ಉತ್ಥಾನ ಏಪ್ರಿಲ್ 2021
Month : April-2021 Episode : Author :
Month : April-2021 Episode : Author :
Month : April-2021 Episode : Author : ರಘುಪತಿ ಶೃಂಗೇರಿ
Month : April-2021 Episode : ಯೋಧರ ವೀರಗಾಥೆಗಳು -4 Author : ಎಸ್. ಎಸ್. ನರೇಂದ್ರಕುಮಾರ್
–ಎಸ್. ಎಸ್. ನರೇಂದ್ರಕುಮಾರ್ ಕಾಶ್ಮೀರದ ಉತ್ತರಕ್ಕೆ 220 ಕಿಲೋಮೀಟರ್ಗಳಷ್ಟು ಉದ್ದಕ್ಕೆ ಹರಡಿವೆ ‘ಶಂಶಬಾರಿ ಪರ್ವತ ಶ್ರೇಣಿಗಳು’. ಇಡೀ ಉತ್ತರ ಕಾಶ್ಮೀರವನ್ನು ವ್ಯಾಪಿಸಿಕೊಂಡಿರುವ ಹಿಮಾವೃತವಾದ ಈ ಶ್ರೇಣಿಗಳು ಕಾಶ್ಮೀರದ ಶಿರಕ್ಕೆ ಹಿಮದ ಕಿರೀಟವನ್ನು ತೊಡಿಸಿದಂತೆ ಕಾಣುತ್ತವೆ. ಕಾಶ್ಮೀರದ ವಾಯವ್ಯದ ತುದಿಯಲ್ಲಿರುವ ಬಾರಾಮುಲ್ಲಾ ಜಿಲ್ಲೆಯ ಕಾಲಾಪಹಾಡ್ನಿಂದ ಪ್ರಾರಂಭವಾಗುವ ಈ ಶ್ರೇಣಿಗಳು ಲಡಾಖ್ ಪ್ರಾಂತದ ಕಾರ್ಗಿಲ್ ಜಿಲ್ಲೆಯವರೆಗೂ ಹರಡಿಕೊಂಡಿವೆ. ಸಮುದ್ರಮಟ್ಟದಿಂದ 11,500 ಅಡಿ ಎತ್ತರದಿಂದ 17,500 ಅಡಿ ಎತ್ತರದವರೆಗಿನ ಶಿಖರಗಳನ್ನು ಹೊಂದಿರುವ ಈ ಶ್ರೇಣಿಗಳು ಭಾರತ-ಪಾಕಿಸ್ತಾನದ ನಡುವಿನ LOCಗೆ ರಕ್ಷಣೆಯ ಗೋಡೆಯಂತೆ […]
Month : April-2021 Episode : Author :
ವಿಶೇಷ ಸಂದರ್ಶನ ಯಕ್ಷಗಾನ ಪರಂಪರೆಯಲ್ಲಿ ‘ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ’ ಮೇಳಕ್ಕೆ 87 ವರ್ಷಗಳ ಸುದೀರ್ಘ ಇತಿಹಾಸವಿದೆ. ಸಂಪ್ರದಾಯವನ್ನು ಮೀರದೆ ಕಲಾಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಈ ಮೇಳದ ಪ್ರಮುಖರಾಗಿ ಸದ್ಯಃ ಕೆರೆಮನೆ ಶಿವಾನಂದ ಹೆಗಡೆಯವರು ಈ ಮೇಳವನ್ನು ಮುಂದುವರಿಸುತ್ತಿದ್ದಾರೆ. ನಿತ್ಯ ರಂಗಪ್ರಯೋಗಶೀಲರಾದ ಶಿವಾನಂದ ಹೆಗಡೆಯವರೊಡನೆ ‘ಉತ್ಥಾನ’ ಕ್ಕಾಗಿ ಸಂಪಾದಕ ಕಾಕುಂಜೆ ಕೇಶವ ಭಟ್ಟ ಅವರು ನಡೆಸಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ. ಪ್ರಶ್ನೆ: ಯಕ್ಷಗಾನದ ಸುಭದ್ರ ಪರಂಪರೆಯಿರುವ ಮನೆತನದಿಂದ ಬಂದವರು ನೀವು. ನಿಮ್ಮ ಯಕ್ಷಗಾನ […]
