ, ಪ್ರಭುವಿನ ಆಶೀರ್ವಾದವನ್ನು ಬೇಡಿದ.
ಯುಕ್ರೇನ್ ಪ್ರಾಂತದಲ್ಲಿನ ನೀರು ಮಲಿನವಾಗಿದ್ದುದರಿಂದ ವ್ಯಾಧಿಯು ಬಹಳ ಮಂದಿಗೆ ಹರಡಿತ್ತು.
ಜಾರ್ ಚಕ್ರವರ್ತಿಯ ಸಾಮ್ರಾಜ್ಯ ತುಂಬಾ ವಿಶಾಲವಾಗಿತ್ತು. ಸಮೃದ್ಧವಾಗಿತ್ತು ಕೂಡಾ. ಆದರೆ ಪ್ರಜೆಗಳಿಗೆ ಶಿಕ್ಷಣವೂ ವೈದ್ಯಕೀಯ ಸೌಕರ್ಯಗಳೂ ಅ?ಗಿ ಲಭ್ಯವಿರಲಿಲ್ಲ.
ಒಮ್ಮೆ ಬಿಳಿಕುದುರೆ ಮುನ್ನಿಗೆ ಹೇಳಿತು – “ಸ್ವಲ್ಪ ಸಮಯದ ತರುವಾಯ ಇಲ್ಲಿ ವಿಪ್ಲವ ಸಂಭವಿಸಬಹುದು. ಅದಕ್ಕೆ ಜಾರ್ ಚಕ್ರವರ್ತಿಯೇ ಹೊಣೆಯನ್ನು ಹೊರಬೇಕಾಗುತ್ತದೆ.”
“ಆದರೆ ಇದೀಗ ನಾನೂ ತಾಯಿಯೂ ಬದುಕುತ್ತೇವೆಯೆ ಇಲ್ಲವೆ?”
“ಕೆಲವು ದಿನಗಳು ಮಂಚ ಬಿಟ್ಟು ಕದಲದೆ ಇರಿ. ಆನಂತರ ಯಥಾವಿಧಿ ನಿಮ್ಮ ಕೆಲಸಗಳಲ್ಲಿ ತೊಡಗಲು ಸಾಧ್ಯವಾದೀತು.”
ಮುನ್ನಿಯ ಮುಖದಲ್ಲಿ ನೆಮ್ಮದಿ ಕಂಡಿತು. ಕುದುರೆಯನ್ನು ಪ್ರೀತಿಯಿಂದ ನೇವರಿಸಿದಳು.
ಕುದುರೆ ಶಕ್ತಿಯ ಸಂಕೇತ. ಭಾರತದ ತಾಂತ್ರಿಕ ಪರಂಪರೆಯಲ್ಲಿ ಕುಂಡಲಿನೀಶಕ್ತಿಗೂ ಅಶ್ವದ ಹೋಲಿಕೆ ಕೊಡುವುದುಂಟು. ಹೀಗೆ ಆ ಕುದುರೆಯು ಬ್ಲಾವಟ್ಸ್ಕಿಯ ಅಂತರ್ಲೀನ ಚೈತನ್ಯದ ಬಾಹ್ಯ ಪ್ರತೀಕವೇ ಆಗಿತ್ತು. ಅವಳಿಗೆ ಬಲಹೀನತೆ ತೋರಿದಾಗಲೆಲ್ಲ ಕುದುರೆಯು ಅವಳ ಶಕ್ತಿಯನ್ನು ಪೂರೈಸುತ್ತಿತ್ತು.
ನಾವು ಊಟ ಮಾಡುತ್ತೇವೆ. ಗೋದಿಯ, ಬಾರ್ಲಿಯ ಅಥವಾ ಬೇರಾವುದೋ ಧಾನ್ಯದ ಪದಾರ್ಥವನ್ನೊ, ಮಾಂಸವನ್ನೊ ತಿನ್ನುತ್ತೇವೆ. ದೇಹದೊಳಕ್ಕೆ ಹೋದ ಮೇಲೆ ಅದು ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಅಂದರೆ ಅದೊಂದು ಭೌತಿಕ ಶಕ್ತಿ.
