ಉತ್ಥಾನ ಸೆಪ್ಟೆಂಬರ್ 2018
Month : September-2018 Episode : Author :
Month : September-2018 Episode : Author :
Month : September-2018 Episode : Author : ಎಸ್.ಆರ್. ರಾಮಸ್ವಾಮಿ
ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ ಪ್ರಭಾವ ಬೀರುತ್ತ ಬಂದವೆಂಬುದರ ಭವ್ಯ ಅಭಿವ್ಯಕ್ತಿಯನ್ನು ಐದಾರು ಸಾವಿರ ವರ್ಷಗಳ ಕಲಾನುಸಂಧಾನದಲ್ಲಿ ಕಾಣುತ್ತೇವೆ. ಅನ್ಯ ದೇಶಗಳಿಗಿಂತ ಬಹುಪಾಲು ಹೆಚ್ಚು ಸಮೃದ್ಧವಾಗಿರುವ ಭಾರತೀಯ ವಾಸ್ತುಕಲೆಯಲ್ಲಿ ಎದ್ದುಕಾಣುವ ಸಂಗತಿಯೆಂದರೆ ದೇವದೇವತೆಗಳ ಮತ್ತು ಪೌರಾಣಿಕ ಆಖ್ಯಾನಗಳ ಸಾಂಕೇತಿಕತೆಯ ಅರಿವು […]
Month : September-2018 Episode : Author : ರಾಜೀವ್ ಶ್ರೀನಿವಾಸನ್ (ಇಂಗ್ಲಿಷ್)
ಶಿಕ್ಷಣವ್ಯವಸ್ಥೆಯ ಕುರಿತು ಇಂದು ಸಾಕಷ್ಟು ಚಿಂತನ-ಮಂಥನಗಳು ನಡೆಯುತ್ತಿವೆ. ಅದರಲ್ಲಿ ಭಾರತದ ಶಿಕ್ಷಣವ್ಯವಸ್ಥೆಯು ಒಳಗೊಂಡಿರುವ ಕಲಿಕೆ ವಿಧಾನದ ಗುಣಮಟ್ಟ ಕಳಪೆ ಎನ್ನುವ ಮಾತು ವ್ಯಾಪಕವಾಗಿ ಕೇಳಬಂದಿದೆ. ಈ ನಡುವೆ ಕಂಡುಬರುವ ಆಶಾಕಿರಣವೆಂದರೆ ಹೊಸ ಪದ್ಧತಿಯೊಂದನ್ನು ಕಂಡುಹಿಡಿಯುವುದಕ್ಕೆ ಇದು ಸಕಾಲವಾಗಿದೆ; ವಿಶೇಷವಾಗಿ ಶಿಕ್ಷಣ ವ್ಯವಸ್ಥೆಯನ್ನು ನೌಕರಶಾಹಿಯ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಇತ್ತೀಚೆಗೆ ಬರ್ಖಾಸ್ತುಗೊಳಿಸಿರುವುದು ಮತ್ತು ವಿವಾದಾಸ್ಪದ ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ (ಔನ್ನತ್ಯದ ಸಂಸ್ಥೆ) ಯೋಜನೆ ಬಗೆಗಿನ ಮಾತುಗಳು ಇಂದಿನ ತೃತೀಯ ದರ್ಜೆ ಶಿಕ್ಷಣವ್ಯವಸ್ಥೆಗೆ ಬದಲಾಗಿ ಬೇರೇನೋ ಬರಲಿದೆ […]
Month : September-2018 Episode : Author :
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಮಹತ್ತ್ವದ ಮಾನವಸಂಪನ್ಮೂಲ ಅಭಿವೃದ್ಧಿ ಖಾತೆಯನ್ನು ಪ್ರಕಾಶ್ ಜಾವಡೇಕರ್ ಅವರು ಹೊಂದಿದ್ದಾರೆ. ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗ- ದೇಶದ ಯುವಜನಾಂಗದ ಸರ್ವಾಂಗೀಣ ಅಭಿವೃದ್ಧಿ. ಅಂತಹ ಗುರುತರವಾದ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಉತ್ಥಾನದ ಸೆಪ್ಟೆಂಬರ್ ೨೦೧೮ರ ಸಂಚಿಕೆಗಾಗಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಮಾನ್ಯ ಸಚಿವರ ಸಂದರ್ಶನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಸದ್ಯದ ಶಿಕ್ಷಣ ವ್ಯವಸ್ಥೆಯ ಕುರಿತಾಗಿ, ವಿಶ್ವಮಟ್ಟದಲ್ಲಿ ಯೂನಿವರ್ಸಿಟಿ ಕ್ಯಾಂಪಸ್ಗಳನ್ನು ಸುಧಾರಿಸುವ ಕುರಿತಾಗಿ, ಶಿಕ್ಷಣದಲ್ಲಿ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಮೀರಿದ […]
Month : September-2018 Episode : Author :
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ, ರಾಷ್ಟ್ರೋತ್ಥಾನ ಪರಿಷತ್ತಿನ ಅಗ್ರಶಿಲ್ಪಿಗಳಲ್ಲಿ ದಿವಂಗತ ಮೈ.ಚ. ಜಯದೇವ ಅವರು ಗಣ್ಯರು. ಅವರ ವ್ಯವಸ್ಥಾಕೌಶಲ, ಸಂಘಟನಾ ಚಾತುರ್ಯ, ಸಂಸ್ಥೆಗಳನ್ನು ಸಮಾಜಮುಖಿಯಾಗಿ ಮುನ್ನಡೆಸುವ ಕಲೆ – ಮುಂತಾದ ಮಾದರಿ ಗುಣಗಳು ಮುಂದಿನ ಪೀಳಿಗೆಯ ಕಾರ್ಯಕರ್ತರಿಗೆ ದಾರಿದೀಪವಾಗಬೇಕು ಎನ್ನುವ ಉದ್ದೇಶದಿಂದ, ನಾಡಿನ ಪ್ರಸಿದ್ಧ ಸಾಹಿತಿ ಡಾ| ಬಾಬು ಕೃಷ್ಣಮೂರ್ತಿ ಅವರ ಲೇಖನಿಯಿಂದ ಸಿದ್ಧಗೊಳ್ಳಲಿರುವ ಪುಸ್ತಕವೊಂದನ್ನು ಪ್ರಕಟಿಸುವ ಯೋಜನೆಯನ್ನು ರಾಷ್ಟ್ರೋತ್ಥಾನ ಪರಿಷತ್ ಹೊಂದಿದೆ. ವಿಷಯವನ್ನು ಸಮಗ್ರಗೊಳಿಸುವ ದೃಷ್ಟಿಯಿಂದ, ಜಯದೇವಜೀ ಅವರ ಒಡನಾಡಿಗಳು, ಸ್ನೇಹಿತರು, ಬಂಧುಗಳು ಜಯದೇವಜೀ […]
Month : September-2018 Episode : Author : ಎಸ್.ಆರ್. ರಾಮಸ್ವಾಮಿ
ಫೇಸ್ಬುಕ್ ಮೂಲಕ ಲಕ್ಷಾಂತರ ಮಂದಿಯ ಖಾಸಗಿ ಮಾಹಿತಿಗಳು ವಾಣಿಜ್ಯೋದ್ದೇಶದಿಂದ ಅನಧಿಕೃತವಾಗಿ ಬಳಕೆಗೊಂಡು ಬಿಡಿಬೀಸಾಗಿ ವಿತರಣೆಯಾಗುತ್ತಿದ್ದುದು ಬಯಲಾಗಿ ಎಲ್ಲೆಡೆ ಆತಂಕ ಸೃಷ್ಟಿಸಿದ್ದುದರ ಹಿಂದುಗೂಡಿ ಫೇಕ್-ನ್ಯೂಸ್ ಎಂಬ ವೈರಲ್- ಫೀವರ್ ವ್ಯಾಪಕವಾಗಿ ಹರಡಿರುವುದು ಚಿಂತೆ ತಂದಿದೆ. ಫೇಕ್-ನ್ಯೂಸ್ ಎಂದರೆ ಆಧಾರರಹಿತವಾದ ಕಪೋಲಕಲ್ಪಿತ ಸುಳ್ಳುಸುದ್ದಿಗಳು. ಇವುಗಳಿಂದ ಯಾರೋ ಕೆಲವರಿಗೆ ಅಗ್ಗದ ಮನರಂಜನೆ ದೊರೆಯುವಷ್ಟಕ್ಕೆ ಇವುಗಳ ಸಂಚಲನೆ ಸೀಮಿತಗೊಂಡಿದ್ದರೆ ಉಪೇಕ್ಷೆ ಮಾಡಬಹುದಿತ್ತೇನೋ. ಆದರೆ ಕೆಲವು ಫೇಕ್-ನ್ಯೂಸ್ಗಳು ಎಷ್ಟು ಪ್ರಮಾದಕರವೆಂದರೆ ಅವು ವ್ಯಾಪಕ ಸಂಘ?