ಹೊಸಬಗೆಯ ಸ್ತ್ರೀವಾದವು ಅಸ್ತಿತ್ವಕ್ಕೆ ಬಂದ ಬಳಿಕ ಜಗತ್ತಿನ ಹಲವು ದೇಶಗಳಲ್ಲಿ ಅದು ಬಗೆಬಗೆಯ ಪರಿಣಾಮಗಳನ್ನು ಉಂಟುಮಾಡಿದೆ. ಭಾರತದಲ್ಲಿ ಅದು ಕೆಲವರ ಮೂಲಕ ಉಗ್ರಸ್ತ್ರೀವಾದದ ರೂಪವನ್ನು ಪಡೆದುಕೊಂಡಿತು. ಮಾತ್ರವಲ್ಲ, ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷ (೨೦೦೪-೧೪)ಗಳ ಅವಧಿಯಲ್ಲಿ ಅದಕ್ಕೆ ಅಧಿಕಾರಸ್ಥಾನದ ನಿಕಟ ಸಂಪರ್ಕವೂ ದೊರೆಯಿತು. ಸಮತೋಲನ ತಪ್ಪಿದೆ ಎನ್ನುವಷ್ಟು ಮಹಿಳೆಯರಿಗೆ ಪರವಾದ ಅನೇಕ ಶಾಸನಗಳನ್ನು ತರಲು ಅದಕ್ಕೆ ಸಾಧ್ಯವಾಯಿತು. ಅದರಿಂದ ನಷ್ಟವಾದದ್ದು, ಆಗುತ್ತಿರುವುದು ಹಿಂದೂ ಸಮಾಜಕ್ಕೆ; ಕಾರಣ ಹಿಂದೂ ವಿವಾಹ ಕಾಯ್ದೆಗೆ ಅನೇಕ ವಿಕೃತಿಗಳು ಸೇರಿಕೊಂಡದ್ದು. ಅದರ ಒಂದು ಸ್ಥೂಲ ಚಿತ್ರಣ ಇಲ್ಲಿದೆ.
ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕೋ ಐದೋ ವರ್ಷಗಳಿಗೊಮ್ಮೆ ಬರುವ ಚುನಾವಣೆಗೆ ತುಂಬ ಮಹತ್ತ್ವ ಇರುತ್ತದೆ. ಪ್ರಜಾಪ್ರಭುತ್ವದ ಕೇಂದ್ರದಲ್ಲಿರುವ ಪ್ರಜೆಗಳು ಆಗ ಸರಿಯಾದ ತೀರ್ಮಾನವನ್ನು ಕೈಗೊಂಡು ಯೋಗ್ಯರಾದವರನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಬೇಕು. ಅದಕ್ಕಾಗಿ ಆಗ ಅತ್ಯಂತ ಪ್ರಸ್ತುತವಾದ ವಿ?ಯಗಳ ಮೇಲೆ ಚರ್ಚೆ ನಡೆಯಬೇಕೇ ಹೊರತು ಮತದಾರ ಜನತೆಯನ್ನು ದಾರಿತಪ್ಪಿಸುವಂತಹ ಮಾತುಗಳಿಗೆ ಅಲ್ಲಿ ಅವಕಾಶ ಇರಬಾರದು. ಭಾರತದಲ್ಲಿ ಪ್ರಜಾಪ್ರಭುತ್ವವು ಪಕ್ವಗೊಂಡಿದೆ ಎಂದು ನಾವು ಆಗೀಗ ಹೇಳುತ್ತಿರುತ್ತೇವೆ. ಆದರೆ ಇಲ್ಲಿ ಚುನಾವಣೆಗೆ ಮುನ್ನ ಬರುವ ಮಾತುಗಳು, ನಡೆಯುವ ಚರ್ಚೆಗಳಾದರೂ ಎಂಥವು? “ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಮೋದಿಯವರು ವಿದೇಶದ ರಹಸ್ಯ (ಸ್ವಿಸ್) ಬ್ಯಾಂಕ್ ಖಾತೆಗಳಲ್ಲಿರುವ ಹಣ ತಂದರೆ ಪ್ರತಿಯೊಬ್ಬ ಭಾರತೀಯನ ಖಾತೆಗೂ ತಲಾ ೧೫ ಲಕ್ಷ ರೂ. ಹಾಕಬಹುದಾಗಿದೆ ಎಂದು ಹೇಳಿದ್ದರು. ಆದರೆ ಆ ಹಣ ಯಾರ ಖಾತೆಗಾದರೂ ಬಂತೆ?” ಎಂದು ಕಾಂಗ್ರೆಸಿನವರು (ಯಾವ ಜವಾಬ್ದಾರಿಯೂ ಇಲ್ಲದೆ) ಕೇಳುತ್ತಾರೆ. “ವಿದೇಶದಲ್ಲಿರುವ ಕಪ್ಪುಹಣ ತರಲು ನೀವು (ಕಾಂಗ್ರೆಸ್ನವರು) ಏನಾದರೂ ಮಾಡಿದ್ದಿದೆಯೆ? ಅಥವಾ ಈ ನಿಟ್ಟಿನಲ್ಲಿ ಎನ್ಡಿಎ ಸರ್ಕಾರದ ಸಾಧನೆ ನಿಮಗಿಂತ ಉತ್ತಮವಾಗಿದೆಯಲ್ಲವೆ?” ಎಂದು ಮತದಾರರು ಎಂದಾದರೂ ಅವರನ್ನು ಕೇಳಿದ್ದಿದೆಯೆ?
ಅದೇ ರೀತಿ ಬಿಜೆಪಿಯವರು ಭ್ರಷ್ಟಾಚಾರದ ವಿಷಯ ಎತ್ತಿದರೆಂದರೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ “ಬಿಜೆಪಿಯವರೆಲ್ಲ ಅದೇ ಕಾರಣಕ್ಕಾಗಿ ಜೈಲಿಗೆ ಹೋಗಿ ಬಂದವರು; ಅವರಿಗೆ ಈ ವಿಷಯವನ್ನು ಎತ್ತುವ ನೈತಿಕ ಹಕ್ಕು ಎಲ್ಲಿದೆ?” ಎಂದು ಪ್ರಶ್ನಿಸುತ್ತಾರೆ. “ನಿಮ್ಮ ಪಕ್ಷದಿಂದ ಭ್ರಷ್ಟಾಚಾರವೇನೂ ನಡೆದಿಲ್ಲವೆ? ೨-ಜಿ, ಕಲ್ಲಿದ್ದಲು ಹಗರಣಗಳೆಲ್ಲ ಏನು? ಅಥವಾ ಭ್ರಷ್ಟಾಚಾರದ ವಿರುದ್ಧ ಕ್ರಮಗಳೇ (ಜೈಲುವಾಸ ಇತ್ಯಾದಿ) ಜರುಗದಂತೆ ತಾವು ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿಲ್ಲವೆ?” ಇತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಅವರನ್ನು ಎದುರಿಸುವುದೇ ಇಲ್ಲ.
ಈ ನಡುವೆ ಭಾರತದಲ್ಲೊಂದು ವಿಚಿತ್ರ ಪರಿಸ್ಥಿತಿಯಿದೆ. ಇಲ್ಲಿ ಬಹುಸಂಖ್ಯಾತರೇ (ಹಿಂದುಗಳು) ಅತ್ಯಂತ ಶೋಷಿತರು. ಅವರನ್ನು ಒಡೆದು ಛಿದ್ರಗೊಳಿಸುವುದು ಮತ್ತು ಅಲ್ಪಸಂಖ್ಯಾತರನ್ನು ವೋಟ್ಬ್ಯಾಂಕಾಗಿ ರೂಪಿಸಿಕೊಂಡು ಅವರಿಗೆ ಬಗೆಬಗೆಯ ಅನುಕೂಲಗಳನ್ನು ಕಲ್ಪಿಸುವುದು ನಡೆಯುತ್ತಲೇ ಇದೆ. ವಿದೇಶೀ ಮೂಲದವರ ನೇತೃತ್ವ ಇರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕಡೆ ಮತ್ತು ಅಂತಹ ಸಂದರ್ಭಗಳಲ್ಲಿ ಇಂತಹ ವಿದ್ರೋಹವು ಬಹುವೇಗವಾಗಿ ನಡೆಯುತ್ತಿರುವುದನ್ನು ಗುರುತಿಸಬಹುದು. ಅದಕ್ಕೊಂದು ನೇರ ಮತ್ತು ಉತ್ತi ಉದಾಹರಣೆಯೆಂದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹತ್ತು ವರ್ಷಗಳ (೨೦೦೪- ೨೦೧೪) ಅವಧಿಯಲ್ಲಿ ಹಿಂದೂ ವಿವಾಹ ಕಾಯ್ದೆಯನ್ನು ದುರ್ಬಲಗೊಳಿಸುತ್ತಾ ಹೋದದ್ದು. ಆ ಅವಧಿಯಲ್ಲಿ ದೇಶದ ಸಂಸತ್ತು ಈ ಸಂಬಂಧವಾಗಿ ಹಲವಾರು ಶಾಸನ ಮತ್ತು ತಿದ್ದುಪಡಿಗಳನ್ನು ತಂದಿತು. ದೇಶದಲ್ಲಿ ನೈಜ ಅಧಿಕಾರವು ಓರ್ವ ಮಹಿಳೆಯ ಬಳಿ ಇದ್ದಾಗ ಕೆಲವು ಉಗ್ರ ಸ್ತ್ರೀವಾದಿಗಳು ಅದನ್ನು ಬಳಸಿಕೊಂಡು ತಮಗೆ ಅನುಕೂಲವಾದ ಅನೇಕ ಶಾಸನ-ತಿದ್ದುಪಡಿಗಳನ್ನು ಆ ಅವಧಿಯಲ್ಲಿ ತಂದರು. ಹಾಗೆ ಮಾಡುವಾಗ ಅವರು ದೇಶದ ಮಹಿಳಾ ಮತದಾರರ ವೋಟಿನ ಮೇಲೆ ಕಣ್ಣಿಟ್ಟಿದ್ದರೆ ಯಾವ ಆಶ್ಚರ್ಯವೂ ಇಲ್ಲ. ಪರಿಣಾಮವಾಗಿ ಒಟ್ಟಿನಲ್ಲಿ ದೇಶದ ಸ್ಥಿತಿ ಎಲ್ಲಿಗೆ ಬಂದು ತಲಪಿತೆಂದರೆ, ಇದುತನಕ ಸಂಪ್ರದಾಯದ ಬಗೆಗೆ ಒಲವು ಹೊಂದಿದ್ದ ಮತ್ತು ಜಗತ್ತೇ ಅಸೂಯೆಪಡುವಂತಹ ಕೌಟುಂಬಿಕ ವ್ಯವಸ್ಥೆಯನ್ನು ಹೊಂದಿದ್ದ ಒಂದು ಸಮಾಜ ಎಲ್ಲವನ್ನೂ ಕಳೆದುಕೊಂಡು ಬಟಾಬಯಲಿಗೆ ಬಂದು ನಿಂತಿದೆ. ’ಪ್ರಿಯಕರನ ಜೊತೆ ಸೇರಿ ಪತ್ನಿಯಿಂದ ಪತಿಯ ಕೊಲೆ’ಯಂತಹ ಸುದ್ದಿಗಳು ಇಂದು ದೇಶದ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವಿಪರೀತವಾಗಿ ರಾರಾಜಿಸುತ್ತಿದ್ದರೆ ಅದಕ್ಕೆ ಯುಪಿಎ ಆಳ್ವಿಕೆಯ ಹತ್ತು ವ?ಗಳಲ್ಲಿ ಈ ನಿಟ್ಟಿನಲ್ಲಿ ನಡೆದ ಬೆಳವಣಿಗೆಗಳು ಪ್ರಮುಖ ಕಾರಣ ಎಂಬುದು ಈಗಾಗಲೆ ಸಾಬೀತಾಗಿದೆ. ಆದರೆ ಕರ್ನಾಟಕವಿರಲಿ, ಇನ್ನೊಂದು ರಾಜ್ಯವಿರಲಿ, ಚುನಾವಣೆಯ ವೇಳೆ ಇದೊಂದು ಮುಖ್ಯ ವಿ?ಯವಾಗದ ನಮ್ಮದು ಎಂಥ ಪ್ರಜಾಪ್ರಭುತ್ವ? ಈಗ ಪ್ರಸ್ತುತ ವಿ?ಯದ ಪತನದ ಹಾದಿಯನ್ನು ಗಮನಿಸಬಹುದು.
ಅಜೆಂಡಾ ಯಾರದ್ದು?
ಕಳೆದ ಯುಪಿಎ ಸರ್ಕಾರದ ಎರಡೂ ಅವಧಿಗಳಲ್ಲಿ ಅಧಿಕಾರದ ಕೇಂದ್ರಸ್ಥಾನ ಶ್ರೀಮತಿ ಸೋನಿಯಾ ಗಾಂಧಿ ಅವರೇ ಆಗಿದ್ದರು ಎಂಬುದರಲ್ಲಿ ಯಾವುದೇ ಸಂದೇಹಕ್ಕೆ ಅವಕಾಶವಿಲ್ಲ. ಯಾವುದೋ ವಿವಾದ ಉಂಟಾಗಿ ಆಕೆ ಪ್ರಧಾನಿ ಪಟ್ಟವನ್ನು ಅಲಂಕರಿಸುವ ಸಂದರ್ಭ ತಪ್ಪಿತು ಎಂಬುದನ್ನು ಬಿಟ್ಟರೆ ಆಕೆಯ ಅನುಮತಿ ಇಲ್ಲದೆ ಸರ್ಕಾರದ ಮಟ್ಟದಲ್ಲಿ ಹುಲ್ಲುಕಡ್ಡಿ ಕೂಡಾ ಅಲುಗಾಡುತ್ತಿರಲಿಲ್ಲ. ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರು ಆ ಚೌಕಟ್ಟಿನೊಳಗೆ ಸೇರಿಕೊಂಡು ಹತ್ತು ವ? ಕಳೆದರು. ಈ ನಿಟ್ಟಿನಲ್ಲಿ ಸೋನಿಯಾ ಅ?ನೂ ವಿದ್ಯೆ, ಅನುಭವ ಇಲ್ಲದವರು; ಇಟಲಿ ಸಂಜಾತೆಯಾದ ಮೂಲಭೂತವಾದಿ ಕ್ರೈಸ್ತ ಮಹಿಳೆ ಎನ್ನುವ ಅಂಶಗಳೆಲ್ಲ ಮುಖ್ಯವಾಗುತ್ತವೆ. ಹೇಳುವುದಕ್ಕೆ ಯುಪಿಎ ಸರ್ಕಾರ ಮತನಿರಪೇಕ್ಷ (ಸೆಕ್ಯುಲರ್); ಆದರೆ ಅದಕ್ಕೆ ಕಟ್ಟಾ ಕೋಮುವಾದಿಗಳಾದ ಮುಸ್ಲಿಂ ಲೀಗ್, ಎಐಎಂಐಎಂ ಮುಂತಾದ ಪಕ್ಷಗಳ ಬೆಂಬಲವಿತ್ತು. ’ಸೆಕ್ಯುಲರ್ ಸರ್ಕಾರ’ ಎಂಬುದಕ್ಕೆ
ಹಿಂದುಗಳೆ ಟಾರ್ಗೆಟ್
ಯುಪಿಎ ಅಧಿಕಾರಾವಧಿಯಲ್ಲಿ ಪಾಶ್ಚಾತ್ಯ ದೇಶಗಳ ವಿನಾಶಕಾರಿ ಸಂಸ್ಕೃತಿಗಳಿಗೆ ದೇಶದೊಳಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಕ್ರೈಸ್ತ ಮತ್ತು ಮುಸ್ಲಿಂ ಮೂಲಭೂತವಾದಿಗಳ ಎನ್ಜಿಓಗಳು ದೇಶದಲ್ಲಿ ಪೂರ್ತಿ ಸಕ್ರಿಯವಾಗಿದ್ದವು. ಯುಪಿಎ ಸರ್ಕಾರವು ಎಡಪಂಥೀಯ ಎನ್ಜಿಓಗಳಿಗೆ ವಿಪುಲ ಅವಕಾಶ ನೀಡಿತ್ತು. ಅದೇ ವೇಳೆ ಹರ್ಷ ಮಂದರ್ನಂತಹ ಕಟ್ಟಾ ಹಿಂದೂದ್ವೇಷಿಗಳು ಕೋಮು ಹಿಂಸಾಚಾರ ತಡೆ ಕಾಯ್ದೆಯನ್ನು ತಂದರು. ಅದಕ್ಕಾಗಿ ಜಗತ್ತಿನ ಹಲವು ಇಸ್ಲಾಮೀ ಮೂಲಭೂತವಾದಿ ಎನ್ಜಿಓಗಳು ಆತನಿಗೆ ೧೦ ಕೋಟಿ ರೂ. ನೀಡಿವೆ ಎನ್ನಲಾಗಿದೆ. ಹಿಂದುಗಳನ್ನು ಇನ್ನೂ ಕೂಡ ಮುಸ್ಲಿಮರ ಗುಲಾಮರಾಗಿ ಇರಿಸುವುದು ಅಂತಹ ಕಾಯ್ದೆಯ ಉದ್ದೇಶ; ಅದರಂತೆ ಕೋಮು ಹಿಂಸಾಚಾರ ಯಾರಿಂದ ನಡೆದರೂ ಆರೋಪಿಗಳು ಹಿಂದುಗಳೇ ಆಗಿರುತ್ತಾರೆ.