ನಾವು ಸಾಮಾನ್ಯವಾಗಿ ಭುಜಿಸುವುದು ಘನ ಅಥವಾ ದ್ರವರೂಪದ ಪದಾರ್ಥಗಳನ್ನು. ಆದರೂ ಅನಿಲ ಅಥವಾ ಈಥರ್ನಂತಹ ಎ? ವಿಶ್ವಶಕ್ತಿಗಳೂ ನಮ್ಮನ್ನು ಪ್ರವೇಶಿಸುತ್ತಿರುತ್ತವೆ. ಓಜೋನ್ ಮೂಲಕವೂ ಅಂತರಿಕ್ಷದಿಂದ ಶಕ್ತಿಯು ನಮ್ಮನ್ನು ಪ್ರವೇಶಿಸುತ್ತಿರುತ್ತದೆ.
ಮರಗಳು ಹೊರಹಾಕುವ ಗಾಳಿಯನ್ನು ನಾವು ಸೇವಿಸುತ್ತೇವೆ. ಅದೂ ಪ್ರಾಣಶಕ್ತಿಯೇ. ನಮ್ಮ ಮೈಮನಸ್ಸುಗಳಲ್ಲಿ ಚಲಿಸುವ ಆಲೋಚನೆಗಳು ರೂಪವಿಲ್ಲದ ಪ್ರಾಣಶಕ್ತಿ – ’ಆಸ್ಟ್ರೋ-ವಿಜನ್’. ಇದನ್ನು ದಾಟಿದ ಮೇಲೆ ಇರುವುದು ತೇಜಸ್ಸಿನಿಂದ ಕೂಡಿದ ಚೈತನ್ಯ. ಅದನ್ನು ತೊಡಗಿಸಿಕೊಳ್ಳುವುದೇ ಅತೀಂದ್ರಿಯ ರಹಸ್ಯ.
* * * * *
ಭಾರತದಿಂದ ಬಂದಿದ್ದ ಯೋಗಿಯು ತನಗೆ ಬಿಳಿಯ ಕುದುರೆಯನ್ನು ಕೊಟ್ಟು ಹೋದನೆಂದು ಮುನ್ನಿ ಹೇಳಿದಾಗ ತಾಯಿ ಕೋಪಗೊಂಡು ಹೇಳಿದಳು :
“ದಿನದಿಂದ ದಿನಕ್ಕೆ ನಿನ್ನ ಹುಚ್ಚು ಹೀಗೆಯೇ ಏರುತ್ತಿದ್ದರೆ ನಿನ್ನನ್ನು ಯಾರೂ ಮದುವೆ ಮಾಡಿಕೊಳ್ಳುವುದಿಲ್ಲ.”
ಮನೆಗಳಲ್ಲಿ ತಂದೆಯರು ಸಾಮಾನ್ಯವಾಗಿ ಗಡುಸಾಗಿ ಇರುತ್ತಾರೆ. ಆದರೆ ಪೆತ್ರೋಗೆ ಮಕ್ಕಳೆಂದರೆ ತುಂಬಾ ಒಲವು. ತಾಯಿಯಲ್ಲಿ ಇರಬೇಕಾದ ಮೃದುಸ್ವಭಾವ ಪೆತ್ರೋನಲ್ಲಿ ಮನೆಮಾಡಿತ್ತು. ಆತ ಸದಾ ಯಾವಾವುದೋ ಕಾರ್ಯಗಳಲ್ಲಿ ಮಗ್ನನಾಗಿರುತ್ತಿದ್ದರೂ ಮಕ್ಕಳೊಡನೆ ಒಂದ? ಸಮಯ ಕಳೆಯುವುದನ್ನು ತಪ್ಪಿಸುತ್ತಿರಲಿಲ್ಲ.
“ನನಗೆ ಒಬ್ಬ ಹಿಂದೂ ಯೋಗಿ ಬಿಳಿಯ ಕುದುರೆಯನ್ನು ಕೊಟ್ಟು ಹೋಗಿದ್ದಾನೆ” ಎಂದು ಮುನ್ನಿ ತಂದೆಗೆ ಹೇಳಿದಳು.
“ಆದರೆ ನಾವು ಭಾರತಕ್ಕೆ ಎಂದೂ ಹೋಗಿಯೇ ಇಲ್ಲವಲ್ಲ?”
“ಮುಂದೆ ಹೋಗಬೇಕಾದೀತೇನೋ ಯಾರಿಗೆ ಗೊತ್ತು!”