Month : April-2021 Episode : Author : ಕೆ.ಎನ್. ಭಗವಾನ್
ಪ್ರಬಂಧ ಸತ್ಯ ಎಂದರೆ ಬೆಂಕಿ ಎಂದು ಜನ ನಂಬಿದ್ದ ಕಾಲವದು. ಗ್ರಾಮೀಣರೇ ಆರಿಸಿದ ಐವರು ಸದಸ್ಯರ ಸಮಿತಿಯೇ ಪಂಚಾಯತಿ. ಅದು ಪ್ರಜಾತಂತ್ರ ವ್ಯವಸ್ಥೆಯ ಮೊದಲ ಮಾದರಿ. ಹರಟೆ ಎಂಬ ಒಣಮಾತಿನ, ಕಾಲಹರಣದ ಪ್ರಕ್ರಿಯೆಯನ್ನು ಒಮ್ಮೆ ನೆನೆದರೆ ಸಾಕು, ಗ್ರಾಮೀಣ ಬದುಕಿನಲ್ಲಿ ಬಾಲ್ಯವನ್ನು ಕಳೆದ ನನ್ನ ಕಣ್ಮುಂದೆ ನಿಲ್ಲುವುದು ಹಳ್ಳಿಯ ಅರಳೀಕಟ್ಟೆ. ಅದನ್ನು ಹರಟೆಕಟ್ಟೆ ಎಂದರೂ ಸರಿಯೇ. ಚಿಂತಕರ ಚಾವಡಿಯು ಒಳಾಂಗಣದಲ್ಲಿ ಏರ್ಪಟ್ಟರೆ, ಹರಟೆಕಟ್ಟೆ ಹೊರಾಂಗಣದ ಸ್ವಚ್ಛಂದ ವಾತಾವರಣದಲ್ಲಿ ನಡೆಯುತ್ತದೆ. ಅರಳೀಕಟ್ಟೆಯಲ್ಲಿ ಚರ್ಚೆಗೆ ಬರುವ ವಿಷಯಗಳು ಬಹುತೇಕ ಊರಿನ […]
Month : April-2021 Episode : Author :
ಖ್ಯಾತ ಗಾಂಧಿವಾದಿ ಇತಿಹಾಸಸಂಶೋಧಕ ಧರ್ಮಪಾಲ್‍ರೊಡನೆ ‘ಉತ್ಥಾನ’ಕ್ಕಾಗಿ ಎಸ್.ಆರ್. ರಾಮಸ್ವಾಮಿಯವರು 1989ರ ಕೊನೆಯಲ್ಲಿ ನಡೆಸಿದ ವಿಶೇಷ ಸಂದರ್ಶನ. ಇದು ‘ಉತ್ಥಾನ’ದ 1990ರ ಜನವರಿ ವಿಶೇಷಾಂಕದಲ್ಲಿ ಪ್ರಕಟವಾಯಿತು. ಪ್ರಶ್ನೆ: ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಜನರಲ್ಲಿ ಹರಡಿದ್ದ ಧ್ಯೇಯವಾದ, ರಾಷ್ಟ್ರಕ ಭಾವನೆಗಳು ಆಮೇಲೆ ಮುಂದುವರಿಯಲಿಲ್ಲವೇಕೆ? ಉತ್ತರ: ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಅದೊಂದು ಬಗೆಯ ಅಲೌಕಿಕ ಉತ್ಸಾಹ ಹರಡಿತ್ತೆಂಬುದು ನಿಜ. ಆದರೆ ಅದರ ಮೂಲವು ಭಾವನಾಸ್ತರದಲ್ಲಿ ಇದ್ದಿತೇ ಹೊರತು ಅದಕ್ಕೆ ವಾಸ್ತವವಾಗಿ ಗಟ್ಟಿ ನೆಲಗಟ್ಟು ಇರಲಿಲ್ಲ. ಗಟ್ಟಿಯಾದದ್ದೇನನ್ನೂ ಸಾಧಿಸುವುದು ಆಗ ಶಕ್ಯವೂ […]