ಅದು ಹೊಂದುವುದಿಲ್ಲ; ಮತ್ತು ಅದು ಸಾಂವಿಧಾನಿಕ ಚೌಕಟ್ಟಿಗೂ ಧಕ್ಕೆ ಬರುವ ಸಂದರ್ಭ. ಆದರೂ ಸೆಕ್ಯುಲರ್ ಎಂಬುದು ಕಾಂಗ್ರೆಸಿಗೆ ’ಮಾರಿಹೋಗಿರುವಾಗ’ ಮತ್ತು ಬುದ್ಧಿಜೀವಿಗಳಾದಿಯಾಗಿ ಎಲ್ಲರೂ ಅದಕ್ಕೆ ಸಾಕ್ಷಿ ನುಡಿಯುತ್ತಿರುವಾಗ ’ಹಾಗಲ್ಲ’ ಎನ್ನುವ ಸಾಮರ್ಥ್ಯ ಯಾರಿಗಿದೆ? ಹಿಂದೂ ವಿರೋಧಿಗಳು, ಹಿಂದೂ ಟೀಕಾಕಾರರು, ಮುಸ್ಲಿಂ ಮೂಲಭೂತವಾದಿಗಳು, ಕಟ್ಟಾ ಎಡಪಂಥೀಯರು, ಹುಸಿ ಜಾತ್ಯತೀತವಾದಿಗಳು ಮುಂತಾದ ಎಲ್ಲರ ಆಶಯಗಳು ಆ ಸರ್ಕಾರದೊಂದಿಗೆ ಇದ್ದವು; ಹಾಗಿರುವಾಗ ಹಿಂದೂ ಮೌಲ್ಯವ್ಯವಸ್ಥೆಯ ವಿನಾಶವೇ ಅವರ ಗುರಿಯಾಗಿದ್ದರೆ ಅದರಲ್ಲಿ ಏನಾಶ್ಚರ್ಯ?
ನೀತಿನಿರೂಪಕ ಸಂಸ್ಥೆಗಳು ಸೇರಿದಂತೆ ಪ್ರಮುಖ ಸರ್ಕಾರೀ ಸಂಸ್ಥೆಗಳ ಮುಖ್ಯಸ್ಥರ ನೇಮಕವೆಲ್ಲ ಕಾಂಗ್ರೆಸ್ ಅಧ್ಯಕ್ಷೆ ಮತ್ತವರ ಕೂಟದ ಸೂಚನೆಯಂತೆಯೇ ನಡೆಯುತ್ತಿದ್ದವು. ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ರಾಯಭಾರಿ ಸಂಸ್ಥೆಗಳಲ್ಲಿ ಕೂಡ ಹಿಂದೂವಿರೋಧಿಗಳ ನೇಮಕವೇ ನಡೆಯಿತು. ಅದಲ್ಲದೆ ಯುಪಿಎ ಸರ್ಕಾರದ ವೇಳೆ ಕೆಲವು ಸಮಯ ಕಮ್ಯುನಿಸ್ಟರು ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿದ್ದರು. ಹಿಂದೂಧರ್ಮದ ವಿರುದ್ಧವಾಗಿ ನಡೆದುಕೊಳ್ಳುವುದು ಎಡಪಂಥೀಯರ ಘೋಷಿತ ನೀತಿಯೇ ಆಗಿದೆ; ಅವರು ಕೂಡ ಆ ಸಂದರ್ಭವನ್ನು ಬಳಸಿಕೊಳ್ಳುವಲ್ಲಿ ಉತ್ಸುಕರಾಗಿದ್ದರು. ಹಲವು ನೇಮಕಾತಿಗಳು ಅವರ ಇ?ದ ಮೇರೆಗೆ ನಡೆಯುತ್ತಿದ್ದವು; ಮತ್ತು ಹೊಸ ಕಾನೂನುಗಳನ್ನು ತರುವಲ್ಲಿ ಕೂಡ ಅವರ ಪ್ರಭಾವ ಇತ್ತು. ಯುಪಿಎ ಸರ್ಕಾರದ ಕಾರ್ಯಸೂಚಿ (ಅಜೆಂಡಾ) ಅದರಂತೆ ರೂಪುಗೊಳ್ಳುತ್ತಿತ್ತು. ಒಟ್ಟಿನಲ್ಲಿ ಭಾರತದ ಸನಾತನಧರ್ಮ, ಅದರಲ್ಲೂ ಹಿಂದೂವಿವಾಹದ ಪಾವಿತ್ರ್ಯವನ್ನು ಕಿತ್ತೊಗೆಯುವುದು ಆ ಕಾಲದ ಒಂದು ಕಾರ್ಯಕ್ರಮವಾಯಿತು. ಒಟ್ಟಾರೆಯಾಗಿ ಗುಲಾಮೀ ಮನೋಭಾವದವರಾದ ಹಿಂದುಗಳು ಚುನಾವಣೆಗಳಲ್ಲಿ ಇಟಲಿ ಮಹಿಳೆಯನ್ನು ಗೆಲ್ಲಿಸುತ್ತಾ ಬಂದರು. ಒಂದ? ಜನ ಉಗ್ರಸ್ತ್ರೀವಾದಿಗಳು ಅದರೊಳಗೆ ಸೇರಿಕೊಂಡರು. ಪರಿಣಾಮವಾಗಿ ಯುಪಿಎ ಸರ್ಕಾರ ಉಗ್ರಸ್ತ್ರೀವಾದಿ ಮಹಿಳೆಯರಿಂದ ಉಗ್ರಸ್ತ್ರೀವಾದಿಗಳಿಗಾಗಿ ನಡೆದ ಉಗ್ರಸ್ತ್ರೀವಾದಿ ಮಹಿಳೆಯರ ಸರ್ಕಾರ ಎಂಬಂತಾಯಿತು. ಆ ಅವಧಿಯಲ್ಲಿ ಬಂದ ಎಲ್ಲ ಕಾಯ್ದೆಗಳು ಹಿಂದೂ ಸಮಾಜವನ್ನು, ಅದರಲ್ಲೂ ವಿಶೇಷವಾಗಿ ಹಿಂದೂ ಪುರುಷರನ್ನು ಬಾಧಿಸಿದವು.
ಉಗ್ರಸ್ತ್ರೀವಾದಿ ಮಹಿಳೆ
ಅಮೆರಿಕದಂತಹ ಹಲವು ದೇಶಗಳಲ್ಲಿ ಕಮ್ಯುನಿಸಂ ಬಹುತೇಕ ನಿಷೇಧ ಆದಂತಿದೆ. ಆದರೆ ಎಲ್ಲ ಚಿಂತನೆಗಳನ್ನು ಮುಕ್ತವಾಗಿ ಸ್ವಾಗತಿಸುವ ಭಾರತದಲ್ಲಿ ಸ್ವಾತಂತ್ರ್ಯದ ಆರಂಭದಿಂದಲೂ ಕಮ್ಯುನಿಸಂ ಆಯಕಟ್ಟಿನ ಜಾಗಗಳನ್ನು ಆಕ್ರಮಿಸುತ್ತಾ ಬಂದಿದೆ. ನೇರ ಎಡಪಂಥೀಯರು ಅಥವಾ ಎಡಪಂಥೀಯ ಒಲವಿನ ವ್ಯಕ್ತಿಗಳಿಗೆ ಮಣೆಹಾಕುವುದರಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಮೊದಲಿಗರಾಗಿದ್ದರು. ಅದೇ ವಂಶದ ಸೋನಿಯಾ ಗಾಂಧಿ ಅವರ ಯುಪಿಎ-ಒಂದು ಮತ್ತು ಯುಪಿಎ-ಎರಡರ ಅವಧಿಗಳಲ್ಲಿ ಇಂದಿರಾ ಜೈಸಿಂಗ್ ಎನ್ನುವ ಓರ್ವ ಎಡಪಂಥೀಯ ಮತ್ತು ಪುರುಷದ್ವೇಷಿ ನ್ಯಾಯವಾದಿ ಮಹಿಳೆ ಸೋನಿಯಾ ಆಪ್ತವಲಯದಲ್ಲಿ ಸೇರಿಕೊಂಡು ಸಾಕಷ್ಟು ಕರಾಮತ್ತು ನಡೆಸಿದರೆಂಬುದನ್ನು ’ಹಿಂದೂ ವಾಯ್ಸ್’ ಪತ್ರಿಕೆ ತನ್ನ ಅನೇಕ ಸಂಚಿಕೆಗಳಲ್ಲಿ ತೆರೆದಿಟ್ಟಿದೆ (ಲೇಖಕರು – ನ್ಯಾಯವಾದಿ ಸುರೇಂದ್ರನಾಥನ್). ಕೆಲವು ವಿ?ಯಗಳಲ್ಲಿ ಸೋನಿಯಾ ಅವರ ಅಜ್ಞಾನವನ್ನು ಆಕೆ ದುರುಪಯೋ ಗಪಡಿಸಿಕೊಂಡರೆಂದರೆ ತಪ್ಪಲ್ಲ. ಮಹಿಳೆಯನ್ನು ನರಕದ ಬಾಗಿಲೆಂದು ಚರ್ಚ್ ಬಣ್ಣಿಸುತ್ತದೆ; ಆ ಪ್ರಕಾರ ಮಹಿಳೆ ತುಂಬ ಶೋಷಿತೆ. ಹಿಂದೂ ಸಮಾಜ ಮಹಿಳೆಗೆ ನೀಡಿರುವ ಗೌರವ (ಉದಾ – ’ಮಾತೃದೇವೋ ಭವ’ಕ್ಕೆ ಅಗ್ರಸ್ಥಾನ) ಆಕೆಗೆ ಎ? ಗೊತ್ತಿದೆಯೋ ಗೊತ್ತಿಲ್ಲ. ಪ್ರಾಯಶಃ ಅದೇ ಕಾರಣದಿಂದ ಯುಪಿಎ ಆಡಳಿತದ ಉದ್ದಕ್ಕೂ ’ಮಹಿಳಾ ಸಬಲೀಕರಣ’ ಒಂದು ಮುಖ್ಯ ಕಾರ್ಯಕ್ರಮವಾಯಿತು.
ಆ ಹಿನ್ನೆಲೆಯಲ್ಲಿ ಅನೇಕ ಶಾಸನಗಳನ್ನು ಕಾರ್ಯಗತಗೊಳಿಸಿದರು. ಹತ್ತಾರು ನೀತಿಗಳು, ಕಾರ್ಯಕ್ರಮಗಳು ಜಾರಿಗೆ ಬಂದವು. ಅವು ನೇರವಾಗಿ ಹಿಂದೂ ವಿವಾಹ ವ್ಯವಸ್ಥೆಗೆ, ಅದರಲ್ಲೂ ಪುರು?ರಿಗೆ ವಿರುದ್ಧವಾಗಿದ್ದವು. ಈ ಕಾರ್ಯಸೂಚಿಗೆ ಉಗ್ರ ಸ್ತ್ರೀವಾದಿಗಳ ಅಂತಾರಾಷ್ಟ್ರೀಯ ಒಕ್ಕೂಟ ಯುನಿಫೆಮ್ (UNIFEM) – ಈಗ ಯುಎನ್ವಿಮೆನ್ – ಸಂಸ್ಥೆಯ ಬೆಂಬಲ ಸದಾ ಇರುತ್ತಿತ್ತು. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಯುನಿಫೆಮ್ನ ಉನ್ನತ (ಮಹಿಳಾ) ಅಧಿಕಾರಿಗಳು ಆಗಾಗ ಭಾರತಕ್ಕೆ ಆಗಮಿಸುತ್ತಿದ್ದರು. ಸೋನಿಯಾ ಗಾಂಧಿ, ಕೆಲವು ಉಗ್ರಸ್ತ್ರೀವಾದಿಗಳು ಹಾಗೂ ಇಂದಿರಾ ಜೈಸಿಂಗ್ ಅವರನ್ನು ಭೇಟಿ ಮಾಡುತ್ತಿದ್ದರು. ಯುಪಿಎ ಸರ್ಕಾರ ಇಂದಿರಾ ಜೈಸಿಂಗ್ ಅವರನ್ನು ನ್ಯಾಯಾಂಗದ ಪ್ರಮುಖ ಹುದ್ದೆಯಾದ ಅಡಿಶನಲ್ ಸಾಲಿಸಿಟರ್ ಜನರಲ್ ಹುದ್ದೆಗೆ ಕೂಡ ಏರಿಸಿತು. ’ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು’ ಎಂಬಂತೆ ಆಕೆಗೆ ಇದರಿಂದ ತಮ್ಮ ಕಾರ್ಯಸೂಚಿಯ ಅನು?ನಕ್ಕೆ ಅನುಕೂಲವಾಯಿತು. ಭಾರತದಲ್ಲಿ ಸನಾತನಧರ್ಮದ ಪ್ರಭಾವವನ್ನು ಮುಗಿಸುವಲ್ಲಿ ಇಂದಿರಾ ಜೈಸಿಂಗ್ ಕಾರ್ಯಪ್ರವೃತ್ತರಾದರು.