“ಆ ಕುದುರೆಯನ್ನು ಎಲ್ಲಿ ಕಟ್ಟಿಹಾಕಿದ್ದೀ?”
“ಅದು ಮನೆಯ ಮುಂದೆಯೆ ಇದೆ. ಆದರೆ ಅದು ಹುರುಳಿಯನ್ನು ತಿನ್ನುವುದಿಲ್ಲ. ನೀರನ್ನೂ ಕುಡಿಯುವುದಿಲ್ಲ. ಗಾಳಿಯಲ್ಲಿ ಆಗಾಗ ಎಗರುತ್ತದೆ.”
ಪೆತ್ರೋ ಗಟ್ಟಿಯಾಗಿ ನಕ್ಕ.
“ಹೋಗಲಿ, ಬಿಡು. ನಿನಗೊಂದು ರೆಕ್ಕೆಗಳಿರುವ ಕುದುರೆ ದೊರೆತ ಹಾಗಿದೆ. ಒಂದು ದಮ್ಮಡಿಯೂ ಖರ್ಚಿಲ್ಲದೆ ಗಾಳಿಯಲ್ಲಿ ಎಗರುವ ಕುದುರೆಯನ್ನು ನಿನಗೆ ಯಾರು ಕೊಟ್ಟರೊ ಏನೋ!”
-೬-
ಕಾಲ ಯಾವಾಗಲೂ ಒಂದೇ ವಿಧವಾಗಿ ಇರುವುದಿಲ್ಲ. ಒಂದೇ ರೀತಿ ಇರುವಂತೆ ಕಾಣುತ್ತದ?. ಇದನ್ನೇ ಭ್ರಾಂತಿ ಎನ್ನುವುದು: ಇಲ್ಲದ್ದು ಇರುವಂತೆಯೂ ಇರುವುದು ಇರದಂತೆಯೂ ಕಾಣುವುದು. ಇದು ಕಾಲವು ಮಾಡುವ ಚಮತ್ಕಾರ. ಇದೊಂದು ಇಂದ್ರಜಾಲ.
ಸಮುದ್ರದಲ್ಲಿ ಬಣ್ಣಬಣ್ಣದ ಮೀನುಗಳು ನೆಗೆದಾಡುತ್ತಿರುತ್ತವೆ. ಇಂದು ಕಂಡವು ನಾಳೆ ಕಾಣವು. ನಾಳೆ ಕಾಣುವವು ನಾಡಿದ್ದು ಇರುವುದಿಲ್ಲ. ಆದರೆ ಅಲ್ಲಿ ಏನೂ ಪರಿವರ್ತನೆಯಾಗಿಲ್ಲವೆಂದು ನಾವು ಭ್ರಮಿಸುತ್ತೇವೆ. ಒಬ್ಬ ಗ್ರೀಕ್ ತಾತ್ತ್ವಿಕ ಹೀಗೆಂದಿದ್ದಾನೆ:
“ಒಂದು ನದಿಯಲ್ಲಿ ನೀನು ಹತ್ತು ಸಾರಿ ಸ್ನಾನ ಮಾಡಿದ್ದೇನೆಂದು ಹೇಳಿದಲ್ಲಿ ಅದು ತಥ್ಯವಲ್ಲ. ವಾಸ್ತವವಾಗಿ ಒಮ್ಮೆಯೂ ಸ್ನಾನ ಮಾಡಿಲ್ಲ. ಏಕೆಂದರೆ ನೀನು ಇಳಿದ ನದಿ ಬೇರೆ, ನೀನು ಮೇಲಕ್ಕೆದ್ದ ನದಿ ಬೇರೆ.”