Month : April-2021 Episode : Author : ಎಸ್.ಆರ್. ರಾಮಸ್ವಾಮಿ
ಇಪ್ಪತ್ತನೇ ಶತಮಾನದ ಓರ್ವ ಅನನ್ಯ ಇತಿಹಾಸ-ಸಂಶೋಧಕರೂ ಗಾಂಧಿವಾದಿಯೂ ಆದ ಧರ್ಮಪಾಲ್ (19.2.1922-24.10.2006) ಅವರ ಜನ್ಮಶತಾಬ್ದದ ವರ್ಷ 2021-22. ಇತಿಹಾಸಾಧ್ಯಯನ ಪ್ರಕ್ರಿಯೆಯ ಒಂದು ನೂತನ ಪ್ರಸ್ಥಾನವನ್ನು ರೂಪಿಸಿದವರು ಮಾತ್ರವಲ್ಲ ಅವರು; ಸಾಮ್ರಾಜ್ಯಹಿತಾಸಕ್ತ ಆಂಗ್ಲರಿಂದ ಪ್ರವರ್ತಿತವಾಗಿ ಭಾರತೀಯರಲ್ಲಿಯೂ ಅಧಿಕಮಂದಿ ತಥೋಕ್ತ ‘ಸುಶಿಕ್ಷಿತ’ರ ಮೆದುಳುಗಳಲ್ಲಿ ಇಂದಿಗೂ ಆಳವಾಗಿ ಬೇರೂರಿರುವ ಹಲವಾರು ಭ್ರಮೆಗಳ ಮೇಲೆ ಪ್ರಹಾರವೆಸಗಿ ತಥ್ಯದರ್ಶನ ಮಾಡಿಸಿದವರು; ಭಾರತದ ಮುನ್ನಡೆಯು ಯಾರಾರನ್ನೋ ಅನುಕರಿಸಹೊರಡದೆ ಭಾರತದ ಪರಂಪರೆಯಿಂದಲೇ ನಿರ್ದೇಶನಗೊಳ್ಳುವುದು ಸಾಧ್ಯ ಹಾಗೂ ಅವಶ್ಯವೆಂದು ಪ್ರಖರವಾಗಿಯೂ ಆಧಾರಸಹಿತವಾಗಿಯೂ ಪ್ರತಿಪಾದಿಸಿದವರು. ಸ್ವದೇಶಪರಂಪರೆಯ ಜ್ಞಾನಸತ್ತ್ವವೆಂಬ ‘ಸಾಫ್ಟ್-ಪವರ್’ನ ಶಕ್ತಿಮತ್ತ್ವವನ್ನು […]
Month : April-2021 Episode : Author :
ಈಗಿನ ಜಗತ್ತು ಇರುವುದು ತಮ್ಮದೇ ವಿಶಿಷ್ಟವಾದ ಏನನ್ನೋ ಸಾಧಿಸುತ್ತೇವೆ ಎಂಬವರಿಗಾಗಿ ಮಾತ್ರವೇ ಹೊರತು ‘ನಾವು ಯಾರನ್ನೋ ಅನುಕರಿಸುವವರು’ ಎನ್ನುವವರಿಗಾಗಿಯಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹತ್ತರ ಸಾಧನೆ ಏನಾಗಿದೆ? ಹೇಳಿಕೊಳ್ಳುವಂಥದೇನೂ ಆಗಿಯೇ ಇಲ್ಲವೆಂದು ನನ್ನ ಭಾವನೆ. ಹಾಗೆಂದರೆ ಇಷ್ಟು ವರ್ಷಗಳು ವ್ಯರ್ಥವಾದವೆಂದು ನನ್ನ ಅಭಿಪ್ರಾಯವಲ್ಲ. ಜಗತ್ತಿನಲ್ಲಿ ಯಾವುದೂ ವ್ಯರ್ಥವಾಗದು. ಆದರೆ ಇಷ್ಟು ವರ್ಷಗಳ ಪ್ರಯಾಸದಿಂದ ಸಮಾಜಕ್ಕೆ ಲಾಭವೇನೂ ಆದಂತಿಲ್ಲ. ಇದುವರೆಗೆ ಆಗಿರುವುದೆಂದರೆ ನಾವು ಇಷ್ಟು ವರ್ಷಕಾಲ ಅಸ್ತಿತ್ವದಲ್ಲಿ ಇದ್ದೆವೆಂಬುದು ಮಾತ್ರ. ನಾನು ಈ ಧಾಟಿಯಲ್ಲಿ ಮಾತನಾಡಿದರೆ ಜನ ಕೇಳುತ್ತಾರೆ: “ಹಾಗಾದರೆ […]