ಕೋಟಿಗಟ್ಟಲೆ ಹಣ
ಇದೇ ವೇಳೆ ಇಂದಿರಾ ಜೈಸಿಂಗ್ ಸ್ವತಂತ್ರ ಸರ್ಕಾರೇತರ ಸಂಸ್ಥೆ (ಎನ್ಜಿಓ) ’ಲಾಯರ್ಸ್ ಕಲೆಕ್ಟಿವ್ ವಿಮೆನ್ಸ್ ರೈಟ್ ಇನಿಷಿಯೇಟಿವ್’ (ಎಲ್ಸಿಡಬ್ಲ್ಯುಆರ್ಐ) ಅನ್ನು ಸ್ಥಾಪಿಸಿ, ತಾನೇ ಅದರ ಕಾರ್ಯನಿರ್ವಾಹಕ ನಿರ್ದೇಶಕಿ ಆದರು. ಜೊತೆಗೇ ಆಕೆ ಸಾಂವಿಧಾನಿಕ ಹುದ್ದೆಯಾದ ಅಡಿಶನಲ್ ಸಾಲಿಸಿಟರ್ ಜನರಲ್ (ಎಎಸ್ಜಿ) ಕೂಡ ಆಗಿದ್ದರು. ಆ ಸಂದರ್ಭದಲ್ಲಿ ಆಕೆಗೆ ಯುನಿಫೆಮ್ನಿಂದ ನೇರವಾಗಿ ೨೦ ಕೋಟಿ ರೂ. ಬಂದಿತ್ತು; ಅದರ ಉದ್ದೇಶ ಹಿಂದೂ ವಿವಾಹ ಎನ್ನುವ ವ್ಯವಸ್ಥೆಯನ್ನು ನಾಶಪಡಿಸುವುದು ಎಂದು ’ಹಿಂದೂ ವಾಯ್ಸ್’ ಲೇಖನಮಾಲೆ ವಿವರಿಸುತ್ತದೆ. ಆಗ ಇಂದಿರಾ ಜೈಸಿಂಗ್ ಅವರು ಒಂದು ವರದಿಯನ್ನು ತಯಾರಿಸಿದ್ದು, ಅದರಲ್ಲಿ ಭಾರತೀಯ ಕುಟುಂಬ ಮತ್ತು ಪುರು?ರ ಮಧ್ಯೆ ಸಿಕ್ಕಿ ಭಾರತೀಯ ಮಹಿಳೆ ನಲುಗುತ್ತಿದ್ದಾಳೆ; ಅವಳಿಗೆ ಬದುಕುವುದೇ ಕ?ವಾಗಿದೆ ಎಂದು ಬಣ್ಣಿಸಿದ್ದರು. ವರದಿಯ ಶೀರ್ಷಿಕೆ Staying Alive (ಜೀವಸಹಿತ ಇರುವುದು). ಈ ವರದಿಗಾಗಿ ಆಕೆಗೆ ಯುನಿಫೆಮ್ನ ಮೊದಲ ಕಂತು ೬೦ ಲಕ್ಷ ರೂ. ಬಂತೆನ್ನಲಾಗಿದೆ.
ಆ ವರದಿಗೆ ಸಂಬಂಧಿಸಿ ಇಂದಿರಾ ಜೈಸಿಂಗ್ ಇಂಗ್ಲಿಷ್ ದೈನಿಕವೊಂದರಲ್ಲಿ ’ಫ್ಯಾಮಿಲಿ ಅಗೈನ್ಸ್ಟ್ ವಿಮೆನ್ ಇನ್ ಇಂಡಿಯ’ (ಭಾರತದಲ್ಲಿ ಮಹಿಳೆಗೆ ವಿರುದ್ಧವಾದ ಕುಟುಂಬ ವ್ಯವಸ್ಥೆ) ಎನ್ನುವ ಒಂದು ಲೇಖನವನ್ನು ಬರೆದು ಅದರಲ್ಲಿ ಭಾರತದ ಕುಟುಂಬ ವ್ಯವಸ್ಥೆಯನ್ನು ಒಡೆಯುವ ಅಗತ್ಯವನ್ನು ವಿವರಿಸಿದರು. ಅದರಲ್ಲಿ ಆಕೆ “ಒಂದು ಕಾನೂನು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು ಒಂದು ವ? ಸೂಕ್ತ ಅವಧಿಯಾಗಿದೆ. ಆದರೆ ವಿವಿಧ ಆದೇಶ ಮತ್ತು ತೀರ್ಪುಗಳ ಬಗ್ಗೆ ಕಂಪ್ಯೂಟರ್- ಆಧಾರಿತ ಮಾಹಿತಿಕೋಶ ಇಲ್ಲದ ಕಾರಣ ಈ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗದು. ಆದ್ದರಿಂದ (ಈ ಕಾನೂನಿನ ರಚನೆಯಲ್ಲಿ ಭಾಗಿಯಾದ) ನಮ್ಮ ಲಾಯರ್ಸ್ ಕಲೆಕ್ಟಿವ್ ಅನು?ನದ ಮೌಲ್ಯಮಾಪನವನ್ನು ತಾನೇ ಮಾಡಿತು. ವಿವಿಧ ಹೈಕೋರ್ಟ್ಗಳಿಂದ ಮಾಹಿತಿಯನ್ನು ಸಂಗ್ರಹಿಸಲು ದೇಶದ ಮುಖ್ಯ ನ್ಯಾಯಾಧೀಶರು ಸ್ವತಃ ಸಹಕರಿಸಿದರು. ಆ ರೀತಿಯಲ್ಲಿ Staying Alive ಸಿದ್ಧಗೊಂಡಿದೆ” ಎಂದು ವಿವರಿಸಿದ್ದಾರೆ. ಆದರೆ ಆಕೆ ಸುಳ್ಳು ಪ್ರಚಾರದ ಎಡಸಿದ್ಧಾಂತಗಳನ್ನು ಬಹಳ? ಬಳಸಿಕೊಂಡದ್ದು ಯಾರಿಗೆ ಕೂಡ ತಿಳಿಯುವಂತಿದೆ.
ಈ ರೀತಿಯಲ್ಲಿ ಇಂದಿರಾ ಜೈಸಿಂಗ್ ಯುನಿಫೆಮ್ನ ಹಣವನ್ನು ಬಳಸಿಕೊಂಡು ಹಿಂದುಗಳ ವಿವಾಹ ವ್ಯವಸ್ಥೆಯನ್ನು ಹಾಳುಮಾಡುವ ಹಲವು ಶಾಸನಗಳನ್ನು ತಂದರು. ಅದರಂತೆ ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ ತಂದ ಮೊದಲ ಶಾಸನ ’ಕೌಟುಂಬಿಕ ಹಿಂಸೆಯಿಂದ ಮಹಿಳೆಗೆ ರಕ್ಷಣೆ ಕಾಯ್ದೆ’ (Protection of Women from Domestic Violence Act) – 2004. (ಅದನ್ನು ಸಂಕ್ಷಿಪ್ತವಾಗಿ ಡಿ.ವಿ. ಕಾಯ್ದೆ ಎಂದು ಕರೆಯುತ್ತಾರೆ.) ದೇಶದ ಸಂಸತ್ ಈ ಕಾಯ್ದೆಯನ್ನು ಮಂಜೂರು ಮಾಡುವಲ್ಲಿ ಇಂದಿರಾ ಜೈಸಿಂಗ್, ಫ್ಲೇವಿಯಾ ಆಗ್ನೆಸ್ರಂತಹ ಮಹಿಳೆಯರಿಗೆ ಸೋನಿಯಾ ಗಾಂಧಿಯವರ ಪೂರ್ಣ ಬೆಂಬಲವಿತ್ತು. ಈ ಶಾಸನದ ಮೂಲಕ ಹಿಂದೂ ಪುರು?ರು ಕೌಟುಂಬಿಕ ವ್ಯವಸ್ಥೆಯಲ್ಲಿ ಭಯಬೀಳುವಂತಹ ಹಲವು ಅಂಶಗಳನ್ನು ಸೇರಿಸಲಾಯಿತು. ಇದು ಸಾಲದೆಂಬಂತೆ ಯಾವುದೇ ನ್ಯಾಯಾಧೀಶರು ಪುರು?ರಿಗೆ ಪರವಾದ ತೀರ್ಪು ನೀಡಿದರೆ ಇಂದಿರಾ ಜೈಸಿಂಗ್ ಕಟುವಾಗಿ ಟೀಕಿಸುತ್ತಿದ್ದರು. ಅದರಿಂದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲೇ ಭಯಪೂರಿತ ಸ್ಥಿತಿ ಉಂಟಾಯಿತು.
ಯುಪಿಎ ಸರ್ಕಾರದ ಪೂರ್ತಿ ಅವಧಿಯಲ್ಲಿ ಆಕೆ ಮೇಲೆ ಹೇಳಿದ ಎರಡೂ ಹುದ್ದೆಗಳನ್ನು ಅಲಂಕರಿಸಿದ್ದರು. ಎಎಸ್ಜಿಯಾಗಿ ದೊಡ್ಡ ವೇತನವನ್ನು ಪಡೆಯುತ್ತಿದ್ದರೂ ತನ್ನ ಸಮಯವನ್ನೆಲ್ಲ ಎರಡನೇ ಹುದ್ದೆ (ಎಲ್ಸಿಡಬ್ಲ್ಯುಆರ್ಐನ ಇ.ಡಿ.)ಗೆ ವ್ಯಯಿಸುತ್ತಿದ್ದರು. ಅದರಲ್ಲಿ ಮುಖ್ಯವಾಗಿ ಗೂಢಚಾರಳಂತೆ ಇಡೀ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬರುವ ಈ ಸಂಬಂಧವಾದ ತೀರ್ಪುಗಳನ್ನು ಸಂಗ್ರಹಿಸಿ ಯುನಿಫೆಮ್ಗೆ ಪ್ರತಿವರ್ಷ ವರದಿ ಕಳುಹಿಸುತ್ತಿದ್ದರು. ಅಂತಹ ಪ್ರತಿಯೊಂದು ವರದಿಗೆ ಯುನಿಫೆಮ್ ೨ ಕೋಟಿ ರೂ.ಗಳನ್ನು ನೀಡುತ್ತಿತ್ತು.
ವಿನಾಶಕ್ಕೆ ಮುಕ್ತ ಅವಕಾಶ
ಯುಪಿಎ ಅಧಿಕಾರಾವಧಿಯಲ್ಲಿ ಪಾಶ್ಚಾತ್ಯ ದೇಶಗಳ ವಿನಾಶಕಾರಿ ಸಂಸ್ಕೃತಿಗಳಿಗೆ ದೇಶದೊಳಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು. ಕ್ರೈಸ್ತ ಮತ್ತು ಮುಸ್ಲಿಂ ಮೂಲಭೂತವಾದಿಗಳ ಎನ್ಜಿಓಗಳು ದೇಶದಲ್ಲಿ ಪೂರ್ತಿ ಸಕ್ರಿಯವಾಗಿದ್ದವು. ಯುಪಿಎ ಸರ್ಕಾರವು ಎಡಪಂಥೀಯ ಎನ್ಜಿಓಗಳಿಗೆ ವಿಪುಲ ಅವಕಾಶ ನೀಡಿತ್ತು. ಅದೇ ವೇಳೆ ಹ? ಮಂದರ್ನಂತಹ ಕಟ್ಟಾ ಹಿಂದೂದ್ವೇಷಿಗಳು ಕೋಮು ಹಿಂಸಾಚಾರ ತಡೆ ಕಾಯ್ದೆಯನ್ನು ತಂದರು. ಅದಕ್ಕಾಗಿ ಜಗತ್ತಿನ ಹಲವು ಇಸ್ಲಾಮೀ ಮೂಲಭೂತವಾದಿ ಎನ್ಜಿಓಗಳು ಆತನಿಗೆ ೧೦ ಕೋಟಿ ರೂ. ನೀಡಿವೆ ಎನ್ನಲಾಗಿದೆ. ಹಿಂದುಗಳನ್ನು ಇನ್ನೂ ಕೂಡ ಮುಸ್ಲಿಮರ ಗುಲಾಮರಾಗಿ ಇರಿಸುವುದು ಅಂತಹ ಕಾಯ್ದೆಯ ಉದ್ದೇಶ; ಅದರಂತೆ ಕೋಮು ಹಿಂಸಾಚಾರ ಯಾರಿಂದ ನಡೆದರೂ ಆರೋಪಿಗಳು ಹಿಂದುಗಳೇ ಆಗಿರುತ್ತಾರೆ. ಡೆನ್ಮಾರ್ಕ್, ಅಮೆರಿಕ, ಜರ್ಮನಿ ಮುಂತಾದ ದೇಶಗಳ ಹಲವು ಫೌಂಡೇಶನ್ಗಳಿದ್ದು ಅವು ಎನ್ಜಿಓಗಳಿಗೆ ಹಣ ನೀಡುವ ಉದ್ದೇಶವೇ ದೇಶದ ಅಭಿವೃದ್ಧಿಯನ್ನು ತಡೆಯುವುದು, ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತರುವುದು ಇತ್ಯಾದಿ ಆಗಿರುತ್ತದೆ.
ಡೆನ್ಮಾರ್ಕ್, ಅಮೆರಿಕ, ಜರ್ಮನಿ ಮುಂತಾದ ದೇಶಗಳ ಹಲವು ಫೌಂಡೇಶನ್ಗಳಿದ್ದು ಅವು ಎನ್ಜಿಓಗಳಿಗೆ ಹಣ ನೀಡುವ ಉದ್ದೇಶವೇ ದೇಶದ ಅಭಿವೃದ್ಧಿಯನ್ನು ತಡೆಯುವುದು, ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತರುವುದು ಇತ್ಯಾದಿ ಆಗಿರುತ್ತದೆ.
ಯುಪಿಎ ಆಡಳಿತದ ವೇಳೆ (೨೦೦೪-೧೪) ದೇಶದಲ್ಲಿ ಬಗೆಬಗೆಯ ಎನ್ಜಿಓಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು ’ಹಿಂದೂ ವಾಯ್ಸ್’ ಪತ್ರಿಕೆ ಅವುಗಳಲ್ಲಿ ಮುಖ್ಯವಾಗಿ ಮೂರು ವಿಭಾಗಗಳನ್ನು ಗುರುತಿಸಿದೆ. ಅವುಗಳೆಂದರೆ – ೧) ಪರಿವಾರ್ ತೋಡೋ (ಕುಟುಂಬವನ್ನು ಒಡೆಯುವುದು) ೨) ಸಮಾಜ್ ತೋಡೋ (ಸಮಾಜವನ್ನು ಒಡೆಯುವುದು) ೩) ದೇಶ್ ತೋಡೋ (ದೇಶವನ್ನು ಒಡೆಯುವುದು). ಅದರಲ್ಲಿ ಇಂದಿರಾ ಜೈಸಿಂಗ್ ಅವರ ಎನ್ಜಿಓ ಒಂದನೇ ವರ್ಗಕ್ಕೆ ಸೇರುತ್ತದೆ. ಆಕೆ ಎರಡು ಹುದ್ದೆಗಳನ್ನು ಹೊಂದಿದ್ದುದೇ ಸಂವಿಧಾನವಿರೋಧಿ ಕ್ರಮವಾಗಿತ್ತು. ದೇಶಪ್ರೇಮಿಗಳಿಂದ ಆಕೆಯ ಕಾರ್ಯಶೈಲಿಯ ವಿರುದ್ಧ ಹಲವು ದೂರುಗಳು ಕೂಡ ಬಂದಿದ್ದವು. ಆದರೆ ಆಕೆಗೆ ಇಟಲಿ ಮಹಿಳೆಯ ಬೆಂಬಲವಿದ್ದ ಕಾರಣ ಏನೂ ಆಗಲಿಲ್ಲ.