ಮುಗಿಲಿನಲ್ಲಿ ನಾವು ಇಂದು ನೋಡುತ್ತಿರುವ ನಕ್ಷತ್ರಗಳು ಕೋಟಿ ವ?ಗಳ ಹಿಂದಿನವು. ವಾಸ್ತವವಾಗಿ ಅವು ಅಲ್ಲಿ ಈಗ ಇಲ್ಲವೇ ಇಲ್ಲ. ಏಕೆಂದರೆ ಎ? ಕಾಂತಿವ?ಗಳ ದೂರದಲ್ಲಿರುವ ಅವು ನಮ್ಮ ಕಣ್ಣಿಗೆ ಕಾಣುವ ವೇಳೆಗೆ ಅದೃಶ್ಯವಾಗಿ ಬೇರೆಲ್ಲಿಗೋ ಹೋಗಿಬಿಟ್ಟಿರುತ್ತವೆ. ಆದರೆ ಸಾಮಾನ್ಯರಿಗೆ ಈ ಸೂಕ್ಷ್ಮಗಳೆಲ್ಲ ಅರಿವಿಗೆ ಬರುವುದಿಲ್ಲ. ಅವರಿಗೆ ಎದುರಿಗಿರುವುದೇ ಸತ್ಯ, ಎದುರಿಗಿಲ್ಲದುದು ಇಲ್ಲ. ಇದ್ದದ್ದು ಇಲ್ಲದಂತೆ, ಇಲ್ಲದುದು ಇದ್ದಂತೆ ಆಲೋಚಿಸುವ ಆವಶ್ಯಕತೆ ಅವರಿಗೆ ಇಲ್ಲ. ಇದು ಮಾನವಸ್ವಭಾವ. ಇದರಿಂದಾಗಿಯೆ ಆದಿಶಂಕರರಾಗಲಿ ಐನ್ಸ್ಟೈನ್ ಆಗಲಿ ಹೇಳಿರುವುದು ಯಾರಿಗೂ ಥಟ್ಟನೆ ಅರ್ಥವಾಗದು.
ಬ್ಲಾವಟ್ಸ್ಕಿಗೆ ಎಳವೆಯಲ್ಲಿ ಬೇರೆ ಮುದ್ದುಹೆಸರು ಇದ್ದಿತು. ಬೆಳೆದ ಮೇಲೆ ಒಂದು ಸಂದರ್ಭದಲ್ಲಿ ತನ್ನ ಹೆಸರನ್ನು ’ಜಾಕ್’ ಎಂದು ಬದಲಾಯಿಸಿಕೊಂಡಿದ್ದಳು. ಆಕೆ ಭಾರತಕ್ಕೆ ಬಂದ ಮೇಲೆ ಎಲ್ಲರೂ ಆಕೆಯನ್ನು ’ಮೇಡಂ ಬ್ಲಾವಟ್ಸ್ಕಿ’ ಎಂದು ಕರೆಯುತ್ತಿದ್ದರು.
ಹೆಸರು ಬೇರೆಯ?; ಪದಾರ್ಥ ಒಂದೇ! ಮೂಗುಬೊಟ್ಟು, ಹಾರ, ಕಂಕಣ – ಈ ಆಭರಣಗಳು ಬೇರೆಯಾದರೂ ಬಂಗಾರ ಒಂದೇ ತಾನೇ. ಇದನ್ನು ವೇದಾಂತಿಗಳು ’ವಿವರ್ತವಾದ’ ಎಂದಿದ್ದಾರೆ. ಹಾಗಾದರೆ ’ಪರಿಣಾಮವಾದ’ ಎಂದರೆ ಏನು? – ಎಂದರೆ ಡಾರ್ವಿನ್ ಹೇಳಿದುದು.
ಬ್ಲಾವಟ್ಸ್ಕಿಯ ರಕ್ತದೊಳಗೆ ಅವಳಿಗೇ ಅರಿವಿಲ್ಲದಂತೆ ಬಗೆಬಗೆಯ ಸನ್ನಿವೇಶಗಳೂ ಸಿದ್ಧಾಂತಗಳೂ ಲೀನವಾಗಿದ್ದವು. ಅವನ್ನು ಕ್ರೈಸ್ತಮತಮೂಲದವೆಂದೋ ಇಸ್ಲಾಮೀ ಎಂದೋ ಬೌದ್ಧ ಎಂದೋ ಕ್ರೈಸ್ತ ಅನುಭಾವಿ ಪರಂಪರೆಯದೆಂದೋ ಏನೂ ಹೇಳಬರುವುದಿಲ್ಲ. ಹಾಗಾದರೆ ಬ್ಲಾವಟ್ಸ್ಕಿಯದೇ ಆದ ತಾತ್ತ್ವಿಕತೆ ಏನು?