Month : April-2021 Episode : Author :
ಕ್ರಿಸ್ಟೊಫರ್ ಕೊಲಂಬಸ್ ಅಮೆರಿಕವನ್ನು ‘ಕಂಡುಹಿಡಿದಿದ್ದರ’ 500ನೇ ವರ್ಷ ನಿಮಿತ್ತ ಲೇಖನ ಇಂದು ಪ್ರಚಲಿತವಾಗಿರುವ ಅಭ್ಯುದಯ ಧೋರಣೆಗಳ ಹಾಗೂ ಇಂದಿನ ಮೂಲಭೂತ ಸಂಘರ್ಷಗಳ ಮೂಲವನ್ನು ಅರಿತುಕೊಳ್ಳಲು ಕಳೆದ ಐದುನೂರು ವರ್ಷಗಳ ಪ್ರಮುಖ ಘಟನೆಗಳನ್ನು ಸಮೀಕ್ಷಿಸುವುದು ಉಪಯುಕ್ತವಾದೀತು. 1492ರ ಸುಮಾರಿನಿಂದೀಚಿನ ಘಟನೆಗಳು ಮನುಷ್ಯನ ಚಿಂತನೆಯ ಮೇಲೂ ಜೀವನಕ್ರಮದ ಮೇಲೂ ಯಾವ ರೀತಿಯಲ್ಲಿ ಪ್ರಭಾವ ಬೀರಿವೆಯೆಂಬುದನ್ನು ಅರ್ಥಮಾಡಿಕೊಂಡಲ್ಲಿ ಇಂದಿನ ಸಮಸ್ಯೆಗಳಿಗೆ ಪರಿಹಾರಮಾರ್ಗಗಳು ತೋರಿಯಾವು. ಯೂರೋಪಿನವರಿಗೆ ಹೊರಗಣ ಜಗತ್ತಿನ ಬಗೆಗೆ ಪರಿಜ್ಞಾನ ಮೂಡತೊಡಗಿದ್ದು 1492ರಲ್ಲೆನ್ನಬಹುದು – ಕ್ರಿಸ್ಟೊಫರ್ ಕೊಲಂಬಸನೂ ಅವನ ತಂಡದ ನಾವಿಕರೂ […]
Month : April-2021 Episode : Author :
ಪ್ರಚಲಿತ –ಎಸ್.ಆರ್.ಆರ್. ಒಂದು ದೇಶಕ್ಕೆ ಎರಗಬಹುದಾದ ಅತ್ಯಂತ ಘೋರ ವಿಪತ್ತೆಂದರೆ ಅರಾಜಕತೆ – ಎಂದಿವೆ ಸ್ಮೃತಿಗಳು. ಅರಾಜಕತೆ ಎಂದರೆ ರಾಜನಿಲ್ಲದ ಸ್ಥಿತಿ ಎಂದಷ್ಟೆ ಅರ್ಥವಲ್ಲ. ವ್ಯವಸ್ಥಾಹೀನತೆಯನ್ನು ಅರಾಜಕತೆ ಎಂದು ಕರೆದಿದ್ದಾರೆ. ವ್ಯವಸ್ಥಾಬದ್ಧತೆಯು ಸ್ಥಾವರಜಂಗಮಾದಿ ಇಡೀ ವಿಶ್ವಕ್ಕೇ ತಳಹದಿಯಾಗಿದೆ. ಗಾಳಿ ಬೆಳಕು ಬೆಂಕಿ ಮೊದಲಾದವೂ ಮೂಲವ್ಯವಸ್ಥೆಯೊಂದಕ್ಕೆ ಅಧೀನಗಳು – ಎಂದಿದೆ ಶ್ರುತಿ. ವ್ಯವಸ್ಥೆ ಇರದಿದ್ದಲ್ಲಿ ಹೇಗೆ ಲೋಕಜೀವನವೇ ದುಃಸಾಧ್ಯವಾಗುತ್ತದೆಂಬುದನ್ನು ರಾಮಾಯಣದ ಈ ಪ್ರಸಿದ್ಧ ಉಕ್ತಿಯೂ ಸೂಚಿಸಿದೆ: ನಾರಾಜಕೇ ಜನಪದೇ ಸ್ವಕಂ ಭವತಿ ಕಸ್ಯಚಿತ್ | ಮತ್ಸ್ಯಾ ಇವ ನರಾ […]