ಮುಸ್ಲಿಮರಿಗೆ ವಿನಾಯಿತಿ
ಇಂದಿರಾ ಜೈಸಿಂಗ್ ಅವರ ಕನಸಿನ ಕೂಸಾದ ಕೌಟುಂಬಿಕ ಹಿಂಸೆ ಕಾಯ್ದೆ(ಆ.ಗಿ. ಂಛಿಣ)ಯ ಬಗ್ಗೆ ನೋಡುವುದಾದರೆ ತಂದೆಯಿಲ್ಲದ ಸಮಾಜದ ಸೃಷ್ಟಿ ಆಕೆಯ ಗುರಿ ಎಂಬುದು ಅವಗತವಾಗುತ್ತದೆ. ಹಿಂದೂ ಪುರುಷರನ್ನು ಅದರಲ್ಲಿ ರಾಕ್ಷಸರಂತೆ ಚಿತ್ರಿಸಲಾಗಿದೆ. ಮಹಿಳೆಯರೋ ದೇವಾಂಗನೆಯರು, ಸದ್ಗುಣದ ಖನಿಗಳು. ಅವರಿಂದ ಯಾವುದೇ ಕೌಟುಂಬಿಕ ಹಿಂಸೆ ನಡೆಯುವುದಿಲ್ಲ. ಬಹುಶಃ ಅದೇ ಕಾರಣಕ್ಕೆ ಇರಬೇಕು; ಮಹಿಳೆಯರು ಯಾವ ಮಟ್ಟಕ್ಕೆ ಇಳಿದರೂ ಕೂಡ ಈ ಕಾಯ್ದೆಯಂತೆ ಅವರಿಗೆ ಶಿಕ್ಷೆ ಇಲ್ಲ. ಹೇಳುವುದಕ್ಕೆ ಡಿ.ವಿ. ಕಾಯ್ದೆ ಸೆಕ್ಯುಲರ್. ಜಮ್ಮು- ಕಾಶ್ಮೀರವನ್ನು ಹೊರತುಪಡಿಸಿ ಇಡೀ ದೇಶಕ್ಕೆ ಅದು ಅನ್ವಯವಾಗುತ್ತದೆ. ಆದರೆ ಹಲವಾರು ನ್ಯಾಯಾಂಗ ಪ್ರಕಟಣೆಗಳ ಮೂಲಕ ಮುಸ್ಲಿಮರಿಗೆ ಈ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ! (ಆ ರೀತಿಯಲ್ಲಿ ಮುಸ್ಲಿಮರ ’ಹಿತ’ವನ್ನು ಕಾಪಾಡಲಾಗಿದೆ.) ಕಳೆದ ವ? ಗುಜರಾತ್ ಹೈಕೋರ್ಟಿನ ಓರ್ವ ಮುಸ್ಲಿಂ ನ್ಯಾಯಾಧೀಶರು ತಮ್ಮ ಒಂದು ತೀರ್ಪಿನಲ್ಲಿ “ಮುಸ್ಲಿಂ ಅಪ್ರಾಪ್ತ ವಯಸ್ಕನು ಕಾನೂನುಬದ್ಧ ವಿವಾಹ ಆಗಬಹುದು. ಆದರೆ ಸಹಜೀವನ(ಲಿವ್-ಇನ್) ದ ಒಪ್ಪಂದಕ್ಕೆ ಆತ ಸಹಿಹಾಕುವಂತಿಲ್ಲ” ಎಂದು ಉಲ್ಲೇಖಿಸಿದ್ದರು. ತಾತ್ಪರ್ಯವೆಂದರೆ, ಬಾಲ್ಯವಿವಾಹ ನಿರ್ಬಂಧ ಕಾಯ್ದೆ ಮತ್ತು ಡಿ.ವಿ. ಕಾಯ್ದೆಗಳು ದೇಶದ ಮುಸ್ಲಿಮರಿಗೆ ಅನ್ವಯ ಆಗುವುದಿಲ್ಲ.
ಆಶ್ಚರ್ಯದ ವಿ?ಯವೆಂದರೆ, ತನ್ನದು ಐದು ದಶಕಗಳ ಹೋರಾಟ ಎನ್ನುವ ಇಂದಿರಾ ಜೈಸಿಂಗ್ ಎಂದೂ ದೇಶದ ಮುಸ್ಲಿಂ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಮಾತನ್ನೇ ಆಡಿಲ್ಲ. ಆ ಮಹಿಳೆಯರಿಗೆ ಪ್ರಾಥಮಿಕ ಸ್ವಾತಂತ್ರ್ಯವೇ ಇಲ್ಲ. ಪತಿ ಮತ್ತು ಮುಲ್ಲಾಗಳು ಅವರನ್ನು ಕೇವಲ ಚರಾಸ್ತಿಗಳಂತೆ ನೋಡುತ್ತಾರೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಯಲ್ಲಿದ್ದಾಗಲೂ ಮುಸ್ಲಿಂ ಮಹಿಳೆಯರ ಪಾಲಿಗೆ ಅತ್ಯಂತ ಮಾರಕವಾದ ತ್ರಿವಳಿ ತಲಾಖ್ನ ನಿ?ಧಕ್ಕಾಗಲಿ ಅಥವಾ ಬಹುಪತ್ನಿತ್ವದ ತಡೆಗಾಗಲಿ ಆಕೆ ಏನನ್ನೂ ಮಾಡಲಿಲ್ಲ. ಬದಲಾಗಿ ತ್ರಿವಳಿ ತಲಾಖ್ನ ನಿ?ಧಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಕಾರ್ಯಪ್ರವೃತ್ತವಾದಾಗ ಆಕೆ ಅದನ್ನು ವಿರೋಧಿಸಿದರು. ಇದು ದೇಶದ ಉಗ್ರಸ್ತ್ರೀವಾದಿಗಳು ಮತ್ತು ’ಬುದ್ಧಿಜೀವಿ’ಗಳ ದ್ವಂದ್ವನೀತಿಯಲ್ಲದೆ ಬೇರೇನೂ ಅಲ್ಲ. ಆಕೆ ಹಿಂದುಗಳನ್ನು “ಸಮಾಜದ ಕೀಳುಜನ. ಯಾವುದೇ ಮಾನವೀಯ ಹಕ್ಕನ್ನು ಹೊಂದಲು ಅವರು ಅರ್ಹರಲ್ಲ” ಎಂದು ನಿಂದಿಸಿದರು.
ಕಾನೂನು ದುರ್ಬಳಕೆ
ಸಮಾಜಸ್ವಾಸ್ಥ್ಯವನ್ನು ಎಲ್ಲಕ್ಕಿಂತ ಹೆಚ್ಚಾಗಿ ಕದಡಿರುವ ಸಂಗಂತಿಯೆಂದರೆ ಭಾರತೀಯ ದಂಡಸಂಹಿತೆಯ ೪೯೭-’ಎ’ ವಿಧಿಯ ತುಂಬಾ ವ್ಯಾಪಕ ದುರ್ಬಳಕೆ. ವಿಶೇ?ವಾಗಿ ವರದಕ್ಷಿಣೆಸಂಬಂಧಿತ ಹಿಂಸೆ, ದಹನ ಮೊದಲಾದ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ೧೯೮೩ರಲ್ಲಿ ಜಾರಿಗೆ ಬಂದದ್ದು ಈ ಶಾಸನ. ಅದರ ಅನುಸರಣೆ ಮೂಲೋದ್ದೇಶಕ್ಕೆ ಪೂರಕವಾಗಿ ಇದ್ದಿದ್ದರೆ ಆಕ್ಷೇಪ ಬರುತ್ತಿರಲಿಲ್ಲ. ಆದರೆ ಶಾಸನವನ್ನು ಅಮಲುಗೊಳಿಸುವ ಪ್ರಕ್ರಿಯೆಯಲ್ಲಿ ಘೋರ ವಿಕೃತಿಗಳು ತಲೆಹಾಕಿವೆ. ಇದಕ್ಕೆ ಸಂಬಂಧಿಸಿದ ನಡಾವಳಿಯನ್ನು ಎ? ಸುಲಭಗೊಳಿಸಲಾಗಿದೆಯೆಂದರೆ, ಪ್ರತಿಪಕ್ಷಗಳಿಗೆ ಕನಿ?ತಮ ರಕ್ಷಣೆಯಾಗಲಿ ಸ್ವಪಕ್ಷಮಂಡನೆಯ ಅವಕಾಶವಾಗಲಿ ಸುತರಾಂ ಇಲ್ಲ. ಒಬ್ಬ ಮಹಿಳೆ ತನ್ನ ದೂರನ್ನು ಠಾಣೆಗೆ ಹೋಗಿ ದಾಖಲೆ ಮಾಡಿದರೆ ಮುಗಿಯಿತು, ಅವಳು ಇನ್ನೇನೂ ಮಾಡಬೇಕಾಗಿಲ್ಲ. ಪೊಲೀಸರು ಕೂಡಲೆ ಆಕೆಯ ಪತಿಯನ್ನು ಬಂಧಿಸುತ್ತಾರೆ. ಠಾಣೆಯ ಸ್ತರದಲ್ಲಿ ಜಾಮೀನನ್ನೂ ನಿರಾಕರಿಸಲಾಗುತ್ತದೆ. ಉತ್ತರೋತ್ತರ ಮೊಕದ್ದಮೆ ನ್ಯಾಯಾಧೀಶರ ಮುಂದೆ ಹೋದಾಗ? ಜಾಮೀನಿಗೆ ಪ್ರಯತ್ನಿಸಬಹುದು.
ಯಾವಾವುದೋ ಕಾರಣಗಳಿಂದ ಪತಿಯ ಬಗೆಗೆ ಅಸಮಾಧಾನ ಬೆಳೆಸಿಕೊಂಡ ಪತ್ನಿ ಈಗ (ಸಾಮಾನ್ಯವಾಗಿ ದೀರ್ಘಕಾಲ ಎಳೆದಾಡುವ) ಸಿವಿಲ್ ನ್ಯಾಯಪ್ರಕ್ರಿಯೆಯ ಬೆನ್ನೇರಿ ಹೋಗುವ ಆವಶ್ಯಕತೆ ಇಲ್ಲ. ’ಗೃಹಹಿಂಸೆ’ಯ ಆಪಾದನೆ ಮಾಡಿ ಪೊಲೀಸ್ ಠಾಣೆಗೆ ಒಂದು ದೂರನ್ನು ಬರೆದಿತ್ತರೆ ಸಾಕು, ಇನ್ನೇನೂ ಮಾಡಬೇಕಾಗುವುದಿಲ್ಲ; ತನ್ನ ಆಪಾದನೆಗೆ ಆಧಾರವನ್ನು ನೀಡಬೇಕಾದ ಹೊಣೆಗಾರಿಕೆಯೂ ಅವಳಿಗೆ ಇರಬೇಕಾಗಿಲ್ಲ. ಅವಳ ಒಂದು ಪತ್ರದ ಆಧಾರವೇ ಪೊಲೀಸ್ ಕ್ರಮಕ್ಕೆ ಪರ್ಯಾಪ್ತವಾಗುತ್ತದೆ. ಇನ್ನೊಂದು ಹೆಚ್ಚುವರಿ ಅಂಶವೂ ಸೇರಿಕೊಂಡಿದೆ: ಆಪಾದಿತ ಪತಿಯ ಮೇಲೆ ಮಾತ್ರವಲ್ಲದೆ ಆತನ ಬಂಧುವರ್ಗದವರನ್ನೆಲ್ಲ ಆಪಾದಿತರನ್ನಾಗಿಸಲು ಅವಕಾಶ ಕಲ್ಪಿಸಲಾಗಿದೆ. ಈ ವಿಕೃತಿ ಸರಣಿಯಿಂದಾಗಿ ತಂದೆ-ಮಕ್ಕಳೋ ತಾಯಿ-ಮಕ್ಕಳೋ ಸಹೋದರರೋ ಸಹೋದರಿಯರೋ ತಾವು ಪ್ರಮುಖ ಆಪಾದಿತನ ಸಂಬಂಧ ಕಡಿದುಕೊಂಡಿರುವುದಾಗಿ ಘೋಷಿಸಬೇಕಾದ ವಿಚಿತ್ರ ಸ್ಥಿತಿಯೂ ಅನೇಕ ಪ್ರಸಂಗಗಳಲ್ಲಿ ಉದ್ಬುದ್ಧವಾಗಿದೆ.
ದಿನಕ್ಕೊಂದು ಶಾಸನ
ಯಾವುದೇ ಸಮಾಜದಲ್ಲಿ ಮತ್ತು ಯಾವುದೇ ಕಾಲದಲ್ಲಿ ಒಂದು ವಿ?ಯದ ಮೇಲೆ ಇ?ಂದು ಶಾಸನಗಳು, ತಿದ್ದುಪಡಿಗಳು ಅಥವಾ ಸರ್ಕಾರೀ ನಿರ್ಣಯಗಳು ಬಂದಿರಲು ಸಾಧ್ಯವಿಲ್ಲ. ಪ್ರತಿದಿನವೆಂಬಂತೆ ಬರುತ್ತಿದ್ದ ಇವು ಒಂದೆಡೆ ಹಿಂದೂ ದಾಂಪತ್ಯಜೀವನವನ್ನು ಛಿದ್ರಗೊಳಿಸುವಂತಿದ್ದರೆ ಇನ್ನೊಂದೆಡೆ ಪುರು?ರನ್ನು ನೇಣಿಗೇರಿಸುವಂತಿದ್ದವು.
ಆಗ ಹಿಂದೂ ವಿವಾಹ ಕಾಯ್ದೆಗೆ ತರಲಾದ ಪ್ರಮುಖ ತಿದ್ದುಪಡಿಗಳು ಹೀಗಿವೆ:
- ವಿವಾಹವಾದ ಓರ್ವ ಹಿಂದೂ ಮಹಿಳೆಗೆ ಆಕೆಯ ಪತಿಯ ಪಿತ್ರಾರ್ಜಿತ ಮತ್ತು ಸ್ವಂತ ಆಸ್ತಿಯಲ್ಲಿ ಶೇ. ೫೦ ಭಾಗ ಲಭಿಸುತ್ತದೆ; ಮತ್ತೆ ಆಕೆ ವಿಚ್ಛೇದನ ಪಡೆದರೆ ಅ? ಆಸ್ತಿಯನ್ನು ಆಕೆಗೆ ನೀಡಬೇಕು. ಸರಿಯಾದ ಪಾಲು ಎ?ಂಬುದನ್ನು ನ್ಯಾಯಾಧೀಶರು ತೀರ್ಮಾನಿಸುತ್ತಾರೆ.
- ಯುಪಿಎ ಸಚಿವಸಂಪುಟವು ಒಪ್ಪಿಗೆ ನೀಡಿದ ಈ ಸಂಬಂಧವಾದ ಮಸೂದೆ ಹಿಂದೂ ಮಹಿಳೆಯರಿಗೆ ವಿಚ್ಛೇದನವು ಸುಲಭದಲ್ಲಿ ಸಿಗುವಂತೆ ಮಾಡಿತು; ಆದರೆ ಪುರು?ರಿಗೆ ಆ ಅನುಕೂಲವನ್ನು ನೀಡಲಿಲ್ಲ.
- ಪತ್ನಿಯು ಪತಿಯ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿ ಶಿಕ್ಷೆಗೆ ಗುರಿಪಡಿಸಬಹುದು.
- ಗೃಹಿಣಿಯಾಗಿರುವ ಪತ್ನಿ ತನಗೆ ಸಂಬಳ ಬೇಕು ಎನಿಸಿದರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು; ಆಗ ನ್ಯಾಯಾಲಯ ಅದನ್ನು ನಿಗದಿಪಡಿಸುತ್ತದೆ.