ಅವಳಿಗೇ ಅರಿಯದಂತೆ ಅವಳ ಅಂತರಂಗದಲ್ಲಿ ಒಂದು ಬಗೆಯ ನಿರಂತರ ಚಲನಶೀಲತೆ ಮನೆಮಾಡಿತ್ತು. ಈ ಪ್ರವೃತ್ತಿಯವರನ್ನು ’ಲುಮಿಡಿಕ್ಸ್’ ಎನ್ನುತ್ತಾರೆ. ಕಾವಡಿಯನ್ನು ಹೆಗಲ ಮೇಲಿರಿಸಿಕೊಂಡು ಪತ್ನಿಸಮೇತ ಒಂದು ನಾಯಿ, ಎರಡು ಕುರಿಗಳು, ನಾಲ್ಕು ಕೋಳಿಗಳು, ಒಂದು ಒಂಟೆತ್ತು ಬಂಡಿಯೊಡನೆ ಸ್ಥಳದಿಂದ ಸ್ಥಳಕ್ಕೆ ಸಂಚಾರ ಮಾಡುತ್ತಿರುವುದು ಅವರ ಕ್ರಮ. ಅವರಿಗೆ ತಮ್ಮದೆಂಬ ಸ್ವಸ್ಥಳ ಇಲ್ಲ. ಹೆಸರೂ ಇಲ್ಲ. ಉಂಡ ಕಡೆ ಮಲಗುವುದಿಲ್ಲ. ಮಲಗಿದೆಡೆ ಹತ್ತು ಗಂಟೆಗಳು ಕೂಡಾ ಉಳಿಯರು. ಅವರದು ಏನು ವೃತ್ತಿಯೋ ಅವರಿಗೇ ತಿಳಿಯದು. ಭಾರತದಲ್ಲಿ ಇಂತಹ ಸಂಚಾರಿ ಜಾತಿಗಳು ಬಹಳ ಇವೆ. ಪಾಶ್ಚಾತ್ಯ ದೇಶಗಳಲ್ಲಿ ಇವರನ್ನು ’ಜಿಪ್ಸಿ’ಗಳೆಂದು ಕರೆಯುತ್ತಾರೆ.
ಬ್ಲಾವಟ್ಸ್ಕಿಯಲ್ಲಿ ಇಂತಹ ಜಿಪ್ಸಿ ಸಂಸ್ಕಾರ ಸೇರಿಕೊಂಡಿದ್ದಿರಬೇಕು. ನಿಜ ಹೇಳಬೇಕೆಂದರೆ ಆಕೆ ಏನು ಮಾಡುತ್ತಿದ್ದಳೆಂದು ಆಕೆಗೇ ತಿಳಿದಿತ್ತೋ ಇಲ್ಲವೋ ಸಂದೇಹ. ತನ್ನ ಆಲೋಚನಾಸರಣಿಯ ಮೇಲೆ ಆಕೆಗೆ ನಿಯಂತ್ರಣ ಇದ್ದಿತೋ ಇಲ್ಲವೋ ಯಾರಿಗೆ ಗೊತ್ತು!
ಯುಕ್ರೇನ್ನಿಂದ ಸೇಂಟ್ ಪೀಟರ್ಸ್ಬರ್ಗ್ಗೆ ಪೆತ್ರೋಗೆ ವರ್ಗವಾಯಿತು. ತಂದೆಯೊಡನೆ ಮಕ್ಕಳೂ ಹೊರಟರು. ಹೆಲೀನಾಗೆ ಒಬ್ಬ ಮಗ ಜನಿಸಿದ. ಅವನಿಗೆ ಲಿಯೋ ಎಂದು ನಾಮಕರಣ ಮಾಡಿದರು. ಆನಂತರ ಹೆಲೀನಾ ಕ್ಷಯರೋಗಕ್ಕೆ ತುತ್ತಾಗಿ ಮೃತಳಾದಳು. ಹಾಗಾಗಿ ಮಕ್ಕಳು ಮಾತಾಮಹನಲ್ಲಿ ಬೆಳೆದರು.
ಆ ಹಿನ್ನೆಲೆಯಲ್ಲಿ ಬ್ಲಾವಟ್ಸ್ಕಿ ಕ್ರಮಕ್ರಮವಾಗಿ ಕುಟುಂಬದಿಂದ ಮಾನಸಿಕವಾಗಿ ದೂರವಾಗತೊಡಗಿದಳು.
(ಸಶೇಷ)
ತೆಲುಗು ಮೂಲ: ಪ್ರೊ|| ಮುದಿಗೊಂಡ ಶಿವಪ್ರಸಾದ್
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