ಗಳಿಗೂ ಹಿಂಸಾಚರಣೆಗಳಿಗೂ ಕಾರಣವಾಗಿವೆ. ಹೀಗೆ ಇವನ್ನು ಒಂದು ವಿಷಾಕ್ತ ವ್ರಣವೆಂದೇ ಭಾವಿಸಬೇಕಾಗಿದೆ. ತಿಳಿದೂ ತಿಳಿದೂ ಬುಡವಿಲ್ಲದ ಕಲ್ಪಿತ ಸುದ್ದಿಗಳನ್ನು […]
Month : September-2018 Episode : Author : ಎಚ್ ಮಂಜುನಾಥ ಭಟ್
ಪ್ರಾಥಮಿಕ ಶಾಲಾ ಹಂತದಲ್ಲಿ ನಾವೊಂದು ಕಥೆಯನ್ನು ಓದಿರುತ್ತೇವೆ. ಅದರಲ್ಲೊಬ್ಬ ದಯಾಪರನಾದ ರಾಜ. ತನ್ನ ಪ್ರಜೆಗಳಿಗೆ ಯಾವುದೇ ಅನ್ಯಾಯವಾಗಬಾರದು; ಆದರೂ ಅದಕ್ಕೆ ಕೂಡಲೇ ಪರಿಹಾರ ಸಿಗಬೇಕು. ಅದಕ್ಕಾಗಿ ಆತ ಒಂದು ವ್ಯವಸ್ಥೆಯನ್ನು ಮಾಡಿದ್ದ. ಅರಮನೆಯ ಮುಂದೆ ಒಂದು ಗಂಟೆ; ದೂರುಗಂಟೆ ಎಂದು ಅದಕ್ಕೆ ಹೆಸರು. ಗಂಟೆಗೆ ಒಂದು ಹಗ್ಗವನ್ನು ಕಟ್ಟಲಾಗಿರುತ್ತದೆ. ಅನ್ಯಾಯಕ್ಕೊಳಗಾದ ಯಾರೇ ಆದರೂ ಆ ಹಗ್ಗವನ್ನು ಜಗ್ಗಿ ಗಂಟೆಯನ್ನು ಬಾರಿಸಿದರೆ ಸಾಕು. ರಾಜ ವಿಚಾರಣೆ ನಡೆಸಿ ನ್ಯಾಯವನ್ನು ಒದಗಿಸುತ್ತಾನೆ. ಒಮ್ಮೆ ಗಂಟೆ ಸದ್ದಾಯಿತು. ಯಾರೆಂದು ನೋಡಿದರೆ ಅದೊಂದು […]
Month : September-2018 Episode : Author : ಅನಿಲ್ಕುಮಾರ್ ಮೊಳಹಳ್ಳಿ
ಅದು ೧೯೫೭ರ ಸಂದರ್ಭ. ವಿದೇಶಾಂಗ ಖಾತೆಯನ್ನು ಸ್ವತಃ ಪ್ರಧಾನಿ ಜವಾಹರಲಾಲ್ ನೆಹರು ಅವರೇ ನಿರ್ವಹಿಸುತ್ತಿದ್ದರು. ವಿದೇಶಾಂಗ ಖಾತೆಯ ಕುರಿತು ಎರಡುಮೂರು ದಿನಗಳ ಸುದೀರ್ಘ ಚರ್ಚೆ ನಡೆಯಿತು. ಚರ್ಚೆಯ ಕೊನೆಯಲ್ಲಿ ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಧಾನಿ ನೆಹರು ವಿದೇಶಾಂಗ ನೀತಿಯ ಕುರಿತು ಅಟಲ್ಜೀ ಅವರ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದರು. ಅಟಲ್ಜೀ, ಆಗಷ್ಟೇ ಲೋಕಸಭೆಯ ಮೆಟ್ಟಿಲು ಹತ್ತಿದ್ದ ೩೨ರ ತರುಣ. ಇದಕ್ಕೂ ಹೆಚ್ಚಾಗಿ ಯಾವುದೇ ರಾಜಕೀಯ ಹಿನ್ನೆಲೆಯಾಗಲಿ ಅನುಭವವಾಗಲಿ ಇಲ್ಲದೆ ಕೇವಲ ನಾಲ್ಕು ಜನ ಸದಸ್ಯರನ್ನು ಹೊಂದಿದ್ದ ಪಕ್ಷವೊಂದರಿಂದ ಆರಿಸಿಬಂದ ವಾಜಪೇಯಿ ಮೊದಲ ಬಾರಿಗೇ ನೆಹರು ಗಮನಸೆಳೆಯುವುದರಲ್ಲಿ ಮಾತ್ರವಲ್ಲದೆ, ತನ್ನ ವಿಚಾರಗಳಿಗೆ ಮನ್ನಣೆ ದೊರಕಿಸಿಕೊಳ್ಳುವಲ್ಲಿ […]