ಯುಪಿಎ ಅವಧಿಯ ಸಂಸತ್ ಹಿಂದೂಧರ್ಮಕ್ಕೆ ವಿರುದ್ಧ ಎನ್ನಬಹುದಾದ ಹಲವಾರು ಶಾಸನಗಳನ್ನು ತಂದಿತು. ಅವುಗಳ ಬಗ್ಗೆ ಅಂದಿನ ಕಾನೂನು ಸಚಿವ ಕಪಿಲ್ ಸಿಬಲ್ ಅವರು, “ಅತ್ಯಂತ ಪ್ರಗತಿಪರ ಮತ್ತು ಬದಲಾಗುತ್ತಿರುವ ಜೀವನಕ್ರಮ ಹಾಗೂ ಆಧುನಿಕ ಯುಗದ ದೃಷ್ಟಿಯಲ್ಲಿ ಐತಿಹಾಸಿಕ ಶಾಸನಗಳು” ಎಂದು ಬಣ್ಣಿಸಿದ್ದರು. ಯುಪಿಎ ಸರ್ಕಾರವು ತಂದ ಶಾಸನಗಳಲ್ಲೇ ಅತ್ಯಂತ ಅಪಾಯಕಾರಿಯಾಗಿದ್ದ ಡಿ.ವಿ. ಕಾಯ್ದೆಯು ಹಿಂದೂ ದಾಂಪತ್ಯ ಜೀವನದ ತಳಹದಿಯನ್ನೇ ಅಲ್ಲಾಡಿಸಿತು. ಅದಕ್ಕೆ ಬೇಕಾದ? ಉದಾಹರಣೆಗಳನ್ನು ನೀಡಬಹುದು. ಒಂದು ಉದಾಹರಣೆಯಾಗಿ ಡಿ.ವಿ. ಕಾಯ್ದೆಯ ೧೭ನೇ ಸೆಕ್ಷನ್ ಅನ್ನು ಉಲ್ಲೇಖಿಸಬಹುದು. ಅದರಲ್ಲಿ ಹೀಗಿದೆ: “ಈಗ ಇರುವ ಶಾಸನದಲ್ಲಿ ಏನಾದರೂ ಇರಲಿ, ಇಲ್ಲದಿರಲಿ. ಮಹಿಳೆಗೆ ಒಂದು ಮನೆಯ ಸಂಬಂಧ ಇದೆ ಎಂದಾದರೆ ಅಲ್ಲಿ ಆಕೆಗೆ ವಾಸಿಸುವ ಹಕ್ಕಿರುತ್ತದೆ. ಆಕೆಗೆ ಸರಿಯಾದ ಪಟ್ಟಾ ಹಕ್ಕು ಇದ್ದರೂ ಇಲ್ಲದಿದ್ದರೂ ವಾಸಿಸುವ ಹಕ್ಕು ಇದ್ದೇ ಇರುತ್ತದೆ.” ಈ ಅಂಶದಿಂದಾಗಿ ಹಿಂದೂ ಪುರು?ರಿಗೆ ಮತ್ತು ಅವರ ಆಸ್ತಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಯಾವುದೇ ಹೊತ್ತಿಗೆ ಯಾವುದೇ ಮಹಿಳೆ ’ಕೌಟುಂಬಿಕ ಸಂಬಂಧ’ ಇದೆ ಎಂದು ಹೇಳಿ ಮನೆಯೊಂದರಲ್ಲಿ ’ಉಳಿಯುವ ಹಕ್ಕನ್ನು’ ಕೇಳಬಹುದು.
ರಾಜೇಶ್ ಖನ್ನಾ ಕೇಸು
ಅದಕ್ಕೊಂದು ಉದಾಹರಣೆ – ಹಿಂದೀಯ ಸೂಪರ್ಸ್ಟಾರ್ ರಾಜೇಶ್ ಖನ್ನಾ ಅವರು ನಿಧನ ಹೊಂದಿದಾಗ ಅನಿತಾ ಆಡ್ವಾಣಿ ಎನ್ನುವ ಮಹಿಳೆ ಪ್ರತ್ಯಕ್ಷವಾಗಿ ಡಿ.ವಿ. ಕಾಯ್ದೆಯ ಸೆಕ್ಷನ್ ೧೭ರ ಪ್ರಕಾರ ಮನೆವಾರ್ತೆಯಲ್ಲಿ ಪಾಲು (shಚಿಡಿeಜ househoಟಜ) ಕೇಳಿದರು. ಆಕೆ ಕಾನ್ವೆಂಟ್ ಶಿಕ್ಷಣ ಪಡೆದ ಸುಮಾರು ೪೫ ವ? ವಯಸ್ಸಿನ ಮಹಿಳೆ. ಖನ್ನಾ ಕುಟುಂಬದವರಿಗೆ ಆಕೆ ಗೊತ್ತೇ ಇಲ್ಲ. ಖನ್ನಾ ತನ್ನ ಜೊತೆ ’ಕೌಟುಂಬಿಕ ಸಂಬಂಧ’ ಹೊಂದಿದ್ದರು, ಆದ್ದರಿಂದ ಖನ್ನಾ ಅವರ ಆಸ್ತಿಯಲ್ಲಿ ತನಗೊಂದು ಪಾಲು ಕೊಡಬೇಕಾಗುತ್ತದೆ ಎಂದಾಕೆ ಕೇಳಿದಳು; ಮಾತ್ರವಲ್ಲ ಖನ್ನಾ ಕುಟುಂಬದವರ ವಿರುದ್ಧ ಕ್ರಿಮಿನಲ್ ದಾವೆ ಹೂಡಿದಳು. “ನಾನು ೧೩ ವ?ದವಳಿದ್ದಾಗ ಖನ್ನಾ ನನ್ನನ್ನು ಎಳೆದು ಮುತ್ತುಕೊಟ್ಟರು” ಎಂಬುದು ಸಂಬಂಧಕ್ಕೆ ಆಕೆ ನೀಡಿದ ಒಂದು ನಿದರ್ಶನ. ಏನೇ ಇರಲಿ, ಪ್ರಸ್ತುತ ಕಾನೂನಿನ ಪ್ರಕಾರ ಆಕೆ ಪಾಲಿಗೆ ಅರ್ಹಳಾಗುತ್ತಾಳೆ.
ಸುಮಾರು ಹತ್ತು ವ? ಆಕೆ ಹೂಡಿದ ದಾವೆ ನಡೆದು, ಕೊನೆಗೆ ಕೋರ್ಟಿಗೆ ಅವಳ ವಾದ ಸುಳ್ಳೆಂದು ಮನವರಿಕೆಯಾಗಿ ಕೇಸನ್ನು ವಜಾ ಮಾಡಿತು. ಆದರೆ ಅ? ಕಾಲ ಖನ್ನಾ ಅವರ ಮನೆಯವರು ಬಹಳ? ಕ?, ಮಾನಸಿಕ ನೋವುಗಳನ್ನು ಅನುಭವಿಸಬೇಕಾಯಿತು; ಆಕೆಗೆ ಅವಳ ಜಾಗ ತೋರಿಸಲು ಒಂದ? ಶ್ರಮ, ಸಮಯ, ಹಣ ವ್ಯರ್ಥವಾಯಿತು. ಇ?ದರೂ ಅಂತಹ ಮಹಿಳೆಯರಿಗೆ ಶಿಕ್ಷೆ ಅಥವಾ ದಂಡ ವಿಧಿಸಲು ಡಿ.ವಿ. ಕಾಯ್ದೆಯಲ್ಲಿ ಅವಕಾಶವಿಲ್ಲ. ರಾಜೇಶ್ ಖನ್ನಾ ಪ್ರಸಿದ್ಧ ವ್ಯಕ್ತಿಯಾದ ಕಾರಣ ಅನಿತಾ ಆಡ್ವಾಣಿ ಪ್ರಕರಣಕ್ಕೆ ಮಾಧ್ಯಮಗಳಲ್ಲಿ ತುಂಬ ಪ್ರಚಾರ ಸಿಕ್ಕಿತು. ಸಾಮಾನ್ಯ ಜನರದ್ದಾದರೆ ಅದನ್ನು ಕೇಳುವವರೇ ಇರುತ್ತಿರಲಿಲ್ಲ. ಬಹಳ? ಸಲ ಮಹಿಳೆಯರು ಒಡ್ಡುವ ಇಂತಹ ಪ್ರಕರಣಗಳಿಗೆ ಗುರಿಯಾಗುವವರು ವೃದ್ಧರಾಗಿದ್ದು ಅವರಿಗೆ ಹೋರಾಡುವುದಕ್ಕೂ ಸಾಧ್ಯವಿರುವುದಿಲ್ಲ.
ಸಾಕ್ಷ್ಯ ಬೇಕಿಲ್ಲ
ಆಶ್ಚರ್ಯವೆಂದರೆ, ಡಿ.ವಿ. ಕಾಯ್ದೆಯ ಪ್ರಕಾರ ಈ ರೀತಿ ಪಾಲು ಕೇಳುವ ಹೆಂಗಸರು ಯಾವುದೇ ಸಾಕ್ಷ್ಯವನ್ನು ಒದಗಿಸಬೇಕಿಲ್ಲ! ಅವರು ಹೇಳಿದ್ದನ್ನೇ ನೂರಕ್ಕೆ ನೂರು ಸತ್ಯವೆಂದು ನಂಬಲಾಗುತ್ತದೆ. ಯಾರಿಂದ ಪರಿಹಾರ ಕೇಳಿದ್ದಾರೋ ಆ ಮನು? ಬದುಕಿರುವವರೆಗೆ ಕಾನೂನು ಕ್ರಮದ ದಾಳಿ ನಡೆಯುತ್ತದೆ. ಅಂದರೆ ಈ ಕಾನೂನಿನ ಮೂಲಕ ಅಮಾಯಕ ಪುರು?ರ ರಕ್ತವನ್ನು ಯಾವ ರೀತಿ ಹೀರಬಹುದೆಂಬುದನ್ನು ಮನಗಾಣಬಹುದು.
ದಾಂಪತ್ಯವೇ ಐಚ್ಛಿಕ!
ತನಗೆ ಇ?ಬಂದ ಹಾಗೆ ಪತಿಯನ್ನು ತೊರೆದು ಅವನ ಸಕಲ ಆಸ್ತಿಯ ಶೇ. ೫೦ ಪಾಲನ್ನು ಪಡೆಯಬಹುದಾದರೆ ಬದುಕಿರುವ ತನಕ ಒಬ್ಬನ ಹೆಂಡತಿಯಾಗಿ ಜೊತೆಗಿರುವ ಅಗತ್ಯವಾದರೂ ಏನು? ಆದ? ಬೇಗ ಅವನನ್ನು ತೊರೆದು ಅವನ ಆಸ್ತಿಯಲ್ಲಿ ಅರ್ಧಭಾಗವನ್ನು ಪಡೆದುಕೊಂಡು ಈಚೆಗೆ ಬರಬಹುದಲ್ಲವೆ? ವಿಚ್ಛೇದನಕ್ಕೆ ’ಕೌಟುಂಬಿಕ ಹಿಂಸೆ’ ಎನ್ನುವ ಕಾರಣವನ್ನು ಕೊಟ್ಟರೆ ಸಾಕು. ಇದು ಭಾರತದ ಉಗ್ರಸ್ತ್ರೀವಾದಿಗಳ ಕೊಡುಗೆ. ಇದೇ ಮನಮೋಹನ ಸಿಂಗ್ ಅವರ ಯುಪಿಎ ಸರ್ಕಾರವು ತಂದ ’ಮಹಿಳಾ ಸ್ನೇಹಿ ವಿಚ್ಛೇದನ.’
ಕೌಟುಂಬಿಕ ಹಿಂಸೆಯ ಬಗ್ಗೆ ಯಾವುದೇ ಸಾಕ್ಷ್ಯ ನೀಡಬೇಕಿಲ್ಲ ಎನ್ನುವುದು ವಿಚ್ಛೇದನಕ್ಕೆ ತವಕಿಸುವ ಮಹಿಳೆಯರಿಗೆ ದೊಡ್ಡ ವರದಾನವೇ ಆಗಿದೆ. ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರಾಯಿತು. ಎಫ್ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿದ ಪೊಲೀಸರು ಆಕೆಯ ಮಾತನ್ನು ಪೂರ್ತಿ ಸತ್ಯವೆಂದು ಸ್ವೀಕರಿಸಿ ಕ್ರಮ ಕೈಗೊಳ್ಳುತ್ತಾರೆ. ಈ ಕಾಯ್ದೆಯಂತೆ ಕಾನೂನುಕ್ರಮವನ್ನು ಆರಂಭಿಸುವುದಕ್ಕೆ ಸಮಯದ ಮಿತಿ ಕೂಡ ಇಲ್ಲ. ಯಾವಾಗ ಬೇಕಾದರೂ ಯಾವುದೇ ಸಿವಿಲ್, ಕ್ರಿಮಿನಲ್ ಅಥವಾ ಕುಟುಂಬ ನ್ಯಾಯಾಲಯದ ಮುಂದೆ ದಾವೆ ಹೂಡಬಹುದು. ವಿಚ್ಛೇದನದ ಅನಂತರವೂ ಪತಿಯಾಗಿದ್ದವನ ವಿರುದ್ಧ ದಾವೆ ಹೂಡಬಹುದು.
ಸದಾ ಪುರುಷರೇ ’ಅಪರಾಧಿಗಳು’ !
’ಒಬ್ಬ ಮಹಿಳೆಯ ರಕ್ಷಣೆಯ ವ್ಯಾಜದಲ್ಲಿ ಅವಳ ಅತ್ತೆ ಮೊದಲಾದ ಅನ್ಯ ಮಹಿಳೆಯ ಮೇಲೆಯೇ ಹಿಂಸಾಚರಣೆ ನಡೆದಿದೆ ಈ ಕಾನೂನಿನ ಅಡಿಯಲ್ಲಿ’ – ಎಂದು ಅತ್ತೆಯರ ಮತ್ತಿತರ ಮಹಿಳೆಯರ ಸಂಘಟನೆಯ ಅಧ್ಯಕ್ಷರಾಗಿದ್ದ ಡಾ. ಅನುಪಮ್ ಸಿಂಗ್ ಅವರು ಅಭಿಪ್ರಾಯ ಪಟ್ಟಿದ್ದರು. ಅಂಕಿ-ಸಂಖ್ಯೆಗಳಿಂದ ಹೊರಪಟ್ಟಿರುವ ಅಂಶವೆಂದರೆ – ವಿರಸದ ಕಾರಣದಿಂದ ಮಹಿಳೆಯರು ಸಾಯುತ್ತಿರುವಂತೆ ಪುರು?ರೂ ಗಣನೀಯ ಪ್ರಮಾಣದಲ್ಲಿ ಸಾಯುತ್ತಿದ್ದಾರೆ – ಎಂಬುದು. ಆದರೂ ಮಾಧ್ಯಮಗಳೂ ’ಸುಧಾರಕ’ರೂ ಎತ್ತಿ ಆಡುವುದು ಮಹಿಳೆಯರ ಸಾವನ್ನು ಕುರಿತು ಮಾತ್ರ. ಪತಿಯ ಮೇಲೆ ಪತ್ನಿಯು ದೌರ್ಜನ್ಯ ನಡೆಸಿರುವ ಪ್ರಕರಣಗಳು ಧಾರಾಳವಾಗಿಯೇ ಇವೆ – ಎಂದು ’ಸೇವ್ ಇಂಡಿಯನ್ ಫ್ಯಾಮಿಲಿ’ ವೆಬ್ಸೈಟಿನ ಸಂಚಾಲಕ ವರಪ್ರಸಾದ್ ಹೇಳಿದ್ದರು.
ದಾವೆ ಹೂಡಿದ ಮಹಿಳೆ ಪತಿಯು ತನ್ನ ಸ್ವಂತ ಮನೆಗೆ ಕೂಡ ಪ್ರವೇಶಿಸದಂತೆ ನ್ಯಾಯಾಲಯದಿಂದ ಶಾಶ್ವತ ಇಂಜಂಕ್ಷನ್ ಪಡೆದುಕೊಳ್ಳಬಹುದು. ಈ ಕಾಯ್ದೆಯಿಂದಾಗಿ ಈಗ ೫೦-೬೦ ವ? ದಾಟಿದ ಮಹಿಳೆಯರು ಪಾಲಿಗಾಗಿ ಗಂಡನ ಮೇಲೆ ಕೇಸು ಹಾಕಿ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ; ಅಂಥವರು ಅನೈತಿಕ ಸಂಬಂಧಗಳನ್ನು ಇರಿಸಿಕೊಳ್ಳುವುದಕ್ಕೆ ಕಾನೂನಿನಲ್ಲಿ ತಕರಾರು ಇಲ್ಲ. ಅದನ್ನು ಪುರಸ್ಕರಿಸಲಾಗುತ್ತದೆ ಎಂದರೂ ತಪ್ಪಲ್ಲ. ಇಂತಹ ಘಟನೆಗಳು ಈಚೆಗೆ ಹೆಚ್ಚುತ್ತಲೇ ಇವೆ. ಎಸ್.ಎಲ್. ಭೈರಪ್ಪನವರ ’ಕವಲು’ ಕಾದಂಬರಿ ಇದನ್ನು ಗುರುತಿಸಿದೆ.
ವಿದೇಶದಲ್ಲಿ ಮಸಿ
ವಿವಿಧ ಕಾರಣಗಳಿಗಾಗಿ ಇಂದಿರಾ ಜೈಸಿಂಗ್ ಸಾಕ? ವಿದೇಶ ಪ್ರವಾಸ ಮಾಡಿದವರು. ವಿದೇಶ ಪ್ರವಾಸದ ವೇಳೆ ತನ್ನ ಉದ್ದೇಶ ಸಾಧನೆಗಾಗಿ ಆಕೆ ಹಿಂದೂ ಪುರು?ರಿಗೆ ಸಾಕ? ಮಸಿಬಳಿಯುತ್ತಾ ಬಂದಿದ್ದಾರೆ. “ಮಹಿಳೆಯರಿಗೆ ಸ್ವಂತದ್ದಾದ ಮನಸ್ಸಿಲ್ಲ. ಆದ್ದರಿಂದ ಅವರನ್ನು ಆಸ್ತಿಯಂತೆ ಇರಿಸಿಕೊಳ್ಳಬಹುದೆಂದು ಭಾರತದ ಪುರು?ರು ತಿಳಿಯುತ್ತಾರೆ. ಹೆಂಗಸರು ಕೂಡ ದಾಂಪತ್ಯದ ಆಚೆಗೆ ಸಂಬಂಧವನ್ನು ಇಟ್ಟುಕೊಳ್ಳಬಲ್ಲರೆಂಬುದು ಪುರು?ಪ್ರಧಾನ ವ್ಯವಸ್ಥೆಯ ಈ ಹಂದಿಗಳಿಗೆ ಹೊಳೆಯುವುದಿಲ್ಲ” ಎಂದು ಆಕೆ ಒಮ್ಮೆ ಹೇಳಿದ್ದರು.
ಭಾರತದಲ್ಲಿ ಮಹಿಳೆಯನ್ನು ಹೀನಾಯವಾಗಿ ನೋಡಲಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಬಿಬಿಸಿ ಪರವಾಗಿ ಬ್ರಿಟಿ? ಚಲನಚಿತ್ರ ನಿರ್ಮಾಪಕಿ ಲೆಸ್ಲೀ ಉಡ್ವಿನ್ ಚಿತ್ರ ನಿರ್ಮಿಸುವ ಬಗ್ಗೆ ಬಿಗಿಭದ್ರತೆಯ ತಿಹಾರ್ ಜೈಲಿಗೆ ಭೇಟಿ ನೀಡಿದರು. ಆಕೆ ತಯಾರಿಸಿದ ಸಾಕ್ಷ್ಯಚಿತ್ರ ’ಇಂಡಿಯಾಸ್ ಡಾಟರ್’ ಎಂದು (ಕು)ಪ್ರಸಿದ್ಧವಾಗಿದೆ. ಸೂಕ್ತ ಅನುಮತಿ ಇಲ್ಲದೆ ತಿಹಾರ್ ಜೈಲಿಗೆ ಭೇಟಿ ನೀಡಿದ ಬಗ್ಗೆ ಕೇಳಿದಾಗ ಆಕೆ ತನಗೆ ಸೋನಿಯಾ ಗಾಂಧಿ ಅವರ ಅನುಮತಿ ಇದೆ ಎಂದಳು. ಭಾರತದ ಪುರು?ರು ಹೆಂಗಸರನ್ನು ಖಾಸಗಿ ಆಸ್ತಿಯಂತೆ ನೋಡುತ್ತಾರೆಂದು ನಿಮ್ಮ (ಅಡಿಶನಲ್) ಸಾಲಿಸಿಟರ್ ಜನರಲ್ ಹೇಳುತ್ತಾರೆ; ರೇಪ್ ಮತ್ತು ಕೊಲೆ ಮಾಡಿದವನ ಸಂದರ್ಶನಕ್ಕಾಗಿ ತಿಹಾರ್ಗೆ ಹೋಗಿದ್ದೆ ಎಂದು ಕೂಡ ಆಕೆ ಸಮರ್ಥಿಸಿಕೊಂಡಳು.
“ಭಾರತದ ಕುಟುಂಬ ವ್ಯವಸ್ಥೆಯು ಹೆಂಗಸರಿಗೆ ವಿರುದ್ಧವಾಗಿದೆ. ಅವರಿಗೆ ಬದುಕಲು ಬಿಡುವುದಿಲ್ಲ” ಎಂದು ಇಂದಿರಾ ಜೈಸಿಂಗ್ ವಿದೇಶಗಳಲ್ಲಿ ಸಾಕ? ಪ್ರಚಾರ ಮಾಡಿದ್ದಾರೆ. ಆಕೆ ಏರ್ಪಡಿಸಿದ ಒಂದು ವಿಚಾರ ಸಂಕಿರಣದ ಶೀರ್ಷಿಕೆ ‘I want to live’ (ನಾನು ಬದುಕಲು ಇಚ್ಛಿಸುತ್ತೇನೆ). ಯುಎನ್ವಿಮೆನ್ ಸಂಸ್ಥೆಯ ಪರವಾಗಿ ಸಂಘಟಿಸಿದ ಅದರ ಅಧ್ಯಕ್ಷತೆಯನ್ನು ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ನ್ಯಾ| ಅಲ್ತಮಸ್ ಕಬೀರ್ ಅವರೇ ವಹಿಸಿದ್ದರು. Staying Alive ಸಂಚಿಕೆಯ ಬಿಡುಗಡೆಯನ್ನು ಕೂಡ ಅವರೇ ಮಾಡಿದರು. ಅದರ ಲೇಖನಗಳೆಲ್ಲ ಹಿಂದೂಸಮಾಜದ ಮೇಲೆ ವಿ?ವನ್ನು ಕಕ್ಕುವಂಥವು ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಯಾರನ್ನು ಬೇಕಿದ್ದರೂ ತನ್ನ ಉದ್ದೇಶಕ್ಕೆ ಬಳಸಿಕೊಳ್ಳುವ ಮತ್ತು ದಾರಿತಪ್ಪಿಸುವ ತಾಕತ್ತು ಆಕೆಗಿತ್ತು ಎಂದು ಒಪ್ಪಿಕೊಳ್ಳಬೇಕಷ್ಟೆ.
ಯಾವುದೇ ಸಮಾಜದಲ್ಲಿ ಕುಟುಂಬವು ಒಂದು ಮುಖ್ಯ ಘಟಕವಾಗಿರುತ್ತದೆ. ಅದು ವ್ಯಕ್ತಿಗೆ ಇನ್ನಿಲ್ಲದ ಭರವಸೆಯನ್ನು ನೀಡುತ್ತದೆ. ಆ ಭರವಸೆಯನ್ನು ನೀಡುವಲ್ಲಿ ನೈತಿಕತೆಯ ಪಾತ್ರ ಪ್ರಧಾನವಾದದ್ದು. ವಿವಾಹಬಾಹ್ಯ ಲೈಂಗಿಕತೆಯು ಅದಕ್ಕೆ ಮಾರಕವಾದದ್ದು. ಇಂದಿರಾ ಜೈಸಿಂಗ್ ಅವರು ಪ್ರೋತ್ಸಾಹಿಸುವಂತಹ ವಿವಾಹಬಾಹ್ಯ ಸಂಬಂಧವನ್ನು ಇರಿಸಿಕೊಳ್ಳುವ ಹೆಂಗಸನ್ನು ಕಲ್ಲುಹೊಡೆದು ಸಾಯಿಸಬೇಕೆಂದು ಇಸ್ಲಾಮಿನ ಶರೀಯತ್ ಹೇಳುತ್ತದೆ. ಪಾಕಿಸ್ತಾನ, ಸೌದಿ ಅರೇಬಿಯದಂತಹ ದೇಶಗಳಲ್ಲಿ ಈಗಲೂ ಅಂತಹ ಆಚರಣೆ ಪ್ರಚಲಿತವಿದೆಯೆನ್ನುತ್ತಾರೆ. ಈ ಕಾನೂನುತಜ್ಞೆ ಆ ಕುರಿತು ಮಾತನಾಡುವುದಿಲ್ಲ.
ನಮ್ಮ ಪರಂಪರೆಯತ್ತ ನೋಡುವುದಾದರೆ, ಹಿಂದೂ ಧರ್ಮಗ್ರಂಥಗಳು ಮದುವೆಯನ್ನು ಒಂದು ’ಪವಿತ್ರ ಸಂಬಂಧ’ ಎಂದು ಬಣ್ಣಿಸುತ್ತವೆ. “ನೀನು ದೇವರಿಗೆ ಅರ್ಪಣೆಗೊಳ್ಳುವ ವೀರಪುತ್ರರ ತಾಯಿಯಾಗು. ಅತ್ತೆ- ಮಾವನ ಮನೆಯ ರಾಣಿಯಾಗು. ನಿಮ್ಮಿಬ್ಬರ (ಪತಿ- ಪತ್ನಿಯ) ಹೃದಯ ಒಂದೇ ಆಗಲಿ” ಎಂದು ಋಗ್ವೇದ ಹೆಣ್ಣನ್ನು ಉದ್ದೇಶಿಸಿ ಹೇಳುತ್ತದೆ. ಹಲವು ಗ್ರಂಥಗಳು ಸ್ತ್ರೀಯನ್ನು ’ಅರ್ಧಾಂಗಿನಿ’ ಎಂದು ಕರೆದಿವೆ. ಇತರ ಎಲ್ಲ ’ದೇವೋ ಭವ’ಗಳಿಗಿಂತ ಮೊದಲ ಸ್ಥಾನವನ್ನು ’ಮಾತೃದೇವೋ ಭವ’ಕ್ಕೆ ನೀಡಲಾಗಿದೆ. ಈ ಭಾವನೆ ಈಚಿನವರೆಗೂ ಇತ್ತು. ಆದರೆ ಯುಪಿಎ ಸರ್ಕಾರ ಜಗತ್ತಿನ ಕ್ರೈಸ್ತ ಮತ್ತು ಇಸ್ಲಾಮೀ ಎನ್ಜಿಓಗಳ ಬೆಂಬಲದಿಂದ ಬೇರೆ ದಾರಿಯನ್ನು ತುಳಿಯಿತು; ಆ ಮೂಲಕ ಪವಿತ್ರ ಮತ್ತು ಸುಂದರವಾದ ದಾಂಪತ್ಯಜೀವನಕ್ಕೆ ಕೊಳ್ಳಿ ಇಡುವ ಕಾರ್ಯವನ್ನು ಮಾಡಿತು.
ಪರಿಣಾಮ ಗೋಚರ
ದಾಂಪತ್ಯದ ಚೌಕಟ್ಟಿನ ಹೊರಗಡೆ ಲೈಂಗಿಕ ಸಂಬಂಧವನ್ನು ಇರಿಸಿಕೊಳ್ಳಬಹುದೆನ್ನುವ ಉಗ್ರಸ್ತ್ರೀವಾದಿಗಳ ಚಿಂತನೆಯು ದೇಶದ ವಿವಾಹಿತ ಹಿಂದೂ ಸ್ತ್ರೀಯರ ನಡತೆಂii ಮೇಲೆ ಈಗಾಗಲೆ ಪರಿಣಾಮ ಬೀರಲಾರಂಭಿಸಿದೆ. ಪಾಶ್ಚಾತ್ಯ ಪರಿಕಲ್ಪನೆಗಳಾದ ’ಲೈಂಗಿಕ ಸ್ವಾಯತ್ತತೆ’ ಹಾಗೂ ’ನನ್ನ ದೇಹ, ನನ್ನ ಆಯ್ಕೆ’ಯಂತಹ ಚಿಂತನೆಗಳಲ್ಲಿ ಹಿಂದೂ ಮಹಿಳೆಯರು ಪಾಶ್ಚಾತ್ಯ ದೇಶದವರನ್ನೇ ಮೀರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ದೇಶದ ಮಹಿಳೆಯರಲ್ಲಿ ಅನೈತಿಕತೆ ಹೆಚ್ಚುತ್ತಿದೆ; ಕೆಲಸಕ್ಕೆ ಹೋಗುವವರು ಮತ್ತು ಮನೆಯಲ್ಲಿರುವವರೆನ್ನುವ ಭೇದವಿಲ್ಲದೆ ಈ ಪ್ರವೃತ್ತಿ ಕಂಡುಬರುತ್ತಿದೆ. ಪರಿಣಾಮವಾಗಿ ಪತಿ-ಪತ್ನಿಯರ ನಡುವೆ ಪರಸ್ಪರ ಸಂಶಯ, ಅಪನಂಬಿಕೆ, ಮಾನಸಿಕ ಖಿನ್ನತೆ, ವಿಚ್ಛೇದನ, ಆತ್ಮಹತ್ಯೆ ಮುಂತಾದವು ನಡೆಯುತ್ತಿವೆ. ತಾಯಂದಿರು ಮಕ್ಕಳ ಮೇಲೆ ಸಾಕ? ಗಮನ ಕೊಡುತ್ತಿಲ್ಲ. ಗಂಡುಮಕ್ಕಳು ಅಶ್ಲೀಲ ಚಿತ್ರ-ಚಲನಚಿತ್ರಗಳನ್ನು ನೋಡುತ್ತಾರೆ. ಅವರಲ್ಲಿ ಅತ್ಯಾಚಾರದಂತಹ ಪ್ರವೃತ್ತಿ ಬೆಳೆಯುತ್ತಿದೆ. ಅಂತಿಮವಾಗಿ ಭಾರತ ’ಜಗತ್ತಿನ ಅತ್ಯಾಚಾರದ ರಾಜಧಾನಿ’ ಆಗುತ್ತಿದೆ. ಇದಕ್ಕೆ ಉಗ್ರಸ್ತ್ರೀವಾದವೇ ಮೂಲಕಾರಣ ಎಂದು ಅಭಿಪ್ರಾಯಪಡಲಾಗಿದೆ.
ಇಂದಿರಾ ಜೈಸಿಂಗ್ ಭಾರತದ ಪರಂಪರೆಯ ದಾಂಪತ್ಯ ವ್ಯವಸ್ಥೆಯನ್ನು ’ಮಹಿಳೆಯ ಹಿತಾಸಕ್ತಿಗೆ ವಿರುದ್ಧವಾದ ಕುಟುಂಬ’ ಎಂದು ವ್ಯಾಖ್ಯಾನಿಸುತ್ತಾರೆ. ಆಕೆ ಹಿಂದೂ ದಾಂಪತ್ಯಜೀವನದ ವಿನಾಶಕ್ಕೆ ಶ್ರಮಿಸಿದರೆನ್ನುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಯುಪಿಎ ಸರ್ಕಾರ ಅದನ್ನು ಬೆಂಬಲಿಸಿತೆನ್ನುವುದು ಈಗ ಇತಿಹಾಸ. ಅವರು ಲಿವ್-ಇನ್ (ಸಹಜೀವನ) ಸಂಬಂಧವನ್ನು ದೇಶಕ್ಕೆ ದೊಡ್ಡ ರೀತಿಯಲ್ಲಿ ತಂದ ಉದ್ದೇಶವೇ ಮದುವೆಯನ್ನು ದೂರ ಇಡುವುದು. ಆಗ ಸ್ತ್ರೀವಾದಿಗಳು ಮುಂದಿಟ್ಟ ವಾದವೆಂದರೆ “ಪುರು?ರು ಮುಕ್ತ ಲೈಂಗಿಕತೆಯನ್ನು ಅನುಭವಿಸುತ್ತಾ ಬಂದಿದ್ದಾರೆ. ನಿರ್ಬಂಧಗಳು ಸ್ತ್ರೀಯರಿಗೆ ಮಾತ್ರ. ಅವರನ್ನು ಸ್ವಂತ ಆಸ್ತಿಯಂತೆ ನೋಡುತ್ತಾರೆ. ಮಹಿಳೆಯನ್ನು ಒಬ್ಬ ಗಂಡಸಿಗೆ ಕಟ್ಟಿಹಾಕುತ್ತಾರೆ. ಅದು ವೈಯಕ್ತಿಕ ಘನತೆ-ಸ್ವಾತಂತ್ರ್ಯಗಳಿಗೆ ವಿರುದ್ಧವಾದದ್ದು” ಇತ್ಯಾದಿ. ಉಗ್ರಸ್ತ್ರೀವಾದಿಗಳ ಇಂತಹ ವಾದಗಳು ಈಗ ಹಿಂದೂಸಮಾಜದಲ್ಲಿ, ವಿಶೇ?ವಾಗಿ ಯುವಜನರಲ್ಲಿ ಬೇರುಬಿಡಲು ಆರಂಭಿಸಿವೆ. ನಿರ್ಬಂಧಗಳನ್ನು ಹರಿದೊಗೆಯುವ ಪ್ರವೃತ್ತಿ ಕಾಣುತ್ತಿದೆ. ಕುಟುಂಬಜೀವನದ ಬಗ್ಗೆ ಅಸಡ್ಡೆ ಕಂಡುಬರುತ್ತಿದೆ. ಪರಿಣಾಮವಾಗಿ ಹಿಂದೂ ದಾಂಪತ್ಯಜೀವನವು ಕುಸಿಯುವ ಅಪಾಯವನ್ನು ಎದುರಿಸುತ್ತಿದೆ.
ವಿವಾಹೇತರ ಸಂಬಂಧ
ಉಗ್ರಸ್ತ್ರೀವಾದಿಗಳ ಸೂಚನೆಯ ಮೇರೆಗೆ ಮನಮೋಹನ್ ಸಿಂಗ್ ಸರ್ಕಾರವು ’ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ’ ಕಾಯ್ದೆಯನ್ನು ತಂದಿತು. ಇದು ಮಹಿಳೆಯರಿಗೆ ವಿವಾಹೇತರ ಸಂಬಂಧವನ್ನು ಇರಿಸಿಕೊಳ್ಳಲು ರಕ್ಷಣೆ ನೀಡುವಂತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಹಿಂದೂ ಸಮಾಜದಲ್ಲಿನ ಈ ಹಠಾತ್ ಬದಲಾವಣೆಯಿಂದಾಗಿ ಹಲವು ಸಮಸ್ಯೆಗಳು ಉಂಟಾಗುತ್ತಿವೆ; ಆತಂಕಗಳು ತಲೆದೋರುತ್ತಿವೆ. ಮುಖ್ಯವಾಗಿ ಇವು ಅವಿವಾಹಿತ ಹಿಂದೂ ಯುವಕರನ್ನು ಬಾಧಿಸುತ್ತಿವೆ; ವಿವಾಹವಾಗುವ ಬಗ್ಗೆ ಅವರು ಮೀನಮೇ? ಎಣಿಸುವಂತಾಗಿದೆ. ದಾರಿತಪ್ಪುವ ಮಹಿಳೆಯರು ಹೆಚ್ಚುತ್ತಿದ್ದಾರೆ. ಪತಿ ಅಕ್ಷೇಪವೆತ್ತಿದರೆ ಪೊಲೀಸರಿಗೆ ಕೌಟುಂಬಿಕ ಹಿಂಸೆಯ ಬಗ್ಗೆ ದೂರು ನೀಡಿದರಾಯಿತು. ಪತಿಯಾದವನು ಸಿವಿಲ್, ಕ್ರಿಮಿನಲ್, ಕೌಟುಂಬಿಕ ಮುಂತಾಗಿ ಹತ್ತಾರು ಬಗೆಯ ವಿಚಾರಣೆಗಳನ್ನು ಎದುರಿಸಬೇಕಾಗುತ್ತದೆ. ಪಿತ್ರಾರ್ಜಿತ, ಸ್ವಂತ ಆಸ್ತಿಯೆಂಬ ಭೇದವಿಲ್ಲದೆ ಎಲ್ಲದರ ಅರ್ಧಭಾಗ ಕೈತಪ್ಪುತ್ತದೆ. ಈ ಬಗೆಯ ಕಾನೂನಿನಿಂದಾಗಿ ಹಿಂದೂ ಸಮಾಜದಲ್ಲಿ ಈಚೆಗೆ ಅಪರಾಧಗಳು ಹೆಚ್ಚುತ್ತಿವೆ; ಆತ್ಮಹತ್ಯೆ, ಹಲ್ಲೆ-ದೌರ್ಜನ್ಯ, ಕೊಲೆಗಳ ಸಂಖ್ಯೆ ಏರುತ್ತಿದೆ. ಹಲವು ಮಹಿಳೆಯರು ಪಕ್ಕಾ ಕ್ರಿಮಿನಲ್ಗಳಾಗುತ್ತಿದ್ದಾರೆ (ಕನ್ನಡ ಟಿವಿ ಚಾನಲ್ಗಳ ಧಾರಾವಾಹಿಗಳಲ್ಲಿ ಇದರ ಒಂದು ಝಲಕ್ ಸಿಗುತ್ತದೆ). ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾದರೆಂದು ಹೆತ್ತಮಕ್ಕಳ್ಳನ್ನೇ ಕೊಲ್ಲುವ (ಪ್ರಿಯಕರನ ಮೂಲಕ ಕೊಲ್ಲಿಸುವ) ತಾಯಂದಿರನ್ನು ನಾವಿಂದು ಕಾಣುತ್ತಿದ್ದೇವೆ. ಪತ್ನಿಯ ವಿವಾಹೇತರ ಸಂಬಂಧಕ್ಕೆ ಅಕ್ಷೇಪಿಸಿದ ಪತಿಯ ಪ್ರಾಣಕ್ಕೆ ಎರವಾಗುವುದೇ ಹೆಚ್ಚು. ಪತ್ನಿ ಕೌಟುಂಬಿಕ ಹಿಂಸೆ ಕೇಸು ಹಾಕಿದರೆ ಅದಕ್ಕಿಂತಲೂ ಘೋರ; ಮನೆಯೊಳಗೆ ಕಾಲಿಡಲಾಗದೆ ಬೀದಿಯಲ್ಲೇ ನಿಲ್ಲಬೇಕಾಗಬಹುದು. ಹೀಗೆ ಡಿ.ವಿ. ಕಾಯ್ದೆ ಜಾರಿಗೆ ಬಂದ ಬಳಿಕ ಹಿಂದೂ ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳ ಸಂಖ್ಯೆ ಊಹೆಗೂ ಮೀರಿದ್ದು. ಹಿಂದೆ ಇಂತಹ ಘಟನೆಗಳು ಇರಲೇ ಇಲ್ಲ ಎಂಬ? ಅಪರೂಪವಾಗಿದ್ದವು.
ಲಿವ್-ಇನ್ ಸಂಬಂಧ ಮತ್ತು ವಿವಾಹಿತ ಮಹಿಳೆಗೆ ದಾಂಪತ್ಯದ ಚೌಕಟ್ಟಿನ ಹೊರಗೆ ಲೈಂಗಿಕ ಸಂಬಂಧವನ್ನು ಹೊಂದಿರುವ ಹಕ್ಕು ಇದೆ – ಎನ್ನುವ ಇವೆರಡು ಇಂದಿರಾ ಜೈಸಿಂಗ್ ಅವರು ಹಿಂದೂ ಸಮಾಜಕ್ಕೆ ನೀಡಿದ ಪ್ರಮುಖ ’ಕೊಡುಗೆ’ಗಳು. ಲಿವ್- ಇನ್ ಸಂಬಂಧದಲ್ಲಿ ಪುರು?ನಿಗೇ ಅಪಾಯ ಮತ್ತು ನ?ಗಳು ಅಧಿಕವೆಂದು ಭಾವಿಸಲಾಗಿದೆ. ದೂರು ಬಂದಲ್ಲಿ ಆತ ಮನೆಯಲ್ಲೇ ಪಾಲು ಕೊಡಬೇಕಾಗುತ್ತದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಗಳನ್ನು ಗಮನಿಸಿದರೆ ಲಿವ್-ಇನ್ ಸಂಬಂಧಗಳಲ್ಲಿ ಶೇ. ೯೦ರ? ಪ್ರಕರಣಗಳು ಅಪರಾಧ ಅಥವಾ ಆತ್ಮಹತ್ಯೆಗಳಲ್ಲಿ ಅಂತ್ಯ ಕಾಣುತ್ತವೆಂದು ಅಂದಾಜಿಸಲಾಗಿದೆ. ಈವತ್ತಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಮಹಿಳೆಯರ ಬೇಡಿಕೆಗಳು ಬೆಳೆದು ಇನ್ನ? ಅಪರಾಧಗಳಿಗೆ ಕುಮ್ಮಕ್ಕು ನೀಡುತ್ತಿವೆ.
ಆದರೆ ಡಿ.ವಿ. ಕಾಯ್ದೆ ಮಾತ್ರ ಹೆಂಗಸರನ್ನು ದೇವದೂತೆಯರೆಂದೇ ಕಾಣುತ್ತದೆ; ಮತ್ತು ಪುರು?ರು ಕಿರಾತಕರೇ ಸರಿ. ಇದೇ ವೇಳೆ ದೇಶದ ನ್ಯಾಯಾಲಯಗಳಲ್ಲಿ ವಿಚ್ಛೇದನ, ಕೌಟುಂಬಿಕ ಹಿಂಸೆ ಮತ್ತು ಕುಟುಂಬಸಂಬಂಧಿ ಮೊಕದ್ದಮೆಗಳು ತುಂಬಿಹೋಗಿವೆ. ಇಡೀ ನ್ಯಾಯಾಂಗ ವ್ಯವಸ್ಥೆಯು ಉಗ್ರಸ್ತ್ರೀವಾದಿಗಳ ತಾಳಕ್ಕೆ ಕುಣಿಯುತ್ತಿದೆ ಎನ್ನುವ ಅಸಮಾಧಾನ ಕಂಡುಬಂದಿದೆ. ಹಿಂದುಗಳಿಗೆ ಸಂಬಂಧಿಸಿದ ತೀರ್ಪುಗಳಲ್ಲಿ ಹೆಚ್ಚಿನವು ಪುರು?ರ ವಿರುದ್ಧವಾಗಿಯೇ ಇರುತ್ತವೆ.
ವಿಚ್ಛೇದಿತೆಯ ನಿರ್ವಹಣೆ
ಕಳೆದ ವರ್ಷ ಸುಪ್ರೀಂ ಕೋರ್ಟ್ ಒಂದು ವಿಚಾರಣೆಯ ಸಂದರ್ಭದಲ್ಲಿ, ಪುರುಷರು ತಮ್ಮ ಸಂಬಳದ ಶೇ. ೨೫ ಭಾಗವನ್ನು ವಿಚ್ಛೇದಿತ ಪತ್ನಿಯ ನಿರ್ವಹಣೆಗೆ ನೀಡಬೇಕು ಎಂದು ಹೇಳಿತು. ಅದರ ಫಲವಾಗಿ ಬಹಳ? ಮಹಿಳೆಯರು ಪತಿಯಂದಿರ ವಿರುದ್ಧ ಸಿವಿಲ್, ಕ್ರಿಮಿನಲ್, ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡಿದರು.
ಸರ್ವೋಚ್ಚ ನ್ಯಾಯಾಲಯವು ಪ್ರಸ್ತುತ ಶೇ. ೨೫ ಭಾಗ ಎನ್ನುವ ಬಗ್ಗೆ ತೀರ್ಮಾನಕ್ಕೆ ಬಂದದ್ದು ಹೇಗೆ? ಇಂದಿನ ಸಮಾಜದಲ್ಲಿ ಬಹಳ? ಹೆಂಗಸರು ಕೆಲಸಕ್ಕೆ ಹೋಗುತ್ತಾರೆ. ಪುರು?ರಿಗಿಂತ ಅಧಿಕ ಸಂಬಳ ಪಡೆಯುವವರೂ ಇದ್ದಾರೆ. ಕುಳಿತಲ್ಲಿಗೇ ಪತಿಯ ಸಂಬಳದ ಶೇ. ೨೫ ಭಾಗ ಸಿಗುವುದಾದರೆ ಕೆಲವರು ಕೆಲಸಕ್ಕೆ ರಾಜೀನಾಮೆ ನೀಡಬಹುದು. ಈ ಆದೇಶಕ್ಕೆ ಬಹಳ ಬೇಗ ಪ್ರತಿಕ್ರಿಯೆ ಕಂಡುಬಂತು. ಬಹಳ? ಮಹಿಳೆಯರು ಕೌಟುಂಬಿಕ ನ್ಯಾಯಾಲಯಗಳಿಗೆ ಧಾವಿಸಿದರು. ಅಲ್ಲಿ ಬಹಳ? ಹೆಂಗಸರು ವಕೀಲರಲ್ಲಿ, ’ಪುರು?ರು ಮಾಡುವ ಬೇರೆ ಉದ್ಯೋಗಗಳಲ್ಲಿ ಶೇ. ೨೫ ಭಾಗದ ನಿರ್ಣಯ ಹೇಗೆ? ವ್ಯಾಪಾರದಿಂದ ಬರುವ ಆದಾಯಕ್ಕೂ ಈ ಶೇ. ೨೫ ಅನ್ವಯವಾಗುವುದೇ?’ ಎಂದು ಕೇಳುತ್ತಿದ್ದರು; ಮತ್ತು ವಕೀಲರು ಅದಕ್ಕೆ ಸಕಾರಾತ್ಮಕವಾಗಿಯೇ ಉತ್ತರಿಸಿ, ಪತಿಯ ತಿಂಗಳಿನ ಆದಾಯದ ಶೇ. ೨೫ ಭಾಗವನ್ನು ಕೇಳುವುದಕ್ಕೆ ಸಲಹೆ ನೀಡುತ್ತಿದ್ದರಂತೆ. ಕೆಲವು ಕುಟುಂಬ ನ್ಯಾಯಾಲಯಗಳು ಶೇ. ೨೫ಕ್ಕಿಂತ ಹೆಚ್ಚು ಹಣವನ್ನು ಪತ್ನಿಗೆ ನೀಡುವಂತೆ ಸೂಚಿಸಿದ ಉದಾಹರಣೆಗಳೂ ಇವೆ ಎಂದು ವರದಿಯಾಗಿದೆ.
ನ್ಯಾಯಾಲಯ ಶೇ. ೨೫ ಭಾಗ ಎನ್ನುವಾಗ ಪಾಶ್ಚಾತ್ಯ ಪುಟ್ಟ ಕುಟುಂಬದ ಕಲ್ಪನೆಯಿಂದ ಹೇಳಿರಬೇಕು. ಭಾರತದ ಅವಿಭಕ್ತ ಕುಟುಂಬಗಳಲ್ಲಿ ಒಬ್ಬನ ಆದಾಯದಲ್ಲಿ ಹಲವರು ಉಣ್ಣುವಾಗ ವಿಚ್ಛೇದಿತ ಪತ್ನಿಗೆ ಶೇ. ೨೫ ನೀಡುವುದು ಅಸಾಧ್ಯ. ಅಲ್ಲಿನ ವ್ಯಕ್ತಿ ಸೋದರ-ಸೋದರಿಯರು ಮತ್ತು ಹೆತ್ತವರ ಖರ್ಚು, ವಿದ್ಯಾಭ್ಯಾಸ, ಸೋದರಿಯರ ಮದುವೆ ಖರ್ಚು – ಇವನ್ನೆಲ್ಲ ನೋಡಬೇಕು. ಅದಲ್ಲದೆ ಕೇಂದ್ರಸರ್ಕಾರ ೨೦೦೭ರಲ್ಲಿ ತಂದ ’ಹೆತ್ತವರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ’ಯು ತಂದೆ-ತಾಯಿ, ಅಜ್ಜ-ಅಜ್ಜಿಯರನ್ನು ಸಾಕುವ ಹೊಣೆಯನ್ನು ಕೂಡ ಪುರು? ವ್ಯಕ್ತಿಗಳ ಮೇಲೆ ಹೊರಿಸಿದೆ. ತಪ್ಪಿದಲ್ಲಿ ಶಿಕ್ಷೆಯಿದೆ.
ಅದಲ್ಲದೆ ಸುಪ್ರೀಂ ಕೋರ್ಟ್ ತನ್ನ ಒಂದು ತೀರ್ಪಿನಲ್ಲಿ, ಪತ್ನಿ ಪತಿಯನ್ನು ತೊರೆದಿದ್ದರೂ ಕೂಡ ಪತಿ ಆಕೆಗೆ ಶಾಶ್ವತವಾಗಿ ಜೀವನಾಂಶ ನೀಡಬೇಕು ಎಂದು ಸ್ಪ?ಪಡಿಸಿತ್ತು. ಪತಿಯನ್ನು ತೊರೆದು ಐದು ವ? ದಾಟಿದ್ದ ಒಬ್ಬಾಕೆ ದಾವೆ ಹೂಡಿದಾಗ ನ್ಯಾಯಾಲಯ ಹಾಗೆ ಹೇಳಿ, ಮಹಿಳೆಯರು ಅನಾಥರಾಗುವುದನ್ನು ತಪ್ಪಿಸಲು ಈ ಕ್ರಮ ಅಗತ್ಯ ಎಂದಿತ್ತು. ಇದು ವಿಚಿತ್ರ ಮತ್ತು ಬೇರೆ ಯಾವುದೇ ದೇಶದಲ್ಲಿ ಇಲ್ಲದಂಥದ್ದು; ತನ್ನೊಂದಿಗೆ ಇರಲು ಆಕೆ ನಿರಾಕರಿಸಿದರೂ ಶಾಶ್ವತವಾಗಿ ಆತ ಜೀವನಾಂಶ ನೀಡಬೇಕು. ಏಕೆಂದರೆ ಈತ ’ವಿವಾಹಿತ’ ’ಒಮ್ಮೆಯಾದರೂ ಅವಳ ಪತಿಯಾಗಿದ್ದವ’ ಎಂಬುದ? ಸಮರ್ಥನೆ. ತನ್ನ ಜೊತೆಗೆ ಇರಲು ಇ?ಪಡದ ಹೆಂಗಸಿನ ನಿರ್ವಹಣೆಯನ್ನು ಈತ ಏಕೆ ಮಾಡಬೇಕು? – ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಬಡ ಪತಿಯಂದಿರಿಗೆ ಇದು ತೀರಾ ಕ?. ಇದು ನ್ಯಾಯಾಲಯದ ನಿರ್ದಯ ಕ್ರಮ ಎನಿಸಿದೆ. ಅಂಥವರಲ್ಲಿ ಆಕೆಯನ್ನು ಮದುವೆಯಾದ ತಪ್ಪಿಗೆ ಈ ಶಿಕ್ಷೆ ಎನ್ನುವ ಭಾವನೆ ಬಂದರೆ ಸಹಜ ತಾನೆ? ಮತ್ತು ಸಾಯುವವರೆಗೆ ಈ ಶಿಕ್ಷೆಯಿಂದ ಬಿಡುಗಡೆಯೂ ಇಲ್ಲ.
ಯುಪಿಎ-೨ರ ವೇಳೆ ಬಂದ ಇನ್ನೊಂದು ಮಹತ್ತ್ವದ ತೀರ್ಪು “ಪ್ರತ್ಯೇಕವಾಗಿ ವಾಸಿಸುವ ತಮ್ಮ ಪತ್ನಿಯರ ನಿರ್ವಹಣೆಯನ್ನು ಪುರು?ರು ಮಾಡಬೇಕು; ಆಕೆ ಅನೈತಿಕ ಜೀವನವನ್ನು ಸಾಗಿಸುತ್ತಿದ್ದಾಳೆನ್ನುವುದು ಸಾಬೀತಾದರೂ ಕೂಡ ಅದನ್ನು ತಪ್ಪಿಸುವಂತಿಲ್ಲ” ಎಂದು ಹೇಳಿತು. ಇದು ಸಹಜ ನ್ಯಾಯಕ್ಕೆ ವ್ಯತಿರಿಕ್ತ ಎಂದರೆ ತಪ್ಪಲ್ಲ. ತೀರ್ಪು ಪ್ರಕಟಿಸುವಾಗ ನ್ಯಾಯಾಧೀಶರು ಈ ಮಾತನ್ನು ಕೂಡ ಸೇರಿಸಿದರು: “ಕ್ಷಮಿಸಿ. ನಮ್ಮ ಕೈಗಳನ್ನು ಕಟ್ಟಿಹಾಕಲಾಗಿದೆ. ಸಂಸತ್ತು ಜಾರಿಗೆ ತಂದ ಕೌಟುಂಬಿಕ ಹಿಂಸೆ ಕಾಯ್ದೆ (ಡಿ.ವಿ. ಆಕ್ಟ್) ಪ್ರಕಾರವ? ನಾವು ಈ ತೀರ್ಪನ್ನು ನೀಡುತ್ತಿದ್ದೇವೆ. ಕಾಯ್ದೆಯಲ್ಲಿರುವ ಅಂಶಗಳನ್ನು ಅನು?ನಕ್ಕೆ ತರುವುದು ನಮ್ಮ ನ್ಯಾಯಾಂಗಸಂಬಂಧಿ ಕರ್ತವ್ಯವಾಗಿದೆ. ನಿಮಗೆ ನೋವಾಗಿದ್ದರೆ ಸಂಸತ್ತಿಗೆ ಹೋಗಿ. ನಾವೇನೂ ಮಾಡುವ ಸ್ಥಿತಿಯಲ್ಲಿಲ್ಲ” ಎಂದರು.
ಎಲ್ಲೂ ಇಲ್ಲದ ಕಾನೂನು
ಸಾಮಾನ್ಯವಾಗಿ ಎಲ್ಲ ನಾಗರಿಕ ಸಮಾಜಗಳಲ್ಲಿ ಹೇಗಿದೆಯೆಂದರೆ, ಪತ್ನಿಯು ಪತಿಯೊಂದಿಗೆ ವಾಸಿಸುತ್ತಾ, ದಾಂಪತ್ಯಜೀವನಕ್ಕೆ ಸಂಬಂಧಿಸಿದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸಬೇಕು. ಅದಕ್ಕೆ ಪ್ರತಿಯಾಗಿ ಪತಿ ಅವಳ ನಿರ್ವಹಣೆಯ ಹೊಣೆಯನ್ನು ವಹಿಸಿಕೊಳ್ಳುತ್ತಾನೆ. ಇದುವರೆಗೆ ದೇಶದ ನ್ಯಾಯಾಲಯಗಳು “ಸರಿಯಾದ ಕಾರಣವಿಲ್ಲದೆ ಮತ್ತು ಪತಿಯ ಒಪ್ಪಿಗೆ ಇಲ್ಲದೆ ಅವನನ್ನು ತೊರೆದಾಗ ಅಥವಾ ವಿವಾಹಬಾಹ್ಯ ಅನೈತಿಕ ಸಂಬಂಧವನ್ನು ಇರಿಸಿಕೊಂಡಾಗ ಪತ್ನಿಯ ನಿರ್ವಹಣೆಗೆ ಸಂಬಂಧಿಸಿದ ಕರ್ತವ್ಯವು ತಾನಾಗಿಯೇ ಕೊನೆಗೊಳ್ಳುತ್ತದೆ” ಎಂದು ಹೇಳುತ್ತಿದ್ದವು. ಆದರೆ ಡಿ.ವಿ. ಕಾಯ್ದೆ ಬಂದು, ಹಿಂದೂ ವಿವಾಹ ಕಾಯ್ದೆಗೆ ಹತ್ತಾರು ತಿದ್ದುಪಡಿಗಳನ್ನು ತಂದ ಬಳಿಕ ಆ ತೀರ್ಪುಗಳೆಲ್ಲ ಅರ್ಥವನ್ನು ಕಳೆದುಕೊಂಡಿವೆ. ಯುಪಿಎ ಸರ್ಕಾರ ಹಿಂದೂ ವಿವಾಹ ಕಾಯ್ದೆಗೆ ಹಲವಾರು ತಿದ್ದುಪಡಿಗಳನ್ನು ತರುವ ಮೂಲಕ ಪತಿಯ ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿ ಎರಡರಲ್ಲೂ ಪತ್ನಿಗೆ ಪಾಲು ನೀಡಿದೆ; ಮಹಿಳೆಯ ಮತಗಳಿಕೆಯೇ ಅದರ ಉದ್ದೇಶ. ಇಂದಿರಾ ಜೈಸಿಂಗ್ರಂತಹ ಉಗ್ರಸ್ತ್ರೀವಾದಿಗಳ ಮೂಲಕ ಯುಪಿಎ ಸರ್ಕಾರ ಅದನ್ನು ಸಾಧಿಸಿತು.
ಕಳೆದ ವ? ಮುಂಬಯಿ ಹೈಕೋರ್ಟಿನ ಒಂದು ವಿಭಾಗಪೀಠವು ವಿವಾಹಸಂಬಂಧಿ ಅರ್ಜಿಯೊಂದರ ವಿಚಾರಣೆ ನಡೆಸುವಾಗ, ದೇಶದಲ್ಲಿ ಶೇ. ೯೦ರ? ವಿವಾಹಸಂಬಂಧಿ ವಿವಾದಗಳಿಗೆ ಕಾರಣ ಆಸ್ತಿ ಎಂದು ಹೇಳಿತು. ಮುಂದುವರಿದು, “ಸಾಂಪ್ರದಾಯಿಕ ಮದುವೆಗಳು ನಿಂತುಹೋದರೆ ಲಿವ್-ಇನ್ ಸಂಬಂಧಗಳು ಹೆಚ್ಚಾಗುತ್ತವೆ. ದೇಶದ ಸಾಂಪ್ರದಾಯಿಕ ವಿವಾಹ ವ್ಯವಸ್ಥೆಗೆ ಬದಲಿಯಾಗಿ ಲಿವ್-ಇನ್ ಸಂಬಂಧ ಸರಿಯಲ್ಲ. ವಿವಾಹವು ಗಂಡಸು ಮತ್ತು ಹೆಂಗಸು ನಾಗರಿಕ ಸಮಾಜದಲ್ಲಿ ಬದುಕಲು ಅನುವು ಮಾಡಿಕೊಡುತ್ತದೆ. ಅದಿಲ್ಲವಾದರೆ ಕಾಡಿನ ಕಾನೂನು – ಅರಣ್ಯನ್ಯಾಯ – ಅಸ್ತಿತ್ವಕ್ಕೆ ಬರುತ್ತದೆ” ಎನ್ನುವ ಅಭಿಪ್ರಾಯವನ್ನೂ ನೀಡಿತು.
ಎನ್ಡಿಎ ಕ್ರಮ
ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಅನಂತರ ಜನರಿಂದ ಬಂದ ದೂರುಗಳ ಮೇರೆಗೆ ಇಂದಿರಾ ಜೈಸಿಂಗ್ ಮತ್ತು ಆಕೆಯ ಎನ್ಜಿಓ ವಿರುದ್ಧ ಕ್ರಮಕ್ಕೆ ಮುಂದಾಯಿತು. ಆಕೆಯ ಎನ್ಜಿಓ ವ್ಯವಹಾರದ ಬಗ್ಗೆ ಮಾಹಿತಿ ಹಕ್ಕಿನಂತೆ ಹಲವು ಪ್ರಶ್ನೆಗಳು ಬಂದವು ಆಕೆಯಿಂದ ನಡೆದ ಅಧಿಕಾರ ದುರುಪಯೋಗ, ಬ್ರಿಟಿಷ್ ಪ್ರಜೆಯಾದ ಆಕೆಯ ಪತಿ ಆನಂದ್ ಗ್ರೋವರ್ ವ್ಯವಹಾರಗಳು, ಆಕೆಯ ದಾಂಪತ್ಯಜೀವನ ಮುಂತಾಗಿ ಬಗೆಬಗೆಯ ಪ್ರಶ್ನೆಗಳು ಬಂದವು.
ಜೈಪುರದ ರಾಜಕುಮಾರ್ ಶರ್ಮ ಎಂಬವರು ಆಕೆಯ ಸಂಸ್ಥೆಯ ವ್ಯವಹಾರಗಳ ಬಗ್ಗೆ ಗೃಹ-ಇಲಾಖೆಗೆ ದೂರು ನೀಡಿದರು; ಅನೇಕ ಫೌಂಡೇಶನ್ಗಳಿಂದ ಕೋಟಿಗಟ್ಟಲೆ ಹಣ ಪಡೆಯುತ್ತಾ ಆಕೆ ಅಡಿಶನಲ್ ಸಾಲಿಸಿಟರ್ ಜನರಲ್ ಕೂಡ ಆಗಿದ್ದ ಬಗ್ಗೆ ಕೇಳಿದರು. ಅದರಂತೆ ಗೃಹ-ಇಲಾಖೆ ನೀಡಿದ ನೊಟೀಸನ್ನು ಆಕೆ ತಿರಸ್ಕರಿಸಿ, ತಮ್ಮ ಸಂಸ್ಥೆಗೆ ಬರುವ ಹಣದ ಬಗ್ಗೆ ಯಾವುದೇ ಮಾಹಿತಿ ಅಥವಾ ಲೆಕ್ಕಪತ್ರ ನೀಡಲು ನಿರಾಕರಿಸಿದರು. ವಿದೇಶೀ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಪ್ರಕಾರ ಉತ್ತರಿಸಬೇಕಿತ್ತು. ಉತ್ತರಿಸದಿದ್ದ ಕಾರಣ ಮುಂದಿನ ಕ್ರಮವಾಗಿ ಎನ್ಡಿಎ ಸರ್ಕಾರ ಆಕೆಯ ಎನ್ಜಿಓದ ಲೈಸನ್ಸ್ ವಜಾ ಮಾಡಿತು. ಆದರೆ ಹಿಂದೂ ಸಮಾಜಕ್ಕೆ ಆಕೆಯಿಂದ ಇ? ಹೊತ್ತಿಗಾಗಲೆ ಬಹಳ? ಹಾನಿ ಆಗಿತ್ತು. ಆ ತಪ್ಪುಗಳನ್ನು, ಮುಖ್ಯವಾಗಿ ಹಿಂದೂ ವಿವಾಹ ಕಾಯ್ದೆಯೊಳಗೆ ಸೇರಿಹೋದ ದೋ?-ದ್ರೋಹಗಳನ್ನು ಸರಿಪಡಿಸುವುದು ಹೇಗೆಂಬುದು ಮುಂದಿನ ಪ್ರಶ್ನೆ.